Difference between revisions of "PHP-and-MySQL/C2/XAMPP-in-Linux/Kannada"

From Script | Spoken-Tutorial
Jump to: navigation, search
 
Line 209: Line 209:
 
|-
 
|-
 
|07:48
 
|07:48
|''''Gedit''' ಟೆಕ್ಸ್ಟ್-ಎಡಿಟರ್ ನಲ್ಲಿ, ''demo.php''' ಅನ್ನು ತೆರೆಯಿರಿ.
+
|'''Gedit''' ಟೆಕ್ಸ್ಟ್-ಎಡಿಟರ್ ನಲ್ಲಿ, '''demo.php''' ಅನ್ನು ತೆರೆಯಿರಿ.
 
|-
 
|-
 
|07:53
 
|07:53
Line 261: Line 261:
 
|-
 
|-
 
|10:19
 
|10:19
|ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ............
+
|ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.  
 
ವಂದನೆಗಳು.
 
ವಂದನೆಗಳು.
 
|}
 
|}

Latest revision as of 12:24, 10 June 2020

Time Narration
00:01 ನಮಸ್ಕಾರ. XAMPP Installation on Linux ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು:

Linux ನಲ್ಲಿ XAMPP ಅನ್ನು ಹೇಗೆ ಇನ್ಸ್ಟಾಲ್ ಮಾಡುವುದು ಮತ್ತು php ಫೈಲ್ ಅನ್ನು ಹೇಗೆ ಕ್ರಿಯೇಟ್ ಮಾಡಿ ರನ್ ಮಾಡುವುದೆಂದು ಕಲಿಯುವೆವು.

00:18 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು :

Ubuntu Linux OS 14.04,

FireFox ವೆಬ್-ಬ್ರೌಸರ್ ಮತ್ತು

Gedit ಟೆಕ್ಸ್ಟ್ ಎಡಿಟರ್ ಇವುಗಳನ್ನು ಬಳಸುತ್ತಿದ್ದೇನೆ.

00:32 XAMPP ಅನ್ನು ಇನ್ಸ್ಟಾಲ್ ಮಾಡಲು, ನೀವು -

ಸಕ್ರಿಯವಾದ ಇಂಟರ್ನೆಟ್ ಸಂಪರ್ಕ ಮತ್ತು ನಿಮ್ಮ ಕಂಪ್ಯೂಟರ್ ಗೆ Admin ಆಕ್ಸೆಸ್ ಅನ್ನು ಹೊಂದಿರಬೇಕು.

