Moodle-Learning-Management-System/C2/Formatting-Course-material-in-Moodle/Kannada

From Script | Spoken-Tutorial
Revision as of 21:06, 20 November 2019 by Anjana310312 (Talk | contribs)

Jump to: navigation, search
Time Narration
00:01 Course Administration in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು : ಮೂಡಲ್ ನಲ್ಲಿ ಕೋರ್ಸ್ ಅಡ್ಮಿನಿಸ್ಟ್ರೇಷನ್, ಕೋರ್ಸ್ ನಲ್ಲಿ ಆಕ್ಟಿವಿಟಿಸ್ ಮತ್ತು ರಿಸೋರ್ಸ್ – ಇವುಗಳ ಕುರಿತು ಕಲಿಯುವೆವು.
00:17 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04,

00:24 XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP,
00:33 Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
00:40 ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.

ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.

00:52 ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಮೂಡಲ್ ವೆಬ್ ಸೈಟ್ ಅನ್ನು ಸೆಟ್ ಮಾಡಿ, ನಿಮ್ಮನ್ನು teacher ಆಗಿ ನೋಂದಾಯಿಸಿದ್ದಾರೆ ಎಂದು ಭಾವಿಸುತ್ತದೆ.
01:03 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು , ಮೂಡಲ್ ನಲ್ಲಿ teacher login ಅನ್ನು ಹೊಂದಿರಲೇ ಬೇಕು.
01:09 ಮತ್ತು ಅಡ್ಮಿನಿಸ್ಟ್ರೇಟರ್ ನಿಂದ ಒಂದಾದರೂ ಕೋರ್ಸ್ ಅಸೈನ್ ಆಗಿರಲೇ ಬೇಕು ಮತ್ತು ಅವರ ಕೋರ್ಸ್ ಗೆ ಕೆಲವು ಕೋರ್ಸ್ ಮಟೀರಿಯಲ್ ಗಳು ಅಪ್ಲೋಡ್ ಆಗಿರಲೇ ಬೇಕು.
01:19 ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
01:26 ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ಅನ್ನು ತೆರೆಯಿರಿ.
01:31 ನಿಮ್ಮ teacher username ಮತ್ತು password ವಿವರಗಳೊಂದಿಗೆ ಲಾಗಿನ್ ಆಗಿ.

ನಾನು teacher ರೆಬೆಕಾ ರೇಮೆಂಡ್ ಎಂದು ಲಾಗಿನ್ ಆಗಿರುವೆನು.

01:41 ಈಗ ನಾವು ಟೀಚರ್ಸ್ ಡ್ಯಾಶ್ ಬೋರ್ಡ್ ನಲ್ಲಿರುವೆವು.
01:44 ಎಡಗಡೆಯಿರುವ ನ್ಯಾವಿಗೇಷನ್ ಮೆನ್ಯುವಿನಲ್ಲಿ, My Courses ನ ಅಡಿಯಲ್ಲಿ Calculus ಅನ್ನು ಗಮನಿಸಿ.
01:51 ಗಮನಿಸಿ, ಇಲ್ಲಿ ನೀವು teacher ಅಥವಾ student ಆಗಿ ದಾಖಲಾಗಿರುವ ಎಲ್ಲ ಕೋರ್ಸ್ ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
01:59 Calculus ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ.
02:02 ನಾವು ಈ ಹಿಂದಿನ ಟ್ಯುಟೋರಿಯಲ್ ನಲ್ಲಿ course topics ಮತ್ತು summaries ಅನ್ನು ಅಪ್ಲೋಡ್ ಮಾಡಿದ್ದೇವೆ.
02:09 ನೀವು ಮಾಡಿರದಿದ್ದರೆ, ದಯವಿಟ್ಟು ಹಿಂದಿನ ಟ್ಯುಟೋರಿಯಲ್ ನ ಅಸೈನ್ಮೆಂಟ್ ಗಳನ್ನು ನೋಡಿ.
02:16 ಈಗ ನಾವು ಕೋರ್ಸ್ ನ ಕೆಲವು ಉಪಯುಕ್ತ ಸೆಟ್ಟಿಂಗ್ ಗಳ ಕುರಿತು ಕಲಿಯುವೆವು.
02:21 ಈ ವಿಭಾಗದ ಮೇಲ್ಗಡೆ ಬಲಗಡೆಯಿರುವ gear ಐಕಾನ್ ಅನ್ನು ಕ್ಲಿಕ್ ಮಾಡಿ.
02:26 Edit Settings ಅನ್ನು ಕ್ಲಿಕ್ ಮಾಡಿ.ನಂತರ ಎಲ್ಲಾ ವಿಭಾಗಗಳನ್ನು ವಿಸ್ತರಿಸಲು, ಬಲಗಡೆಯಿರುವ Expand All ಅನ್ನು ಕ್ಲಿಕ್ ಮಾಡಿ.
02:36 ಇಲ್ಲಿ ಕಾಣಿಸುವ ಸೆಟ್ಟಿಂಗ್ ಗಳು, ಅಡ್ಮಿನಿಸ್ಟ್ರೇಟರ್ ಕೋರ್ಸ್ ಅನ್ನು ರಚನೆ ಮಾಡಿದಾಗಲೇ ಡಿಫೈನ್ ಮಾಡಿದ್ದಾಗಿವೆ.
02:44 General ವಿಭಾಗದಲ್ಲಿ, Course full name ಎಂದಿದೆ.

