Difference between revisions of "Moodle-Learning-Management-System/C2/Plugins-in-Moodle/Kannada"

From Script | Spoken-Tutorial
Jump to: navigation, search
Line 33: Line 33:
 
|-  
 
|-  
 
| 00:59
 
| 00:59
|  ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
+
|  ಇಲ್ಲದಿದ್ದರೆ, ಈ ವೆಬ್ಸೈಟ್ ನಲ್ಲಿ ಹಿಂದಿನ '''Moodle''' ಟ್ಯುಟೋರಿಯಲ್ ಗಳನ್ನು ನೋಡಿ.
 
|-  
 
|-  
 
| 01:06
 
| 01:06
 
|  '''plugins'''(ಪ್ಲಗ್ ಇನ್ಸ್) ಎಂದರೇನು?  
 
|  '''plugins'''(ಪ್ಲಗ್ ಇನ್ಸ್) ಎಂದರೇನು?  
'''Plugins''' ಗಳು ಇರುವ ಸಾಫ್ಟ್ವೇರ್ ಗೆ ವೈಶಿಷ್ಟ್ಯಗಳನ್ನು ಸೇರಿಸುವ ಆಡ್ ಆನ್ ಟೂಲ್ ಗಳಾಗಿವೆ.  
+
'''Plugins''' ಗಳು ಅಸ್ತಿತ್ವದಲ್ಲಿರುವ ಸಾಫ್ಟ್ವೇರ್ ಗೆ ವೈಶಿಷ್ಟ್ಯಗಳನ್ನು ಸೇರಿಸುವ ಆಡ್ ಆನ್ ಟೂಲ್ ಗಳಾಗಿವೆ.  
 
|-  
 
|-  
 
| 01:15
 
| 01:15
| ಮೂಡಲ್ ನಲ್ಲಿ ಟೀಚರ್ ಮತ್ತು ಸೈಟ್ ಅಡ್ಮಿನಿಸ್ಟ್ರೇಟರ್ ಗಳಿಗಾಗಿ ಹಲವಾರು ಉಪಯುಕ್ತ ಪ್ಲಗ್-ಇನ್ಸ್ ಗಳಿವೆ.  
+
| ಮೂಡಲ್ ನಲ್ಲಿ ಟೀಚರ್ ಮತ್ತು ಸೈಟ್ ಅಡ್ಮಿನಿಸ್ಟ್ರೇಟರ್ ಗಳಿಗಾಗಿ ಹಲವಾರು ಉಪಯುಕ್ತ ಪ್ಲಗ್-ಇನ್ ಗಳಿವೆ.  
 
|-  
 
|-  
 
| 01:22
 
| 01:22
Line 55: Line 55:
 
|-  
 
|-  
 
| 01:46
 
| 01:46
| ಬಲಗಡೆ ಮೇಲ್ಭಾಗದಲ್ಲಿ ಕೆಲವು ಸಂಖ್ಯೆಗಳು ಕಾಣಿಸುತ್ತವೆ. ಅದರ ಕೆಳಗಿರುವ ಅಕ್ಷರಗಳು ಅವು ಏನೆಂದು ವಿವರಿಸುತ್ತವೆ.  
+
| ಬಲಗಡೆ ಮೇಲ್ಭಾಗದಲ್ಲಿ ಕೆಲವು ಸಂಖ್ಯೆಗಳು ಕಾಣಿಸುತ್ತವೆ. ಅದರ ಕೆಳಗಿರುವ ಪಠ್ಯ(ಟೆಕ್ಸ್ಟ್) ಅವು ಏನೆಂದು ವಿವರಿಸುತ್ತವೆ.  
 
|-  
 
|-  
 
| 01:53
 
| 01:53

Revision as of 20:41, 5 November 2019

Time Narration
00:01 Installing plugins in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು : Plugins ನ ಕುರಿತು ಮತ್ತು ಪ್ಲಗ್ ಇನ್ ಅನ್ನು ಮೂಡಲ್ ನಲ್ಲಿ ಇನ್ಸ್ಟಾಲ್ ಮಾಡುವುದು ಹೇಗೆ ಎನ್ನುವುದರ ಕುರಿತು ಕಲಿಯುವೆವು.
00:15 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04,

00:23 XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP,
00:31 Moodle 3.3
00:33 ಮತ್ತು Firefox ವೆಬ್-ಬ್ರೌಸರ್ ಮತ್ತು ಕಾರ್ಯನಿರ್ವಹಿಸುತ್ತಿರುವ ಇಂಟರ್ನೆಟ್ ಸಂಪರ್ಕವನ್ನು ಬಳಸಿದ್ದೇನೆ.
00:40 ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
00:44 ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ
00:52 ಈ ಟ್ಯುಟೋರಿಯಲ್ ಅನ್ನು ಕಲಿಯುವವರು , ಅವರ Moodle ವೆಬ್ಸೈಟ್ ನಲ್ಲಿ ಕೆಲವು ಕೋರ್ಸ್ ಗಳನ್ನು ರಚಿಸಿರಬೇಕು
00:59 ಇಲ್ಲದಿದ್ದರೆ, ಈ ವೆಬ್ಸೈಟ್ ನಲ್ಲಿ ಹಿಂದಿನ Moodle ಟ್ಯುಟೋರಿಯಲ್ ಗಳನ್ನು ನೋಡಿ.
01:06 plugins(ಪ್ಲಗ್ ಇನ್ಸ್) ಎಂದರೇನು?

Plugins ಗಳು ಅಸ್ತಿತ್ವದಲ್ಲಿರುವ ಸಾಫ್ಟ್ವೇರ್ ಗೆ ವೈಶಿಷ್ಟ್ಯಗಳನ್ನು ಸೇರಿಸುವ ಆಡ್ ಆನ್ ಟೂಲ್ ಗಳಾಗಿವೆ.

01:15 ಮೂಡಲ್ ನಲ್ಲಿ ಟೀಚರ್ ಮತ್ತು ಸೈಟ್ ಅಡ್ಮಿನಿಸ್ಟ್ರೇಟರ್ ಗಳಿಗಾಗಿ ಹಲವಾರು ಉಪಯುಕ್ತ ಪ್ಲಗ್-ಇನ್ ಗಳಿವೆ.
01:22 ಇವುಗಳು plugins ಡೈರಕ್ಟರಿಯಲ್ಲಿ ಲಭ್ಯವಿದೆ.
01:26 ಬ್ರೌಸರ್ ಅನ್ನು ತೆರೆದು, https://moodle.org/plugins ಎಂದು ಟೈಪ್ ಮಾಡಿ.
01:36 ಈ ಪೇಜ್ ನಲ್ಲಿ Purpose ಮತ್ತು Plugin Type ಗಳನ್ನು ಆಧರಿಸಿ ಫಿಲ್ಟರ್ ಗಳಿವೆ.
01:41 ಇಲ್ಲಿ ಕಸ್ಟಮ್ ಸರ್ಚ್ ಗಾಗಿ ಒಂದು search ಬಾಕ್ಸ್ ಇದೆ.
01:46 ಬಲಗಡೆ ಮೇಲ್ಭಾಗದಲ್ಲಿ ಕೆಲವು ಸಂಖ್ಯೆಗಳು ಕಾಣಿಸುತ್ತವೆ. ಅದರ ಕೆಳಗಿರುವ ಪಠ್ಯ(ಟೆಕ್ಸ್ಟ್) ಅವು ಏನೆಂದು ವಿವರಿಸುತ್ತವೆ.
01:53 ಈ ಟ್ಯುಟೋರಿಯಲ್ ನಲ್ಲಿ ನಾವು ಅಟೆಂಡೆನ್ಸ್ ಪ್ಲಗ್ ಇನ್ ಅನ್ನು ಇನ್ಸ್ಟಾಲ್ ಮಾಡುವುದನ್ನು ಕಲಿಯುವೆವು.
01:59 ಸರ್ಚ್ ಬಾಕ್ಸ್ ನಲ್ಲಿ attendance ಎಂದು ಟೈಪ್ ಮಾಡಿ , Search ಬಟನ್ ನ ಮೇಲೆ ಕ್ಲಿಕ್ ಮಾಡಿ.
02:05 ಇಲ್ಲಿ ನಾವು ಅವುಗಳ ಟೈಟಲ್ ನಲ್ಲಾಗಲೀ ಅಥವಾ ವಿವರಣೆಯಲ್ಲಾಗಲಿ ಈ ಕೀವರ್ಡ್ ಅನ್ನು ಹೊಂದಿರುವ ಅನೇಕ ಪ್ಲಗಿನ್ ಗಳನ್ನು ಕಾಣುವೆವು.
02:13 Attendance plugin ನ ಮೇಲೆ ಕ್ಲಿಕ್ ಮಾಡಿ.

ವಿವರಣೆಯಲ್ಲಿ “A plugin that allows an attendance log to be kept” ಎಂದು ಇರುವುದನ್ನು ಓದಬಹುದು.

