LibreOffice-Suite-Calc/C2/Formatting-Data/Kannada

From Script | Spoken-Tutorial
Revision as of 16:00, 20 March 2013 by Udaya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search



Time NARRATION
00:00 ಲಿಬ್ರೆ ಆಫೀಸ್ ಕ್ಯಾಲ್ಕ್ ನ ಫಾರ್ಮ್ಯಾಟಿಂಗ್ ಡಾಟಾದ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವುದೇನೆಂದರೆ: ಬಾರ್ಡರ್ ಗಳನ್ನು ಫಾರ್ಮೆಟ್ ಮಾಡುವುದು, ಹಿಂಬದಿಯ ಬಣ್ಣ, ಇತ್ಯಾದಿಗಳು.
00:12 ಅಟೋಮ್ಯಾಟಿಕ್ ವ್ರಾಪಿಂಗ್ ಬಳಸಿಕೊಂಡು ಟೆಕ್ಸ್ಟ್ ನ ಹೆಚ್ಚಿನ ಸಾಲನ್ನು ಒಂದೇ ಬಾರಿಗೆ ಫಾರ್ಮೆಟ್ ಮಾಡುವುದು.
00:18 ಸೆಲ್ ಗಳನ್ನು ಒಂದುಗೂಡಿಸುವುದು, ಹಾಗೂ ಸೆಲ್ ನ ಒಳಗೆ ಫಿಟ್ ಆಗುವಂತೆ ಟೆಕ್ಸ್ಟ್ ನ್ನು ಒತ್ತೊತ್ತಾಗಿ ಇಡುವುದು.
00:22 ಇಲ್ಲಿ ನಾವು ಉಬುಂಟು ಲಿನಕ್ಸ್ 10.04 ನ್ನು ನಮ್ಮ ಒಪೆರಟಿಂಗ್ ಸಿಸ್ಟಮ್ ಆಗಿ ಬಳಸುತ್ತೇವೆ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4.
00:33 ಈಗ ನಾವು ಮೊದಲು ಲಿಬ್ರೆ ಆಫೀಸ್ ಕ್ಯಾಲ್ಕ್ ನಲ್ಲಿ, ಬಾರ್ಡರ್ ಗಳನ್ನು ಫಾರ್ಮೆಟ್ ಮಾಡುವುದರ ಬಗ್ಗೆ ಕಲಿಯೋಣ.
00:39 ನಮ್ಮ “personal finance tracker.ods” ಫೈಲ್ ಅನ್ನು ಓಪನ್ ಮಾಡೋಣ.
00:45 ಬಾರ್ಡರ್ ಗಳನ್ನು ಒಂದು ಗೊತ್ತಾದ ಸೆಲ್ ನಲ್ಲಿ ಅಥವಾ ಒಂದು ಸೆಲ್ ಗಳ ಗುಂಪಿನಲ್ಲಿ ಫಾರ್ಮೆಟ್ ಮಾಡಬಹುದು.
00:50 ಉದಾಹರಣೆಗೆ, “Serial Number”, “Item”, “Cost”, “Spent”, ”Received”, ”Date” ಮತ್ತು ”Account” ಎಂಬ ಹೆಡ್ಡಿಂಗ್ ಗಳಿರುವ ಸೆಲ್ ಗಳನ್ನು ಫಾರ್ಮ್ಯಾಟ್ ಮಾಡೋಣ.
01:01 ಅದ್ದರಿಂದ ಮೊದಲು ಸೀರಿಯಲ್ ನಂಬರ್, “SN” ಎಂದು ಹೆಡ್ಡಿಂಗ್ ಇರುವ ಸೆಲ್ ಕ್ಲಿಕ್ ಮಾಡಿ.
01:08 ಈಗ ಎಡ ಮೌಸ್ ಬಟನ್ ಹಿಡಿದಿಟ್ಟುಕೊಂಡು, ಅದನ್ನು ಹೆಡ್ಡಿಂಗ್ ಹೊಂದಿರುವ ಸೆಲ್ಸ್ ನ ಮೇಲೆ ಡ್ರ್ಯಾಗ್ ಮಾಡಿ.
01:14 ಹೆಡ್ಡಿಂಗ್ಸ್ ಅನ್ನು ಹೊಂದಿರುವ ಇಡೀ ಅಡ್ಡ ಸಾಲನ್ನು ಸೆಲೆಕ್ಟ್ ಮಾಡಿದ ನಂತರ, ಫಾರ್ಮ್ಯಾಟಿಂಗ್ ಟೂಲ್ಬಾರ್ನಲ್ಲಿ " Borders " ಐಕಾನ್ ಮೇಲೆ ಕ್ಲಿಕ್ ಮಾಡಿ.
01:23 ಹಲವಾರು ಬೋರ್ಡರ್ ಶೈಲಿಗಳನ್ನು ಹೊಂದಿರುವ ಡ್ರಾಪ್ ಡೌನ್ ಪಟ್ಟಿ ಓಪನ್ ಆಗುತ್ತದೆ.
01:28 ಅದರಲ್ಲಿ ನೀವು ಬಾರ್ಡರ್ ಮೇಲೆ ಬಳಸಲು ಬಯಸುವ ಒಂದು ಸ್ಟೈಲ್ ನ್ನು ಕ್ಲಿಕ್ ಮಾಡಿ.
01:33 ನಾನು ಕೊನೆಯ ಆಯ್ಕೆಯನ್ನು ಕ್ಲಿಕ್ ಮಾಡುತ್ತೇನೆ.
01:34 ನಾವು ಸೆಲೆಕ್ಟ್ ಮಾಡಿದ ಸ್ಟೈಲ್ ನ ಪ್ರಕಾರ ಬಾರ್ಡರ್ ಗಳು ಫಾರ್ಮೆಟ್ ಆಗಿರುವುದನ್ನು ನೋಡಬಹುದು.
01:39 ಈಗ ಈ ಬದಲಾವಣೆಯನ್ನು ಅಂಡು ಮಾಡೋಣ.
01:45 ಸೆಲೆಕ್ಟ್ ