LibreOffice-Suite-Impress/C2/Inserting-Pictures-and-Objects/Kannada

From Script | Spoken-Tutorial
Revision as of 13:17, 28 May 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ಲಿಬ್ರೆ ಆಫೀಸ್ ಇಂಪ್ರೆಸ್ ನ ಇನ್ಸರ್ಟಿಂಗ್ ಪಿಕ್ಚರ್ಸ್ ಎಂಡ್ ಆಬ್ಜೆಕ್ಟ್ಸ್ ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ಪ್ರೆಸೆಂಟೇಷನ್ ನಲ್ಲಿ ಪಿಕ್ಚರ್ ಮತ್ತು ಆಬ್ಜೆಕ್ಟ್ ಗಳನ್ನು ಹೇಗೆ ಸೇರಿಸುವುದು,
00:12 ಪಿಕ್ಚರ್ ಮತ್ತು ಆಬ್ಜೆಕ್ಟ್ ಗಳನ್ನು ಫಾರ್ಮೇಟ್ ಮಾಡುವಿಕೆ,
00:15 ಪ್ರೆಸೆಂಟೇಷನ್ ನ ಒಳಗೆ ಮತ್ತು ಹೊರಗೆ ಹೈಪರ್ ಲಿಂಕ್ ಮಾಡುವಿಕೆ ಮತ್ತು ಟೇಬಲ್ ಗಳ ಸೇರಿಸುವುಕೆ ಮುಂತಾದವುಗಳನ್ನು ಕಲಿಯುತ್ತೇವೆ.
00:20 ಇಲ್ಲಿ ನಾವು ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಉಬುಂಟು ಲಿನಕ್ಸ್ ನ 10.04 ನೇ ಆವೃತ್ತಿಯನ್ನು ಹಾಗೂ ಲಿಬ್ರೆ ಆಫೀಸ್ ನ 3.3.4 ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ.
00:29 ಪರದೆಯ ಮೇಲೆ ಕಾಣುತ್ತಿರುವ URL ಅನ್ನು ವೆಬ್ ಬ್ರೌಸರ್ ನ ಅಡ್ರೆಸ್ ಬಾರ್ ನಲ್ಲಿ ಬರೆಯಿರಿ.
00:34 ಇಲ್ಲಿ ಒಂದು ಚಿತ್ರವು ಕಾಣಿಸುತ್ತದೆ.
00:37 ಈಗ ಚಿತ್ರದ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Save Image As ಎಂಬ ವಿಕಲ್ಪವನ್ನು ಆಯ್ಕೆ ಮಾಡಿ.
00:41 ಒಂದು ಡಯಲಾಗ್ ಬಾಕ್ಸ್ ತೆರೆಯುತ್ತದೆ.
00:43 ಹೆಸರಿನ ಸ್ಥಾನದಲ್ಲಿ ‘open source -bart.png’ ಎಂದು ಈಗಾಗಲೇ ಕಾಣುತ್ತಿದೆ.
00:51 ನಾನು ಲೊಕೇಶನ್ ಗಾಗಿ ಡೆಸ್ಕ್ಟಾಪ್ ಅನ್ನು ಆಯ್ಕೆ ಮಾಡಿ ಸೇವ್ ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ.
00:59 ಬನ್ನಿ, ಈಗ ನಾವು ಈ ಮೊದಲೇ ಸೇವ್ ಮಾಡಿದ್ದ ನಮ್ಮ ‘Sample-Impress’ ಎಂಬ ಪ್ರೆಸೆಂಟೇಷನ್ ಅನ್ನು ತೆರೆಯೋಣ.
01:04 ಈಗ ನಾವು ಈ ಪ್ರೆಸೆಂಟೇಷನ್ ನಲ್ಲಿ ಚಿತ್ರವನ್ನು ಹೇಗೆ ಸೇರಿಸುವುದೆಂದು ನೋಡೋಣ.
01:09 ಮುಖ್ಯ ಮೆನ್ಯುವಿನಲ್ಲಿ Insert ಎಂಬಲ್ಲಿ ಕ್ಲಿಕ್ ಮಾಡಿ ಮತ್ತು Picture ಎಂಬಲ್ಲಿ ಕ್ಲಿಕ್ ಮಾಡಿ.
