Difference between revisions of "LibreOffice-Suite-Draw/C3/Working-with-Objects/Kannada"

From Script | Spoken-Tutorial
Jump to: navigation, search
Line 447: Line 447:
 
|-
 
|-
 
| 08:39
 
| 08:39
| ಎಲ್ಲಾ ಆಬ್ಜೆಕ್ಟ್ ಗಳನ್ನೂ ಸೇರಿಸಿಕೊಳ್ಲಲು, 'ಸೆಲೆಕ್ಟ್ ಆರೋ' ಅನ್ನು (Select arrow) ಎಳೆಯುವುದರ ಮೂಲಕ ಅವುಗಳನ್ನು ಗುಂಪು ಮಾಡೋಣ.  
+
| ಎಲ್ಲಾ ಆಬ್ಜೆಕ್ಟ್ ಗಳನ್ನೂ ಸೇರಿಸಿಕೊಳ್ಳಲು, 'ಸೆಲೆಕ್ಟ್ ಆರೋ' ಅನ್ನು (Select arrow) ಎಳೆಯುವುದರ ಮೂಲಕ ಅವುಗಳನ್ನು ಗುಂಪು ಮಾಡೋಣ.  
  
 
|-
 
|-

Revision as of 23:34, 29 January 2019

Time Narration
00:01 LibreOffice Draw ನಲ್ಲಿ, (ಲಿಬ್ರೆ ಆಫೀಸ್ ಡ್ರಾ) Working with Objects ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:
00:08 'ಗ್ರಿಡ್ಸ್' ಮತ್ತು 'ಗೈಡ್ ಲೈನ್ಸ್' ಗಳನ್ನು ಬಳಸಿ, ಆಬ್ಜೆಕ್ಟ್ ಗಳನ್ನು ಸರಿಯಾಗಿ ಇಡಲು,
00:12 'ಸ್ನ್ಯಾಪ್ ಫಂಕ್ಷನ್'ಗಳನ್ನು ಬಳಸಲು,
00:14 'ಲೈನ್ಸ್' ಮತ್ತು 'ಆರೋಹೆಡ್ಸ್' ಗಳನ್ನು ಕಸ್ಟಮೈಸ್ ಮಾಡಲು ಕಲಿಯುತ್ತೇವೆ.
00:18 ನೀವು ಆಬ್ಜೆಕ್ಟ್ ಗಳನ್ನು ಹೇಗೆ:

ನಕಲು ಮಾಡುವುದು,

00:21 ಸರಿಯಾಗಿ ರಿಸೈಜ್ ಮಾಡುವುದು,
00:24 ವಿತರಿಸುವುದು, ಒಟ್ಟುಗೂಡಿಸುವುದು, ಮರ್ಜ್ ಮಾಡುವುದು, ತೆಗೆದುಹಾಕುವುದು ಮತ್ತು ಛೇದಿಸುವುದು ಇವುಗಳ ಬಗ್ಗೆ ಸಹ ಕಲಿಯುತ್ತೀರಿ.
00:30 ನಾವು 'ಉಬಂಟು ಲಿನಕ್ಸ್' ಆವೃತ್ತಿ '10 .04 ' ಅನ್ನು ನಮ್ಮ ಆಪರೇಟಿಂಗ್ ಸಿಸ್ಟಮ್ ಎಂದು ಮತ್ತು 'ಲಿಬ್ರೆ ಆಫಿಸ್ ಸೂಟ್' ಆವೃತ್ತಿ '3.3.4 ' ಅನ್ನು ಬಳಸುತ್ತಿದ್ದೇವೆ.
00:40 'ಗ್ರಿಡ್ಸ್' ಎಂದರೇನು?
00:42 'ಗ್ರಿಡ್ಸ್', Draw ಪೇಜ್ ನಲ್ಲಿ ಆಬ್ಜೆಕ್ಟ್ ಗಳನ್ನು ಸರಿಯಾಗಿ ಇಡಲು ಸಹಾಯ ಮಾಡುತ್ತವೆ.
00:48 'ಡೆಸ್ಕ್ಟಾಪ್' ನಲ್ಲಿ ಸೇವ್ ಮಾಡಲಾದ RouteMap (ರೂಟ್-ಮ್ಯಾಪ್) ಎಂಬ ಫೈಲ್ ಅನ್ನು ನಾವು ತೆರೆಯೋಣ.
00:53 ಹಿಂದಿನ ಟ್ಯುಟೋರಿಯಲ್ ಗಳಲ್ಲಿ, ನಾವು ಗ್ರಿಡ್ಸ್ ಅನ್ನು ಬಳಸಿದ್ದೆವು.
00:57 ಈಗ, ನಾವು ಗ್ರಿಡ್ ಗಳ ಬಗ್ಗೆ ವಿವರವಾಗಿ ತಿಳಿಯೋಣ.
01:01 ಮೇನ್ ಮೆನ್ಯುವಿನಿಂದ View ಅನ್ನು ಆಯ್ಕೆಮಾಡಿ ಮತ್ತು 'ಗ್ರಿಡ್' ಮೇಲೆ ಕ್ಲಿಕ್ ಮಾಡಿ.
01:05 ನಂತರ Display Grid ಮೇಲೆ ಕ್ಲಿಕ್ ಮಾಡಿ.
01:08 Draw ಪೇಜ್, ಹಲವಾರು ಅಡ್ಡವಾದ (horizontal) ಮತ್ತು ಲಂಬವಾದ (vertical) ಚುಕ್ಕೆಗಳ ಸಾಲುಗಳಿಂದ ತುಂಬಿದೆ. ಇವುಗಳು ಗ್ರಿಡ್ ಅನ್ನು ರೂಪಿಸುತ್ತವೆ.
01:17 ಈ ಗ್ರಿಡ್ ಗಳು ಪ್ರದರ್ಶನಕ್ಕಾಗಿ ಮಾತ್ರ. ಅವುಗಳನ್ನು ಪ್ರಿಂಟ್ ಮಾಡಲಾಗುವುದಿಲ್ಲ.
01:22 ನಾವು ಗ್ರಿಡ್ಸ್ ನ ಸೈಜ್ ಅನ್ನು ಕಸ್ಟಮೈಜ್, ಎಂದರೆ, ಅವುಗಳನ್ನು ನಮಗೆ ಬೇಕಾದಂತೆ ಚಿಕ್ಕದು ಅಥವಾ ದೊಡ್ಡದು ಮಾಡಬಹುದು.
01:30 ಮೇನ್ ಮೆನ್ಯುವಿನಿಂದ, Tools ಅನ್ನು ಆಯ್ಕೆಮಾಡಿ ಮತ್ತು Options ಮೇಲೆ ಕ್ಲಿಕ್ ಮಾಡಿ.
01:35 ನೀವು Options ಎಂಬ ಡೈಲಾಗ್- ಬಾಕ್ಸ್ ಅನ್ನು ನೋಡುತ್ತೀರಿ.
01:38 LibreOffice Draw ಅನ್ನು ಕ್ಲಿಕ್ ಮಾಡಿ ಮತ್ತು Grid ಅನ್ನು ಆಯ್ಕೆಮಾಡಿ.
01:42 Resolution ನ ಅಡಿಯಲ್ಲಿ, ಈ ಕೆಳಗಿನ ವ್ಯಾಲ್ಯೂಗಳನ್ನು ನಮೂದಿಸಿ:
01:46 Horizontal – 7 cm
01:49 Vertical – 5 cm.
01:53 Subdivision, ಗ್ರಿಡ್ ನಲ್ಲಿನ ಸ್ಪೇಸ್ ಗಳ ಸಂಖ್ಯೆಯನ್ನು ನಿರ್ಧರಿಸುತ್ತದೆ.
01:57 ನಾವು Subdivision ವ್ಯಾಲ್ಯೂಗಳನ್ನು ನಮೂದಿಸೋಣ.
02:00 Horizontal – 3
02:02 Vertical – 4.
02:05 Synchronize axes ಆಯ್ಕೆಯನ್ನು ನಾವು ಚೆಕ್ ಮಾಡದೆ ಹಾಗೆ ಬಿಡೋಣ.
02:09 OK ಅನ್ನು ಕ್ಲಿಕ್ ಮಾಡಿ.
