Netbeans/C2/Integrating-an-Applet-in-a-Web-Application/Kannada

From Script | Spoken-Tutorial
Revision as of 09:23, 8 October 2018 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ನಮಸ್ಕಾರ.
00:02 Integrating an Applet in a Web Application ಎಂಬ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:08 ಈ ‘ಟ್ಯುಟೋರಿಯಲ್’ ನಲ್ಲಿ, ನೀವು ಬಿಲ್ಡ್ ಮಾಡುವ ಅಪ್ಲಿಕೇಶನ್, 'Netbeans IDE' ಯಲ್ಲಿ ಆಪ್ಲೆಟ್ ಗಳನ್ನು ಹೇಗೆ ಬಿಲ್ಡ್ ಮತ್ತು ಡಿಪ್ಲಾಯ್ ಮಾಡುವುದು ಎಂಬುದನ್ನು ನಿಮಗೆ ತೋರಿಸುತ್ತದೆ.
00:16 ನೀವು 'Netbeans' ಅನ್ನು ಬಳಸುತ್ತಿರುವುದು ಇದೇ ಮೊದಲ ಸಲವಾಗಿದ್ದರೆ, 'IDE' ಯೊಂದಿಗೆ ಆರಂಭಿಸಲು ದಯವಿಟ್ಟು
00:21 Introduction to Netbeans ಎಂಬ ‘ಟ್ಯುಟೋರಿಯಲ್’ಅನ್ನು ವೀಕ್ಷಿಸಿ.
00:25 ಅಲ್ಲದೇ, 'IDE' ಯನ್ನು ಚೆನ್ನಾಗಿ ತಿಳಿದುಕೊಳ್ಳಲು
00:32 Developing Web Applications ಮತ್ತು Designing GUIs on Netbeans ಎಂಬ ‘ಟ್ಯುಟೋರಿಯಲ್’ಗಳನ್ನು ಸಹ ವೀಕ್ಷಿಸಿ.
00:36 ಮೇಲೆ ಹೇಳಿದ ಎಲ್ಲ ‘ಟ್ಯುಟೋರಿಯಲ್’ಗಳನ್ನು Spoken Tutorial ವೆಬ್ಸೈಟ್ ನ ಮೇಲೆ ವೀಕ್ಷಿಸಬಹುದು.
00:41 ಇದನ್ನು ವಿವರಿಸಲು, ನಾನು:

Linux ಆಪರೇಟಿಂಗ್ ಸಿಸ್ಟಂ Ubuntu, ಆವೃತ್ತಿ 11.04 ಹಾಗೂ Netbeans IDE ಆವೃತ್ತಿ 7.1.1 ಇವುಗಳನ್ನು ಬಳಸುತ್ತಿದ್ದೇನೆ.

00:55 ಈ ಟ್ಯುಟೋರಿಯಲ್ ನಲ್ಲಿ, ನಾವು:
00:57 ಒಂದು ಆಪ್ಲೆಟ್ ಅನ್ನು (Applet) ಕ್ರಿಯೇಟ್ ಮಾಡುವುದು,
00:59 ಆಪ್ಲೆಟ್ ಅನ್ನು ರನ್ (Run) ಮಾಡುವುದು ಮತ್ತು
01:02 ಆಪ್ಲೆಟ್ ಅನ್ನು 'ವೆಬ್ ಅಪ್ಲಿಕೇಶನ್' ನಲ್ಲಿ ಎಂಬೆಡ್ (Embed) ಮಾಡುವುದು ಇವುಗಳನ್ನು ಕಲಿಯಲಿದ್ದೇವೆ.
01:05 ಈಗ, ನಮ್ಮ ಪ್ರೊಜೆಕ್ಟ್ ಅನ್ನು ತಯಾರಿಸಲು ನಾವು IDE ಯನ್ನು ಲಾಂಚ್ ಮಾಡೋಣ.
01:10 'File > New Project' ಗೆ ಹೋಗಿ ಮತ್ತು ಒಂದು 'Java Class Library ' ಯನ್ನು ಕ್ರಿಯೇಟ್ ಮಾಡಿ.
