LibreOffice-Suite-Draw/C4/Set-Draw-preferences/Kannada

From Script | Spoken-Tutorial
Revision as of 13:52, 2 June 2016 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಲಿಬ್ರೆ ಓಫಿಸ್ ಡ್ರಾ ನಲ್ಲಿ ಸೆಟ್ಟಿಂಗ್ ಪ್ರಿಫರೆನ್ಸ್ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನೀವು ,
  • ಪ್ರೋಪರ್ಟೀಸ್
  • ಆವೃತ್ತಿ ಗಳನ್ನು ರಚಿಸುವುದು.
  • ಕಲರ್/ಗ್ರೇಯ್ ಸ್ಕೇಲ್/ ಬ್ಲ್ಯಾಕ್-ಅಂಡ್-ವೈಟ್ ಗಳ ವ್ಯೂ.

ಇವುಗಳನ್ನು ಹೇಗೆ ಸೆಟ್ ಮಾಡುವುದು ಎಂಬುವುದನ್ನು ತಿಳಿಯುವಿರಿ.

00:18 ಇಲ್ಲಿ ನಾವು,
  • ಉಬುಂಟು ಲಿನಕ್ಸ್ ನ 10.04 ನೇ ಆವೃತ್ತಿ ಮತ್ತು
  • ಲಿಬ್ರೆ ಆಫೀಸ್ ಸ್ಯೂಟ್ ನ 3.3.4 ನೇ ಆವೃತ್ತಿಗಳನ್ನು ಉಪಯೋಗಿಸುತ್ತಿದ್ದೇವೆ.
00:29 ಈಗ ನಾವು ಈ ಹಿಂದೆ ಸೇವ್ ಮಾಡಿದ 3D object chart (ಓಬ್ಜೆಕ್ಟ್ ಚಾರ್ಟ್) ಎಂಬ ಫೈಲನ್ನು ಒಪನ್ ಮಾಡಿ, ಮತ್ತು ಒಂದನೇ ಪೇಜ್ ಗೆ ಹೋಗಿ.
00:40 ಈಗ, ನಂತರದ ರೆಫರೆನ್ಸಗಾಗಿ ಕೆಲವು ವಿವರಣೆಗಳನ್ನು ಈ ಫೈಲ್ ಗೆ ಸೇರಿಬೆಕೆಂದುಕೊಳ್ಳೋಣ.
00:45 ಹಾಗೆ ಮಾಡಲು, ಮೈನ್ ಮೆನುವಿನಿಂದ File ಸೆಲೆಕ್ಟ್ ಮಾಡಿ ಮತ್ತು Properties ಅನ್ನು ಕ್ಲಿಕ್ ಮಾಡಿ.
00:50 ನೀವು Properties ಎಂಬ ಡೈಲಾಗ್ ಬಾಕ್ಸ್ ನ್ನು ನೋಡುತ್ತೀರಿ.
00:56 General ಟ್ಯಾಬನ್ನು ಕ್ಲಿಕ್ ಮಾಡಿ. ಈ ಫೈಲ್ ಗೆ ಸಂಬಂಧಿತ ಎಲ್ಲಾ ಮಾಹಿತಿಗಳು ಇಲ್ಲಿ ಲಿಸ್ಟ್ ಆಗುತ್ತದೆ.
01:02 ದಯವಿಟ್ಟು ಗಮನಿಸಿ: ಇಲ್ಲಿ ನಾವು ಕೇವಲ ಫೈಲ್ ನ ವೀಕ್ಷಣೆ ಮಾಡಬಹುದು. ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ.
01:09 ನಂತರ, Description ಟ್ಯಾಬನ್ನು ಕ್ಲಿಕ್ ಮಾಡಿ.