02:11 ಈಗ Draw ಪೇಜ್ ಅನ್ನು ನೋಡಿ. 'ಗ್ರಿಡ್' ನಲ್ಲಿ ಪ್ರತಿಯೊಂದು ಬಾಕ್ಸ್ ನ ಗಾತ್ರವನ್ನು ನೋಡಿ.
02:17 Subdivision ನಲ್ಲಿ ನಾವು ಸೆಟ್ ಮಾಡಿದ ಸ್ಪೇಸ್ ಗಳನ್ನು ಎಣಿಸೋಣ.
02:22 ಅಡ್ಡಡ್ಡಲಾಗಿ ಇಲ್ಲಿ 1, 2, 3 ಸ್ಪೇಸ್ ಗಳು ಮತ್ತು ಲಂಬವಾಗಿ 1, 2, 3, 4 ಸ್ಪೇಸ್ ಗಳಿವೆ.
02:33 'ಗೈಡ್ಸ್' ಬಗ್ಗೆ ನಾವು ಕಲಿಯೋಣ.
02:36 'ಗೈಡ್ಸ್' ಎಂದರೇನು?
02:38 'ಗೈಡ್'ಗಳು, ಸಹಾಯಕ ಲೈನ್ ಗಳು ಅಥವಾ ಆಬ್ಜೆಕ್ಟ್ ಗಳ ಅಂಚುಗಳ ವಿಸ್ತರಣೆಗಳಾಗಿದ್ದು,
02:43 ಆಬ್ಜೆಕ್ಟ್ ಅನ್ನು ಚಲಿಸಿದಾಗ ಕಂಡುಬರುತ್ತವೆ.
02:47 ನಾವು ಗೈಡ್-ಲೈನ್ ಗಳನ್ನು ಸಕ್ರಿಯಗೊಳಿಸೋಣ.
02:50 ಮೇನ್ ಮೆನ್ಯುಗೆ ಹೋಗಿ View ಅನ್ನು ಆಯ್ಕೆಮಾಡಿ ಮತ್ತು Guides ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
02:55 ಈಗ, Display Guides ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
02:59 ಮೇನ್ ಮೆನ್ಯುನಿಂದ, Tools ಮತ್ತು Options ಗಳನ್ನು ಕ್ಲಿಕ್ ಮಾಡಿ.
03:03 Options ಎಂಬ ಡೈಲಾಗ್- ಬಾಕ್ಸ್ ಕಾಣಿಸಿಕೊಳ್ಳುತ್ತದೆ.
03:06 ಎಡಗಡೆಯ ಪ್ಯಾನೆಲ್ ನಿಂದ, LibreOffice Draw ಬಳಿ ಇರುವ ಸಣ್ಣ ಕಪ್ಪು ತ್ರಿಕೋನವನ್ನು ಕ್ಲಿಕ್ ಮಾಡಿ. View ಅನ್ನು ಕ್ಲಿಕ್ ಮಾಡಿ.
03:15 ಬಲಗಡೆಯ ಪ್ಯಾನೆಲ್ ನಿಂದ, Guides when moving ಅನ್ನು ಆಯ್ಕೆಮಾಡಿ. ಹೀಗೆ, ಆಬ್ಜೆಕ್ಟ್ ಗಳನ್ನು ಸರಿದಾಡಿಸುವಾಗ ನೀವು 'ಗೈಡ್ಸ್' ಅನ್ನು ನೋಡಬಹುದು.
03:23 OK ಅನ್ನು ಕ್ಲಿಕ್ ಮಾಡಿ.
03:27 ಈಗ, ನಾವು ಪಾರ್ಕ್ ಅನ್ನು ಸ್ವಲ್ಪ ಬಲಗಡೆಗೆ ಸರಿಸೋಣ.
03:29 ಪಾರ್ಕ್ ಅನ್ನು ಸರಿಸಿದಾಗ, ಆಬ್ಜೆಕ್ಟ್ ನ ಅಂಚುಗಳ ಎಕ್ಸ್ಟೆನ್ಶನ್ (extension) ಲೈನ್ಗಳು ಗೋಚರಿಸುತ್ತವೆ. ಇವುಗಳೇ ಗೈಡ್-ಲೈನ್ ಗಳಾಗಿವೆ.
03:39 'ಸ್ನ್ಯಾಪ್ ಲೈನ್ಸ್' ಗಳೆಂದರೇನು?
03:41 ಕೊಟ್ಟಿರುವ ಸ್ಥಳದೊಳಗೆ, ಎರಡು ಅಥವಾ ಇನ್ನೂ ಹೆಚ್ಚು ಆಬ್ಜೆಕ್ಟ್ ಗಳನ್ನು ಇರಿಸಲು, 'ಸ್ನ್ಯಾಪ್ ಲೈನ್ಸ್' ನಮಗೆ ಸಹಾಯ ಮಾಡುತ್ತದೆ.
03:48 'ಸ್ನ್ಯಾಪ್ ಲೈನ್ಸ್' ಮತ್ತು 'ಸ್ನ್ಯಾಪ್ ಪಾಯಿಂಟ್ಗಳು' ಯೂಸರ್ ನಿಂದ ರಚಿಸಲ್ಪಟ್ಟಿವೆ.
03:53 'ಸ್ನ್ಯಾಪ್ ಲೈನ್ಸ್', ಲಂಬವಾಗಿ ಮತ್ತು ಅಡ್ಡಡ್ಡಲಾಗಿ ಇರುತ್ತವೆ ಮತ್ತು ಡ್ಯಾಶ್- ಲೈನ್ ಗಳಾಗಿ ಗೋಚರಿಸುತ್ತವೆ.
03:59 ನೀವು ಸ್ನ್ಯಾಪ್-ಲೈನ್ ಗಳನ್ನು ರಚಿಸುವ ಮೊದಲು, Snap Lines ಎಂಬ ಆಯ್ಕೆಯನ್ನು ಸಕ್ರಿಯಗೊಳಿಸಬೇಕು.
