LibreOffice-Suite-Impress/C3/Slide-Creation/Kannada

From Script | Spoken-Tutorial
Revision as of 14:48, 21 December 2015 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00.00 LibreOffice Impress ನಲ್ಲಿ Slide Creation ಎಂಬ ಸ್ಪೋಕನ್ ಟ್ಯುಟೋರಿಯಲ್-ಗೆ ನಿಮಗೆ ಸ್ವಾಗತ.
00.06 ಈ ಟ್ಯುಟೋರಿಯಲ್-ನಲ್ಲಿ, Slide Shows, Slide Transitions ಮತ್ತು Automatic Shows ನ ಬಗ್ಗೆ ನಾವು ಕಲಿಯಲಿದ್ದೇವೆ.
00.16 ನೀವು ಪ್ರೇಕ್ಷಕರ ಮುಂದೆ ಸ್ಲೈಡ್ಸ್-ಅನ್ನು ಪ್ರಸ್ತುತಪಡಿಸಲು Slide Shows-ಅನ್ನು ಉಪಯೋಗಿಸುತ್ತೀರಿ.
00.21 ಸ್ಲೈಡ್ ಶೋಗಳನ್ನು ಡೆಸ್ಕ್-ಟಾಪ್ ಅಥವಾ ಪ್ರೊಜೆಕ್ಟರ್ ಗಳಲ್ಲಿ ತೋರಿಸಬಹುದು.
00.25 ಸ್ಲೈಡ್ ಶೋಗಳು ಕಂಪ್ಯೂಟರ್ ಪರದೆಯನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳುತ್ತವೆ.
00.30 ಸ್ಲೈಡ್ ಶೋ ಮೋಡ್-ನಲ್ಲಿ ಪ್ರೆಸೆಂಟೇಶನ್-ಗಳನ್ನು (ಪ್ರಸ್ತುತಿಗಳನ್ನು) ಪರಿಷ್ಕರಿಸಲಾಗುವುದಿಲ್ಲ.
00.34 ಸ್ಲೈಡ್ ಶೋ-ಗಳು ಕೇವಲ ಪ್ರದರ್ಶನಕ್ಕಾಗಿ ಇವೆ.
00.38 'Sample-Impress.odp' ಎಂಬ ಪ್ರೆಸೆಂಟೇಶನ್ ಅನ್ನು ತೆರೆಯಿರಿ.
00.43 ನಾವು ಪ್ರೆಸೆಂಟೇಶನ್-ಅನ್ನು Slide Show ಆಗಿ ನೋಡೋಣ.
00.47 Main ಮೆನುವಿನಿಂದ, Slide Show ಮೇಲೆ, ಕ್ಲಿಕ್ ಮಾಡಿ, ಅನಂತರ Slide Show settingsಮೇಲೆ ಕ್ಲಿಕ್ ಮಾಡಿ.
00.53 ಪರ್ಯಾಯವಾಗಿ, ಸ್ಲೈಡ್ ಶೋವನ್ನು ಆರಂಭಿಸಲು ನೀವು function key 'F5' ಅನ್ನು ಉಪಯೋಗಿಸಬಹುದು.
01.00 ಪ್ರೆಸೆಂಟೇಶನ್, ಸ್ಲೈಡ್ ಶೋ ಆಗಿ ಪ್ರದರ್ಶಿತಗೊಳ್ಳುತ್ತದೆ.
01.04 ನೀವು ನಿಮ್ಮ ಕೀಬೋರ್ಡ್-ನಲ್ಲಿ arrow ಬಟನ್ ಗಳನ್ನು ಬಳಸಿ ಸ್ಲೈಡ್-ಗಳ ನಡುವೆ ನ್ಯಾವಿಗೇಟ್ ಮಾಡಬಹುದು.
01.10 ಪರ್ಯಾಯವಾಗಿ, mouseನಲ್ಲಿ context menu ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Next ಅನ್ನು ಆಯ್ಕೆ ಮಾಡಿ.
01.16 ಇದು ನಿಮ್ಮನ್ನು ಮುಂದಿನ ಸ್ಲೈಡ್-ಗೆ ಕರೆದೊಯ್ಯುತ್ತದೆ.
01.20 ಸ್ಲೈಡ್ ಶೋನಿಂದ ಹೊರಬರಲು, mouseನಲ್ಲಿ context menu ಗಾಗಿ ರೈಟ್-ಕ್ಲಿಕ್ ಮಾಡಿ. ಇಲ್ಲಿEnd Showಅನ್ನು ಸೆಲೆಕ್ಟ್ ಮಾಡಿ.
01.28 ಹೊರಬರುವ ಮತ್ತೊಂದು ವಿಧಾನವೆಂದರೆ Escape ಬಟನ್-ಅನ್ನು ಒತ್ತುವುದು.
01.33 Mouse pointer as pen ಆಯ್ಕೆಯನ್ನು ಉಪಯೋಗಿಸಿ ಕೂಡ ನೀವು ಪ್ರೇಕ್ಷಕರೊಂದಿಗೆ ಸಂವಹನ ನಡೆಸಬಹುದು.
01.40 ಈ ಆಯ್ಕೆಯನ್ನು ಸಕ್ರಿಯಗೊಳಿಸಿ, ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡೋಣ.
01.45 Main ಮೆನುವಿನಿಂದ, Slide Show ಮೇಲೆ, ಕ್ಲಿಕ್ ಮಾಡಿ. ಅನಂತರ Slide Show settings ಮೇಲೆ ಕ್ಲಿಕ್ ಮಾಡಿ.
01.51 Slide Show ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
01.54 Options ನ ಕೆಳಗೆ, Mouse pointer visible ಮತ್ತು Mouse pointer as pen ಬಾಕ್ಸ್ ಗಳನ್ನು ಚೆಕ್ ಮಾಡಿ.
02.02 ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು OK ಕ್ಲಿಕ್ ಮಾಡಿ.
02.06 ಮತ್ತೆ, Main ಮೆನುವಿನಿಂದ, Slide Show ಮೇಲೆ, ಕ್ಲಿಕ್ ಮಾಡಿ. ಅನಂತರ Slide Show ಮೇಲೆ ಕ್ಲಿಕ್ ಮಾಡಿ.
02.13 ಕರ್ಸರ್ ಈಗ ಪೆನ್ ಆಗಿ ಬದಲಾಗಿದೆಯೆಂಬುದನ್ನು ಗಮನಿಸಿ.
02.17 ಪ್ರೆಸೆಂಟೇಶನ್ ಎಂಬುದು ಸ್ಲೈಡ್-ಶೋ ಮೋಡ್ ನಲ್ಲಿದ್ದಾಗ, ಈ ಆಯ್ಕೆಯು ಪ್ರಸ್ತುತಿಯ ಮೇಲೆ ಬರೆಯಲು ಅಥವಾ ಚಿತ್ರಿಸಲು ಸಹಕರಿಸುತ್ತದೆ.
02.24 ನೀವು ಎಡ ಮೌಸ್ ಬಟನ್-ಅನ್ನು ಒತ್ತಿದಾಗ, ನೀವು ಪೆನ್ ಬಳಸಿ ರೇಖಾಚಿತ್ರವನ್ನು ಬರೆಯಬಹುದು.
02.29 ಮೊದಲ ಪಾಯಿಂಟ್ ನ ಮೇಲೆ ಒಂದು ಟಿಕ್ ಮಾರ್ಕ್ ಮಾಡೋಣ.
02.34 ಈ ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಮತ್ತು ಈ ಅಸೈನ್ ಮೆಂಟ್ ಅನ್ನು ಮಾಡಿ.
02.38 Impress ಸ್ಲೈಡ್ ನ ಮೇಲೆ ಒಂದು ಚಿಕ್ಕ ಚಿತ್ರವನ್ನು ರಚಿಸಲು ಸ್ಕೆಚ್ ಪೆನ್-ಅನ್ನು ಉಪಯೋಗಿಸಿ.
02.47 ಈಗ mouse button ನ ಮೇಲೆ ಲೆಫ್ಟ್-ಕ್ಲಿಕ್ ಮಾಡಿ. ಮುಂದಿನ ಸ್ಲೈಡ್ ಪ್ರದರ್ಶಿಸಲ್ಪಡುವುದು.
02.52 ನೀವು Space bar ಅನ್ನು ಒತ್ತಿದಾಗ ಕೂಡ ಮುಂದಿನ ಸ್ಲೈಡ್ ಗೆ ಹೋಗಬಹುದು.
02.57 ಸ್ಲೈಡ್ ಶೋನಿಂದ ಹೊರಬರೋಣ. context menu ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು End Show ಮೇಲೆ ಕ್ಲಿಕ್ ಮಾಡಿ.
03.05 ನಂತರ, Slide Transitions ಬಗ್ಗೆ ಕಲಿಯೋಣ.
03.09 Slide Transitions ಎಂದರೇನು?
03.12 Transitions ಎಂದರೆ, ಪ್ರೆಸೆಂಟೇಶನ್ ನಲ್ಲಿ ಒಂದು ಸ್ಲೈಡ್ ನಿಂದ ಮುಂದಿನ ಸ್ಲೈಡ್ ಗೆ ನಾವು ಸ್ಥಾನಾಂತರಿಸುವಾಗ, ಸ್ಲೈಡ್ ಗೆ ಅನ್ವಯ ಮಾಡುವ ಪರಿಣಾಮ(ಪ್ರಭಾವ)ಗಳು.
03.22 Main ಪೇನ್-ನಿಂದ, Slide Sorter ಟ್ಯಾಬ್-ನ ಮೇಲೆ ಕ್ಲಿಕ್ ಮಾಡಿ.
03.26 ಪ್ರಸ್ತುತಿಯ ಎಲ್ಲಾ ಸ್ಲೈಡ್-ಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.
03.31 ಈ ದೃಶ್ಯದಲ್ಲಿ, ನೀವು ಒಂದು ಪ್ರಸ್ತುತಿಯಲ್ಲಿರುವ ಸ್ಲೈಡ್ ಗಳ ಕ್ರಮವನ್ನು ಸುಲಭವಾಗಿ ಬದಲಾಯಿಸಬಹುದು.
03.37 ನಾವು slide 1ಅನ್ನು ಆಯ್ಕೆ ಮಾಡೋಣ.
03.40 ಈಗ ಎಡ ಮೌಸ್ ಬಟನ್ ಅನ್ನು ಒತ್ತಿ. ಈ ಸ್ಲೈಡ್ ಅನ್ನು ಮೂರನೇ ಮತ್ತು ನಾಲ್ಕನೇ ಸ್ಲೈಡ್-ಗಳ ನಡುವೆ ಡ್ರ್ಯಾಗ್ ಮತ್ತು ಡ್ರಾಪ್ ಮಾಡಿ.
03.48 ಸ್ಲೈಡ್-ಗಳು ಪುನಃ ಸಂಯೋಜಿಸಲ್ಪಟ್ಟಿವೆ.
03.52 ಈ ಕಾರ್ಯವನ್ನು undo ಮಾಡಲು Ctrl+Z ಕೀಯನ್ನು ಒತ್ತಿ.
03.57 ನೀವು ಪ್ರತಿಯೊಂದು ಸ್ಲೈಡ್-ಗೆ ಬೇರೆ ಬೇರೆ ಟ್ರಾನ್ಸಿಶನ್-ಗಳನ್ನು ಒಂದೇ ಬಾರಿ ಜೋಡಿಸಬಹುದು.
04.02 Slide Sorter ವ್ಯೂ ನಿಂದ ಮೊದಲನೆಯ ಸ್ಲೈಡ್ ಅನ್ನು ಆಯ್ಕೆ ಮಾಡಿ.
04.06 ಈಗ, Task ಪೇನ್-ನಿಂದ, Slide Transitionsನ ಮೇಲೆ ಕ್ಲಿಕ್ ಮಾಡಿ.
04.13 Apply to selected slidesನ ಕೆಳಗೆ, ಸ್ಕ್ರಾಲ್ ಮಾಡಿ Wipe Upಅನ್ನು ಆಯ್ಕೆ ಮಾಡಿ.
04.19 ಮೇನ್ ಪೇನ್-ನಲ್ಲಿ ಟ್ರಾನ್ಸಿಶನ್ ನ ಪರಿಣಾಮ ಪ್ರದರ್ಶಿತವಾಗುವುದನ್ನು ಗಮನಿಸಿ.
