PHP-and-MySQL/C3/MySQL-Part-3/Kannada

From Script | Spoken-Tutorial
Revision as of 15:46, 13 April 2020 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ನಮಸ್ತೆ, ಪುನಃ ಸ್ವಾಗತ. ಈ ಟ್ಯುಟೋರಿಯಲ್ ನಲ್ಲಿ ನಾವು ಡಾಟಾಬೇಸ್ ನೊಳಗೆ ಕೆಲವು ಡಾಟಾವನ್ನು ಬರೆಯುವೆವು.
00:07 ಇದನ್ನು ಮಾಡಲು ನಾವು, "mysql query" ಫಂಕ್ಷನ್ ಅನ್ನು ಬಳಸುವೆವು.
00:12 ಇಲ್ಲಿ ನೀವು ನಮ್ಮ ರೆಕಾರ್ಡ್ ಗಳಿರುವುದನ್ನು ನೋಡಬಹುದು.
00:16 - 00:22 ಮೊದಲಿಗೆ ನಾನು ಇಲ್ಲಿನ ಡಾಟಾ ವನ್ನು ಅಳಿಸಿ ಹಾಕುವೆನು.
00:29 ಇಲ್ಲಿ ನಾವು ಒಂದು ಖಾಲಿ ಟೇಬಲ್ ಅನ್ನು ಹೊಂದಿದ್ದೇವೆ. ನಮ್ಮ ಟೇಬಲ್ ನಲ್ಲಿ ಇಲ್ಲಿಯ ತನಕ ಯಾವುದೇ ಡಾಟಾ ಇಲ್ಲ.
00:37 ನಾವು ಇಲ್ಲಿ ಏನೂ ಇಲ್ಲದಿರುವುದನ್ನು ನೋಡಬಹುದು.
00:40 ಇಲ್ಲಿ ಕೇವಲ ನಮ್ಮ ಫೀಲ್ಡ್ ನ ಹೆಸರುಗಳಿವೆ.
00:43 ಇದನ್ನು ಆರಂಭಿಸಲು, ಇಲ್ಲಿ
00:47 "write some data" ಎಂಬ ಕಮೆಂಟ್ ಅನ್ನು ಹಾಕೋಣ. ಈಗ ನಾವು ಡಾಟಾವನ್ನು ಬರೆಯುವ ಒಂದು query (ಕ್ವೈರಿ) ಯನ್ನು ಸೆಟ್ ಮಾಡೋಣ.
00:52 ಅದಕ್ಕಾಗಿ, "$write" = "mysql-query()" ಎಂದು ಟೈಪ್ ಮಾಡೋಣ.
00:57 ಈ ಫಂಕ್ಷನ್ ಕೇವಲ ಒಂದು ಪ್ಯಾರಾಮೀಟರ್ ಅನ್ನು ತೆಗೆದುಕೊಳ್ಳುತ್ತದೆ, ಅಂದರೆ ಅದು ನಮ್ಮ sql query ಆಗಿರುತ್ತದೆ.
01:02 ಡಾಟಾ ವನ್ನು ಇನ್ಸರ್ಟ್ ಮಾಡಲು, "INSERT" ಎಂದು ಟೈಪ್ ಮಾಡಿ.
01:06 ಅಂದರೆ "INSERT INTO" ಎಂದು ಟೈಪ್ ಮಾಡಿ.
01:09 ಇದನ್ನು ಕ್ಯಾಪಿಟಲ್(ದೊಡ್ಡಕ್ಷರ) ನಲ್ಲಿ ಬರೆದಿದ್ದೇನೆ ಏಕೆಂದರೆ ಇದು sql code ಅನ್ನು ಸೂಚಿಸುತ್ತದೆ.
01:14 ಏನನ್ನಾದರೂ ಕ್ಯಾಪಿಟಲ್ ನಲ್ಲಿ ಬರೆದಿದ್ದರೆ ಅದು sql code ಎಂದು ಅರ್ಥ.
