LibreOffice-Suite-Impress/C2/Inserting-Pictures-and-Objects/Kannada
From Script | Spoken-Tutorial
Revision as of 14:32, 20 March 2017 by PoojaMoolya (Talk | contribs)
Time | Narration |
00:00 | ಲಿಬ್ರೆ ಆಫೀಸ್ ಇಂಪ್ರೆಸ್ ನ ಇನ್ಸರ್ಟಿಂಗ್ ಪಿಕ್ಚರ್ಸ್ ಎಂಡ್ ಆಬ್ಜೆಕ್ಟ್ಸ್ ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು ಪ್ರೆಸೆಂಟೇಷನ್ ನಲ್ಲಿ ಪಿಕ್ಚರ್ ಮತ್ತು ಆಬ್ಜೆಕ್ಟ್ ಗಳನ್ನು ಹೇಗೆ ಸೇರಿಸುವುದು, |
00:12 | ಪಿಕ್ಚರ್ ಮತ್ತು ಆಬ್ಜೆಕ್ಟ್ ಗಳನ್ನು ಫಾರ್ಮೇಟ್ ಮಾಡುವಿಕೆ, |
00:15 | ಪ್ರೆಸೆಂಟೇಷನ್ ನ ಒಳಗೆ ಮತ್ತು ಹೊರಗೆ ಹೈಪರ್ ಲಿಂಕ್ ಮಾಡುವಿಕೆ ಮತ್ತು ಟೇಬಲ್ ಗಳ ಸೇರಿಸುವುಕೆ ಮುಂತಾದವುಗಳನ್ನು ಕಲಿಯುತ್ತೇವೆ. |
00:20 | ಇಲ್ಲಿ ನಾವು ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಉಬುಂಟು ಲಿನಕ್ಸ್ ನ 10.04 ನೇ ಆವೃತ್ತಿಯನ್ನು ಹಾಗೂ ಲಿಬ್ರೆ ಆಫೀಸ್ ನ 3.3.4 ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ. |
00:29 | ಪರದೆಯ ಮೇಲೆ ಕಾಣುತ್ತಿರುವ URL ಅನ್ನು ವೆಬ್ ಬ್ರೌಸರ್ ನ ಅಡ್ರೆಸ್ ಬಾರ್ ನಲ್ಲಿ ಬರೆಯಿರಿ. |
00:34 | ಇಲ್ಲಿ ಒಂದು ಚಿತ್ರವು ಕಾಣಿಸುತ್ತದೆ. |
00:37 | ಈಗ ಚಿತ್ರದ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Save Image As ಎಂಬ ವಿಕಲ್ಪವನ್ನು ಆಯ್ಕೆ ಮಾಡಿ. |
00:41 | ಒಂದು ಡಯಲಾಗ್ ಬಾಕ್ಸ್ ತೆರೆಯುತ್ತದೆ. |
00:43 | ಹೆಸರಿನ ಸ್ಥಾನದಲ್ಲಿ ‘open source -bart.png’ ಎಂದು ಈಗಾಗಲೇ ಕಾಣುತ್ತಿದೆ. |
00:51 | ನಾನು ಲೊಕೇಶನ್ ಗಾಗಿ ಡೆಸ್ಕ್ಟಾಪ್ ಅನ್ನು ಆಯ್ಕೆ ಮಾಡಿ ಸೇವ್ ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ. |
00:59 | ಬನ್ನಿ, ಈಗ ನಾವು ಈ ಮೊದಲೇ ಸೇವ್ ಮಾಡಿದ್ದ ನಮ್ಮ ‘Sample-Impress’ ಎಂಬ ಪ್ರೆಸೆಂಟೇಷನ್ ಅನ್ನು ತೆರೆಯೋಣ. |
01:04 | ಈಗ ನಾವು ಈ ಪ್ರೆಸೆಂಟೇಷನ್ ನಲ್ಲಿ ಚಿತ್ರವನ್ನು ಹೇಗೆ ಸೇರಿಸುವುದೆಂದು ನೋಡೋಣ. |
01:09 | ಮುಖ್ಯ ಮೆನ್ಯುವಿನಲ್ಲಿ Insert ಎಂಬಲ್ಲಿ ಕ್ಲಿಕ್ ಮಾಡಿ ಮತ್ತು Picture ಎಂಬಲ್ಲಿ ಕ್ಲಿಕ್ ಮಾಡಿ. |
01:14 | ಈಗ From File ಎಂಬಲ್ಲಿ ಕ್ಲಿಕ್ ಮಾಡಿ. |
01:17 | ಒಂದು ಡಯಲಾಗ್ ಬಾಕ್ಸ್ ತೆರೆಯುತ್ತದೆ. |
01:19 | ನೀವು ಎಲ್ಲಿಂದ ಚಿತ್ರವನ್ನು ಸೇರಿಸಬಯಸುವಿರೋ ಆ ಪ್ಫೋಲ್ಡರ್ ಅನ್ನು ಆಯ್ಕೆ ಮಾಡಿ. |
01:23 | ನಾನು ಡೆಸ್ಕ್ಟಾಪ್ ಎಂಬ ಫೋಲ್ಡರ್ ಅನ್ನು ಆಯ್ಕೆ ಮಾಡುತ್ತೇನೆ. |
01:26 | ಈಗ ನಾವು ಸೇರಿಸಬೇಕಾದ ಚಿತ್ರವನ್ನು ಆಯ್ಕೆ ಮಾಡಿ Open ಬಟನ್ ಕ್ಲಿಕ್ ಮಾಡಿ. |
01:31 | ಚಿತ್ರವು ಸ್ಲೈಡ್ ನಲ್ಲಿ ಸೇರಿರುತ್ತದೆ. |
01:35 | ಬದಲಾವಣೆಯನ್ನು ಅಂಡು ಮಾಡೋಣ. |
01:37 | ಬನ್ನಿ, ನಾನು ಚಿತ್ರವನ್ನು ಸೇರಿಸುವ ಅನ್ಯ ವಿಕಲ್ಪಗಳನ್ನು ವಿವರಿಸುತ್ತೇನೆ. |
01:41 | Insert ಮತ್ತು Slide ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ‘Overview’ ಎಂಬ ಸ್ಲೈಡ್ ನ ಕೆಳಗೆ ಹೊಸದೊಂದು ಸ್ಲೈಡ್ ಅನ್ನು ಸೇರಿಸಿ. |
01:50 | Title Text Box ನ ಮೇಲೆ ಕ್ಲಿಕ್ ಮಾಡಿ ಅದನ್ನು ‘Open source Funny’ ಎಂದು ಪರಿವರ್ತಿಸಿ. |
01:56 | ಮಧ್ಯದಲ್ಲಿ 4 ಐಕಾನ್ ಗಳಿರುವ ಒಂದು ಸಣ್ಣ ಬಾಕ್ಸ್ ಅನ್ನು ಗಮನಿಸಿ. ಇದು ಇನ್ಸರ್ಟ್ ಟೂಲ್ ಬಾರ್ ಆಗಿದೆ. |
02:03 | ಇನ್ಸರ್ಟ್ಟ್ ಟೂಲ್ ಬಾರ್ ನಲ್ಲಿ Insert Picture icon ನ ಮೇಲೆ ಕ್ಲಿಕ್ ಮಾಡಿ. |
02:08 | ಚಿತ್ರವನ್ನು ಆಯ್ಕೆ ಮಾಡಿ ಮತ್ತು Open ಬಟನ್ ಮೇಲೆ ಕ್ಲಿಕ್ ಮಾಡಿ. |
02:12 | ಗಮನಿಸಿ, ಸೇರಿಸಿರುವ ಚಿತ್ರವು ಹೆಚ್ಚು-ಕಡಿಮೆ ಸಂಪೂರ್ಣ ಸ್ಲೈಡ್ ಅನ್ನು ಆವರಿಸಿದೆ. |
02:17 | ನೀವು ಮೊದಲು ಇದರ ಮೇಲೆ ಕ್ಲಿಕ್ ಮಾಡಿ ಮತ್ತು ಕಂಟ್ರೋಲ್ ಪಾಯಿಂಟ್ ಅನ್ನು ಕುಶಲತೆಯಿದ ಉಪಯೋಗಿಸುವುದರ ಮೂಲಕ ಚಿತ್ರದ ಆಕಾರವನ್ನು ಬದಲಿಸಬಹುದಾಗಿದೆ. |