04.24 Speed ಎಂಬ drop-down ಮೆನುವಿನಿಂದ option ಗಳನ್ನು ಆರಿಸಿ ನೀವು ಟ್ರಾನ್ಸಿಶನ್ ನ ವೇಗವನ್ನು ನಿಯಂತ್ರಿಸಬಹುದು.
04.31 Modify Transitions ನ ಕೆಳಗೆ, Speed drop-down ಬಾಕ್ಸ್ ಮೇಲೆ ಕ್ಲಿಕ್ ಮಾಡಿ. Medium ಅನ್ನು ಕ್ಲಿಕ್ ಮಾಡಿ.
04.39 ಈಗ, ಟ್ರಾನ್ಸಿಶನ್-ಗೆ ಧ್ವನಿಯನ್ನು ಸೆಟ್ ಮಾಡೋಣ.
04.43 Modify Transitionsನಲ್ಲಿ Sound ಎಂಬ drop-down ಬಾಕ್ಸ್ ಮೇಲೆ ಕ್ಲಿಕ್ ಮಾಡಿ. beam ಅನ್ನು ಆಯ್ಕೆ ಮಾಡಿ.
04.52 ಇದೇ ರೀತಿ, ಎರಡನೆಯ ಸ್ಲೈಡ್ ಅನ್ನು ಆಯ್ಕೆ ಮಾಡೋಣ.
04.56 Task ಪೇನಿನಲ್ಲಿ, Slide Transitions ನ ಮೇಲೆ ಕ್ಲಿಕ್ ಮಾಡಿ.
05.00 Apply to selected slides ನ ಕೆಳಗೆ, Wheel Clockwise, 4 Spokes ಅನ್ನು ಆಯ್ಕೆ ಮಾಡಿ.
05.08 ಈಗ Speed ಎಂಬ drop-down ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. Medium ಅನ್ನು ಆಯ್ಕೆ ಮಾಡಿ.
05.13 ಅನಂತರ, Sound ಎಂಬ ಡ್ರಾಪ್-ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. applause ಅನ್ನು ಆಯ್ಕೆ ಮಾಡಿ.
05.21 ಈಗ, ನಾವು ಮಾಡಿರುವ ಟ್ರಾನ್ಸಿಷನ್ ಪ್ರಭಾವದ ಪ್ರಿವ್ಯೂ (ಮುನ್ನೋಟ) ಅನ್ನು ನೋಡೋಣ.
05.25 Play ಅನ್ನು ಕ್ಲಿಕ್ ಮಾಡಿ.
05.28 ಈಗ ನಾವು, ಒಂದು ಸ್ಲೈಡ್ ಟ್ರಾನ್ಸಿಷನ್-ಗೆ animate ಹೇಗೆ ಮಾಡುವುದು ಎಂಬುದನ್ನು, ಮತ್ತು ಧ್ವನಿ ಪ್ರಭಾವವನ್ನು ಕೂಡಿಸುವುದನ್ನು ಕಲಿತಿದ್ದೇವೆ.
05.35 ಸ್ವಯಂ (ಸಹಜವಾಗಿಯೇ) ಪ್ರಸ್ತುತಗೊಳ್ಳುವ ಪ್ರಸ್ತುತಿಯನ್ನು ಹೇಗೆ ನಿರ್ಮಿಸುವುದು ಎಂಬುದನ್ನು ಈಗ ಕಲಿಯೋಣ.
05.42 Tasks ಪೇನ್ ನಿಂದ, Slide Transitions ಮೇಲೆ ಕ್ಲಿಕ್ ಮಾಡಿ.
05.46 “ಟ್ರಾನ್ಸಿಷನ್ ಟೈಪ್”ನಲ್ಲಿ Checkerboard Down ಅನ್ನು ಆಯ್ಕೆ ಮಾಡಿ.