01:14 ಈಗ From File ಎಂಬಲ್ಲಿ ಕ್ಲಿಕ್ ಮಾಡಿ.
01:17 ಒಂದು ಡಯಲಾಗ್ ಬಾಕ್ಸ್ ತೆರೆಯುತ್ತದೆ.
01:19 ನೀವು ಎಲ್ಲಿಂದ ಚಿತ್ರವನ್ನು ಸೇರಿಸಬಯಸುವಿರೋ ಆ ಪ್ಫೋಲ್ಡರ್ ಅನ್ನು ಆಯ್ಕೆ ಮಾಡಿ.
01:23 ನಾನು ಡೆಸ್ಕ್ಟಾಪ್ ಎಂಬ ಫೋಲ್ಡರ್ ಅನ್ನು ಆಯ್ಕೆ ಮಾಡುತ್ತೇನೆ.
01:26 ಈಗ ನಾವು ಸೇರಿಸಬೇಕಾದ ಚಿತ್ರವನ್ನು ಆಯ್ಕೆ ಮಾಡಿ Open ಬಟನ್ ಕ್ಲಿಕ್ ಮಾಡಿ.
01:31 ಚಿತ್ರವು ಸ್ಲೈಡ್ ನಲ್ಲಿ ಸೇರಿರುತ್ತದೆ.
01:35 ಬದಲಾವಣೆಯನ್ನು ಅಂಡು ಮಾಡೋಣ.
01:37 ಬನ್ನಿ, ನಾನು ಚಿತ್ರವನ್ನು ಸೇರಿಸುವ ಅನ್ಯ ವಿಕಲ್ಪಗಳನ್ನು ವಿವರಿಸುತ್ತೇನೆ.
01:41 Insert ಮತ್ತು Slide ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ‘Overview’ ಎಂಬ ಸ್ಲೈಡ್ ನ ಕೆಳಗೆ ಹೊಸದೊಂದು ಸ್ಲೈಡ್ ಅನ್ನು ಸೇರಿಸಿ.
01:50 Title Text Box ನ ಮೇಲೆ ಕ್ಲಿಕ್ ಮಾಡಿ ಅದನ್ನು ‘Open source Funny’ ಎಂದು ಪರಿವರ್ತಿಸಿ.
01:56 ಮಧ್ಯದಲ್ಲಿ 4 ಐಕಾನ್ ಗಳಿರುವ ಒಂದು ಸಣ್ಣ ಬಾಕ್ಸ್ ಅನ್ನು ಗಮನಿಸಿ. ಇದು ಇನ್ಸರ್ಟ್ ಟೂಲ್ ಬಾರ್ ಆಗಿದೆ.
02:03 ಇನ್ಸರ್ಟ್ಟ್ ಟೂಲ್ ಬಾರ್ ನಲ್ಲಿ Insert Picture icon ನ ಮೇಲೆ ಕ್ಲಿಕ್ ಮಾಡಿ.
02:08 ಚಿತ್ರವನ್ನು ಆಯ್ಕೆ ಮಾಡಿ ಮತ್ತು Open ಬಟನ್ ಮೇಲೆ ಕ್ಲಿಕ್ ಮಾಡಿ.
02:12 ಗಮನಿಸಿ, ಸೇರಿಸಿರುವ ಚಿತ್ರವು ಹೆಚ್ಚು-ಕಡಿಮೆ ಸಂಪೂರ್ಣ ಸ್ಲೈಡ್ ಅನ್ನು ಆವರಿಸಿದೆ.
02:17 ನೀವು ಮೊದಲು ಇದರ ಮೇಲೆ ಕ್ಲಿಕ್ ಮಾಡಿ ಮತ್ತು ಕಂಟ್ರೋಲ್ ಪಾಯಿಂಟ್ ಅನ್ನು ಕುಶಲತೆಯಿದ ಉಪಯೋಗಿಸುವುದರ ಮೂಲಕ ಚಿತ್ರದ ಆಕಾರವನ್ನು ಬದಲಿಸಬಹುದಾಗಿದೆ.
02:27 ಹೀಗೆಯೇ ನಾವು ಈ ಪ್ರೆಸೆಂಟೇಷನ್ ನಲ್ಲಿ ಚಾರ್ಟ್ಸ್ ಮೂವೀ ಕ್ಲಿಪ್ಸ್ ತರಹದ ಬೇರೆ-ಬೇರೆ ವಿಷಯಗಳನ್ನೂ ಸೇರಿಸಬಹುದು.