02:27 | ಹೀಗೆಯೇ ನಾವು ಈ ಪ್ರೆಸೆಂಟೇಷನ್ ನಲ್ಲಿ ಚಾರ್ಟ್ಸ್ ಮೂವೀ ಕ್ಲಿಪ್ಸ್ ತರಹದ ಬೇರೆ-ಬೇರೆ ವಿಷಯಗಳನ್ನೂ ಸೇರಿಸಬಹುದು. |
02:35 | ಈ ಎಲ್ಲಾ ಸಾಧ್ಯತೆಗಳನ್ನೂ ಪರೀಕ್ಷಿಸಿ. |
02:38 | ಈಗ ಹೈಪರ್ ಲಿಂಕ್ ಅನ್ನು ರಚಿಸುವುದು ಹೇಗೆ ಎಂಬುದನ್ನು ಕಲಿಯೋಣ. |
02:41 | ಹೈಪರ್ ಲಿಂಕ್ ಎನ್ನುವುದು ನಮ್ಮ ಪ್ರೆಸೆಂಟೇಷನ್ ನಲ್ಲಿ ಒಂದು ಸ್ಲೈಡ್ ನಿಂದ ಇನ್ನೊಂದು ಸ್ಲೈಡ್ ಗೆ ಹೋಗಲು ಅಥವಾ ವೆಬ್ ಪೇಜ್ ಗೆ ಅಥವಾ ಡಾಕ್ಯುಮೆಂಟ್ ಅನ್ನು ತೆರೆಯಲು ಅನುವು ಮಾಡಿಕೊಡುತ್ತದೆ. |
02:49 | ಮೊದಲು ನಾವು ಪ್ರೆಸೆಂಟೇಷನ್ ನಲ್ಲಿ ಹೈಪರ್ ಲಿಂಕ್ ಹೇಗೆ ರಚಿಸುವುದೆಂದು ನೋಡೋಣ. |
02:54 | ‘Overview’ ಎಂಬ ಸ್ಲೈಡ್ ನ ನಂತರ ಒಂದು ಹೊಸ ಸ್ಲೈಡ್ ಅನ್ನು ತೆರೆಯಿರಿ. |
03:02 | ಟೈಟಲ್ ಬಾರ್ ನಲ್ಲಿ ಕ್ಲಿಕ್ ಮಾಡಿ ‘Table of Contents’ ಎಂದು ಟೈಪ್ ಮಾಡಿ. |
03:06 | Body text box ನ ಮೇಲೆ ಕ್ಲಿಕ್ ಮಾಡಿ ಮತ್ತು ಮುಂದಿನ ಸ್ಲೈಡ್ ಗಳ ಟೈಟಲ್ ಗಳನ್ನು ಈ ಕೆಳಗಿನಂತೆ ಟೈಪ್ ಮಾಡಿ. |
03:14 | Open Source Funny
The Present Situation Development up to present Potential Alternatives Recommendation |
03:24 | ಈಗ ‘Development up to present’ ಎಂಬ ಟೆಕ್ಸ್ಟ್ ಅನ್ನು ಆಯ್ಕೆ ಮಾಡಿ. |
03:28 | Insert ಮತ್ತು ಅಲ್ಲಿ Hyperlink ಎಂಬಲ್ಲಿ ಕ್ಲಿಕ್ ಮಾಡಿ. |
03:31 | ಇದು Hyperlink ಎಂಬ ಡಯಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ. |
03:34 | ಎಡ ಭಾಗದಲ್ಲಿ ‘Document’ ಎಂಬುದನ್ನು ಆಯ್ಕೆ ಮಾಡಿ ಮತ್ತು ‘Target in document’ ಎಂಬುದರ ಬಲ ಭಾಗದಲ್ಲಿರುವ ಬಟನ್ ಅನ್ನು ಕ್ಲಿಕ್ ಮಾಡಿ. |
03:48 | ಈ ಪ್ರೆಸೆಂಟೇಷನ್ ನಲ್ಲಿ ಇರುವ ಸ್ಲೈಡ್ ಗಳ ಸೂಚಿಯು ತೆರೆಯುತ್ತದೆ. |
03:53 | ಸೂಚಿಯಲ್ಲಿ ‘Development up to present’ ಎಂಬ ಸ್ಲೈಡ್ ಅನ್ನು ಆಯ್ಕೆ ಮಾಡಿ. |
