LibreOffice-Suite-Writer/C3/Typing-in-local-languages/Kannada

From Script | Spoken-Tutorial
Revision as of 16:36, 11 September 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search

Resources for recording Search And Replace Auto Correct

Time Narration
00:01 ಎಲ್ಲರಿಗೂ ನಮಸ್ಕಾರ. ಲಿಬ್ರೆ ಆಫೀಸ್ ರೈಟರ್ ನಲ್ಲಿ ಸ್ಥಾನೀಯ ಭಾಷೆಯನ್ನು ಟೈಪ್ ಮಾಡುವುದರ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾನು ಲಿಬ್ರೆ ಆಫೀಸ್ ನಲ್ಲಿ ಕನ್ನಡದ ಬರವಣಿಗೆ ಹೇಗೆ ಎಂಬುದನ್ನು ಪರಿಚಯಿಸುತ್ತಿದ್ದೇನೆ.
00:15 ಇಲ್ಲಿ ನಾವು ಉಬಂಟು ಲಿನಕ್ಸ್ 10.04 ಎಂಬ ಆಪರೇಟಿಂಗ್ ಸಿಸ್ಟಮ್ ನಲ್ಲಿ ಲಿಬ್ರೆ ಆಫೀಸ್ ಸೂಟ್ ನ 3.3.4 ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ.
00:25 ಈಗ ನಾನು ಲಿಬ್ರೆ ಆಫೀಸ್ ನಲ್ಲಿ ಕನ್ನಡ ದ ಬರವಣಿಗೆಯನ್ನು ಹೇಗೆ ಸಂರಚಿಸುವುದೆಂದು (ಕನ್ಫಿಗರ್) ವಿವರಿಸುತ್ತೇನೆ. ನೀವು ಈ ಪ್ರಕಾರವಾಗಿ ಯಾವುದೇ ಭಾಷೆಯ ಬರವಣಿಗೆಯನ್ನು ಲಿಬ್ರೆ ಆಫೀಸ್ ನಲ್ಲಿ ಸಂರಚಿಸಬಹುದು.
00:36 ಪ್ಯಾಕೇಜ್ ಗಳನ್ನು ಇನ್ಸ್ಟಾಲ್ ಮಾಡಲು ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ಅನ್ನು ಉಪಯೋಗಿಸಿ.
00:40 ಹೆಚ್ಚಿನ ಮಾಹಿತಿಗಾಗಿ, ಸ್ಪೋಕನ್ ಟ್ಯುಟೋರಿಯಲ್ ನ ವೆಬ್ಸೈಟ್ ನಲ್ಲಿ ಸಿಗುವ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಬಗೆಗಿನ ಟ್ಯುಟೋರಿಯಲ್ ಅನ್ನು ನೋಡಿ.
00:48 ಸಂರಚನೆಯು ನಾಲ್ಕು ಸ್ತರಗಳಲ್ಲಿ ಆಗುತ್ತವೆ -
00:52 ನಿಮ್ಮ ಕಂಪ್ಯೂಟರ್ ನಲ್ಲಿ SCIM (ಸ್ಕಿಮ್) ಇನ್ಸ್ಟಾಲ್ ಆಗಿದೆಯೇ ಎಂದು ಪರಿಶೀಲಿಸಿ.
00:55 ಇಲ್ಲವಾದಲ್ಲಿ, ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಸಹಾಯದಿಂದ ಈ ಪ್ಯಾಕೇಜ್ ಗಳನ್ನು ಮಾರ್ಕ್ ಮಾಡಿ SCIM ಅನ್ನು ಇನ್ಸ್ಟಾಲ್ ಮಾಡಿ.
01:03 ನೀವು ಇದನ್ನು ಮಾಡುವಾಗ ಈ ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಮತ್ತು ಮುಗಿದ ನಂತರ ಮತ್ತೆ ಮುಂದುವರೆಸಿ.
01:08 ನಂತರ SCIM-immodule (ಸ್ಕಿಮ್-ಇಮೋಡ್ಯೂಲ್) ಅನ್ನು ಕೀಬೋರ್ಡ್ ಇನ್ಪುಟ್ ವಿಧಾನವನ್ನಾಗಿ ಆಯ್ಕೆ ಮಾಡಿ.
