Difference between revisions of "LibreOffice-Suite-Impress/C2/Printing-a-Presentation-Document/Kannada"

From Script | Spoken-Tutorial
Jump to: navigation, search
 
Line 1: Line 1:
 
{| border=1
 
{| border=1
|Time
+
|'''Time'''
||Narration
+
|'''Narration'''
  
 
|-
 
|-
|00.00
+
|00:00
 
||ಲಿಬ್ರೆ ಆಫೀಸ್ ಇಂಪ್ರೆಸ್ ನ ಪ್ರೆಸೆಂಟೇಶನ್ ಅನ್ನು ಪ್ರಿಂಟ್ ಮಾಡುವ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
 
||ಲಿಬ್ರೆ ಆಫೀಸ್ ಇಂಪ್ರೆಸ್ ನ ಪ್ರೆಸೆಂಟೇಶನ್ ಅನ್ನು ಪ್ರಿಂಟ್ ಮಾಡುವ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
  
 
|-
 
|-
|00.06
+
|00:06
 
||ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವುದು ಏನೆಂದರೆ, ಪ್ರಿಂಟ್ ಗಾಗಿ ಇರುವ ವಿವಿಧ ಆಯ್ಕೆಗಳು.
 
||ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವುದು ಏನೆಂದರೆ, ಪ್ರಿಂಟ್ ಗಾಗಿ ಇರುವ ವಿವಿಧ ಆಯ್ಕೆಗಳು.
  
 
|-
 
|-
|00.11
+
|00:11
 
||ಸ್ಲೈಡ್ಸ್, ಹ್ಯಾಂಡ್ ಔಟ್ಸ್, ನೋಟ್ಸ್ ಮತ್ತು ಔಟ್ ಲೈನ್.
 
||ಸ್ಲೈಡ್ಸ್, ಹ್ಯಾಂಡ್ ಔಟ್ಸ್, ನೋಟ್ಸ್ ಮತ್ತು ಔಟ್ ಲೈನ್.
  
 
|-
 
|-
|00.16
+
|00:16
 
||ಇಲ್ಲಿ ನಾವು ಉಬುಂಟು ಲಿನಕ್ಸ್ 10.04ನ್ನು ನಮ್ಮ ಒಪರೆಟಿಂಗ್ ಸಿಸ್ಟಂ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4. ಬಳಸುತ್ತೇವೆ.
 
||ಇಲ್ಲಿ ನಾವು ಉಬುಂಟು ಲಿನಕ್ಸ್ 10.04ನ್ನು ನಮ್ಮ ಒಪರೆಟಿಂಗ್ ಸಿಸ್ಟಂ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4. ಬಳಸುತ್ತೇವೆ.
  
 
|-
 
|-
|00.25
+
|00:25
 
||ನಿಮಗೆ ಕೆಲವೊಂದು ಸಂದರ್ಭಗಳಲ್ಲಿ ನಿಮ್ಮ ಪ್ರೆಸೆಂಟೇಶನ್ ನ ಹಾರ್ಡ್ ಕಾಪಿಯನ್ನು ಪ್ರಿಂಟ್ ಮಾಡುವ ಅಗತ್ಯವಿರುತ್ತದೆ.
 
||ನಿಮಗೆ ಕೆಲವೊಂದು ಸಂದರ್ಭಗಳಲ್ಲಿ ನಿಮ್ಮ ಪ್ರೆಸೆಂಟೇಶನ್ ನ ಹಾರ್ಡ್ ಕಾಪಿಯನ್ನು ಪ್ರಿಂಟ್ ಮಾಡುವ ಅಗತ್ಯವಿರುತ್ತದೆ.
  
Line 28: Line 28:
  
 
|-
 
|-
|00.35
+
|00:35
 
||ಹಾಗಾದರೆ ಮೊದಲು ನಾವು ಈಗ ನಮ್ಮ ಸ್ಯಾಂಪಲ್ ಇಂಪ್ರೆಸ್ ಪ್ರೆಸೆಂಟೇಶನ್ ನನ್ನು ಡಬಲ್ ಕ್ಲಿಕ್ ಮಾಡುವ ಮೂಲಕ  ಓಪನ್ ಮಾಡೋಣ.
 
||ಹಾಗಾದರೆ ಮೊದಲು ನಾವು ಈಗ ನಮ್ಮ ಸ್ಯಾಂಪಲ್ ಇಂಪ್ರೆಸ್ ಪ್ರೆಸೆಂಟೇಶನ್ ನನ್ನು ಡಬಲ್ ಕ್ಲಿಕ್ ಮಾಡುವ ಮೂಲಕ  ಓಪನ್ ಮಾಡೋಣ.
  
 
|-
 
|-
|00.41
+
|00:41
 
||ಈಗ ನಿಮ್ಮ ಸ್ಲೈಡ್ ಗಳ ಪ್ರಿಂಟ್ ಔಟ್ ನ್ನು ಪಡೆಯಲು ಫೈಲ್ ಗೆ ಹೋಗಿ ಪ್ರಿಂಟ್ ಕ್ಲಿಕ್ ಮಾಡಿ. ಅಥವಾ CTRL ಮತ್ತು P ಕೀಯನ್ನು ಒಟ್ಟಿಗೇ ಒತ್ತಿ.
 
||ಈಗ ನಿಮ್ಮ ಸ್ಲೈಡ್ ಗಳ ಪ್ರಿಂಟ್ ಔಟ್ ನ್ನು ಪಡೆಯಲು ಫೈಲ್ ಗೆ ಹೋಗಿ ಪ್ರಿಂಟ್ ಕ್ಲಿಕ್ ಮಾಡಿ. ಅಥವಾ CTRL ಮತ್ತು P ಕೀಯನ್ನು ಒಟ್ಟಿಗೇ ಒತ್ತಿ.
  
 
|-
 
|-
|00.50
+
|00:50
 
||ಜನರಲ್ ಹಾಗೂ ಆಪ್ಶನ್ಸ್  ಟ್ಯಾಬ್ ಗಳ ಸೆಟ್ಟಿಂಗ್ ಗಳ ಬಗ್ಗೆ ತಿಳಿಯಲು,
 
||ಜನರಲ್ ಹಾಗೂ ಆಪ್ಶನ್ಸ್  ಟ್ಯಾಬ್ ಗಳ ಸೆಟ್ಟಿಂಗ್ ಗಳ ಬಗ್ಗೆ ತಿಳಿಯಲು,
  
 
|-
 
|-
|00.55
+
|00:55
 
||ಲಿಬ್ರೆ ಆಫೀಸ್  ರೈಟರ್ ಸಾಲಿನ ವೀವಿಂಗ್ ಮತ್ತು ಪ್ರಿಂಟಿಂಗ್ ಡಾಕ್ಯುಮೆಂಟ್ ಬಗೆಗಿನ ಟ್ಯುಟೋರಿಯಲ್ ನ್ನು ನೋಡಿ.
 
||ಲಿಬ್ರೆ ಆಫೀಸ್  ರೈಟರ್ ಸಾಲಿನ ವೀವಿಂಗ್ ಮತ್ತು ಪ್ರಿಂಟಿಂಗ್ ಡಾಕ್ಯುಮೆಂಟ್ ಬಗೆಗಿನ ಟ್ಯುಟೋರಿಯಲ್ ನ್ನು ನೋಡಿ.
  

Latest revision as of 10:46, 14 July 2014

Time Narration
00:00 ಲಿಬ್ರೆ ಆಫೀಸ್ ಇಂಪ್ರೆಸ್ ನ ಪ್ರೆಸೆಂಟೇಶನ್ ಅನ್ನು ಪ್ರಿಂಟ್ ಮಾಡುವ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವುದು ಏನೆಂದರೆ, ಪ್ರಿಂಟ್ ಗಾಗಿ ಇರುವ ವಿವಿಧ ಆಯ್ಕೆಗಳು.
00:11 ಸ್ಲೈಡ್ಸ್, ಹ್ಯಾಂಡ್ ಔಟ್ಸ್, ನೋಟ್ಸ್ ಮತ್ತು ಔಟ್ ಲೈನ್.
00:16 ಇಲ್ಲಿ ನಾವು ಉಬುಂಟು ಲಿನಕ್ಸ್ 10.04ನ್ನು ನಮ್ಮ ಒಪರೆಟಿಂಗ್ ಸಿಸ್ಟಂ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4. ಬಳಸುತ್ತೇವೆ.
00:25 ನಿಮಗೆ ಕೆಲವೊಂದು ಸಂದರ್ಭಗಳಲ್ಲಿ ನಿಮ್ಮ ಪ್ರೆಸೆಂಟೇಶನ್ ನ ಹಾರ್ಡ್ ಕಾಪಿಯನ್ನು ಪ್ರಿಂಟ್ ಮಾಡುವ ಅಗತ್ಯವಿರುತ್ತದೆ.
00:29 ಉದಾಹರಣೆಗೆ, ನಿಮಗೆ ನಿಮ್ಮ ಪ್ರೆಸೆಂಟೇಶನ್ ನ ಕೆಲವು ಕಾಪಿಗಳನ್ನು ನಿಮ್ಮ ವೀಕ್ಷಕರಿಗೆ ನಂತರದ ಉಲ್ಲೇಖಕ್ಕಾಗಿ ಕೊಡಬೇಕಾಗುತ್ತದೆ.
00:35 ಹಾಗಾದರೆ ಮೊದಲು ನಾವು ಈಗ ನಮ್ಮ ಸ್ಯಾಂಪಲ್ ಇಂಪ್ರೆಸ್ ಪ್ರೆಸೆಂಟೇಶನ್ ನನ್ನು ಡಬಲ್ ಕ್ಲಿಕ್ ಮಾಡುವ ಮೂಲಕ ಓಪನ್ ಮಾಡೋಣ.
00:41 ಈಗ ನಿಮ್ಮ ಸ್ಲೈಡ್ ಗಳ ಪ್ರಿಂಟ್ ಔಟ್ ನ್ನು ಪಡೆಯಲು ಫೈಲ್ ಗೆ ಹೋಗಿ ಪ್ರಿಂಟ್ ಕ್ಲಿಕ್ ಮಾಡಿ. ಅಥವಾ CTRL ಮತ್ತು P ಕೀಯನ್ನು ಒಟ್ಟಿಗೇ ಒತ್ತಿ.
00:50 ಜನರಲ್ ಹಾಗೂ ಆಪ್ಶನ್ಸ್ ಟ್ಯಾಬ್ ಗಳ ಸೆಟ್ಟಿಂಗ್ ಗಳ ಬಗ್ಗೆ ತಿಳಿಯಲು,
00:55 ಲಿಬ್ರೆ ಆಫೀಸ್ ರೈಟರ್ ಸಾಲಿನ ವೀವಿಂಗ್ ಮತ್ತು ಪ್ರಿಂಟಿಂಗ್ ಡಾಕ್ಯುಮೆಂಟ್ ಬಗೆಗಿನ ಟ್ಯುಟೋರಿಯಲ್ ನ್ನು ನೋಡಿ.
01:02 ಡಾಕ್ಯುಮೆಂಟ್ ಫೀಲ್ಡ್ ನಲ್ಲಿ ಪ್ರಿಂಟ್ ನ ಜನರಲ್ ಟ್ಯಾಬ್ ನಲ್ಲಿ ನಿಮಗೆ ವಿವಿಧ ಆಯ್ಕೆಗಳು ಕಾಣುತ್ತವೆ. ಅವುಗಳು ಇಂಪ್ರೆಸ್ ಗೆ ವಿಶಿಷ್ಟವಾಗಿವೆ.
01:09 ಈ ಆಯ್ಕೆಗಳು ನಮಗೆ ನಮ್ಮ ಸ್ಲೈಡ್ ಅನ್ನು ನಮಗೆ ಬೇಕಾದ ರೀತಿಯಲ್ಲಿ ಪ್ರಿಂಟ್ ಮಾಡಲು ಅವಕಾಶ ಮಾಡಿ ಕೊಡುತ್ತವೆ.
01:15 ಸ್ಲೈಡ್ಸ್ ಹ್ಯಾಂಡ್ ಔಟ್ಸ್ ನೋಟ್ಸ್ ಮತ್ತು ಔಟ್ ಲೈನ್ ಇದರಲ್ಲಿ ನಾವು ಈಗ ಸ್ಲೈಡ್ಸ್ ಆಯ್ಕೆಗೆ ಹೋಗೋಣ.
01:22 ಈಗ ನಾವು ಲಿಬ್ರೆ ಆಫೀಸ್ ಇಂಪ್ರೆಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡೋಣ.
01:26 ಇಲ್ಲಿ ನಿಮಗೆ ಪ್ರಿಂಟ್ ಮಾಡಲು ಬೇಕಾದ ಸ್ಲೈಡ್ ನ ಭಾಗಗಳನ್ನು ಆಯ್ಕೆ ಮಾಡಬಹುದು, ಪ್ರಿಂಟ್ ಕಲರ್ ಮತ್ತು ಸೈಜ್
01:34 ಈಗ ನಾವು ಕಂಟೆಂಟ್ ನ ಕೆಳಗೆ ಸ್ಲೈಡ್ ನೇಮ್, ಡೇಟ್ ಮತ್ತು ಟೈಮ್ ಹಾಗೂ ಮರೆಯಾಗಿರುವ ಪೇಜ್ ಗಳನ್ನು ಸೆಲೆಕ್ಟ್ ಮಾಡೋಣ.
01:41 ಟೆಕ್ಸ್ಟ್ ವಿವರಿಸಿದಂತೆ ಇದು ಸ್ಲೈಡ್ ನ ನೇಮ್, ಡೇಟ್ ಮತ್ತು ಟೈಮ್ ಹಾಗೂ ಮರೆಯಾಗಿರುವ ಪೇಜ್ ಗಳಿದ್ದರೆ ಪ್ರಿಂಟ್ ಮಾಡುತ್ತದೆ.
01:49 ಈಗ ಕಲರ್ ನ ಕೆಳಗಡೆ ಗ್ರೇ ಸ್ಕೇಲ್ ಆಯ್ಕೆ ಮಾಡಿ.
01:53 ಟೆಕ್ಸ್ಟ್ ವಿವರಿಸಿದಂತೆ, ಬೇರೆ ಉಳಿದ ಆಯ್ಕೆಗಳು ಸ್ಲೈಡ್ ನ್ನು ಅದರ ಮೂಲ ರೂಪದಲ್ಲೇ ಅಥವಾ ಕಪ್ಪು ಬಿಳುಪಿನಲ್ಲಿ ಪ್ರಿಂಟ್ ಮಾಡುತ್ತವೆ.
02:00 ಮತ್ತು, ಸೈಜ್ ನ ಕೆಳಗೆ ಈಗ ನಾವು Fit to printable page ನ್ನು ಸೆಲೆಕ್ಟ್ ಮಾಡೋಣ. ನೀವು ನಿಮಗೆ ಬೇಕಾದಂತೆ ಲಿಬ್ರೆ ಆಫೀಸ್ ಇಂಪ್ರೆಸ್ ಟ್ಯಾಬ್ ನ ಉಳಿದ ಸೈಜ್ ನ ಆಯ್ಕೆಗಳ ಬಗ್ಗೆ ಅನ್ವೇಷಿಸಬಹುದು.
02:10 ನಿಮಗೆ ಪ್ರಿಂಟ್ ಮಾಡುವ ಉದ್ದೇಶಗಳಿಗೆ ಸಂಬಂಧಿಸಿದಂತೆ ಪೇಜ್ ಲೇ ಔಟ್ ಟ್ಯಾಬ್ ನಲ್ಲಿ ವಿವಿಧ ಆಯ್ಕೆ ಗಳು ಕಂಡುಬರಬಹುದು.
02:18 ಈಗ ನಿಮಗೆ ತುಂಬಾ ಸ್ಲೈಡ್ ಗಳನ್ನು ಒಂದೇ ಪೇಜ್ ನಲ್ಲಿ ಪ್ರಿಂಟ್ ಮಾಡಬೇಕಿದೆ ಎಂದುಕೊಳ್ಳಿ.
02:23 ಹಾಗಾಗಿ ಈಗ ಪೇಜಸ್ ಪರ್ ಶೀಟ್ ನ್ನು ಸೆಲೆಕ್ಟ್ ಮಾಡಿ. ಡೀ ಫಾಲ್ಟ್ ಆಗಿ ಅದು ಒಂದು ಪೇಜ್ ಗೆ ಒಂದೇ ಸ್ಲೈಡ್ ಪ್ರಿಂಟ್ ಮಾಡುತ್ತದೆ.
02:29 ಇಲ್ಲಿ ಒಂದು ಸಣ್ಣ ಪೇಜ್ ಪ್ರಿ ವ್ಯೂ ಇದೆ.
02:33 ಈಗ ಡ್ರಾಪ್ ಡೌನ್ ಬಾಣವನ್ನು ಕ್ಲಿಕ್ ಮಾಡಿ ಹಾಗೂ ನಿಮಗೆ ಪ್ರತಿ ಪೇಜ್ ಗೆ ಪ್ರಿಂಟ್ ಮಾಡಬೇಕಿರುವ ಪೇಜ್ ಸಂಖ್ಯೆಯನ್ನು ಆಯ್ಕೆ ಮಾಡಿ.
02:39 ನಾವು ಪ್ರಿ ವ್ಯೂ ನಲ್ಲಿ 2 ಆಯ್ಕೆ ಮಾಡಿದಾಗ ನಾವು 2 ಪೇಜ್ ಗಳನ್ನು ನೋಡಬಹುದು ಮತ್ತು 6 ಆಯ್ಕೆ ಮಾಡಿದರೆ 6 ಪೇಜ್ ಗಳನ್ನು ನೋಡಬಹುದು.
02:48 Draw a border around each page ಆಯ್ಕೆಯನ್ನು ಗುರುತು ಮಾಡುವುದರಿಂದ ಪ್ರಿಂಟ್ ಆಗುವಾಗ ಪ್ರತೀ ಪೇಜ್ ನ ಸುತ್ತ ಒಂದು ಕಪ್ಪು ಬಾರ್ಡರ್ ಬರುತ್ತದೆ.
02:56 ಇದು ಪೇಜ್ ನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
02:59 ಮುಂದಿನ ಆಯ್ಕೆಯು ಬ್ರೋಶರ್, ಅದು ನಮಗೆ ಸ್ಲೈಡ್ ಗಳನ್ನು ಸುಲಭದಲ್ಲಿ ಮಡಚಲು ಆಗುವ ಬ್ರೋಶರ್ ನಂತೆ ಪ್ರಿಂಟ್ ಮಾಡುತ್ತದೆ.
03:06 ಹೇಗಿದ್ದರೂ ಈ ಸಂದರ್ಭದಲ್ಲಿ ನಾವು ಈ ಆಯ್ಕೆಯನ್ನು ಬಳಸುವುದಿಲ್ಲ, ನೀವು ಇದನ್ನು ನಿಮಗೆ ಬೇಕಾದಂತೆ ವಿವರಿಸಬಹುದು.
03:14 Options ಟ್ಯಾಬ್ ನ ಯಾವ ಚೆಕ್ ಬಾಕ್ಸ್ ನ್ನೂ ಗುರುತು ಮಾಡಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.
03:19 ಈ ಚೆಕ್ ಬಾಕ್ಸ್ ಗಳನ್ನು ಕೆಲವು ವಿಶೇಷವಾದ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಅವುಗಳ ಬಗ್ಗೆ ನಾವು ಈ ಟ್ಯುಟೋರಿಯಲ್ ನಲ್ಲಿ ಚರ್ಚಿಸುವುದಿಲ್ಲ.
03:25 ಈಗ ಪ್ರಿಂಟ್ ಬಟನ್ ಮೇಲೆ ಕ್ಲಿಕ್ ಮಾಡಿ.
03:28 ಪ್ರಿಂಟರ್ ಸರಿಯಾಗಿ ಜೋಡಣೆ ಮಾಡಿದ್ದರೆ, ಪ್ರಿಂಟರ್, ಪ್ರಿಂಟನ್ನು ಶುರು ಮಾಡಬೇಕು.
03:36 ನಂತರ, ಈಗ ನಾವು ಹ್ಯಾಂಡ್ ಔಟ್ ಆಯ್ಕೆಯ ಬಗ್ಗೆ ಕಲಿಯೋಣ. ಈಗ ಫೈಲ್ ಮೇಲೆ ಕ್ಲಿಕ್ ಮಾಡಿ ಮತ್ತು ಪ್ರಿಂಟ್ ಮೇಲೆ ಕ್ಲಿಕ್ ಮಾಡಿ.
03:41 ಮತ್ತು ಜನರಲ್ ಟ್ಯಾಬ್ ನ ಡಾಕ್ಯುಮೆಂಟ್ ಫೀಲ್ಡ್ ನಲ್ಲಿ ಪ್ರಿಂಟ್ ನ ಕೆಳಗೆ ಹ್ಯಾಂಡ್ ಔಟ್ ನ್ನು ಆಯ್ಕೆ ಮಾಡಿ.
03:47 ಡೀಫಾಲ್ಟ್ ಆಗಿ ಅದರಲ್ಲಿ ಒಂದು ಪೇಜ್ ಗೆ 4 ಸ್ಲೈಡ್ ಗಳು ಮತ್ತು ಡೀಫಾಲ್ಟ್ ಆರ್ಡರ್ ಎಡದಿಂದ ಬಲ ಎಂದು ಇರುತ್ತದೆ. ಈ ಪ್ರೆಸೆಂಟೇಶನ್ ನಲ್ಲಿ ಇದನ್ನು ಬದಲಾಯಿಸದೇ ಹಾಗೇ ಇಡಿ.
03:58 ಲಿಬ್ರೆ ಆಫಿಸ್ ಇಂಪ್ರೆಸ್ ಟ್ಯಾಬ್ ನಲ್ಲಿ ಸೈಜ್ ಆಯ್ಕೆಯನ್ನು ಡಿಸೇಬಲ್ ಮಾಡಿರುವುದನ್ನು ನೀವು ಗಮನಿಸಬಹುದು.
04:05 ಅದು ಏಕೆಂದರೆ, ಪ್ರಿಂಟ್ ನ ಸೈಜ್ ನ್ನು, ಒಂದು ಶೀಟ್ ನಲ್ಲಿರುವ ಸ್ಲೈಡ್ ಗಳ ಸಂಖ್ಯೆಗಳ ಮೇಲೆ ಮತ್ತು ಶೀಟ್ ನ ಸೈಜ್ ಮೇಲೆ ಅಳೆಯಲಾಗುತ್ತದೆ.
04:12 ಈಗ ಪ್ರಿಂಟ್ ಬಟನ್ ಮೇಲೆ ಕ್ಲಿಕ್ ಮಾಡಿ.
04:15 ಪ್ರಿಂಟರ್ ಅನ್ನು ಸರಿಯಾಗಿ ಜೋಡಿಸಿದ್ದಲ್ಲಿ, ಪ್ರಿಂಟರ್ ಪ್ರಿಂಟನ್ನು ಶುರು ಮಾಡಬೇಕು.
04:20 ಈಗ ನಾವು ಮೊದಲ ಸ್ಲೈಡ್ ಗೆ ಹೋಗೋಣ ಮತ್ತು ಸ್ಲೈಡ್ಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡೋಣ.
04:25 ಇಲ್ಲಿ ನಾವು ಹೀಗೆಂದು ನೋಟ್ ಬರೆಯಬೇಕು. - “This is a sample note”
04:30 ನೀವು ನಿಮ್ಮ ಸ್ಲೈಡ್ ಮೇಲೆ ಟೈಪ್ ಮಾಡಿದ ನೋಟ್ಸ್ ನ್ನು ಪ್ರಿಂಟ್ ಮಾಡಬೇಕಿದ್ದರೆ, ಫೈಲ್ ಗೆ ಹೋಗಿ ಪ್ರಿಂಟ್ ಕ್ಲಿಕ್ ಮಾಡಿ.
04:35 ಜನರಲ್ ಟ್ಯಾಬ್ ನ ಡಾಕ್ಯುಮೆಂಟ್ ಫೀಲ್ಡ್ ನಲ್ಲಿ ಪ್ರಿಂಟ್ ನ ಕೆಳಗೆ ನೋಟ್ಸ್ ನ್ನು ಆಯ್ಕೆ ಮಾಡಿ.
04:42 ಪೇಜ್ ನ ಪ್ರಿ ವ್ಯೂ ವನ್ನು ನೋಡಿ ಅದು ನಿಮ್ಮ ಸ್ಲೈಡ್ ನ ಬುಡದಲ್ಲಿ ಟೈಪ್ ಮಾಡಿರುವ ನೋಟ್ಸ್ ನ್ನು ತೋರಿಸುತ್ತದೆ.
04:48 ಈಗ ಲಿಬ್ರೆ ಆಫೀಸ್ ಇಂಪ್ರೆಸ್ ಟ್ಯಾಬ್ ನ್ನು ಕ್ಲಿಕ್ ಮಾಡಿ.
04:52 ಗಮನಿಸಿ, ನಾವು ನೋಟ್ಸ್ ನ್ನು ಪ್ರಿಂಟ್ ಮಾಡುವಾಗ ಸೈಜ್ ಆಯ್ಕೆ ಇರುವುದಿಲ್ಲ.
04:57 ಈಗ ಪ್ರಿಂಟ್ ಬಟನ್ ಮೇಲೆ ಕ್ಲಿಕ್ ಮಾಡಿ.

ಪ್ರಿಂಟರ್ ಅನ್ನು ಸರಿಯಾಗಿ ಜೋಡಿಸಿದ್ದಲ್ಲಿ, ಪ್ರಿಂಟರ್ ಪ್ರಿಂಟನ್ನು ಶುರು ಮಾಡಬೇಕು.

05:05 ಕೊನೆಯಲ್ಲಿ, ನಮಗೆ ಪ್ರೆಸೆಂಟೇಶನ್ ಸಮಯದಲ್ಲಿ ಸುಲಭದಲ್ಲಿ ರೆಫರ್ ಮಾಡಲು ಸ್ಲೈಡ್ ಮೇಲೆ ಮುಖ್ಯಾಂಶಗಳನ್ನು ಪ್ರಿಂಟ್ ಮಾಡಲು, ಫೈಲ್ ಮೇಲೆ ಕ್ಲಿಕ್ ಮಾಡಿ ನಂತರ ಪ್ರಿಂಟ್ ಕ್ಲಿಕ್ ಮಾಡಿ.
05:13 ಜನರಲ್ ಟ್ಯಾಬ್ ನಲ್ಲಿ, ಡಾಕ್ಯುಮೆಂಟ್ ಫೀಲ್ಡ್ ನಲ್ಲಿ ಪ್ರಿಂಟ್ ನ ಕೆಳಗೆ ಔಟ್ ಲೈನ್ ಆಯ್ಕೆಯನ್ನು ಕ್ಲಿಕ್ ಮಾಡಿ.
05:19 ಎಡಬದಿ ಇರುವ ಸ್ಲೈಡ್ ನ ಪ್ರಿ ವೀವ್ ಪೇಜ್ ನ್ನು ನೋಡಿ. ಅದು ನಿಮ್ಮ ಸ್ಲೈಡ್ ನ ಔಟ್ ಲೈನ್ ಅಥವಾ ಸೀಕ್ವೆನ್ಸ್ ಜೊತೆಗೆ ಸ್ಲೈಡ್ ಹೆಡಿಂಗ್ ಮತ್ತು ಸಬ್ ಪಾಯಿಂಟ್ ಗಳನ್ನು ತೋರಿಸುತ್ತದೆ.
05:28 ಈಗ ಲಿಬ್ರೆ ಆಫೀಸ್ ಇಂಪ್ರೆಸ್ ಟ್ಯಾಬ್ ನ್ನು ಕ್ಲಿಕ್ ಮಾಡಿ.
05:32 ಈಗ ಪುನಃ ಗಮನಿಸಿ, ನಾವು ಔಟ್ ಲೈನ್ ನ್ನು ಪ್ರಿಂಟ್ ಮಾಡುವಾಗ ಸೈಜ್ ಆಯ್ಕೆಗಳು ಕಾಣಿಸುವುದಿಲ್ಲ.
05:38 ಈಗ ಪ್ರಿಂಟ್ ಬಟನ್ ಮೇಲೆ ಕ್ಲಿಕ್ ಮಾಡಿ.

