PHP-and-MySQL/C2/Arrays/Kannada

From Script | Spoken-Tutorial
Revision as of 17:53, 26 May 2020 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ನಮಸ್ಕಾರ. Arrays ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:03 ಅರೇ ಗಳು ಒಂದು ವೇರಿಯೇಬಲ್ ನಲ್ಲಿ ಒಂದಕ್ಕಿಂತ ಹೆಚ್ಚು ಡೇಟಾ ಗಳನ್ನು ಸ್ಟೋರ್ ಮಾಡಲು ಬಳಕೆದಾರನಿಗೆ ಅನುಮತಿಸುತ್ತವೆ.
00:08 ಉದಾಹರಣೆಗೆ, $days ಎಂಬ ವೇರಿಯೇಬಲ್ ಅನ್ನು ಅರೇ ಎನ್ನಬಹುದು.
00:12 ಜೋಡಿ ಆವರಣದೊಳಗೆ, ನಾವು ಒಂದಕ್ಕಿಂತ ಹೆಚ್ಚು ವ್ಯಾಲ್ಯೂಗಳನ್ನು ಹೊಂದಿದ್ದೇವೆ.
00:17 ಇದಕ್ಕಾಗಿ ನಾನು 5 ವ್ಯಾಲ್ಯೂಗಳನ್ನು ಆಯ್ಕೆ ಮಾಡುತ್ತೇನೆ ಮತ್ತು ಇವುಗಳಲ್ಲಿ ಪ್ರತಿಯೊಂದರಲ್ಲಿ, ವಾರದಲ್ಲಿಯ ಒಂದು ದಿನವನ್ನು ನಾನು ಹೊಂದಿದ್ದೇನೆ.
00:23 Monday, Tuesday, Wednesday, Thursday ಮತ್ತು Friday - ವಾರದಲ್ಲಿಯ 5 ದಿನಗಳನ್ನು ಮಾತ್ರ ಸೇವ್ ಮಾಡಿದ್ದೇನೆ.
00:39 ಉದಾಹರಣೆಗೆ, day one ($day1) ಇದು Monday ಆಗಿದೆ, day two ಇದು Tuesday ಆಗಿದೆ...ಹೀಗೆ...
00:49 ಇದು ನಿಮಗೆ ಅರ್ಥವಾಗಿರಬಹುದು. ಇದು, ಒಂದಕ್ಕಿಂತ ಹೆಚ್ಚು ಡೇಟಾ ಗಳನ್ನು ಹೊಂದಿರುವ ವೇರಿಯೆಬಲ್ ಅನ್ನು ಕರೆಯುವ ಸುಲಭವಾದ ಮತ್ತು ಪರಿಣಾಮಕಾರಿಯಾದ ವಿಧಾನವಾಗಿದೆ.
00:59 ದಯವಿಟ್ಟು ಗಮನಿಸಿ, ವೇರಿಯೆಬಲ್ ನ ಒಳಗೆ ಇವುಗಳು ಸಂಖ್ಯೆಗಳು ಅಥವಾ ನೀವು ನಿರ್ಧರಿಸುವ ಯಾವುದೇ ಡೇಟಾ ಆಗಿರಬಹುದು.
01:07 ಈಗ ನಮ್ಮ ಅರೇಯನ್ನು echo ಮಾಡಲು, ನಾನು echo $days ಎನ್ನುತ್ತೇನೆ.
01:12 ನೋಡಿ,ಇದು ಕೆಲಸ ಮಾಡುತ್ತಿಲ್ಲ.
01:16 ನಮ್ಮ ಪೇಜ್ ಅನ್ನು ಓಪನ್ ಮಾಡಿದಾಗ ಹೀಗಾಗುತ್ತದೆ.
01:20 ಕೇವಲ "Array" ಎಂದು ಇಕೋ ಆಗುತ್ತದೆ.
01:22 "Array" ಇಲ್ಲಿ ಎಲ್ಲಿಯೂ ಇಲ್ಲ.
01:24 ನಾವು ಅರೇಯನ್ನು ಹೊಂದಿದ್ದೇವೆ ಎಂದು PHP ಇಕೋ ಮಾಡಿದೆ ಅಷ್ಟೇ.
01:32 ಈಗ ಅರೇಯಲ್ಲಿರುವ ಒಂದು ನಿರ್ದಿಷ್ಟ ಎಲಿಮೆಂಟ್ ಅನ್ನು ಕಾಲ್ ಮಾಡಲು, ನೀವು ಇವುಗಳನ್ನು ಎಲಿಮೆಂಟ್ ಅನ್ನಬಹುದು, ಕೆಲವೆಡೆ id tags ಅನ್ನುತ್ತಾರೆ ಅಥವಾ ಅರೇಯ ಎಲಿಮೆಂಟ್ ಗಳೆನ್ನುತ್ತಾರೆ.