00:41 ಅಲ್ಲದೆ, ಲಿನಕ್ಸ್ ಕಮಾಂಡ್ ಗಳ ಬಗ್ಗೆ ಸಹ ನೀವು ತಿಳಿದಿರಬೇಕು. ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಅನ್ನು ನೋಡಿ.
00:52 XAMPP ಒಂದು ಉಚಿತ ಮತ್ತು ಓಪನ್-ಸೋರ್ಸ್ ವೆಬ್-ಸರ್ವರ್ ಪ್ಯಾಕೇಜ್ ಆಗಿದೆ.
00:58 XAMPP- Apache HTTP Server, MySQL database, ಸ್ಕ್ರಿಪ್ಟ್ ಗಳಿಗಾಗಿ PHP ಯಲ್ಲಿ ಬರೆಯಲಾದ Interpreters ಮತ್ತು Perl ಇವುಗಳನ್ನು ಒಳಗೊಂಡಿದೆ.
01:12 XAMPP ಅನ್ನು ಇನ್ಸ್ಟಾಲ್ ಮಾಡುವುದು ಸುಲಭ. GNU/Linux, Mac, Windows ಮತ್ತು Solaris ಆಪರೇಟಿಂಗ್ ಸಿಸ್ಟಂ ಗಳಿಗಾಗಿ ಇದು ಲಭ್ಯವಿದೆ.
01:23 Linux ಗಾಗಿ, XAMPP ಅನ್ನು ನಾವು ಡೌನ್ಲೋಡ್ ಮಾಡೋಣ.
01:27 ನಿಮ್ಮ ಕಂಪ್ಯೂಟರ್ ನಲ್ಲಿ, ವೆಬ್-ಬ್ರೌಸರ್ ಅನ್ನು ತೆರೆಯಿರಿ.
01:31 ಅಡ್ರೆಸ್-ಬಾರ್ ನಲ್ಲಿ ಹೀಗೆ ಟೈಪ್ ಮಾಡಿ: https://www.apachefriends.org/download.html ಮತ್ತು Enter ಅನ್ನು ಒತ್ತಿ.
01:44 ಪೇಜ್ ಅನ್ನು ಸ್ಕ್ರೋಲ್ ಮಾಡಿ.
01:47 ಇಲ್ಲಿ XAMPP, ಎಲ್ಲ ಆಪರೇಟಿಂಗ್ ಸಿಸ್ಟಂ ಗಳಿಗಾಗಿ ಡೌನ್ಲೋಡ್ ಮಾಡಲು ಲಭ್ಯವಿದೆ.
01:53 XAMPP for Linux ವಿಭಾಗಕ್ಕೆ ಭೆಟ್ಟಿಕೊಡಿ. ನೀವು Xampp ನ ಇತ್ತೀಚಿನ ಆವೃತ್ತಿಯನ್ನು ನೋಡಬಹುದು.
02:01 ನನ್ನ ಸಿಸ್ಟಂ, 64 bit OS ಆಗಿದೆ. ಹೀಗಾಗಿ, 5.5.19 / PHP 5.5.19 ಆವೃತ್ತಿಯ ಅಡಿಯಲ್ಲಿ,
02:11 ನಾನು Download (64 bit) ಅನ್ನು ಆಯ್ಕೆಮಾಡುವೆನು.
02:15 ಡೌನ್ಲೋಡ್ ಆಗಲು ಆರಂಭವಾಗುವುದು.
02:18 ನನ್ನ Downloads ಫೋಲ್ಡರ್ ನಲ್ಲಿ, ನಾನು ಈ ಫೈಲ್ ಅನ್ನು ಈಗಾಗಲೇ ಡೌನ್ಲೋಡ್ ಮಾಡಿದ್ದೇನೆ.
02:24 ಆದ್ದರಿಂದ ನಾನು ಡೌನ್ಲೋಡ್ ಮಾಡುವ ಹಂತವನ್ನು ಬಿಟ್ಟುಬಿಡುತ್ತೇನೆ.
02:28 ಈಗ terminal ಅನ್ನು ತೆರೆಯಿರಿ.
02:31 ಟರ್ಮಿನಲ್ ನ ಮೇಲೆ, ಕಮಾಂಡ್ ಅನ್ನು ಹೀಗೆ ಟೈಪ್ ಮಾಡಿ: cd space Downloads ಮತ್ತು Enter ಅನ್ನು ಒತ್ತಿ.
02:40 ಇದು ಕರೆಂಟ್ ವರ್ಕಿಂಗ್ ಡಿರೆಕ್ಟರೀಯನ್ನು Downloads ಗೆ ಬದಲಾಯಿಸುವುದು.
02:46 ಈಗ ls ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
02:51 ಇದು Downloads ಫೋಲ್ಡರ್ ನಲ್ಲಿರುವುದನ್ನು ತೋರಿಸುವುದು.
02:56 ಇಲ್ಲಿರುವುದು ನಮ್ಮ XAMPP ನ ಇನ್ಸ್ಟಾಲೇಶನ್ ಫೈಲ್ ಆಗಿದೆ.
