Difference between revisions of "PHP-and-MySQL/C2/Variables-in-PHP/Kannada"

From Script | Spoken-Tutorial
Jump to: navigation, search
(Created page with "{|Border=1 |'''Time''' |'''Narration''' |- |00:00 |'''PHP variables''' ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾ...")
 
 
Line 133: Line 133:
 
|-
 
|-
 
|04:19
 
|04:19
|ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ........
+
|ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 
ಧನ್ಯವಾದಗಳು!
 
ಧನ್ಯವಾದಗಳು!

Latest revision as of 14:40, 26 May 2020

Time Narration
00:00 PHP variables ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:04 ಮೊದಲು ಕೆಲವು ವಿಷಯಗಳನ್ನು ನಾನು ವಿವರಿಸುತ್ತೇನೆ.
00:07 PHP ವೇರಿಯೇಬಲ್ ಗಳನ್ನು ಬಳಸುವುದು ಬಹಳ ಸುಲಭ; ನೀವು ಬೇಗನೇ ಇದನ್ನು ತಿಳಿದುಕೊಳ್ಳುವಿರಿ.
00:14 ನೀವು ಇವುಗಳನ್ನು ಡಿಕ್ಲೇರ್ ಮಾಡಬೇಕಾಗಿಲ್ಲ ಮತ್ತು ಬರೆಯುವುದು ಸಹ ಸುಲಭವಾಗಿದೆ.
00:18 ಸ್ಕ್ರಿಪ್ಟ್ ನ ಮಧ್ಯದಲ್ಲಿ ಸಹ ನೀವು ವೇರಿಯೇಬಲ್ ಗೆ ಒಂದು ವ್ಯಾಲ್ಯೂಅನ್ನು ಸೇರಿಸಬಹುದು.
00:23 ಅಲ್ಲದೆ, ಅವು ನಿಮಗೆ ಬೇಕಾಗಿರುವ ಡೇಟಾ-ಟೈಪ್ ಗೆ ತಂತಾನೇ ಬದಲಾಗುತ್ತವೆ.
00:28 ಹೀಗಾಗಿ, ಪ್ರತಿಯೊಂದು ಸಲ ಅವುಗಳನ್ನು ಬೇರೆ ವಿಧದಲ್ಲಿ ಡಿಕ್ಲೇರ್ ಮಾಡುವ ಅಗತ್ಯವಿಲ್ಲ. ಅಥವಾ ಪ್ರತಿಯೊಂದು ಸಲ ಅವುಗಳಿಗಾಗಿ ವ್ಯಾಲ್ಯುವನ್ನು ಕೊಡಬೇಕಾಗಿಲ್ಲ.
00:36 ಉದಾಹರಣೆಗೆ, ಇಲ್ಲಿ ನಮ್ಮ PHP tags ನಾವು ಕ್ರಿಯೇಟ್ ಮಾಡೋಣ. ಮತ್ತು ನಮ್ಮ ಕಂಟೆಂಟ್ ಗಳು (ವಿಷಯಗಳು) ಮಧ್ಯದಲ್ಲಿ ಇರುತ್ತವೆ.
00:41 ಸರಿ. ಈಗ ನಾವು ಡಾಲರ್ ಚಿಹ್ನೆಯೊಂದಿಗೆ ($) ಆರಂಭಿಸುತ್ತೇವೆ, ನಂತರ ನಮ್ಮ ವೇರಿಯೇಬಲ್ “name” ಎಂದು ಇದೆ.
00:48 ದಯವಿಟ್ಟು ಗಮನಿಸಿ, ನೀವು ಸಂಖ್ಯೆಯೊಂದಿಗೆ ಇದನ್ನು ಆರಂಭಿಸಲು ಸಾಧ್ಯವಿಲ್ಲ. ಹೀಗಾಗಿ, ನಾನು '1' ರಿಂದ ಇದನ್ನು ಆರಂಭಿಸಲು ಸಾಧ್ಯವಿಲ್ಲ.
00:53 ಆದರೆ ಒಂದು ಅಂಡರ್ಸ್ಕೋರ್ ಅಥವಾ ಅಕ್ಷರದಿಂದ ಆರಂಭಿಸಲು ಸಾಧ್ಯವಿದೆ.