01:41 ನಾವು ಚೌಕ ಬ್ರಾಕೆಟ್ಗಳನ್ನು ಬಳಸುತ್ತಿದ್ದೇವೆ ಮತ್ತು ಅರೇಯ ಒಳಗೆ ಎಲಿಮೆಂಟ್ ಇರುವ ಸ್ಥಾನವನ್ನು ಕಾಲ್ ಮಾಡುತ್ತೇವೆ.
01:45 ಹೀಗಾಗಿ ನೀವು ಇದನ್ನು one, two, three, four, five ಎಂದುಕೊಂಡಿರಬಹುದು.
01:50 ಆದಾಗ್ಯೂ, ಸ್ಟ್ಯಾಂಡರ್ಡ್ ಸಂಖ್ಯಾ ವ್ಯವಸ್ಥೆಯ ಕಾರಣ, (standard numbering system) ನಾವು zero, one, two, three ಮತ್ತು four ನೊಂದಿಗೆ ಪ್ರಾರಂಭಿಸುತ್ತಿದ್ದೇವೆ.
01:58 ಉದಾಹರಣೆಗೆ, ನನಗೆ Monday ಯನ್ನು echo ಮಾಡಬೇಕಾಗಿದ್ದರೆ, ಅದು zero ಆಗಿರುತ್ತದೆ; ಆದ್ದರಿಂದ ನೀವು ಅದರಲ್ಲಿ zero ಅನ್ನು ಸೇರಿಸಿ. ಮತ್ತು Monday ಅನ್ನು 'ಇಕೋ' ಮಾಡಲಾಗುವುದು.
02:09 one ನೊಂದಿಗೆ Tuesday ಮತ್ತು four – ಇದು ಅರೇಯಲ್ಲಿಯ ಕೊನೆಯ ಎಲಿಮೆಂಟ್ ಆಗಿದ್ದು Friday ಅನ್ನು 'ಇಕೋ' ಮಾಡುತ್ತದೆ.
02:18 ಒಂದು ಅರೇಯಲ್ಲಿ ವ್ಯಾಲ್ಯೂಗಳನ್ನು ಬೇರೆ ರೀತಿಯಲ್ಲಿ ಹೇಗೆ ಅಸೈನ್ ಮಾಡುವುದೆಂದು ನಾನು ನಿಮಗೆ ತೋರಿಸುತ್ತೇನೆ.
02:26 ಈಗ ನಾನು ಮೊದಲಿನಿಂದ ಹೇಳಲು ಆರಂಭಿಸುತ್ತೇನೆ.
02:32 ನಾನು ಒಂದು ವಿಶೇಷವಾದ ಅರೇಯನ್ನು ಕ್ರಿಯೇಟ್ ಮಾಡುತ್ತೇನೆ.
02:39 $days zero equals Monday, days one equals Tuesday.
02:53 ನೀವು ಇದೇಕೆ ಹೀಗೆ ಎಂದುಕೊಳ್ಳಬಹುದು. ಎಂದರೆ ನಾನು ಈ ಮೊದಲು ಹೇಳಿದ್ದನ್ನು ಇಲ್ಲಿ ಕ್ರಿಯೇಟ್ ಮಾಡುತ್ತಿದ್ದೇನೆ. ಇದು ಸ್ವಲ್ಪ ಕಷ್ಟದಾಯಕ ಆಗಿದೆ.
03:04 ನಾನು ಹೀಗೆ ಸಹ ಹೇಳಬಹುದು: day 1 equals, ಮತ್ತು day 2 equals... ಹೀಗೆ ಮುಂದುವರೆಸಬಹುದು.
03:15 ಅದಾಗ್ಯೂ, ಇಲ್ಲಿ ನಾವು ಮಾಡುತ್ತಿರುವುದು ಒಂದು ಅರೇಯಲ್ಲಿ ಸೇರಿಸುತ್ತಿದ್ದೇವೆ.
03:19 ಇದು ಅದೇ ರಚನೆಯನ್ನು ಹೊಂದಿರಬಹುದು. ಆದರೆ ನಾವು ಬೇರೆ ರೀತಿಯಲ್ಲಿ ಅಸೈನ್ ಮಾಡುತ್ತಿದ್ದೇವೆ.
03:25 ನೀವು ಹಾಗೆ ಮಾಡಬಹುದು. ನಾನು ಯಾವಾಗಲೂ ಹೀಗೆ ಮಾಡಲು ಬಯಸುತ್ತೇನೆ.
