Difference between revisions of "Moodle-Learning-Management-System/C2/User-Roles-in-Moodle/Kannada"

From Script | Spoken-Tutorial
Jump to: navigation, search
(Created page with "{| border=1 | '''''Time''''' | '''''Narration''''' |- | 00:01 | '''User Roles in Moodle''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿ...")
(No difference)

Revision as of 19:37, 2 November 2019

Time Narration
00:01 User Roles in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು , ಯೂಸರ್ ಗೆ admin role ಅನ್ನು ಅಸೈನ್ ಮಾಡುವುದು,
00:13 course ಗೆ teacher ಅನ್ನು ಅಸೈನ್ ಮಾಡುವುದು ಮತ್ತು course ನಲ್ಲಿ student ಅನ್ನು ಎನ್ರೋಲ್ ಮಾಡುವುದು ಹೇಗೆ ಎಂದು ಕಲಿಯುವೆವು.
00:20 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04,

00:28 XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP,

Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.

00:42 ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.

ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.

00:54 ಈ ಟ್ಯುಟೋರಿಯಲ್ ಅನ್ನು ಕಲಿಯುವವರು , ಅವರ Moodle ವೆಬ್ಸೈಟ್ ನಲ್ಲಿ ಕೆಲವು ಕೋರ್ಸ್ ಗಳನ್ನು ರಚಿಸಿರಬೇಕು.
01:01 ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
01:08 ಬ್ರೌಸರ್ ಗೆ ಬದಲಾಯಿಸಿ ಮತ್ತು ನಿಮ್ಮ ಅಡ್ಮಿನ್ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಗಳನ್ನು ಬಳಸಿ moodle ಸೈಟ್ ಅನ್ನು ತೆರೆಯಿರಿ.
01:16 ಈಗ ನಾವು admin dashboard ನಲ್ಲಿದ್ದೇವೆ.
01:19 ಈಗ ನಾವು Course and Category Management ಪೇಜ್ ಗೆ ಹೋಗೋಣ.
01:24 ನಿಮ್ಮ ಮೂಡಲ್ ಇಂಟರ್ಫೇಸ್ ನಲ್ಲಿ ಈ ಕೋರ್ಸ್ ಗಳು ಇರುವುದನ್ನು ಖಚಿತ ಪಡಿಸಿಕೊಳ್ಳಿ. ಇಲ್ಲವಾದಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಅವುಗಳನ್ನು ರಚಿಸಿಕೊಂಡು ನಂತರ ಟ್ಯುಟೋರಿಯಲ್ ಅನ್ನು ರೆಸ್ಯೂಮ್ ಮಾಡಿ.
01:34 ಈಗ ನಾವು ರಚಿಸಿದ ಎಲ್ಲಾ ಯೂಸರ್ ಗಳನ್ನು ನೋಡೋಣ.
01:38 Site Administration ನ ಮೇಲೆ ಕ್ಲಿಕ್ ಮಾಡಿ.
01:41 ನಂತರ Users ಟ್ಯಾಬ್ ಅನ್ನು ಕ್ಲಿಕ್ ಮಾಡಿ
01:44 Accounts ವಿಭಾಗದಲ್ಲಿ, Browse list of users ಅನ್ನು ಕ್ಲಿಕ್ ಮಾಡಿ.
01:50 ಈಗ ನಾವು ನಾಲ್ಕು ಯೂಸರ್ ಗಳನ್ನು ಹೊಂದಿದ್ದೇವೆ.
01:53 ಈಗ user Priya Sinha ಮೇಲೆ ಕ್ಲಿಕ್ ಮಾಡಿ ಮತ್ತು ಪ್ರೊಫೈಲ್ ಅನ್ನು ಎಡಿಟ್ ಮಾಡಿ.
01:59 User details ವಿಭಾಗದಲ್ಲಿ, Edit Profile ಲಿಂಕ್ ಅನ್ನು ಕ್ಲಿಕ್ ಮಾಡಿ.
02:04 ಕೆಳಕ್ಕೆ ಸ್ಕ್ರೋಲ್ ಮಾಡಿ , Optional ವಿಭಾಗವನ್ನು ಲೊಕೇಟ್ ಮಾಡಿ. ನಂತರ ಅದನ್ನು ವಿಸ್ತರಿಸಲು ಅದರ ಮೇಲೆ ಕ್ಲಿಕ್ ಮಾಡಿ.
02:11 ಗಮನಿಸಿ, Institution, Department, Phone ಮತ್ತು Address ಫೀಲ್ಡ್ ಗಳು ತುಂಬಿವೆ. ಇವು ನಾವು

CSV file ನಲ್ಲಿ ನಮೂದಿಸಿದ ಫೀಲ್ಡ್ ಗಳಾಗಿವೆ.

