Linux/C2/The-Linux-Environment/Kannada

From Script | Spoken-Tutorial
Jump to: navigation, search
Time Narration
00:00 ಲಿನಕ್ಸ್ ಎನ್ವಿರೋನ್ಮೆಂಟ್ ಮತ್ತು ಅದರ ಕುಶಲತಾಪೂರ್ವಕ ಬಳಕೆಯ ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ಸಚಿತ್ರವಾಗಿ ತೋರಿಸಿರುವ ಉದಾಹರಣೆಗಳನ್ನು ಪರೀಕ್ಷಿಸಲು ಲಿನಕ್ಸ್ ಇರುವ ಸಿಸ್ಟಮ್ ಮತ್ತು ಅದರಲ್ಲಿ ಉಬುಂಟು ಇರುವುದು ಅನಿವಾರ್ಯವಾಗಿದೆ.
00:13 ನೀವು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ನ ಉಪಯೋಗವನ್ನು ತಿಳಿದಿರುವಿರಿ ಮತ್ತು ಕಮಾಂಡ್ ಗಳು, ಫೈಲ್ ಸಿಸ್ಟಮ್ ಗಳು ಮತ್ತು ಶೆಲ್ ಗಳ ಬಗ್ಗೆ ಮೂಲಭೂತಜ್ಞಾನವನ್ನು ಹೊಂದಿದ್ದೀರಿ ಎಂದು ನಾನು ಭಾವಿಸುತ್ತೇನೆ.
00:22 ನೀವು ಆಸಕ್ತರಿದ್ದಲ್ಲಿ, ಅಥವಾ ಇವುಗಳನ್ನು ಇನ್ನೂ ಸ್ಪಷ್ಟವಾಗಿ ತಿಳಿಯಬಯಸಿದಲ್ಲಿ ನಿಸ್ಸಂಕೋಚವಾಗಿ ಈ ವೆಬ್ಸೈಟ್ ನಲ್ಲಿರುವ ಇನ್ನೊಂದು ಟ್ಯುಟೋರಿಯಲ್ ಅನ್ನು ವೀಕ್ಷಿಸಿ.
00:32 ದಯವಿಟ್ಟು ಗಮನಿಸಿ, ಇಲ್ಲಿ ನಾನು ಈ ಟ್ಯುಟೋರಿಯಲ್ ನ ರೆಕಾರ್ಡ್ ಗಾಗಿ ಉಬಂಟು 10.10 ಅನ್ನು ಉಪಯೋಗಿಸುತ್ತಿದ್ದೇನೆ.
00:36 ಹಾಗೂ, ಲಿನಕ್ಸ್ ಎನ್ನುವುದು ಕೇಸ್ ಸೆನ್ಸಿಟೀವ್ ಆಗಿದ್ದು ಇಲ್ಲಿ ಉಪಯೋಗಿಸುವ ಎಲ್ಲಾ ಕಮಾಂಡ್ ಗಳೂ ಲೋವರ್ ಕೇಸ್ ನಲ್ಲಿ ಇರುತ್ತವೆ, ಇಲ್ಲದಿದ್ದಲ್ಲಿ ಅದನ್ನು ತಿಳಿಸಲಾಗಿದೆ.
00:46 ಲಿನಕ್ಸ್ ಎನ್ವಿರೋನ್ಮೆಂಟ್ ಎನ್ನುವುದು ಆಪರೇಟಿಂಗ್ ಸಿಸ್ಟಮ್ ನಿಮ್ಮ ಜೊತೆ ಹೇಗೆ ವ್ಯವಹರಿಸುತ್ತದೆ, ಅದು ನಿಮ್ಮ ಕಮಾಂಡ್ ಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಹಾಗೂ ನಿಮ್ಮ ಕಾರ್ಯಗಳನ್ನು ಹೇಗೆ ಇಂಟರ್ಪ್ರೆಟ್ ಮಾಡುತ್ತದೆ ಮುಂತಾದವುಗಳನ್ನು ನಿರ್ಧರಿಸುತ್ತದೆ.
00:55 ಶೆಲ್ ನ ಸೆಟ್ಟಿಂಗ್ ಅನ್ನು ಬದಲಾಯಿಸುವುದರ ಮೂಲಕ ಲಿನಕ್ಸ್ ಅನ್ನು ಇನ್ನೂ ಹೆಚ್ಚು ಕಸ್ಟಮೈಸ್ ಮಾಡಬಹುದು.
00:58 ಈಗ ಇವೆಲ್ಲಾ ಹೇಗೆ ಆಗುತ್ತವೆ ಎಂಬುದನ್ನು ತಿಳಿಯೋಣ.
00:59 ಸಾಮಾನ್ಯವಾಗಿ, ಶೆಲ್ ನ ನಡವಳಿಕೆಯು ಶೆಲ್ ವೇರಿಯೇಬಲ್ ನ ಮೂಲಕ ನಿರ್ಧರಿಸಲ್ಪಡುತ್ತವೆ.
01:04 ಮುಖ್ಯವಾಗಿ ಎರಡು ತರಹದ ಶೆಲ್ ವೇರಿಯೇಬಲ್ ಗಳಿವೆ:

ಎನ್ವಿರೋನ್ಮೆಂಟ್ ವೇರಿಯೇಬಲ್ಸ್ ಮತ್ತು ಲೋಕಲ್ ವೇರಿಯೇಬಲ್ಸ್ ಎಂದು.