03:33 ಇದು ಹೆಚ್ಚು ಓರಣವಾಗಿದೆ, ಸುಲಭವಾಗಿದೆ ಎಂದು ನನ್ನ ಅಭಿಪ್ರಾಯ. ಇದನ್ನು ನೀವು ಕೆಳಗೆ ತರಬಹುದು.
03:45 ಆದಾಗ್ಯೂ, ನಿಮಗೆ ಇದನ್ನು ನೋಡಬೇಕಾಗಿದ್ದರೆ, ಅರ್ಥಾತ್ ಈಗ ಇದನ್ನು ಸೇವ್ ಮಾಡಿದರೆ.. 'ರಿಫ್ರೆಶ್' ಮಾಡಿ. ಏನೂ ಬದಲಾಗಿಲ್ಲ.
03:54 ಇಲ್ಲಿ ಎರರ್ ಗಳು ಇಲ್ಲ. ನಮಗೆ ಇನ್ನೂ ಅದೇ ಸ್ಟ್ರಕ್ಚರ್ ಸಿಗುತ್ತದೆ. ನಾವು ಕೇವಲ ಅದನ್ನು ಕೆಳಗಿನ ಸಾಲುಗಳಲ್ಲಿ ಸರಿಸಿದ್ದೇವೆ.
04:01 ನಿಮ್ಮ ಫಂಕ್ಷನ್ ನ ಕೊನೆಯಲ್ಲಿ ಲೈನ್ ಟರ್ಮಿನೇಟರ್ ಇದೆ, ಪ್ರತಿಯೊಂದು ಲೈನ್ ನ ಕೊನೆಯಲ್ಲಿ ಅಲ್ಲ. ಅದರ ಬಗ್ಗೆ ಗೊಂದಲ ಮಾಡಿಕೊಳ್ಳಬೇಡಿ.
04:11 ಸರಿ. ನಾವು ಇಲ್ಲಿಗೆ ಹಿಂದಿರುಗೋಣ.
04:15 ಹೀಗೆ, ಇದು ಮೂಲ array, ಇದಕ್ಕಾಗಿ ಎರಡು ವಿಧಗಳಲ್ಲಿ ವ್ಯಾಲ್ಯೂಗಳನ್ನು ಹೇಗೆ ಕ್ರಿಯೇಟ್ ಮಾಡುವುದು ಮತ್ತು ವ್ಯಾಲ್ಯೂಗಳನ್ನು ಹೇಗೆ ಕಾಲ್ ಮಾಡುವುದು ಎಂಬುದರ ಬಗ್ಗೆ ವಿವರಣೆ ಆಗಿದೆ.
04:23 ಉದಾಹರಣೆಗೆ, ನಾನು echo "Today is" $days ಎಂದು ಹೇಳಿದರೆ, ನಂತರ zero ಎಂದು ಹೇಳಿದರೆ,
04:34 ಈಗ ನಾನು ಇದನ್ನು ಕಾಂಟೆಕ್ಸ್ಟ್ ನಲ್ಲಿ ಹೈಲೈಟ್ ಮಾಡಿದ್ದೇನೆ- ಹಸಿರು ಬಣ್ಣದಲ್ಲಿ ಹೈಲೈಟ್ ಮಾಡಿರುವುದನ್ನು ನೀವು ನೋಡಬಹುದು.
04:41 ಇದನ್ನು refresh ಮಾಡಿದರೆ, ನೀವು "This is Monday" ಎಂದು ನೋಡುವಿರಿ.
04:44 ಗೊಂದಲ ಬೇಡ, ಕಾಂಟೆಕ್ಸ್ಟ್ ಗಳನ್ನು ಬಳಸಲು ನಾನು ನಿಮಗೆ ಶಿಫಾರಸು ಮಾಡುತ್ತೇನೆ.
04:48 ಆದಾಗ್ಯೂ, ಇದು contact ಕೋಡಿಂಗ್ ಅನ್ನು ಗುರುತಿಸುವ ಪ್ರಮಾಣಿತ ವಿಧಾನವಲ್ಲ.
04:53 ಹೀಗೆ ಚೆನ್ನಾಗಿ ಕಾಣುತ್ತದೆ. ಇಲ್ಲಿ ನಾವು echo $days ಮತ್ತು zero ಎಂದು ಬರೆದಾಗ, ಒಂದು ಸಂಖ್ಯೆ ಎಂದರೆ ಇಂಟೀಜರ್ (ಪೂರ್ಣಾಂಕ) ಎಂದು ತೋರಿಸಲು, ಅದು ಕೆಂಪು ಬಣ್ಣದಲ್ಲಿ ಇರುವುದನ್ನು ನೀವು ನೋಡುತ್ತೀರಿ.