02:35 ಈ ಎಲ್ಲಾ ಸಾಧ್ಯತೆಗಳನ್ನೂ ಪರೀಕ್ಷಿಸಿ.
02:38 ಈಗ ಹೈಪರ್ ಲಿಂಕ್ ಅನ್ನು ರಚಿಸುವುದು ಹೇಗೆ ಎಂಬುದನ್ನು ಕಲಿಯೋಣ.
02:41 ಹೈಪರ್ ಲಿಂಕ್ ಎನ್ನುವುದು ನಮ್ಮ ಪ್ರೆಸೆಂಟೇಷನ್ ನಲ್ಲಿ ಒಂದು ಸ್ಲೈಡ್ ನಿಂದ ಇನ್ನೊಂದು ಸ್ಲೈಡ್ ಗೆ ಹೋಗಲು ಅಥವಾ ವೆಬ್ ಪೇಜ್ ಗೆ ಅಥವಾ ಡಾಕ್ಯುಮೆಂಟ್ ಅನ್ನು ತೆರೆಯಲು ಅನುವು ಮಾಡಿಕೊಡುತ್ತದೆ.
02:49 ಮೊದಲು ನಾವು ಪ್ರೆಸೆಂಟೇಷನ್ ನಲ್ಲಿ ಹೈಪರ್ ಲಿಂಕ್ ಹೇಗೆ ರಚಿಸುವುದೆಂದು ನೋಡೋಣ.
02:54 ‘Overview’ ಎಂಬ ಸ್ಲೈಡ್ ನ ನಂತರ ಒಂದು ಹೊಸ ಸ್ಲೈಡ್ ಅನ್ನು ತೆರೆಯಿರಿ.
03:02 ಟೈಟಲ್ ಬಾರ್ ನಲ್ಲಿ ಕ್ಲಿಕ್ ಮಾಡಿ ‘Table of Contents’ ಎಂದು ಟೈಪ್ ಮಾಡಿ.
03:06 Body text box ನ ಮೇಲೆ ಕ್ಲಿಕ್ ಮಾಡಿ ಮತ್ತು ಮುಂದಿನ ಸ್ಲೈಡ್ ಗಳ ಟೈಟಲ್ ಗಳನ್ನು ಈ ಕೆಳಗಿನಂತೆ ಟೈಪ್ ಮಾಡಿ.
03:14 Open Source Funny

The Present Situation Development up to present Potential Alternatives Recommendation

03:24 ಈಗ ‘Development up to present’ ಎಂಬ ಟೆಕ್ಸ್ಟ್ ಅನ್ನು ಆಯ್ಕೆ ಮಾಡಿ.
03:28 Insert ಮತ್ತು ಅಲ್ಲಿ Hyperlink ಎಂಬಲ್ಲಿ ಕ್ಲಿಕ್ ಮಾಡಿ.
03:31 ಇದು Hyperlink ಎಂಬ ಡಯಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ.
03:34 ಎಡ ಭಾಗದಲ್ಲಿ ‘Document’ ಎಂಬುದನ್ನು ಆಯ್ಕೆ ಮಾಡಿ ಮತ್ತು ‘Target in document’ ಎಂಬುದರ ಬಲ ಭಾಗದಲ್ಲಿರುವ ಬಟನ್ ಅನ್ನು ಕ್ಲಿಕ್ ಮಾಡಿ.
03:48 ಈ ಪ್ರೆಸೆಂಟೇಷನ್ ನಲ್ಲಿ ಇರುವ ಸ್ಲೈಡ್ ಗಳ ಸೂಚಿಯು ತೆರೆಯುತ್ತದೆ.
03:53 ಸೂಚಿಯಲ್ಲಿ ‘Development up to present’ ಎಂಬ ಸ್ಲೈಡ್ ಅನ್ನು ಆಯ್ಕೆ ಮಾಡಿ.
03:58 ಈ ಸೂಚಿಯಲ್ಲಿ Apply ಬಟನ್ ನ ಮೇಲೆ ಕ್ಲಿಕ್ ಮಾಡಿ ಮತ್ತು Close ಬಟನ್ ನ ಮೇಲೆ ಕ್ಲಿಕ್ ಮಾಡಿ.