ಇದು ಕೋರ್ಸ್ ಪೇಜ್ ನ ಮೇಲ್ಭಾಗದಲ್ಲಿ ತೋರಿಸುವ ಹೆಸರಾಗಿದೆ.

02:54 Course short name ಇದು ಕೋರ್ಸ್ ನ್ಯಾವಿಗೇಷನ್ ಮತ್ತು ಕೋರ್ಸ್ ಗೆ ಸಂಬಂಧಿಸಿದ ಇ-ಮೇಲ್ ಗಳಲ್ಲಿ ಡಿಸ್ಪ್ಲೇ ಆಗುವ ಹೆಸರಾಗಿದೆ.
03:03 Course category ಯನ್ನು ಅಡ್ಮಿನ್ ಈಗಾಗಲೇ ಸೆಟ್ ಮಾಡಿರುವರು.
03:08 ನಾವು Course start date, Course end date ಮತ್ತು Course ID number ಗಳನ್ನು, ನಮಗೆ ಬೇಕಾದಂತೆ ಬದಲಿಸಬಹುದು.
03:21 Description ವಿಭಾಗದಡಿಯಲ್ಲಿ, Course Summary ಟೆಕ್ಸ್ಟ್ ಬಾಕ್ಸ್ ಅನ್ನು ನೋಡಿ.

ನಾನು ಇಲ್ಲಿರುವ ವಿಷಯವನ್ನು ತೆಗೆದು, ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು.

03:31 ನನ್ನ ವಿದ್ಯಾರ್ಥಿಗಳು ಇದನ್ನು ನನ್ನ ಕೋರ್ಸ್ ನ ಮುಖಪುಟದಲ್ಲಿ ನೋಡುವರು.
03:37 ಮುಂದೆ ಬರುವ ಫೀಲ್ಡ್ Course summary files ಆಗಿದೆ.

ಈ ಫೈಲ್ ಗಳು ಕೋರ್ಸ್ ಸಮರಿ ಯೊಂದಿಗೆ ವಿದ್ಯಾರ್ಥಿಗಳಿಗೆ ಡಿಸ್ಪ್ಲೇ ಆಗುವುದು.

03:47 ಡಿಫಾಲ್ಟ್ ಆಗಿ jpg, gif ಮತ್ತು png ಫೈಲ್ ಟೈಪ್ ಗಳನ್ನು ಕೋರ್ಸ್ ಸಮರಿ ಫೈಲ್ ಗಳಾಗಿ ಬಳಸಬಹುದು.
03:56 ಫೈಲ್ ಅನ್ನು ಅಪ್ಲೋಡ್ ಮಾಡಲು ಮೂರು ವಿಧಾನಗಳಿವೆ. ಈ ಬಾಕ್ಸ್ ಗೆ ಫೈಲ್ ಅನ್ನು ಎಳೆದು ತರಬಹುದು.(ಡ್ರ್ಯಾಗ್ ಅಂಡ್ ಡ್ರಾಪ್)
04:03 ಮೇಲ್ಗಡೆ ಎಡಗಡೆಯಿರುವ Upload ಅಥವಾ Add ಐಕಾನ್ ಅನ್ನು ಕ್ಲಿಕ್ ಮಾಡಿ.