02:22 ನೀವು ನಾನು ಹೇಳಿದ ಪ್ಲಗ್ ಇನ್ ಅನ್ನೇ ಕ್ಲಿಕ್ ಮಾಡಿರುವುದನ್ನು ಪರೀಕ್ಷಿಸಲು ಹೊಸ ಪೇಜ್ ನಲ್ಲಿರುವ ಟೈಟಲ್ ಅನ್ನು ನೋಡಿ.
02:30 ಅದರ ಟೈಟಲ್ Activities ಕೋಲನ್ Attendance ಎಂದಿರಬೇಕು.
02:36 ಈ ಪ್ಲಗ್ ಇನ್ ಟೀಚರ್ ಗೆ ಮೂಡಲ್ ನಲ್ಲಿ ಅಟೆಂಡೆನ್ಸ್ ಲಾಗ್ ಅನ್ನು ಇಡಲು ಅನುಮತಿಸುತ್ತದೆ.
02:42 ಹೊಸ ಪ್ಲಗ್ ಇನ್ ಅನ್ನು ಇನ್ಸ್ಟಾಲ್ ಮಾಡುವ ಮೊದಲು ನೀವು ಬಳಸುತ್ತಿರುವ ಮೂಡಲ್ ನ ಆವೃತ್ತಿಯಲ್ಲಿ ಲಭ್ಯವಿದೆಯೇ ಎಂದು ಪರೀಕ್ಷಿಸಿಕೊಳ್ಳಿ.
02:50 Versions ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಅದು ಬೆಂಬಲಿಸುವ ಆವೃತ್ತಿ ಯನ್ನು ಪರೀಕ್ಷಿಸಬಹುದು.
02:56 ಈಗ ಅದು Moodle 3.3 ಆವೃತ್ತಿಯಲ್ಲಿ ಲಭ್ಯವಿದೆಯೇ ಎಂದು ನೋಡಲು ಕೆಳಕ್ಕೆ ಸ್ಕ್ರೋಲ್ ಮಾಡಿ.
03:03 Description ಲಿಂಕ್ ಗೆ ಹಿಂದಿರುಗಿ.
03:06 ಪ್ಲಗ್ ಇನ್ ನಿಮ್ಮ ಉದ್ದೇಶವನ್ನು ಪೂರೈಸುವುದೇ ಎಂದು ಅರ್ಥಮಾಡಿಕೊಳ್ಳಲು ಈ ವಿವರವನ್ನು ಓದಿ.
03:12 ಇದು ಪ್ಲಗ್ ಇನ್ ಗಳನ್ನು ಬಳಸಲು ಬೇಕಾದ ಅವಶ್ಯಕತೆಗಳು ಮತ್ತು ಬಳಸುವ ಸೂಚನೆಗಳನ್ನು ಕೂಡ ಉಲ್ಲೇಖಿಸುತ್ತದೆ.
03:20 ಇದನ್ನು ಅನೇಕ ವೆಬ್ಸೈಟ್ ಗಳಲ್ಲಿ ಬಳಸಿರುವುದನ್ನು ಮತ್ತು ಇದು ಅನೇಕ ಫ್ಯಾನ್ಸ್ (ಅಭಿಮಾನಿ) ಗಳನ್ನು ಹೊಂದಿರುವುದನ್ನು ಇಲ್ಲಿ ನೋಡಬಹುದು.
03:27 ಇದು ಪ್ಲಗ್ ಇನ್ ಗಳು ಉಪಯುಕ್ತ ಮತ್ತು ಬಳಸಲು ಸುಲಭ ಎಂಬುದನ್ನು ಪ್ರಮಾಣೀಕರಿಸುವುದು.
03:33 ನೀವು ಇನ್ನೂ ಕೆಳಕ್ಕೆ ಸ್ಕ್ರೋಲ್ ಮಾಡಿ ಈ ಪ್ಲಗ್ ಇನ್ ಕುರಿತು ಬೇರೆಯವರು ಕೇಳಿದ ಪ್ರಶ್ನೆಗಳನ್ನು ಸಹ ನೋಡಬಹುದು.
03:40 ನೀವು ಪ್ಲಗ್ ಇನ್ ಅನ್ನು ಇನ್ಸ್ಟಾಲ್ ಮಾಡಲು ಒಪ್ಪಿದರೆ, Versions ಲಿಂಕ್ ಗೆ ಹಿಂದಿರುಗಿ.
03:46 Download ಬಟನ್ ನ ಮೇಲೆ ಕ್ಲಿಕ್ ಮಾಡಿ.
03:49 ನಿಮ್ಮ ಲೋಕಲ್ ಸಿಸ್ಟಮ್ ನಲ್ಲಿ ಫೈಲ್ ಅನ್ನು ಸೇವ್ ಮಾಡಿ. ನಾನು ಇದನ್ನು ಈಗಾಗಲೇ ನನ್ನ ಸಿಸ್ಟಮ್ ನಲ್ಲಿ ಸೇವ್ ಮಾಡಿದ್ದೇನೆ.
03:55 ಹೊಸ ಟ್ಯಾಬ್ ಅನ್ನು ತೆರೆದು, Moodle ವೆಬ್ಸೈಟ್ ನಲ್ಲಿ site administrator ಆಗಿ ಲಾಗಿನ್ ಆಗಿ.
04:02 XAMPP service ರನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ.
04:06 ಈಗ ನಾವು ಅಡ್ಮಿನ್ ಡ್ಯಾಶ್ ಬೋರ್ಡ್ ನಲ್ಲಿದ್ದೇವೆ.
04:09 ಎಡಭಾಗದಲ್ಲಿರುವ Site Administration ಅನ್ನು ಕ್ಲಿಕ್ ಮಾಡಿ.
04:13 ನಂತರ Plugins ಟ್ಯಾಬ್ ಅನ್ನು ಕ್ಲಿಕ್ ಮಾಡಿ ಮತ್ತು Install plugins ಲಿಂಕ್ ಅನ್ನು ಕ್ಲಿಕ್ ಮಾಡಿ.
04:20 ಪ್ಲಗ್ ಇನ್ ಗಳನ್ನು ಇನ್ಸ್ಟಾಲ್ ಮಾಡಲು ಎರಡು ವಿಧಾನಗಳಿವೆ: -Moodle plugins directory ಮೂಲಕ ಮತ್ತು ಇನ್ನೊಂದು zip ಅಪ್ಲೋಡ್ ಮೂಲಕ ಮಾಡಬಹುದು.
04:29 ನಾವು ಎರಡನೆಯ ವಿಧಾನವನ್ನು ಅನುಸರಿಸುವೆವು.
04:33 ಮೊದಲನೆ ವಿಧಾನಕ್ಕೆ moodle.org ನಲ್ಲಿ ಅಕೌಂಟ್ ಅನ್ನು ಹೊಂದಿರಬೇಕು.ಹಾಗಾಗಿ ನಾನು ಅದನ್ನು ಬಿಡುವೆನು.