04:05 Draw ಪೇಜ್ ಗೆ ಹೋಗಿ. ಕಾಂಟೆಕ್ಸ್ಟ್- ಮೆನು ಗಾಗಿ, ರೈಟ್-ಕ್ಲಿಕ್ ಮಾಡಿ ಮತ್ತು Snap Lines ಅನ್ನು ಆಯ್ಕೆಮಾಡಿ.
04:12 ಈಗ, ಮೂರೂ ಆಯ್ಕೆಗಳನ್ನು ಚೆಕ್ ಮಾಡಿ:
04:16 Snap Lines Visible,
04:18 Snap to Snap Lines,
04:20 Snap Lines to Front.
04:22 ನಾವು ರಚಿಸುವ ಸ್ನ್ಯಾಪ್ ಲೈನ್ಸ್, ಈಗ ಗೋಚರಿಸುತ್ತವೆ.
04:26 'ಸ್ನ್ಯಾಪ್ ಲೈನ್ಸ್' ಅನ್ನು ಬಳಸಿಕೊಂಡು, ನಾವು ಒಂದು ಜಾಗವನ್ನು ಸೂಚಿಸೋಣ. ಸ್ಲೈಡ್ ನಲ್ಲಿ ತೋರಿಸಿರುವಂತೆ, ನಕ್ಷೆಯಲ್ಲಿರುವ ಆಬ್ಜೆಕ್ಟ್ ಗಳು ಅದರಲ್ಲಿಯೇ ಇರಬೇಕು.
04:34 ಲಂಬವಾದ ರೂಲರ್ ನ ಮೇಲೆ, 'ಮೌಸ್' ಕರ್ಸರ್ ಅನ್ನು ಚಲಿಸಿ.
04:38 ಎಡ ಮೌಸ್-ಬಟನ್ ಅನ್ನು ಒತ್ತಿ.
04:41 ಕರ್ಸರ್, ಈಗ ಎರಡು ಬದಿಯ ಬಾಣದ ಹಾಗೆ ಕಾಣುತ್ತಿರುವುದನ್ನು ನೀವು ನೋಡುವಿರಿ.
04:46 'ಮೌಸ್' ಅನ್ನು 'ಡ್ರಾ' ಪೇಜ್ ನೆಡೆಗೆ ಎಳೆಯಿರಿ.
04:50 ನೀವು ಚುಕ್ಕೆಗಳ ಒಂದು ಗೆರೆಯನ್ನು ನೋಡುತ್ತೀರಿ.
04:53 ಮೌಸ್ ಬಟನ್ ಅನ್ನು ಬಿಡಬೇಡಿ.
04:55 ಮೌಸ್ ನ ಎಡ- ಗುಂಡಿಯನ್ನು ಹಿಡಿದಿಟ್ಟುಕೊಂಡು, ಚುಕ್ಕೆಗಳ ಸಾಲನ್ನು ಪೇಜ್ ಗೆ ಎಳೆಯಿರಿ.
05:01 ಈಗ, ಮೌಸ್-ಬಟನ್ ಅನ್ನು ಬಿಟ್ಟುಬಿಡಿ.
05:04 ನಿಮಗೆ ಲೈನ್ ಕಾಣುತ್ತಿದೆಯೇ?
05:06 ಇದು 'ಸ್ನ್ಯಾಪ್ ಲೈನ್' ಆಗಿದೆ. ಕೆಳತುದಿಯ ಮಿತಿಯನ್ನು ರಚಿಸಲು, ಲೈನ್ ಅನ್ನು ಹಾಗೇ ಪೇಜ್ ನ ಕೆಳತುದಿಗೆ ಎಳೆಯಿರಿ.
05:13 ನಕ್ಷೆಯನ್ನು ಆವರಿಸಿರುವ ಜಾಗವನ್ನು ಸೂಚಿಸಲು, ನಾವು ಇನ್ನೂ ಮೂರು 'ಸ್ನ್ಯಾಪ್ ಲೈನ್' ಗಳನ್ನು ರಚಿಸೋಣ.
05:24 ನಾವು ಅಡ್ಡ ಮತ್ತು ಲಂಬವಾದ 'ಸ್ನ್ಯಾಪ್ ಲೈನ್ಸ್' ಅನ್ನು ರಚಿಸಿದ್ದೇವೆ.
05:29 ಈಗ ನೀವು ಆಬ್ಜೆಕ್ಟ್ ಗಳನ್ನು, 'ಸ್ನ್ಯಾಪ್ ಲೈನ್' ಗಳಿಗೆ ಹೊಂದಿಕೊಂಡಂತೆ ಇಡಬಹುದು.
05:34 ನಿಮಗೆ ಬೇಕಾದಷ್ಟು 'ಸ್ನ್ಯಾಪ್ ಲೈನ್ಸ್' ಅನ್ನು ನೀವು ಅವಶ್ಯವಾಗಿ ರಚಿಸಬಹುದು.
05:40 ಅಡ್ಡವಾದ ಮತ್ತು ಲಂಬವಾಗಿರುವ 'ಸ್ನ್ಯಾಪ್ ಲೈನ್' ಗಳು, ಗ್ರಾಫ್ ನಲ್ಲಿಯ 'X' ಮತ್ತು 'Y' ಅಕ್ಷಗಳಂತೆ ಕೆಲಸ ಮಾಡುತ್ತವೆ.
05:48 ಈ ಎರಡು ಅಕ್ಷಗಳ ಒಳಗೆ, ನೀವು ಆಬ್ಜೆಕ್ಟ್ ಗಳನ್ನು ಸರಿಯಾಗಿ ಹೊಂದಿಸಬಹುದು.
05:54 ನೀವು ಆಬ್ಜೆಕ್ಟ್ ಗಳನ್ನು ಸರಿಯಾಗಿ ಇರಿಸಲು, 'ಸ್ನ್ಯಾಪ್ ಫಂಕ್ಷನ್ ' ಜೊತೆಗೆ ' ಗ್ರಿಡ್ ಲೈನ್ಸ್' ಅನ್ನು ಬಳಸಬಹುದು.
05:59 ನೀವು ಹೀಗೆ ಕೂಡ ಮಾಡಬಹುದು:

Snap to Grid - 'ಗ್ರಿಡ್ ಪಾಯಿಂಟ್ಸ್' ಮೇಲೆ ಸರಿಯಾಗಿ ಆಬ್ಜೆಕ್ಟ್ ಅನ್ನು ಇರಿಸುವುದು,

06:06 Snap to Snap lines - 'ಸ್ನ್ಯಾಪ್ ಲೈನ್' ಮೇಲೆ ಸರಿಯಾಗಿ ಆಬ್ಜೆಕ್ಟ್ ಅನ್ನು ಇರಿಸುವುದು,
06:11 Snap to Page margin – ಪೇಜ್ ನ ಅಂಚಿನಲ್ಲಿ ಸರಿಯಾಗಿ ಆಬ್ಜೆಕ್ಟ್ ಅನ್ನು ಇರಿಸುವುದು.
06:18 ಈ ಟ್ಯುಟೋರಿಯಲ್ ಅನ್ನು ಇಲ್ಲಿ ನಿಲ್ಲಿಸಿ ಮತ್ತು ಈ ಅಸೈನ್ಮೆಂಟ್ ಅನ್ನು ಮಾಡಿ.
06:21 ಎಲ್ಲಾ Grid options ಅನ್ನು ತಿಳಿದುಕೊಳ್ಳಿ.
06:24 ನೀವು snap to Grid, snap lines ಮತ್ತು page margins ಮಾಡಿದಾಗ ಆಬ್ಜೆಕ್ಟ್ ಗಳಿಗೆ ಏನಾಗುತ್ತದೆ ಎಂಬುದನ್ನು ಪರೀಕ್ಷಿಸಿ.
06:31 ಈಗ 'ಸ್ಕೂಲ್ ಕ್ಯಾಂಪಸ್' ಪಕ್ಕದಲ್ಲಿ, ಈ ಸರೋವರದ ಆಕಾರದ್ದೇ ಆದ, ಇನ್ನೊಂದು ಸರೋವರವನ್ನು ನಾವು ಸೇರಿಸೋಣ.
06:38 ಇದನ್ನು ಮಾಡಲು, ನಾವು Duplicate ಎಂಬ ಆಯ್ಕೆಯನ್ನು ಬಳಸೋಣ.
06:43 Lake ಅನ್ನು ನಾವು ಆಯ್ಕೆಮಾಡೋಣ.
06:45 'ಮೇನ್ ಮೆನ್ಯು' ಗೆ ಹೋಗಿ. Edit ಅನ್ನು ಆಯ್ಕೆಮಾಡಿ ಮತ್ತು Duplicate ಮೇಲೆ ಕ್ಲಿಕ್ ಮಾಡಿ.
06:51 Duplicate ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
06:54 Number of copies ನಲ್ಲಿ, ವ್ಯಾಲ್ಯೂಅನ್ನು 1 ಎಂದು ನಮೂದಿಸಿ ಮತ್ತು OK ಯನ್ನು ಕ್ಲಿಕ್ ಮಾಡಿ.
06:59 'ಲೇಕ್' ಅನ್ನು ನಕಲು ಮಾಡಲಾಗಿದೆ.
07:03 ನಾವು lake ಅನ್ನು ಎಳೆದುತಂದು school ಹತ್ತಿರ ಅದನ್ನು ಇಡೋಣ.
07:06 ಅಗತ್ಯವಿರುವ ಯಾವುದೇ ಮಾಪನಕ್ಕೆ ಸರಿಯಾಗಿ, ಆಬ್ಜೆಕ್ಟ್ ಗಳನ್ನು ರಿ-ಸೈಜ್ ಕೂಡ ಮಾಡಬಹುದು.
07:11 ಈ ಸ್ಲೈಡ್ ನಲ್ಲಿ ತೋರಿಸಿರುವಂತೆ, ನಾವು ಇದೇ ಅಳತೆಗಳನ್ನು ಬಳಸಿ, House ನ ಆಕಾರವನ್ನು ಬದಲಾಯಿಸೋಣ.
07:18 ಅದೇ ಎತ್ತರ ಮತ್ತು ಅಗಲವನ್ನು ಕೊಟ್ಟು, ಅದರ ಮೂಲೆಗಳನ್ನು ಓರೆಮಾಡೋಣ ಮತ್ತು ತಿರುಗಿಸೋಣ.
07:24 ಮೊದಲು, Home ಅನ್ನು ಆಯ್ಕೆಮಾಡಿ. ಕಾಂಟೆಕ್ಸ್ಟ್- ಮೆನ್ಯುಗಾಗಿ, ರೈಟ್-ಕ್ಲಿಕ್ ಮಾಡಿ ಮತ್ತು Position and Size ಅನ್ನು ಆಯ್ಕೆಮಾಡಿ.
07:31 Position and Size ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
07:35 Position and Size ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
