Scilab/C2/Xcos-Introduction/Kannada

From Script | Spoken-Tutorial
Revision as of 11:02, 9 September 2017 by Anjana310312 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 Xcos: Scilab Connected Object Simulator ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ.
00:07 Xcos(ಎಕ್ಸ್-ಕಾಸ್) ಇದೊಂದು ಡೈನಾಮಿಕ್ ಸಿಸ್ಟಮ್ ಗಳನ್ನು ಮಾಡೆಲಿಂಗ್ ಮತ್ತು ಸಿಮ್ಯುಲೇಷನ್ ಮಾಡಲು ಇರುವ ಒಂದು ಸೈಲ್ಯಾಬ್ ಪ್ಯಾಕೇಜ್. ಇದು ಕಂಟಿನ್ಯುಯಸ್ ಮತ್ತು ಡಿಸ್ಕ್ರೀಟ್ ಸಿಸ್ಟಮ್ ಗಳೆರಡನ್ನೂ ಹೊಂದಿದೆ.
00:17 ಈ ಟ್ಯುಟೋರಿಯಲ್ ನಲ್ಲಿ ನಾವು , XCOS(ಎಕ್ಸ್-ಕಾಸ್) ಎಂದರೇನು? ಪ್ಯಾಲೆಟ್ ಎಂದರೇನು? ಎಕ್ಸ್-ಕಾಸ್ ನಲ್ಲಿ ಬ್ಲಾಕ್ ಡಯಗ್ರಾಮ್ ಅನ್ನುಬರೆಯುವುದು,
00:26 ಬ್ಲಾಕ್ ನ ಪ್ಯಾರಾಮೀಟರ್ ಗಳನ್ನು ಹೊಂದಿಸುವುದು, ಸಿಮ್ಯುಲೇಷನ್ ಪ್ಯಾರಾಮೀಟರ್ ಗಳನ್ನು ಹೊಂದಿಸುವುದು, ರಚನೆ ಮಾಡಿದ ಬ್ಲಾಕ್ ಡಯಾಗ್ರಾಮ್ ಅನ್ನು ಸಿಮ್ಯುಲೇಟ್ ಮಾಡುವುದು- – ಇವುಗಳ ಕುರಿತು ಕಲಿಯುತ್ತೇವೆ.
00:35 ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು, ನಿಮ್ಮ ಸಿಸ್ಟಮ್ ನಲ್ಲಿ ಸೈಲ್ಯಾಬ್ ಇನ್ಸ್ಟಾಲ್ ಆಗಿರಬೇಕು.
00:40 ವಿವರಣೆಗೋಸ್ಕರ ನಾನು Ubuntu Linux 12.04 ಮತ್ತು Scilab version 5.3.3 ಗಳನ್ನು ಬಳಸುತ್ತೇನೆ.
00:48 ನಿಮ್ಮ ಕಂಪ್ಯೂಟರ್ ನಲ್ಲಿ ಸೈಲ್ಯಾಬ್ ಕನ್ಸೋಲ್ ಅನ್ನು ತೆರೆಯಿರಿ.
00:52 applications ಗೆ ಹೋಗಿ Xcos ಅನ್ನು ಆಯ್ಕೆ ಮಾಡಿಕೊಳ್ಳಿ ಅಥವಾ ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ xcos ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
01:02 ಇದನ್ನು ಮಾಡುವುದರಿಂದ ಎರಡು ವಿಂಡೋ ಗಳು ತೆರೆದುಕೊಳ್ಳುತ್ತವೆ. ಅವು Palette browser ಮತ್ತು Untitled-Xcos ವಿಂಡೋ.
01:14 Palette browser ನಲ್ಲಿ, ನೀವು ವಿವಿಧ ಬಗೆಯ ಬ್ಲಾಕ್ಸ್ ಗಳನ್ನು ನೋಡಬಹುದು: Commonly Used Blocks ,
01:20 Continuous time system blocks , Discrete time systems blocks ಮುಂತಾದವು.
01:26 ಇನ್ನೊಂದು ವಿಂಡೋ, Untitled-Xcos ಖಾಲಿಯಾಗಿದ್ದು, ಗ್ರಿಡ್ ಗಳನ್ನು ಹೊಂದಿರುತ್ತದೆ.
01:31 ಈಗ ನಾವು ಫಸ್ಟ್ ಆರ್ಡರ್ ಸಿಸ್ಟಮ್ ಅನ್ನು ಸ್ಟೆಪ್ ಇನ್ಪುಟ್ ನೊಂದಿಗೆ ಸಿಮ್ಯುಲೇಟ್ ಮಾಡೋಣ.