03:58 | ಈ ಸೂಚಿಯಲ್ಲಿ Apply ಬಟನ್ ನ ಮೇಲೆ ಕ್ಲಿಕ್ ಮಾಡಿ ಮತ್ತು Close ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:04 | Hyperlink ಎಂಬ ಡಯಲಾಗ್ ಬಾಕ್ಸ್ ನಲ್ಲಿ ಮತ್ತೊಮ್ಮೆ Apply ಬಟನ್ ನ ಮೇಲೆ ಕ್ಲಿಕ್ ಮಾಡಿ ಮತ್ತು Close ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:12 | ಸ್ಲೈಡ್ ನ ಲ್ಲಿ ಎಲ್ಲಿಯಾದರೂ ಕ್ಲಿಕ್ ಮಾಡಿ. |
04:14 | ಈಗ ನೀವು ನಿಮ್ಮ ಕರ್ಸರ್ ಅನ್ನು ಟೆಕ್ಸ್ಟ್ ನ ಮೇಲೆ ಕೊಂಡೊಯ್ದಲ್ಲಿ ಅದು ಕೈಗುರುತಾಗಿ ಬದಲಾಗುತ್ತದೆ. |
04:20 | ಇದರರ್ಥ, ಹೈಪರ್ ಲಿಂಕ್ ಸಕ್ಷಮವಾಗಿ ಆಗಿದೆಯೆಂದು. |
04:24 | ಈಗ ಹೈಪರ್ ಲಿಂಕ್ ಆದ ಟೆಕ್ಸ್ಟ್ ನ ಮೇಲೆ ಕ್ಲಿಕ್ ಮಾಡುವುದರಿಂದ ಇದು ನಿಮ್ಮನ್ನು ಸಂಬಂಧಪಟ್ಟ ಸ್ಲೈಡ್ ಗೆ ಕೊಂಡೊಯ್ಯುತ್ತದೆ. |
04:29 | ಬನ್ನಿ, ಬೇರೆ ಡಾಕ್ಯುಮೆಂಟ್ ಅನ್ನು ಹೈಪರ್ ಲಿಂಕ್ ಮಾಡಲು ಪುನಃ Table of Contents ಎಂಬ ಸ್ಲೈಡ್ ಗೆ ಹೋಗೋಣ. |
04:36 | ಈಗ ಇಲ್ಲಿ External Document ಎಂದು ಇನ್ನೊಂದು ಲೈನ್ ಅನ್ನು ಜೋಡಿಸೋಣ. |
04:40 | ಈ ಟೆಕ್ಸ್ಟ್ ನ ಲೈನ್ ಅನ್ನು ಆಯ್ಕೆ ಮಾಡಿ ಮತ್ತು Insert ಎಂಬಲ್ಲಿ ಕ್ಲಿಕ್ ಮಾಡಿ Hyperlink ಎಂಬಲ್ಲಿ ಕ್ಲಿಕ್ ಮಾಡಿ. |
04:45 | ಎಡ ಭಾಗದಲ್ಲಿ ಡಾಕ್ಯುಮೆಂಟ್ ಅನ್ನು ಆಯ್ಕೆ ಮಾಡಿ. |
04:48 | Document Path field ನ ಬಲ ಭಾಗದಲ್ಲಿರುವ ಫೋಲ್ಡರ್ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
04:55 | ಹೈಪರ್ ಲಿಂಕ್ ಮಾಡಬೇಕಾಗಿರುವ ಡಾಕ್ಯುಮೆಂಟ್ ಅನ್ನು ಆಯ್ಕೆಮಾಡಿ. |
04:58 | ನಾವು ರೈಟರ್ ನ ಸರಣಿಯಲ್ಲಿ ತಯಾರಿಸಿದ resume.odt ಎಂಬ ಡಾಕ್ಯುಮೆಂಟ್ ಅನ್ನು ಆಯ್ಕೆ ಮಾಡೋಣ ಮತ್ತು Open ಬಟನ್ ಕ್ಲಿಕ್ ಮಾಡೋಣ. |
05:07 | Hyperlink ಎಂಬ ಡಲಯಾಗ್ ಬಾಕ್ಸ್ ನಲ್ಲಿ Apply ಬಟನ್ ಕ್ಲಿಕ್ ಮಾಡಿ ಮತ್ತು Close ಬಟನ್ ಕ್ಲಿಕ್ ಮಾಡಿ |
05:14 | ಸ್ಲೈಡ್ ನಲ್ಲಿ ಎಲ್ಲಾದರೂ ಕ್ಲಿಕ್ ಮಾಡಿ. |
