LibreOffice-Writer-on-BOSS-Linux/C4/Creating-Newsletter/Kannada

From Script | Spoken-Tutorial
Revision as of 17:03, 28 November 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ಲಿಬ್ರೆ ಆಫೀಸ್ ರೈಟರ್ ನಲ್ಲಿ ವಿವಿಧ ಕಾಲಮ್ಗಳ ಜೊತೆಗೆ ನ್ಯೂಸ್ ಲೆಟರ್ ರಚಿಸುವ ಬಗೆಗಿರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು ಲಿಬ್ರೆ ಆಫೀಸ್ ರೈಟರ್ ನಲ್ಲಿ ನ್ಯೂಸ್ ಲೆಟರ್ ಅನ್ನು ಹೇಗೆ ರಚಿಸುವುದು ಹಾಗೂ ಅಲ್ಲಿನ ಕೆಲವು ಆಪರೇಶನ್ ಗಳ ಬಗ್ಗೆ ಕಲಿಯಲಿದ್ದೇವೆ.
00:17 ಇಲ್ಲಿ ನಾವು ಜಿ ಎನ್ ಯು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ನಲ್ಲಿ ಲಿಬ್ರೆ ಆಫೀಸ್ ಸೂಟ್ ನ 3.3.4 ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ.
00:27 ನ್ಯೂಸ್ ಲೆಟರ್ ಎನ್ನುವುದು ಒಂದು ಪ್ರಕಾಶನವಾಗಿದ್ದು ಇದನ್ನು ಚಂದಾದಾರರಿಗೆ ನಿಯಮಿತ ಸಮಯಾವಧಿಯಲ್ಲಿ ವಿತರಿಸಲಾಗುತ್ತದೆ. ಉದಾಹರಣೆಗೆ: ನಿಯತಕಾಲಿಕಗಳು, ಕರಪತ್ರಗಳು ಇತ್ಯಾದಿ.
00:39 ಇದರಲ್ಲಿ ವಿವಿಧ ಕಾಲಮ್ ಗಳಿರುತ್ತವೆ ಹಾಗೂ ಇದರಿಂದಾಗಿ ಓದುಗರೂ ಕೂಡಾ ವಿವಿಧ ವಿಭಾಗಗಳಲ್ಲಿರುವ ಲೇಖನಗಳನ್ನು ಬಹಳ ಸರಳವಾಗಿ ಓದಬಹುದಾಗಿದೆ.
00:47 ಲಿಬ್ರೆ ಆಫೀಸ್ ರೈಟರ್ ನ ಮೂಲಕ ನಾವು ಸುಲಭವಾಗಿ ಹಾಗೂ ವೇಗವಾಗಿ ಓದಬಹುದಾದ ಲೇಖನಗಳನ್ನೊಳಗೊಂಡ ನ್ಯೂಸ್ ಲೆಟರ್ ಗಳನ್ನು ತಯಾರಿಸಬಹುದು.
00:55 ಈಗ ಕ್ರಮವಾಗಿ “File”, “New” ಮತ್ತು “Text Document” ವಿಕಲ್ಪಗಳನ್ನು ಒತ್ತುವುದರ ಮೂಲಕ ಹೊಸ ಟೆಕ್ಸ್ಟ್ ಡಾಕ್ಯುಮೆಂಟ್ ಅನ್ನು ತೆರೆಯಿರಿ.
01:03 ಈ ಡಾಕ್ಯುಮೆಂಟ್ ಅನ್ನು “Newsletter” ಎಂಬ ಹೆಸರಿನಲ್ಲಿ ರಕ್ಷಿಸಿ.
01:13 ಈಗ ನಮ್ಮಲ್ಲಿ “Newsletter” ಹೆಸರಿನ ಹೊಸ ಟೆಕ್ಸ್ಟ್ ಡಾಕ್ಯುಮೆಂಟ್ ಇದೆ.
01:17 ಈಗ ನಮ್ಮ ಡಾಕ್ಯುಮೆಂಟ್ ನಲ್ಲಿ ಕಲಮ್ ಗಳನ್ನು ಸೇರಿಸೋಣ.
