LibreOffice-Suite-Draw/C3/Import-and-Export-Images/Kannada

From Script | Spoken-Tutorial
Revision as of 15:01, 6 October 2018 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 'LibreOffice Draw ನಲ್ಲಿ, (ಲಿಬ್ರೆ ಆಫೀಸ್ ಡ್ರಾ) Import and Export Images ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನೀವು, 'ಡ್ರಾ ಪೇಜ್' ನಲ್ಲಿ ಇಮೇಜ್ ಗಳನ್ನು ಇಂಪೋರ್ಟ್ ಮಾಡಲು ಮತ್ತು Draw ಫೈಲ್ ಅನ್ನು ವಿವಿಧ ಫೈಲ್ ಫಾರ್ಮ್ಯಾಟ್ ಗಳಲ್ಲಿ ಸೇವ್ ಮಾಡಲು ಕಲಿಯುವಿರಿ.
00:16 Draw ನಲ್ಲಿ, ನಾವು ಎರಡೂ ವೆಕ್ಟರ್ ಮತ್ತು ಬಿಟ್ಮ್ಯಾಪ್ ಅಥವಾ ರಾಸ್ಟರ್ ಇಮೇಜ್ ಗಳನ್ನು ಇಂಪೋರ್ಟ್ ಹಾಗೂ ಎಕ್ಸ್ಪೋರ್ಟ್ ಮಡಬಹುದು.
00:23 ಇಲ್ಲಿ, ನಾವು, Ubuntu Linux ಆವೃತ್ತಿ 10.04 ಮತ್ತು LibreOffice Suite ಆವೃತ್ತಿ 3.3.4. ಇವುಗಳನ್ನು ಬಳಸುತ್ತಿದ್ದೇವೆ.
00:32 ನಾವು 'RouteMap' (ರೂಟ್ ಮ್ಯಾಪ್) ಎಂಬ ಫೈಲ್ ಅನ್ನು ತೆರೆಯೋಣ.
00:35 ಈ ಟ್ಯುಟೋರಿಯಲ್ ಗಾಗಿ, 'ವಾಟರ್ ಸೈಕಲ್' ರೇಖಾಚಿತ್ರದ ಒಂದು 'JPEG' ಫೈಲ್ ಅನ್ನು ಈಗಾಗಲೇ ರಚಿಸಿ ಅದನ್ನು 'ಡೆಸ್ಕ್ ಟಾಪ್' ನಲ್ಲಿ ಸೇವ್ ಮಾಡಲಾಗಿದೆ.
00:46 ನಾವು ಈ ಇಮೇಜ್ ಅನ್ನು, ನಮ್ಮ Draw ಫೈಲ್ ನಲ್ಲಿ ಇಂಪೋರ್ಟ್ ಮಾಡೋಣ.
00:49 ನಾವು ಈ ಇಮೇಜ್ ಅನ್ನು ಮುಚ್ಚೋಣ.
00:52 ಮೊದಲು, ನೀವು ಇಮೇಜ್ ಅನ್ನು ಇಂಪೋರ್ಟ್ ಮಾಡಲು ಬಯಸುವ ಪೇಜ್ ಅನ್ನು ಆಯ್ಕೆಮಾಡಿ.
00:57 ನಾವು ಒಂದು ಹೊಸ ಪೇಜ್ ಅನ್ನು ಸೇರಿಸಿ ಅದನ್ನು ಆಯ್ಕೆಮಾಡೋಣ.
01:01 'ವೆಕ್ಟರ್' ಅಥವಾ 'ಬಿಟ್ಮ್ಯಾಪ್' ಇಮೇಜ್ ಗಳನ್ನು ಇಂಪೋರ್ಟ್ ಮಾಡಲು, Insert ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು Picture ಅನ್ನು ಆಯ್ಕೆಮಾಡಿ.
01:08 ನಂತರ From File ಅನ್ನು ಕ್ಲಿಕ್ ಮಾಡಿ.