ಅಥವಾ ಕೆಳಮುಖವಾಗಿರುವ ಆರೋ ವನ್ನು ಕ್ಲಿಕ್ ಮಾಡಿ.

04:11 Upload ಅಥವಾ Add ಐಕಾನ್ ಅಥವಾ ಕೆಳಮುಖವಾಗಿರುವ ಆರೋ ವನ್ನು ಕ್ಲಿಕ್ ಮಾಡಿದರೆ File picker ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
04:21 ಎಡ ಮೆನ್ಯುವಿನಲ್ಲಿರುವ Upload a file ಆಯ್ಕೆಯನ್ನು ಕ್ಲಿಕ್ ಮಾಡಿ.
04:26 Browse ಅಥವಾ Choose File ಬಟನ್ ಅನ್ನು ಕ್ಲಿಕ್ ಮಾಡಿ. ನಂತರ ನಿಮ್ಮ ಮಶಿನ್ ನಲ್ಲಿ ನಿಮಗೆ ಬೇಕಾದ ಫೈಲ್ ಅನ್ನು ಆಯ್ಕೆ ಮಾಡಿ.
04:34 ನಾನು ನನ್ನ ಸಿಸ್ಟಮ್ ನಲ್ಲಿ calculus.jpg ಯನ್ನು ಆಯ್ಕೆ ಮಾಡುವೆನು.
04:40 Save as ಫೀಲ್ಡ್ ನಲ್ಲಿ ಟೈಪ್ ಮಾಡುವುದರ ಮೂಲಕ ನೀವು ಬೇರೆ ಹೆಸರನ್ನು ಕೊಡಬಹುದು.
04:46 author ಮತ್ತು license ವಿವರಗಳನ್ನು, ಅವುಗಳ ಫೀಲ್ಡ್ ನಲ್ಲಿ ಸೂಚಿಸಿರಿ.

ಕೊನೆಯಲ್ಲಿ ಕೆಳಗಡೆಯಿರುವ , Upload this file ಬಟನ್ ಅನ್ನು ಕ್ಲಿಕ್ ಮಾಡಿ.

04:58 ಹೀಗೆ ನಾವು ಕೋರ್ಸ್ ಸಮರಿ ಫೈಲ್ ಗಳನ್ನು ಅಪ್ಲೋಡ್ ಮಾಡಬಹುದು.
05:02 ನಂತರ ಬರುವುದು Course format ಆಗಿದೆ. ಕೋರ್ಸ್ ಫಾರ್ಮ್ಯಾಟ್ ವಿದ್ಯಾರ್ಥಿಗಳಿಗಾಗಿ ರಿಸೋರ್ಸ್ ಮತ್ತು ಆಕ್ಟಿವಿಟಿಗಳನ್ನು ಸಿದ್ಧಗೊಳಿಸಿದ ವಿಧಾನವನ್ನು ಸೂಚಿಸುತ್ತದೆ.
05:12 Format ಡ್ರಾಪ್ ಡೌನ್ ನಲ್ಲಿ ನಾಲ್ಕು ಆಯ್ಕೆಗಳಿವೆ - ಅವು

Single Activity Format, Social Format , Topics Format ಮತ್ತು Weekly Format ಗಳಾಗಿವೆ.

05:26 ನಮ್ಮ ಅಡ್ಮಿನ್ Topics format ಅನ್ನು ಆಯ್ಕೆ ಮಾಡಿದ್ದಾರೆ.

ನಾವು ಇದನ್ನು ಹಾಗೆ ಇಡೋಣ.

05:33 ಮುಂದಿನ ಸೆಟ್ಟಿಂಗ್ Hidden sections ಆಗಿದೆ.