01:19 ನಾನು ಸಣ್ಣ ಅಕ್ಷರದಲ್ಲಿ ಬರೆದಿದ್ದರೆ, ಅದು ಟೇಬಲ್ ನ ಹೆಸರು, ಡಾಟಾಬೇಸ್ ನ ಹೆಸರು ಅಥವಾ ನಾನು ಡಾಟಾಬೇಸ್ ನಲ್ಲಿ ಬರೆಯುವ ಡಾಟಾ ಆಗಿರುತ್ತದೆ.
01:28 ಹಾಗಾಗಿ ನಾನು, "INSERT INTO people" ಎಂದು ಟೈಪ್ ಮಾಡುವೆನು ಏಕೆಂದರೆ ಇದು ಟೇಬಲ್ ನ ಹೆಸರಾಗಿದೆ.
01:33 "INSERT INTO people" ಆದ ನಂತರ "VALUES" ಎಂದು ಟೈಪ್ ಮಾಡಿ ನಂತರ ಬ್ರ್ಯಾಕೆಟ್ ನಲ್ಲಿ ಪ್ರತಿಯೊಂದು ವ್ಯಾಲ್ಯೂ ಗೂ ಜಾಗವನ್ನು ಇಟ್ಟುಕೊಳ್ಳಬೇಕು.
01:42 ನಾವು 1,2,3,4,5 ಹೊಂದಿದ್ದೇವೆ.
01:46 ಇಲ್ಲಿ 5 ಫೀಲ್ಡ್ ಗಳಿವೆ, ಹಾಗಾಗಿ ನಾವು ಐದು ಚೂರು ಡಾಟಾಬೇಸ್ ಅನ್ನು ಇಲ್ಲಿ ಬರೆಯಬೇಕು.
01:53 ನಮಗೆ "id", "firstname", "lastname" ಹೀಗೆಯೇ "gender" ವರೆಗೂ ಬೇಕು.
01:58 ಇವುಗಳನ್ನು ಸಿಂಗಲ್ ಕೋಟ್ ಅನ್ನು ಬಳಸಿ, ಪ್ರತಿಯೊಂದನ್ನು ಕೊಮಾ ದಿಂದ ಬೇರ್ಪಡಿಸಿ ರಚಿಸಲಾಗಿದೆ.
02:07 ನಾವು ಡಬಲ್ ಕೋಟ್ ಅನ್ನು ಬಳಸಿಲ್ಲ ಏಕೆಂದರೆ ಇದು ಕ್ವೈರಿಯ ಆರಂಭ ಮತ್ತು ಕೊನೆಯನ್ನು ಸೂಚಿಸುತ್ತದೆ.
02:15 ಇಲ್ಲಿ ನಾವು id ಯನ್ನು ಸೇರಿಸುವುದು ಬೇಕಿಲ್ಲ.
02:18 ಮುಂದಿನದು "firstname" ಆಗಿದೆ - ಅದನ್ನು "Alex" ಎಂದು ಟೈಪ್ ಮಾಡೋಣ.
02:22 "lastname" ಅನ್ನು ನಾನು "Garrett" ಎಂದು ನಮೂದಿಸುವೆನು.
02:25 "date of birth" ಗೆ ,ಒಂದು "date" ಫಂಕ್ಷನ್ ಅನ್ನು ರಚಿಸಿ, ಅದು "$date" ವೇರಿಯೇಬಲ್ ಗೆ ಸಮ ಎಂದು ಟೈಪ್ ಮಾಡಿರಿ
02:31 ನಾನು ಇದನ್ನು ಈ ನಿರ್ದಿಷ್ಟ ಮಾದರಿಯಲ್ಲಿ ಇಡುವೆನು.