01:10 Insert picture ಎಂಬ ಡೈಲಾಗ್- ಬಾಕ್ಸ್ ಕಾಣಿಸಿಕೊಳ್ಳುತ್ತದೆ.
01:14 ಈಗ ನಾವು 'Water Cycle.jpeg.' ಅನ್ನು ಆಯ್ಕೆಮಾಡೋಣ.
01:17 ನಾವು Open ಮೇಲೆ ಕ್ಲಿಕ್ ಮಾಡಿದರೆ, ಇಮೇಜ್ ನಮ್ಮ 'ಡ್ರಾ' ಫೈಲ್ ನಲ್ಲಿ ಎಂಬೆಡ್ ಮಾಡಲ್ಪಡುತ್ತದೆ (ಸೇರಿಸಲಾಗುತ್ತದೆ).
01:24 ನಾವು ಇಲ್ಲಿ Link ಬಾಕ್ಸ್ ಅನ್ನು ಗುರುತು ಹಾಕಿದರೆ, ಆಗ ಆ ಇಮೇಜ್, path ನಿಂದ ಲಿಂಕ್ ಆಗುತ್ತದೆ.
01:29 Open ಮೇಲೆ ನಾವು ಕ್ಲಿಕ್ ಮಾಡೋಣ.
01:32 ಇಮೇಜ್, ಒಂದು 'ಲಿಂಕ್' ನಂತೆ ಮಾತ್ರ ಸ್ಟೋರ್ ಆಗುತ್ತದೆ ಎಂಬ ಒಂದು ಮೆಸೇಜ್ ಕಾಣಿಸಿಕೊಳ್ಳುತ್ತದೆ.
01:37 Keep Link ಅನ್ನು ಕ್ಲಿಕ್ ಮಾಡಿ.
01:40 ಇಮೇಜ್ ಅನ್ನು, 'ಡ್ರಾ' ಫೈಲ್ ನಲ್ಲಿ 'ಲಿಂಕ್' ಎಂದು ಸೇರಿಸಲಾಗುತ್ತದೆ.
01:44 ಲಿಂಕ್ ಗಳನ್ನು ಸುಲಭವಾಗಿ ತೆಗೆದುಹಾಕಬಹುದು.
01:48 ಮೇನ್ ಮೆನ್ಯುಗೆ ಹೋಗಿ, Edit ಅನ್ನು ಆಯ್ಕೆಮಾಡಿ. ನಂತರ Link ಅನ್ನು ಕ್ಲಿಕ್ ಮಾಡಿ.
01:53 Edit Links ಎಂಬ ಡೈಲಾಗ್- ಬಾಕ್ಸ್ ಕಾಣಿಸಿಕೊಳ್ಳುತ್ತದೆ.
01:57 ಈ ಡೈಲಾಗ್- ಬಾಕ್ಸ್, ಎಲ್ಲಾ 'ಲಿಂಕ್' ಗಳನ್ನು 'ಡ್ರಾ' ಫೈಲ್ ನಲ್ಲಿ ಪಟ್ಟಿಮಾಡುತ್ತದೆ.
02:02 'WaterCycle' (ವಾಟರ್ ಸೈಕಲ್) ಇಮೇಜ್ ಗಾಗಿ, ಲಿಂಕ್ ಮೇಲೆ ಕ್ಲಿಕ್ ಮಾಡಿ.
02:06 Break Link ಅನ್ನು ಕ್ಲಿಕ್ ಮಾಡಿ.
02:09 Yes ಅನ್ನು ಕ್ಲಿಕ್ ಮಾಡಿ. Draw ಒಂದು ದೃಢೀಕರಣ ಸಂದೇಶವನ್ನು ಪ್ರದರ್ಶಿಸುತ್ತದೆ.
02:14 ಲಿಂಕ್ ಅನ್ನು ತೆಗೆದುಹಾಕಲಾಗಿದೆ. ಈಗ, Close ಬಟನ್ ಅನ್ನು ಕ್ಲಿಕ್ ಮಾಡಿ.