01:36 ಪ್ರಾರಂಭಿಸಲು ನಾನು, Continuous time systems palette ನಿಂದ ಒಂದು transfer function ಬ್ಲಾಕ್ ಅನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.
01:43 ಈ ಬ್ಲಾಕ್ ಅನ್ನು Untitled-Xcos ವಿಂಡೋಗೆ ಡ್ರ್ಯಾಗ್ ಮಾಡಬೇಕು.
01:48 Sources palette ನಲ್ಲಿ ಅಗತ್ಯವಿರುವ ಸೋರ್ಸ್ ಅನ್ನು ಆರಿಸಿಕೊಳ್ಳಬೇಕು. ನಾನು ಕೆಳಗೆ ಸ್ಕ್ರೋಲ್ ಮಾಡಿ, STEP FUNCTION ಬ್ಲಾಕ್ ಅನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.
01:56 ನಾನು ಇದನ್ನು ಡ್ರ್ಯಾಗ್ ಮಾಡಿ, transfer function block ಗೂ ಮೊದಲು ಇಡುತ್ತೇನೆ.
02:01 ಇದೇ ರೀತಿ, ಔಟ್ಪುಟ್ CSCOPE block ಅನ್ನು ಬಳಸಿ ಡಿಸ್ಪ್ಲೇ ಆಗುತ್ತದೆ ಮತ್ತು ಇದು Sinks palette ನಲ್ಲಿ ದೊರೆಯುತ್ತದೆ.
02:08 CSCOPE block ಅನ್ನು transfer function block ನ ನಂತರ ಇಡಬೇಕು.
02:13 CSCOPE ನಲ್ಲಿರುವ ಕೆಂಪು ಇನ್ಪುಟ್ ಪೋರ್ಟ್ ಈ ಬ್ಲಾಕ್ ಒಂದು ಇವೆಂಟ್ ಡ್ರೈವನ್ ಬ್ಲಾಕ್ ಎಂದು ಸೂಚಿಸುತ್ತದೆ.
02:19 ಇದರ ಎಕ್ಸಿಕ್ಯೂಷನ್ ಗೆ ಒಂದು ಇವೆಂಟ್ ಅವಶ್ಯಕ.
02:22 Event handling palette ನಲ್ಲಿ 'ಇವೆಂಟ್ ಜನರೇಟರ್ ಬ್ಲಾಕ್' ಲಭ್ಯವಿದೆ.
02:29 ಈ ಬ್ಲಾಕ್ ನ ಹೆಸರು Clock underscore c.
02:34 ಇದನ್ನು ಡ್ರ್ಯಾಗ್ ಮಾಡಿ CSCOPE ಬ್ಲಾಕ್ ನ ಮೇಲೆ ಇಡಿ.
02:39 ನಾವು ಸಿಮ್ಯುಲೇಶನ್ ಮಾಡಲು ಬೇಕಾದ ಎಲ್ಲ ಬ್ಲಾಕ್ ಗಳನ್ನು ಸಂಗ್ರಹಿಸಿದ್ದೇವೆ.
02:44 ಈಗ ಬ್ಲಾಕ್ ಗಳನ್ನು ಸಂಪರ್ಕ ಮಾಡೋಣ.
02:47 step function block ಔಟ್ ಪುಟ್ ಪೋರ್ಟ್ ಅನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ಇದನ್ನು transfer function block ಇನ್ಪುಟ್ ಪೋರ್ಟ್ ಗೆ ಸಂಪರ್ಕಿಸಿ.
02:55 ಗಮನಿಸಿ, ಆಯ್ಕೆ ಮಾಡಿಕೊಂಡ ಇನ್ಪುಟ್ ಪೋರ್ಟ್ ಹಸಿರುಬಣ್ಣದಲ್ಲಿ ಹೈಲೈಟ್ ಆಗುತ್ತದೆ.
03:00 ಇದೇ ರೀತಿ, ಇಲ್ಲಿ ತೋರಿಸಿದಂತೆ ಉಳಿದ ಬ್ಲಾಕ್ ಗಳಿಗೆ ಸಂಪರ್ಕ ನೀಡಿ.
03:05 ಈಗ ಪ್ರತಿ ಬ್ಲಾಕ್ ಗೂ ಪ್ಯಾರಾಮೀಟರ್ ಗಳನ್ನು ಹೊಂದಿಸಬೇಕು.