01:14 ಕನ್ನಡವನ್ನು ಟೆಕ್ಸ್ಟ್ ಇನ್ಪುಟ್ ನ ಭಾಷೆಯನ್ನಾಗಿ ಆಯ್ಕೆಮಾಡಲು SCIM ಅನ್ನು ಸಂರಚಿಸಿ.
01:20 Complex Text layout ಆಗಿ ಕನ್ನಡವನ್ನು ಆಯ್ಕೆ ಮಾಡಲು ಲಿಬ್ರೆ ಆಫೀಸ್ ಅನ್ನು ಸಂರಚಿಸಿ.
01:26 ನಾನೀಗ ಈ ಸ್ತರಗಳನ್ನು ತೋರಿಸುತ್ತೇನೆ.
01:29 ಈಗ ಕ್ರಮವಾಗಿ System, Administration ಮತ್ತು Language support ನ ಮೇಲೆ ಕ್ಲಿಕ್ ಮಾಡಿ.
01:41 ನಿಮಗೆ ಪರದೆಯ ಮೇಲೆ 'Remind me later' ಅಥವಾ 'Install now' ಎಂಬುದು ಕಂಡುಬಂದಲ್ಲಿ, 'Remind me later' ಎಂಬುದರ ಮೇಲೆ ಕ್ಲಿಕ್ ಮಾಡಿ.
01:51 Keyboard input method system ನಲ್ಲಿ scim-immodule ಅನ್ನು ಆಯ್ಕೆ ಮಾಡಿ.
01:56 ಇಲ್ಲಿ ಅದೀಗಾಗಲೇ ಆಯ್ಕೆಯಾಗಿದೆ, ಹಾಗಾಗಿ ನಾವೇನೂ ಮಾಡಬೇಕಾಗಿಲ್ಲ.
02:01 ಮೂರನೇಯದಾಗಿ, SCIM ಅನ್ನು ಸಂರಚಿಸಲು ಕ್ರಮವಾಗಿ System, Preferences ಮತ್ತು SCIM Input Method ನ ಮೇಲೆ ಕ್ಲಿಕ್ ಮಾಡಿ.
02:14 ನೀವು ಇದನ್ನು ಪರದೆಯ ಮೇಲೆ ಈಗ ನೋಡಲು ಸಾಧ್ಯವಿಲ್ಲ, ಆದರೆ ಇದನ್ನು ನೀವು ನಿಮ್ಮ ಕಂಪ್ಯೂಟರ್ ನಲ್ಲಿ ಪ್ರಯತ್ನಿಸಿದಾಗ ನೀವದನ್ನು ನೋಡುತ್ತೀರಿ.
02:22 IMEngine ನ ಕೆಳಗೆ, Global Setup ನ ಮೇಲೆ ಕ್ಲಿಕ್ ಮಾಡಿ.
02:27 SCIM ಎನ್ನುವುದು ಟೆಕ್ಸ್ಟ್ ಪ್ರೊಸೆಸ್ ಗೆ ಸಹಕರಿಸುವ ಎಲ್ಲಾ ಭಾಷೆಗಳನ್ನೂ ಇದು ಸೂಚಿಸುತ್ತದೆ.
02:38 ಇದರಲ್ಲಿ ಹೆಚ್ಚಾಗಿ ಬಳಸುವ ಎಲ್ಲಾ ಭಾರತೀಯ ಭಾಷೆಗಳು, ಅಂದರೆ ಹಿಂದಿ, ಕನ್ನಡ, ಬೆಂಗಾಲಿ, ಗುಜರಾತಿ, ತಮಿಳ್, ಮಳಯಾಲಮ್, ಉರ್ದು ಇತ್ಯಾದಿ ಭಾಷೆಗಳು ಒಳಗೊಂಡಿವೆ.
02:48 ನಮ್ಮ ಈ ಟ್ಯುಟೋರಿಯಲ್ ಗಾಗಿ ಹಿಂದಿ ಹಾಗೂ ಕನ್ನಡವನ್ನು ಆಯ್ಕೆಮಾಡಿ.
02:55 ನಿಮ್ಮ ಸಂರಚನೆಯನ್ನು ರಕ್ಷಿಸಲು OK ಮೇಲೆ ಕ್ಲಿಕ್ ಮಾಡಿ.