02:20 ಆದರೆ, ಈ ಚಿತ್ರವು ಇನ್ನೂ ಫೈಲ್ನಲ್ಲಿದೆ ಎಂದು ನೀವು ನೋಡುವಿರಿ.
02:25 ನೀವು ಒಂದು ಲಿಂಕ್ ಅನ್ನು ಬ್ರೆಕ್ ಮಾಡಿದಾಗ, ಆ ಚಿತ್ರವನ್ನು ತಂತಾನೆ 'ಡ್ರಾ' ಫೈಲ್ ನಲ್ಲಿ ಎಂಬೆಡ್ ಮಾಡಲಾಗುತ್ತದೆ.
02:31 ಈಗ ನಾವು ಈ ಚಿತ್ರವನ್ನು ಡಿಲೀಟ್ ಮಾಡೋಣ. ಚಿತ್ರವನ್ನು ಆಯ್ಕೆಮಾಡಿ ಮತ್ತು Delete ಬಟನ್ ಅನ್ನು ಒತ್ತಿರಿ.
02:39 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
02:42 ಎರಡು 'ಡ್ರಾ ಫೈಲ್' ಗಳನ್ನು ರಚಿಸಿ.
02:44 ಒಂದು ಫೈಲ್ನಲ್ಲಿ, ಒಂದು ಇಮೇಜ್ ಅನ್ನು ಸೇರಿಸಿ, ಅದನ್ನು ಸೇವ್ ಮಾಡಿ.
02:48 ಇನ್ನೊಂದು ಫೈಲ್ನಲ್ಲಿ ಒಂದು ಇಮೇಜ್ ಅನ್ನು ಎಂಬೆಡ್ ಮಾಡಿ, ಅದನ್ನು ಸೇವ್ ಮಾಡಿ.
02:52 ಎರಡೂ ಫೈಲ್ ಸೈಜ್ ಗಳನ್ನು ಹೋಲಿಸಿ.
02:55 ನೀವು ಇಮೇಜ್ ಅನ್ನು ಲಿಂಕ್ ಮಾಡಿದ ಫೈಲ್ನಲ್ಲಿ, ಇಮೇಜ್ ನ ಸೈಜ್ ಅನ್ನು ಬದಲಾಯಿಸಿ.
03:00 ಮೂಲ ಫೈಲ್ನಲ್ಲಿ, ಈ ಬದಲಾವಣೆಯು ಕಂಡುಬರುತ್ತಿದೆಯೆ ಎಂದು ಪರಿಶೀಲಿಸಿ.
03:05 ನಂತರ, ನಾವು 'WaterCycle' ಡೈಗ್ರಾಮ್ ಅನ್ನು ಒಂದು Draw ಇಮೇಜ್ ನಂತೆ, ನೇರವಾಗಿ ಈ ಫೈಲ್ ನಲ್ಲಿ ಇಂಪೋರ್ಟ್ ಮಾಡಿಕೊಳ್ಳೋಣ.
03:13 ಮೇನ್ ಮೆನ್ಯುವಿನಿಂದ, Insert ಅನ್ನು ಕ್ಲಿಕ್ ಮಾಡಿ ಮತ್ತು File ಅನ್ನು ಆಯ್ಕೆ ಮಾಡಿ.
03:18 Insert File ಎಂಬ ಡೈಲಾಗ್- ಬಾಕ್ಸ್ ತೆರೆದುಕೊಳ್ಳುತ್ತದೆ.
03:21 ಪಟ್ಟಿಯಿಂದ, "WaterCycle.odg" ಎಂಬ 'ಡ್ರಾ' ಫೈಲ್ ಅನ್ನು ಆಯ್ಕೆ ಮಾಡಿ.
03:28 Open ಅನ್ನು ಕ್ಲಿಕ್ ಮಾಡಿ.
03:30 Insert slides/objects ಎಂಬ ಡೈಲಾಗ್- ಬಾಕ್ಸ್ ಕಾಣಿಸಿಕೊಳ್ಳುತ್ತದೆ.