03:10 ಮೊದಲಿಗೆ, step block ಗೆ ಹೋಗಿ, ಅದರ ಮೇಲೆ ಡಬಲ್ ಕ್ಲಿಕ್ ಮಾಡಿ.
03:14 ಒಂದು ಪೋಪ್ ಅಪ್ ವಿಂಡೋ ಕಾಣಿಸುತ್ತದೆ ಮತ್ತು Step Time, Initial Value ಮತ್ತು Final Value ಗಳನ್ನು ಕೇಳುತ್ತದೆ.
03:23 Step Time ಇದು ಸ್ಟೆಪ್ ಬದಲಾವಣೆ ಯಾಗುವ ಸಮಯ. ಇದರ ಡಿಫಾಲ್ಟ್ ವ್ಯಾಲ್ಯೂ 1 ಅನ್ನು ಹಾಗೇ ಇಡೋಣ.
03:32 Initial Value ಇದು step function ನ ಪ್ರಾರಂಭಿಕ ಔಟ್ಪುಟ್ ವ್ಯಾಲ್ಯೂ ಆಗಿದೆ.
03:37 ಇದರ ಡಿಫಾಲ್ಟ್ ವ್ಯಾಲ್ಯೂ 0 ಯನ್ನು ಹಾಗೇ ಇಡೋಣ.
03:41 Final Value ಇದು Step Time ಮುಗಿದ ನಂತರ step function ನ ಔಟ್ಪುಟ್. ನಾವು ಇದನ್ನು 2 ಎಂದು ಬದಲಿಸೋಣ.
03:50 OK ಯ ಮೇಲೆ ಕ್ಲಿಕ್ ಮಾಡಿ.
03:52 ಬೇರೆ ಬ್ಲಾಕ್ ಗಳನ್ನು ಕಾನ್ಫಿಗರ್ ಮಾಡಲು ಇದೇ ವಿಧಾನವನ್ನು ಅನುಸರಿಸಿ.
03:56 transfer function block ಗೆ ಈ ಕಾನ್ಫಿಗರೇಷನ್ ನ ಅಗತ್ಯವಿದೆ : 'ಲ್ಯಾಪ್ಲೆಸ್ ಡೊಮೇನ್' ನಲ್ಲಿ Numerator ನ ವ್ಯಾಲ್ಯೂ ವನ್ನು ನಮೂದಿಸಬೇಕು.
04:05 ನಾನು ಡಿಫಾಲ್ಟ್ ವ್ಯಾಲ್ಯು ಆದ 1 ಅನ್ನು ಹಾಗೆ ಇಡುತ್ತೇನೆ.
04:09 'ಲ್ಯಾಪ್ಲೆಸ್ ಡೊಮೇನ್' ನಲ್ಲಿ Denominator ನ ವ್ಯಾಲ್ಯೂ ವನ್ನು ನಮೂದಿಸಬೇಕು. ನಾವು ಇದನ್ನು 2 asteric s plus 1 ಎಂದು ಬದಲಿಸೋಣ. OK ಯ ಮೇಲೆ ಕ್ಲಿಕ್ ಮಾಡಿ.
04:20 ಈ ಪ್ಯಾರಾಮೀಟರ್ ಗಳನ್ನು ಕಾನ್ಫಿಗರ್ ಮಾಡಲು, CSCOPE block ಅನ್ನು ಡಬಲ್ ಕ್ಲಿಕ್ ಮಾಡಿ.
04:25 ಪ್ಲೋಟ್ ಮಾಡಬೇಕಾದ ವೇರಿಯೇಬಲ್ ನ ವ್ಯಾಲ್ಯು ವಿನ ವ್ಯಾಪ್ತಿಯನ್ನು ಅವಲಂಬಿಸಿ, Ymin ಮತ್ತುYmax ಗಳ ವ್ಯಾಲ್ಯೂ ವನ್ನು ಸೆಟ್ ಮಾಡಬೇಕು.
04:34 Ymin ನ ವ್ಯಾಲ್ಯು ವನ್ನು 0 ಎಂದು ಸೆಟ್ ಮಾಡಿ.
04:38 ನಾನು step input ಅನ್ನು 2 ಎಂದು ಕೊಟ್ಟಿರುವುದರಿಂದ, ಗ್ರಾಫ್ ನ ಮೇಲೆ ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲು, ನಾನು Ymax ಅನ್ನು ಹೆಚ್ಚಿನ ಬೆಲೆಗೆ ಸೆಟ್ ಮಾಡಬೇಕು.