05:17 | ಈಗ ನೀವು ನಿಮ್ಮ ಕರ್ಸರ್ ಅನ್ನು ಟೆಕ್ಸ್ಟ್ ನ ಮೇಲೆ ಕೊಂಡೊಯ್ದಲ್ಲಿ ಅದು ಕೈಗುರುತಾಗಿ ಬದಲಾಗುತ್ತದೆ. |
05:22 | ಇದರರ್ಥ, ಹೈಪರ್ ಲಿಂಕ್ ಸಕ್ಷಮವಾಗಿ ಆಗಿದೆಯೆಂದು. |
05:26 | ಈಗ ಹೈಪರ್ ಲಿಂಕ್ ಆದ ಟೆಕ್ಸ್ಟ್ ನ ಮೇಲೆ ಕ್ಲಿಕ್ ಮಾಡುವುದರಿಂದ ಅದು ನಿಮ್ಮನ್ನು ಸಂಬಂಧಪಟ್ಟ ಡಾಕ್ಯುಮೆಂಟ್ ಗೆ ಕೊಂಡೊಯ್ಯುತ್ತದೆ. |
05:31 | ಇಲ್ಲಿ, ಇದು ನಮ್ಮನ್ನು resume.odt ಎಂಬ ಡಾಕ್ಯುಮೆಂಟ್ ಗೆ ಕೊಂಡೊಯ್ಯುತ್ತದೆ. |
05:37 | ವೆಬ್ ಪೇಜ್ ಗೆ ಹೈಪರ್ ಲಿಂಕ್ ರಚಿಸುವುದು ಕೂಡಾ ಸಮಾನವಾಗಿದೆ. |
05:40 | ಪ್ರೆಸೆಂಟೇಷನ್ ನ ಕೊನೆಯಲ್ಲಿ ಒಂದು ಹೊಸ ಸ್ಲೈಡ್ ಅನ್ನು ಸೇರಿಸಿ. |
05:43 | ಟೈಟಲ್ ಅನ್ನು ‘Essential Open Source Software’ ಎಂದು ಬದಲಿಸಿ. |
05:48 | Body text box ನಲ್ಲಿ Ubuntu, Libre Office ಎಂದು ಟೈಪ್ ಮಾಡಿ. |
05:54 | ಟೆಕ್ಸ್ಟ್ ನ ಎರಡನೇ ಲೈನ್ ಅನ್ನು ಸೆಲೆಕ್ಟ್ ಮಾಡಿ ಮತ್ತು Insert ಎಂಬಲ್ಲಿ ಕ್ಲಿಕ್ ಮಾಡಿ ಮತ್ತು Hyperlink ಎಂಬಲ್ಲಿ ಕ್ಲಿಕ್ ಮಾಡಿ. |
06:00 | ಎಡ ಭಾಗದಲ್ಲಿ ಇಂಟರ್ನೆಟ್ ಎಂದು ಆಯ್ಕೆ ಮಾಡಿ. |
06:03 | Hyperlink type ಎಂಬಲ್ಲಿ Web ಎಂಬುದನ್ನು ಆಯ್ಕೆ ಮಾಡಿ. |
06:07 | Target ನ ಸ್ಥಾನದಲ್ಲಿ ‘www.libreoffice.org’ ಎಂದು ಟೈಪ್ ಮಾಡಿ. |
06:16 | Hyperlink ನ ಡಯಲಾಗ್ ಬಾಕ್ಸ್ ನಲ್ಲಿ Apply ಬಟನ್ ಕ್ಲಿಕ್ ಮಾಡಿ ಮತ್ತು Close ಬಟನ್ ಕ್ಲಿಕ್ ಮಾಡಿ |
06:23 | ಸ್ಲೈಡ್ ನಲ್ಲಿ ಎಲ್ಲಾದರೂ ಕ್ಲಿಕ್ ಮಾಡಿ. |
06:26 | ಈಗ ನೀವು ನಿಮ್ಮ ಕರ್ಸರ್ ಅನ್ನು ಟೆಕ್ಸ್ಟ್ ನ ಮೇಲೆ ಕೊಂಡೊಯ್ದಲ್ಲಿ ಅದು ಕೈಗುರುತಾಗಿ ಬದಲಾಗುತ್ತದೆ. |
06:32 | ಇದರರ್ಥ, ಹೈಪರ್ ಲಿಂಕ್ ಸಕ್ಷಮವಾಗಿ ಆಗಿದೆಯೆಂದು. |
06:37 | ಈಗ ಹೈಪರ್ ಲಿಂಕ್ ಆದ ಟೆಕ್ಸ್ಟ್ ನ ಮೇಲೆ ಕ್ಲಿಕ್ ಮಾಡುವುದರಿಂದ ಅದು ನಿಮ್ಮನ್ನು ಸಂಬಂಧಪಟ್ಟ ವೆಬ್ ಪೇಜ್ ಗೆ ಕೊಂಡೊಯ್ಯುತ್ತದೆ. |