01:13 ಇಲ್ಲಿ ನಾವು ಟೈಟಲ್, ಸಬ್ಜೆಕ್ಟ್, ಕೀವರ್ಡ್ ಮತ್ತು ಕಮೆಂಟ್ಸ್ ಗಳನ್ನು ನಮ್ಮ ಅವಶ್ಯಕತೆಗಳಿಗೆ ಅನುಸಾರವಾಗಿ ಸೇರಿಸಬಹುದು.
01:20 ಈ ಮಾಹಿತಿಯನ್ನು ನಂತರ ರೆಫರೆನ್ಸ್ ಆಗಿ ಬಳಸಿಕೊಳ್ಳಬಹುದು.
01:25 ಟೈಟಲ್ ಫೀಲ್ಡ್ ನಲ್ಲಿ 3D object chart ಎಂದು ಟೈಪ್ ಮಾಡಿ.
01:30 Subject ಫೀಲ್ಡ್ ನಲ್ಲಿ : 3D Objects Comparisons ಎಂದು ಟೈಪ್ ಮಾಡಿ.
01:37 Keywords ನಲ್ಲಿ 3D and 3D Effects ಎಂದು ಟೈಪ್ ಮಾಡಿ.
01:42 ಕೊನೆಯಲ್ಲಿ, Comments ಫೀಲ್ಡ್ ನಲ್ಲಿ Learning about File Properties ಎಂದು ಟೈಪ್ ಮಾಡಿ.
01:48 ಹೀಗೆ Draw ಫೈಲ್ ಗೆ ಸಂಬಧಿಸಿದ ಮಾಹಿತಿಗಳನ್ನು ಟೈಪ್ ಮಾಡುವುದು ಒಂದು ಉತ್ತಮ ಅಭ್ಯಾಸ.
01:54 ಇದರೊಂದಿಗೆ, Description ಟ್ಯಾಬ್ ನಲ್ಲಿರುವ properties ನಲ್ಲಿ ನೀವು ನಿಮ್ಮದೇ ಆದ ಪ್ರೋಪರ್ಟೀಸ್ ಅನ್ನು ಸೆಟ್ ಮಾಡಬಹುದು.
02:00 ಉದಾಹರಣೆಗೆ, ಡಾಕ್ಯುಮೆಂಟ್ ತಯಾರಾದ ದಿನಾಂಕ,
02:05 ಡಾಕ್ಯುಮೆಂಟ್ ನ ಸಂಪಾದಕ,
02:07 ಯಾವ ಕ್ಲೈಂಟ್ ಗಾಗಿ ಈ ಡಾಕ್ಯುಮೆಂಟ್ ತಯಾರಾಗಿದೆ, ಇತ್ಯಾದಿ ವಿಷಯಗಳನ್ನು ತಿಳಿಯಬಹುದು.
02:11 Draw ಎಂಬುದು ಇನ್ಫೊರ್ಮೇಶನ್ ಕಸ್ಟಮೈಸ್ ಮಾಡಲು ಸಹಾಯ ಮಾಡುವ ವೈಶಿಷ್ಟ್ಯಗಳನ್ನು ಹೊಂದಿದೆ.
02:17 Properties ಡೈಲಾಗ್ ಬಾಕ್ಸ್ ನಲ್ಲಿ, Custom Properties ನ್ನು ಕ್ಲಿಕ್ ಮಾಡಿ.
02:23 ಇಲ್ಲಿ ನೀವು Name, Type ಮತ್ತುValue ಎಂಬ ಮೂರು ಫೀಲ್ಡನ್ನು ನೋಡುವಿರಿ.
02:30 ಈಗ ಕೆಳಗಡೆ ಬಲಭಾಗದಲ್ಲಿರುವ Add ಬಟನ್ ನನ್ನು ಕ್ಲಿಕ್ ಮಾಡಿ.
02:33 ಈಗ ನೀವು ಪ್ರತಿಯೊಂದು ಫೀಲ್ಡ್ ನ ಅಡಿಯಲ್ಲಿ ಡ್ರಾಪ್-ಡೌನ್ ಬಾಕ್ಸ್ ನ್ನು ಕಾಣುತ್ತೀರಿ.