01:20 ಹೀಗೆ ಸೇರಿಸಲು ಮೊದಲು ಮೆನ್ಯು ಬಾರ್ ನಲ್ಲಿರುವ “Format” ಬಟನ್ ನ ಮೇಲೆ ಕ್ಲಿಕ್ ಮಾಡಿ ನಂತರ “Columns” ಎಂಬಲ್ಲಿ ಕ್ಲಿಕ್ ಮಾಡಿ.
01:27 ಹಲವು ವಿಕಲ್ಪಗಳಿರುವ ಒಂದು ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
01:31 ನಿಮಗೆ ಬೇಕಾದಷ್ಟು ಕಲಮ್ಗಳನ್ನು ಆಯ್ಕೆಮಾಡಲು,
01:34 ಈ ಕಲಮ್ಗಳ ಅಗಲ ಮತ್ತು ಸ್ಪೇಸಿಂಗ್ ಗಳನ್ನು ಸೆಟ್ ಮಾಡಲು,
01:37 ಹಾಗೂ ಸೆಪರೇಟರ್ ಲೈನ್ ನ ಹಲವು ಲಕ್ಷಣಗಳನ್ನು ಸೆಟ್ ಮಾಡಲು ಬೇಕಾದ ಕೆಲವು ವಿಕಲ್ಪಗಳು ಇಲ್ಲಿವೆ.
01:42 ನಾವು Columns ಎಂಬಲ್ಲಿನ ಮೌಲ್ಯವನ್ನು 2ಕ್ಕೆ ಏರಿಸುವುದರ ಮೂಲಕ ನ್ಯೂಸ್ ಲೆಟರ್ ಡಾಕ್ಯುಮೆಂಟ್ ಗೆ ಎರಡು ಕಲಮ್ಗಳನ್ನು ಆಯ್ಕೆ ಮಾಡೋಣ.
01:49 ಕಲಮ್ ಕ್ಷೇತ್ರದ ಪಕ್ಕದಲ್ಲಿರುವ ಐದು ಐಕಾನ್ ಗಳು ಲಭ್ಯವಿರುವ ವಿವಿಧ ಫಾರ್ಮ್ಯಾಟ್ ಗಳ ಪ್ರೀವ್ಯೂವನ್ನು ತೋರಿಸುತ್ತದೆ.
01:56 ಇಲ್ಲಿ ಎರಡನೇಯ ಫಾರ್ಮ್ಯಾಟ್ ನ ಮೇಲೆ ಕ್ಲಿಕ್ ಮಾಡೋಣ,
01:59 ಹಾಗೂ ಉಳಿದ ಎಲ್ಲಾ ಲಕ್ಷಣಗಳ ಮೌಲ್ಯವನ್ನು ಡೀಫಾಲ್ಟ್ ಆಗಿಯೇ ಇಡೋಣ,
02:05 ಹಾಗೂ “OK” ಬಟನ್ ಕ್ಲಿಕ್ ಮಾಡೊಣ.
02:08 ಟೆಕ್ಸ್ಟ್ ನ ಜಾಗದಲ್ಲಿ ಎರಡು ಕಲಮ್ ಗಳು ಕಾಣಿಸಿಕೊಂಡಿರುವುದನ್ನು ನೀವು ಗಮನಿಸಬಹುದು.
02:12 ನಾವು ಮೊದಲನೇಯ ಕಲಮ್ ನಲ್ಲಿ ಲೇಖನವನ್ನು ಬರೆಯೋಣ.
02:15 ನಾವು ಇದಕ್ಕೆ “Nature” ಎಂದು ಶೀರ್ಷಕ ಕೊಟ್ಟು ಇದನ್ನು ಬೋಲ್ಡ್ ಮಾಡಿ ಫಾಂಟ್ ಸೈಜ್ ಅನ್ನು 15 ಕ್ಕಿಡೋಣ,
02:21 ಹಾಗೂ ಶೀರ್ಷಕದ ಕೆಳಗೆ ಅದರ ಬಗ್ಗೆ ಲೇಖನವನ್ನು ಬರೆಯೋಣ.