02:35 ನಾವು ಇಲ್ಲಿ ನಮ್ಮ ಡಾಟಾಬೇಸ್ ನಲ್ಲಿ ವ್ಯಾಲ್ಯುವನ್ನು ಸೇರಿಸಲು ಹೋದಾಗ, ಕೆಳಕ್ಕೆ ಸ್ಕ್ರೋಲ್ ಮಾಡಿದರೆ, ಕ್ಯಾಲೆಂಡರ್ ಫಂಕ್ಷನ್ ದಿನಾಂಕವನ್ನು ಹೊಂದಿರುವುದನ್ನು ಇಲ್ಲಿ ನೋಡಬಹುದು.
02:44 ಹಾಗಾಗಿ 23ರ ಮೇಲೆ ಕ್ಲಿಕ್ ಮಾಡುವುದರ ಮೂಲಕ, ಈ ಫೀಲ್ಡ್ ಮಾದರಿಯನ್ನು ತೆಗೆದುಕೊಳ್ಳುವುದನ್ನು ನಾವು ನೋಡಬಹುದು.
02:50 ಇಲ್ಲಿ ಇಸ್ವಿಯು ಪೂರ್ಣ ಮಾದರಿಯನ್ನು ಹೊಂದಿದೆ.
02:52 ನಂತರ ತಿಂಗಳು, ತದನಂತರ ದಿನಾಂಕವಾಗಿದೆ.
02:55 ಹಾಗಾಗಿ, 2009 02 23 ಅಂದರೆ 23ನೇ ತಾರೀಖು, 2 ನೇ ತಿಂಗಳು, 2009 ನೇ ಇಸ್ವಿ ಎಂದರ್ಥ.
03:02 ಹಾಗಾಗಿ, ನಾವು ನಮ್ಮ date ಫಂಕ್ಷನ್ ಅನ್ನು ಕ್ಯಾಪಿಟಲ್ 'Y', 'm' ಮತ್ತು ನಂತರ 'd' ಮತ್ತು ಪ್ರತಿಯೊಂದರ ಮಧ್ಯದಲ್ಲಿ ಹೈಫನ್ - ಈ ಮಾದರಿಯಲ್ಲಿ ಬರೆಯುವುದರ ಮೂಲಕ ನಮಗೆ ಬೇಕಾದ ಮಾದರಿಯನ್ನು ತಯಾರಿಸಿಕೊಳ್ಳಬಹುದು.
03:13 ಹಾಗಾಗಿ ಅದು ಆ ಮಾದರಿಯಲ್ಲಿ ಸಿದ್ಧವಾಗುತ್ತದೆ.
03:16
03:20 $date ಅನ್ನು ಬಳಸಿ ಮತ್ತು ನಮ್ಮ ಡೇಟ್ ಮಾದರಿಯನ್ನು ಭಾವಿಸಿಕೊಂಡು, ಇಲ್ಲಿ ಈ ಟೇಬಲ್ ನಲ್ಲಿ ಇನ್ಸರ್ಟ್ ಮಾಡಬಹುದು.
03:28 ಕೊನೆಯದು gender ಆಗಿದೆ, ಮತ್ತು ನಾನು ಪುರುಷ ಆಗಿರುವುದರಿಂದ ನಾನು ಇಲ್ಲಿ "M" ಎಂದು ನಮೂದಿಸುವೆನು.
03:34 ಅದು ಕಾರ್ಯ ನಿರ್ವಹಿಸುತ್ತದೆ ಎಂದು ಭಾವಿಸಿ, ನಾವು ಇದನ್ನು run ಮಾಡಬಹುದು.
03:37 ಆದರೆ ಅದಕ್ಕು ಮೊದಲು ನಾವು ಕೊನೆಯಲ್ಲಿ or die "mysql_error" ಅನ್ನು ಟೈಪ್ ಮಾಡಿಬಿಡೋಣ..
03:44 ಈಗ ನಾನು ಇದನ್ನು ಬಿಡುವೆನು, ಆದರೆ ನೀವು ಬೇಕಾದರೆ ಮಾಡಬಹುದು.