01:17 'Next' ಅನ್ನು ಕ್ಲಿಕ್ ಮಾಡಿ.
01:19 ನಿಮ್ಮ 'Project' ಗೆ ಒಂದು ಹೆಸರನ್ನು ಕೊಡಿ.
01:21 ನಾನು ನನ್ನ ಪ್ರೊಜೆಕ್ಟ್ ಅನ್ನು "SampleApplet" ಎಂದು ಹೆಸರಿಸುತ್ತೇನೆ.
01:26 'Location' ಅನ್ನು, ನಿಮ್ಮ ಸಿಸ್ಟಂ ನಲ್ಲಿರುವ ಯಾವುದೇ ಒಂದು ಡಿರೆಕ್ಟರೀಗೆ ಸೆಟ್ ಮಾಡಿ.
01:30 ಮತ್ತು, ನಿಮ್ಮ ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡಲು, 'Finish' ಅನ್ನು ಕ್ಲಿಕ್ ಮಾಡಿ.
01:34 ನಂತರ, ನಾವು 'Applet Source File' ಅನ್ನು ಕ್ರಿಯೇಟ್ ಮಾಡೋಣ.
01:39 "SampleApplet" ಎಂಬ ಪ್ರೊಜೆಕ್ಟ್ ನೋಡ್ ನ ಮೇಲೆ ರೈಟ್-ಕ್ಲಿಕ್ ಮಾಡಿ.
01:42 ಮತ್ತು, 'Properties' ವಿಂಡೋಅನ್ನು ತೆರೆಯಲು 'Properties' ಅನ್ನು ಆಯ್ಕೆಮಾಡಿ.
01:47 ಪ್ರೊಜೆಕ್ಟ್ ಗಾಗಿ ನಿಮಗೆ ಬೇಕಾದ 'Source or Binary Format' ಅನ್ನು ಆಯ್ಕೆಮಾಡಿ.
01:53 'JDK' ಯ ಸರಿಯಾದ ಆವೃತ್ತಿಯನ್ನು ಆಯ್ಕೆಮಾಡಿರುವುದನ್ನು ಖಚಿತಪಡಿಸಿಕೊಳ್ಳಲು ಹೀಗೆ ಮಾಡಬೇಕು.
01:59 ಉದಾಹರಣೆಗೆ- ನೀವು 'JDK' ಯ ಇತ್ತೀಚಿನ ಆವೃತ್ತಿಯನ್ನು ಆಯ್ಕೆಮಾಡಿದರೆ,
02:04 ಆಗ, ಆಪ್ಲೆಟ್ 'Java browser plugin' ನ ಹಳೆಯ ಆವೃತ್ತಿಯನ್ನು ಹೊಂದಿರುವ ಮಶಿನ್ ಗಳ ಮೇಲೆ ರನ್ ಆಗಲಿಕ್ಕಿಲ್ಲ.
02:10 ನಾನು 'JDK' ಯ ಇತ್ತೀಚಿನ ಆವೃತ್ತಿಯನ್ನು ಆಯ್ಕೆಮಾಡುವೆನು. ಏಕೆಂದರೆ, ನನ್ನ ಬ್ರೌಸರ್, ಜಾವಾ ಬ್ರೌಸರ್ ಪ್ಲಗ್-ಇನ್ (java browser plugin) ನ ಇತ್ತೀಚಿನ ಆವೃತ್ತಿಯನ್ನು ಬೆಂಬಲಿಸುತ್ತದೆ.
02:19 'OK' ಯ ಮೇಲೆ ಕ್ಲಿಕ್ ಮಾಡಿ.
02:21 'SampleApplet' ಪ್ರೊಜೆಕ್ಟ್ ನೋಡ್ ನ ಮೇಲೆ ಮತ್ತೊಮ್ಮೆ ರೈಟ್-ಕ್ಲಿಕ್ ಮಾಡಿ
02:25 ಮತ್ತು 'New > Applet' ಅನ್ನು ಆಯ್ಕೆಮಾಡಿ.