02:25 ನೀವಿಲ್ಲಿ, ಕರ್ಸರ್ ಎಂಬುದು ಮೊದಲ ಕಾಲಮ್ ನ ಕೊನೆಯನ್ನು ತಲುಪಿದಾಗ ತಂತಾನೇ ಎರಡನೇ ಕಾಲಮ್ ಗೆ ಹೋಗುವುದನ್ನು ಗಮನಿಸಬಹುದು.
02:33 ನೀವು ಈ ಕಾಲಮ್ ನ ಒಳಗೆ ಚಿತ್ರಗಳನ್ನು ಸೇರಿಸಿ ಅದನ್ನು ಕಾಲಮ್ನ ಅಳತೆಗೆ ಸರಿಹೊಂದಿಸಬಹುದು.
02:39 ಈಗ ಇಲ್ಲಿ ಸ್ವಲ್ಪ ಸ್ಪೇಸ್ ಅನ್ನು ಕೊಟ್ಟು ನೀವು ಇನ್ನೊಂದು ಲೇಖನವನ್ನು ಈ ಕಾಲಮ್ ನಲ್ಲಿ ಬರೆಯಬಹುದು.
02:46 ನಾವೀಗ ಮೊದಲು ಬೋಲ್ಡ್ ಅಕ್ಷರಗಳಲ್ಲಿ ಹಾಗೂ ಫಾಂಟ್ ಸೈಜ್ 15 ರಲ್ಲಿ “Sports” ಎಂದು ಶೀರ್ಷಕವನ್ನು ಬರೆದು ಅದರ ಕೆಳಗೆ ಲೇಖನವನ್ನು ಬರೆಯೋಣ.
02:56 ಹೀಗೆ, ಎರಡೆರಡು ಲೇಖನಗಳನ್ನು ಒಂದೇ ಬಾರಿ ಓದಲು ಕಲಮ್ ಗಳು ಸಹಾಯ ಮಾಡುತ್ತವೆ ಎಂಬುದನ್ನು ನಾವಿಲ್ಲಿ ನೋಡಬಹುದು.
03:02 ಈಗ ಕೆಲವು ವಾಕ್ಯಗಳನ್ನು ತೆಗೆಯೋಣ, ಇದರಿಂದಾಗಿ ನಮ್ಮ ಲೇಖನವು ಒಂದನೇಯ ಕಾಲಮ್ ನಲ್ಲಿಯೇ ಮುಗಿಯುತ್ತದೆ. |- 03:08 ನಂತರ, ಮುಂದಿನ ಕಾಲಮ್ ಗಳಿಗೆ ಹೋಗಲು “Insert” ಬಟನ್ ನ ಮೇಲೆ ಕ್ಲಿಕ್ ಮಾಡಿ ಹಾಗೂ “Manual Break” ನ ಮೇಲೆ ಕ್ಲಿಕ್ ಮಾಡಿ.
03:16 ಈಗ ಕಾಣುವ ಡಯಲಾಗ್ ಬಾಕ್ಸ್ ನಲ್ಲಿ “Column break” ಎಂಬಲ್ಲಿ ಕ್ಲಿಕ್ ಮಾಡಿ “OK” ಕ್ಲಿಕ್ ಮಾಡಿ.
03:23 ಈಗ ಕರ್ಸರ್ ತಂತಾನೇ ಮುಂದಿನ ಕಲಮ್ ಗೆ ಹೋಗಿರುವುದನ್ನು ನೀವು ಗಮನಿಸಬಹುದು.
03:27 ಈಗ ನೀವು ಈ ಕಾಲಮ್ ನಲ್ಲಿ ಇನ್ನೊಂದು ಲೇಖನವನ್ನು ಬರೆಯಲಾರಂಭಿಸಬಹುದು.