01:12 ಎನ್ವಿರೋನ್ಮೆಂಟ್ ವೇರಿಯೇಬಲ್ಸ್, ಹೆಸರಿಗೆ ತಕ್ಕಂತೆ ಇವು ಬಳಕೆದಾರನ ಸಂಪೂರ್ಣ ಬಳಕೆಯ ಕ್ಷೇತ್ರದಲ್ಲಿ ಲಭ್ಯವಾಗುತ್ತವೆ.
01:19 ಇವುಗಳು ಶೆಲ್ ಗಳ ಮೂಲಕ ರಚಿಸಲ್ಪಟ್ಟ ಸಬ್ ಶೆಲ್ ಗಳಲ್ಲೂ ಲಭ್ಯವಾಗುತ್ತವೆ. ಶೆಲ್ ಸ್ಕ್ರಿಪ್ಟ್ ನಲ್ಲಿ ಹೇಗೋ ಹಾಗೆ.
01:24 ಲೋಕಲ್ ವೇರಿಯೇಬಲ್ಸ್, ಹೆಸರಿಗೆ ತಕ್ಕಂತೆ ಇವು ತುಂಬಾ ನಿರ್ಬಂಧಿತವಾಗಿ ಹಾಗೂ ಸೀಮಿತವಾಗಿ ಲಭ್ಯವಾಗುತ್ತವೆ.
01:31 ಇವುಗಳು ಶೆಲ್ ಗಳ ಮೂಲಕ ರಚಿಸಲ್ಪಟ್ಟ ಸಬ್ ಶೆಲ್ ಗಳಲ್ಲಿ ಲಭ್ಯವಾಗುವುದಿಲ್ಲ.
01:36 ನಾವು ಈ ಟ್ಯುಟೋರಿಯಲ್ ನಲ್ಲಿ ಮುಖ್ಯವಾಗಿ ಎನ್ವಿರೋನ್ಮೆಂಟ್ ವೇರಿಯೇಬಲ್ ಗಳ ಬಗ್ಗೆ ಚರ್ಚಿಸುತ್ತಿರುವುದರಿಂದ, ನಾವು ಮೊದಲು ಶೆಲ್ ವೇರಿಯೇಬಲ್ ಗಳ ವ್ಯಾಲ್ಯೂ ಹೇಗೆ ನೋಡುವುದೆಂದು ತಿಳಿಯೋಣ.
01:48 ಪ್ರಸ್ತುತ ಶೆಲ್ ನಲ್ಲಿರುವ ಎಲ್ಲಾ ವೇರಿಯೇಬಲ್ ಗಳನ್ನು ನೋಡಲು ನಾವು ಕಮಾಂಡ್ ಸೆಟ್ ಅನ್ನು ಚಲಾಯಿಸೋಣ.
01:53 ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡಿ,

"set space 'vertical-bar' (|) more" ಮತ್ತು enter ಒತ್ತಿ.

02:00 ನಾವು ಎಲ್ಲಾ ಪ್ರಸ್ತುತ ಶೆಲ್ ಗಳ ವೇರಿಯೇಬಲ್ ಗಳನ್ನು ನೋಡಬಲ್ಲೆವು.
02:04 ಉದಾಹರಣೆಗಾಗಿ: HOME ಎನ್ವಿರೋನ್ಮೆಂಟ್ ವೇರಿಯೇಬಲ್ ಅನ್ನು ನೋಡಿ ಹಾಗೂ ಅದಕ್ಕೆ ಅಸೈನ್ ಆದ ವ್ಯಾಲ್ಯೂ ವನ್ನೂ ಕೂಡಾ ಗಮನಿಸಿ.
02:15 ಲಿಸ್ಟ್ ಗೆ ಹೋಗಲು Enter ಒತ್ತಿ ಹಾಗೂ ಅಲ್ಲಿಂದ ಹೊರಬರಲು q ಒತ್ತಿ.
02:21 ಇಲ್ಲಿ, ವೇರಿಯೇಬಲ್ ಸೂಚಿಯು ಸುನಿಯೋಜಿತವಾಗಿ ಹಾಗೂ ಮಲ್ಟಿಪೇಜ್ ಔಟ್ಪುಟ್ ಆಗಿ ತೋರಲು set ನಲ್ಲಿನ ಔಟ್ಪುಟ್ ಅನ್ನು more ಗೆ ರಿಡೈರೆಕ್ಟ್ ಮಾಡಲಾಗಿದೆ.
02:38 ಕೇವಲ ಎನ್ವಿರೋನ್ಮೆಂಟ್ ವೇರಿಯೇಬಲ್ ಗಳನ್ನು ನೋಡಲು env ಕಮಾಂಡ್ ಅನ್ನು ಚಲಾಯಿಸಿ.
02:45 ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡಿ,

"env space 'vertical-bar' (|) more" ಹಾಗೂ enter ಒತ್ತಿ.

02:52 ಉದಾಹರಣೆಗಾಗಿ,

slash bin slash bash ಎಂಬ ವ್ಯಾಲ್ಯೂ ಹೊಂದಿರುವ ಶೆಲ್ ವೇರಿಯೇಬಲ್ ಅನ್ನು ಗಮನಿಸಿ.

