PHP-and-MySQL/C4/User-Login-Part-2/Kannada

From Script | Spoken-Tutorial
Revision as of 15:20, 27 May 2020 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ಎರಡನೆ ಭಾಗಕ್ಕೆ ಸ್ವಾಗತ. ಇಲ್ಲಿ ನಾನು "login dot php" ಪೇಜ್ ಅನ್ನು ಡಾಟಾಬೇಸ್ ಗೆ ಕನೆಕ್ಟ್ ಮಾಡಲು ಎಡಿಟ್ ಮಾಡುವುದು ಮತ್ತು ಯೂಸರ್ ನೇಮ್ ಹಾಗೂ ಪಾಸ್ವರ್ಡ್ ಅನ್ನು ಡಾಟಾಬೇಸ್ ನಲ್ಲಿ ಪರೀಕ್ಷಿಸುವುದರ ಬಗ್ಗೆ ತೋರಿಸುವೆನು.
00:14 ನಾವು ಈಗಾಗಲೇ ಡಾಟಾಬೇಸ್ ಗೆ ಕನೆಕ್ಟ್ ಮಾಡಿದ್ದೇವೆ.
00:18 ಇದನ್ನು ರಿಫ್ರೆಶ್ ಮಾಡಿ, ಯೂಸರ್ ನೇಮ್ ಮತ್ತು ಪಾಸ್ವರ್ಡ್ ಗಳನ್ನು ಪುನಃ ಕಳುಹಿಸಿ, ನಾವು ಇಲ್ಲಿ ಎರರ್ ಗಳಿಲ್ಲ ಎಂದು ನೋಡಬಹುದು.
00:24 ಇಲ್ಲಿ ಎರರ್ ಇಲ್ಲ. ನಾವು ಡಾಟಾವನ್ನು ಟೈಪ್ ಮಾಡದೇ ಇದ್ದರೆ ಎರರ್ ಬರುತ್ತದೆ ಎಂದು ನೋಡಿದ್ದೇವೆ.
00:28 ಈಗ ಮೊದಲಿಗೆ ನಾನು ಒಂದು query ಯನ್ನು ತಯಾರಿಸುವೆನು.
00:36 ನೀವು ಈ ಮೊದಲು "mysql" ಅನ್ನು ಬಳಸಿದ್ದರೆ ಅಥವಾ ಯಾವುದಾದರೂ ಸ್ಟ್ರಕ್ಚರ್ಡ್ ಕ್ವೈರಿ ಲಾಂಗ್ವೇಜ್ ಅನ್ನು ಬಳಸಿದ್ದರೆ, ಡಾಟಾಬೇಸ್ ಗೆ ಕ್ವೈರಿಯನ್ನು ತಯಾರಿಸುವುದನ್ನು ತಿಳಿದಿರುತ್ತೀರಿ.
00:43 ನಾನು "Microsoft Access" ಇದನ್ನು ಹೊಂದಿದೆ ಎಂದುಕೊಳ್ಳುವೆನು.
00:46 ಅದಕ್ಕಾಗಿ ನಾವು, SELECT, ಅಂದರೆ "SELECT *" ಎಂದು ಟೈಪ್ ಮಾಡುವೆವು, ಏಕೆಂದರೆ ನಮಗೆ ID, username ಮತ್ತು password - ಎಲ್ಲವೂ ಬೇಕು.
00:54 ನಮಗೆ id ಬೇಡ ಅನಿಸುತ್ತದೆ. ಆದರೆ, "SELECT *" ಹೇಗಿದ್ದರೂ ಎಲ್ಲವನ್ನು ತೆಗೆದುಕೊಳ್ಳುತ್ತದೆ.
00:59 ಹಾಗಾಗಿ "SELECT * FROM" ಮತ್ತು ನಾವು ಇದನ್ನು 'users' ಎಂದಿದ್ದೇವೆ ಅನಿಸುತ್ತದೆ. ಈಗ ನಾನು ಅದನ್ನು ಖಚಿತಪಡಿಸಿಕೊಳ್ಳುವೆನು.
