PHP-and-MySQL/C2/Loops-While-Statement/Kannada

From Script | Spoken-Tutorial
Revision as of 12:03, 13 April 2020 by Sandhya.np14 (Talk | contribs)

Jump to: navigation, search
Time Narration
00:00 ನಮಸ್ಕಾರ ಮತ್ತು ಸ್ವಾಗತ. ನಾನು ಪ್ರತಿ ಲೂಪಿಂಗ್ ಸ್ಟೇಟ್ಮೆಂಟ್ ಗೂ ಬೇರೆ ಬೇರೆ ಟ್ಯುಟೋರಿಯಲ್ ಅನ್ನು ರಚಿಸಲು ನಿರ್ಧರಿಸುವೆನು.
00:07 ನಾನು ಇದನ್ನು ಸರಳವಾಗಿಡಲು ಬಯಸುವೆನು. ಇದು ಇನ್ನೊಮ್ಮೆ ನೋಡಲು ಹಾಗು ನೀವು ನಿರ್ದಿಷ್ಟವಾದ ಲೂಪ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಸೂಚಿಸಲು ಉಪಯುಕ್ತವಾಗಿದೆ.
00:17 ಈ ಟ್ಯುಟೋರಿಯಲ್ ನಲ್ಲಿ ನಾವು 'while' loop ನ ಕುರಿತು ಕಲಿಯುವೆವು.
00:21 while ಲೂಪ್ ಯಾವಾಗಲು ಲೂಪ್ ನ ಪ್ರಾರಂಭದಲ್ಲಿಯೇ condition ಅನ್ನು ಪರೀಕ್ಷಿಸುವುದು ಮತ್ತು ಕಂಡಿಷನ್ ಟ್ರ್ಯೂ(ನಿಜ) ಆಗಿದೆಯೇ ಅಥವ ಇಲ್ಲವೇ ಎನ್ನುವುದನ್ನು ಅವಲಂಭಿಸಿ, ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡುವುದು.
00:38 ಉದಾಹರಣೆಗೆ ನಾನು ಇಲ್ಲಿ ನನ್ನ while ಲೂಪ್ ಅನ್ನು ಪ್ರಾರಂಭಿಸುವೆನು, ಮತ್ತು ಇದು ನನ್ನ condition ಆಗಿದೆ ಮತ್ತು ಇದು ನನ್ನ ಬ್ಲಾಕ್ ಆಗಿದೆ.
00:51 ನಾನು ನನ್ನ ಬ್ಲಾಕ್ ಅನ್ನು ಕರ್ಲೀ ಬ್ರ್ಯಾಕೆಟ್ ಗಳ ನಡುವೆ ಇಡುವೆನು.
00:56 ಇಲ್ಲಿ condition ಇದೆ. ಉದಾಹರಣೆಗೆ ನಾನು if ಸ್ಟೇಟ್ ಮೆಂಟ್ ನಲ್ಲಿ ಬಳಸಿದಂತೆ, 1==1 ಎಂದು ಬಳಸಿದ್ದೇನೆ.
01:04 ನಾನು ಈಗ ಇಲ್ಲಿ 'test' ಅಥವಾ 'loop' ಎಂದು ಟೈಪ್ ಮಾಡಿದರೆ,
01:07 Loop ಎಂದಿರಲಿ ಮತ್ತು ನಂತರ ಬ್ರೇಕ್ ಎಂದಿರಲಿ. ಈಗ ಇದು 1=1 ಆಗಿರುವವರೆಗೂ ಲೂಪ್ ಅನ್ನು ರಚಿಸುತ್ತದೆ.
01:17 ಈಗ ಇಲ್ಲಿ ನಾನು ಏನನ್ನಾದರೂ ಮಾಡಿದರೆ, ಇದನ್ನು ಪ್ರಯತ್ನಿಸೋಣ.
01:22 ಲೂಪ್ 1=1 ಆಗಿರುವವರೆಗೂ ಪುನರಾವರ್ತನೆಯಾಗುವುದರಿಂದ ಮತ್ತು ಲೆಕ್ಕವಿಲ್ಲದಷ್ಟು ಸಲ ಎಕ್ಸಿಕ್ಯೂಟ್ ಆಗುವುದರಿಂದ ಬ್ರೌಸರ್ ಕ್ರ್ಯಾಶ್ ಆಗಬಹುದು. ಏಕೆಂದರೆ ಒಂದು ಯಾವಾಗಲೂ ಒಂದಕ್ಕೆ ಸಮವಾಗಿಯೇ ಇರುವುದು.
01:34 ಹಾಗಾಗಿ ಲೂಪ್ ಪುನರಾವರ್ತನೆಯಾಗುತ್ತಲೇ ಇರುವುದರಿಂದ ನಿಮ್ಮ ಬ್ರೌಸರ್ ಕ್ರ್ಯಾಶ್ ಆಗಬಹುದು.