02:59 SCIM ಎಂಬಲ್ಲಿ ಪರಿಣಾಮ ಆಗಿದೆಯೇ ಎಂದು ನೋಡಲು ನಾವು ನಮ್ಮ ಮಶೀನ್ ಅನ್ನು ರಿಸ್ಟಾರ್ಟ್ ಮಾಡಬೇಕು.
03:04 ದಯವಿಟ್ಟು ರಿಸ್ಟಾರ್ಟ್ ಮಾಡಿ ಹಾಗೂ ಪುನಃ ಈ ಟ್ಯುಟೋರಿಯಲ್ ಗೆ ಬನ್ನಿ.
03:08 ನಾವೀಗ ಲಿಬ್ರೆ ಆಫೀಸ್ ನಲ್ಲಿ ಕನ್ನಡದ ಪ್ರೊಸೆಸಿಂಗ್ ಅನ್ನು ಸಂರಚಿಸೋಣ.
03:14 Applications ನ ಮೇಲೆ ಕ್ಲಿಕ್ ಮಾಡಿ, ನಂತರ Office ಹಾಗೂ LibreOffice Writer.
03:27 ಈಗ ನಾವು ಮೇನ್ ಮೆನ್ಯುವಿನಲ್ಲಿ Tools ನ ಮೇಲೆ ಕ್ಲಿಕ್ ಮಾಡಿ ಹಾಗೂ ಅಲ್ಲಿ Options ಎಂಬಲ್ಲಿ ಕ್ಲಿಕ್ ಮಾಡಿ.
03:33 ನೀವು Options ಎಂಬ ಡಯಲಾಗ್ ಬಾಕ್ಸ್ ಅನ್ನು ಕಾಣುತ್ತೀರಿ.
03:37 ಈ ಬಾಕ್ಸ್ ನಲ್ಲಿ, Language Settings ಎಂಬಲ್ಲಿ ಕ್ಲಿಕ್ ಮಾಡಿ ಹಾಗೂ ಅಲ್ಲಿ Languages ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
03:46 Enabled for complex text layout ಎಂಬುದು ಆಯ್ಕೆಯಾಗಿರದ ಪಕ್ಷದಲ್ಲಿ ಅದನ್ನು ಆಯ್ಕೆ ಮಾಡಿ.
03:53 CTL ಎಂಬ ಡ್ರಾಪ್ ಡೌನ್ ನಿಂದ Kannada ವನ್ನು ಆಯ್ಕೆ ಮಾಡಿ.
04:00 ಡೀಫಾಲ್ಟ್ ಆಗಿ ನಿಮ್ಮ ಸ್ಥಾನೀಯ ಭಾಷೆಯಾಗಿ ಕನ್ನಡವು ಆಯ್ಕೆಯಾಗಿರುತ್ತದೆ.
04:04 OK ಯ ಮೇಲೆ ಕ್ಲಿಕ್ ಮಾಡಿ.
04:10 ನಾವೀಗ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಒಂದು ವಾಕ್ಯವನ್ನು ಟೈಪ್ ಮಾಡೋಣ.
04:15 ನಾವು Baraha, Nudi ಹಾಗೂ UNICODE ವಿಧಾನಗಳನ್ನು ಬಳಸಲಿದ್ದೇವೆ. ಕೊನೆಯಲ್ಲಿ ಫೈಲ್ ಅನ್ನು ಸೇವ್ ಮಾಡಲಿದ್ದೇವೆ.
04:24 ಈಗ ಇದನ್ನು ತೊರಿಸುತ್ತೇನೆ.
04:27 ತೆರೆದ ಟೆಕ್ಸ್ಟ್ ಡಾಕ್ಯುಮೆಂಟ್ ನಲ್ಲಿ “Ubuntu GNU/Linux supports multiple languages with LibreOffice." ಎಂದು ಟೈಪ್ ಮಾಡಿ.
04:45 CONTROL ಕೀಯನ್ನು ಒತ್ತಿ ಸ್ಪೇಸ್ ಬಾರ್ ಅನ್ನೂ ಒತ್ತಿ.
04:52 ಸ್ಕ್ರೀನ್ ನ ಕೆಳಗಡೆಯ ಬಲ ಕೋಣೆಯಲ್ಲಿ ಒಂದು ಸಣ್ಣ ವಿಂಡೋ ತೆರೆದುಕೊಳ್ಳುತ್ತದೆ.