02:29 ಒಂದುವೇಳೆ, ಈ ಕಾಂಟೆಕ್ಸ್ಚುಅಲ್ ಮೆನ್ಯುನಲ್ಲಿ ನಿಮಗೆ 'Applet' ಆಯ್ಕೆಯು ಸಿಗದಿದ್ದರೆ 'Other' ನ ಮೇಲೆ ಕ್ಲಿಕ್ ಮಾಡಿ.
02:35 'Categories' ನ ಅಡಿಯಲ್ಲಿ, 'Java' ಅನ್ನು ಆಯ್ಕೆಮಾಡಿ.
02:38 ಮತ್ತು, ಆಪ್ಲೆಟ್ ಅನ್ನು ಕ್ರಿಯೇಟ್ ಮಾಡಲು, 'File Types' ನ ಅಡಿಯಲ್ಲಿ 'Applet' ಅನ್ನು ಆಯ್ಕೆಮಾಡಿ.
02:43 'Class name' ಅನ್ನು"Sample" ಎಂದು ಮತ್ತು 'Package' ಅನ್ನು "org.me.hello" ಎಂದು ಕೊಡಿ.
02:55 'Finish' ಅನ್ನು ಕ್ಲಿಕ್ ಮಾಡಿ.
02:57 IDE, ನಿರ್ದಿಷ್ಟಪಡಿಸಿದ 'package' ನಲ್ಲಿ 'source file' ಎಂಬ ಆಪ್ಲೆಟ್ ಅನ್ನು ತಯಾರಿಸುತ್ತದೆ.
03:02 ಇದನ್ನು ನೋಡಲು, ನೀವು 'Projects' ವಿಂಡೋದಲ್ಲಿ 'Source Packages' ನೋಡ್ ಅನ್ನು ವಿಸ್ತರಿಸಬಹುದು.
03:08 'Source editor' ನಲ್ಲಿ ಆಪ್ಲೆಟ್ ಸೋರ್ಸ್ ಫೈಲ್ ತೆರೆದುಕೊಳ್ಳುತ್ತದೆ.
03:12 ಈಗ ನಾವು ನಮ್ಮ 'applet class' ಅನ್ನು ಡಿಫೈನ್ ಮಾಡೋಣ.
03:17 ಒಂದು ಸರಳ ಆಪ್ಲೆಟ್ ಗಾಗಿ ನನ್ನ ಹತ್ತಿರ ಕೋಡ್ ಇದೆ.
03:21 ಇದು ಬ್ಯಾಕ್-ಗ್ರೌಂಡ್ ಬಣ್ಣವನ್ನು ಸಯಾನ್ ಗೆ,
03:24 ಫೋರ್-ಗ್ರೌಂಡ್ (foreground) ಬಣ್ಣವನ್ನು ಕೆಂಪು ಬಣ್ಣಕ್ಕೆ ಸೆಟ್ ಮಾಡುತ್ತದೆ.
03:27 ಮತ್ತು, ಆಪ್ಲೆಟ್ ಆರಂಭವಾದಾಗ, ಆಪ್ಲೆಟ್ ನಲ್ಲಿಯ 'ಮೆಥಡ್'ಗಳು- ಅರ್ಥಾತ್ 'init()' ಮೆಥಡ್, 'start()' ಮೆಥಡ್ ಮತ್ತು 'paint()' ಮೆಥಡ್'ಗಳನ್ನು
03:34 ಕಾಲ್ ಮಾಡುವ ಕ್ರಮವನ್ನು ವಿವರಿಸುವ ಒಂದು ಮೆಸೇಜ್ ಅನ್ನು ಪ್ರದರ್ಶಿಸುತ್ತದೆ.
03:43 ನಾನು ಈಗ ಪೂರ್ತಿ ಕೋಡ್ ಅನ್ನು ನನ್ನ ಕ್ಲಿಪ್ ಬೋರ್ಡ್ ನ ಮೇಲೆ ಕಾಪಿ ಮಾಡಿ ಅದನ್ನು IDE ಯಲ್ಲಿ ಈಗ ಇರುವ ಕೋಡ್ ನ ಮೇಲೆ ಪೇಸ್ಟ್ ಮಾಡುವೆನು.