04:41 Zip package ನ ಮುಂದೆ ಇರುವ Choose a file ಬಟನ್ ಅನ್ನು ಕ್ಲಿಕ್ ಮಾಡಿ.
04:46 ಅದನ್ನು ಆಯ್ಕೆ ಮಾಡಿರದೇ ಇದ್ದಲ್ಲಿ, ಎಡಭಾಗದಲ್ಲಿರುವ Upload a file ಲಿಂಕ್ ಅನ್ನು ಕ್ಲಿಕ್ ಮಾಡಿ.
04:52 Browse ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಮತ್ತು ನೀವು ಪ್ಲಗ್ ಇನ್ ಫೈಲ್ ಅನ್ನು ಸೇವ್ ಮಾಡಿದ ಜಾಗವನ್ನು ಬ್ರೌಸ್ ಮಾಡಿ.
04:59 ನಾವು ಮೊದಲೇ ಡೌನ್ಲೋಡ್ ಮಾಡಿದ ಝಿಪ್ ಫೈಲ್ ಅನ್ನು ಆಯ್ಕೆ ಮಾಡಿ.
05:03 ನಂತರ ಈ ವಿಂಡೋ ದ ಕೆಳಭಾಗದಲ್ಲಿರುವ Upload this file ಬಟನ್ ಅನ್ನು ಕ್ಲಿಕ್ ಮಾಡಿ.
05:08 ಈಗ ಕೆಳಗಡೆ ಇರುವ Install plugin from the ZIP file ಬಟನ್ ಅನ್ನು ಕ್ಲಿಕ್ ಮಾಡಿ.
05:14 ಈ ಪೇಜ್ ನಲ್ಲಿ ನಿಮಗೆ ಎರರ್(ದೋಷ) ಎದುರಾಗಬಹುದು.
05:18 ಎರರ್ ಮೆಸೇಜ್ Validating mod_attendance ... Error ಎಂದು ಹೇಳುತ್ತದೆ.
05:24 Cancel ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
05:27 ಇದು ಈ ಡೈರೆಕ್ಟರಿ ಗೆ write permission ಕೊಡಬೇಕೆಂದು ಸೂಚಿಸುತ್ತದೆ.
05:33 ಹಾಗಾಗಿ Control + Alt + T ಕೀಲಿಗಳನ್ನು ಒತ್ತಿ, ಟರ್ಮಿನಲ್ ಅನ್ನು ತೆರೆಯಿರಿ.
05:39 sudo space chmod space 777 space slash opt slash lampp slash htdocs slash moodle slash mod slash ಎಂದು ಟೈಪ್ ಮಾಡಿ.
05:56 ಕೇಳಿದರೆ ಅಡ್ಮಿನಿಸ್ಟ್ರೇಟಿವ್ ಪಾಸ್ವರ್ಡ್ ಅನ್ನು ನಮೂದಿಸಿ ಮತ್ತು Enter ಅನ್ನು ಒತ್ತಿ.
06:02 ಈಗ ಬ್ರೌಸರ್ ಗೆ ಹಿಂದಿರುಗಿ ಮತ್ತು ಆ ಕ್ರಿಯೆಯನ್ನು ಪುನರಾವರ್ತಿಸಿ.
06:09 ಈ ಬಾರಿ ನಾವು ವ್ಯಾಲಿಡೇಷನ್ ಯಶಸ್ವಿಯಾಗಿದೆ ಎಂದು ಸಂದೇಶವನ್ನು ಕೊಡುವುದು. Continue ಬಟನ್ ಅನ್ನು ಕ್ಲಿಕ್ ಮಾಡಿ.
06:17 ಗಮನಿಸಿ. ಈ ಕ್ರಿಯೆಯು ನೀವು ಎರರ್ ಅನ್ನು ಪಡೆದರೆ ಮಾತ್ರ ಮಾಡಬೇಕಾದ ಹೆಚ್ಚುವರಿ ಹಂತವಾಗಿದೆ.
06:25 ಈಗ, ಮೂಡಲ್ ನ ಈ ಆವೃತ್ತಿಯಲ್ಲಿ ಪ್ಲಗ್ ಇನ್ ಡೌನ್ಲೋಡ್ ಆಗಿದೆ ಮತ್ತು ವ್ಯಾಲಿಡೇಟ್ ಮಾಡಲಾಗಿದೆ.
06:31 ನಂತರ, ನಮಗೆ Plugins check ಎಂಬ ಹೆಸರಿನ ಪೇಜ್ ಸಿಗುವುದು.
06:36 ಇಲ್ಲಿ ಹಸಿರು ಬಣ್ಣದಲ್ಲಿರುವ , To be installed ಎಂದು ತೋರಿಸುವ ಸ್ಟೇಟಸ್ ಅನ್ನು ಗಮನಿಸಿ.
06:43 Upgrade Moodle database now ಬಟನ್ ಅನ್ನು ಕ್ಲಿಕ್ ಮಾಡಿ.
06:47 ಈ ಹಂತ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು. ದಯವಿಟ್ಟು ಬ್ರೌಸರ್ ವಿಂಡೋ ವನ್ನು ರಿಫ್ರೆಶ್ ಮಾಡುವುದಾಗಲೀ , ಕ್ಲೋಸ್ ಮಾಡುವುದಾಗಲಿ ಬೇಡ.
06:53 ನಿಮಗೆ ಯಶಸ್ವಿಯಾದ ಸಂದೇಶ ಕಾಣಿಸಿದಾಗ, Continue ಬಟನ್ ಅನ್ನು ಕ್ಲಿಕ್ ಮಾಡಿ.
06:58 ಈಗ ನಾವು New settings ಪೇಜ್ ನಲ್ಲಿದ್ದೇವೆ.
07:02 ಈಗ ಏನಾದರೂ ಬದಲಿಸಬೇಕೆ ಎಂದು ನೋಡಲು, ಎಲ್ಲ ಸೆಟ್ಟಿಂಗ್ ಗಳನ್ನು ಗಮನವಿಟ್ಟು ನೋಡಿ. ನಾನು ಏನನ್ನೂ ಬದಲಿಸಲು ಇಚ್ಛಿಸುವುದಿಲ್ಲ.