ಇದು ಒಂದು ಕೋರ್ಸ್ ನಲ್ಲಿ, ವಿದ್ಯಾರ್ಥಿಗಳಿಂದ ಅಡಗಿಸಿಡಬಹುದಾದ ಟಾಪಿಕ್ ಗಳಾಗಿವೆ.

05:44 ಇದು ಟೀಚರ್ ಇನ್ನೂ ಮುಗಿಸಿರದ ಪಾಠಗಳಿದ್ದಾಗ ಉಪಯುಕ್ತವಾಗಿದೆ.

ಈ ಸೆಟ್ಟಿಂಗ್ ವಿದ್ಯಾರ್ಥಿಗಳಿಗೆ Hidden sections ಅನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬುದನ್ನು ನಿರ್ಧರಿಸುತ್ತದೆ.

05:57 ಈ ಆಯ್ಕೆಯು ವಿದ್ಯಾರ್ಥಿಗಳಿಗೆ ಈ ಕಂಟೆಂಟ್ ಗಳನ್ನು ಕೊಲಾಪ್ಸ್ ಆದ ರೀತಿಯಲ್ಲಿ ತೋರಿಸುವುದು.
06:04 ಈ ಆಯ್ಕೆಯನ್ನು ಆರಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಕಂಟೆಂಟ್ ಗಳು ಕಾಣಿಸುವುದಿಲ್ಲ.
06:09 ನಾವು ಈಗ ಇದನ್ನು ಡಿಫಾಲ್ಟ್ ಆಗಿಯೇ ಬಿಡೋಣ.
06:13 ಮುಂದಿನದು Course Layout ಡ್ರಾಪ್ ಡೌನ್ ಆಗಿದೆ. ಅದನ್ನು ಕ್ಲಿಕ್ ಮಾಡಿ.
06:19 ಎಲ್ಲಾ ವಿಭಾಗಗಳನ್ನು ತೋರಿಸಲು ಈ ಆಯ್ಕೆಯನ್ನು ಆರಿಸಿಕೊಳ್ಳಬಹುದು.
06:25 ಇಲ್ಲಿರುವ ಇನ್ನೊಂದು ಆಯ್ಕೆ Show one section per page ಆಗಿದೆ.

ಇದು ಇರುವ ವಿಭಾಗಗಳ ಸಂಖ್ಯೆಯನ್ನಾಧರಿಸಿ, ಕೋರ್ಸ್ ಅನ್ನು ಅನೇಕ ಪೇಜ್ ಗಳಲ್ಲಿ ವಿಭಜಿಸುತ್ತದೆ.

06:37 ಈಗ ನಾವು Show all sections in one page, ಆಯ್ಕೆಯಲ್ಲಿಯೇ ಇರೋಣ.
06:43 ಮುಂದಿನದು Appearance ವಿಭಾಗವಾಗಿದೆ.
06:46 Show gradebook to students ಆಯ್ಕೆಯನ್ನು ಗಮನಿಸಿ.

ಕೋರ್ಸ್ ನಲ್ಲಿ ಹಲವಾರು ಚಟುವಟಿಕೆಗಳು ಟೀಚರ್ ಗ್ರೇಡ್ ಗಳನ್ನು ಕೊಡಲು ಸಹಾಯಕವಾಗಿವೆ.

06:57 ಈ ಆಯ್ಕೆಯು ಮಕ್ಕಳು ಈ ಗ್ರೇಡ್ ಗಳನ್ನು ನೋಡಬಹುದೇ ಎಂದು ನಿರ್ಧರಿಸುತ್ತದೆ.

ಈ ಆಯ್ಕೆ ಡಿಫಾಲ್ಟ್ ಆಗಿ Yes, ಎಂದಾಗಿರುತ್ತದೆ. ನಾವು ಅದನ್ನು ಹಾಗೆ ಇಡೋಣ.