04:46 ಅದನ್ನು 3 ಎಂದು ಬದಲಿಸೋಣ.
04:50 refresh period ನ ಬೆಲೆಯನ್ನು ಮನಸ್ಸಿನಲ್ಲಿಟ್ಟು ಕೊಂಡಿರಿ.ಡಿಫಾಲ್ಟ್ ವ್ಯಾಲ್ಯೂ 30 ಆಗಿದೆ.
04:57 ಉಳಿದ ಪ್ಯಾರಾಮೀಟರ್ ಗಳನ್ನು ಬದಲಿಸಬಾರದು. OK ಯನ್ನು ಒತ್ತಿ.
05:02 ಈಗ ಮೆನ್ಯು ಬಾರ್ ನಲ್ಲಿ Simulation ಗೆ ಹೋಗಿ, Setup ಅನ್ನು ಕ್ಲಿಕ್ ಮಾಡಿ.
05:08 ಒಂದು ಪೋಪ್ ಅಪ್ ವಿಂಡೋ ಬರುತ್ತದೆ.
05:11 Final integration time ನ ವ್ಯಾಲ್ಯುವನ್ನು ಬದಲಿಸಬೇಕು.Final integration time ಇದು ಸಿಮ್ಯುಲೇಷನ್ ಎಷ್ಟು ಹೊತ್ತು ರನ್ ಆಗಬೇಕು ಎನ್ನುವುದನ್ನು ನಿರ್ಧರಿಸುತ್ತದೆ.
05:20 CSCOPE blockrefresh period ನ ವ್ಯಾಲ್ಯುವನ್ನು ನೆನಪಿಸಿಕೊಳ್ಳಿ.
05:24 ನಾನು Final integration time ನ ವ್ಯಾಲ್ಯುವನ್ನು CSCOPE blockrefresh period ನ ವ್ಯಾಲ್ಯು ಗೆ ಸಮವಾಗಿ ಇಡುತ್ತೇನೆ.
05:30 ಹಾಗಾಗಿ, ನಾನು ಅದನ್ನು 30 ಎಂದು ಬದಲಿಸುತ್ತೇನೆ.
05:34 ಉಳಿದ ಪ್ಯಾರಾಮೀಟರ್ ಗಳನ್ನು ಬದಲಿಸಬಾರದು. OK ಯನ್ನು ಒತ್ತಿ.
05:39 ಈಗ ಬೇಕಾದ ಹೆಸರಿನೊಂದಿಗೆ ಫೈಲ್ ಅನ್ನು ಸೇವ್ ಮಾಡಲು Control S ಅನ್ನು ಒತ್ತಿ. ನಾನು ಇದನ್ನು firstorder.xcos ಎಂದು ಸೇವ್ ಮಾಡುತ್ತೇನೆ.
05:50 ಸಿಮ್ಯುಲೇಷನ್ ಅನ್ನು ಪ್ರಾರಂಭಿಸಲು, Xcos ವಿಂಡೋದ ಮೆನ್ಯುಬಾರ್ ನಲ್ಲಿರುವ Start ಬಟನ್ ಅನ್ನುಕ್ಲಿಕ್ ಮಾಡಿ.
05:58 ಒಂದು ಗ್ರಾಫಿಕ್ ವಿಂಡೋ ತೆರೆದುಕೊಳ್ಳುತ್ತದೆ, ಇದು ಪ್ರಥಮ ಕ್ರಮಾಂಕದ ಟ್ರಾನ್ಸ್ಫರ್ ಫಂಕ್ಷನ್ ನ ಸ್ಟೆಪ್ ರೆಸ್ಪಾನ್ಸ್ ಅನ್ನು ತೋರಿಸುತ್ತದೆ.
06:04 ನಾವು ಈ ಗ್ರಾಫ್ ಅನ್ನು ಇಮೇಜ್ ಫೈಲ್ ಆಗಿ ಸೇವ್ ಮಾಡಬಹುದು.
06:06 ಗ್ರಾಫ್ ಅನ್ನು ಸೇವ್ ಮಾಡಲು, File ಮೆನ್ಯು ಗೆ ಹೋಗಿ , Export to ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:12 ನಾನು ಅದನ್ನು 'firstorder.png' ಎಂದು ಹೆಸರಿಸುತ್ತೇನೆ ಮತ್ತು OK ಯ ಮೇಲೆ ಕ್ಲಿಕ್ ಮಾಡುತ್ತೇನೆ.