03:34 path ಎಂಬ ಫೈಲ್ ನ ಪಕ್ಕದಲ್ಲಿರುವ ಅಧಿಕ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ.
03:38 'ಸ್ಲೈಡ್' ಗಳ ಪಟ್ಟಿಯನ್ನು ನೀವು ನೋಡುತ್ತೀರಿ.
03:41 'WaterCycle' ಡೈಗ್ರಾಮ್ ಅನ್ನು ಹೊಂದಿರುವ ಸ್ಲೈಡ್ ೧ ಅನ್ನು ಆಯ್ಕೆ ಮಾಡೋಣ.
03:46 ನೀವು ಪೇಜ್ ಅಥವಾ 'ಆಬ್ಜೆಕ್ಟ್' ಅನ್ನು ಸಹ ಲಿಂಕ್ ಆಗಿ ಸೇರಿಸಬಹುದು.
03:51 ಇದನ್ನು ಮಾಡಲು, ಸುಮ್ಮನೆ Link ಎಂಬ ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಿ.
03:55 OK ಅನ್ನು ಕ್ಲಿಕ್ ಮಾಡಿ.
03:57 'ಆಬ್ಜೆಕ್ಟ್' ಗಳನ್ನು ಹೊಸ ಫಾರ್ಮ್ಯಾಟ್ ಗೆ ಸರಿಹೊಂದಿಸಬೇಕೆ ಎಂದು ಕೇಳುವ ಒಂದು ಡೈಲಾಗ್- ಬಾಕ್ಸ್ ಕಾಣಿಸಿಕೊಳ್ಳುತ್ತದೆ.
04:05 Yes ಅನ್ನು ಕ್ಲಿಕ್ ಮಾಡಿ.
04:07 ಸ್ಲೈಡ್ ಅನ್ನು ಫೈಲ್ ನಲ್ಲಿ, ಒಂದು ಹೊಸ ಪೇಜ್ ನಲ್ಲಿ ಸೇರಿಸಲಾಗಿದೆ.
04:12 ನಂತರ, ನಾವು Drawನಿಂದ, ಇಮೇಜ್ ಗಳನ್ನು ಎಕ್ಸ್ಪೋರ್ಟ್ ಮಾಡಲು ಕಲಿಯಬೇಕು.
04:17 'ಡ್ರಾ' ನಲ್ಲಿ, ಫೈಲ್ ಅನ್ನು ಎಕ್ಸ್ಪೋರ್ಟ್ ಮಾಡುವುದು ಎಂದರೆ –

'ಡ್ರಾ' ಫೈಲ್ ಅಥವಾ ಡ್ರಾ ಫೈಲ್ ನ ಒಂದು ಪೇಜ್ ಅನ್ನು ಅಥವಾ ಅದರಲ್ಲಿಯ ಒಂದು 'ಆಬ್ಜೆಕ್ಟ್' ಅನ್ನು ಬೇರೆ ಫೈಲ್ ಫಾರ್ಮ್ಯಾಟ್ ಗೆ ಪರಿವರ್ತಿಸುವುದು ಎಂದರ್ಥ.

04:29 ಉದಾಹರಣೆಗೆ, 'ಡ್ರಾ' ಫೈಲ್ ಅನ್ನು 'PDF', 'HTML', 'JPEG' ಅಥವಾ 'ಬಿಟ್ಮ್ಯಾಪ್' ಫೈಲ್ ಎಂದು ಪರಿವರ್ತಿಸಬಹುದು.
04:39 PDF, Flash ಮತ್ತು HTML ಈ ಫೈಲ್ ಫಾರ್ಮ್ಯಾಟ್ ಗಳು ಯಾವಾಗಲೂ ಇಡೀ 'Draw' ಫೈಲ್ ಅನ್ನು ಎಕ್ಸ್ಪೋರ್ಟ್ ಮಾಡುತ್ತವೆ.
04:47 ನಾವು 'RouteMap' ಫೈಲ್ ಅನ್ನು ಮಿನಿಮೈಸ್ ಮಾಡೋಣ.