02:23 ಈಗ ನಾವು ಯೂಸರ್ ಗಳ ಪಟ್ಟಿಗೆ ಹಿಂದಿರುಗೋಣ. ಅದನ್ನು ಮಾಡಲು, Site Administration -> Users -> Browse list of users ಅನ್ನು ಕ್ಲಿಕ್ ಮಾಡಿ.
02:33 ಈಗ user, System Admin2 ಅನ್ನು administrator role ಆಗಿ ನಿಯೋಜಿಸೋಣ.
02:39 ಎಡ ಮೆನುವಿನಲ್ಲಿ , Site Administration ಕ್ಲಿಕ್ ಮಾಡಿ ಮತ್ತು ನಂತರ Users ಟ್ಯಾಬ್ ಅನ್ನು ಕ್ಲಿಕ್ ಮಾಡಿ.
02:46 Permissions ವಿಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು Site Administrators ಅನ್ನು ಕ್ಲಿಕ್ ಮಾಡಿ.
02:52 ಇಲ್ಲಿ ಎರಡು ಜೊತೆ ಯೂಸರ್ ಗಳಿವೆ.

ಮೊದಲನೆಯದು ಪ್ರಸ್ತುತ site administrator ಗಳ ಹೆಸರನ್ನು ಹೊಂದಿದೆ ಮತ್ತು ಎರಡನೆಯದು ಉಳಿದ ಎಲ್ಲಾ ಯೂಸರ್ ಗಳ ಪಟ್ಟಿಯನ್ನು ಹೊಂದಿದೆ.

03:05 ಈ ಎರಡು ಪಟ್ಟಿಗಳ ಮಧ್ಯದಲ್ಲಿ ವಿವಿಧ ಕ್ರಿಯೆಗಳನ್ನು ಮಾಡಲು ಅಗತ್ಯವಿರುವ ಬಟನ್ ಗಳಿವೆ.
03:11 Users ಬಾಕ್ಸ್ ನಿಂದ , System Admin2 user ಅನ್ನು ಕ್ಲಿಕ್ ಮಾಡೋಣ.
03:17 ಇಲ್ಲಿ ತುಂಬಾ ಯೂಸರ್ ಗಳಿದ್ದರೆ, ಹುಡುಕಲು Users ಬಾಕ್ಸ್ ನ ಕೆಳಗೆ ಇರುವ Search ಬಾಕ್ಸ್ ಅನ್ನು ಬಳಸಿ. ಮತ್ತು ನಂತರ Add ಬಟನ್ ಅನ್ನು ಕ್ಲಿಕ್ ಮಾಡಿ.
03:26 Confirm ಬಾಕ್ಸ್ ನಲ್ಲಿ, Continue ಬಟನ್ ಅನ್ನು ಕ್ಲಿಕ್ ಮಾಡಿ.
03:30 ಈಗ ಇಲ್ಲಿ ಎರಡು ಅಡ್ಮಿನ್ ಯೂಸರ್ ಗಳಿವೆ. ನಾವು ಎಷ್ಟು ಬೇಕಾದರೂ ಅಡ್ಮಿನ್ ಯೂಸರ್ ಗಳನ್ನು ಹೊಂದಿರಬಹುದು.
03:38 ಆದಾಗ್ಯೂ, Main administrator (ಮೇನ್ ಅಡ್ಮಿನಿಸ್ಟ್ರೇಟರ್ ) ಮಾತ್ರ ಒಬ್ಬರೇ ಆಗಿರುತ್ತಾರೆ. ಮೇನ್ ಅಡ್ಮಿನಿಸ್ಟ್ರೇಟರ್ ಅನ್ನು ಸಿಸ್ಟಮ್ ನಿಂದ ತೆಗೆಯಲು ಸಾಧ್ಯವಿಲ್ಲ.
03:48 ಈಗ ಕ್ಯಾಲ್ಕ್ಯುಲಸ್ ಕೋರ್ಸ್ ಗೆ ರೆಬೆಕಾ ರೇಮಂಡ್ ಅವರನ್ನು ಟೀಚರ್ ಆಗಿ ನಿಯೋಜಿಸೋಣ.
03:55 ಇದನ್ನು ಮಾಡಲು, ಇಲ್ಲಿ ತೋರಿಸಿರುವಂತೆ, Course and category management ಪೇಜ್ ಗೆ ಹೋಗಿ.
04:02 1st Year Maths ಉಪವಿಭಾಗದಡಿಯಲ್ಲಿರುವ ಕೋರ್ಸ್ ಗಳನ್ನು ನೋಡಲು , ಅದರ ಮೇಲೆ ಕ್ಲಿಕ್ ಮಾಡಿ.
04:09 Calculus ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ. ಈ ಕೋರ್ಸ್ ನ ವಿವರಗಳನ್ನು ನೋಡಲು ಕೆಳಕ್ಕೆ ಸ್ಕ್ರೋಲ್ ಮಾಡಿ.