03:00 ನಾವು ಫೈಲ್ ಗೆ executable ಪರ್ಮಿಶನ್ ಅನ್ನು ಕೊಡೋಣ.
03:04 ಇದರಿಂದ ನಾವು ಈ ಫೈಲ್ ಅನ್ನು ರನ್ ಮಾಡಲು ಸಾಧ್ಯವಾಗುವುದು. ಹೀಗೆ ಟೈಪ್ ಮಾಡಿ: chmod space +x space filename ಮತ್ತು Enter ಅನ್ನು ಒತ್ತಿ.
03:18 ಈಗ, ಫೈಲ್ ಅನ್ನು ರನ್ ಮಾಡಲು, ಹೀಗೆ ಟೈಪ್ ಮಾಡಿ: sudo space dot slash (./) filename ಮತ್ತು Enter ಅನ್ನು ಒತ್ತಿ.
03:29 ಅಗತ್ಯವಿದ್ದರೆ, admin password ಅನ್ನು ನಮೂದಿಸಿ.
03:34 Setup wizard ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
03:38 ಅಗತ್ಯವಿದ್ದಾಗ Next ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಇಲ್ಲಿ ತೋರಿಸಿದಂತೆ ಇನ್ಸ್ಟಾಲ್ಲೇಶನ್ ಹಂತಗಳನ್ನು ಅನುಸರಿಸಿ.
03:46 Learn more about Bitnami for XAMPP ಚೆಕ್-ಬಾಕ್ಸ್ ಅನ್ನು ಅನ್-ಚೆಕ್ ಮಾಡಿ.
03:52 Next ಮೇಲೆ ಕ್ಲಿಕ್ ಮಾಡಿ.
03:54 ಒಮ್ಮೆ ಇನ್ಸ್ಟಾಲ್ಲೇಶನ್ ಮುಗಿಯಿತೆಂದರೆ, Launch XAMPP ಚೆಕ್-ಬಾಕ್ಸ್ ಅನ್ನು ಅನ್-ಚೆಕ್ ಮಾಡಿ ಮತ್ತು Finish ಮೇಲೆ ಕ್ಲಿಕ್ ಮಾಡಿ.
04:04 ಈ ಇನ್ಸ್ಟಾಲ್ಲೇಶನ್, ಸಿಸ್ಟಂ ನ opt ಫೋಲ್ಡರ್ ನಲ್ಲಿ, lampp ಎಂಬ ಫೋಲ್ಡರ್ ಅನ್ನು ತಯಾರಿಸುವುದು.
04:12 ಅಲ್ಲಿ ಹೋಗಿ ನೋಡೋಣ.
04:15 ಎಡಗಡೆಯಲ್ಲಿರುವ launcher ನಿಂದ, Files ಫೋಲ್ಡರ್ ಐಕಾನ್ ಅನ್ನು ಕ್ಲಿಕ್ ಮಾಡಿ.
04:21 ಎಡಗಡೆಯ ಪ್ಯಾನೆಲ್ ನಲ್ಲಿ, Devices ವಿಭಾಗದ ಅಡಿಯಲ್ಲಿ, Computer ನ ಮೇಲೆ ಕ್ಲಿಕ್ ಮಾಡಿ.
04:29 ನೀವು ಸಿಸ್ಟಂ ಫೈಲ್ ಗಳನ್ನು ನೋಡಬಹುದು. opt ಫೋಲ್ಡರ್ ಅನ್ನು ತೆರೆಯಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.
04:38 ಇಗೋ ಇಲ್ಲಿದೆ! lampp ಫೋಲ್ಡರ್. ಈ ಫೋಲ್ಡರ್ ಅನ್ನು ತೆರೆಯಿರಿ.
04:44 ಹಲವು ಸಬ್- ಫೋಲ್ಡರ್ ಗಳನ್ನು ಇಲ್ಲಿ ನಾವು ನೋಡಬಹುದು.
04:48 htdocs (h- t -ಡಾಕ್ಸ್) ಎಂಬ ಫೋಲ್ಡರ್ ಅನ್ನು ಗುರುತಿಸಿ.
04:53 ಇದು ನಮ್ಮ ವೆಬ್ ಸರ್ವರ್ Apache ಯ (ಅಪಾಚೆ) ರೂಟ್-ಡಿರೆಕ್ಟರಿ ಆಗಿದೆ.
04:58 ನಮ್ಮ PHP ಕೋಡ್ ಫೈಲ್ ಅನ್ನು ರನ್ ಮಾಡಲು, ನಾವು ಅದನ್ನು ಈ ಫೋಲ್ಡರ್ ನಲ್ಲಿ ಸೇವ್ ಮಾಡಬೇಕು.
05:05 ನಿಮ್ಮ ಇನ್ಸ್ಟಾಲ್ಲೇಶನ್ ಪ್ರಕ್ರಿಯೆಯನ್ನು ಆಧರಿಸಿ, Apache's ರೂಟ್-ಡಿರೆಕ್ಟರಿಯು /opt/lampp/htdocs ಅಥವಾ /var/www ಆಗಿದೆ.