04:04 Hyperlink ಎಂಬ ಡಯಲಾಗ್ ಬಾಕ್ಸ್ ನಲ್ಲಿ ಮತ್ತೊಮ್ಮೆ Apply ಬಟನ್ ನ ಮೇಲೆ ಕ್ಲಿಕ್ ಮಾಡಿ ಮತ್ತು Close ಬಟನ್ ನ ಮೇಲೆ ಕ್ಲಿಕ್ ಮಾಡಿ.
04:12 ಸ್ಲೈಡ್ ನ ಲ್ಲಿ ಎಲ್ಲಿಯಾದರೂ ಕ್ಲಿಕ್ ಮಾಡಿ.
04:14 ಈಗ ನೀವು ನಿಮ್ಮ ಕರ್ಸರ್ ಅನ್ನು ಟೆಕ್ಸ್ಟ್ ನ ಮೇಲೆ ಕೊಂಡೊಯ್ದಲ್ಲಿ ಅದು ಕೈಗುರುತಾಗಿ ಬದಲಾಗುತ್ತದೆ.
04:20 ಇದರರ್ಥ, ಹೈಪರ್ ಲಿಂಕ್ ಸಕ್ಷಮವಾಗಿ ಆಗಿದೆಯೆಂದು.
04:24 ಈಗ ಹೈಪರ್ ಲಿಂಕ್ ಆದ ಟೆಕ್ಸ್ಟ್ ನ ಮೇಲೆ ಕ್ಲಿಕ್ ಮಾಡುವುದರಿಂದ ಇದು ನಿಮ್ಮನ್ನು ಸಂಬಂಧಪಟ್ಟ ಸ್ಲೈಡ್ ಗೆ ಕೊಂಡೊಯ್ಯುತ್ತದೆ.
04:29 ಬನ್ನಿ, ಬೇರೆ ಡಾಕ್ಯುಮೆಂಟ್ ಅನ್ನು ಹೈಪರ್ ಲಿಂಕ್ ಮಾಡಲು ಪುನಃ Table of Contents ಎಂಬ ಸ್ಲೈಡ್ ಗೆ ಹೋಗೋಣ.
04:36 ಈಗ ಇಲ್ಲಿ External Document ಎಂದು ಇನ್ನೊಂದು ಲೈನ್ ಅನ್ನು ಜೋಡಿಸೋಣ.
04:40 ಈ ಟೆಕ್ಸ್ಟ್ ನ ಲೈನ್ ಅನ್ನು ಆಯ್ಕೆ ಮಾಡಿ ಮತ್ತು Insert ಎಂಬಲ್ಲಿ ಕ್ಲಿಕ್ ಮಾಡಿ Hyperlink ಎಂಬಲ್ಲಿ ಕ್ಲಿಕ್ ಮಾಡಿ.
04:45 ಎಡ ಭಾಗದಲ್ಲಿ ಡಾಕ್ಯುಮೆಂಟ್ ಅನ್ನು ಆಯ್ಕೆ ಮಾಡಿ.
04:48 Document Path field ನ ಬಲ ಭಾಗದಲ್ಲಿರುವ ಫೋಲ್ಡರ್ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
04:55 ಹೈಪರ್ ಲಿಂಕ್ ಮಾಡಬೇಕಾಗಿರುವ ಡಾಕ್ಯುಮೆಂಟ್ ಅನ್ನು ಆಯ್ಕೆಮಾಡಿ.
04:58 ನಾವು ರೈಟರ್ ನ ಸರಣಿಯಲ್ಲಿ ತಯಾರಿಸಿದ resume.odt ಎಂಬ ಡಾಕ್ಯುಮೆಂಟ್ ಅನ್ನು ಆಯ್ಕೆ ಮಾಡೋಣ ಮತ್ತು Open ಬಟನ್ ಕ್ಲಿಕ್ ಮಾಡೋಣ.
05:07 Hyperlink ಎಂಬ ಡಲಯಾಗ್ ಬಾಕ್ಸ್ ನಲ್ಲಿ Apply ಬಟನ್ ಕ್ಲಿಕ್ ಮಾಡಿ ಮತ್ತು Close ಬಟನ್ ಕ್ಲಿಕ್ ಮಾಡಿ
05:14 ಸ್ಲೈಡ್ ನಲ್ಲಿ ಎಲ್ಲಾದರೂ ಕ್ಲಿಕ್ ಮಾಡಿ.