03:00 ಪುನಃ, ಲಿಸ್ಟ್ ನಿಂದ ಹೊರಬರಲು q ಅನ್ನು ಒತ್ತಿ.
03:07 ಈಗ ನಾವು ಲಿನಕ್ಸ್ ನಲ್ಲಿನ ಕೆಲವು ಮುಖ್ಯವಾದ ಎನ್ವಿರೋನ್ಮೆಂಟ್ ವೇರಿಯೇಬಲ್ ಗಳ ಬಗ್ಗೆ ಚರ್ಚಿಸೋಣ.
03:11 ನಾವಿಲ್ಲಿ ನಮ್ಮ ಎಲ್ಲಾ ಪ್ರದರ್ಶನಗಳಿಗಾಗಿ bash shell ಅನ್ನು ಉಪಯೋಗಿಸುತ್ತಿದ್ದೇವೆ.
03:15 ಬೇರೆ ಬೇರೆ ಶೆಲ್ ಗಳು ಸ್ವಲ್ಪ ವಿಭಿನ್ನ ರೀತಿಯಲ್ಲಿ ಕಸ್ಟಮೈಸ್ ಆಗಿರುತ್ತವೆ.
03:19 ವಾಸ್ತವವಾಗಿ ವೇರಿಯೇಬಲ್ ಗಳು ಏನನ್ನು ಶೇಖರಿಸಿಡುತ್ತವೆ ಎಂದು ನೋಡಲು ನಾವು echo ಕಮಾಂಡ್ ನ ಜೊತೆಗೆ ನಿರ್ದಿಷ್ಟ ವೇರಿಯೇಬಲ್ ಹೆಸರಿನ ಹಿಂದೆ ಡಾಲರ್ ಚಿಹ್ನೆಯನ್ನು ಉಪಯೋಗಿಸಬೇಕು.
03:30 ನಾವು ನೋಡುವ ಮೊದಲ ಎನ್ವಿರೋನ್ಮೆಂಟ್ ವೇರಿಯೇಬಲ್ ಎಂದರೆ ಶೆಲ್ ವೇರಿಯೇಬಲ್.
03:35 ಇದು ಪ್ರಸ್ತುತ ಶೆಲ್ ನ ಹೆಸರನ್ನು ಶೇಖರಿಸಿಡುತ್ತದೆ.
03:37 ಶೆಲ್ ವೇರಿಯೇಬಲ್ ನ ವ್ಯಾಲ್ಯೂ ಅನ್ನು ನೋಡಲು, ಟರ್ಮಿನಲ್ ನಲ್ಲಿ

"echo space dollar, S-H-E-L-L" ಎಂದು ದೊಡ್ಡ ಅಕ್ಷರದಲ್ಲಿ ಟೈಪ್ ಮಾಡಿ enter ಒತ್ತಿ.

03:55 ಇಲ್ಲಿ slash bin slash bash ಎಂಬುದು ನಾವು ಪ್ರಸ್ತುತ ಕೆಲಸ ಮಾಡುತ್ತಿರುವ ಶೆಲ್ ಆಗಿದೆ.
04:02 ಮುಂದಿನ ವೇರಿಯೇಬಲ್ HOME ಆಗಿದೆ.
04:05 ನಾವು ಲಿನಕ್ಸ್ ಗೆ ಲಾಗ್-ಇನ್ ಆದಾಗ, ಅದು ನಮ್ಮನ್ನು ಸಾಮಾನ್ಯವಾಗಿ ನಮ್ಮ ಯೂಸರ್ ನೇಮ್ ನ ಹೆಸರಿರುವ ಡೈರಕ್ಟರಿಗೆ ಕರೆದೊಯ್ಯುತ್ತದೆ.
04:11 ಈ ಡೈರಕ್ಟರಿಯನ್ನು ಹೋಮ್ ಡೈರಕ್ಟರಿಯೆಂದು ಕರೆಯುತ್ತಾರೆ ಮತ್ತು ಇದುವೇ ಹೋಮ್ ವೇರಿಯೇಬಲ್ ನಲ್ಲಿ ಸಿಗುತ್ತದೆ.
04:17 ವ್ಯಾಲ್ಯೂವನ್ನು ನೋಡಲು, ಟರ್ಮಿನಲ್ ನಲ್ಲಿ echo space dollar ಮತ್ತು H-O-M-E ಎಂದು ದೊಡ್ಡ ಅಕ್ಷರಗಳಲ್ಲಿ ಟೈಪ್ ಮಾಡಿ Enter ಒತ್ತಿ.
04:29 PATH ಎಂಬುದು ನಂತರದ ಎನ್ವಿರೋನ್ಮೆಂಟ್ ವೇರಿಯೇಬಲ್ ಆಗಿದೆ.
04:32 PATH ಎಂಬ ವೇರಿಯೇಬಲ್ ನಲ್ಲಿ ಡೈರಕ್ಟರಿ ಗಳ ನಿಖರವಾದ ಪಾಥ್ ಗಳು ಇವೆ ಹಾಗೂ ಶೆಲ್ ಎಂಬುದು ಯಾವುದೇ ಎಕ್ಸಿಕ್ಯೂಟೇಬಲ್ ಕಮಾಂಡ್ ಗಳನ್ನು ಹುಡುಕಲು ಇದನ್ನು ಉಪಯೋಗಿಸುತ್ತದೆ .
04:40 ಈಗ ಪಾಥ್ ವೇರಿಯೇಬಲ್ ನ ವ್ಯಾಲ್ಯೂವನ್ನು ನೋಡೋಣ.
04:43 ಪುನಃ ಟರ್ಮಿನಲ್ ನಲ್ಲಿ "echo space dollar ಮತ್ತು ದೊಡ್ಡ ಅಕ್ಷರಗಳಲ್ಲಿ P-A-T-H" ಎಂದು ಟೈಪ್ ಮಾಡಿ ಎಂಟರ್ ಒತ್ತಿ.
04:51 ನನ್ನ ಕಂಪ್ಯೂಟರ್ ನಲ್ಲಿ ಅದು ಹೀಗೆ ತೋರಿಸುತ್ತದೆ -