05:24 htdocs ಫೋಲ್ಡರ್ ನಲ್ಲಿ ಬರೆಯಲು, (writable) ನಾವು ಪರ್ಮಿಶನ್ ಅನ್ನು ಬದಲಾಯಿಸಬೇಕು.
05:30 ಆದ್ದರಿಂದ, ಟರ್ಮಿನಲ್ ನ ಮೇಲೆ ಹೀಗೆ ಟೈಪ್ ಮಾಡಿ: sudo chmod 777 -R /opt/lampp/htdocs ಮತ್ತು Enter ಅನ್ನು ಒತ್ತಿ.
05:56 ಅಗತ್ಯವಿದ್ದರೆ admin password ಅನ್ನು ನಮೂದಿಸಿ.
06:00 ಈಗ ನಾವು Xampp ರನ್ ಆಗುತ್ತಿದೆಯೋ ಇಲ್ಲವೊ ಎಂದು ಪರೀಕ್ಷಿಸೋಣ.
06:04 ವೆಬ್-ಬ್ರೌಸರ್ ಅನ್ನು ತೆರೆಯಿರಿ. ಅಡ್ರೆಸ್-ಬಾರ್ ನಲ್ಲಿ, localhost ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
06:15 “Unable to connect” ಎಂಬ ಮೆಸೇಜ್ ಅನ್ನು ಅದು ತೋರಿಸುತ್ತದೆ.
06:20 Xampp ಸರ್ವೀಸ್ ಗಳು ರನ್ ಆಗುತ್ತಿಲ್ಲ.
06:23 ಸರ್ವೀಸ್ ಗಳನ್ನು ಪ್ರಾರಂಭಿಸಲು, 'ಟರ್ಮಿನಲ್' ನ ಮೇಲೆ ಹೀಗೆ ಟೈಪ್ ಮಾಡಿ: sudo /opt/lampp/lampp start ಮತ್ತು Enter ಅನ್ನು ಒತ್ತಿ.
06:40 ಅಗತ್ಯವಿದ್ದರೆ admin password ಅನ್ನು ನಮೂದಿಸಿ.
06:44 ಇದು ಎಲ್ಲ Xampp services ಗಳನ್ನು ಆರಂಭಿಸುವುದು.
06:47 ವೆಬ್-ಬ್ರೌಸರ್ ಗೆ ಹಿಂದಿರುಗಿ ಮತ್ತು ಪೇಜ್ ಅನ್ನು ರಿಫ್ರೆಶ್ ಮಾಡಿ.
06:52 ಇಗೋ ಇಲ್ಲಿದೆ! Xampp ಗೆ ನಿಮ್ಮನ್ನು ಸ್ವಾಗತಿಸುವ ಸ್ಕ್ರೀನ್ .
06:56 ಇದು ಡೀಫಾಲ್ಟ್ ಭಾಷೆಯನ್ನು ಆರಿಸಿಕೊಳ್ಳಲು ನಮ್ಮನ್ನು ಕೇಳುತ್ತದೆ. ನಾನು English ಅನ್ನು ಆಯ್ದುಕೊಳ್ಳುತ್ತೇನೆ.
07:03 Xampp ಈಗ ಸರಿಯಾಗಿ ರನ್ ಆಗುತ್ತಿದೆ.
07:06 ನಾವು ಒಂದು ಸ್ಯಾಂಪಲ್ php ಕೋಡ್ ಅನ್ನು ಬರೆದು ಅದನ್ನು ರನ್ ಮಾಡೋಣ.
07:11 htdocs ನಲ್ಲಿ, ನಾವು phpacademy ಎಂಬ ಒಂದು ಫೋಲ್ಡರ್ ಅನ್ನು ಕ್ರಿಯೇಟ್ ಮಾಡೋಣ.
07:16 ಇನ್ನು ಮುಂದೆ, ನಾನು ನನ್ನ ಎಲ್ಲ php ಫೈಲ್ ಗಳನ್ನು, ಈ ಫೋಲ್ಡರ್ ನಲ್ಲಿ ಸೇವ್ ಮಾಡುವೆನು.
07:23 ನನ್ನ ಫೈಲ್ ಗಳನ್ನು ಬೇರೆಯವರು ತಿದ್ದಬಾರದೆಂದು ಖಚಿತಪಡಿಸಿಕೊಳ್ಳಲು ಹೀಗೆ ಮಾಡುತ್ತೇನೆ.
07:30 phpacademy ಫೋಲ್ಡರ್ ಅನ್ನು ತೆರೆಯಿರಿ. ನಾವು ಒಂದು php ಫೈಲ್ ಅನ್ನು ಕ್ರಿಯೇಟ್ ಮಾಡೋಣ.
07:37 ರೈಟ್-ಕ್ಲಿಕ್ ಮಾಡಿ New Document, ನಂತರ Empty document ಅನ್ನು ಆಯ್ಕೆಮಾಡಿ. ಇದನ್ನು demo.php ಎಂದು ಹೆಸರಿಸಿ.