05:17 ಈಗ ನೀವು ನಿಮ್ಮ ಕರ್ಸರ್ ಅನ್ನು ಟೆಕ್ಸ್ಟ್ ನ ಮೇಲೆ ಕೊಂಡೊಯ್ದಲ್ಲಿ ಅದು ಕೈಗುರುತಾಗಿ ಬದಲಾಗುತ್ತದೆ.
05:22 ಇದರರ್ಥ, ಹೈಪರ್ ಲಿಂಕ್ ಸಕ್ಷಮವಾಗಿ ಆಗಿದೆಯೆಂದು.
05:26 ಈಗ ಹೈಪರ್ ಲಿಂಕ್ ಆದ ಟೆಕ್ಸ್ಟ್ ನ ಮೇಲೆ ಕ್ಲಿಕ್ ಮಾಡುವುದರಿಂದ ಅದು ನಿಮ್ಮನ್ನು ಸಂಬಂಧಪಟ್ಟ ಡಾಕ್ಯುಮೆಂಟ್ ಗೆ ಕೊಂಡೊಯ್ಯುತ್ತದೆ.
05:31 ಇಲ್ಲಿ, ಇದು ನಮ್ಮನ್ನು resume.odt ಎಂಬ ಡಾಕ್ಯುಮೆಂಟ್ ಗೆ ಕೊಂಡೊಯ್ಯುತ್ತದೆ.
05:37 ವೆಬ್ ಪೇಜ್ ಗೆ ಹೈಪರ್ ಲಿಂಕ್ ರಚಿಸುವುದು ಕೂಡಾ ಸಮಾನವಾಗಿದೆ.
05:40 ಪ್ರೆಸೆಂಟೇಷನ್ ನ ಕೊನೆಯಲ್ಲಿ ಒಂದು ಹೊಸ ಸ್ಲೈಡ್ ಅನ್ನು ಸೇರಿಸಿ.
05:43 ಟೈಟಲ್ ಅನ್ನು ‘Essential Open Source Software’ ಎಂದು ಬದಲಿಸಿ.
05:48 Body text box ನಲ್ಲಿ Ubuntu, Libre Office ಎಂದು ಟೈಪ್ ಮಾಡಿ.
05:54 ಟೆಕ್ಸ್ಟ್ ನ ಎರಡನೇ ಲೈನ್ ಅನ್ನು ಸೆಲೆಕ್ಟ್ ಮಾಡಿ ಮತ್ತು Insert ಎಂಬಲ್ಲಿ ಕ್ಲಿಕ್ ಮಾಡಿ ಮತ್ತು Hyperlink ಎಂಬಲ್ಲಿ ಕ್ಲಿಕ್ ಮಾಡಿ.
06:00 ಎಡ ಭಾಗದಲ್ಲಿ ಇಂಟರ್ನೆಟ್ ಎಂದು ಆಯ್ಕೆ ಮಾಡಿ.
06:03 Hyperlink type ಎಂಬಲ್ಲಿ Web ಎಂಬುದನ್ನು ಆಯ್ಕೆ ಮಾಡಿ.
06:07 Target ನ ಸ್ಥಾನದಲ್ಲಿ ‘www.libreoffice.org’ ಎಂದು ಟೈಪ್ ಮಾಡಿ.
06:16 Hyperlink ನ ಡಯಲಾಗ್ ಬಾಕ್ಸ್ ನಲ್ಲಿ Apply ಬಟನ್ ಕ್ಲಿಕ್ ಮಾಡಿ ಮತ್ತು Close ಬಟನ್ ಕ್ಲಿಕ್ ಮಾಡಿ
06:23 ಸ್ಲೈಡ್ ನಲ್ಲಿ ಎಲ್ಲಾದರೂ ಕ್ಲಿಕ್ ಮಾಡಿ.
06:26 ಈಗ ನೀವು ನಿಮ್ಮ ಕರ್ಸರ್ ಅನ್ನು ಟೆಕ್ಸ್ಟ್ ನ ಮೇಲೆ ಕೊಂಡೊಯ್ದಲ್ಲಿ ಅದು ಕೈಗುರುತಾಗಿ ಬದಲಾಗುತ್ತದೆ.