07:10 ಪರೀಕ್ಷಿಸಿದ ನಂತರ, ಪೇಜ್ ನ ಕೆಳ ಭಾಗದಲ್ಲಿರುವ Save Changes ಬಟನ್ ಅನ್ನು ಕ್ಲಿಕ್ ಮಾಡಿ.
07:16 ಇಲ್ಲಿ ನೀವು ಕೆಲವು ಎಚ್ಚರಿಕೆ ಸಂದೇಶಗಳನ್ನು ನೋಡುವಿರಿ ಮತ್ತು ಅವನ್ನು ನೀವು ಇಲ್ಲಿ ನಿರ್ಲಕ್ಷಿಸಬಹುದು.
07:21 ಪ್ಲಗ್ ಇನ್ ಯಶಸ್ವಿಯಾಗಿ ಇನ್ಸ್ಟಾಲ್ ಆಗಿದೆಯೆ ಎಂದು ನೋಡಲು, ಎಡ ಪ್ಯಾನಲ್ ನಲ್ಲಿರುವ Site Administration ಅನ್ನು ಕ್ಲಿಕ್ ಮಾಡಿ.
07:29 ನಂತರ Plugins ಟ್ಯಾಬ್ ಅನ್ನು ಕ್ಲಿಕ್ ಮಾಡಿ, Plugins overview ಅನ್ನು ಕ್ಲಿಕ್ ಮಾಡಿ.
07:36 ಇದು ಪ್ಲಗ್ ಇನ್ ಗಳ ಪಟ್ಟಿಯನ್ನು ತೋರಿಸುವುದು.
07:40 ಇದು ಡಿಫಾಲ್ಟ್ ಆಗಿ ಇನ್ಸ್ಟಾಲ್ ಆಗಿರುವ ಮತ್ತು ನೀವು ಇನ್ಸ್ಟಾಲ್ ಮಾಡಿದ ಪ್ಲಗ್ ಇನ್ ಗಳನ್ನು ಹೊಂದಿರುತ್ತದೆ.
07:46 ನನ್ನ ಸೈಟ್ ನಲ್ಲಿ ಇದು ಇಷ್ಟು ಪ್ಲಗ್ ಇನ್ ಗಳು ಇನ್ಸ್ಟಾಲ್ ಆಗಿರುವುದನ್ನು ತೋರಿಸುತ್ತಿದೆ.
07:51 ಹೆಚ್ಚುವರಿಯಾಗಿ ಇನ್ಸ್ಟಾಲ್ ಆಗಿರುವ ಪ್ಲಗ್ ಇನ್ ಗಳನ್ನು ನೋದಲು, ಟೇಬಲ್ ನ ಮೇಲಿರುವ Additional plugins ಲಿಂಕ್ ಅನ್ನು ಕ್ಲಿಕ್ ಮಾಡಿ.
07:59 ಇಲ್ಲಿ ಈ ಪೇಜ್ ನಿಂದ Settings ಹಾಗು ಪ್ಲಗ್ ಇನ್ uninstall ಮಾಡಲು ಲಿಂಕ್ ಗಳಿವೆ.
08:05 ಈಗ ಟೀಚರ್ ಗಳು ಮತ್ತು ಅಡ್ಮಿನಿಸ್ಟ್ರೇಟರ್ ಗಳು ಅವರ ಕೋರ್ಸ್ ಗಳಿಗೆ ಅಟೆಂಡೆನ್ಸ್ ಅನ್ನು ಕ್ರಿಯೇಟ್ ಮಾಡಬಹುದು.
08:11 ಎಡ ಪ್ಯಾನಲ್ ನಲ್ಲಿರುವ Site administration ಇನ್ನೊಮ್ಮೆ ಕ್ಲಿಕ್ ಮಾಡಿ.
08:16 ನಂತರ Courses ಮತ್ತು Manage Courses and categories ಗಳನ್ನು ಕ್ಲಿಕ್ ಮಾಡಿ.
08:21 ಎಡಗಡೆಯಿರುವ Course category ಯಲ್ಲಿ 1st year Maths ಅನ್ನು ಕ್ಲಿಕ್ ಮಾಡಿ.
08:26 ಬಲಗಡೆಯಿರುವ Calculus course ಅನ್ನು ಕ್ಲಿಕ್ ಮಾಡಿ.
08:30 Calculus course ನ ವಿವರದ ವಿಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು ಕ್ಯಾಲ್ಕ್ಯುಲಸ್ ಕೋರ್ಸ್ ಅನ್ನು ನೋಡಲು, View ಟ್ಯಾಬ್ ಅನ್ನು ಕ್ಲಿಕ್ ಮಾಡಿ.
08:40 ಮೇಲಿನ ಬಲಗಡೆಯಿರುವ gear icon ಅನ್ನು ಕ್ಲಿಕ್ ಮಾಡಿ ನಂತರ Turn editing on ನ ಮೇಲೆ ಕ್ಲಿಕ್ ಮಾಡಿ.
08:47 ಟಾಪಿಕ್ಸ್ ಗು ಮೊದಲಿರುವ, ಕೆಳಗಿನ ಬಲಭಾಗದಲ್ಲಿರುವ Add an activity or resource ನ ಮೇಲೆ ಕ್ಲಿಕ್ ಮಾಡಿ.
08:54 ಅಟೆಂಡೆನ್ಸ್ ಅನ್ನು ಕ್ರಿಯೇಟ್ ಮಾಡಲು, Attendance activity ಅನ್ನು ಕ್ಲಿಕ್ ಮಾಡಿ.
09:00 name ಮತ್ತು description ಅನ್ನು ಇಲ್ಲಿ ತೋರಿಸಿರುವಂತೆ ನಮೂದಿಸಿ.
09:04 Grade ವಿಭಾಗವನ್ನು ವಿಸ್ತರಿಸಿ.
09:07 ಈ ಡ್ರಾಪ್-ಡೌನ್ ಅಟೆಂಡೆನ್ಸ್ ಗೆ ಬಳಸುವ ಗ್ರೇಡಿಂಗ್ ವಿಧಾನವನ್ನು ನಿರ್ಧರಿಸುವುದು.
09:12 ಅಟೆಂಡೆನ್ಸ್ ನ ಕೊಡುಗೆಯನ್ನು ಕೋರ್ಸ್ ಗ್ರೇಡ್ ಗೆ ಸೇರಿಸುವುದಾದರೆ, ಗರಿಷ್ಟ ವ್ಯಾಲ್ಯೂ ವನ್ನು ಸೆಟ್ ಮಾಡಿ.