04:56 Baraha ವಿಧಾನಕ್ಕೆ ಸರಿಸಮಾನವಾದ ಫೊನೆಟಿಕ್ ವಿಧಾನದಲ್ಲಿ ಟೆಕ್ಸ್ಟ್ ಅನ್ನು ಟೈಪ್ ಮಾಡಲು Kannada KN-ITRANS ಎಂಬುದನ್ನು ಆಯ್ಕೆ ಮಾಡಿ.
05:05 ನಿಮಗೆ Nudi keyboard layout ಬೇಕಾದಲ್ಲಿ Kannada – KN KGP ಎಂಬಲ್ಲಿ ಕ್ಲಿಕ್ ಮಾಡಿ.
05:10 ನಾನು KN-ITRANS ಎಂಬ ಇನ್ಪುಟ್ ವಿಧಾನವನ್ನು ಆಯ್ಕೆಮಾಡುತ್ತೇನೆ. ಇದು ಸರಳ ಹಾಗೂ ಆರಂಭಿಕರಿಗೆ ಸುಲಭವಾಗಿದೆ.
05:16 “Sarvajanika Tantramsha” ಎಂದು ಇಂಗ್ಲಿಷ್ ನಲ್ಲಿ ಟೈಪ್ ಮಾಡಿ.
05:27 ನಿಮಗೆ ಪರದೆಯ ಮೇಲೆ ಕನ್ನಡ ದಲ್ಲಿ ಟೆಕ್ಸ್ಟ್ ಕಾಣಿಸುತ್ತದೆ.
05:31 CONTROL ಹಿಡಿದುಸ್ಪೇಸ್ ಬಾರ್ ಅನ್ನು ಒತ್ತಿ.
05:33 ವಿಂಡೋ ಮರೆಯಾಗುತ್ತದೆ.
05:35 ಈಗ ನಾವು ಇಂಗ್ಲಿಷ್ ನಲ್ಲಿ ಟೈಪ್ ಮಾಡಬಹುದು.
05:37 ಅಂದರೆ, CONTROL ಕೀ ಮತ್ತು ಸ್ಪೇಸ್ ಬಾರ್ ಎಂಬುದು ಇಂಗ್ಲಿಷ್ ಮತ್ತು ಆಯ್ಕೆ ಮಾಡಿದ ಬೇರೆ ಭಾಷೆಗಳ ನಡುವೆ ಕೊಂಡಿಯಂತೆ ವರ್ತಿಸುತ್ತದೆ.
05:48 ಕನ್ನಡ ಟೆಕ್ಸ್ಟ್ ಪ್ರೊಸೆಸಿಂಗ್ ಗಾಗಿ ಹಾಗೂ ಕನ್ನಡದಲ್ಲಿ ಟೈಪ್ ಮಾಡುವ ಬಗೆಗಿನ ನಿಖರವಾದ ಮಾಹಿತಿಯನ್ನು ತಿಳಿಯಲು ಹಾಗೂ 'arkavathu' ಎಂಬ ಫಾಂಟ್ ಅನ್ನು ಉಪಯೋಗಿಸಿ ನುಡಿಯಲ್ಲಿ ಬರೆಯುವ ಬಗ್ಗೆ ತಿಳಿಯಲು ದಯವಿಟ್ಟು www.Public-Software.in/Kannada ಎಂಬ ಲಿಂಕ್ ನಲ್ಲಿ ಸಿಗುವ ಡಾಕ್ಯುಮೆಂಟ್ ಅನ್ನು ಪರಿಶೀಲಿಸಿ.
06:05 UNICODE ಎಂಬುದು ಜಾಗತಿಕವಾಗಿ ಒಪ್ಪಿಕೊಂಡ ಫಾಂಟ್ ಆದ್ದರಿಂದ ನಾವು ಭಾರತೀಯ ಭಾಷೆಗಳನ್ನು ಟೈಪ್ ಮಾಡುವಾಗ UNICODE ಬಳಸುವುದು ಉತ್ತಮ.