slash user slash local slash sbin slash user slash local slash bin slash user slash sbin slash user slash bin etc.

05:04 ಇದು ಒಂದು ಸಿಸ್ಟಮ್ ನಿಂದ ಇನ್ನೊಂದು ಸಿಸ್ಟಮ್ ಸ್ವಲ್ಪ ಬೇರೆಯಾಗಿರುತ್ತದೆ.
05:07 ಇದೊಂದು ಡೈರಕ್ಟರಿಗಳ ಲಿಸ್ಟ್ ಆಗಿದ್ದು ಇದು : ಕೊಲನ್ ನಿಂದ ವಿಭಾಗಿಸಲಾಗಿದೆ. ಹೀಗಾಗಿ ಶೆಲ್ ಈ ಕ್ರಮದಲ್ಲಿರುವ ಎಕ್ಸಿಕ್ಯೂಟೆಬಲ್ ಕಮಾಂಡ್ ಗಳನ್ನು ಹುಡುಕುತ್ತದೆ.
05:18 ನಾವೂ ಕೂಡಾ ನಮ್ಮ ಸ್ವಂತದ ಡೈರಕ್ಟರಿಯನ್ನು ಈ ಲಿಸ್ಟ್ ಗೆ ಸೇರಿಸಬಹುದು, ಇದರಿಂದಾಗಿ ನಮ್ಮ ಡೈರಕ್ಟರಿ ಕೂಡಾ ಶೆಲ್ ನಿಂದ ಹುಡುಕಲ್ಪಡುತ್ತದೆ.
05:25 ಹೀಗೆ ನಮ್ಮ ಸ್ವಂತದ ಡೈರಕ್ಟರಿಯನ್ನು ಲಿಸ್ಟ್ ಗೆ ಸೇರಿಸಲು ಟರ್ಮಿನಲ್ ನಲ್ಲಿ
5:29 "P-A-T-H ಎಂದು ಕ್ಯಾಪಿಟಲ್ ನಲ್ಲಿ = (equal-to) $ (dollar) ಮತ್ತೆ ಕ್ಯಾಪಿಟಲ್ ನಲ್ಲಿ P-A-T-H : (colon) / (slash) home / (slash) ಮತ್ತು ನಮ್ಮ ಡೈರಕ್ಟರಿಯ ಹೆಸರು ಟೈಪ್ ಮಾಡಿ ಎಂಟರ್ ಒತ್ತಿ.
05:54 ಈಗ ನಾವು PATH ನ ವ್ಯಾಲ್ಯೂವನ್ನು echo ಮಾಡಿದಲ್ಲಿ,
06:04 ನಮ್ಮ ಡೈರಕ್ಟರಿ ಕೂಡಾ PATH ವೇರಿಯೇಬಲ್ ನ ಒಂದು ಅಂಗವಾಗುತ್ತದೆ.
06:10 ನೋಡಿ, ಡೈರಕ್ಟರಿಯು ಈಗ ಇಲ್ಲಿ ಪ್ರಸ್ತುತವಿದೆ.
06:16 ಇನ್ನೊಂದು ಕುತೂಹಲಕಾರಿಯಾದ ವೇರಿಯೇಬಲ್ ಎಂದರೆ LOGNAME.
06:20 ಇದು ಪ್ರಸ್ತುತ ಕ್ರಿಯಾಶೀಲನಾಗಿರುವ ಯೂಸರ್ ನ ಯೂಸರ್ ನೇಮ್ ಅನ್ನು ಸಂಗ್ರಹಿಸಿಡುತ್ತದೆ.
06:24 ಈ ವ್ಯಾಲ್ಯೂವನ್ನು ನೋಡಲು "echo space dollar LOGNAME" ಎಂದು ಟೈಪ್ ಮಾಡಿ Enter ಒತ್ತಿ.
06:35 ನಾವು ಟರ್ಮಿನಲ್ ಅನ್ನು ತೆರೆದಾಗ ನಮಗೆ ಒಂದು ಡಾಲರ್ ಚಿಹ್ನೆ ಕಾಣಸಿಗುತ್ತದೆ. ಅದುವೇ ಪ್ರಾಂಪ್ಟ್ ಆಗಿದ್ದು ಅಲ್ಲಿಯೇ ನಾವು ಕಮಾಂಡ್ ಗಳನ್ನು ಬರೆಯುತ್ತೇವೆ.
06:42 ಇದೊಂದು ಪ್ರೈಮರಿ ಪ್ರೋಮ್ಪ್ಟ್ ಚಿಹ್ನೆ ಆಗಿದ್ದು ಇದು PS1 ಎಂಬ ಎನ್ವಿರೋನ್ಮೆಂಟ್ ವೇರಿಯೇಬಲ್ ಅನ್ನು ಪ್ರತಿನಿಧಿಸುತ್ತದೆ.
06:47 ಇಲ್ಲಿ ಸೆಕೆಂಡರಿ ಪ್ರೋಮ್ಪ್ಟ್ ಚಿಹ್ನೆ ಕೂಡಾ ಇದೆ.
06:50 ನಮ್ಮ ಕಮಾಂಡ್ ದೊಡ್ಡದಾಗಿದ್ದು ಅದು ಒಂದು ಲೈನ್ ಗಿಂತ ಹೆಚ್ಚು ಉದ್ದವಾಗಿದ್ದಲ್ಲಿ ಅದು ಎರಡನೇ ಲೈನ್ ನಲ್ಲಿ ಶುರುವಾಗುವಾಗ ಗ್ರೇಟರ್ ದೆನ್ (>) ಚಿಹ್ನೆಯೊಂದಿಗೆ ಆರಂಭವಾಗುತ್ತದೆ.
07:00 ಇದು ಸೆಕೆಂಡರಿ ಪ್ರೊಮ್ಪ್ಟ್ ಚಿಹ್ನೆಯಾಗಿದ್ದು ಇದು PS2 ಎಂಬ ಎನ್ವಿರೋನ್ಮೆಂಟ್ ವೇರಿಯೇಬಲ್ ಅನ್ನು ಪ್ರತಿನಿಧಿಸುತ್ತದೆ.
07:05 ಸೆಕೆಂಡರಿ ಕಮಾಂಡ್ ಪ್ರೊಮ್ಪ್ಟ್ ನ ವ್ಯಾಲ್ಯೂ ವನ್ನು ನೋದಲು ಟರ್ಮಿನಲ್ ನಲ್ಲಿ echo space dollar ($) PS2 ಎಂದು ಟೈಪ್ ಮಾಡಿ Enter ಒತ್ತಿ.
07:20 ನಾವು ನಮ್ಮ ಪ್ರೈಮರಿ ಪ್ರೊಮ್ಪ್ಟ್ ನ ಚಿಹ್ನೆಯನ್ನು ಬದಲಿಸಬಹುದು, ಈಗ “at the rate” <@> ಅನ್ನು ಪ್ರೊಮ್ಪ್ಟ್ ಆಗಿ ಇಡಬೇಕೆಂದುಕೊಳ್ಳೋಣ.
07:28 ಹೀಗೆ ಮಾಡಲು,