06:32 ಇದರರ್ಥ, ಹೈಪರ್ ಲಿಂಕ್ ಸಕ್ಷಮವಾಗಿ ಆಗಿದೆಯೆಂದು.
06:37 ಈಗ ಹೈಪರ್ ಲಿಂಕ್ ಆದ ಟೆಕ್ಸ್ಟ್ ನ ಮೇಲೆ ಕ್ಲಿಕ್ ಮಾಡುವುದರಿಂದ ಅದು ನಿಮ್ಮನ್ನು ಸಂಬಂಧಪಟ್ಟ ವೆಬ್ ಪೇಜ್ ಗೆ ಕೊಂಡೊಯ್ಯುತ್ತದೆ.
06:44 ಕೊನೆಯದಾಗಿ, ಟೇಬಲ್ ಗಳು ಮಾಹಿತಿಗಳನ್ನು ರೋ ಮತ್ತು ಕಾಲಮ್ ಗಳಲ್ಲಿ ವ್ಯವಸ್ಥಿತವಾಗಿಡಲು ಸಹಾಯ ಮಾಡುತ್ತವೆ.
06:49 ಬನ್ನಿ, ಈಗ ಲಿಬ್ರೆ ಆಫೀಸ್ ಇಂಪ್ರೆಸ್ ನಲ್ಲಿ ಟೇಬಲ್ ಅನ್ನು ಹೇಗೆ ಸೇರಿಸುವುದೆಂದು ಕಲಿಯೋಣ.
06:54 ಸ್ಲೈಡ್ ಗಳ ಗುಂಪಿನಿಂದ ‘Development up to the present’ ಎಂಬ ಸ್ಲೈಡ್ ಅನ್ನು ಆಯ್ಕೆ ಮಾಡಿ.
07:00 ಟಾಸ್ಕ್ ಫಲಕದಲ್ಲಿರುವ Layout ವಿಭಾಗದಲ್ಲಿ ಒಂದು ಟೈಟಲ್ ಮತ್ತು ಎರಡು ಕಂಟೆಂಟ್ ಗಳಿರುವ ಐಕಾನ್ ಅನ್ನು ಆಯ್ಕೆ ಮಾಡಿ.
07:07 ಎಡಬದಿಯಲ್ಲಿನ ಟೆಕ್ಸ್ಟ್ ಬಾಕ್ಸ್ ನಲ್ಲಿರುವ ಟೆಕ್ಸ್ಟ್ ಅನ್ನು ಆಯ್ಕೆ ಮಾಡಿ,
07:14 ಮತ್ತು ಫಾಂಟ್ ನ ಆಕಾರವನ್ನು ೨೬ ಕ್ಕೆ ಇಳಿಸಿ.
07:17 ಬಲಬದಿಯಲ್ಲಿನ ಟೆಕ್ಸ್ಟ್ ಬಾಕ್ಸ್ ನಲ್ಲಿ ಮಧ್ಯದಲ್ಲಿರುವ ಇನ್ಸರ್ಟ್ ಟೂಲ್ ಬಾರ್ ನಲ್ಲಿ ‘Insert Table’ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
07:25 ಡೀಫಾಲ್ಟ್ ಆಗಿ ಕಾಲಮ್ ಗಳ ಸಂಖ್ಯೆ ೫ ಮತ್ತು ರೋ ಗಳ ಸಂಖ್ಯೆ ೨ ಎಂದು ಪ್ರದರ್ಶಿತವಾಗುತ್ತದೆ.
07:33 ನಾವು ಕಾಲಮ್ ಗಳ ಸಂಖ್ಯೆ ೨ ಮತ್ತು ರೋ ಗಳ ಸಂಖ್ಯೆ ೫ ಎಂದು ಬದಲಾಯಿಸೋಣ.
07:41 OK ಬಟನ್ ಕ್ಲಿಕ್ ಮಾಡಿ.
07:44 ಈಗ ಟೇಬಲ್ ಅನ್ನು ದೊಡ್ಡದಾಗಿಸೋಣ, ಇದರಿಂದ ಟೆಕ್ಸ್ಟ್ ಓದಲು ಯೋಗ್ಯವಾಗುತ್ತದೆ.