03:31 ಲೇಖವನ್ನು ಆಕರ್ಷಕವಾಗಿಸಲು ನಾವು,
03:33 “Align left”, “Align right”,
03:36 ಲೇಖಕ್ಕೆ “Background Color” ಸೇರಿಸುವುದು ಮತ್ತು
03:38 ಲೇಖವನ್ನು Highlight ಮಾಡುವುದು ಮುಂತಾದ ಹಲವು ಫಾರ್ಮ್ಯಾಟಿಂಗ್ ವಿಕಲ್ಪಗಳನ್ನು ಇಲ್ಲಿ ಸೇರಿಸಬಹುದು
03:45 ಉದಾಹರಣೆಗಾಗಿ, ನಾವು ಲೇಖದ ಯಾವ ಭಾಗಕ್ಕೆ ಬ್ಯಾಕ್ ಗ್ರೌಂಡ್ ಕಲರ್ ಅನ್ನು ಹಾಕಲಿಚ್ಛಿಸುವೆವೋ ಆ ಭಾಗವನ್ನು ಆಯ್ಕೆ ಮಾಡೋಣ.
03:51 ಈಗ “Background Color” ಐಕಾನ್ ನ ಮೇಲೆ ಕ್ಲಿಕ್ ಮಾಡಿ ಮತ್ತು “Green 4” ನ ಮೇಲೆ ಕ್ಲಿಕ್ ಮಾಡಿ.
03:59 ಈಗ ನಾವು, ಆಯ್ಕೆಯಾದ ಲೇಖದ ಬಣ್ಣವು ತಿಳಿ ಹಸಿರು ಬಣ್ಣಕ್ಕೆ ಬದಲಾಗಿರುವುದನ್ನು ಗಮನಿಸಬಹುದು.
04:05 ಹೀಗೆಯೇ ನೀವು ಲೇಖದ ಬೇರೆ ಬೇರೆ ಭಾಗಗಳಿಗೆ ಬೇರೆ ಬೇರೆ ಬ್ಯಾಕ್ ಗ್ರೌಂಡ್ ಬಣ್ಣಗಳನ್ನು ಕೊಡಬಹುದು.
04:10 ನೀವು ನ್ಯೂಸ್ ಲೆಟರ್ ನಲ್ಲಿ ಬ್ಯಾನರ್ ಗಳನ್ನು ಕೂಡಾ ಸೇರಿಸಬಹುದು. ಅದಕ್ಕಾಗಿ ಡ್ರಾಯಿಂಗ್ ಟೂಲ್ ಬಾರ್ ನಲ್ಲಿ “Text” ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
04:18 ಈಗ ಟೆಕ್ಸ್ಟ್ ಬಾಕ್ಸ್ ಅನ್ನು ಡಾಕ್ಯುಮೆಂಟ್ ನಲ್ಲಿ ಲೇಖವಿಲ್ಲದ ಖಾಲಿ ಜಾಗದಲ್ಲಿ ಇರಿಸಿ.
04:24 ಟೆಕ್ಸ್ಟ್ ಬಾಕ್ಸ್ ನ ಒಳಗಡೆ, ನೀವು ಬ್ಯಾನರ್ ನಂತೆ ಅಥವಾ ಜಾಹೀರಾತಿನಂತೆ ತೋರುವ ಏನಾದರೂ ಲೇಖವನ್ನು ಬರೆಯಿರಿ.
04:30 ಇಲ್ಲಿ ನಾವು “This is a newsletter” ಎಂದು ಬರೆಯೋಣ.
04:35 ನೀವು ಈ ಲೇಖಕ್ಕೆ ಎಫೆಕ್ಟ್ ಗಳನ್ನೂ ಸೇರಿಸಬಹುದು.
04:37 ಉದಾಹರಣೆಗಾಗಿ, ಮೊದಲು ಟೆಕ್ಸ್ಟ್ ಬಾಕ್ಸ್ ನ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ ಮೆನ್ಯುವಿನಲ್ಲಿ “Text” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
04:45 “Text” ಮತ್ತು “Text Animation” ಎಂಬ ಟ್ಯಾಬ್ ಗಳಿರುವ ಒಂದು ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
04:50 “Text Animation” ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
04:53 ಈ ಟ್ಯಾಬ್ ನ ಕೆಳಗಿರುವ “Effects” ಎಂಬಲ್ಲಿ ಹಲವಾರು ವಿಕಲ್ಪಗಳಿವೆ.