"PS1 'equal-to' (=) ಹಾಗೂ ಕೋಟ್ ನ ಒಳಗೆ 'at the rate' (@) ಎಂದು ಟೈಪ್ ಮಾಡಿ Enter ಒತ್ತಿ.

07:41 ಈಗ ಡಾಲರ್ ($) ಚಿಹ್ನೆಯ ಬದಲಾಗಿ ನಾವು ಎಟ್ ದ ರೇಟ್ (@) ಚಿಹ್ನೆಯನ್ನು ಪ್ರೊಮ್ಪ್ಟ್ ಆಗಿ ನೋಡಬಹುದು.
07:50 ನಾವು ಇನ್ನೂ ಕುತೂಹಲಕಾರಿಯಾದುದನ್ನು ಮಾಡಬಹುದು. ಅಂದರೆ, ನಾವು ನಮ್ಮ ಯೂಸರ್ ನೇಮ್ ಅನ್ನು ಪ್ರೊಮ್ಪ್ಟ್ ಆಗಿ ತೋರಿಸಬಹುದು.
07:56 PS1 'equal-to' (=) ಕೋಟ್ ನ ಒಳಗೆ dollar ($) LOGNAME ಎಂದು ದೊಡ್ಡ ಅಕ್ಷರದಲ್ಲಿ ಟೈಪ್ ಮಾಡಿ Enter ಒತ್ತಿ.
08:12 ಈಗ ನನ್ನ ಯೂಸರ್ ನೇಮ್ ಎಂಬುದೇ ಪ್ರೊಮ್ಪ್ಟ್ ಆಗಿದೆ.
08:16 ಹಿಂದಿನಂತೆ ಮಾಡಲು, PS1 'equal-to' (=) ಕೋಟ್ ನ್ ಒಳಗೆ dollar ($) ಎಂದು ಟೈಪ್ ಮಾಡಿ Enter ಒತ್ತಿ.
08:28 ನಾವು ಹಲವು ಎನ್ವಿರೋನ್ಮೆಂಟ್ ವೇರಿಏಬಲ್ ಗಳಿಗೆ ವ್ಯಾಲ್ಯೂ ವನ್ನು ಅಸೈನ್ ಮಾಡಿದೆವು.
08:32 ಆದರೆ, ನೆನಪಿಡಿ, ಈ ಬದಲಾವಣೆಗಳು ಕೇವಲ ಪ್ರಸ್ತುತ ಸೆಶನ್ ಗೆ ಮಾತ್ರ ಸೀಮಿತವಾಗಿದೆ.
08:37 ಉದಾಹರಣೆಗೆ, ನಾವು ಈಗಷ್ಟೇ PATH ಎಂಬ ವೇರಿಯೇಬಲ್ ಅನ್ನು ನಮ್ಮ ಡೈರಕ್ಟರಿಗೆ ಸೇರಿಸಿದೆವು.
08:40 ನಾವು ಈಗ ಈ ಟರ್ಮಿನಲ್ ಅನ್ನು ಕ್ಲೋಸ್ ಮಾಡಿ ಮತ್ತೆ ಪುನಃ ಹೊಸ ಟರ್ಮಿನಲ್ ಅನ್ನು ಓಪನ್ ಮಾಡಿ ಪಾತ್ ವೇರಿಯೇಬಲ್ ಅನ್ನು ಎಕೋ ಮಾಡುವದರ ಮೂಲಕ ಚೆಕ್ ಮಾಡಿದಲ್ಲಿ,
09:00 ನಮಗೆ ಆಶ್ಚರ್ಯವಾಗುವುದೆಂದರೆ, ಮೊದಲಿನ ಬದಲಾವಣೆಗಳು ಈಗ ಕಾಣುವುದಿಲ್ಲ.
09:05 ಈ ಬದಲಾವಣೆಗಳನ್ನು ಶಾಶ್ವತವಾಗಿ ಮಾಡುವ ವಿಧಾನವು ಮುಂದುವರಿದ ಟ್ಯುಟೋರಿಯಲ್ ಗಳಲ್ಲಿ ತಿಳಿಸಲಾಗುತ್ತದೆ.
09:13 ನಾವು ಈ ಮೊದಲು ಎಕ್ಸಿಕ್ಯೂಟ್ ಮಾಡಿದ ಕಮಾಂಡ್ ಅನ್ನು ಪುನಃ ಎಕ್ಸಿಕ್ಯೂಟ್ ಮಾಡಬಯಸಿದಲ್ಲಿ ಏನು ಮಾಡಬೇಕು? ನಾವದನ್ನು ಪುನಃ ಟೈಪ್ ಮಾಡಬೇಕೇ?
9:22 ಇಲ್ಲ, ಇದಕ್ಕೆ ತುಂಬಾ ಪರಿಹಾರಗಳಿವೆ.