05.50 Speed ಡ್ರಾಪ್-ಡೌನ್ ನಲ್ಲಿ, Medium ಅನ್ನು ಆಯ್ಕೆ ಮಾಡಿ.
05.55 Sound ಡ್ರಾಪ್-ಡೌನ್ ನಿಂದ, Gong ಅನ್ನು ಆರಿಸಿ.
06.00 Loop until next sound ಅನ್ನು ಚೆಕ್ ಮಾಡಿ.
06.04 Automatically after ಎನ್ನುವ ರೇಡಿಯೋ ಬಟನ್ ಅನ್ನು ಕ್ಲಿಕ್ ಮಾಡಿ.
06.09 ಸಮಯವನ್ನು 1 sec ಆಗಿ ಆಯ್ಕೆ ಮಾಡಿ.
06.14 Apply to All Slides ಮೇಲೆ ಕ್ಲಿಕ್ ಮಾಡಿ.
06.18 Apply to All Slides ಬಟನ್ ನ ಮೇಲೆ ಕ್ಲಿಕ್ ಮಾಡುವುದರಿಂದ, ಒಂದೇ ಟ್ರಾನ್ಸಿಷನ್ ಎಲ್ಲಾ ಸ್ಲೈಡ್ಸ್-ಗಳಿಗೆ ಅನ್ವಯವಾಗುತ್ತದೆ ಎಂಬುದನ್ನು ಗಮನಿಸಿ.
06.25 ಈ ರೀತಿಯಾಗಿ, ಪ್ರತಿ ಸ್ಲೈಡ್-ಗಳಿಗೂ ನಾವು ಪ್ರತ್ಯೇಕವಾಗಿ ಟ್ರಾನ್ಸಿಷನ್ ಗಳನ್ನು ಜೋಡಿಸಬೇಕಾಗಿಲ್ಲ.
06.31 Main ಮೆನುವಿನಿಂದ, Slide Show ಮೇಲೆ, ಕ್ಲಿಕ್ ಮಾಡಿ. ನಂತರ Slide Show ಮೇಲೆ ಕ್ಲಿಕ್ ಮಾಡಿ.
06.38 ಸ್ಲೈಡ್-ಗಳು ಸ್ವಯಂಚಾಲಿತವಾಗಿ ಮುಂದುವರೆಯುತ್ತವೆ ಎಂಬುದನ್ನು ಗಮನಿಸಿ.
06.49 ಪ್ರಸ್ತುತಿಯಿಂದ ಹೊರಬರಲು Escape ಕೀಯನ್ನು ಒತ್ತೋಣ.
06.54 ಈಗ, ಸ್ವಯಂ ಚಾಲಿತವಾಗಿ ಪ್ರಸ್ತುತಗೊಳ್ಳುವ, ಆದರೆ ಪ್ರತಿಯೊಂದು ಸ್ಲೈಡ್-ಗೂ ಬೇರೆ ಬೇರೆ ಪ್ರದರ್ಶನ ಸಮಯಗಳನ್ನು ಹೊಂದಿರುವ ಪ್ರಸ್ತುತಿಯನ್ನು ಹೇಗೆ ನಿರ್ಮಿಸುವುದು ಎಂಬುದನ್ನು ನಾವು ಕಲಿಯೋಣ.
07.03 ಕೆಲವು ಸ್ಲೈಡ್-ಗಳ ವಿಷಯವು ದೀರ್ಘವಾಗಿದ್ದಾಗ ಅಥವಾ ಕ್ಲಿಷ್ಟಕರವಾಗಿದ್ದಾಗ ಇದು ಉಪಯುಕ್ತವಾಗುತ್ತದೆ.
07.13 Main ಪೇನಿನಿಂದ, ಮೊದಲು Slide Sorter ಟ್ಯಾಬ್-ನ ಮೇಲ್ ಕ್ಲಿಕ್ ಮಾಡಿ.
07.18 ಎರಡನೇ ಸ್ಲೈಡ್-ಅನ್ನು ಆಯ್ಕೆ ಮಾಡಿ.