07:49 ಟೇಬಲ್ ನಲ್ಲಿ ಈ ಕೆಳಗಿನಂತೆ ಡಾಟಾ ಭರ್ತಿ ಮಾಡಿ.
07:51 Implementation Year ಮತ್ತು %
07:56 2006 10%
07:59 2007 20%
08:02 2008 30%
08:05 2009 40%
08:08 ಈಗ ಹೆಡರ್ ರೋ ನಲ್ಲಿನ ಟೆಕ್ಸ್ಟ್ ನ ಫಾಂಟ್ ಅನ್ನು ಬೋಲ್ಡ್ ಮಾಡಿ ಅದನ್ನು ಮಧ್ಯಕ್ಕೆ ತರೋಣ.
08:17 ಟೇಬಲ್ ನ ವರ್ಣವನ್ನು ಬದಲಿಸಲು ಮೊದಲು ಸಂಪೂರ್ಣ ಟೆಕ್ಸ್ಟ್ ಅನ್ನು ಆಯ್ಕೆ ಮಾಡಿ.
08:22 ಮತ್ತು ಟಾಸ್ಕ್ ಫಲಕದಲ್ಲಿ Table Design ಎಂಬ ವಿಭಾಗದಲ್ಲಿ ಟೇಬಲ್ ಶೈಲಿಯನ್ನು ಆಯ್ಕೆ ಮಾಡಿ. ನಾನು ಈ ಶೈಲಿಯನ್ನು ಆಯ್ಕೆ ಮಾಡುತ್ತೇನೆ.
08:30 ನೋಡಿ, ಈಗ ಟೇಬಲ್ ಹೇಗೆ ಕಾಣುತ್ತದೆ.
08:33 ಈಗ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
08:37 ಸಾರಾಂಶದಲ್ಲಿ ಹೇಳುವುದಾದರೆ, ನಾವಿಲ್ಲಿ ಕಲಿತದ್ದು ಇಷ್ಟು,

ಚಿತ್ರವನ್ನು ಹೇಗೆ ಸೇರಿಸುವುದು ಮತ್ತು ಅದನ್ನು ಹೇಗೆ ಫಾರ್ಮೇಟ್ ಮಾಡುವುದು.

08:43 ಪ್ರೆಸೆಂಟೇಷನ್ ನ ಒಳಗೆ ಮತ್ತು ಹೊರಗೆ ಹೈಪರ್ ಲಿಂಕ್ ಅನ್ನು ರಚಿಸುವುದು ಮತ್ತು ಟೇಬಲ್ ಅನ್ನು ಸೇರಿಸುವುದು.
08:49 ಮಾಡಬೇಕಾದ ಅಭ್ಯಾಸಗಳು,
08:43 ಹೊಸ ಪ್ರೆಸೆಂಟೇಷನ್ ಅನ್ನು ತಯಾರಿಸಿ.
08:55 ಮೂರನೇಯ ಸ್ಲೈಡ್ ನಲ್ಲಿ ಚಿತ್ರವನ್ನು ಸೇರಿಸಿ.
08:58 ನಾಲ್ಕನೇಯ ಸ್ಲೈಡ್ ನಲ್ಲಿ ೨ ರೋ ಮತ್ತು ೩ ಕಾಲಮ್ ಗಳುಳ್ಳ ಟೇಬಲ್ ರಚಿಸಿ.
09:03 ಟೇಬಲ್ ನ ಎರಡನೇಯ ರೋ ನ ಎರಡನೇಯ ಕಲಮ್ ನಲ್ಲಿ ‘slide 3’ ಎಂದು ಟೈಪ್ ಮಾಡಿ. ಇದನ್ನು ಮೂರನೇಯ ಸ್ಲೈಡ್ ಗೆ ಹೈಪರ್ ಲಿಂಕ್ ಮಾಡಿ.
09:14 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿ.
09:17 ಇದು ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವನ್ನು ಹೇಳುತ್ತದೆ.
09:20 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
09:25 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
09:30 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
09:34 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
09:41 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
09:46 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
09:53 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
10:05 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ.
10:11 ಧನ್ಯವಾದಗಳು.

Contributors and Content Editors

PoojaMoolya, Vasudeva ahitanal