02:40 ಈಗ Name ಅನ್ನು ಕ್ಲಿಕ್ ಮಾಡಿ ಮತ್ತು ಡ್ರಾಪ್-ಡೌನ್ ಮಾಡಿ Date Completed ಅನ್ನು ಸೆಲೆಕ್ಟ್ ಮಾಡಿ.
02:46 Type ನ ಡ್ರಾಪ್-ಡೌನ್ ನಲ್ಲಿ ನಾವು Date Time ನ್ನು ಸೆಲೆಕ್ಟ್ ಮಾಡೊಣ.
02:51 ಈಗ Value ಫೀಲ್ಡ್ , ದಿನಾಂಕ ಮತ್ತು ಸಮಯವನ್ನು ಸೂಚಿಸುತ್ತದೆ.
02:55 ನಾವೀಗ ದಿನಾಂಕವನ್ನು ಬದಲಾಯಿಸುವುದು ಬೇಡ.
02:57 Time ಫೀಲ್ಡ್ ನಲ್ಲಿ ನಾವು 10:30:33 ಎಂದು ಎಂಟರ್ ಮಾಡೋಣ.
03:05 ಈಗ ನೀವು ಡಾಕ್ಯುಮೆಂಟ್ ತಯಾರಾದ ದಿನಾಂಕವನ್ನು ತಿಳಿಯುವಿರಿ
03:09 ನಾವೀಗ ಇನ್ನೊಂದು field ನ್ನು ಸೇರಿಸೋಣ. Add ನ್ನು ಕ್ಲಿಕ್ ಮಾಡಿ.
03:14 ನೀವೀಗ ಡ್ರಾಪ್-ಡೌನ್ ಬಾಕ್ಸ್ ನ ಎರಡನೇ ಲಿಸ್ಟನ್ನು ನೋಡುವಿರಿ.
03:21 Name ನ ಡ್ರಾಪ್-ಡೌನ್ ನಲ್ಲಿChecked by ಎಂದು ಸೆಲೆಕ್ಟ್ ಮಾಡಿ.
03:25 Type ಫೀಲ್ಡ್ ನಲ್ಲಿ Text ನ್ನು ಸೆಲೆಕ್ಟ್ ಮಾಡಿ.
03:29 Value ನಲ್ಲಿ“ABC” ಎಂದು ಟೈಪ್ ಮಾಡಿ.
03:33 ನೀವು ನಿಮ್ಮ ಪ್ರೋಪರ್ಟಿಸನ್ನು Draw file ಗೆ ಸೇರಿಸಲು OK ಯನ್ನುಕ್ಲಿಕ್ ಮಾಡಿ.
03:39 ನಾವೀಗ ನಾವು ಕ್ರಿಯೇಟ್ ಮಾಡಿದ property ಯನ್ನು ಹೇಗೆ ಡಿಲಿಟ್ ಮಾಡುವುದು ಎನ್ನುವುದನ್ನು ಕಲಿಯೋಣ.
03:44 Main menu ವಿಗೆ ಹೋಗಿ, File ಅನ್ನು ಕ್ಲಿಕ್ ಮಾಡಿ ಮತ್ತು Properties ಅನ್ನು ಸೆಲೆಕ್ಟ್ ಮಾಡಿ.
03:51 ಈಗ Properties ಡೈಲಾಗ್ ಬಾಕ್ಸ್ ನಲ್ಲಿರುವ Custom Properties ಯನ್ನು ಕ್ಲಿಕ್ ಮಾಡಿ.
03:55 ನಾವೀಗ ಮೊದಲನೇ ಪ್ರೋಪರ್ಟಿ ಯಾದ Checked by ಯನ್ನು ಡಿಲಿಟ್ ಮಾಡೋಣ.