04:58 ನ್ಯೂಸ್ ಲೆಟರ್ ನಲ್ಲಿ ನಮ್ಮ ಲೇಖವು ಮಿನುಗಬೇಕೆಂದಾದರೆ ನಾವು “Blink” ಎಂಬ ವಿಕಲ್ಪವನ್ನು ಆಯ್ಕೆ ಮಾಡೋಣ.
05:04 ಹಾಗೂ ಕೊನೆಯಲ್ಲಿ “OK” ಕ್ಲಿಕ್ ಮಾಡಿ.
05:07 ಗಮನಿಸಿ, “This is a newsletter” ಎನ್ನುವ ಲೇಖವು ನಿರಂತರವಾಗಿ ಮಿನುಗುತ್ತಿದೆ.
05:13 ಹೀಗೆಯೇ, ಈ ತರಹದ ಹಲವಾರು ಎಫೆಕ್ಟ್ ಗಳನ್ನು ಹಾಗೂ ಗ್ರಾಫಿಕ್ ಗಳನ್ನು ನಾವು ಲೇಖಕ್ಕೆ ಕೊಡಬಹುದು.
05:18 ಈಗ ಮುಂದಿನ ಪುಟದಲ್ಲಿ ಹೊಸ ಲೇಖನವನ್ನು ಬರೆಯಲು ನೀವು “Insert” ಬಟನ್ ನ ಮೇಲೆ ಕ್ಲಿಕ್ ಮಾಡಿ.
05:25 ನಂತರ “Manual Break” ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
05:29 ಈಗ ಕಾಣಿಸುವ ಡಯಲಾಗ್ ಬಾಕ್ಸ್ ನಲ್ಲಿ “Page break” ಬಟನ್ ನ ಮೇಲೆ ಕ್ಲಿಕ್ ಮಾಡಿ.
05:34 ನಂತರ “OK” ಬಟನ್ ಕ್ಲಿಕ್ ಮಾಡಿ.
05:37 ಗಮನಿಸಿ, ಕರ್ಸರ್ ಮುಂದಿನ ಪುಟಕ್ಕೆ ಬಂದಿರುತ್ತದೆ.
05:40 ಈ ಪುಟದಲ್ಲೂ ಹಿಂದಿನ ಪುಟದಂತೆಯೇ ಕಲಮ್ ನ ಫಾರ್ಮ್ಯಾಟ್ ಇದೆ.
05:46 ನಿಮ್ಮ ಲೇಖನದಲ್ಲಿನ ಶಬ್ದಗಳ ಎಣಿಕೆಯನ್ನು ಜಾರಿಯಲ್ಲಿಡಲು ನೀವು ಮೊದಲು ಲೇಖದ ಒಂದು ಭಾಗವನ್ನು ಅಥವಾ ಇಡೀ ಡಾಕ್ಯುಮೆಂಟ್ ಅನ್ನು ಆಯ್ಕೆಮಾಡಿ.
05:53 ಈಗ ಮೆನ್ಯು ಬಾರ್ ನಲ್ಲಿರುವ “Tools” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
05:57 ಈಗ ಡ್ರಾಪ್ಡೌನ್ ಬಾಕ್ಸ್ ನಲ್ಲಿ “Word Count” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
06:02 ಈಗ ತೋರುವ ಡಯಲಾಗ್ ಬಾಕ್ಸ್ ನಲ್ಲಿ ನೀವು ಆಯ್ಕೆ ಮಾಡಿದ ಅಥವಾ ಇಡೀ ಡಾಕ್ಯುಮೆಂಟ್ ನ ಶಬ್ದಗಳ ಎಣಿಕೆಯು ನಿಮಗೆ ಕಾಣಸಿಗುತ್ತದೆ.
06:10 ಇದು ನಿಮಗೆ ನೀವು ಆಯ್ಕೆ ಮಾಡಿದ ಅಥವಾ ಇಡೀ ಡಾಕ್ಯುಮೆಂಟ್ ನ ಅಕ್ಷರಗಳ ಎಣಿಕೆಯನ್ನೂ ಕೂಡಾ ತೋರಿಸುತ್ತದೆ.