07:38 Size ನ ಅಡಿಯಲ್ಲಿ, Width ಮತ್ತು Height ಈ ಎರಡೂ ಫೀಲ್ಡ್ ಗಳಲ್ಲಿ, ವ್ಯಾಲ್ಯೂಅನ್ನು '3' ಎಂದು ನಮೂದಿಸಿ.
07:43 ನಂತರ Rotation ಟ್ಯಾಬ್ ಅನ್ನು ಕ್ಲಿಕ್ ಮಾಡಿ.
07:46 Angle ಫೀಲ್ಡ್ ನಲ್ಲಿ, ವ್ಯಾಲ್ಯೂಅನ್ನು '10' ಎಂದು ನಮೂದಿಸಿ.
07:50 ಕೊನೆಯದಾಗಿ, Slant and Corner Radius ಎಂಬ ಟ್ಯಾಬ್ ಅನ್ನು ಆಯ್ಕೆಮಾಡಿ.
07:55 Slant Angle ಫೀಲ್ಡ್ ನಲ್ಲಿ, ' 5 degrees ' ಎಂದು ನಮೂದಿಸಿ.
07:59 OK ಮೇಲೆ ಕ್ಲಿಕ್ ಮಾಡಿ.
08:01 ನಾವು ಮನೆಯನ್ನು ಮರುವಿನ್ಯಾಸಗೊಳಿಸಿದ್ದೇವೆ!
08:05 ಈ ಟ್ಯುಟೋರಿಯಲ್ ಅನ್ನು ಇಲ್ಲಿ ನಿಲ್ಲಿಸಿ ಮತ್ತು ಈ ಅಸೈನ್ಮೆಂಟ್ ಅನ್ನು ಮಾಡಿ.
08:08 Drawing ಟೂಲ್- ಬಾರ್ ಅನ್ನು ಬಳಸಿ, ವಿವಿಧ ಆಕಾರಗಳನ್ನು ರಚಿಸಿ.
08:11 ಎಲ್ಲಾ ಆಕಾರಗಳಿಗೆ ನೀವು Corner radius ಅನ್ನು ಅನ್ವಯಿಸಬಹುದೇ ಎಂದು ಪರೀಕ್ಷಿಸಿ.
08:16 ಈಗ, ಕೆಲವು ಆಬ್ಜೆಕ್ಟ್ ಗಳ ಬಲ ಅಂಚುಗಳನ್ನು ಸಮವಾಗಿ ಇರಿಸೋಣ.
08:21 ಇದನ್ನು ಸಾಧಿಸಲು, ನಾವು Distribution ಎಂಬ ಆಯ್ಕೆಯನ್ನು ಬಳಸುತ್ತೇವೆ.
08:26 Distribution ಆಯ್ಕೆಯನ್ನು ಬಳಸಲು, ನಾವು ಕನಿಷ್ಠ ಮೂರು ಆಬ್ಜೆಕ್ಟ್ ಗಳನ್ನು ಆರಿಸಬೇಕು.
08:32 ಮೊದಲು, 'ರೆಸಿಡೆನ್ಷಿಯಲ್ ಕಾಂಪ್ಲೆಕ್ಸ್', 'ಪಾರ್ಕಿಂಗ್ ಲಾಟ್' ಮತ್ತು 'ಕಮರ್ಷಿಯಲ್ ಕಾಂಪ್ಲೆಕ್ಸ್' ಇವುಗಳನ್ನು ಆಯ್ಕೆ ಮಾಡಿ.
08:39 ಎಲ್ಲಾ ಆಬ್ಜೆಕ್ಟ್ ಗಳನ್ನೂ ಸೇರಿಸಿಕೊಳ್ಳಲು, 'ಸೆಲೆಕ್ಟ್ ಆರೋ' ಅನ್ನು (Select arrow) ಎಳೆಯುವುದರ ಮೂಲಕ ಅವುಗಳನ್ನು ಗುಂಪು ಮಾಡೋಣ.
08:45 ಈಗ, ರೈಟ್-ಕ್ಲಿಕ್ ಮಾಡಿ ಮತ್ತು Distribution ಅನ್ನು ಆಯ್ಕೆಮಾಡಿ.
08:50 Horizontal ನ ಅಡಿಯಲ್ಲಿ, Right ಅನ್ನು ಆಯ್ಕೆಮಾಡಿ. OK ಅನ್ನು ಕ್ಲಿಕ್ ಮಾಡಿ.
08:56 ಆಬ್ಜೆಕ್ಟ್ ಗಳ ಬಲ ಅಂಚುಗಳನ್ನು ಸಮವಾಗಿ ವಿತರಿಸಲಾಗುವುದು.
09:01 Distribution ಆಯ್ಕೆಯು, ಆಬ್ಜೆಕ್ಟ್ ಗಳ ನ್ನು ಅಡ್ಡಲಾಗಿ ಅಥವಾ ಲಂಬವಾಗಿ ವಿತರಿಸುವುದಿಲ್ಲ.
09:07 Horizontal Distribution ಆಯ್ಕೆಯು -
09:10 ಬಲ ಮತ್ತು ಎಡ ಅಂಚುಗಳು,
09:12 ಅಡ್ಡಲಾದ (horizontal) ಕೇಂದ್ರಗಳು ಮತ್ತು
09:14 ಆಬ್ಜೆಕ್ಟ್ ಗಳ ನಡುವಿನ ಅಂತರ ಇವುಗಳನ್ನು ವಿತರಣೆ ಮಾಡುತ್ತದೆ.
09:17 Vertical ಆಯ್ಕೆಯು -
09:21 ಮೇಲಿನ ಮತ್ತು ಕೆಳ ಅಂಚುಗಳು,