ಪ್ರಿಂಟರ್ ಸರಿಯಾಗಿ ಜೋಡಣೆ ಮಾಡಿದ್ದರೆ, ಪ್ರಿಂಟರ್ ಪ್ರಿಂಟನ್ನು ಶುರು ಮಾಡಬೇಕು.

05:47 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತದ್ದು ಇಷ್ಟು :
05:52 ಸ್ಲೈಡ್ ಗಳನ್ನು, ಹ್ಯಾಂಡ್ ಔಟ್ ಗಳನ್ನು, ನೋಟ್ ಗಳನ್ನು ಮತ್ತು ಔಟ್ ಲೈನ್ ನ್ನು ಪ್ರಿಂಟ್ ಮಾಡುವುದು.
05:57 ಈ ಸಮಗ್ರವಾದ ಅಸೈನ್ಮೆಂಟ್ ಅನ್ನು ಪ್ರಯತ್ನಿಸಿ.

ಹೊಸ ಪ್ರೆಸೆಂಟೇಶನ್ ನ್ನು ತಯಾರಿಸಿ.

06:02 ಎರಡನೇ ಸ್ಲೈಡ್ ನ್ನು ಮಾತ್ರ ಪ್ರಿಂಟ್ ಮಾಡಿ. ಮೊದಲ ನಾಲ್ಕು ಸ್ಲೈಡ್ ಗಳನ್ನು ಹ್ಯಾಂಡ್ ಔಟ್ ಆಗಿ ಪ್ರಿಂಟ್ ಮಾಡಿ.
06:10 ಈ ಲಿಂಕ್ ನಲ್ಲಿ ಸಿಗುವ ವೀಡಿಯೋವನ್ನು ನೋಡಿ. ಅದು ಈ ಸ್ಪೋಕನ್ ಟ್ಯುಟೋರಿಯಲ್ ನ ಸಾರಂಶವನ್ನು ಕೊಡುತ್ತದೆ.
06:16 ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲವಾದಲ್ಲಿ ಈ ವೀಡಿಯೋವನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
06:21 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ತಂಡ ಸ್ಪೋಕನ್ ಟ್ಯುಟೋರಿಯಲ್ ಬಳಸಿ ವರ್ಕ್ ಶಾಪ್ ನಡೆಸುತ್ತದೆ.
06:27 ಆನ್ ಲೈನ್ ಪರೀಕ್ಷೆಗಳಲ್ಲಿ ಪಾಸ್ ಆದವರಿಗೆ ಸರ್ಟಿಫಿಕೇಟ್ ಒದಗಿಸುತ್ತದೆ.
06:31 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
06:38 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
06:42 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
06:50 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
07:01 ಈ ಪಾಠವು ದೇಸೀ ಕ್ರ್ಯೂ ನಿಂದ ಅನುವಾದಿಸಲ್ಪಟ್ಟಿದ್ದು ಇದರ ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ.
07:06 ಧನ್ಯವಾದಗಳು.

Contributors and Content Editors

Gaurav, Udaya, Vasudeva ahitanal