07:10 ಡಿಫಾಲ್ಟ್ ಆಗಿ ಆಯ್ಕೆಯಾಗಿರದಿದ್ದರೆ, ನಾವು Show activity reports ಅನ್ನು Ye ಎಂದು ಬದಲಿಸೋಣ.
07:18 ಇದು ವಿದ್ಯಾರ್ಥಿಗಳು ಅವರ ಪ್ರೊಫೈಲ್ ಪೇಜ್ ನಲ್ಲಿ ಅವರ ಆಕ್ಟಿವಿಟಿ ರಿಪೋರ್ಟ್ ಗಳನ್ನು ನೋಡಬಹುದು ಎಂದು ದೃಢೀಕರಿಸುತ್ತದೆ.
07:27 ನಾವು, ಈ ಕೋರ್ಸ್ ಗೆ ಅಪ್ಲೋಡ್ ಮಾಡಬಹುದಾದ ಫೈಲ್ ನ ಅಳತೆಯನ್ನು ಗರಿಷ್ಟ ಕ್ಕೆ ಸೆಟ್ ಮಾಡಬಹುದು.
07:34 additional materials, assignments ಮುಂತಾದವುಗಳಿಗೆ ಕೂಡ ಫೈಲ್ ಗಳನ್ನು ಅಪ್ಲೋಡ್ ಮಾಡಬಹುದು.
07:41 ನಮ್ಮ ಅಡ್ಮಿನ್ ಇದನ್ನು ಫೈಲ್ ನ ಗರಿಷ್ಟ ಅಳತೆ 128MBಗೆ ಸೆಟ್ ಮಾಡಿರುವರು.

ಇದನ್ನು ಹಾಗೇ ಇಡೋಣ.

07:52 ಉಳಿದ ಎಲ್ಲ ಸೆಟ್ಟಿಂಗ್ ಗಳಿಗೆ ಡಿಫಾಲ್ಟ್ ವ್ಯಾಲ್ಯು ವನ್ನು ಹಾಗೆಯೇ ಇಡೋಣ.
07:58 ಕೆಳಕ್ಕೆ ಸ್ಕ್ರೋಲ್ ಮಾಡಿ, Save and display ಬಟನ್ ಅನ್ನು ಒತ್ತಿ.

ನಾವು Course ಪೇಜ್ ಗೆ ಕರೆದೊಯ್ಯಲ್ಪಡುತ್ತೇವೆ.

08:06 ಟಾಪಿಕ್ ಹೆಸರುಗಳ ಮೇಲಿರುವ Announcements ಲಿಂಕ್ ಅನ್ನು ಗಮನಿಸಿ.
08:11 ಇದು ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಹಿತಿಗಳು, ಪ್ರಸ್ತುತ ಸಮಾಚಾರಗಳು ಮತ್ತು ಪ್ರಕಟಣೆಗಳು ಮುಂತಾದವುಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.
08:20 ಪೇಜ್ ನ ಮೇಲ್ಗಡೆ ಬಲಗಡೆಯಿರುವ gear ಐಕಾನ್ ಅನ್ನು ಕ್ಲಿಕ್ ಮಾಡಿ ಮತ್ತು Turn Editing On ಅನ್ನು ಕ್ಲಿಕ್ ಮಾಡಿ.
08:28 ಗಮನಿಸಿ: ಕೋರ್ಸ್ ನಲ್ಲಿ ಏನಾದರೂ ಬದಲಾವಣೆ ಮಾಡುವಾಗ Turn Editing On ಅನ್ನು ಆನ್ ಮಾಡಿರಬೇಕು.
08:35 ಈಗ Announcements ನ ಬಲಕ್ಕಿರುವ, Edit ಮತ್ತು Edit Settings ಅನ್ನು ಕ್ರಮವಾಗಿ ಕ್ಲಿಕ್ ಮಾಡಿ.
08:44 Description ನಲ್ಲಿ ನಾನು ಈ ರೀತಿಯಾಗಿ ಟೈಪ್ ಮಾಡುವೆನು.

“Please check the announcements regularly”.