ಡಿಫಾಲ್ಟ್ 100 ಆಗಿದೆ.

09:21 ನಾನು Grade ಅನ್ನು None ಎಂದು ಆಯ್ಕೆ ಮಾಡುವೆನು.
09:24 ಉಳಿದ ಆಯ್ಕೆಗಳು ಡಿಫಾಲ್ಟ್ ಆಗಿರಲಿ.
09:27 ಕೆಳಕ್ಕೆ ಸ್ಕ್ರೋಲ್ ಮಾಡಿ Save and display ಬಟನ್ ಅನ್ನು ಕ್ಲಿಕ್ ಮಾಡಿ.
09:31 ನಾವು ಈಗ ಹೊಸ ಪೇಜ್ ನಲ್ಲಿರುವೆವು.
09:34 ಇಲ್ಲಿ Status set ಟ್ಯಾಬ್ ಅನ್ನು ಕ್ಲಿಕ್ ಮಾಡಿ.
09:38 ಅಟೆಂಡೆನ್ಸ್ ಗೆ

Present , Late , Excused , Absent ಎಂಬ ನಾಲ್ಕು ಡಿಫಾಲ್ಟ್ ಸ್ಟ್ಯಾಟಸ್ ಗಳಿವೆ.

09:47 ನಿಮ್ಮ ಅವಶ್ಯಕತೆಗೆ ತಕ್ಕಂತೆ, ನೀವು ಇವುಗಳನ್ನು ಡಿಲೀಟ್ ಮಾಡಬಹುದು ಅಥವಾ ಹೆಚ್ಚಿನದನ್ನು ಸೇರಿಸಬಹುದು.
09:53 ನೀವು ಬೇರೆ ಯಾವುದಾದರು ಹೆಸರಿನಿಂದ ಕರೆಯುವುದಾದರೆ ಇದನ್ನು ಮಾರ್ಪಡಿಸಬಹುದು.
09:59 Excused ಸ್ಟ್ಯಾಟಸ್ ಅನ್ನು ಡಿಲೀಟ್ ಮಾಡುವೆನು ಏಕೆಂದರೆ ನಾನು ಅದನ್ನು ನನ್ನ ತರಗತಿಯಲ್ಲಿ ಬಳಸುವುದಿಲ್ಲ.
10:07 ದೃಢೀಕರಣ ಸಂದೇಶ ಬಾಕ್ಸ್ ಕಾಣಿಸುವುದು.

Continue ಬಟನ್ ಅನ್ನು ಕ್ಲಿಕ್ ಮಾಡಿ.