01:40 ಈಗ while ವೇರಿಯೇಬಲ್ '$num' is smaller or equal to 10 ಎಂದಿರಲಿ ಮತ್ತು echo ಸ್ಟೇಟ್ಮೆಂಟ್ ನಲ್ಲಿ $num ++ ಎಂದಿರಲಿ.
01:57 '++' ಇದೊಂದು ಅರಿಥ್-ಮೆಟಿಕಲ್ ಆಪರೇಟರ್ ಆಗಿದೆ. ಇದು 'num' ಅನ್ನು 1 ಹೆಚ್ಚಿಸುವುದು. ಇದು 'num =num +1' ಎಂದು ಬರೆಯುವುದಕ್ಕೆ ಸಮವಾಗಿದೆ.
02:16 ಇದು 'num' ಅನ್ನು ತೆಗೆದುಕೊಂಡು, ಇದರ ವ್ಯಾಲ್ಯು 'num plus 1' ಗೆ ಸಮವಾಗಿದೆ ಎಂದು ಹೇಳುತ್ತದೆ.
02:23 ಇದು ಕೂಡ ಅರಿಥ್-ಮ್ಯಾಟಿಕಲ್ ಆಪರೇಟರ್ ಆಗಿದೆ. ಇಲ್ಲಿ ಏನಾಗುವುದೆಂದರೆ,
02:29 ಇಲ್ಲಿ 'num' less than or equal to (<=) 10 ಎಂದು ಇದೆ, ಇದು ಸರಿಯಾಗಿದ್ದರೆ ಆಗ Loop ಎಂದು echo ಮಾಡಿ, ನಂತರ ವೇರಿಯೇಬಲ್ 'num' ಗೆ ಒಂದನ್ನು ಸೇರಿಸುವೆವು.
02:41 ನಾವು ಈಗ ಏನು ಮಾಡಬೇಕೆಂದರೆ ಪ್ರಾರಂಭದಲ್ಲಿಯೇ '$num = 1' ಎಂದು ಮಾಡಬೇಕು. ಹಾಗಾಗಿ ಮೊದಲಿಗೆ Loop ಇದು 1 ಆಗಿರುತ್ತದೆ. ನಂತರ ಇದು 2, ನಂತರ 3, ನಂತರ 4, ಅದೇ ರೀತಿ 10 ರವರೆಗೆ ಮುಂದುವರಿದು, ಲೂಪ್ ನಿಲ್ಲುತ್ತದೆ.
03:01 ಇದು ಮುಗಿದ ನಂತರ ಇದರ ಕೆಳಗಿರುವ ಉಳಿದ ಕೋಡ್ ಗಳು ಮುಂದುವರಿಯುತ್ತವೆ.
03:06 ನಾವು ಇಲ್ಲಿ ಇದು 1 ಎಂದು ಹೇಳಿದ್ದೇವೆ ಮತ್ತು ನಾವು ಈಗ ಏನನ್ನು ಪಡೆಯುವೆವು ಎಂದು ನೋಡೋಣ. ಸರಿ ನಾವು Loop ಎನ್ನುವುದನ್ನು 1, 2, 3, 4, 5, 6, 7, 8, 9, 10 ಬಾರಿ ನೋಡಬಹುದು.
03:20 ಈಗ ಇದನ್ನು ಇನ್ನಷ್ಟು ಮೋಜು ಬರುವಂತೆ ಮಾಡಲು, Loop 1 ಎಂದುಕೊಳ್ಳಿ ಮತ್ತು ಈಗ ನಾನು ಇದರ ಕೊನೆಯಲ್ಲಿ 'num' ಅನ್ನು ಸೇರಿಸುವೆನು.
03:27 ಇದನ್ನು ಇನ್ನಷ್ಟು ಸರಳಗೊಳಿಸಲು, '$num' ಎಂದು ಇದರೊಳಗೆ ಬರೆಯೋಣ – ಇದು ಓದಲು ಸುಲಭವಾಗಿರುತ್ತದೆ.
03:37 ಸರಿ ಈಗ loop 1 ಮತ್ತು 1 ಸೇರಿಸುವೆನು , ನಂತರ ಇದು loop 2 ಆಗುವುದು ಮತ್ತೆ ಒಂದನ್ನು ಸೇರಿಸುವೆನು, ಈಗ ಇದು loop 3 ಆಗುವುದು ಮತ್ತು ಅದಕ್ಕೆ 1 ಸೇರಿಸುವೆನು ಹೀಗೆ 10ರ ವರೆಗೆ ಮುಂದುವರಿಯುವುದು.
03:49 ಈಗ ಇದನ್ನು ಓಪನ್ ಮಾಡೋಣ. Refresh ಮಾಡಿ. ಈಗ ನಾವು loop 1,2,3 ಅದೇ ರೀತಿಯಲ್ಲಿ 10 ರ ವರೆಗೆ ನೋಡಬಹುದು.