06:44 | ಕೊನೆಯದಾಗಿ, ಟೇಬಲ್ ಗಳು ಮಾಹಿತಿಗಳನ್ನು ರೋ ಮತ್ತು ಕಾಲಮ್ ಗಳಲ್ಲಿ ವ್ಯವಸ್ಥಿತವಾಗಿಡಲು ಸಹಾಯ ಮಾಡುತ್ತವೆ. |
06:49 | ಬನ್ನಿ, ಈಗ ಲಿಬ್ರೆ ಆಫೀಸ್ ಇಂಪ್ರೆಸ್ ನಲ್ಲಿ ಟೇಬಲ್ ಅನ್ನು ಹೇಗೆ ಸೇರಿಸುವುದೆಂದು ಕಲಿಯೋಣ. |
06:54 | ಸ್ಲೈಡ್ ಗಳ ಗುಂಪಿನಿಂದ ‘Development up to the present’ ಎಂಬ ಸ್ಲೈಡ್ ಅನ್ನು ಆಯ್ಕೆ ಮಾಡಿ. |
07:00 | ಟಾಸ್ಕ್ ಫಲಕದಲ್ಲಿರುವ Layout ವಿಭಾಗದಲ್ಲಿ ಒಂದು ಟೈಟಲ್ ಮತ್ತು ಎರಡು ಕಂಟೆಂಟ್ ಗಳಿರುವ ಐಕಾನ್ ಅನ್ನು ಆಯ್ಕೆ ಮಾಡಿ. |
07:07 | ಎಡಬದಿಯಲ್ಲಿನ ಟೆಕ್ಸ್ಟ್ ಬಾಕ್ಸ್ ನಲ್ಲಿರುವ ಟೆಕ್ಸ್ಟ್ ಅನ್ನು ಆಯ್ಕೆ ಮಾಡಿ, |
07:14 | ಮತ್ತು ಫಾಂಟ್ ನ ಆಕಾರವನ್ನು ೨೬ ಕ್ಕೆ ಇಳಿಸಿ. |
07:17 | ಬಲಬದಿಯಲ್ಲಿನ ಟೆಕ್ಸ್ಟ್ ಬಾಕ್ಸ್ ನಲ್ಲಿ ಮಧ್ಯದಲ್ಲಿರುವ ಇನ್ಸರ್ಟ್ ಟೂಲ್ ಬಾರ್ ನಲ್ಲಿ ‘Insert Table’ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
07:25 | ಡೀಫಾಲ್ಟ್ ಆಗಿ ಕಾಲಮ್ ಗಳ ಸಂಖ್ಯೆ ೫ ಮತ್ತು ರೋ ಗಳ ಸಂಖ್ಯೆ ೨ ಎಂದು ಪ್ರದರ್ಶಿತವಾಗುತ್ತದೆ. |
07:33 | ನಾವು ಕಾಲಮ್ ಗಳ ಸಂಖ್ಯೆ ೨ ಮತ್ತು ರೋ ಗಳ ಸಂಖ್ಯೆ ೫ ಎಂದು ಬದಲಾಯಿಸೋಣ. |
07:41 | OK ಬಟನ್ ಕ್ಲಿಕ್ ಮಾಡಿ. |
07:44 | ಈಗ ಟೇಬಲ್ ಅನ್ನು ದೊಡ್ಡದಾಗಿಸೋಣ, ಇದರಿಂದ ಟೆಕ್ಸ್ಟ್ ಓದಲು ಯೋಗ್ಯವಾಗುತ್ತದೆ. |
07:49 | ಟೇಬಲ್ ನಲ್ಲಿ ಈ ಕೆಳಗಿನಂತೆ ಡಾಟಾ ಭರ್ತಿ ಮಾಡಿ. |
07:51 | Implementation Year ಮತ್ತು % |
07:56 | 2006 10% |
07:59 | 2007 20% |
08:02 | 2008 30% |
08:05 | 2009 40% |
08:08 | ಈಗ ಹೆಡರ್ ರೋ ನಲ್ಲಿನ ಟೆಕ್ಸ್ಟ್ ನ ಫಾಂಟ್ ಅನ್ನು ಬೋಲ್ಡ್ ಮಾಡಿ ಅದನ್ನು ಮಧ್ಯಕ್ಕೆ ತರೋಣ. |
08:17 | ಟೇಬಲ್ ನ ವರ್ಣವನ್ನು ಬದಲಿಸಲು ಮೊದಲು ಸಂಪೂರ್ಣ ಟೆಕ್ಸ್ಟ್ ಅನ್ನು ಆಯ್ಕೆ ಮಾಡಿ. |
08:22 | ಮತ್ತು ಟಾಸ್ಕ್ ಫಲಕದಲ್ಲಿ Table Design ಎಂಬ ವಿಭಾಗದಲ್ಲಿ ಟೇಬಲ್ ಶೈಲಿಯನ್ನು ಆಯ್ಕೆ ಮಾಡಿ. ನಾನು ಈ ಶೈಲಿಯನ್ನು ಆಯ್ಕೆ ಮಾಡುತ್ತೇನೆ. |