ಲಂಬ ಕೇಂದ್ರಗಳು ಮತ್ತು

ಆಬ್ಜೆಕ್ಟ್ ಗಳ ನಡುವಿನ ಅಂತರ ಇವುಗಳನ್ನು ವಿತರಣೆ ಮಾಡುತ್ತದೆ.

09:26 ಈಗ, ನಾವು ಈ ನಕ್ಷೆಗಾಗಿ ನಮ್ಮದೇ ಆದ ಗೆರೆಯ ಶೈಲಿಯನ್ನು (line style) ರಚಿಸೋಣ.
09:32 'ಮೇನ್ ಮೆನ್ಯು'ದಿಂದ, Format ಅನ್ನು ಆಯ್ಕೆಮಾಡಿ ಮತ್ತು Line ಅನ್ನು ಕ್ಲಿಕ್ ಮಾಡಿ.
09:35 Line ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
09:38 Line Styles ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
09:41 Line Styles ನಲ್ಲಿ, Three dashes and three dots ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
09:47 Type ಫೀಲ್ಡ್ ಅನ್ನು ಇದ್ದ ಹಾಗೇ ಇಟ್ಟುಬಿಡಿ.
09:50 Number ನಲ್ಲಿ, '10' ಮತ್ತು '5' ಅನ್ನು, Length ಅನ್ನು '8%' ಎಂದು ನಮೂದಿಸೋಣ.
09:57 Add ಅನ್ನು ಕ್ಲಿಕ್ ಮಾಡಿ. ಹೆಸರನ್ನು "My Line Style"ಎಂದು ನಮೂದಿಸಿ. OK ಯನ್ನು ಕ್ಲಿಕ್ ಮಾಡಿ.
10:06 ಮತ್ತೊಮ್ಮೆ OK ಯನ್ನು ಕ್ಲಿಕ್ ಮಾಡಿ.
10:08 ನಾವು ಈ ಆರೋ ಅನ್ನು ಆಯ್ಕೆ ಮಾಡೋಣ. ರೈಟ್-ಕ್ಲಿಕ್ ಮಾಡಿ ಮತ್ತು Line ಅನ್ನು ಆಯ್ಕೆಮಾಡಿ. Line ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
10:13 Line ಟ್ಯಾಬ್ ಅನ್ನು ಕ್ಲಿಕ್ ಮಾಡಿ.
10:16 Style ಎಂಬ ಡ್ರಾಪ್-ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
10:19 ಇದು ಈಗ ರಚಿಸಲಾದ ಹೊಸ ಶೈಲಿಯನ್ನು ತೋರಿಸುತ್ತದೆ.
10:22 ಇದನ್ನು ಆಯ್ಕೆ ಮಾಡಿ ಮತ್ತು OK ಯನ್ನು ಕ್ಲಿಕ್ ಮಾಡಿ.
10:26 ನಾವು ಒಂದು ಹೊಸ ಲೈನ್ ಶೈಲಿಯನ್ನು ರಚಿಸಿದ್ದೇವೆ!
10:29 ಸ್ಕೂಲ್ ಕ್ಯಾಂಪಸ್ ನ ಎಡಕ್ಕೆ ಒಂದು ಸಣ್ಣ ಕ್ರೀಡಾಂಗಣವನ್ನು ನಾವು ರಚಿಸೋಣ.
10:34 Drawing toolbar ನಿಂದ, Basic Shapes ಅನ್ನು ಕ್ಲಿಕ್ ಮಾಡಿ ಮತ್ತು Circle ಅನ್ನು ಆಯ್ಕೆಮಾಡಿ.
10:40 ಇದನ್ನು 'ಡ್ರಾ' ಪೇಜ್ ನಲ್ಲಿ ನಮೂದಿಸೋಣ.
10:44 ವೃತ್ತದ ಬಾಹ್ಯರೇಖೆಯು, My Line Style ಶೈಲಿಯದಾಗಿದೆ.
10:49 ಇದರ ಒಳಗೆ, “Stadium” ಎಂದು ಟೈಪ್ ಮಾಡೋಣ.
10:53 ಈಗ, ನಾವು ಆಬ್ಜೆಕ್ಟ್ ಗಳನ್ನು ಒಗ್ಗೂಡಿಸಲು, ಮರ್ಜ್ ಮಾಡಲು, ತೆಗೆದುಹಾಕಲು ಮತ್ತು ಛೇದಿಸಲು ಕಲಿಯೋಣ.
10:59 ಆಬ್ಜೆಕ್ಟ್ ಗಳ ಗ್ರೂಪಿಂಗ್ ಮತ್ತು ಒಟ್ಟುಗೂಡಿಸುವಿಕೆ ಇವುಗಳ ನಡುವಿನ ವ್ಯತ್ಯಾಸವೇನು?
11:03 ಆಬ್ಜೆಕ್ಟ್ ಗಳನ್ನು ಗ್ರುಪ್ ಮಾಡಿದಾಗ, ಹಲವಾರು ಆಬ್ಜೆಕ್ಟ್ ಗಳನ್ನು ಒಟ್ಟಿಗೆ ಇಡಲಾಗುತ್ತದೆ.
11:09 ಆಬ್ಜೆಕ್ಟ್ ಗಳನ್ನು ಒಟ್ಟುಗೂಡಿಸಿದಾಗ, ಹೊಸ ಆಬ್ಜೆಕ್ಟ್ ಅನ್ನು ರಚಿಸಲಾಗುತ್ತದೆ.
11:13 ಈ ಆಯ್ಕೆಗಳನ್ನು ವಿವರಿಸಲು ನಾವು ಮೂರು ಆಬ್ಜೆಕ್ಟ್ ಗಳನ್ನು ಬಳಸುತ್ತೇವೆ.
11:18 ಮೊದಲು, ನಾವು 'ಡ್ರಾ' ಫೈಲ್ ಗೆ ಒಂದು ಹೊಸ ಪೇಜ್ ಅನ್ನು ಸೇರಿಸೋಣ.
11:23 Drawing toolbar ನಿಂದ, ಒಂದು 'ಸರ್ಕಲ್' 'ಅನ್ನು ರಚಿಸೋಣ - Basic Shapes ಮೇಲೆ ಕ್ಲಿಕ್ ಮಾಡಿ ಮತ್ತು Circle ಅನ್ನು ಆಯ್ಕೆಮಾಡಿ.
11:32 Draw ಪೇಜ್ ನಲ್ಲಿ 'ಮೌಸ್' ಅನ್ನು ಸರಿದಾಡಿಸಿ ಮತ್ತು ಅದನ್ನು ಕೆಳಗೆ ಎಳೆಯಿರಿ.
11:35 ನಾವು ಎರಡನೇ ಆಬ್ಜೆಕ್ಟ್ 'ಡೈಮಂಡ್' ಅನ್ನು ರಚಿಸೋಣ.
11:38 Drawing toolbar ನಿಂದ, Basic Shapes ಅನ್ನು ಕ್ಲಿಕ್ ಮಾಡಿ ಮತ್ತು Diamond ಅನ್ನು ಆಯ್ಕೆಮಾಡಿ.