08:52 Display description on course page ಆಯ್ಕೆಯನ್ನು ಚೆಕ್ ಮಾಡಿ. ಇದು ಲಿಂಕ್ ನ ಕೆಳಗಡೆ ಡಿಸ್ಕ್ರಿಪ್ಷನ್ ಅನ್ನು ತೋರಿಸುತ್ತದೆ.
09:01 ಉಳಿದ ಎಲ್ಲ ಸೆಟ್ಟಿಂಗ್ ಗಳನ್ನು ಹಾಗೆಯೇ ಬಿಡಿ.
09:05 ಕೆಳಕ್ಕೆ ಸ್ಕ್ರೋಲ್ ಮಾಡಿ, Save and return to course ಅನ್ನು ಕ್ಲಿಕ್ ಮಾಡಿ.

ನಾವು ಕೋರ್ಸ್ ಪೇಜ್ ಗೆ ಹಿಂದಿರುಗುತ್ತೇವೆ.

09:15 ಇನ್ನು ಹೆಚ್ಚಿನ ಪ್ರಕಟಣೆ(ಅನೌನ್ಸ್ಮೆಂಟ್) ಗಳನ್ನು ಸೇರಿಸಲು Announcements ನ ಮೇಲೆ ಕ್ಲಿಕ್ ಮಾಡಿ.
09:21 ಈಗ Add a new topic ಬಟನ್ ಅನ್ನು ಕ್ಲಿಕ್ ಮಾಡಿ. Subject ಅನ್ನು Minimum requirements ಎಂದು ಟೈಪ್ ಮಾಡಿ.
09:31 ಮೆಸೇಜ್ ಅನ್ನು “This course requires you to submit a minimum of 3 assignments and attempt 5 quizzes to pass”. ಎಂದು ಟೈಪ್ ಮಾಡಿ.
09:43 Discussion subscription ಇದು ಆಯ್ಕೆಯಾಗಿದೆಯೇ ಮತ್ತು ಇದು ಎಡಿಟ್ ಮಾಡಲು ಅಸಾಧ್ಯವಾಗಿದೆಯೇ ಎಂದು ಗಮನಿಸಿ.

ಏಕೆಂದರೆ ಕೋರ್ಸ್ ಗೆ ದಾಖಲಾಗಿರುವ ಎಲ್ಲರೂ ಕಡ್ಡಾಯವಾಗಿ ಇದಕ್ಕೆ ಸಬ್ಸ್ಕ್ರೈಬ್ ಆಗಿರಲೇ ಬೇಕು.

09:59 ಮುಂದಿನದು, Attachments. ನೀವು ಸಂಬಂಧಿತ ಫೈಲ್ ಗಳನ್ನು ಎಳೆದು ತಂದು ಹಾಕಬಹುದು ಅಥವಾ ಅಪ್ಲೋಡ್ ಮಾಡಬಹುದು.
10:08 ಫೋರಮ್ ನ ಮೇಲ್ಭಾಗದಲ್ಲಿ ಪ್ರಕಟಣೆಗಳು ಕಾಣಬೇಕಾಗಿದ್ದಲ್ಲಿ, Pinned ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.

ನಾನು ಇದನ್ನು ಟಿಕ್ ಮಾಡುವೆನು.

10:18 ಮುಂದಿನ ಚೆಕ್ ಬಾಕ್ಸ್ ಅನ್ನು ಟಿಕ್ ಮಾಡಿ.

ಇದು ತತ್ಕ್ಷಣವೇ ಈ ಫೋರಮ್ ಗೆ ಸಬ್ಸ್ಕ್ರೈಬ್ ಮಾಡಿದ ಪ್ರತಿಯೊಬ್ಬರಿಗೂ ನೋಟಿಫಿಕೇಷನ್ ಅನ್ನು ಕಳುಹಿಸುತ್ತದೆ.

10:29 ಮುಂದಿನ ವಿಭಾಗವಾದ Display period ವಿಸ್ತರಿಸಿ.

ಇಲ್ಲಿನ ಸೆಟ್ಟಿಂಗ್ ಗಳು, ಈ ಫೋರಮ್ ಪೋಸ್ಟ್ ಒಂದು ನಿರ್ದಿಷ್ಟ ದಿನಾಂಕದ ಅವಧಿಗೆ ಕಾಣುವಂತೆ ಇರಬೇಕೇ ಎಂಬುದನ್ನು ನಿರ್ಧರಿಸುತ್ತದೆ.