06:20 ಇಲ್ಲಿ ನಾವು ಕೆಲವು ಪ್ಯಾರಾಮೀಟರ್ ಗಳನ್ನು ಅವುಗಳ ಡಿಫಾಲ್ಟ್ ವ್ಯಾಲ್ಯೂ ವಿನಲ್ಲಿಯೇ ಇಟ್ಟಿದ್ದೇವೆ. ಅವುಗಳನ್ನು ಬದಲಿಸಬಹುದು.
06:26 ಉದಾಹರಣೆಗೆ, Clock underscore c block ನಲ್ಲಿ , period, ಅಂದರೆ sampling period ಮತ್ತು initial time ಗಳನ್ನು ಸೆಟ್ ಮಾಡಬಹುದು.
06:36 CSCOPE block, ನಲ್ಲಿ , output window number
06:40 position, size, buffer size , graph color ಮುಂತಾದವುಗಳನ್ನು ಸೆಟ್ ಮಾಡಬಹುದು.
06:46 ವಿಡಿಯೋವನ್ನು ಇಲ್ಲಿ ಪಾಸ್(pause) ಮಾಡಿ ಮತ್ತು ವಿಡಿಯೋದ ಜತೆ ಕೊಟ್ಟಿರುವ ಅಭ್ಯಾಸವನ್ನು ಮಾಡಲು ಪ್ರಯತ್ನಿಸಿ.
06:52 damping ratio ವು 0.5 ಮತ್ತು angular frequency ಯು 1 ಆಗಿರುವಂತೆ second order transfer function ಅನ್ನು ಸಿಮ್ಯುಲೇಟ್ ಮಾಡಿ.
07:01 ಔಟ್ಪುಟ್ ಗ್ರಾಫ್ ನ ಬಣ್ಣವನ್ನು ಬದಲಿಸಲು ಪ್ರಯತ್ನಿಸಿ.
07:04 ಮೊದಲ ಅಭ್ಯಾಸವನ್ನು ಬಳಸಿ, Step input ಮತ್ತು output ಗಳನ್ನು ಒಂದೇ ವಿಂಡೋ ನಲ್ಲಿ ಪ್ಲೋಟ್ ಮಾಡಿ.
07:11 ಈಗ ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು, palette browser ಅನ್ನು ಬಳಸಿ ಎಕ್ಸ್-ಕಾಸ್ ಸಿಮ್ಯುಲೇಷನ್ ಡಯಗ್ರಾಮ್ ಅನ್ನು ರಚನೆ ಮಾಡುವುದನ್ನು,
07:18 ಸಿಮ್ಯುಲೇಷನ್ ನ ಅಗತ್ಯಕ್ಕೆ ತಕ್ಕಂತೆ ಪ್ರತಿ ಬ್ಲಾಕ್ ಅನ್ನು ಕಾನ್ಫಿಗರ್ ಮಾಡುವುದನ್ನು,
07:22 ಸಿಮ್ಯುಲೇಷನ್ ಪ್ಯಾರಾಮೀಟರ್ ಗಳನ್ನು ಹೊಂದಿಸುವುದನ್ನು, ಔಟ್ಪುಟ್ ಪ್ಲೋಟ್ ಅನ್ನು ಸೇವ್ ಮಾಡುವುದನ್ನು- ಕಲಿತಿದ್ದೇವೆ.
07:26 ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ತಿಳಿಸಿಕೊಡುತ್ತದೆ. ನೀವು ಒಳ್ಳೆಯ ಬ್ಯಾಂಡ್ ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಳ್ಳಬಹುದು.
07:37 ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ .ಸ್ಪೋಕನ್ ಟ್ಯುಟೋರಿಯಲ್ ತಂಡವು : ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ.
07:46 ಹೆಚ್ಚಿನ ವಿವರಗಳಿಗೆ spoken hyphen tutorial dot org ಗೆ ಬರೆಯಿರಿ.
07:52 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ.
08:02 ಇದರ ಕುರಿತು ಹೆಚ್ಚಿನ ವಿವರಗಳು spoken hyphen tutorial dot org slash NMEICT hyphen Intro ನಲ್ಲಿ ದೊರೆಯುತ್ತದೆ.
08:12 ಟ್ಯುಟೋರಿಯಲ್ ನಿಮಗೆ ಉಪಯುಕ್ತವಾಗಿದೆ ಎಂದುಕೊಳ್ಳುತ್ತೇನೆ. ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.

Contributors and Content Editors

Anjana310312, Sandhya.np14