06:13 Lohit Kannada ಎಂಬುದೊಂದು UNICODE ಫಾಂಟ್ ಆಗಿದ್ದು ಅದನ್ನೇ ನಾನಿಲ್ಲಿ ಉಪಯೋಗಿಸುತ್ತಿದ್ದೇನೆ.
06:16 ದಯವಿಟ್ಟು ಗಮನಿಸಿ, ನಾನೀಗ ನಿಮಗೆ ಕನ್ನಡ ಟೆಕ್ಸ್ಟ್ ಪ್ರೊಸೆಸಿಂಗ್ ಅನ್ನು ತೋರಿಸಿದ್ದೇನೆ,
06:20 ಈ ವಿಧಾನದ ಮೂಲಕ ಲಿಬ್ರೆ ಆಫೀಸ್ ರೈಟರ್ ಅನ್ನು ಉಪಯೋಗಿಸಿಕೊಂಡು ನಾವು SCIM ಇನ್ಪುಟ್ ವಿಧಾನದ ಒಳಗಿರುವ ಯಾವುದೇ ಭಾಷೆಯನ್ನು ಟೈಪ್ ಮಾಡಬಹುದು.
06:28 ಕೊನೆಯಲ್ಲಿ ನಿಮಗೊಂದು ಅಸೈನ್ಮೆಂಟ್.
06:31 ಕನ್ನಡದ ಮೂರು ಪುಸ್ತಕಗಳ ಹೆಸರನ್ನು ಟೈಪ್ ಮಾಡಿ.
06:33 ಅವುಗಳ ಇಂಗ್ಲೀಷ್ ಲಿಪ್ಯನುವಾದವನ್ನು ಒದಗಿಸಿ.
06:37 ನಾನಿಲ್ಲಿ ಈಗಾಗಲೇ ಅಸೈನ್ಮೆಂಟ್ ಅನ್ನು ತಯಾರಿಸಿದ್ದೇನೆ.
06:42 ಈ ಪಾಠವನ್ನು ಸಾರಾಂಶವಾಗಿ ಹೇಳುವುದಾದರೆ ಈ ಟ್ಯುಟೋರಿಯಲ್ ನಲ್ಲಿ ನಾವು,
06:46 ಉಬಂಟು ಮತ್ತು ಲಿಬ್ರೆ ಆಫೀಸ್ ಅನ್ನು ಹೇಗೆ ಕೀಬೋರ್ಡ್ ಹಾಗೂ ಭಾಷಾವ್ಯವಸ್ಥಾಪನೆಗಾಗಿ ಸಂರಚಿಸುವುದೆಂದು ಕಲಿತೆವು.
06:51 ನಾವು ಬರಹ ನುಡಿ ಮುಂತಾದ ವಿವಿಧ ವಿಧಾನಗಳಲ್ಲಿ ಹೇಗೆ ಟೈಪ್ ಮಾಡಬಹುದೆಂಬುದನ್ನೂ ನೋಡಿದೆವು.
06:57 ನಾವು ಡಾಕ್ಯುಮೆಂಟ್ ಅನ್ನು ಎರೆಡೆರಡು ಭಾಷೆಗಳಲ್ಲಿ ಹೇಗೆ ಟೈಪ್ ಮಾಡುವುದೆಂಬುದನ್ನೂ ನೋಡಿದೆವು.
07:00 ಈ ಕೆಳಗಿನ ಲಿಂಕ್ ನಲ್ಲಿ ಸಿಗುವ ವಿಡೀಯೋವನ್ನು ನೋಡಿ.
07:03 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
07:06 ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ನೊಡಬಹುದು.
07:11 ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಗಣವು ಈ ಸ್ಪೋಕನ್ ಟ್ಯುಟೋರಿಯಲ್ ಅನ್ನು ಬಳಸಿ ಕಾರ್ಯಾಗಾರವನ್ನು ನಡೆಸುತ್ತದೆ. ಯಾರು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
07:19 ಅಧಿಕ ಮಾಹಿತಿಗಾಗಿ spoken hypen tutorial dot org ಎಂಬಲ್ಲಿ ಸಂಪರ್ಕಿಸಿ.
07:26 ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಎಂಬುದು ಟಾಕ್ ಟು ಅ ಟೀಚರ್ ಪ್ರೋಜೆಕ್ಟ್ ನ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
07:35 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
07:43 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

Vasudeva ahitanal