08:30 | ನೋಡಿ, ಈಗ ಟೇಬಲ್ ಹೇಗೆ ಕಾಣುತ್ತದೆ. |
08:33 | ಈಗ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
08:37 | ಸಾರಾಂಶದಲ್ಲಿ ಹೇಳುವುದಾದರೆ, ನಾವಿಲ್ಲಿ ಕಲಿತದ್ದು ಇಷ್ಟು,
ಚಿತ್ರವನ್ನು ಹೇಗೆ ಸೇರಿಸುವುದು ಮತ್ತು ಅದನ್ನು ಹೇಗೆ ಫಾರ್ಮೇಟ್ ಮಾಡುವುದು. |
08:43 | ಪ್ರೆಸೆಂಟೇಷನ್ ನ ಒಳಗೆ ಮತ್ತು ಹೊರಗೆ ಹೈಪರ್ ಲಿಂಕ್ ಅನ್ನು ರಚಿಸುವುದು ಮತ್ತು ಟೇಬಲ್ ಅನ್ನು ಸೇರಿಸುವುದು. |
08:49 | ಮಾಡಬೇಕಾದ ಅಭ್ಯಾಸಗಳು, |
08:53 | ಹೊಸ ಪ್ರೆಸೆಂಟೇಷನ್ ಅನ್ನು ತಯಾರಿಸಿ. |
08:55 | ಮೂರನೇಯ ಸ್ಲೈಡ್ ನಲ್ಲಿ ಚಿತ್ರವನ್ನು ಸೇರಿಸಿ. |
08:58 | ನಾಲ್ಕನೇಯ ಸ್ಲೈಡ್ ನಲ್ಲಿ ೨ ರೋ ಮತ್ತು ೩ ಕಾಲಮ್ ಗಳುಳ್ಳ ಟೇಬಲ್ ರಚಿಸಿ. |
09:03 | ಟೇಬಲ್ ನ ಎರಡನೇಯ ರೋ ನ ಎರಡನೇಯ ಕಲಮ್ ನಲ್ಲಿ ‘slide 3’ ಎಂದು ಟೈಪ್ ಮಾಡಿ. ಇದನ್ನು ಮೂರನೇಯ ಸ್ಲೈಡ್ ಗೆ ಹೈಪರ್ ಲಿಂಕ್ ಮಾಡಿ. |
09:14 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿ. |
09:17 | ಇದು ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
09:20 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
09:25 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
09:30 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
09:34 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
09:41 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
09:46 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
09:53 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
10:05 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ. |
10:11 | ಧನ್ಯವಾದಗಳು. |