03:50 ಈಗ ಆ ಪೇಜ್ ಅನ್ನು ರಿಫ್ರೆಶ್ ಮಾಡೋಣ.
03:53 ಈಗ ನಾವು ನೋಡುತ್ತಿರುವುದು ಹಿಂದಿನ ಟ್ಯುಟೋರಿಯಲ್ ದಾಗಿದೆ.
03:57 ಈಗ ಇದಕ್ಕೆ ಕಮೆಂಟ್ ಸೇರಿಸೋಣ.
03:59 ಈಗ ಇದನ್ನು ನಿರ್ಲಕ್ಷಿಸೋಣ.
04:01 ಇದು ಈ ಟ್ಯುಟೋರಿಯಲ್ ನ ಈ ಭಾಗವನ್ನು ನಿರ್ಲಕ್ಷಿಸುತ್ತದೆ.
04:08 ಸರಿ, ಈಗ ನಾನು ಪ್ರಸ್ತುತವಾಗಿ ತೋರಿಸುತ್ತಿರುವ ಕೋಡ್ ಗೆ ಬಂದು ರಿಫ್ರೆಶ್ ಮಾಡೋಣ.
04:14 ನಾನು ಇದನ್ನು ಎರಡು ಬಾರಿ ರಿಫ್ರೆಶ್ ಮಾಡಿರುವೆನು, ಹಾಗಾಗಿ ಎರಡು ರೆಕಾರ್ಡ್ ಗಳನ್ನು ತೋರಿಸಲಾಗಿದೆ.
04:24 ಆದರೆ ಹಿಂದಕ್ಕೆ ಹೋಗಿ ಬ್ರೌಸ್ ಮಾಡಿ ಮತ್ತು ಕೆಳಕ್ಕೆ ಸ್ಕ್ರೋಲ್ ಮಾಡಿ, ಇದರಲ್ಲಿ ಒಂದನ್ನು ಅಳಿಸಿಬಿಡೋಣ. ಹಾಗಾಗಿ ಈಗ ನಾವು ನಿರ್ದಿಷ್ಟಪಡಿಸಿದ ಒಂದು ರೆಕಾರ್ಡ್ ಮಾತ್ರ ನಮ್ಮ ಡಾಟಾಬೇಸ್ ನಲ್ಲಿ ಸೇರಿಸಲ್ಪಟ್ಟಿದೆ.
04:35 ಈಗಾಗಲೇ ನಾನು ಇವತ್ತಿನ ದಿನಾಂಕವನ್ನು ಇಲ್ಲಿ ನನ್ನ ಜನ್ಮ ದಿನಾಂಕವನ್ನಾಗಿ ಸೆಟ್ ಮಾಡಿದ್ದೇನೆ, ಆದರೆ ಅದು ನನಗೆ ಬೇಕಿಲ್ಲ.
04:43 ನನ್ನ ಜನ್ಮ ದಿನಾಂಕ ಇವತ್ತಿನ ದಿನಾಂಕವಲ್ಲ ಏಕೆಂದರೆ ನಾನು ಇವತ್ತು ಹುಟ್ಟಿಲ್ಲ.
04:48 ನನ್ನ firstname ಸರಿಯಾಗಿದೆ. ನನ್ನ lastname ಕೂಡ ಸರಿಯಾಗಿದೆ. ನನ್ನ gender ಕೂಡ ಸರಿಯಾಗಿದೆ.
04:53 ನೀವು ನನ್ನ id ಯು ಈ ಸಮಯದಲ್ಲಿ 6 ಎಂದು ಇರುವುದನ್ನು ನೋಡಬಹುದು. ಮುಂದಿನ ಸಲ ನಾವು ರೆಕಾರ್ಡ್ ಅನ್ನು ಇನ್ಸರ್ಟ್ ಮಾಡಿದಾಗ ಅದು 7 ಆಗುವುದು ಮತ್ತು ಇನ್ನೊಮ್ಮೆ ಮಾಡಿದಾಗ ಅದು 8 ಆಗುವುದು.