04:51 'Draw' 'WaterCycle' ಡೈಗ್ರಾಮ್ ಅನ್ನು, 'JPEG' (ಜೆಪಿಇಜಿ) ಫಾರ್ಮ್ಯಾಟ್ ಗೆ ನಾವು ಹೇಗೆ ಮಾರ್ಪಡಿಸಿದ್ದೇವೆ ಎಂದು ನಿಮಗೆ ಆಶ್ಚರ್ಯ ಆಗುತ್ತಿದೆಯೇ?
04:58 ಅದನ್ನು ಹೇಗೆ ಮಾಡಿದೆವು ಎಂದು ನಾನು ವಿವರಿಸುತ್ತೇನೆ.
05:01 'WaterCycle' ಫೈಲ್ ಅನ್ನು ತೆರೆಯಿರಿ.
05:05 ನಂತರ, Pages ಎಂಬ ಪ್ಯಾನೆಲ್ ನಿಂದ, 'WaterCycle' ಡೈಗ್ರಾಮ್ ಇರುವ ಪೇಜ್ ಅನ್ನು ಆಯ್ಕೆಮಾಡಿ.
05:11 ಮೇನ್ ಮೆನ್ಯುವಿನಿಂದ, File ಅನ್ನು ಕ್ಲಿಕ್ ಮಾಡಿ ಮತ್ತು Export ಅನ್ನು ಆಯ್ಕೆಮಾಡಿ.
05:16 Export ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
05:18 Filename ಫೀಲ್ಡ್ ನಲ್ಲಿ, ನಾವು ಹೆಸರನ್ನು "WaterCycleDiagram" ಎಂದು ನಮೂದಿಸೋಣ.
05:24 Places ಪ್ಯಾನೆಲ್ ನಲ್ಲಿ ಬ್ರೌಸ್ ಮಾಡಿ ಮತ್ತು Desktop ಅನ್ನು ಆಯ್ಕೆಮಾಡಿ.
05:29 File type ಫೀಲ್ಡ್ ನಲ್ಲಿ, ನಾವು JPEG ಎಂಬ ಆಯ್ಕೆಯನ್ನು ಆರಿಸಿಕೊಳ್ಳುವೆವು. ಆದರೆ ನೀವು 'Draw' ಫೈಲ್ ಅನ್ನು, ನಿಮಗೆ ಬೇಕಾದ ಯಾವುದೇ ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಬಹುದು.
05:38 Selection ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ.
05:42 Save ಅನ್ನು ಕ್ಲಿಕ್ ಮಾಡಿ. JPEG Options ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
05:47 ಈ ಡೈಲಾಗ್-ಬಾಕ್ಸ್ ನಲ್ಲಿ ಆಯ್ಕೆಮಾಡಲಾದ ಡೀಫಾಲ್ಟ್ ಆಯ್ಕೆಗಳನ್ನು, ನಾವು ಹಾಗೇ ಇಡೋಣ.
05:53 OK ಅನ್ನು ಕ್ಲಿಕ್ ಮಾಡಿ.
05:55 'WaterCycle' ಡೈಗ್ರಾಮ್ ನೊಂದಿಗೆ Draw ಪೇಜ್ ಅನ್ನು, 'ಡೆಸ್ಕ್-ಟಾಪ್' ನಲ್ಲಿ 'JPEG' ಎಂದು ಸೇವ್ ಮಾಡಲಾಗಿದೆ.
06:02 ಇಲ್ಲಿ, 'ಡ್ರಾ' ಫೈಲ್ ನಿಂದ ಒಂದು ಪೇಜ್ ಅನ್ನು ಮಾತ್ರ 'JPEG' ಫೈಲ್ ಆಗಿ ಪರಿವರ್ತಿಸಲಾಗಿದೆ.
06:08 ನೀವು PDF, Flash ಅಥವಾ HTML ಫಾರ್ಮ್ಯಾಟ್ ಗಳಲ್ಲಿ ಸೇವ್ ಮಾಡಿದರೆ, ಆಗ 'ಡ್ರಾ' ಫೈಲ್ ನಲ್ಲಿರುವ ಎಲ್ಲ ಪೇಜ್ ಗಳನ್ನು ಎಕ್ಸ್ಪೋರ್ಟ್ ಮಾಡಲಾಗುತ್ತದೆ.