03:58 ಈಗ ಇಲ್ಲಿ ವ್ಯಾಲ್ಯುವನ್ನು 100 ಎಂದು ಬದಲಿಸೋಣ. Refresh ಮಾಡಿ. ಇದು ನೂರರವರೆಗೆ ಇದು ಹೋಗಿರುವುದನ್ನು ನೋಡಬಹುದು. ಸಂಖ್ಯೆ ಹೆಚ್ಚಾದಂತೆ ಲೂಪ್ ಕೂಡ ದೊಡ್ಡದಾಗುತ್ತದೆ.
04:08 ಈಗ ಇದನ್ನು 6000 ಎಂದು ತೆಗೆದುಕೊಳ್ಳೋಣ. refresh ಮಾಡಿ. ಇದು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುವುದು. ನೀವು ಈಗ 6000 ದವರೆಗೆ ನೋಡಬಹುದು. ಹಾಗಾಗಿ ಇದು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ.
04:20 ಈಗ ನೀವು ಇದನ್ನು ಅರೇ ಯೊಂದಿಗೆ ಸೇರಿಸಿಕೊಂಡು, ಅರೇ ಯಲ್ಲಿ ವರ್ಣಮಾಲೆಯನ್ನು ಇಕೋ ಮಾಡುವ ಪ್ರೋಗ್ರಾಂ ಅನ್ನು ರಚಿಸಲು ಪ್ರಯತ್ನಿಸಬಹುದು.
04:27 ನೀವು ಅರೇಯ ಪ್ರತಿಯೊಂದು ವ್ಯಾಲ್ಯುವನ್ನು echo ಮಾಡಲು ಲೂಪ್ ಅನ್ನು ಬಳಸಬಹುದು.
04:32 ಇದು ಹಾಗೇ ಇರಲಿ. ನಾನು ಇದನ್ನು ಬಹುಷಃ ಮುಂದಿನ ಟ್ಯುಟೋರಿಯಲ್ ಗಳಲ್ಲಿ ಮಾಡುವೆನು. ಆದರೆ ಪ್ರಾಥಮಿಕ ವಿಭಾಗದಲ್ಲಲ್ಲ.
04:40 ಇದು ಪ್ರಾಥಮಿಕ ಸ್ಟ್ರಕ್ಚರ್ ಆಗಿದೆ. ನಾನು ಇಲ್ಲಿ '$max' ಎಂಬ ವೇರಿಯೇಬಲ್ ಅನ್ನು ರಚಿಸಿ ನಿಮ್ಮ ಗರಿಷ್ಠ ವ್ಯಾಲ್ಯು ವನ್ನು ಅದರಲ್ಲಿ ಇಡಲು ಸಲಹೆ ಕೊಡುವೆನು.
04:53 ಇದು ಅದೇ ರೀತಿ ಕಾರ್ಯನಿರ್ವಹಿಸುತ್ತದೆ. ಆದರೆ ಓದಲು ತುಂಬಾ ಸುಲಭವಾಗಿದೆ. ನೀವು ಇದನ್ನು ಇಲ್ಲಿ ಡಿಕ್ಲೇರ್ ಮಾಡಬಹುದು ಮತ್ತು ಈ ವ್ಯಾಲ್ಯು ಇದರ ರೆಫರೆನ್ಸ್ ಆಗಿದೆ.
05:03 ಒಂದಕ್ಕಿಂತ ಹೆಚ್ಚು ಲೂಪ್ ಗಳಿದ್ದಲ್ಲಿ ನಾನು ಇದನ್ನು ಓದಲು ಸುಲಭವಾಗಲು ಮತ್ತು ಅರ್ಥಪೂರ್ಣವಾಗಿರಲು ಬಳಸುವೆನು. ಇದು while ಲೂಪ್ ಆಗಿದೆ. ಈಗ ಸಾರಾಂಶವನ್ನು ನೋಡೋಣ. ಇದು ಪ್ರಾರಂಭದಲ್ಲಿಯೇ 'ಕಂಡಿಷನ್' ಅನ್ನು ಪರೀಕ್ಷಿಸುತ್ತದೆ.
05:17 -
05:24 ನಿಮ್ಮ ವೇರಿಯೇಬಲ್ ಅನ್ನು ಹೆಚ್ಚಳ ಮಾಡಲಾಗುತ್ತದೆ. ನಿಮ್ಮ ವೇರಿಯೇಬಲ್ ಹೆಚ್ಚಳವಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ , ಇಲ್ಲದಿದ್ದರೆ ನಿಮ್ಮ ಲೂಪ್ ಇನ್-ಫೈನೈಟ್ ಆಗುವುದು.
05:32 ಧನ್ಯವಾದಗಳು. ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14