05:02 ನೀವು ಇದನ್ನು ಈಗ ತಿಳಿದುಕೊಳ್ಳಬೇಕು. ನಂತರ ನಾನು ನನ್ನ ಜನ್ಮದಿನಾಂಕವನ್ನು ಹೇಗೆ ಬದಲಿಸುವುದು ಎಂದು ತೋರಿಸುವೆನು, ಏಕೆಂದರೆ ಅಲ್ಲಿ ನಾನು ಒಂದು ತಪ್ಪನ್ನು ಮಾಡಿರುವೆನು.
05:09 ಹಾಗಾಗಿ ನಾನು ಈ ಎರಡು ಸಾಲುಗಳನ್ನು comment ಮಾಡುವೆನು, ಏಕೆಂದರೆ ನಾನು ಇವುಗಳನ್ನು ಪುನಃ ರನ್ ಮಾಡಲು ಬಯಸುವುದಿಲ್ಲ.
05:15 ನಾನು ಒಂದು ಹೊಸ ವೇರಿಯೇಬಲ್ ಅನ್ನು ರಚಿಸುವೆನು. ನಾನು ಇದನ್ನು "update data" ಎಂದು ಕಮೆಂಟ್ ಮಾಡುವೆನು.
05:20 ಪ್ರಸ್ತುತ ವೇರಿಯೇಬಲ್ "$update" ಮತ್ತು ಅದು "mysql_query()" ಫಂಕ್ಷನ್ ಎಂದು ಆಗಿರಲಿ.
05:26 ಮತ್ತು ಪ್ಯಾರಾಮೀಟರ್ ನೊಳಗೆ mysql query code ಅನ್ನೇ ಕಾಲ್ ಮಾಡುತ್ತಿರುವೆವು.
05:32 ಇಲ್ಲಿ ನೀವು "UPDATE" ಎಂದೂ, ಮತ್ತು ನಿಮ್ಮ ಟೇಬಲ್ ನ ಹೆಸರಾದ "people" ಎಂದೂ ಟೈಪ್ ಮಾಡಿ.
05:38 ನಂತರ ನಾವು "SET" ಎಂದು ಟೈಪ್ ಮಾಡಿ, ನಂತರ ನಮಗೆ ಬದಲಿಸ ಬೇಕಾದ ನಿರ್ದಿಷ್ಟ ಫೀಲ್ಡ್ ಅನ್ನು ಆರಿಸಿಕೊಳ್ಳಬೇಕು.
05:43 ಇದು "d o b" ಫೀಲ್ಡ್ ಆಗಿದೆ ಮತ್ತು ಅದು ನನ್ನ ಜನ್ಮ ದಿನಾಂಕ ಅಂದರೆ 1989 ನಾನು ಹುಟ್ಟಿದ ವರ್ಷ, ಮತ್ತು ತಿಂಗಳು ನವೆಂಬರ್ ಮತ್ತು ನಾನು 16 ನೇ ತಾರೀಕಿನಂದು ಹುಟ್ಟಿದ್ದೇನೆ.
05:57 ಈ ಕಮಾಂಡ್ ಅನ್ನು ರನ್ ಮಾಡುವುದರಿಂದ ನಾವು ಈ ಟೇಬಲ್ ನಲ್ಲಿ ಎಲ್ಲರ ಜನ್ಮದಿನಾಂಕವನ್ನು ಅಪ್ಡೇಟ್ ಮಾಡುತ್ತಿದ್ದೇವೆ.