10:41 ಡಿಫಾಲ್ಟ್ ಆಗಿ ಇದು ಡಿಸೇಬಲ್ ಆಗಿರುವುದು. ಅಂದರೆ ಪೋಸ್ಟ್ ಗಳು ಯಾವಾಗಲೂ ಕಾಣುವಂತೆ ಇರುವುದು.

ನಾವು ಡಿಫಾಲ್ಟ್ ಆಗಿರುವ ಸೆಟ್ಟಿಂಗ್ ಗಳನ್ನು ಹಾಗೇ ಇಡೋಣ.

10:52 ಕೆಳಕ್ಕೆ ಸ್ಕ್ರೋಲ್ ಮಾಡಿ, Post to forum ಬಟನ್ ಅನ್ನು ಒತ್ತಿ.
10:57 ಒಂದು ಯಶಸ್ವಿ ಸಂದೇಶ ಡಿಸ್ಪ್ಲೇ ಆಗುವುದು. ಪೋಸ್ಟ್ ನ ಲೇಖಕರು, ಪೋಸ್ಟ್ ಅನ್ನು ಬದಲಾಯಿಸಲು ಮೂವತ್ತು ನಿಮಿಷಗಳ ಸಮಯಾವಕಾಶವನ್ನು ಹೊಂದಿರುವರು.
11:08 ನಾನು ಬ್ರೆಡ್ ಕ್ರಂಬ್ ನಲ್ಲಿ Calculus ಲಿಂಕ್ ಅನ್ನು ಕ್ಲಿಕ್ ಮಾಡುವೆನು.
11:13 ಈಗ ನಾನು ಈ ವಿಭಾಗಕ್ಕೆ ಒಂದು ವಿವರವಾದ ಒಂದು ಸಿಲಬಸ್ ಪೇಜ್ ಅನ್ನು ಸೇರಿಸುವೆನು.
11:19 General ವಿಭಾಗದ ಕೆಳಗಿನ ಬಲಗಡೆಯಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ.

ರಿಸೋರ್ಸ್ ಗಳ ಪಟ್ಟಿಯಲ್ಲಿ , Page ಅನ್ನು ಆಯ್ಕೆ ಮಾಡಿ.

11:32 ನೀವು ಆಯ್ಕೆ ಮಾಡಿದಾಗ ಬರುವ, ಈ ಚಟುವಟಿಕೆಯ ವಿವರಣೆಯನ್ನು ಓದಿರಿ.
11:39 ನಂತರ ಕೆಳಗಿರುವ Add ಬಟನ್ ಅನ್ನು ಒತ್ತಿ.

ನಾವು ಒಂದು ಹೊಸ ಪೇಜ್ ಗೆ ಕರೆದೊಯ್ಯಲ್ಪಡುವೆವು.

11:47 Name ಫೀಲ್ಡ್ ನಲ್ಲಿ Detailed syllabus ಎಂದು ಟೈಪ್ ಮಾಡಿ.
11:52 Description ಟೆಕ್ಸ್ಟ್ ಬಾಕ್ಸ್ ಅನ್ನು ಖಾಲಿ ಬಿಡುವೆನು ಏಕೆಂದರೆ ಇದರ ಶೀರ್ಷಿಕೆಯೇ ವಿವರವನ್ನು ನೀಡುವುದು.
11:59 ನಾನು Page Content ಟೆಕ್ಸ್ಟ್ ಬಾಕ್ಸ್ ನಲ್ಲಿ ಕ್ಯಾಲ್ಕ್ಯುಲಸ್ ಕೋರ್ಸ್ ನ ವಿವರವಾದ ಸಿಲೇಬಸ್ ಅನ್ನು ನಮೂದಿಸುವೆನು.
12:07 ಈ ಕಂಟೆಂಟ್ ಈ ಟ್ಯುಟೋರಿಯಲ್ ನ Code Files ಲಿಂಕ್ ನಲ್ಲಿ ಲಭ್ಯವಿದೆ.