Enrolled Users ಅನ್ನು ಕ್ಲಿಕ್ ಮಾಡಿ.

04:19 ನಾವು ಯೂಸರ್ ಪ್ರಿಯಾ ಸಿನ್ಹಾ ಅವರು ಈ ಕೋರ್ಸ್ ಗೆ ಸೇರ್ಪಡೆಯಾಗಿರುವುದನ್ನು ನೋಡಬಹುದು.
04:25 ನಾವು ಇದನ್ನು upload user CSV ಯ ಮೂಲಕ ಮಾಡಿದ್ದೇವೆ.
04:29 ಮೂಡಲ್ ನಲ್ಲಿ ಟೀಚರ್ ಅನ್ನು ಒಳಗೊಂಡಂತೆ ಎಲ್ಲರೂ ಕೋರ್ಸ್ ಗೆ ಸೇರ್ಪಡೆಯಾಗಿರಲೇ ಬೇಕು.
04:35 ಅವರಿಗೆ ನಿಯೋಜಿಸುವ ಹೊಸ ರೋಲ್ ಕೋರ್ಸ್ ನಲ್ಲಿರುವ ಪ್ರಸ್ತುತ ರೋಲ್ ಅನ್ನು ಅವಲಂಭಿಸಿರುವುದು.
04:41 ಮೇಲೆ ಅಥವಾ ಕೆಳ ಬಲಭಾಗದಲ್ಲಿರುವ Enrol users ಬಟನ್ ಅನ್ನು ಕ್ಲಿಕ್ ಮಾಡಿ.
04:48 ಒಂದು ಪಾಪ್ ಅಪ್ ವಿಂಡೋ ತೆರೆದುಕೊಳ್ಳುತ್ತದೆ.
04:51 ಇದು Assign roles ಗಾಗಿ ಒಂದು ಡ್ರಾಪ್ ಡೌನ್ ಅನ್ನು , Enrolment options ಗಾಗಿ ಫೀಲ್ಡ್ ಅನ್ನು ಮತ್ತು Search ಬಟನ್ ಅನ್ನು ಹೊಂದಿದೆ.
05:00 ನಾವು ಇಲ್ಲಿ, ಈ ಕೋರ್ಸ್ ಗೆ ಪ್ರಸ್ತುತವಾಗಿ ನಿಯೋಜಿಸದೇ ಇರುವ ಎಲ್ಲ ಯೂಸರ್ ಗಳ ಪಟ್ಟಿಯನ್ನು ಕಾಣಬಹುದು.
05:06 Assign roles ಡ್ರಾಪ್ ಡೌನ್ ನಲ್ಲಿ , Teacher ಅನ್ನು ಆಯ್ಕೆ ಮಾಡಿ.
05:11 ನಂತರ, Rebecca Raymond ನ ಮುಂದಿರುವ Enrol ಬಟನ್ ಅನ್ನು ಕ್ಲಿಕ್ ಮಾಡಿ.
05:16 ಕೊನೆಯಲ್ಲಿ, ಪೇಜ್ ನ ಕೆಳಭಾಗದಲ್ಲಿರುವ Finish Enrolling users ಬಟನ್ ಅನ್ನು ಕ್ಲಿಕ್ ಮಾಡಿ.
05:24 ಇದೇ ರೀತಿಯಲ್ಲಿಯೇ , ಸ್ಟುಡೆಂಟ್ ಗಳನ್ನು ಕೂಡ ಕೋರ್ಸ್ ಗೆ ನಿಯೋಜಿಸಬಹುದು.
05:28 Rebecca Raymond ಅವರನ್ನು Teacher role ನಿಂದ ಅನ್-ಅಸೈನ್ ಮಾಡಲು , Roles column ನಲ್ಲಿರುವ Trash ಐಕಾನ್ ನ ಮೇಲೆ ಕ್ಲಿಕ್ ಮಾಡಿ.
05:36 Confirm Role Change ಪಾಪ್ ಅಪ್ ಬಾಕ್ಸ್ ನಲ್ಲಿ, Remove ಬಟನ್ ಅನ್ನು ಕ್ಲಿಕ್ ಮಾಡಿ.
05:42 ಇಲ್ಲಿರುವ Assign role ಐಕಾನ್ ಅನ್ನು ಈಗಾಗಲೇ ಸೇರ್ಪಡೆಯಾಗಿರುವ ಯೂಸರ್ ಗಳಿಗೆ ರೋಲ್ ಅನ್ನು ನಿಯೋಜಿಸಲು ಸಹ ಬಳಸಬಹುದು.
05:50 ಇದನ್ನು ಕ್ಲಿಕ್ ಮಾಡಿದರೆ ಎಲ್ಲಾ ರೋಲ್ ಗಳ ಹೆಸರುಗಳನ್ನೊಳಗೊಂಡ ಒಂದು ಚಿಕ್ಕ ಪಾಪ್ ಅಪ್ ವಿಂಡೋ ತೆರೆದುಕೊಳ್ಳುತ್ತದೆ.