05:09 ನೀವು ಹೀಗೆ ಬರೆಯಬೇಕೆಂದು ಅದು ಬಯಸುತ್ತದೆ. ಅದು ಸರಿಯಾಗಿದೆ ಎಂದು ನಾವು ನೋಡಬಹುದು.
05:16 ಆದರೆ ಇಕೋ ಮಾಡಲು ನೀವು ನಿಮ್ಮ ಸ್ಟ್ರಿಂಗ್ ನಲ್ಲಿ ಒಂದು ಅರೇಯನ್ನು ಸೇರಿಸಬಹುದು.
05:23 ಈಗ ನಾನು associative arrays ಗೆ ಹೋಗುತ್ತೇನೆ. ಇಲ್ಲಿ ನಾವು id tags ಗಳನ್ನು ಅಸೈನ್ ಮಾಡುವವರಿದ್ದೇವೆ ಹಾಗೂ ಪ್ರತಿಯೊಂದು ಐಡೆಂಟಿಟೀ ಗೆ ಒಂದು ವ್ಯಾಲ್ಯೂಅನ್ನು ಕೊಡುತ್ತೇವೆ.
05:36 ನಿಮಗೆ ಇದು ಅರ್ಥವಾಗದಿದ್ದರೆ, ನಾನು ಹೀಗೆ ಇದನ್ನು ಕ್ರಿಯೇಟ್ ಮಾಡುವವನಿದ್ದೇನೆ.
05:46 ನಾನು $ages equals array(); ಎನ್ನುತ್ತೇನೆ. ಈಗ ಒಳಗಡೆ, "Alex" ಎನ್ನುತ್ತೇನೆ.
06:03 ಈಗ, "Billy" ಮತ್ತು ನಂತರ "Kyle" ಎಂದು ಹೇಳುವುದರ ಬದಲಾಗಿ, ಈ ಮೂರು ಹೆಸರುಗಳನ್ನು ನಾನು ಬಳಸುವವನಿದ್ದೆನೆ, ನಾನು nineteen, fourteen ಮತ್ತು eighteen ಎಂದು ಹೇಳುತ್ತೇನೆ.
06:20 ಮೂಲತಃ equals ಮತ್ತು ಒಂದು greater than ಚಿಹ್ನೆಯನ್ನು (=>) ಬಳಸುತ್ತಿದ್ದೇನೆ.
06:24 ಈಗ, ಇದು ಏನು ಮಾಡಿದೆ ಎಂದರೆ- ಇದರಲ್ಲಿ ಮಾಡುವಂತೆ ಅರೇ ಎಲಿಮೆಂಟ್ ಗಳನ್ನು- ಇದನ್ನು zero ಎಂದು, ಇದನ್ನು one ಎಂದು, ಇದನ್ನು two ಎಂದು ಕಾಲ್ ಮಾಡುವ ಬದಲಾಗಿ,
06:34 ಇದನ್ನು "Alex" ಎಂದು, ಇದನ್ನು "Billy" ಎಂದು ಮತ್ತು ಇದನ್ನು "Kyle" ಎಂದು ಕಾಲ್ ಮಾಡಲಾಗಿದೆ. ಆದರೆ ಅವುಗಳ ವ್ಯಾಲ್ಯೂಗಳು fourteen, nineteen ಮತ್ತು eighteen ಆಗಿವೆ.
06:45 ಹೀಗಾಗಿ, ನಿಜವಾಗಿಯೂ ಅದನ್ನು ಹಾಗೆ ಬರೆದಂತೆಯೇ ಇರುತ್ತದೆ. ಅದನ್ನು ತೆಗೆದುಬಿಡೋಣ. ಮತ್ತು ಇದನ್ನು zero, one ಮತ್ತು two ಎಂದು ಕಾಲ್ ಮಾಡೋಣ.
06:55 ಇದನ್ನು ಇನ್ನೂ ಸರಳವಾಗಿಸಲು, ನೆನಪಿನಲ್ಲಿಡಲು ಮತ್ತು ಕಾಲ್ ಮಾಡಲು ಸುಲಭವಾಗುವಂತೆ ನಾವು ಹೀಗೆ ಹೇಳಬಹುದು: echo $ages "Alex".
07:09 ನಾವು refresh ಮಾಡಿದಾಗ ಇದು nineteen ಎಂದು ಇಕೋ ಮಾಡುತ್ತದೆ. ಇಲ್ಲಿ nineteen ಅನ್ನು ನೋಡಿ. 'Billy' ಮತ್ತು 'Kyle' ಗಳೊಂದಿಗೆ ಸಹ ಹೀಗೇ ಆಗುತ್ತದೆ.