09:26 ಮೊದಲಿಗೆ, ಸುಮ್ಮನೆ ನೀವು ಅಪ್ ಏರೋ ಕೀ ಯನ್ನು ಒತ್ತಿದಲ್ಲಿ ಅದು ನೀವು ಅಂತಿಮವಾಗಿ ಟೈಪ್ ಮಾಡಿದ ಕಮಾಂಡ್ ಅನ್ನು ತೋರಿಸುತ್ತದೆ.
09:33 ಅದನ್ನು ಒತ್ತಿ ಹಿಡಿದಲ್ಲಿ ಅದು ಹಿಂದಿನ ಎಲ್ಲ ಕಮಾಂಡ್ ಗಳನ್ನೂ ಸಾಲಾಗಿ ತೋರಿಸುತ್ತದೆ.
09:37 ಹಿಂದಕ್ಕೆ ಬರಲು ಡೌನ್ ಕೀ ಯನ್ನು ಒತ್ತಿ.
09:42 ಆದರೆ, ನೀವು ತುಂಬಾ ಕಮಾಂಡ್ ಗಳನ್ನು ಒಟ್ಟಿಗೇ ಸಾಲಾಗಿ ನೋಡಿದಾಗ ಅದು ಬಹಳ ಇಕ್ಕಟ್ಟಾಗಿ ತೋರುತ್ತದೆ. ಹಾಗಾಗಿ ಹಿಸ್ಟ್ರಿ ಕಮಾಂಡ್ ಅನ್ನು ಬಳಸುವುದು ಸೂಕ್ತವಾಗಿದೆ.
09:52 ಪ್ರೊಮ್ಪ್ಟ್ ನಲ್ಲಿ "history" ಎಂದು ಟೈಪ್ ಮಾಡಿ,
09:58 Enter ಒತ್ತಿ, ನೋಡಿ, ಈ ಮೊದಲು ಪ್ರಯೋಗಿಸಿದ ಎಲ್ಲ ಕಮಾಂಡ್ ಗಳೂ ಕಾಣುತ್ತವೆ.
10:04 ನೀವು ಉದ್ದದ ಸೂಚಿಯ ಬದಲಾಗಿ ಕೇವಲ ಕೊನೆಯ ಹತ್ತು ಕಮಾಂಡ್ ಗಳನ್ನು ನೋಡಬಯಸಿದಲ್ಲಿ,
10:08 "history space 10" ಎಂದು ಟೈಪ್ ಮಾಡಿ Enter ಒತ್ತಿ.
10:20 ಗಮನಿಸಿ, ಈ ಸೂಚಿಯಲ್ಲಿ ಪ್ರತಿಯೊಂದು ಕಮಾಂಡ್ ಕೂಡಾ ಕ್ರಮಸಂಖ್ಯೆಯನ್ನು ಹೊಂದಿರುತ್ತದೆ.
10:27 ಯಾವುದಾದರೂ ನಿರ್ದಿಷ್ಟ ಕಮಾಂಡ್ ಅನ್ನು ಪುನರಾವರ್ತಿಸಬಯಸಿದಲ್ಲಿ,
10:32 ಎಕ್ಸ್ಲಮೇಶನ್ (!) ಚಿಹ್ನೆಯ ಜೊತೆ ಕಮಾಂಡ್ ನ ಕ್ರಮಸಂಖ್ಯೆಯನ್ನು ಟೈಪ್ ಮಾಡಿ, ಇಲ್ಲಿ ಅದು 442, ಇದರಿಂದ echo space dollar path ಎಂಬುದು ಎಕ್ಸಿಕ್ಯೂಟ್ ಆಗುತ್ತದೆ.
10:51 ನೀವು ಕೊನೆಯ ಕಮಾಂಡ್ ಅನ್ನು ಪುನಃ ಎಕ್ಸಿಕ್ಯೂಟ್ ಮಾಡಬಯಸಿದಲ್ಲಿ ಎಕ್ಸಮೇಶನ್ (!) ಚಿಹ್ನೆಯನ್ನು ಎರಡು ಬಾರಿ ಟೈಪ್ ಮಾಡಿ Enter ಒತ್ತಿ.
11:03 ನಂತರದ ವಿಷಯ ನಾವು ನೋಡುವುದೆಂದರೆ tilde ಎಂಬ ಪರ್ಯಾಯ. Tilde (~) ಎಂಬ ಅಕ್ಷರವು ಹೋಮ್ ಡೈರಕ್ಟರಿಗೆ ಹೋಗಲು ಇರುವ ಕಿರುದಾರಿಯಾಗಿದೆ.
11:12 ನೀವು ಹೋಮ್ ಡೈರಕ್ಟರಿಯಲ್ಲಿ testtree ಎಂಬ ಹೆಸರಿನ ಡೈರಕ್ತರಿಯನ್ನಿ ಹೊಂದಿದ್ದೀರಾ ಎಂದುಕೊಳ್ಳಿ. ನೀವು ಅಲ್ಲಿಗೆ ಹೋಗಲು "cd space 'tilde' slash testtree" ಎಂದು ಬರೆದರೆ ಸಾಕು.