00:57 ಅಂಡರ್ಸ್ಕೋರ್, ಅಕ್ಷರ ಮತ್ತು ಸಂಖ್ಯೆಗಳ ಹೊರತಾಗಿ ಇನ್ನುಳಿದ ಯಾವುದೇ ವಿಶೇಷ ಕ್ಯಾರೆಕ್ಟರ್ ಗಳಿಗೆ ಅನುಮತಿಯಿಲ್ಲ. ಆದರೆ ಸಂಖ್ಯೆಯೊಂದಿಗೆ ಆರಂಭಿಸಲು ಮಾತ್ರ ಸಾಧ್ಯವಿಲ್ಲ.
01:06 ಆದ್ದರಿಂದ, ಅದನ್ನು ಇಲ್ಲಿ ಸಂಪೂರ್ಣವಾಗಿ ಸ್ವೀಕರಿಸಲಾಗಿದೆ.
01:09 ಸರಿ. ನಾನು name ಎಂಬ ಒಂದು ವೇರಿಯೇಬಲ್ ಅನ್ನು ಕ್ರಿಯೇಟ್ ಮಾಡುತ್ತೇನೆ. ಅದು ಡಬಲ್ ಕೋಟ್ಸ್ ನಲ್ಲಿದ್ದು, ಒಂದು ಸ್ಟ್ರಿಂಗ್ ವ್ಯಾಲ್ಯೂಅನ್ನು ಹೊಂದಿರುತ್ತದೆ. ಇದು "echo" ಫಂಕ್ಷನ್ ಗಾಗಿ ನಾವು ಬಳಸಿದಂತೆಯೇ ಇದೆ.
01:21 ನನ್ನ ಹೆಸರು "Alex" ಎಂದಿದೆ.
01:23 ಮುಂದಿನ ಸಾಲಿನಲ್ಲಿ ನಾವು ಡಾಲರ್ ಚಿಹ್ನೆಯನ್ನು ಬಳಸಿ ($), age ಎಂಬ ಇನ್ನೊಂದು ವೇರಿಯೇಬಲ್ ಅನ್ನು ಕ್ರಿಯೇಟ್ ಮಾಡುತ್ತೇವೆ. ಇದು '19' ವ್ಯಾಲ್ಯೂಅನ್ನು ಹೊಂದಿದೆ, ಆದರೆ ಡಬಲ್ ಕೋಟ್ಸ್ ನಲ್ಲಿ ಇಲ್ಲ.
01:33 ಏಕೆಂದರೆ ಇದು ಒಂದು ಇಂಟೀಜರ್ (ಪೂರ್ಣಾಂಕ) ಆಗಿದೆ.
01:36 ನೀವು ಇದನ್ನು ದಶಮಾಂಶ ವ್ಯಾಲ್ಯೂಗಳಿಗಾಗಿ ಸಹ ಬಳಸಬಹುದು. ಹೀಗಾಗಿ ಇದು '19.5' ಸಹ ಆಗಿರಲು ಸಾಧ್ಯವಿದೆ.
01:43 ಅದೂ ಸಹ ತಂತಾನೆ ಇದನ್ನು ದಶಮಾಂಶಕ್ಕೆ ಬದಲಾಯಿಸುತ್ತದೆ.
01:48 ಆದಾಗ್ಯೂ, ಸಧ್ಯಕ್ಕೆ ಇದು ಇಂಟೀಜರ್ ಮಾತ್ರ ಆಗಿದೆ. ನನಗೆ ಇದು ಹೀಗೇ ಬೇಕಾಗಿದೆ. ವೇರಿಯೇಬಲ್- 'name', ಇದು ಒಂದು string ಆಗಿದೆ ಮತ್ತು ವೇರಿಯೇಬಲ್ 'age' , integer ಆಗಿದೆ.
01:57 ಈಗ ಇವುಗಳನ್ನು “ಇಕೋ” ಮಾಡಲು ಪ್ರಯತ್ನಿಸೋಣ.
02:00 ನಮಗೆ "echo" ಮತ್ತು name ಎಂಬ ವೇರಿಯೇಬಲ್ ಗಳು ಬೇಕು. ಲೈನ್ ಟರ್ಮಿನೇಟರ್ ಅನ್ನು ಮರೆಯಬೇಡಿ.
02:06 ಸರಿ, "variables" ಎಂಬ ನಮ್ಮ ಫೈಲ್ ಅನ್ನು ಹುಡುಕೋಣ.
02:11 ಇಲ್ಲಿ ನಾನು "echo name" ಎಂದು ಹೇಳಿದಲ್ಲಿ, "Alex" ಅನ್ನು echo ಮಾಡಲಾಗಿದೆ.
02:16 ಈಗ ನನ್ನ age ಅನ್ನು echo ಮಾಡಲು ಪ್ರಯತ್ನಿಸೋಣ.
02:19 ಇದು ಒಂದು ಇಂಟೀಜರ್ ವೇರಿಯೇಬಲ್ ಆಗಿದೆ ಮತ್ತು ಇದನ್ನು ಇಲ್ಲಿ echo ಮಾಡಲಾಗಿದೆ.
02:24 ವೇರಿಯೇಬಲ್ ಗಳನ್ನು ಸುಲಭವಾಗಿ ಒಂದು ಸ್ಟ್ರಿಂಗ್ ನಲ್ಲಿ ಜೋಡಿಸಬಹುದು (concatenate).
02:30 ವಾಸ್ತವವಾಗಿ, ಇದನ್ನು concatenation ಎಂದರೆ ತಪ್ಪಾಗುತ್ತದೆ. ಆದರೆ ನಿಮ್ಮ ಸ್ಟ್ರಿಂಗ್ ನ ಒಳಗೆ ಅವುಗಳನ್ನು ಬಹಳ ಸುಲಭವಾಗಿ ಸೇರಿಸಬಹುದು.