06:05 ಏಕೆಂದರೆ ನಾವು ಇಲ್ಲಿ ನಿರ್ದಿಷ್ಟವಾಗಿ ಎಲ್ಲಿ ಅಪ್ಡೇಟ್ ಮಾಡಬೇಕೆಂದು ಸೂಚಿಸಿಲ್ಲ.
06:10 ಆದರೆ ನಾವು ಏನು ಮಾಡಬಹುದೆಂದರೆ, ಇದಾದ ನಂತರ "WHERE id=6" ಎಂದು ಟೈಪ್ ಮಾಡಬೇಕು ಏಕೆಂದರೆ ನನ್ನ ಅನನ್ಯವಾದ ಐ.ಡಿ. 6 ಆಗಿದೆ.
06:18 ಈಗ ಇಲ್ಲಿ ಒಮ್ಮೆ ನೋಡಬೇಕು.
06:23 ಇಲ್ಲವಾದಲ್ಲಿ ಇದು ಎಲ್ಲರ ರೆಕಾರ್ಡ್ ಅನ್ನೂ ಅಪ್ಡೇಟ್ ಮಾಡುವುದು.
06:26 ನೆನಪಿಡಿ, id ಯು ಅನನ್ಯವಾದುದು. ನನ್ನ id ಯನ್ನು ಅಪ್ಡೇಟ್ ಮಾಡುವುದು ಉತ್ತಮವಾಗಿದೆ.
06:32 ನಾನು ಇದರ ಬದಲು "WHERE firstname equals 'Alex' " ಎಂದೂ ಹೇಳಬಹುದು. ಆದರೆ ಇದು firstname "Alex" ಎಂದಿರುವ ಎಲ್ಲ ರೆಕಾರ್ಡ್ ಗಳನ್ನು ಅಪ್ಡೇಟ್ ಮಾಡುವುದು.
06:41 ಅಥವಾ "AND lastname equals Garrett" ಎಂದೂ ಹೇಳಬಹುದು.
06:46 ಆದರೆ ನಮ್ಮ ಡಾಟಾಬೇಸ್ ನಲ್ಲಿ ಅದೇ ಫಸ್ಟ್ ನೇಮ್ ಮತ್ತು ಲಾಸ್ಟ್ ನೇಮ್ ಅನ್ನು ಇಬ್ಬರು ಹೊಂದಿದ್ದರೆ, ನಾವು ಮೊದಲಿನಂತೆಯೇ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
06:54 ಹಾಗಾಗಿ "unique" ಫೀಲ್ಡ್ ಅನ್ನು ಬಳಸುವುದು ಉತ್ತಮ ಮತ್ತು ಈ ಉದಾಹರಣೆಯಲ್ಲಿ ಅದು "unique id" ಯಾಗಿದ್ದು ನನ್ನ ರೆಕಾರ್ಡ್ ನಲ್ಲಿ ಅದರ ವ್ಯಾಲ್ಯು 6 ಆಗಿದೆ.
07:00 ಈಗ ನನ್ನ ಜನ್ಮ ದಿನಾಂಕವು ಇಂದಿನ ದಿನಾಂಕ ಅಂದರೆ 2009 ಎಂದೇ ಸೆಟ್ ಆಗಿದೆ.
07:06 ಈ ಪೇಜ್ ಅನ್ನು ರಿಫ್ರೆಶ್ ಮಾಡುವುದರಿಂದ ಏನೂ ಆಗಿಲ್ಲ, ಏಕೆಂದರೆ ನಾವು ಕೇವಲ ಕಮಾಂಡ್ ಅನ್ನು ರನ್ ಮಾಡುತ್ತಿದ್ದೇವೆ.
07:11 ಈಗ ನಾನು ರಿಫ್ರೆಶ್ ಮಾಡಲು Browse ಅನ್ನು ಕ್ಲಿಕ್ ಮಾಡಿ, ಕೆಳಕ್ಕೆ ಸ್ಕ್ರೋಲ್ ಮಾಡಿದರೆ, ನಾವು ಸೂಚಿಸಿದ ರೆಕಾರ್ಡ್ ಮಾತ್ರ ಬದಲಾಗಿದೆ, ಮತ್ತೆ ಉಳಿದ ಎಲ್ಲವೂ ಮೊದಲಿನ ಹಾಗೆಯೇ ಇದೆ.