06:18 'Draw' ನಲ್ಲಿ ನಾವು, 'ರಾಸ್ಟರ್ ಇಮೇಜ್ ಗಳನ್ನು ಸಹ ಎಡಿಟ್ ಮಾಡಬಹುದು.
06:22 Format ಮೆನ್ಯುಅನ್ನು ಬಳಸಿ, ರಾಸ್ಟರ್ ಇಮೇಜ್ ಗಳನ್ನು ಫಾರ್ಮಾಟ್ ಮಾಡಬಹುದು.
06:26 ಈ ಚಿತ್ರಗಳನ್ನು ಎಡಿಟ್ ಮಾಡಲು, ನೀವು Picture ಟೂಲ್ ಬಾರ್ ಅನ್ನು ಸಹ ಬಳಸಬಹುದು.
06:31 ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
06:37 ಈ ಟ್ಯುಟೋರಿಯಲ್ ನಲ್ಲಿ, ನೀವು ಇಮೇಜ್ ಗಳನ್ನು ಇಂಪೋರ್ಟ್ ಮತ್ತು ಎಕ್ಸ್ಪೋರ್ಟ್ ಮಾಡಲು ಮತ್ತು ' Draw ಆಬ್ಜೆಕ್ಟ್' ಗಳನ್ನು ವಿವಿಧ ಫೈಲ್ ಫಾರ್ಮ್ಯಾಟ್ ಗಳಲ್ಲಿ ಸೇವ್ ಮಾಡಲು ಕಲಿತಿದ್ದೀರಿ.
06:47 ನಿಮಗಾಗಿ ಇಲ್ಲಿ ಒಂದು ಅಸೈನ್ಮೆಂಟ್ ಇದೆ.
06:50 ಪ್ರತ್ಯೇಕ ಆಬ್ಜೆಕ್ಟ್ ಗಳು ಅಥವಾ ಆಯ್ದ ಆಬ್ಜೆಕ್ಟ್ ಗಳ ಗುಂಪನ್ನು ಸಹ ಎಕ್ಸ್ಪೋರ್ಟ್ ಮಾಡಬಹುದು.
06:56 'WaterCycle' Draw ಫೈಲ್ ನಿಂದ, ಮೋಡಗಳು ಮತ್ತು ಪರ್ವತವನ್ನು ಮಾತ್ರ ' JPEG ' ಫಾರ್ಮ್ಯಾಟ್ ಗೆ ಪರಿವರ್ತಿಸಿ.
07:05 ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ.
07:09 ಇದು ಸ್ಪೋಕನ್- ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
07:12 ನಿಮಗೆ ಉತ್ತಮ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಅದನ್ನು ಡೌನ್ಲೋಡ್ ಮಾಡಿ ವೀಕ್ಷಿಸಬಹುದು.
07:17 ಸ್ಪೋಕನ್- ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು:
07:20 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
07:23 ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
07:28 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:

contact at spoken hyphen tutorial dot org.

07:35 'ಸ್ಪೋಕನ್ ಟ್ಯುಟೋರಿಯಲ್' ಪ್ರಕಲ್ಪವು, 'ಟಾಕ್ ಟು ಎ ಟೀಚರ್' ಎಂಬ ಪ್ರಕಲ್ಪದ ಒಂದು ಭಾಗವಾಗಿದೆ.
07:40 ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
07:48 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು, ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:

spoken hyphen tutorial dot org slash NMEICT hyphen Intro.

08:01 ಈ ಟ್ಯುಟೋರಿಯಲ್, DesiCrew Solutions Pvt. Ltd. ಅವರ ಕೊಡುಗೆಯಾಗಿದೆ.

ವಂದನೆಗಳು.

Contributors and Content Editors

Sandhya.np14