04:01 Remove Property ಯ ಬಲಬದಿಯ ಬಟನ್ ಅನ್ನು ಕ್ಲಿಕ್ ಮಾಡಿ. ಈಗ ಪ್ರೋಪರ್ಟಿ ಡಿಲಿಟ್ ಆಗಿರುತ್ತದೆ.
04:07 OK ಯನ್ನು ಕ್ಲಿಕ್ ಮಾಡಿ.
04:11 ನೀವು 'Draw' ಫೈಲ್ ಅನ್ನು ಅನೇಕ ಆವೃತ್ತಿಗಳಲ್ಲಿ ಸೇವ್ ಮಾಡಬಹುದು!

ಈ ವೈಶಿಷ್ಟ್ಯವನ್ನುVersions ಎಂದು ಕರೆಯುತ್ತಾರೆ.

04:17 ಉದಾಹರಣೆಗೆ, ಮೊದಲದಿನ ನೀವು ಓಬ್ಜೆಕ್ಟ್ ಗಳನ್ನು ಸೇರಿಸಿ save ಮಾಡಿದಿರಿ ಎಂದುಕೊಳ್ಳಿ,
04:22 ಮರುದಿನ ನೀವು ಆ ಡ್ರಾಯಿಂಗನ್ನು ಪರಿವರ್ತಿಸಿದಿರಿ.
04:24 ಈಗ ನೀವು ಮೂಲ ಮತ್ತು ಪರಿವರ್ತಿತ ಇವೆರಡರ ಪ್ರತ್ಯೇಕ ಪ್ರತಿಗಳನ್ನು ಬಯಸಿದಲ್ಲಿ,
04:31 Versions ಎಂಬ ವಿಕಲ್ಪವನ್ನು ಬಳಸಿ ಫೈಲ್ ನ್ನು ಸೇವ್ ಮಾಡಬೇಕು.
04:33 Main menu ವಿನಿಂದ, File ಗೆ ಹೋಗಿ ಮತ್ತು Versions ನ್ನು ಕ್ಲಿಕ್ ಮಾಡಿ.
04:39 ನೀವೀಗ Versions ಎಂಬ ಡೈಲಾಗ್-ಬಾಕ್ಸ್ ನ್ನು ನೋಡುವಿರಿ.
04:42 Save New Version ಎಂಬ ಬಟನ್ ನನ್ನು ಕ್ಲಿಕ್ ಮಾಡಿ.
04:47 ನೀವೀಗ Insert Version Comment ಎನ್ನುವ ಡೈಲಾಗ್-ಬಾಕ್ಸ್ ನ್ನು ನೋಡುವಿರಿ.
04:51 "Version One" ಎಂದು ಕಮೆಂಟ್ ಟೈಪ್ ಮಾಡಿ.
04:55 OK ಯನ್ನು ಕ್ಲಿಕ್ ಮಾಡಿ ಮತ್ತು ತದನಂತರ Close ಅನ್ನು ಕ್ಲಿಕ್ ಮಾಡಿ.
05:00 ಈಗ ನಾವು "Geometry in 2D Shapes and 3D Shapes" ಎಂಬ ಟೈಟಲ್ ಅನ್ನು ಬದಲಿಸೋಣ.
05:07 ನಾವೀಗ ಟೆಕ್ಸ್ಟ್ ನ ಬಣ್ಣವನ್ನು ನೀಲಿ ಬಣ್ಣಕ್ಕೆ ಬದಲಾಯಿಸೋಣ.
05:18 Versions ವಿಕಲ್ಪದ ಬಳಕೆಯಿಂದ ಫೈಲ್ ಅನ್ನು ಸೇವ್ ಮಾಡೋಣ.
05:22 Main menu ವಿನಿಂದ, File ಗೆ ಹೋಗಿ ಮತ್ತು Versions ನ್ನು ಕ್ಲಿಕ್ ಮಾಡಿ.