02:37 ಕಾಂಕ್ಯಾಟಿನೇಶನ್ (concatenation) ಎಂದರೆ, ಎರಡು ಸ್ಟ್ರಿಂಗ್ ಗಳನ್ನು ಒಂದು ಸಾಲಿನಲ್ಲಿ ಸೇರಿಸುವುದು.
02:46 ಉದಾಹರಣೆಗೆ, 'concat', ನಂತರ '.', ಆನಂತರ 'ination' ಎನ್ನುತ್ತೇನೆ.
02:56 ಇದು 'concatination' ಎಂದು echo ಮಾಡುತ್ತದೆ.
02:59 ಇದನ್ನು ಪ್ರಯತ್ನಿಸೋಣ. OK?
03:03 ಆದರೆ ಅದರ ಬಗ್ಗೆ ಒಂದು ಬೇರೆಯ ಟ್ಯುಟೋರಿಯಲ್ ಇದೆ. ಸಧ್ಯಕ್ಕೆ ನೀವು ಇದನ್ನು ಇಕೋ ಮಾಡುವಾಗ, ನಿಮ್ಮ ವೇರಿಯೇಬಲ್ ಗಳಲ್ಲಿ ಇದೂ ಒಂದು ಎಂದು ಇದನ್ನು ಸೇರಿಸಬೇಕಾಗಿಲ್ಲ.
03:14 ನಿಮಗೆ ಇದು ಅರ್ಥವಾಗದಿದ್ದರೆ ಚಿಂತಿಸಬೇಡಿ. ಇದು ಬಹಳ ಸರಳವಾಗಿದೆ.
03:18 ನಾನು ಹೀಗೆ ಹೇಳುತ್ತೇನೆ: "My name is", $name, "and my age is", ನನ್ನ age ನ್ನು ಬರೆಯುತ್ತೇನೆ.
03:24 ಈಗ ಎಲ್ಲವೂ ಒಂದೇ ಸ್ಟ್ರಿಂಗ್ ನಲ್ಲಿದೆ, ಎಲ್ಲವೂ ಒಂದೇ echo ದಲ್ಲಿದೆ ಮತ್ತು ನಮಗೆ 'My name is' ಮತ್ತು ಈ ಟೆಕ್ಸ್ಟ್ ಸಿಕ್ಕಿದೆ.
03:32 ವೇರಿಯೇಬಲ್ ಅನ್ನು ಕಾಲ್ ಮಾಡಲಾಗಿದೆ. ಇದನ್ನು ಇಲ್ಲಿ ಇಡಲಾಗಿದೆ. ಮತ್ತು, age ಅನ್ನು ಕಾಲ್ ಮಾಡಿದಾಗ, ಅದರ ವ್ಯಾಲ್ಯೂ ಅನ್ನು ಇಲ್ಲಿ ಇರಿಸಲಾಗುತ್ತದೆ.
03:40 ನಾವು ಅದನ್ನು refresh ಮಾಡಬಹುದು ಮತ್ತು ನೀವು "My name is Alex" ಅನ್ನು ನೋಡಬಹುದು. ಇದು ನಮ್ಮ ವೇರಿಯೇಬಲ್ ಆಗಿದೆ; "and my age is 19" ಇದೂ ನಮ್ಮ ವೇರಿಯೇಬಲ್ ಆಗಿದೆ.
03:48 ನಿಜವಾಗಿಯೂ ಇವುಗಳನ್ನು ಸುಲಭವಾಗಿ ಸ್ಟ್ರಿಂಗ್ ಗಳಲ್ಲಿ ಸೇರಿಸಬಹುದು.
03:52 ಸರಿ, ವೇರಿಯೇಬಲ್ ಗಳ ಬಗ್ಗೆ ನೀವು ತಿಳಿಯಬೇಕಾದುದು ಇಷ್ಟೇ ಆಗಿದೆ.
03:56 ಇಲ್ಲಿ ನಾನು ನಿಮಗೆ ತೋರಿಸಿದ Boolean (ಬೂಲಿಯನ್), decimal (ಡೆಸಿಮಲ್) ಗಳಂತಹ ಬೇರೆ ವಿಧದ ವೇರಿಯೇಬಲ್ ಗಳಿವೆ. ಉದಾಹರಣೆಗೆ '19.5'.
04:06 ನೀವು ಅವುಗಳನ್ನು ಡಾಲರ್ ಚಿಹ್ನೆಯೊಂದಿಗೆ ಅದೇರೀತಿಯಲ್ಲಿ ಡಿಕ್ಲೇರ್ ಮಾಡಬಹುದು.
04:10 ಆದ್ದರಿಂದ, ಇದನ್ನು ಅಭ್ಯಾಸ ಮಾಡಿ ಮತ್ತೆ ಹಿಂತಿರುಗಿ. ನಂತರ ನೀವು ಇನ್ನೂ ಹೆಚ್ಚು ಸುಧಾರಿತ ಕಾರ್ಯಗಳನ್ನು ಕಲಿಯಬಹುದು.
04:19 ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು!

Contributors and Content Editors

Sandhya.np14