03:54 'Projects' ವಿಂಡೋದಲ್ಲಿ 'Sample.java' ಫೈಲ್ ನ ಮೇಲೆ ರೈಟ್-ಕ್ಲಿಕ್ ಮಾಡಿ
04:00 ಮತ್ತು ಕಾಂಟೆಕ್ಸ್ಚುಅಲ್ ಮೆನ್ಯುವಿನಿಂದ 'Run File' ಅನ್ನು ಆಯ್ಕೆಮಾಡಿ.
04:04 ಆಪ್ಲೆಟ್ ಅನ್ನು ಒಳಗೊಂಡಿರುವ 'Sample.html' ಲಾಂಚರ್ ಫೈಲ್ ಅನ್ನು, build ಫೋಲ್ಡರ್ ನಲ್ಲಿ ಕ್ರಿಯೇಟ್ ಮಾಡಲಾಗಿದೆ.
04:13 ಇದನ್ನು ನೀವು Files ವಿಂಡೋದಲ್ಲಿ ನೋಡಬಹುದು.
04:15 Sample dot html ಫೈಲ್.
04:18 ಆಪ್ಲೆಟ್ ಅನ್ನು ಸಹ Applet viewer ನಲ್ಲಿ ಲಾಂಚ್ ಮಾಡಲಾಗಿದೆ.
04:23 ಮತ್ತು, ಸ್ಕ್ರೀನ್ ನಲ್ಲಿ ಮೆಸೇಜ್ ಅನ್ನು ತೋರಿಸಲಾಗಿದೆ.
04:27 ನಾನು applet viewer ಅನ್ನು ಮುಚ್ಚುತ್ತೇನೆ.
04:29 ನಂತರ, ಒಂದು ವೆಬ್-ಅಪ್ಲಿಕೇಶನ್ ನ ಒಳಗೆ ನಾವು ಆಪ್ಲೆಟ್ ಅನ್ನು ಸೇರಿಸುತ್ತೇವೆ.
04:33 ಇದರಿಂದ ನಾವು ಆಪ್ಲೆಟ್, ಯೂಸರ್ ನಿಗೆ ಲಭ್ಯವಾಗುವಂತೆ ಮಾಡಬಹುದು.
04:37 ಇದನ್ನು ಮಾಡಲು, ನಾವು ಒಂದು ವೆಬ್-ಅಪ್ಲಿಕೇಶನ್ ಅನ್ನು ತಯಾರಿಸುತ್ತೇವೆ.
04:42 Categories ನ ಅಡಿಯಲ್ಲಿ, java web ಅನ್ನು ಆಯ್ಕೆಮಾಡಿ ಮತ್ತು Projects ನ ಅಡಿಯಲ್ಲಿ, Web Application ಅನ್ನು ಆಯ್ಕೆಮಾಡಿ
04:48 ಮತ್ತು Next ಅನ್ನು ಕ್ಲಿಕ್ ಮಾಡಿ.
04:50 ನಮ್ಮ Project ಅನ್ನು ನಾವು "HelloSampleApplet" ಎಂದು ಹೆಸರಿಸುವೆವು ಮತ್ತು
05:01 Next ಅನ್ನು ಕ್ಲಿಕ್ ಮಾಡುವೆವು.
05:03 ಸರಿಯಾದ ಸರ್ವರ್ ಆಯ್ಕೆಯಾಗಿದೆಯೇ ಎಂದು ನೋಡಿ. ಮತ್ತು, ನಿಮ್ಮ ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡಲು, Finish ಅನ್ನು ಕ್ಲಿಕ್ ಮಾಡಿ.
05:12 ಗಮನಿಸಿ: ನಾವು ಜಾವಾ ಪ್ರೊಜೆಕ್ಟ್ SampleApplet ಅನ್ನು, ವೆಬ್ ಪ್ರೊಜೆಕ್ಟ್ HelloSampleApplet ಗೆ ಸೇರಿಸಿದಾಗ,
05:20 ಈ ವೆಬ್-ಅಪ್ಲಿಕೇಶನ್ ಅನ್ನು ಬಿಲ್ಡ್ ಮಾಡಿದಾಗಲೆಲ್ಲ, ಆಪ್ಲೆಟ್ ಅನ್ನು ಬಿಲ್ಡ್ ಮಾಡಲು, ನಾವು IDE ಯನ್ನು ಸಕ್ರಿಯಗೊಳಿಸುತ್ತೇವೆ.