11:43 ಕರ್ಸರ್ ಅನ್ನು 'ಡ್ರಾ' ಪೇಜ್ ಗೆ ತೆಗೆದುಕೊಂಡು ಹೋಗಿ, ಅದನ್ನು ಕೆಳಗೆ ಎಳೆಯಿರಿ. ಮೆನ್ಯು ಬಾರ್ ನಿಂದ, Area Style / Filling ಡ್ರಾಪ್- ಡೌನ್ ಬಟನ್ ಅನ್ನು ಆರಿಸಿ ಮತ್ತು Red 3 ಬಣ್ಣವನ್ನು ಆರಿಸಿ.
11:55 ಮೂರನೇ ಆಬ್ಜೆಕ್ಟ್ ಆಗಿ ಒಂದು Rectangle ಅನ್ನು ರಚಿಸಿ. ಮತ್ತು, ಇದಕ್ಕಾಗಿ Green 6 ಬಣ್ಣವನ್ನು ಆರಿಸಿ.
12:02 Shift ಕೀಯನ್ನು ಒತ್ತಿ ಹಿಡಿದು, ಪ್ರತಿಯೊಂದು ಆಬ್ಜೆಕ್ಟ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ, ಈ ಮೂರು ಆಬ್ಜೆಕ್ಟ್ ಗಳನ್ನು ಆಯ್ಕೆಮಾಡಿ.
12:11 'ಕಾಂಟೆಕ್ಸ್ಟ್ ಮೆನ್ಯು' ಗಾಗಿ, ರೈಟ್-ಕ್ಲಿಕ್ ಮಾಡಿ ಮತ್ತು Combine ಅನ್ನುಕ್ಲಿಕ್ ಮಾಡಿ.
12:14 ಒಂದು ಹೊಸ ಆಬ್ಜೆಕ್ಟ್ ಅನ್ನು ರಚಿಸಲಾಗಿದೆ!
12:18 ಹೊಸ ಆಬ್ಜೆಕ್ಟ್, ಕೊನೆಯ ಮತ್ತು ಹಿಂದೆ ಇರುವ ವಸ್ತುವಿನ ಬಣ್ಣವನ್ನು ಪಡೆಯುತ್ತದೆ ಎಂದು ಗಮನಿಸಿ.
12:24 CTRL + Z ಕೀಗಳನ್ನು ಒಟ್ಟಿಗೆ ಒತ್ತುವ ಮೂಲಕ, ಈ ಕ್ರಿಯೆಯನ್ನುundo ಮಾಡೋಣ.
12:29 ಈ ಆಕೃತಿಗಳನ್ನು ಮತ್ತೊಮ್ಮೆ ಆಯ್ಕೆಮಾಡಿ ಮತ್ತು 'ಕಾಂಟೆಕ್ಸ್ಟ್ ಮೆನ್ಯು' ಗಾಗಿ ರೈಟ್-ಕ್ಲಿಕ್ ಮಾಡಿ.
12:35 Shapes ಅನ್ನು ಆಯ್ಕೆಮಾಡಿ ಮತ್ತು Merge ಅನ್ನು ಕ್ಲಿಕ್ ಮಾಡಿ.
12:38 ಮತ್ತೊಂದು ಹೊಸ ಆಕಾರವನ್ನು ರಚಿಸಲಾಗಿದೆ!
12:41 ನೆನಪಿಡಿ, ಈ ಫಂಕ್ಷನ್ ಗಳೊಂದಿಗೆ ಹೆಚ್ಚು ಹೆಚ್ಚು ಪ್ರಯೋಗವನ್ನು ಮಾಡಿದಷ್ಟು ನೀವು ಹೆಚ್ಚು ಕಲಿಯುವಿರಿ.
12:48 ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
12:51 ಈ ಟ್ಯುಟೋರಿಯಲ್ ನಲ್ಲಿ, ಆಬ್ಜೆಕ್ಟ್ ಗಳನ್ನು ಸರಿಯಾಗಿ ಹೊಂದಿಸಲು 'ಗ್ರಿಡ್'ಗಳು, 'ಗೈಡ್ಸ್' ಮತ್ತು 'ಸ್ನ್ಯಾಪ್ ಲೈನ್ಸ್' ಅನ್ನು ಹೇಗೆ ಬಳಸಬೇಕೆಂದು ನೀವು ಕಲಿತಿದ್ದೀರಿ.
12:59 ನೀವು ಆಬ್ಜೆಕ್ಟ್ ಗಳನ್ನು ಡುಪ್ಲಿಕೇಟ್, ರಿಸೈಜ್ ಮತ್ತು ಡಿಸ್ಟ್ರಿಬ್ಯೂಟ್ ಮಾಡಲು ಸಹ ಕಲಿತಿದ್ದೀರಿ.
13:06 ನಾವು ಗೆರೆಗಳ ಹೊಸ ಶೈಲಿಗಳನ್ನು ಸಹ ರಚಿಸಿದ್ದೇವೆ ಮತ್ತು 'ಕಂಬೈನ್, ಮರ್ಜ್, ಸಬ್ಟ್ರ್ಯಾಕ್ಟ್, ಇಂಟೆರ್ಸೆಕ್ಟ್' ಗಳನ್ನು ಬಳಸಿ,
13:12 ಹೊಸ ಆಬ್ಜೆಕ್ಟ್ ಗಳನ್ನು ರಚಿಸುವುದು ಹೇಗೆಂದು ಕಲಿತಿದ್ದೇವೆ.
13:17 ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ.
13:20 ಇದು ಸ್ಪೋಕನ್- ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
13:23 ನಿಮಗೆ ಉತ್ತಮ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಅದನ್ನು ಡೌನ್ಲೋಡ್ ಮಾಡಿ ವೀಕ್ಷಿಸಬಹುದು.
13:28 ಸ್ಪೋಕನ್- ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
13:37 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:

contact at spoken hyphen tutorial dot org.

13:43 'ಸ್ಪೋಕನ್ ಟ್ಯುಟೋರಿಯಲ್' ಪ್ರಕಲ್ಪವು, 'ಟಾಕ್ ಟು ಎ ಟೀಚರ್' ಎಂಬ ಪ್ರಕಲ್ಪದ ಒಂದು ಭಾಗವಾಗಿದೆ.
13:48 ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
13:55 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು, ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:

spoken hyphen tutorial dot org slash NMEICT hyphen Intro.

14:06 ಈ ಟ್ಯುಟೋರಿಯಲ್, DesiCrew Solutions Pvt. Ltd. ಅವರ ಕೊಡುಗೆಯಾಗಿದೆ.
14:10 ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ವಂದನೆಗಳು.

Contributors and Content Editors

Sandhya.np14