05:56 Rebecca Raymond ಅವರಿಗೆ ಟೀಚರ್ ರೋಲ್ ಅನ್ನು ನಿಯೋಜಿಸಲು, Teacher ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಬಾಕ್ಸ್ ತಂತಾನೆ ಮುಚ್ಚಿಕೊಳ್ಳುತ್ತದೆ.
06:04 ಬಲ ಭಾಗದಲ್ಲಿರುವ trash ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಯೂಸರ್ ಗಳನ್ನು ಕೋರ್ಸ್ ನಿಂದ ಅನ್-ಎನ್ರೋಲ್ ಮಾಡಬಹುದು.
06:11 ಯೂಸರ್ ಎನ್ರೋಲ್ಮೆಂಟ್ ವಿವರಗಳನ್ನು ಬದಲಿಸಲು, ಬಲಭಾಗದಲ್ಲಿ gear ಐಕಾನ್ ಇದೆ. ಅದನ್ನು ಕ್ಲಿಕ್ ಮಾಡಿ.
06:20 ಇದರಲ್ಲಿ ಯೂಸರ್ ಅನ್ನು ಸಸ್ಪೆಂಡ್ ಮಾಡಲು ಮತ್ತು ಎನ್ರೋಲ್ಮೆಂಟ್ ಪ್ರಾರಂಭದ ಮತ್ತು ಕೊನೆಯ ದಿನಾಂಕಗಳನ್ನು ಬದಲಿಸಲು ಆಯ್ಕೆಗಳಿವೆ.
06:28 ಎನ್ರೋಲ್ಮೆಂಟ್ ಪೇಜ್ ಗೆ ಹಿಂದಿರುಗಲು, Cancel ಬಟನ್ ನ ಮೇಲೆ ಕ್ಲಿಕ್ ಮಾಡಿ.
06:33 ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.

ಸಂಕ್ಷಿಪ್ತವಾಗಿ,.

06:39 ಈ ಟ್ಯುಟೋರಿಯಲ್ ನಲ್ಲಿ ನಾವು,

ಯೂಸರ್ ಗೆ admin role ಅನ್ನು ಅಸೈನ್ ಮಾಡುವುದು, course ಗೆ teacher ಅನ್ನು ಅಸೈನ್ ಮಾಡುವುದು ಮತ್ತು course ನಲ್ಲಿ student ಅನ್ನು ಎನ್ರೋಲ್ ಮಾಡುವುದು ಹೇಗೆ ಎಂದು ಕಲಿತಿದ್ದೇವೆ.

06:52 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:

ರಬೆಕಾ ರೇಮೆಂಡ್ ಅವರನ್ನು Linear Algebra course ಗೆ teacher ಆಗಿ ಅಸೈನ್ ಮಾಡಿ.

07:00 ಪ್ರಿಯಾ ಸಿನ್ಹಾ ಅವರನ್ನು Linear Algebra course ಗೆ student ಆಗಿ ಅಸೈನ್ ಮಾಡಿ.
07:06 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
07:14 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
07:22 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
07:26 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
07:38 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14