05:26 ಹೀಗಾಗಿ, ನಾವು Sample dot java applet ಅನ್ನು ಮಾರ್ಪಡಿಸಿದಾಗ,
05:34 ಇದನ್ನು ಬಿಲ್ಡ್ ಮಾಡಿದಾಗಲೆಲ್ಲ, IDE, ಆಪ್ಲೆಟ್ ನ ಒಂದು ಹೊಸ ಆವೃತ್ತಿಯನ್ನು ಬಿಲ್ಡ್ ಮಾಡುತ್ತದೆ.
05:40 ಈಗ, Projects ವಿಂಡೋದಲ್ಲಿ, HelloSampleApplet ಪ್ರೊಜೆಕ್ಟ್ ನೋಡ್ ನ ಮೇಲೆ ರೈಟ್-ಕ್ಲಿಕ್ ಮಾಡಿ
05:45 ಮತ್ತು Properties ಮೇಲೆ ಕ್ಲಿಕ್ ಮಾಡಿ.
05:49 ನಮ್ಮ ಆಪ್ಲೆಟ್, ಒಂದು ಜಾವಾ ಪ್ರೊಜೆಕ್ಟ್ ನಲ್ಲಿದೆ.
05:52 Jar file (ಜಾರ್ ಫೈಲ್) ಅನ್ನು ಸೇರಿಸಲು, ವಿಂಡೋದ ಎಡಭಾಗದಲ್ಲಿರುವ ಮೆನ್ಯುವಿನಿಂದ Packaging ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
05:59 Add Project ನ ಮೇಲೆ ಕ್ಲಿಕ್ ಮಾಡಿ. ಮತ್ತು, Applet class ಅನ್ನು ಹೊಂದಿರುವ ಜಾವಾ ಪ್ರೊಜೆಕ್ಟ್ ಅನ್ನು ಆಯ್ಕೆಮಾಡಿ.
06:05 ಈ ಸಂದರ್ಭದಲ್ಲಿ, ಇದು SampleApplet ಆಗಿದೆ.
06:09 Add Project Jar Files ಮೇಲೆ ಕ್ಲಿಕ್ ಮಾಡಿ.
06:14 'ಆಪ್ಲೆಟ್ ಸೋರ್ಸ್ ಫೈಲ್' ಅನ್ನು ಒಳಗೊಂಡಿರುವ JAR ಫೈಲ್ ಅನ್ನು, ಈಗ ಟೇಬಲ್ ನಲ್ಲಿ ಪಟ್ಟಿಮಾಡಲಾಗಿದೆ.
06:20 'OK' ಮೇಲೆ ಕ್ಲಿಕ್ ಮಾಡಿ.
06:24 ನಾವು ಈಗ 'Projects' ವಿಂಡೋದಲ್ಲಿ, 'HelloSampleApplet' ಪ್ರೊಜೆಕ್ಟ್ ನ ಮೇಲೆ ರೈಟ್-ಕ್ಲಿಕ್ ಮಾಡಿ,
06:31 ಮತ್ತು Clean and Build ಅನ್ನು ಆಯ್ಕೆಮಾಡಿ, ಅದನ್ನು ಬಿಲ್ಡ್ ಮಾಡೋಣ.
06:36 ಈಗ, ಈ ಪ್ರೊಜೆಕ್ಟ್ ಅನ್ನು ಬಿಲ್ಡ್ ಮಾಡಿದಾಗ, ಮೂಲ 'SampleApplet' ಪ್ರೊಜೆಕ್ಟ್ ನಲ್ಲಿ, ಆಪ್ಲೆಟ್ ನ Jar ಫೈಲ್ ತಯಾರಾಗುತ್ತದೆ.
06:45 'Files' ವಿಂಡೋಗೆ ಹೋಗಿ, 'HelloSampleApplet' ಪ್ರೊಜೆಕ್ಟ್ ನೋಡ್ ಅನ್ನು ವಿಸ್ತರಿಸಿ (expand).