05:26 Save New Version ಬಟನ್ ನನ್ನು ಕ್ಲಿಕ್ ಮಾಡಿ.
05:30 Insert Version Comment ಎನ್ನುವ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
05:34 Version Two ಎಂದು ಕಮೆಂಟ್ ಮಾಡಿ.
05:36 OK ಯನ್ನು ಕ್ಲಿಕ್ ಮಾಡಿ.
05:40 ಈಗ ಇಲ್ಲಿVersion One ಮತ್ತು Version Two ಎಂಬ ಎರಡು ವರ್ಶನ್ಸ್ ಗಳು ಲಿಸ್ಟ್ ಆಗುತ್ತದೆ.
05:46 ನಮಗೆ ತಿಳಿದಿರುವಂತೆ, Version One ನ ಶೀರ್ಷಿಕೆ ಕಪ್ಪು ಬಣ್ಣದ್ದಾಗಿದ್ದು,
05:51 Version Two ನ ಶೀರ್ಷಿಕೆ ನೀಲಿ ಬಣ್ಣದ್ದಾಗಿದೆ.
05:54 ನಾವೀಗ Version One ಅನ್ನು ಸೆಲೆಕ್ಟ್ ಮಾಡಿ Open ಅನ್ನು ಕ್ಲಿಕ್ ಮಾಡೋಣ.
06:00 ನಾವೀಗ ಕಪ್ಪು ಬಣ್ಣದ ಶೀರ್ಷಿಕೆಯನ್ನು ಅನ್ನು ಹೊಂದಿರುವ ಆವೃತ್ತಿಯನ್ನು ನೋಡುತ್ತೇವೆ.
06:05 ಪ್ರತಿಬಾರಿ Draw file ಅನ್ನು ಕ್ಲೋಸ್ ಮಾಡುವಾಗ ನೀವು ಅಟೋಮ್ಯಾಟಿಕ್ ಸೇವಿಂಗ್ ಅನ್ನುಆವೃತ್ತಿಯಲ್ಲಿ ಸಕ್ರಿಯಗೊಳಿಸಬಹುದು.
06:11 ಹಾಗೆ ಮಾಡಲು File ಅನ್ನು ಕ್ಲಿಕ್ ಮಾಡಿ ಮತ್ತು ನಂತರ Versions ಅನ್ನು ಕ್ಲಿಕ್ ಮಾಡಿ.
06:15 ಈಗ, ಇಲ್ಲಿ "Always save a version on closing" ಎಂಬ ಚೆಕ್ ಬಾಕ್ಸ್ ಇದೆ.
06:23 ಈ ಬಾಕ್ಸ್ ಅನ್ನು ಸಕ್ರಿಯಗೊಳಿಸಿ.
06:24 ಇದರಿಂದಾಗಿ, ಪ್ರತಿ ಸಲ Draw file ಅನ್ನು ಕ್ಲೋಸ್ ಮಾಡುವಾಗ, ಹೊಸ ವರ್ಶನ್ ಒಂದು ಸೇವ್ ಆಗುವುದು. ಅನಂತರ Close ಅನ್ನು ಕ್ಲಿಕ್ ಮಾಡಿ.
06:34 ನೀವು ನಿಮ್ಮ ಡ್ರಾ ಫೈಲ್ ನ ವೀಕ್ಷಿಸುವ ವಿಧಾನಗಳನ್ನು ನಿರ್ಧರಿಸಬಹುದು.
06:38 ನೀವು Color, Gray scale ಅಥವಾBlack and White ನಲ್ಲಿ ನಿಮ್ಮ ಡ್ರಾಯಿಂಗ್ ಅನ್ನು ವೀಕ್ಷಿಸಬಹುದು.
06:44 ಪೂರ್ವನಿಯೋಜಿತವಾಗಿ, ನಾವು Draw file ಅನ್ನು ಕಲರ್ ನಲ್ಲಿ ವೀಕ್ಷಿಸುತ್ತೇವೆ.