07.21 Tasks ಪೇನಿಗೆ ಹೋಗಿ.
07.24 Slide Transition ನ ಕೆಳಗೆ, Advance slide ಆಯ್ಕೆಗೆ ಹೋಗಿ.
07.29 Automatically after ಫೀಲ್ಡ್-ನಲ್ಲಿ, ಸಮಯವನ್ನು 2 seconds ಎಂದು ನಿಗದಿ ಮಾಡಿ.
07.37 Main ಪೇನಿನಿಂದ, ಮೂರನೇ ಸ್ಲೈಡ್-ಅನ್ನು ಆಯ್ಕೆ ಮಾಡಿ.
07.42 Tasks ಪೇನಿಗೆ ಹೋಗಿ.
07.44 Slide Transition ನ ಕೆಳಗೆ, Advance slide ಆಯ್ಕೆಗೆ ಹೋಗಿ.
07.49 Automatically after ಫೀಲ್ಡ್-ನಲ್ಲಿ, ಸಮಯವನ್ನು 3 seconds ಎಂದು ನಿಗದಿ ಮಾಡಿ.
07.57 ನಾಲ್ಕನೇ ಸ್ಲೈಡ್ ಅನ್ನು ಆಯ್ಕೆ ಮಾಡೋಣ. ಮತ್ತು ಹಿಂದಿನ ಸ್ಲೈಡ್ಸ್-ಗಳಿಗೆ ಅನುಸರಿಸಿದ ಕ್ರಮಗಳನ್ನೇ ಅನುಸರಿಸಿ. ಮತ್ತು ಸಮಯವನ್ನು 4 ಸೆಕೆಂಡ್ ಗಳಿಗೆ ಬದಲಾಯಿಸಿ.
08.08 Main ಮೆನುವಿನಿಂದ, Slide Show ಮೇಲೆ ಕ್ಲಿಕ್ ಮಾಡಿ. ನಂತರ Slide Show ಮೇಲೆ ಕ್ಲಿಕ್ ಮಾಡಿ.
08.13 ಪ್ರತಿಯೊಂದು ಸ್ಲೈಡ್ ಕೂಡ ಭಿನ್ನ ಸಮಯದಲ್ಲಿ ಪ್ರದರ್ಶಿತವಾಗುತ್ತಿರುವುದನ್ನು ಗಮನಿಸಿ.
08.19 ಪ್ರಸ್ತುತಿಯಿಂದ ಹೊರಬರಲು Escape ಕೀಯನ್ನು ಒತ್ತೋಣ.
08.24 ಇದರೊಂದಿಗೆ ಈ ಟ್ಯುಟೋರಿಯಲ್ ಅಂತ್ಯಗೊಳ್ಳುತ್ತದೆ. ಈ ಟ್ಯುಟೋರಿಯಲ್ ನಲ್ಲಿ ನಾವು Slide shows, Slide Transitions ಮತ್ತು Automatic show ಗಳ ಬಗ್ಗೆ ಕಲಿತಿದ್ದೇವೆ.
08.37 ಇಲ್ಲಿ ನಿಮಗೊಂದು ಅಸೈನ್-ಮೆಂಟ್ ಇದೆ.
08.40 ಹೊಸ ಪ್ರಸ್ತುತಿಯನ್ನು ನಿರ್ಮಿಸಿ.
08.42 Wheel Clockwise ಅನ್ನು ,
08.46 ಎರಡು ಮತ್ತು ಮೂರನೇ ಸ್ಲೈಡ್-ಗಳಿಗೆ, gong ಧ್ವನಿಯೊಂದಿಗೆ medium ವೇಗದಲ್ಲಿ 2 spoke transition ಅನ್ನು ಜೋಡಿಸಿ.
08.54 ಸ್ವಯಂಚಾಲಿತ ಸ್ಲೈಡ್ ಶೋ ಅನ್ನು ರಚಿಸಿ.
08.58 ಈ ಲಿಂಕ್-ನಲ್ಲಿ ಸಿಗುವ ವಿಡಿಯೋವನ್ನು ನೋಡಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
09.04 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
09.09 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
  • ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
  • ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
09.18 ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
09.25 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ. ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
09.37 ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro .
09.48 ಈ ಸ್ಕ್ರಿಪ್ಟ್ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

Pratik kamble, Vasudeva ahitanal