06:51 'build' ಹಾಗೂ 'web' ಫೋಲ್ಡರ್ ನ ಅಡಿಯಲ್ಲಿ,
06:54 'jar file' ಅನ್ನು ಸೇರಿಸಿರುವುದನ್ನು ನೀವು ನೋಡಬಹುದು.
06:58 ನಂತರ, ಆಪ್ಲೆಟ್ ಅನ್ನು HTML ಫೈಲ್ ನಲ್ಲಿ ಒಳಗೆ ಸೇರಿಸೋಣ (ಎಂಬೆಡ್).
07:02 'Projects' ವಿಂಡೋಗೆ ಹಿಂದಿರುಗಿ. 'HelloSampleApplet' ಎಂಬ project ನೋಡ್ ನ ಮೇಲೆ ರೈಟ್-ಕ್ಲಿಕ್ ಮಾಡಿ.
07:09 'New' ಅನ್ನು ಆರಿಸಿಕೊಳ್ಳಿ ಮತ್ತು 'HTML' ಫೈಲ್ ಆಯ್ಕೆಯನ್ನು ಆರಿಸಿಕೊಳ್ಳಿ.
07:13 ಈ ಕಾಂಟೆಕ್ಸ್ಚುಅಲ್ ಮೆನ್ಯುನಲ್ಲಿ 'HTML' ಎಂಬ ಆಯ್ಕೆಯು ನಿಮಗೆ ಸಿಗದಿದ್ದರೆ,
07:18 'Other' ನ ಮೇಲೆ ಕ್ಲಿಕ್ ಮಾಡಿ.
07:21 'Categories' ನ ಅಡಿಯಲ್ಲಿ 'Web' ಅನ್ನು ಹಾಗೂ 'File Types' ನ ಅಡಿಯಲ್ಲಿ 'HTML' ಅನ್ನು ಆಯ್ಕೆಮಾಡಿ ಮತ್ತು 'Next' ನ ಮೇಲೆ ಕ್ಲಿಕ್ ಮಾಡಿ.
07:29 ನಿಮ್ಮ Html ಫೈಲ್ ಗೆ ಒಂದು ಹೆಸರನ್ನು ಕೊಡಿ.
07:32 ನಾನು ಫೈಲನ್ನು "MyApplet" ಎಂದು ಹೆಸರಿಸುವೆನು ಮತ್ತು 'Finish' ನ ಮೇಲೆ ಕ್ಲಿಕ್ ಮಾಡುವೆನು.
07:40 ಮುಂದಿನ ಹಂತವು, 'MyApplet dot html' ಫೈಲ್ ನಲ್ಲಿ 'body' ಟ್ಯಾಗ್ ಗಳ ಮಧ್ಯದಲ್ಲಿ, ಆಪ್ಲೆಟ್ ಟ್ಯಾಗ್ ಅನ್ನು ಸೇರಿಸುವುದು ಆಗಿದೆ.
07:48 ನನ್ನ ಹತ್ತಿರ ಇಲ್ಲಿ ಆಪ್ಲೆಟ್ ಕೋಡ್ ಇದೆ.
07:51 ಇದನ್ನು ನಾನು ನನ್ನ ಕ್ಲಿಪ್ ಬೋರ್ಡ್ ನ ಮೇಲೆ ಕಾಪಿ ಮಾಡುತ್ತೇನೆ ಮತ್ತು html ಫೈಲ್ ನಲ್ಲಿ 'body' ಟ್ಯಾಗ್ ಗಳ ಮಧ್ಯದಲ್ಲಿ ಇದನ್ನು ಪೇಸ್ಟ್ ಮಾಡುತ್ತೇನೆ.
08:03 ಮುಂದಿನ ಹಂತವು html ಫೈಲ್ ಅನ್ನು ರನ್ ಮಾಡುವುದಾಗಿದೆ.
08:07 Projects ವಿಂಡೋದಲ್ಲಿ, MyApplet dot html ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Run File ಅನ್ನು ಆಯ್ಕೆಮಾಡಿ.
08:14 ಸರ್ವರ್, IDE ಯ ಡೀಫಾಲ್ಟ್ ಬ್ರೌಸರ್ ನಲ್ಲಿ, html ಫೈಲನ್ನು ತೆರೆಯುತ್ತದೆ (deploy).