06:48 ನಾವೀಗ ವೀಕ್ಷಣೆಯನ್ನು Gray Scale ಗೆ ಬದಲಾಯಿಸೋಣ.
06:53 View ಅನ್ನು ಕ್ಲಿಕ್ ಮಾಡಿ, ಅದರಲ್ಲಿ Color/Grayscale ಯನ್ನುಕ್ಲಿಕ್ ಮಾಡಿ ಮತ್ತು Gray Scale ಅನ್ನು ಸೆಲೆಕ್ಟ್ ಮಾಡಿ.
06:59 ನೀವೀಗ ವಸ್ತುಗಳು ಬೂದು ಬಣ್ಣದಲ್ಲಿ ಪ್ರದರ್ಶಿತವಾಗುವುದನ್ನು ನೋಡಬಹುದು.
07:03 ಈಗ, ವೀಕ್ಷಣೆಯನ್ನುBlack and White ಗೆ ಬದಲಿಸೋಣ.
07:08 Main Menu ವಿನಿಂದ , View ಅನ್ನು ಸೆಲೆಕ್ಟ್ ಮಾಡಿ Color/Grayscale ಅನ್ನು ಕ್ಲಿಕ್ ಮಾಡಿ ಮತ್ತು Black and White ಅನ್ನು ಸೆಲೆಕ್ಟ್ ಮಾಡಿ.
07:17 ನೀವೀಗ ಓಬ್ಜೆಕ್ಟ್ ಗಳು ಕಪ್ಪು-ಬಿಳುಪಿನಲ್ಲಿ ಪ್ರದರ್ಶಿತವಾಗುವುದನ್ನು ನೋಡುವಿರಿ.
07:25 ನೀವೀಗ ವೀಕ್ಷಣೆಯನ್ನು ಪುನಃ colour ಗೆ ಬದಲಾಯಿಸಬಹುದು.
07:29 ಹಾಗೆ ಮಾಡಲು, View ನ ಮೇಲೆ ಕ್ಲಿಕ್ ಮಾಡಿ, Color/Grayscale ಅನ್ನು ಕ್ಲಿಕ್ ಮಾಡಿ ಮತ್ತು Color ಅನ್ನು ಸೆಲೆಕ್ಟ್ ಮಾಡಿ.
07:36 ಈಗ ಡ್ರಾಯಿಂಗ್ ಮತ್ತೆ colour ನಲ್ಲಿ ಡಿಸ್ಪ್ಲೇ ಆಗುತ್ತದೆ.
07:43 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
07:45 ಈ ಟ್ಯುಟೋರಿಯಲ್ ನಲ್ಲಿ ನಾವು,
  • Draw file ನ ಪ್ರೋಪರ್ಟೀಸ್,
  • Draw file ನ ಆವೃತ್ತಿಗಳ ರಚನೆ ಹಾಗೂ
  • ಡ್ರಾಯಿಂಗ್ ಅನ್ನು color/grayscale/black-and-white ನಲ್ಲಿ ಹೇಗೆ ವೀಕ್ಷಿಸುವುದೆಂದು ಕಲಿತಿದ್ದೇವೆ.
07:59 ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ.
08:02 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
08:06 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
08:11 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
  • ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
  • ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:21 ಹೆಚ್ಚಿನ ವಿವರಣೆಗಾಗಿ,contact@spoken-tutorial.org ಗೆ ಬರೆಯಿರಿ.
08:29 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
08:33 ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
08:40 ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ- htpp://spoken-tutorial.org/NMEICT-Intro
08:54 ಈ ಟ್ಯುಟೋರಿಯಲ್ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ ಐತಾಳ.

ಧನ್ಯವಾದಗಳು.

Contributors and Content Editors

Pratik kamble, Vasudeva ahitanal