07:48 Gedit ಟೆಕ್ಸ್ಟ್-ಎಡಿಟರ್ ನಲ್ಲಿ, demo.php ಅನ್ನು ತೆರೆಯಿರಿ.
07:53 ನೀವು ನಿಮಗೆ ಇಷ್ಟವಾದ ಯಾವುದೇ ಎಡಿಟರ್ ಅನ್ನು ಬಳಸಬಹುದು.
07:59 ಹೀಗೆ ಟೈಪ್ ಮಾಡಿ: less than, question mark, php, Enter, echo, space, in double quotes "Hello India”, semicolon, Enter, question mark greater than.
08:20 ಫೈಲ್ ಅನ್ನು ಸೇವ್ ಮಾಡಲು,Ctrl ಮತ್ತು S ಕೀಗಳನ್ನು ಒಟ್ಟಿಗೆ ಒತ್ತಿ.
08:27 ವೆಬ್-ಬ್ರೌಸರ್ ಗೆ ಹಿಂದಿರುಗಿ.
08:29 ಅಡ್ರೆಸ್-ಬಾರ್ ನಲ್ಲಿ, ಹೀಗೆ ಟೈಪ್ ಮಾಡಿ: localhost/phpacademy ಮತ್ತು Enter ಅನ್ನು ಒತ್ತಿ.
08:40 ಇದು phpacademy ಫೋಲ್ಡರ್ ನಲ್ಲಿ, ಫೈಲ್ ಗಳ ಲಿಸ್ಟ್ ಅನ್ನು ತೋರಿಸುವುದು.
08:47 ಇದು ನಮ್ಮ demo.php ಫೈಲ್ ಆಗಿದೆ; ಅದರ ಮೇಲೆ ಕ್ಲಿಕ್ ಮಾಡಿ.
08:53 Hello India ಎಂಬ ಮೆಸೇಜ್ ಅನ್ನು ತೋರಿಸಲಾಗುತ್ತದೆ.
08:57 Xampp ಸರ್ವೀಸ್ ಗಳನ್ನು ನಿಲ್ಲಿಸಲು, 'ಟರ್ಮಿನಲ್' ನ ಮೇಲೆ ಹೀಗೆ ಟೈಪ್ ಮಾಡಿ: sudo /opt/lampp/lampp stop ಮತ್ತು Enter ಅನ್ನು ಒತ್ತಿ.
09:13 ಅಗತ್ಯವಿದ್ದರೆ admin password ಅನ್ನು ನಮೂದಿಸಿ.
09:17 XAMPP services ರನ್ ಆಗುತ್ತಿರುವುದು ನಿಲ್ಲುತ್ತದೆ. ನಿಮಗೆ ಮುಂದೆ ಎಂದಾದರೂ Xampp ಅನ್ನು ಇನ್ನೊಮ್ಮೆ ರನ್ ಮಾಡಬೇಕೆನಿಸಿದಾಗ, ಮೊದಲು ಅದನ್ನು start ಮಾಡಲು ನೆನಪಿಡಿ.
09:27 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು -

XAMPP services ಅನ್ನು ಹೇಗೆ ಇನ್ಸ್ಟಾಲ್ ಮಾಡುವುದು, ಆರಂಭಿಸುವುದು ಮತ್ತು ನಿಲ್ಲಿಸುವುದು, PHP ಫೈಲ್ ಅನ್ನು ಹೇಗೆ ಕ್ರಿಯೇಟ್ ಮತ್ತು ರನ್ ಮಾಡುವುದು ಎಂದು ಕಲಿತಿದ್ದೇವೆ.

09:45 ಈ ವೀಡಿಯೋ, Spoken Tutorial ಪ್ರೊಜೆಕ್ಟ್ ನ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:55 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
10:06 Spoken Tutorial ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
10:13 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.
10:19 ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ವಂದನೆಗಳು.

Contributors and Content Editors

Sandhya.np14