PHP-and-MySQL/C4/Display-Images-from-a-Directory/Kannada

From Script | Spoken-Tutorial
Revision as of 12:15, 12 May 2020 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ಡೈರಕ್ಟರಿಯಲ್ಲಿರುವ ಇಮೇಜ್ ಅನ್ನು ಹೇಗೆ ಪಟ್ಟಿ ಮಾಡುವುದು ಎಂದು ತೋರಿಸುವ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್, ಫೈಲ್ ಗಳನ್ನು ಪಟ್ಟಿ ಮಾಡುವುದು ಮತ್ತು ಅವುಗಳನ್ನು ನಿಭಾಯಿಸಲು ಎಚ್.ಟಿ.ಎಂ.ಎಲ್ ಕೋಡ್ ಅನ್ನು ಬಳಸುವುದು. ಉದಾಹರಣೆಗೆ ಇಮೇಜ್ ಟ್ಯಾಗ್, ಮತ್ತು ಡೈರಕ್ಟರಿಯಲ್ಲಿ ಪಟ್ಟಿಮಾಡಿದ ಇಮೇಜ್ ಗಳನ್ನು ಎಕೋ ಮಾಡುವುದು – ಇವುಗಳ ಕುರಿತು ಕಲಿಸುತ್ತದೆ.
00:23 ಕೊನೆಯ ಫಲಿತಾಂಶ ಈ ರೀತಿಯಾಗಿ ಕಾಣಿಸುತ್ತದೆ.
00:26 ನಾನು ಇಲ್ಲಿ 8 ಇಮೇಜ್ ಗಳನ್ನು ರಚಿಸಿದ್ದೇನೆ ಮತ್ತು ಇವುಗಳನ್ನು ಪೇಜ್ ನ ಕೆಳಗಿನವರೆಗೆ ಪಟ್ಟಿ ಮಾಡಲಾಗಿದೆ. ಇವು ಬೇರೆ ಬೇರೆ ಇಮೇಜ್ ಗಳಾಗಿವೆ.
00:33 ಈಗ ನಾನು ನನ್ನ ಡೈರೆಕ್ಟರಿ ವಿನ್ಯಾಸವನ್ನು ಹೇಗೆ ಸೆಟ್ ಮಾಡಿದ್ದೇನೆಂದು ತೋರಿಸುವೆನು.
00:37 ಇಲ್ಲಿ ನನ್ನ 'show dot php' ಫೈಲ್ ಇದೆ. ಈಗ ಇದರಲ್ಲೇ ನಾವು ಕಾರ್ಯನಿರ್ವಹಿಸುವೆವು.
00:42 ಇಲ್ಲಿ ನನ್ನ 'images' ಫೋಲ್ಡರ್ ಇದೆ. ಅದು ಇಲ್ಲಿ ತೋರಿಸಿರುವ ಇಮೇಜ್ ಗಳನ್ನು ಹೊಂದಿದೆ.
00:53 ಇವುಗಳು ಯಾವ ಫಾರ್ಮ್ಯಾಟ್ ನಲ್ಲಿವೆ ಎಂಬುದು ಇಲ್ಲಿ ಮುಖ್ಯವಲ್ಲ.
00:56 ಅವು ಒಂದೇ ಅಥವಾ ವಿಭಿನ್ನ ಫಾರ್ಮ್ಯಾಟ್ ಗಳನ್ನು ಹೊಂದಿರಬಹುದು. ಅಥವಾ ಎಚ್.ಟಿ.ಎಮ್.ಎಲ್ ನಲ್ಲಿ ಕೆಲಸ ಮಾಡಬಲ್ಲ ಯಾವುದೇ ಇಮೇಜ್ ಫೈಲ್ ಆಗಿರಬಹುದು.
01:04 ಇಲ್ಲಿ ನಮ್ಮ 'show dot php' ಇದೆ.
01:06 ಈಗ ಸದ್ಯಕ್ಕೆ ಇದು ಖಾಲಿಯಾಗಿದೆ.
01:09 ಖಂಡಿತವಾಗಿಯೂ ನಮಗೆ ನಮ್ಮ ಪಿ.ಎಚ್.ಪಿ ಟ್ಯಾಗ್ ಬೇಕು.
01:13 ಮೊದಲಿಗೆ ನಾವು ಇಲ್ಲಿ ಒಂದು ವೇರಿಯೇಬಲ್ ನನ್ನು ನಮ್ಮ ಇಮೇಜ್ ಗಳ ಡೈರೆಕ್ಟರಿಯೊಂದಿಗೆ ಸೆಟ್ ಮಾಡಬೇಕು.
01:20 ನಾನು ಮೊದಲೇ ತೋರಿಸಿದಂತೆ ಇದು 'images' ಮತ್ತು ನಂತರ ಒಂದು ಫಾರ್ವರ್ಡ್ ಸ್ಲ್ಯಾಶ್ ಆಗಿದೆ.
01:24 ಈ ಚಿಹ್ನೆಗಳ ಕುರಿತು ಎಚ್ಚರಿಕೆಯಿರಲಿ, ಉದಾಹರಣೆಗೆ ಬ್ಯಾಕ್ ಸ್ಲ್ಯಾಶ್ ಇದು ವಿಶೇಷ ಚಿಹ್ನೆಯಾಗಿದ್ದು ಇದನ್ನು ಪಿ.ಎಚ್.ಪಿ. ಯಲ್ಲಿ ಅದರ ಮುಂದಿನ ಅಕ್ಷರವನ್ನು ತೆಗೆದುಹಾಕಲು ಬಳಸಲಾಗುತ್ತದೆ.
01:35 ಉದಾಹರಣೆಗೆ, ನಾವು 'images backward slash photos' ಎಂದಿದ್ದರೆ, ಇದನ್ನು ಪಿ.ಎಚ್.ಪಿ. ಯಲ್ಲಿ 'images-hotos' ಎಂದು ಬರುತ್ತದೆ, ಏಕೆಂದರೆ ಇದು 'p' ಯನ್ನು ಕ್ಯಾನ್ಸಲ್ ಮಾಡುತ್ತದೆ.
01:51 ಫಾರ್ವರ್ಡ್ ಸ್ಲ್ಯಾಶ್ ಅನ್ನು ಬಳಸುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. ಇಲ್ಲಿ ನಾವು 'photos' ಎಂದು ಹೊಂದಿಲ್ಲ.
01:57 ನಾವು ಮಾಡಬೇಕಾದ ಮುಂದಿನ ಕೆಲಸವೆಂದರೆ, 'open dir function' ಅನ್ನು ಬಳಸಬೇಕು.
02:01 ಇದು ನಮಗಾಗಿ ಒಂದು ಡೈರಕ್ಟರಿಯನ್ನು ತೆರೆಯುತ್ತದೆ.
02:05 ಇದು ಡೈರಕ್ಟೆರಿಯ ಕಂಟೆಂಟ್ ಆಗಿರುವುದಿಲ್ಲ.
02:08 ಇದು ಒಂದು ನಿರ್ದಿಷ್ಟವಾದ ಡೈರಕ್ಟರಿಯನ್ನು ತೆರೆಯುತ್ತದೆ. ಇಲ್ಲಿ ಇದು ಈ ಡೈರಕ್ಟರಿಯಾಗಿದೆ.
02:14 ಇದು ಹೇಗಿದೆಯೋ ಹಾಗೆ ಇಡುವ ಬದಲು ನಾವು, if '$open dir' equals 'open dir' (ಒಂದು ಹೊಸ ವೇರಿಯೇಬಲ್) ಮತ್ತು '$dir' ಎಂದು ಟೈಪ್ ಮಾಡೋಣ. ನಾವು ಇಲ್ಲಿ ಇದನ್ನು ಇದಕ್ಕೆ ಹೋಲಿಸುತ್ತಿದ್ದೇವೆ.
02:27 ಇದು ಏನು ಮಾಡುವುದೆಂದರೆ, ಇದು ಯಶಸ್ವಿಯಾಗಿ ಪೂರ್ಣಗೊಂಡಿದೆಯೇ ಎಂದು ಹೇಳುತ್ತದೆ. ಹಾಗಾಗಿದ್ದರೆ ಇದು 'open dir' ಅನ್ನು ಓಪನ್ ಡೈರಕ್ಟರಿಗೆ ಅಸೈನ್ ಮಾಡುತ್ತದೆ. ನಾವು ಅದನ್ನು ಆಮೇಲೆ ಎಡಿಟ್ ಮಾಡಬಹುದು.
02:40 ಇದನ್ನು ಮಾಡಲು ಮುಖ್ಯ ಕಾರಣವೆಂದರೆ, ನಿಮ್ಮ ಡೈರಕ್ಟರಿ ಅಸ್ತಿತ್ವದಲ್ಲಿ ಇಲ್ಲದಿದ್ದರೆ ಇದು ಒಂದಷ್ಟು ಕೋಡ್ ಮತ್ತು ಹಲವಾರು ಎರರ್ ಗಳನ್ನು ಕೊಡುತ್ತದೆ.
02:47 ಇಲ್ಲಿ ಇದು ಯಾವುದೇ ಎರರ್ ಗಳಿಲ್ಲದಿದ್ದರೆ, ಈ ಬ್ಲಾಕ್ ನ ಒಳಗೆ ಇರುವ ಕೋಡ್ ಅನ್ನು ಮುಂದುವರಿಸಬಹುದು ಎಂದು ಹೇಳುತ್ತದೆ.
02:56 ಮುಂದಿನ ಭಾಗವು ಸ್ವಲ್ಪ ಕ್ಲಿಷ್ಟಕರವಾಗಿದೆ.
02:59 ಈಗ ಇದಕ್ಕೆ ಸ್ವಲ್ಪ ಟಿಪ್ಪಣಿಯನ್ನು ಆರಂಭಿಸೋಣ. ಇಲ್ಲಿ Open dir ಎಂದು ಕಮೆಂಟ್ ಮಾಡಿ.
03:03 ಇದರೊಳಗೆ ಡೈರಕ್ಟರಿಯನ್ನು ಓದುವೆವು, ಹಾಗಾಗಿ ಇಲ್ಲಿ 'read dir' ಎಂದು ಕಮೆಂಟ್ ಮಾಡಿ.
03:09 ಇಲ್ಲಿ while ಲೂಪ್ ಅನ್ನು ಬಳಸುವೆವು. ಏಕೆಂದರೆ, ಪ್ರತಿಯೊಂದು ಸಲ while ಲೂಪ್ ಎಕ್ಸಿಕ್ಯೂಟ್ ಆದಾಗ, ಲೂಪ್ ನಲ್ಲಿ ಫೋಲ್ಡರ್ ನಲ್ಲಿರುವ ಪ್ರತಿಯೊಂದು ಇಮೇಜ್ ಅನ್ನು ಒಂದೊಂದಾಗಿ ಎಕೋ ಮಾಡಬೇಕು ಅಥವಾ ತೋರಿಸಬೇಕು.
03:23 while ಲೂಪ್ ನೊಂದಿಗೆ ಆರಂಭಿಸೋಣ. ನಾವು ಇದರಳೊಗೆ ಏನಾಗಬೇಕೋ ಅದನ್ನು ರಚಿಸೋಣ. ಇದರ ಮಧ್ಯದಲ್ಲಿ ನಮ್ಮ while ಲೂಪ್ ನಲ್ಲಿ ಎಕ್ಸಿಕ್ಯೂಟ್ ಆಗಬೇಕಾದ ಕೋಡ್ ಅನ್ನು ಇಲ್ಲಿ ಇಡೋಣ., ಇದು ನಮ್ಮ while ಲೂಪ್ ಗೆ ಇದೆ.
03:32 ಇದಕ್ಕೆ ನಾವು ಇಲ್ಲಿ $file equals 'read directory' ಎಂದು ಟೈಪ್ ಮಾಡಿ, ಇದು ನಾನು ಈಗ ತಾನೆ ಪರಿಚಯಿಸಿದ ಹೊಸ ಫಂಕ್ಷನ್ ಆಗಿದೆ.
03:44 ನೀವು ಊಹಿಸಿರಬಹುದು, ಇಲ್ಲಿ 'open dir' ವೇರಿಯೇಬಲ್ ಅನ್ನು ಟೈಪ್ ಮಾಡಬೇಕು.
03:51 ಇದು ನಾವು ಈಗಾಗಲೇ 'open dir()' ಫಂಕ್ಷನ್ ಅನ್ನು ಬಳಸಿ ತೆರೆದಿರುವ ಡೈರಕ್ಟರಿಯನ್ನು ಓದುತ್ತದೆ.
03:57 ಇವೆರೆಡು ತುಂಬ ಉಪಯುಕ್ತ ಫಂಕ್ಷನ್ ಗಳು ಮತ್ತು ಅವುಗಳನ್ನು ಪರಸ್ಪರ ಸುಸಂಗತಗೊಳಿಸುವೆನು.
04:03 ನಾವು ಇಲ್ಲಿ ಇದನ್ನು ಮರುಮೌಲ್ಯಮಾಪನ ಮಾಡೋಣ. ಇದು 'False' ಗೆ ಸಮವಾಗಿಲ್ಲದಿದ್ದರೆ, ಅಂದರೆ ಇದು ಓಪನ್ ಆಗಿಲ್ಲದಿದ್ದರೆ ಅಥವಾ ಇದು ಓದಲು ಅಸಾಧ್ಯವಾಗಿದ್ದರೆ ಆಗ ನಾವು ಕೆಲವು ಎರರ್ ಗಳನ್ನು ಪಡೆಯಬಹುದು.
04:17 ಇದರೊಂದಿಗೆ ನಾವು ವಿನ್ಯಾಸವನ್ನು ಆರಂಭಿಸಬೇಕು.
04:20 ನಾವು ಇದನ್ನು ಬ್ರ್ಯಾಕೆಟ್ ನೊಳಗೆ ಇಡಬೇಕು.
04:23 ಹಾಗಾಗಿ ಇಲ್ಲಿ ಬ್ರ್ಯಾಕೆಟ್ ಗಳನ್ನು ಹಾಕೋಣ.
04:25 ಇದು ನಮ್ಮ ಸಂಪೂರ್ಣವಾದ while ಸ್ಟೇಟ್ಮೆಂಟ್ ಆಗಿದೆ.
04:30 ಈಗ ನಾವು ಇದರೊಳಗೆ ಬರೆಯುವುದು ಸುಲಭವಾಗಿದೆ. ಏಕೆಂದರೆ, ನಾವು ಇಲ್ಲಿ $file ವೇರಿಯೇಬಲ್ ಅನ್ನು ರಚಿಸಿದ್ದೇನೆ.
04:35 ನಾವು while ಲೂಪ್ ನಲ್ಲಿರುವುದರಿಂದ, ಇದು ಈ ಡೈರಕ್ಟರಿಯಲ್ಲಿರುವ ಪ್ರತಿಯೊಂದು ಫೈಲ್ ಅನ್ನೂ ರನ್ ಆಗುವಾಗಲೇ ಅಪ್ಡೇಟ್ ಮಾಡುತ್ತದೆ.
04:40 ಈಗ ನಾವು echo $file ಎಂದು ಟೈಪ್ ಮಾಡಬೇಕು ಮತ್ತು ಇಲ್ಲಿ ಇದರ ಕೊನೆಯಲ್ಲಿ ಒಂದು br ಅನ್ನು ಸೇರಿಸಬೇಕು.
04:50 ಈಗ ನಾವು ಇಲ್ಲಿ ಬ್ರೌಸರ್ ಅನ್ನು ತೆರೆದು, ರಿಫ್ರೆಶ್ ಮಾಡಿದರೆ, ಇಲ್ಲಿ ನಮ್ಮ ಎಲ್ಲ ಡೈರಕ್ಟರಿಗಳೂ ಪಟ್ಟಿಯಾಗಿರುವುದನ್ನು ನೀವು ನೋಡಬಹುದು.
04:55 ನಾನು ಮೊದಲೇ ಹೇಳಿದಂತೆ ಡೈರೆಕ್ಟರಿ ಲಿಸ್ಟಿಂಗ್ ನ ಕುರಿತು ನಾನು ಇನ್ನೂ ಕೆಲವು ಟ್ಯುಟೋರಿಯಲ್ ಗಳನ್ನು ಹೊಂದಿದ್ದೇನೆ.
05:00 ಇಲ್ಲಿ ನಾವು ಒಂದು ಡಾಟ್ ಮತ್ತು ಇಲ್ಲಿ ಎರಡು ಡಾಟ್ ಅನ್ನು ಪಡೆದಿದ್ದೇವೆ. ಇದು ಡೈರಕ್ಟರಿ ವಿನ್ಯಾಸದ ಸಾಮಾನ್ಯ ಸಂಕೇತಗಳಾಗಿವೆ.
05:05 'dot' ಅಂದರೆ ಪ್ರಸ್ತುತ ಡೈರೆಕ್ಟರಿ ಮತ್ತು ಎರಡು ಡಾಟ್ ಗಳೆಂದರೆ, ಹಿಂದಿರುಗುವುದು ಎಂದು ಅರ್ಥ.
05:13 ಈಗ ನಾವು ಏನು ಮಾಡಬೇಕೆಂದರೆ, ನಾವು ಈ ಡಾಟ್ ಗಳನ್ನು ಎಕೋ ಮಾಡಬಾರದು ಎಂದು ಈ ಲೂಪ್ ನೊಳಗೆ ಮೌಲ್ಯಮಾಪನ ಮಾಡಬೇಕು.
05:22 ಏಕೆಂದರೆ ನಾವು ಈ ಇಮೇಜ್ ಗಳನ್ನು ತೋರಿಸುತ್ತಿದ್ದೇವೆ, ಇದು ಇಮೇಜ್ ಅಲ್ಲ ಮತ್ತು ಇದು ಕೂಡ ಇಮೇಜ್ ಅಲ್ಲ.
05:27 ಹಾಗಾಗಿ ನಾವು ಇವುಗಳನ್ನು ತೆಗೆದು ಹಾಕಬೇಕು. if' '$file' doesn't equal 'dot' OR ನ ಬದಲು ಇಲ್ಲಿ AND ಎಂದು ಟೈಪ್ ಮಾಡಿ, ನಂತರ $file' doesn't equal 'dot dot ಎಂದು ಟೈಪ್ ಮಾಡೋಣ.
05:45 ನಾವು ಇದರ ಮೂಲಕ ಲೂಪ್ ಮಾಡುವೆವು ಮತ್ತು ಇದು ಡಾಟ್ ಗೆ ಸಮವೇ ಎಂದು ಕೇಳುತ್ತದೆ.
05:50 ಮೊದಲು ಇದು ಹೌದು ಎಂದಾಗುವುದು, ಹಾಗಾಗಿ ನಾವು ನಮ್ಮ if ಸ್ಟೇಟ್ಮೆಂಟ್ ನ ಒಳಗಿರುವ ಕಮಾಂಡ್ ಗಳನ್ನು ನಿರ್ಲಕ್ಷಿಸುವೆವು.
05:59 ನಾವು ಒಟ್ಟಿಗೇ ಪರೀಕ್ಷಿಸುವುದರಿಂದ ಇವೆರಡೂ, ಟ್ರ್ಯೂ ಆಗಿರುವುದು.
06:04 ಈಗ ರಿಫ್ರೆಶ್ ಮಾಡಿ ನೋಡಿದರೆ, ಅವೆರಡೂ ಕಾಣಿಸುವುದಿಲ್ಲ.
06:07 ಈಗ ಮಾಡಬೇಕಾದ ಮುಂದಿನ ಕೆಲಸವೆಂದರೆ, ನಾವು ಈ '$file' ವೇರಿಯೇಬಲ್ ಅನ್ನು ಇಮೇಜ್ ಅನ್ನು ತೋರಿಸುವಂತೆ ನಿಭಾಯಿಸಬೇಕು.
06:16 ಈಗ ನಾನು ಇವೆಲ್ಲವನ್ನು ತೆಗೆದು ಇಲ್ಲಿ ಪೂರ್ತಿಯಾಗಿ ಎಚ್.ಟಿ.ಎಂ.ಎಲ್ ಕೋಡ್ ಅನ್ನು ಬರೆಯುವೆನು.
06:23 ಹಾಗಾಗಿ, image ಸೋರ್ಸ್ ಇಕ್ವಲ್ಸ್ ಎಂದು ಟೈಪ್ ಮಾಡಿ, ಇಲ್ಲಿ ಏನನ್ನಾದರೂ ಬರೆಯಬಹುದು.
06:26 ಇಲ್ಲಿ ನೀವು ಇಮೇಜ್ ನ height ಮತ್ತು width ಅನ್ನು ಸೂಚಿಸಬಹುದು ಆದರೆ ನಾನು ಈಗ ಅದನ್ನು ಮಾಡುವುದಿಲ್ಲ, ಏಕೆಂದರೆ ನನ್ನ ಎಲ್ಲ ಇಮೇಜ್ ಗಳಿಗೆ ಉದ್ದ ಮತ್ತು ಅಗಲವನ್ನು ಈಗಾಗಲೇ ಸೆಟ್ ಮಾಡಲಾಗಿದೆ.
06:33 ನೀವು ಬೇರೆ ಬೇರೆ ಗಾತ್ರದ ಇಮೇಜ್ ಗಳನ್ನು ಹೊಂದಿದ್ದರೆ, ನೀವು ಅವುಗಳನ್ನು ಒಂದೇ ಅಳತೆಯಲ್ಲಿ ಇಡಲು ಬಯಸಿದರೆ ಆಗ ನೀವು ಆಗ ನೀವು ಅವುಗಳನ್ನು hyper link ನಲ್ಲಿಟ್ಟು, ಅವುಗಳನ್ನು ಕ್ಲಿಕ್ ಮಾಡಿದಾಗ ಪ್ರತ್ಯೇಕವಾಗಿ ನೋಡುವಂತೆ ಮಾಡಬಹುದು.
06:43 ಆದರೆ ಅದು ನೇರವಾದ ಮಾರ್ಗ ಮತ್ತು ನಾನು ಅದನ್ನು ಮಾಡಲು ಪಿ.ಎಚ್.ಪಿ. ಕೋಡ್ ಅನ್ನು ತೋರಿಸುವೆನು.
06:50 ಈಗ ನಾವು ಪ್ರತಿಯೊಂದರ ನಂತರವೂ ಒಂದು break ಅನ್ನು ಹಾಕೋಣ.
06:52 ಈಗ ಇದರಲ್ಲಿ ನೀವು ಫೈಲ್ ಅನ್ನು ಪಡೆಯುವಿರಿ ಎಂದುಕೊಂಡಿರಬಹುದು ಆದರೆ ನಾವು ರಿಫ್ರೆಶ್ ಮಾಡಿದಾಗ, ನೀವು ಇಲ್ಲಿ ಒಂದಷ್ಟು ತುಂಡರಿಸಿದ ಇಮೇಜ್ ಗಳನ್ನು ನೋಡಬಹುದು.
07:00 ಏಕೆಂದರೆ, ನಾವು properties ಅನ್ನು ಕ್ಲಿಕ್ ಮಾಡಿದಾಗ, ಇಲ್ಲಿ directory images and image 1 ಎಂದು ಹೇಳಲಾಗಿದೆ. .
07:07 ನಾವು ಇಲ್ಲಿ ನಮ್ಮ ಇಮೇಜ್ ಡೈರಕ್ಟರಿಯನ್ನು ಹಾಕಬೇಕು.
07:10 ನಾವು images ಎಂದು ಬರೆಯಬಹುದು ಆದರೆ ನಾವು ಈಗಾಗಲೇ ಅದಕ್ಕಾಗಿ 'dir' ಎಂಬ ವೇರಿಯೇಬಲ್ ಅನ್ನು ಹೊಂದಿದ್ದೇವೆ.
07:14 ಹಾಗಾಗಿ ನಾವು ಇದನ್ನು 'dir forward slash $file',ಎಂದರೆ ಇದು images forward slash file ಎಂದಾಗುವುದು.
07:19 ಹಾಗಾಗಿ ನಾವು ರಿಫ್ರೆಶ್ ಮಾಡಿದಾಗ, ಈ ಟ್ಯುಟೋರಿಯಲ್ ನ ಆರಂಭದಲ್ಲಿ ನಾನು ತೋರಿಸಿದ ಪೇಜ್ ಗೆ ಹಿಂದಿರುಗುತ್ತೇವೆ.
07:27 ಪ್ರಾಥಮಿಕವಾಗಿ ಇವಿಷ್ಟು, ಇದನ್ನು ಮಾಡಲು ಇನ್ನು ಸುಧಾರಿತ ವಿಧಾನಗಳಿವೆ. ಅವುಗಳನ್ನು ಲೇ ಔಟ್ ನಲ್ಲಿ ಜೋಡಿಸುವುದು ಮುಂತಾದವುಗಳು.
07:35 ನಿಮಗೆ ಏನಾದರು ಸಮಸ್ಯೆಗಳಿದ್ದಲ್ಲಿ ನನ್ನನ್ನು ಸಂಪರ್ಕಿಸಿರಿ, ನಾನು ಸಹಾಯ ಮಾಡಲು ಸಿದ್ಧನಿದ್ದೇನೆ.
07:44 ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14