06:18 ಸ್ಪೆಲ್ ಚೆಕ್ ಎನ್ನುವುದು ನೀವು ಡಾಕ್ಯುಮೆಂಟ್ ನಲ್ಲಿ ಬರೆಯಬೇಕಾದರೇ ತಂತಾನೇ ಆಗುತ್ತದೆ.
06:23 ಟೂಲ್ ಬಾರ್ ನಲ್ಲಿ “AutoSpellcheck” ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
06:27 ಲೇಖನವನ್ನು ಬರೆಯಬೇಕಾದರೆ ನಾವು ಒಂದೊಮ್ಮೆ ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿದರೆ ರೈಟರ್ ತಂತಾನೇ ಅವುಗಳನ್ನು ಆ ಶಬ್ದದ ಕೆಳಗೆ ಒಂದು ಕೆಂಪು ಗೆರೆಯನ್ನು ತೋರಿಸುವುದರ ಮೂಲಕ ನಮ್ಮ ಗಮನಕ್ಕೆ ತರುತ್ತದೆ.
06:37 ಉದಾಹರಣೆಗಾಗಿ, ನಾವು Cat ಎಂಬ ಪದವನ್ನು “C -A- A -T” ಎಂದು ಬರೆದು ಸ್ಪೇಸ್ ಒತ್ತಿದರೆ ಆಗ ಆ ಪದದ ಕೆಳಗೆ ಒಂದು ಕೆಂಪು ಗೆರೆಯು ಕಾಣುತ್ತದೆ.
06:48 ಆದರೆ ಯಾವಾಗ ನಾವು ಆ ಪದವನ್ನು ಸರಿಪಡಿಸುತ್ತೇವೆಯೋ ಆಗ ಆ ಗೆರೆಯು ಹೋಗುತ್ತದೆ.
06:52 ಹೀಗೆಯೇ, ಈ ಹಿಂದೆ ಚರ್ಚಿಸಿದ ಎಲ್ಲಾ ಫಾರ್ಮ್ಯಾಟಿಂಗ್ ವಿಕಲ್ಪಗಳೂ ಕೂಡಾ ನ್ಯೂಸ್ ಲೆಟರ್ ನಲ್ಲೂ ಲಾಗೂ ಆಗುತ್ತವೆ.
07:01 ಇಲ್ಲಿಗೆ ನಾವು ಲಿಬ್ರೆ ಆಫೀಸ್ ರೈಟರ್ ನ ಈ ಟ್ಯುಟೋರಿಯಲ್ ನ ಕೊನೆಗೆ ಬಂದೆವು.
07:06 ಸಂಕ್ಷೇಪಿಸುವುದಾದರೆ, ನಾವು ನ್ಯೂಸ್ ಲೆಟರ್ ಅನ್ನು ಹೇಗೆ ರಚಿಸುವುದು ಹಾಗೂ ಅಲ್ಲಿನ ಕೆಲವು ಆಪರೇಶನ್ ಗಳ ಬಗ್ಗೆ ಕಲಿತಿದ್ದೇವೆ.
07:17 ಈ ಕೆಳಗಿನ ಲಿಂಕ್ ನಲ್ಲಿ ಸಿಗುವ ವೀಡಿಯೋವನ್ನು ನೋಡಿ.
07:21 ಇದು ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವನ್ನು ಹೇಳುತ್ತದೆ.
07:24 ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ಇದನ್ನು ಡೌನ್ಲೋಡ್ ಮಾಡಿ ನೋಡಿ.
07:28 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪಗಣವು,
07:31 ಈ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
07:34 ಯಾರು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ಕೊಡುತ್ತದೆ.
07:38 ಹೆಚ್ಚಿನ ವಿವರಗಳಿಗಾಗಿ contact at spoken hyphen tutorial dot org ಇಲ್ಲಿ ಸಂಪರ್ಕಿಸಿ.
07:44 ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಟಾಕ್ ಟು ಅ ಟೀಚರ್ ಪ್ರೋಜೆಕ್ಟ್ ನ ಭಾಗವಾಗಿದೆ.
07:48 ಈ ಪ್ರಕಲ್ಪವನ್ನು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
07:56 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
08:07 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

Vasudeva ahitanal