08:25 ಈಗ, ಸರ್ವರ್, html ಫೈಲನ್ನು IDE ಯ ಡೀಫಾಲ್ಟ್ ಬ್ರೌಸರ್ ನಲ್ಲಿ ನಿಯೋಜಿಸಿದೆ.
08:30 ನೀವು ಸ್ಕ್ರೀನ್ ನಲ್ಲಿ ಪ್ರದರ್ಶಿತವಾದ ಮೆಸೇಜ್ ಅನ್ನು ನೋಡಬಹುದು.
08:36 ಈಗ ಅಸೈನ್ಮೆಂಟ್ ಅನ್ನು ನೋಡೋಣ -
08:38 IDE ಯಲ್ಲಿ, ಇನ್ನೊಂದು ಸರಳವಾದ ಬ್ಯಾನರ್ ಆಪ್ಲೆಟ್ ಅನ್ನು ಕ್ರಿಯೇಟ್ ಮಾಡಿ.
08:43 ಇದರಲ್ಲಿ ಆಪ್ಲೆಟ್, ಒಂದು ಮೆಸೇಜನ್ನು ಆಪ್ಲೆಟ್ ನ ವಿಂಡೋದಲ್ಲಿ ಸ್ಕ್ರೋಲ್ ಮಾಡಬೇಕು.
08:49 ನಿಮ್ಮ ಆಪ್ಲೆಟ್ ಅನ್ನು ಒಂದು ವೆಬ್-ಅಪ್ಲಿಕೇಶನ್ ನಲ್ಲಿ ಎಂಬೆಡ್ ಮಾಡಿ.
08:52 ಮತ್ತು, ವೆಬ್ ಪ್ರೊಜೆಕ್ಟ್ ಗೆ JAR ಫೈಲ್ ಗಳನ್ನು ಸೇರಿಸಿ ಹಾಗೂ
08:56 ಕೊನೆಯದಾಗಿ HTML ಫೈಲ್ ಅನ್ನು ಕ್ರಿಯೇಟ್ ಮಾಡಿ ಮತ್ತು ರನ್ ಮಾಡಿ.
09:00 ನಾನು ನನ್ನದೇ ಆದ, ಚಲಿಸುವ ಬ್ಯಾನರ್ ನ ಆಪ್ಲೆಟ್ ಅನ್ನು ಕ್ರಿಯೇಟ್ ಮಾಡಿದೇನೆ.
09:04 ನಾನು ಪ್ರೊಜೆಕ್ಟ್ ಅನ್ನು ಓಪನ್ ಮಾಡಿ ಅದನ್ನು ರನ್ ಮಾಡುತ್ತೇನೆ.
09:18 ವಿಂಡೋದಲ್ಲಿ ಸ್ಕ್ರೋಲ್ ಆಗುತ್ತಿರುವ ಒಂದು ಮೆಸೇಜ್ ನೊಂದಿಗೆ ಆಪ್ಲೆಟ್, ಓಪನ್ ಆಗಿರುವುದನ್ನು ನೀವು ನೋಡಬಹುದು.
09:28 ಸ್ಕ್ರೀನ್ ಮೇಲೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ.
09:32 ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
09:36 ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ ನೀವು ವೀಡಿಯೋಅನ್ನು ಡೌನ್ಲೋಡ್ ಮಾಡಿ ನೋಡಬಹುದು.
09:41 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ
09:46 ಮತ್ತು, ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:51 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:

contact@spoken-tutorial.org

09:58 Spoken Tutorial ಪ್ರಕಲ್ಪವು Talk to a Teacher ಎಂಬ ಪ್ರಕಲ್ಪದ ಒಂದು ಭಾಗವಾಗಿದೆ.
10:04 ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
10:11 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:

spoken-tutorial.org/NMEICT-Intro.

10:22 ಈ ಟ್ಯುಟೋರಿಯಲ್, IT for Change ಅವರ ಕೊಡುಗೆಯಾಗಿದೆ.
10:27 ವಂದನೆಗಳು.

Contributors and Content Editors

Sandhya.np14