10:13 ಈಗ Add session ಟ್ಯಾಬ್ ಅನ್ನು ಕ್ಲಿಕ್ ಮಾಡಿ.
10:16 ನೀವು ಸೇರಿಸಬೇಕಾಗಿರುವ ಮೊದಲ ಸೆಶನ್(ಅವಧಿ) ನ ದಿನಾಂಕವನ್ನು ಆಯ್ಕೆ ಮಾಡಿ.

ನಾನು ಇದನ್ನು 4 ಜೂನ್ 2019 ಎಂದು ಸೆಟ್ ಮಾಡುವೆನು.

10:24 ಅವಧಿ ಪ್ರಾರಂಭವಾಗುವ ಮತ್ತು ಮುಗಿಯುವ ಸಮಯವನ್ನು ಆಯ್ಕೆ ಮಾಡಿ.
10:27 ಗಮನಿಸಿ: ಟೈಮ್ ಫೀಲ್ಡ್ 24-ಗಂಟೆಯ ಗಡಿಯಾರವನ್ನು ಹೊಂದಿದೆ.

ಹಾಗಾಗಿ 3:15pm ರಿಂದ 4:05pm ವರೆಗಿನ ತರಗತಿ 15:15 ರಿಂದ 16:05 ರವರೆಗೆ ಎಂದಾಗುವುದು.

10:43 ಈ ಅವಧಿಯ ಕುರಿತು ಸಣ್ಣ Description ಅನ್ನು ಟೈಪ್ ಮಾಡಿ.
10:46 ಡಿಸ್ಕ್ರಿಪ್ಷನ್ ಫೀಲ್ಡ್ ಅನ್ನು ಖಾಲಿ ಬಿಟ್ಟರೆ, ಡಿಸ್ಕ್ರಿಪ್ಷನ್ ಡಿಫಾಲ್ಟ್ ಆಗಿ “Regular class session” ಆಗಿರುವುದು.
10:54 Multiple sessions ವಿಭಾಗವನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ.
10:59 ನಿಮ್ಮ ತರಗತಿಯು ನಿರ್ದಿಷ್ಠ ಅವಧಿಗೆ ನಿಗದಿಯಾಗಿದ್ದರೆ, ನೀವು ಒಂದೇ ಸಮಯಕ್ಕೆ ಅನೇಕ ಅವಧಿ(ಸೆಷನ್ ) ಗಳನ್ನು ಕ್ರಿಯೇಟ್ ಮಾಡಬಹುದು.
11:06 Repeat the session above as follows ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
11:11 ನಿಮ್ಮ ತರಗತಿಯು ವಾರದ ನಿರ್ದಿಷ್ಟ ದಿನದಂದು ನಿಗದಿಯಾಗಿದ್ದರೆ, ವಾರದ ದಿನಗಳನ್ನು ಆಯ್ಕೆ ಮಾಡಿ.

ನಾನು ನನ್ನ ತರಗತಿಗೆ Monday ಯನ್ನು ಆಯ್ಕೆ ಮಾಡುವೆನು.

11:20 ಮುಂದಿನ ಆಪ್ಷನ್ Repeat every ಡ್ರಾಪ್-ಡೌನ್ ಆಗಿದೆ.

ತರಗತಿಯು ಪ್ರತಿವಾರ ನಿಗದಿಯಾಗಿದ್ದರೆ 1ಅನ್ನು ಆಯ್ಕೆ ಮಾಡಿ.