ನೀವು ಅಭ್ಯಾಸ ಮಾಡುವಾಗ ಇದನ್ನು ಡೌನ್ಲೋಡ್ ಮಾಡಿ ಬಳಸಬಹುದು.

12:18 ಕೆಳಕ್ಕೆ ಸ್ಕ್ರೋಲ್ ಮಾಡಿ, Save and return to course ಬಟನ್ ಅನ್ನು ಕ್ಲಿಕ್ ಮಾಡಿ.

ನಾವು ಕೋರ್ಸ್ ಪೇಜ್ ಗೆ ಹಿಂದಿರುಗುವೆವು.

12:27 ಈಗ ನಾವು ನಮ್ಮ ಅಕೌಂಟ್ ನಿಂದ ಲಾಗೌಟ್ ಆಗೋಣ. ಇದಕ್ಕಾಗೆ ಮೇಲೆ ಬಲಗಡೆಯಿರುವ user ಐಕಾನ್ ಅನ್ನು ಕ್ಲಿಕ್ ಮಾಡಿ.

Log out ಆಯ್ಕೆಯನ್ನು ಆಯ್ಕೆ ಮಾಡಿ.

12:39 ಈಗ ನಾನು ವಿದ್ಯಾರ್ಥಿಗೆ ಈ ಪೇಜ್ ಹೇಗೆ ಕಾಣುವುದು ಎಂದು ತೋರಿಸುವೆನು.
12:45 ನಾನು student ID Priya Sinha ಅನ್ನು ಹೊಂದಿರುವೆನು.

ಈ ವಿದ್ಯಾರ್ಥಿ ಅಡ್ಮಿನ್ ನಿಂದ ಕ್ಯಾಲ್ಕ್ಯುಲಸ್ ಕೋರ್ಸ್ ಗೆ ದಾಖಲಾಗಿರುವರು.

12:55 ನಾನು ಸ್ಟುಡೆಂಟ್ Priya Sinha ಎಂದು ಲಾಗಿನ್ ಆಗಿರುವೆನು. ಈಗ ನಾನು ಎಡಗಡೆಯಿರುವ Calculus ಅನ್ನು ಕ್ಲಿಕ್ ಮಾಡುವೆನು.
13:04 ವಿದ್ಯಾರ್ಥಿಗೆ ಈ ಪೇಜ್ ಹೀಗೆ ಕಾಣಿಸುವುದು.

ಈ ಪೇಜ್ ನ ಮೇಲ್ಗಡೆ ಬಲಭಾಗದಲ್ಲಿ ಗೇರ್ ಐಕಾನ್ ಇಲ್ಲದಿರುವುದನ್ನು ಗಮನಿಸಿ.

13:14 ಏಕೆಂಡರೆ ವಿದ್ಯಾರ್ಥಿಯು ಕೋರ್ಸ್ ನ ಯಾವುದೇ ಭಾಗವನ್ನು ಎಡಿಟ್ ಮಾಡಲು ಸಾಧ್ಯವಿಲ್ಲ.
13:20 ಈಗ ನಾವು student id ಯಿಂದ ಲಾಗೌಟ್ ಆಗೋಣ.
13:24 ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.

ಸಂಕ್ಷಿಪ್ತವಾಗಿ,

13:30 ಈ ಟ್ಯುಟೋರಿಯಲ್ ನಲ್ಲಿ ನಾವು ಕೋರ್ಸ್ ಅಡ್ಮಿನಿಸ್ಟ್ರೇಷನ್, ಕೋರ್ಸ್ ನಲ್ಲಿ ಆಕ್ಟಿವಿಟಿಸ್ ಮತ್ತು ರಿಸೋರ್ಸ್ – ಇವುಗಳ ಕುರಿತು ಕಲಿತಿದ್ದೇವೆ.
13:40 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.

ಕೋರ್ಸ್ ನ ಫಲಿತಾಂಶವನ್ನು ವಿವರಿಸುವ ಒಂದು ಹೊಸ Page ಅನ್ನು ಸೇರಿಸಿ. ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ.

13:53 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
14:02 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
14:13 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
14:17 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
14:31 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14