01:04 ಹೌದು, ಅದು 'users' ಎಂದೇ ಇದೆ. ಹಾಗಾಗಿ "SELECT * users" ಮತ್ತು ಇಲ್ಲಿ "WHERE username" ಇದು ಇದರ ಹೆಸರಾಗಿದೆ.
01:20 ಹಾಗಾಗಿ ನಾವು ಇಲ್ಲಿ "WHERE username equals" "username" –ಇದು ಟೈಪ್ ಮಾಡಿದ ಹೆಸರು ಆಗಿದೆ- ಎಂದಿರಲಿ.
01:30 ಈಗ ಈ "username" ಇರದಿದ್ದರೆ, ನಾವು ಒಂದು ಎರರ್ ಮೆಸೇಜ್ ಅನ್ನು, ಉದಾಹರಣೆಗೆ, "This user doesn’t exist" ಎಂದು ತೋರಿಸಬೇಕು.
01:37 ಅದಕ್ಕಾಗಿ ನಾವು "mysql_num_rows()" ಎನ್ನುವ ಇನ್ನೊಂದು 'mysql' ಫಂಕ್ಷನ್ ಅನ್ನು ಬಳಸಬೇಕು.
01:46 ಇದು ನೀವು ಡಾಟಾಬೇಸ್ ಗೆ ಕೊಟ್ಟ ಕ್ವೈರಿಯಿಂದ ನೋಡಲ್ಪಟ್ಟ ರೋ ಗಳ ಸಂಖ್ಯೆಯನ್ನು ಎಣಿಸುತ್ತದೆ.
01:53 ಅದಕ್ಕಾಗಿ ನಾವು, $numrows equals mysql_num_rows() ಎಂದೂ ಮತ್ತು ಬ್ರ್ಯಾಕೆಟ್ ನಲ್ಲಿ ನಮ್ಮ ಕ್ವೈರಿಯ ಹೆಸರನ್ನು, ಅಂದರೆ ನಾನು ಕ್ವೈರಿ ಫಂಕ್ಷನ್ ಅನ್ನು ಸ್ಟೋರ್ ಮಾಡಿದ ವೇರಿಯೇಬಲ್ ಅನ್ನು ಟೈಪ್ ಮಾಡೋಣ.
02.08 ಮತ್ತು ಇಲ್ಲಿ ನಾವು ರೋ ಗಳ ಸಂಖ್ಯೆಯನ್ನು ಎಕೋ ಮಾಡಿದರೆ, ಈಗ ನಾವು ಪರೀಕ್ಷೆಮಾಡಿದಾಗ 1 ಎಂದು ಬರಲೇ ಬೇಕು, ಏಕೆಂದರೆ ನಾವು ಒಂದು ರೋ ಅನ್ನು ಹೊಂದಿದ್ದೇವೆ.
02.16 ಈಗ ಇಲ್ಲಿ ನಾನು Insert ಅನ್ನು ಕ್ಲಿಕ್ ಮಾಡಿ, ಇನ್ನೊಂದು ಡಾಟಾ ರೋ ಅನ್ನು ಸೇರಿಸುವೆನು, ಅಂದರೆ ಇನ್ನೊಂದು "username" ಮತ್ತು "password" ಅನ್ನು ಸೇರಿಸುವೆನು.
02:26 ಈಗ ನಾನು ಅದನ್ನು ಪ್ರಯತ್ನಿಸುವೆನು. ನಾನು ಇದನ್ನು ಆಮೇಲೆ ಪರೀಕ್ಷಿಸುವೆನು. ಈಗ ನಮ್ಮ 'username' ಇದು "Kyle" ಆಗಿರಲಿ ಮತ್ತು 'password' ಇದು "123" ಎಂದಿರಲಿ.