11:25 ನಾವು ಪ್ರಸ್ತುತ ಕೆಲಸ ಮಾಡುತ್ತಿರುವ ಡೈರಕ್ಟರಿ ಮತ್ತು ಈ ಹಿಂದೆ ಕೆಲಸ್ ಮಾಡುತ್ತಿದ್ದ ಡೈರಕ್ಟರಿ ಇವೆರಡರ ನಡುವೆ ಈ ಕಮಾಂಡ್ ಬಳಸಿಕೊಂಡು ಸಂಚರಿಸಬಹುದು, cd 'tilde' minus ಅಥವಾ ಕೇವಲ cd minus.
11:35 ಉದಾಹರಣೆಗೆ, ನಾವೀಗ testtree ಎಂಬ ಡೈರಕ್ಟರಿಯಲ್ಲಿದ್ದೇವೆ. ನಾವು ಈ ಹಿಂದೆ ಕೆಲಸ ಮಾಡುತ್ತಿದ್ದದ್ದು Home ಡೈರಕ್ಟರಿ.
11:41 ಹಾಗಾದರೆ, ನಾವು "cd space minus" ಎಂದು ಟೈಪ್ ಮಾಡಿ Enter ಒತ್ತಿ. ಇದೀಗ home ಡೈರಕ್ಟರಿಗೆ ಹೋಗುತ್ತದೆ.
11:47 ಪುನಃ ಇದನ್ನು ಚಲಾಯಿಸಿ, ನೀವು ಪುನಃ testtree ಡೈರಕ್ತರಿಗೆ ಮರಳುತ್ತೀರಿ.
11:55 ಕೊನೆಯ ಹಾಗೂ ತುಂಬಾ ಮಹತ್ವಪೂರ್ಣವಾದ ಕಮಾಂಡ್ ಎಂದರೆ, alias ಕಮಾಂಡ್.
11:59 ಕೆಲವೊಮ್ಮೆ ನಿಮ್ಮ ಬಳಿ ಬಹಳ ಉದ್ದದ ಕಮಾಂಡ್ ಇದ್ದು ಅದನ್ನು ಪುನಃ ಪುನಃ ರನ್ ಮಾಡಬೇಕಾಗಬಹುದು.
12:04 ಈ ಸಂದರ್ಭದಲ್ಲಿ ನಾವು ಆ ಕಮಾಂಡ್ ಗೆ ಒಂದು ಸಣ್ಣ ಅಡ್ಡ ಹೆಸರನ್ನಿಟ್ಟು ಉದ್ದದ ಕಮಾಂಡ್ ನ ಜಾಗದಲ್ಲಿ ಅದನ್ನು ಉಪಯೋಗಿಸಬಹುದು.
12:11 ನಾವು ಆಗಾಗ ಹೋಗುವ ಮ್ಯೂಸಿಕ್ ಎಂಬುದು ಬಹಳ ಉದ್ದವಾದ ಡೈರಕ್ತರಿಯ ಶ್ರೇಣಿಯನ್ನು ಹೊಂದಿದೆ ಎಂದುಕೊಳ್ಳೋಣ, ಹೀಗಿರುವಾಗ ನೀವದಕ್ಕೆ ಹೀಗೆ ಒಂದು ಅಡ್ಡಹೆಸರನ್ನಿಡಬಹುದು,
12:20 " alias space cdMusic 'equal-to' ಡಬಲ್ ಕೋಟ್ ನಲ್ಲಿ cd space slash home slash arc slash files slash entertainment slash music " ಎಂದು ಟೈಪ್ ಮಾಡಿ Enter ಒತ್ತಿ.
12:47 ಈಗ ನೀವು ಪ್ರತಿಬಾರಿ ಈ ಡೈರಕ್ಟರಿಗೆ ಹೋಗಲು ಕೇವಲ cdMusic ಎಂದು ಟೈಪ್ ಮಾಡಿ Enter ಒತ್ತಿದರೆ ಸಾಕು.
12:55 ನೋಡಿ, ನಾವೀಗ Music ಎಂಬ ಡೈರಕ್ಟರಿಯಲ್ಲಿದ್ದೇವೆ.
12:58 ನಾವೀಗ, ಈ ಹಿಂದೆ ಕೆಅಸಮಾಡುತ್ತಿದ್ದ ಡೈರಕ್ಟರಿಗೆ ಹೋಗಲು ಪ್ರೊಮ್ಪ್ಟ್ ನಲ್ಲಿ "cd space minus" ಎಂದು ಟೈಪ್ ಮಾಡಬಹುದು.