07:24 ನೀವು ಪ್ರೊಗ್ರಾಂ ನ ಮಧ್ಯದಲ್ಲಿರುವಾಗ, ಅಬ್ಬಾ!! ನಾನು ಮತ್ತೆ ಮೇಲ್ತುದಿಗೆ ಹೋಗಿ ಪ್ರತಿಯೊಂದು ಸಾಲನ್ನು ಎಣಿಸುತ್ತಾ ಇದು " zero, one, two ಅಥವಾ three, ನನಗೆ ನೆನಪಾಗುತ್ತಿಲ್ಲ?" ಎಂದು ಹೇಳುವುದರ ಬದಲಾಗಿ,
07:38 ಇದನ್ನು ಮಾಡುವುದು ತುಂಬಾ ಸುಲಭವಾಗಿದೆ. ಇದನ್ನು ಮಾಡುವ ಇನ್ನೊಂದು ಉಪಯುಕ್ತ ವಿಧಾನವೆಂದರೆ, ನಾನು array one is equal to 'Alex' ಮತ್ತು ನಂತರ two is equal to 'Billy' ಎಂದು ಹೇಳುವದು.
07:50 ನಾವು zero, ನಂತರ one ಎಂದು ಆರಂಭಿಸುತ್ತಿಲ್ಲ. ನಾವು one ಮತ್ತು two ಎಂದು ಆರಂಭಿಸುತ್ತಿದ್ದೇವೆ. ಇದರಿಂದ ಅದನ್ನು ನೆನಪಿನಲ್ಲಿಡಲು ಸುಲಭವಾಗುತ್ತದೆ.
08:00 ಈಗ, ನಾವು echo $ages one ಎಂದು ಹೇಳಬಹುದು, ಅದು "Alex" ಎಂದು ಬರುತ್ತದೆ.
08:08 ನಾವು ಅದಕ್ಕಾಗಿ zero ಅನ್ನು ಬಳಸುತ್ತಿಲ್ಲ. zero, one, two ಎಂದು ಹೇಳುವದಕ್ಕಿಂತ ಇದು ಪ್ರೊಗ್ರಾಂ ಮಾಡಲು ನಿಮಗೆ ಹೆಚ್ಚು ಸುಲಭವಾಗಿದೆ.
08:17 ಪ್ರಯತ್ನಿಸಿ ನೋಡಿ. ನಿಮಗೆ ಯಾವುದು ಅತ್ಯಂತ ಸುಲಭವಾಗಿದೆ ಎಂದು ನೋಡಿ.
08:21 ಆದರೆ ನನಗೆ ಇದರಲ್ಲಿ ಅರ್ಥವಿಲ್ಲ ಎನಿಸುತ್ತದೆ. ಏಕೆಂದರೆ, ನಾನು zero, one, two ಗಳನ್ನು ಬಳಸಲು ಇಷ್ಟಪಡುತ್ತೇನೆ.
08:28 ನಾನು ಈಮೊದಲು ಮಾಡಿದಂತೆ ನಿಮಗೆ ಅದನ್ನು ಬಳಸಬೇಕಾಗಿದ್ದರೆ, ಅಥವಾ ಹೀಗೆ ಅಥವಾ ಒಂದು ಸ್ಟ್ರಿಂಗ್ ವ್ಯಾಲ್ಯೂಅನ್ನು ಯಾವುದೇ ಡೇಟಾ ಟೈಪ್ ಗೆ ಅಸೈನ್ ಮಾಡಬೇಕಾದರೆ, ಆಗ ಅದನ್ನು ಆ ರೀತಿಯಲ್ಲಿ ಮಾಡಬೇಕು.
08:37 ಸರಿ. ಇದು, ಅರೇಗಳ ಕುರಿತು ಆಗಿತ್ತು. ನನ್ನ ಹತ್ತಿರ multidimensional arrays ಬಗ್ಗೆ ಇನ್ನೊಂದು ಟ್ಯುಟೋರಿಯಲ್ ಇದೆ.
08:44 ಅದೊಂದು ಪ್ರತ್ಯೇಕ ಟ್ಯುಟೋರಿಯಲ್ ಆಗಿದೆ. ದಯವಿಟ್ಟು ಅದನ್ನು ನೋಡಿ.
08:47 ಈ ಟ್ಯುಟೋರಿಯಲ್ ನಲ್ಲಿ ಇರುವುದು ಇಷ್ಟೇ. ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14