11:28 ತರಗತಿಯು ಮೊದಲ ಅವಧಿ ಆದ ಮೇಲೆ ಎರಡು ವಾರಕ್ಕೆ ನಿಗದಿಯಾಗಿದ್ದರೆ, 2 ಅನ್ನು ಆಯ್ಕೆ ಮಾಡಿ. ಹೀಗೆಯೆ ಮುಂದಿನದು ಆಗಿರುವುದು.
11:35 ನಾನು ಇದನ್ನು 1 ಎಂದೇ ಇಡುವೆನು.
11:38 ಇದರರ್ಥ, ನನ್ನ ತರಗತಿಯು ಪ್ರತಿ ಸೋಮವಾರ 3:15pm ನಿಂದ 50 ನಿಮಿಷಗಳ ಕಾಲ ಭೇಟಿಯಾಗುವುದು ಎಂದಾಗಿದೆ.
11:45 Repeat until ಇದು ಕೊನೆಯ ಅವಧಿಯ ದಿನಾಂಕವಾಗಿದೆ.
11:49 ನಾನು ಇದನ್ನು 30th March 2020. ಎಂದು ನಮೂದಿಸುವೆನು.
11:54 ನಂತರ, Student recording ವಿಭಾಗವನ್ನು ವಿಸ್ತರಿಸಲು ಅದರ ಮೇಲೆ ಕ್ಲಿಕ್ ಮಾಡಿ.
12:00 ವಿದ್ಯಾರ್ಥಿಗಳು ಅವರ ಅಟೆಂಡೆನ್ಸ್ ಅನ್ನು ಅವರೆ ದಾಖಲಿಸಲು ಬಯಸುವುದಾದರೆ, ಈ ವಿಭಾಗದಲ್ಲಿನ ಫೀಲ್ಡ್ ಗಳನ್ನು ಭರ್ತಿಮಾಡಿ.
12:07 ನಾನು ಈ ವಿಭಾಗವನ್ನು ಬಿಟ್ಟುಬಿಡುವೆನು.
12:09 ಕೆಳಕ್ಕೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಗಡೆಯಿರುವ Add ಬಟನ್ ಅನ್ನು ಕ್ಲಿಕ್ ಮಾಡಿ.
12:15 43 sessions were successfully generated. ಎಂಬ ದೃಢೀಕರಣ ಸಂದೇಶದ(ಕನ್ಫರ್ಮೇಶನ್ ಮೆಸೇಜ್) ಬಾಕ್ಸ್ ಕಾಣುವುದು.
12:22 ನೀವು ಬೇರೆ ದಿನಾಂಕಗಳನ್ನು ಆಯ್ಕೆ ಮಾಡಿದ್ದರೆ, ನಿಮಗೆ ಬೇರೆಯೇ ಅವಧಿಯ ಸಂಖ್ಯೆ ದೊರೆಯುವುದು.
12:28 ಪ್ರತಿ ಅವಧಿಯ (ಸೆಶನ್) ಮುಂದೆ ಇರುವ ಐಕಾನ್ ಗಳನ್ನು ನೋಡಿ.
12:32 ಅವು ಟೀಚರ್ ಗೆ ಅಟೆಂಡೆನ್ಸ್ ಅನ್ನು ಅನ್ನು ತೆಗೆದುಕೊಳ್ಳಲು, ಅವಧಿಯನ್ನು ಎಡಿಟ್ ಮಾಡಲು ಅಥವಾ ಡಿಲೀಟ್ ಮಾಡಲು ಬಿಡುವವು.
12:39 ನೀವು ಅಟೆಂಡೆನ್ಸ್ ತೆಗೆದುಕೊಳ್ಳಲು ಬಯಸುವ ವಾರಕ್ಕೆ, Take attendance ಐಕಾನ್ ಅನ್ನು ಕ್ಲಿಕ್ ಮಾಡಿ.
12:46 ನೀವು ಈ ಕೋರ್ಸ್ ಗೆ ದಾಖಲಾಗಿರುವ ಎಲ್ಲ ವಿದ್ಯಾರ್ಥಿಗಳ ಪಟ್ಟಿಯನ್ನು ನೋಡಬಹುದು ಮತ್ತು ನೀವು ಅವರ ಅಟೆಂಡೆನ್ಸ್ ಅನ್ನು ಹಾಕಬಹುದು.
12:53 P, L ಮತ್ತು A ಗಳು ಸೆಟ್ಟಿಂಗ್ಸ್ ನಲ್ಲಿ ಮೊದಲೇ ಆಯ್ಕೆ ಮಾಡಿದ ಸ್ಟ್ಯಾಟಸ್ ಗಳಾಗಿವೆ.
12:59 ಎಲ್ಲ ಯೂಸರ್ ಗಳ ಸ್ಟ್ಯಾಟಸ್ ಅನ್ನು'Present' ಎಂದು ಸೆಟ್ ಮಾಡಲು 'P' ಯ ಕೆಳಗಿರುವ ರೆಡಿಯೋ ಬಟನ್ ಅನ್ನು ಚೆಕ್ ಮಾಡಿ.
13:10 ನೀವು ಅಟೆಂಡೆನ್ಸ್ ಅನ್ನು ಗುರುತಿಸಿದ ನಂತರ, ಪೇಜ್ ನ ಕೆಳ ಭಾಗದಲ್ಲಿರುವ Save attendance ಬಟನ್ ನ ಮೇಲೆ ಕ್ಲಿಕ್ ಮಾಡಿ.
13:18 ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.

ಸಂಕ್ಷಿಪ್ತವಾಗಿ,.

13:24 ಈ ಟ್ಯುಟೋರಿಯಲ್ ನಲ್ಲಿ ನಾವು:

ಪ್ಲಗ್ ಇನ್ ಗಳ ಕುರಿತು ಮತ್ತು ಮೂಡಲ್ ನಲ್ಲಿ ಪ್ಲಗ್ ಇನ್ ಗಳನ್ನು ಹೇಗೆ ಇನ್ಸ್ಟಾಲ್ ಮಾಡುವುದು ಎಂದು ಕಲಿತಿದ್ದೇವೆ.

13:32 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
13:35 Projectes TAC Dept ನಿಂದ ನಿರ್ವಹಿಸಲ್ಪಡುತ್ತಿರುವ plugin Font family ಯನ್ನು ಹುಡುಕಿ.
13:42 ಆ ಪ್ಲಗ್ ಇನ್ ನ ಡಿಫಾಲ್ಟ್ ಸೆಟ್ಟಿಂಗ್ ಗಳೊಂದಿಗೆ ಇನ್ಸ್ಟಾಲ್ ಮಾಡಿ.
13:46 Plugins overview ವಿಭಾಗದಲ್ಲಿ ಪ್ಲಗ್ ಇನ್ ಇನ್ಸ್ಟಾಲ್ ಆಗಿದೆಯೆಂದು ಖಚಿತಪಡಿಸಿಕೊಳ್ಳಿ.
13:52 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
14:00 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
14:10 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
14:14 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
14:27 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14