13:08 ಅಡ್ಡ ಹೆಸರನ್ನು ತೆಗೆದುಹಾಕಲು unalias space cdMusic ಎಂದು ಟೈಪ್ ಮಾಡಿ Enter ಒತ್ತಿ.
13:20 ಈಗ ಪುನಃ cdMusic ಎಂದು ಟರ್ಮಿನಲ್ ನಿಂದ ಕಮಾಂಡ್ ಹೊರಡಿಸಿ, ನೀವು command not found ಎಂಬ ಎರರ್ ಅನ್ನು ಕಾಣುವಿರಿ.
13:30 ಊಹಿಸಿಕೊಳ್ಳಿ, ನಮ್ಮ ವರ್ಕಿಂಗ್ ಡೈರಕ್ಟರಿಯಲ್ಲಿ test1 ಮತ್ತು test2 ಎಂಬ ಎರಡು ಡೈರಕ್ಟರಿಗಳಿವೆ,
13:38 ಹಾಗೂ ನಾವು rm test1 ಎಂದು ಕಮಾಂಡ್ ಚಲಾಯಿಸಿದಲ್ಲಿ test1 ಎಂಬುದು ಸದ್ದಿಲ್ಲದೆ ಡಿಲೀಟ್ ಆಗುತ್ತದೆ.
13:45 ನಮಗೆ ತಿಳಿದಿರುವಂತೆ rm ಕಮಾಂಡ್ ನಲ್ಲಿ hyphen I ಎಂಬುದು ಪರಸ್ಪರ ತೆಗೆದುಹಾಕುವ ಪ್ರಕ್ರಿಯೆಯನ್ನು ಮಾಡುತ್ತದೆ.
13:52 ಹಾಗಾಗಿ ನಾವು ಏಲಿಯಸ್ ಅನ್ನು alias rm equal-to, ಈಗ ಕೊಟ್ ನ ಒಳಗೆ “rm space hyphen i” ಎಂದು ಸೆಟ್ ಮಾಡಬಹುದು.
14:03 ಈಗ ನಾವು ಯಾವಾಗ rm ಅನ್ನು ಚಲಾಯಿಸುತ್ತೇವೆಯೋ ಆಗ ನಿಜವಾಗಿ rm hyphen I ಎಂಬುದು ರನ್ ಆಗಬೇಕು.
14:13 ಹಾಗಾಗಿ, ಯಾವಾಗ test 1 ಎಂಬುದು ಡಿಲಿಟ್ ಆಗುತ್ತದೆಯೋ ಆಗ ಸಿಸ್ಟಮ್ test 2 ನ್ನು ಡಿಲಿಟ್ ಮಾಡುವ ಮೊದಲು ಕೇಳುತ್ತದೆ.
14:20 ಹೀಗೆ ನೀವು ಈ ಟ್ಯುಟೋರಿಯಲ್ ನಲ್ಲಿ ಎನ್ವಿರೋನ್ಮೆಂಟ್ ವೇರಿಯೇಬಲ್ ಗಳ ಬಗ್ಗೆ ಹಿಸ್ಟ್ರಿ ಹಾಗೂ ಅಲಿಯಾಸಿಂಗ್ ಗಳ ಬಗ್ಗೆ ಕಲಿತಿರಿ.
14:25 ಇಲ್ಲಿ ನಾನು ಈ ಪಾಠದ ಕೊನೆಗೆ ತಲುಪಿದೆ.
14:28 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.

ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.

14:36 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ಸೈಟ್ ಗೆ ಭೇಟಿ ಕೊಡಿ.
14:42 ಈ ಪಾಠದ ಅನುವಾದಕ ಮತ್ತು ಪ್ರವಾಚಕ ವಾಸುದೇವ ಐ.ಐ.ಟಿ. ಬಾಂಬೆ.

ಧನ್ಯವಾದಗಳು.

Contributors and Content Editors

PoojaMoolya, Pratik kamble, Vasudeva ahitanal