02:38 ಸರಿ ಈಗ ಇದನ್ನು ಪ್ರಯತ್ನಿಸೋಣ. ಸರಿ ನಾವು ಅದನ್ನು ಮಾಡಿದ್ದೇವೆ. ನಾನು ಎಲ್ಲಿದ್ದೇನೆ. ಹಾ! ನಾವು ಇಲ್ಲಿಗೆ ಹೋಗಬೇಕು.
02:53 ನಾವು ಇಲ್ಲಿ "Alex" ಮತ್ತು "Kyle" ಎರಡನ್ನೂ ಪಡೆದಿದ್ದೇವೆ.
02:55 ಇಲ್ಲಿ ನಾವು "id" ಗಳು ತಂತಾನೆ ಹೆಚ್ಚಳವಾಗಿರುವುದನ್ನು ನೋಡಬಹುದು.
02:58 ನೀವು ಇಲ್ಲಿ ನಮ್ಮ ಎರಡೂ ಪಾಸ್ವರ್ಡ್ ಮತ್ತು ಯೂಸರ್ ನೇಮ್ ಗಳಿರುವುದನ್ನು ನೋಡಬಹುದು.
03:02 ಈಗ ಇದನ್ನು ರಿಫ್ರೆಶ್ ಮಾಡಿ, ಏನು ಬರುತ್ತದೆಯೆಂದು ಪರೀಕ್ಷಿಸೋಣ.
03:06 ಸರಿ. ಇದು ಪರೀಕ್ಷೆಯ ಭಾಗವಾಗಿದೆ.
03:10 ಇಲ್ಲಿ ಒಂದು ಎಂದು ಬರಲು ಕಾರಣವೆಂದರೆ, ನಾನು ಇಲ್ಲಿ ಎಲ್ಲ ಯೂಸರ್ ಅನ್ನು ಆಯ್ಕೆಮಾಡಿಕೊಂಡು ನಂತರ ರೋ ಅನ್ನು ಎಣಿಸಿದ್ದರೆ, ಅದು ಹೆಚ್ಚಳವಾಗುತ್ತಿತ್ತು.
03:18 ಇಲ್ಲಿಗೆ ಹಿಂದಿರುಗಿ, ರಿಫ್ರೆಶ್ ಮಾಡಿ, ನಾವು 2 ಎಂಬ ವ್ಯಾಲ್ಯುವನ್ನು ಪಡೆಯುತ್ತೇವೆ ಏಕೆಂದರೆ ಇಲ್ಲಿ 2 ರೋ ಗಳಿವೆ.
03:22 ಆದರೆ ನಾನು "SELECT where the username equals my username" ಎಂದು ಹೇಳಿದಾಗ, ನಾವು ಕೇವಲ ನನ್ನ username' ಅಸ್ತಿತ್ವದಲ್ಲಿರುವ ಒಂದು ರೋ ಅನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ, ಹಾಗಾಗಿ ಅದು ಒಂದು ರೋ ಆಗಿರುತ್ತದೆ.
03:34 ಸಾಮಾನ್ಯವಾಗಿ ವೆಬ್ಸೈಟ್ ನಲ್ಲಿ ನಾವು ನಕಲಿ username ಅನ್ನು ಹೊಂದಿರುವುದಿಲ್ಲ.
03:40 ಸರಿ ಈಗ ನಮಗೆ ರೋಗಳು ಎಷ್ಟಿವೆ ಎಂದು ಕಂಡುಹಿಡಿಯುವ ಉದ್ದೇಶ ಅರ್ಥವಾಗಿದೆ.
03:47 ಈಗ ಅದರ ಉದ್ದೇಶವನ್ನು ನೋಡೋಣ. if "num_rows is equal to zero" ಎಂದು ಟೈಪ್ ಮಾಡಿ, ಅಂದರೆ ನಾವು, ಕ್ಷಮಿಸಿ ಇದು if "my num_rows doesn’t equal zero" ಎಂದಾಗಬೇಕು ಆಗ ನಾವು ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು ಅಂದರೆ ನಾವು ಲಾಗಿನ್ ಆಗಬೇಕು.
04:01 else, ನಾವು ಎಕೋ ಕ್ಷಮಿಸಿ, else die. ಮತ್ತು "That user doesn’t exist" ಎಂಬ ಮೆಸೇಜ್ ಅನ್ನು ಕೊಡುವೆವು.
04:16 ಈಗ ನಾವು ಏನು ಮಾಡುತ್ತಿದ್ದೇವೆಂದರೆ, ನಾವು ಯಾವ ಯೂಸರ್ ನೇಮ್ ಅನ್ನು ಸಲ್ಲಿಸುತ್ತಿದ್ದೇವೆಯೋ ಆ ರೋ ಇದೆಯೆ ಎಂದು ಪರೀಕ್ಷಿಸುತ್ತಿದ್ದೇವೆ.
04:25 ಮತ್ತು ಅದು ಸೊನ್ನೆಗೆ ಸಮವಾಗಿಲ್ಲದಿದ್ದರೆ, ಆಗ ನಾವು ಲಾಗಿನ್ ಆಗುವ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು.
04:29 ಇಲ್ಲವಾದಲ್ಲಿ die "That username doesn’t exist" ಇದು ಎಕ್ಸಿಕ್ಯೂಟ್ ಆಗುವುದು.
04:33 1, 2, 3, 4 – ಈ ರೀತಿಯಾಗಿ
04:38 ಕ್ಷಮಿಸಿ ಇದು
04:40 ಸೊನ್ನೆಗೆ ಸಮವಾಗಿಲ್ಲದಿದ್ದರೆ, ಇದು ಇನ್ಯಾವುದಾದರೂ ವ್ಯಾಲ್ಯುವಿಗೆ ಸಮವಾಗಿರಬೇಕು.
04:44 ಮತ್ತು ಇದು ಸೊನ್ನೆಯಲ್ಲದೆ ಬೇರೆ ಯಾವುದಕ್ಕಾದರೂ ಸಮವಾಗಿದ್ದರೆ, ಈ ಕೋಡ್ ಎಕ್ಸಿಕ್ಯೂಟ್ ಆಗುವುದು.
04:47 ಇದು 0 ಗೆ ಸಮವಾಗಿದ್ದರೆ, ಯಾವುದೇ ಫಲಿತಾಂಶವನ್ನು ಕೊಡಲು ಸಾಧ್ಯವಿಲ್ಲ ಎಂದರ್ಥ.
04:52 ನಾನು ಇದನ್ನು resend ಮಾಡುವೆನು. ಈಗ ಹಿಂದಿರುಗೋಣ.
04:57 ನಾನು ಇದನ್ನು "echo num_rows" ಅಳಿಸಿ ಹಾಕುವೆನು.
05:05 ಈಗ ನಮ್ಮ ಮುಖ್ಯ ಪೇಜ್ ಗೆ ಹಿಂದಿರುಗೋಣ ಮತ್ತು ನಾವು "Alex" ಮತ್ತು "abc" ಗಳೊಂದಿಗೆ ಲಾಗಿನ್ ಆಗೋಣ; ಈಗ ಸದ್ಯಕ್ಕೆ ಪಾಸ್ವರ್ಡ್ ಅನ್ನು ಗಣನೆಗೆ ತೆಗೆದುಕೊಂಡಿಲ್ಲ.
05:13 ಇಲ್ಲಿ ಏನೂ ಆಗಿಲ್ಲ, ಏಕೆಂದರೆ ಯಾವುದೇ ಎರರ್ ಗಳಿಲ್ಲ.
05:15 ಈಗ ಉದಾಹರಣೆಗೆ ಇಲ್ಲಿ "Billy" ಎಂದೂ , ಮತ್ತು ಇಲ್ಲಿ ಪಾಸ್ವರ್ಡ್ ಅನ್ನು ಟೈಪ್ ಮಾಡಿ, Login ಅನ್ನು ಕ್ಲಿಕ್ ಮಾಡುವೆನು.
05:21 "That user doesn’t exist!" ಏಕೆಂದರೆ "Billy" ಗೆ ಸಮವಾದ ಯೂಸರ್ ನೇಮ್ ಅನ್ನು ಹೊಂದಿರುವ ರೋ ಇಲ್ಲ.
05:26 ಈಗ ಇದು ಕಾರ್ಯನಿರ್ವಹಿಸುತ್ತಿರುವುದನ್ನು ನಾವು ನೋಡಬಹುದು.
05:28 ಈಗ ನಮ್ಮ ಮುಖ್ಯವಾದ ವಿಷಯಕ್ಕೆ ಹೋಗೋಣ.
05:31 "Alex" ಮತ್ತು ನನ್ನ ಪಾಸ್ವರ್ಡ್ "abc" ಆಗಿದೆ.
05:37 ಈಗ ಲಾಗಿನ್ ಆಗಲು ಕೋಡ್ ಅನ್ನು ಬರೆಯಬೇಕು.
05:39 ಲಾಗಿನ್ ಆಗಲು ನಾವು ಪಾಸ್ವರ್ಡ್ ಅನ್ನು ಪರೀಕ್ಷಿಸಬೇಕು.
05:42 ಈಗ ಪಾಸ್ವರ್ಡ್ ಅನ್ನು ಪಡೆಯಲು, ನಾನು ಒಂದು ಫಂಕ್ಷನ್ ಅನ್ನು ಬಳಸುವೆನು.
05:46 ಕ್ಷಮಿಸಿ, ಅದು ಫಂಕ್ಷನ್ ಅಲ್ಲ, ಲೂಪ್ ಅಂದರೆ ಒಂದು while ಲೂಪ್ ಅನ್ನು ಬಳಸುವೆನು.
05:52 ಇಲ್ಲಿ ನಾನೊಂದು ವೇರಿಯೇಬಲ್ ನ ಹೆಸರನ್ನು ಟೈಪ್ ಮಾಡುವೆನು ಮತ್ತು ಅದನ್ನು $row ಎಂದು ಕರೆಯುವೆನು ಮತ್ತು ಅದು "mysql"..... "mysql_ ರೋ ಅನ್ನು ಅರೇ ಆಗಿ ತೆಗೆದುಕೊಳ್ಳಲು" ಅಂದರೆ
06:11 "mysql_fetch_assoc" ಎಂದು ಟೈಪ್ ಮಾಡುವೆನು.
06:22 ಮತ್ತು ಇದು ನನ್ನ ಕ್ವೈರಿಯಾಗಿರುವುದು. ಹಾಗಾಗಿ ಇಲ್ಲಿ ನಾನು $query ಯನ್ನು ಹೊಂದಿದ್ದೇನೆ.
06:28 ಇದರಿಂದ ನಾವು ಪ್ರತಿ ಡಾಟಾ ಕಾಲಮ್ ಅನ್ನು ತೆಗೆದುಕೊಳ್ಳುತ್ತೇವೆ ಮತ್ತು ಅದನ್ನು "$row" ಎನ್ನುವ ಅರೇ ಯಲ್ಲಿ ಇಡುವೆವು.
06:40 ಈಗ while ಲೂಪ್ ನೊಂದಿಗೆ, ಇಲ್ಲಿ ಬ್ರ್ಯಾಕೆಟ್ ಗಳನ್ನು ಹಾಕೋಣ, ಮತ್ತು ಇಲ್ಲಿ ವೇರಿಯೇಬಲ್ ಗಳನ್ನು ಸೆಟ್ ಮಾಡೋಣ.
06:45 "$db username" ಎಂದು ಟೈಪ್ ಮಾಡೋಣ ಮತ್ತು ಇದು ಡಾಟಾಬೇಸ್ ನಿಂದ ಹೊರತೆಗೆದ ಯೂಸರ್ ನೇಮ್ ಆಗಿರುತ್ತದೆ. ಮತ್ತು ಇದು "$row" ರೋದ ಹೆಸರು "username" ಗೆ ಸಮವಾಗಿರುತ್ತದೆ.
06:55 ನೀವು ಇಲ್ಲಿ ನೋಡಬಹುದು, ಇದು ರೋ ದ ಹೆಸರಾಗಿದೆ.
06:59 ಇದು ಒಂದು ಡಾಟಾ ದ ಅರೇ ಆದರೆ, ಆಗ ಇದರ ಪ್ರತಿಯೊಂದು ಎಲಿಮೆಂಟ್ "id", "username" ಮತ್ತು "password" ಆಗಿರುವುದು.
07:06 ನಾವು 0,1,2 ಎಂದು ಬಳಸುತ್ತಿಲ್ಲ. ಆದರೆ ಇದು ಕೆಲಸ ಮಾಡುತ್ತದೆ ಎಂದು ನನಗೆ ಖಚಿತವಾಗಿ ತಿಳಿದಿಲ್ಲ.
07:10 ಈಗ ಇದನ್ನು ಸರಳವಾಗಿಡಲು ನಾನು, ನಮ್ಮ ಕಾಲಮ್ ನ ಹೆಸರನ್ನು ನೇರವಾಗಿ ಸೂಚಿಸಿದ್ದೇನೆ.
07:20 ಹಾಗಾಗಿ ಡಾಟಾಬೇಸ್ ನ ಯೂಸರ್ ನೇಮ್ "row" ಆಗಿರುವುದು ಮತ್ತು ಇದು ಈ ಫಂಕ್ಷನ್ ಅನ್ನು ನಮ್ಮ ಕ್ವೈರಿಯ ಮೂಲಕ ಬಳಸುತ್ತಿರುವ ಒಂದು ಅರೆಯಾಗಿದೆ.
07:26 ಈಗ ನಾವು "$db password" equals "$row" ಮತ್ತು ಇಲ್ಲಿ 'password' ಎಂದು ಟೈಪ್ ಮಾಡೋಣ.
07:38 ಹಾಗಾಗಿ ಇದಾದ ಮೇಲೆ ನಾವು ಎಕೋ ಮಾಡಬಹುದು,
07:43 ಆದರೆ ಬೇಡ, ನಾವು ನಮ್ಮ 'db username' ಮತ್ತು 'password' ಅನ್ನು ಎಕೋ ಮಾಡುವುದು ಬೇಡ, ಆದರೆ ಎರರ್ ಗಳನ್ನು ಪರೀಕ್ಷಿಸಬೇಕು.
07:49 ಅವು ಏನು ಎಂದು ಈಗಾಗಲೇ ನಾವು ತಿಳಿದಿದ್ದೇವೆ. ನಾವು ಅವುಗಳನ್ನು ಡಾಟಾಬೇಸ್ ನಲ್ಲಿ ನೋಡಿದ್ದೇವೆ.
07:51 ಈಗ ನಾವು ಒಂದು ಪರೀಕ್ಷೆಯನ್ನು ಮಾಡೋಣ."check to see if they match" ಎಂದು ಕಮೆಂಟ್ ಮಾಡಿ.
08:00 ಇದನ್ನು if ಸ್ಟೇಟ್ಮೆಂಟ್ ಅನ್ನು ಬಳಸಿ ಮಾಡುವುದು ಸುಲಭವಾಗಿದೆ.
08:04 if $username equals $db username AND $password is equal to $db password ಎಂದು ಟೈಪ್ ಮಾಡಿ ಮತ್ತು ಇದು ಟ್ರ್ಯೂ ಆಗಿದ್ದರೆ ನಾವು ಇದು ಸರಿಯಾಗಿದೆ ಎಂದು ಹೇಳುವೆವು.
08:19 ಇಲ್ಲವಾದಲ್ಲಿ ಇದು ತಪ್ಪು ಎಂದು ಹೇಳುವೆವು.
08:22 ನಾನು ಈ ಬ್ರ್ಯಾಕೆಟ್ ಗಳನ್ನು ತೆಗೆದು ಹಾಕುವೆನು ಏಕೆಂದರೆ ಇಲ್ಲಿ ಕೇವಲ ಒಂದೇ ಸಾಲು ಇದೆ. echo "Incorrect password!" ಎಂದು ಟೈಪ್ ಮಾಡಿ. ಇದನ್ನು ಹೀಗೆ ಬಿಡಿ.
08:34 ಮತ್ತು ಇಲ್ಲಿ echo "You’re in!" ಎಂದು ಟೈಪ್ ಮಾಡಿ.
08:41 ಸರಿ ನಾನು ವಿಡಿಯೋದ ಈ ಭಾಗವನ್ನು ಮುಗಿಸುವ ಮೊದಲು ಇದನ್ನು ಒಮ್ಮೆ ಪರೀಕ್ಷಿಸೋಣ.
08:46 ಮತ್ತು ಮೊದಲಿಗೆ ನಾನು ಇಲ್ಲಿ "Alex" ಎಂದು ಇಡುವೆನು ಮತ್ತು ತಪ್ಪಾದ ಪಾಸ್ವರ್ಡ್ ಅನ್ನು ಟೈಪ್ ಮಾಡುವೆನು. . "Incorrect password!" ಎಂದು ಪಡೆದಿದ್ದೇವೆ.
08:51 ಈಗ ನಾನು ಪಾಸ್ವರ್ಡ್ ಅನ್ನು "abc" ಎಂದೇ ಹಾಕುವೆನು ಮತ್ತು ನಾವು "You’re in!" ಎಂದು ಪಡೆದಿದ್ದೇವೆ.
08:55 ನಾವು "username" ಅನ್ನು ಪರೀಕ್ಷಿಸಿದ್ದೇವೆ ಮತ್ತು ಅದು ಅಸ್ತಿತ್ವದಲ್ಲಿದೆ.
08:58 ನಾವು ನಮ್ಮ ಫೀಲ್ಡ್ ಗಳು ಅಸ್ತಿತ್ವದಲ್ಲಿದೆಯೇ ಎಂದು ಪರೀಕ್ಷಿಸಿದ್ದೇವೆ ಹಾಗಾಗಿ ದಯವಿಟ್ಟು "username" ಮತ್ತು "password" ಅನ್ನು ನಮೂದಿಸಿ.
09:04 ನಾವು ಸರಿಯಾದ "username" ಅನ್ನೂ ಮತ್ತು ತಪ್ಪಾದ "password" ಅನ್ನೂ ನಮೂದಿಸಿದರೆ,– "Incorrect password" ಎಂಬ ಎರರ್ ಮೆಸೇಜ್ ಅನ್ನು ಪಡೆಯುತ್ತೇವೆ.
09:11 ನಾವು ಸರಿಯಾದ ಪಾಸ್ವರ್ಡ್ ಅನ್ನು ನಮೂದಿಸಿದರೆ, ನಾವು "You’re in" ಎಂಬ ಮೆಸೇಜ್ ಅನ್ನು ಪಡೆಯುತ್ತೇವೆ.
09:13 ನಾವು ಇಲ್ಲಿ ಇಲ್ಲದ "username" ಅನ್ನು ನಮೂದಿಸಿದರೆ, ನಾವು "user doesn’t exist" ಎಂಬ ಎರರ್ ಮೆಸೇಜ್ ಅನ್ನು ಪಡೆಯುವೆವು.
09:24 ಮುಂದಿನ ಭಾಗದಲ್ಲಿ ಭೇಟಿಯಾಗೋಣ ಮತ್ತು ನಾನು sessions ಮತ್ತು ಲಾಗೌಟ್ ಪೇಜ್ ಅನ್ನು ರಚಿಸುವುದು ಹೇಗೆಂದು ತೋರಿಸುವೆನು.
09:32 ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14