07:21 ಹಾಗಾಗಿ ನೀವು ನಿಮ್ಮ ಡಾಟಾಬೇಸ್ ನಲ್ಲಿ ಡಾಟಾ ವನ್ನು ಅಪ್ಡೇಟ್ ಮಾಡುವುದಾದರೆ ಅಥವಾ ಅದೇ ರೀತಿಯಾಗಿ ಏನನ್ನಾದರೂ ಮಾಡುವುದಾದರೆ ನೀವು ಯಾವ ಡಾಟಾವನ್ನು ಅಪ್ಡೇಟ್ ಮಾಡಬೇಕು ಎಂದು ನೀವು ಸೂಚಿಸಬಹುದು.
07:29 ನಾನು ಇಲ್ಲಿ "dob" ಯನ್ನು ಬಳಸಿದ್ದೇನೆ ಮತ್ತು ಇದು ನನ್ನ ಜನ್ಮ ದಿನಾಂಕಕ್ಕೆ ಸಮವಾಗಿತ್ತು ಮತ್ತು ಅದು ಅಗತ್ಯವಾಗಿತ್ತು.
07:34 ನಾನು ನನ್ನ lastname ಅನ್ನು ಅಪ್ಡೇಟ್ ಮಾಡಬಹುದು.
07:36 ನೀವು ಇದನ್ನು ಯಾವ ರೆಕಾರ್ಡ್ ಗೆ ಅಪ್ಡೇಟ್ ಮಾಡಬೇಕು ಎಂಬುದನ್ನು ಸೂಚಿಸಬಹುದು.
07:40 ನಾನು record ಅಂದರೆ ಈ ಉದ್ದನೆಯ ಸಾಲನ್ನು ಸೂಚಿಸಿರುವೆನು.
07:46 ಇವುಗಳನ್ನು records ಎಂದು ಕರೆಯುವೆವು. ಮತ್ತು "WHERE" id = 6 ಆಗಿದೆ. ಮತ್ತು ಅದು ನಿರ್ದಿಷ್ಟವಾದ ರೆಕಾರ್ಡ್ ಅನ್ನು ಅಪ್ಡೇಟ್ ಮಾಡುವುದು.
07:56 ಈಗ ನಾವು ವ್ಯಾಲ್ಯುಗಳನ್ನು ಹೇಗೆ ಸೇರಿಸುವುದು, ತಪ್ಪಾಗಿದ್ದಲ್ಲಿ ನಾನು ಮಾಡಿದಂತೆ, ಡಾಟಾವನ್ನು ಹೇಗೆ ಅಪ್ಡೇಟ್ ಮಾಡುವುದು ಅಥವಾ ನೀವು ಡಾಟಾಬೇಸ್ ಅನ್ನು ಮಾಡುವಾಗ ಸಾಮಾನ್ಯವಾಗಿ ಯಾವಾಗಲೂ ಆಗುವಂತಹ ಡಾಟಾವನ್ನು ಅಪ್ಡೇಟ್ ಮಾಡುವುದನ್ನು ಕಲಿತಿರುವಿರಿ.
08:10 ಮುಂದಿನ ಭಾಗದಲ್ಲಿ ಡಾಟಾ ಬೇಸ್ ನಿಂದ ಡಾಟಾ ವನ್ನು ರೀಡ್ ಮಾಡುವುದು ಹೇಗೆ ಮತ್ತು ಬಳಕೆದಾರರಿಗೆ ತೋರಿಸುವುದು ಹೇಗೆ ಎಂದು ನೋಡೋಣ.
08:17 ಮತ್ತೆ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14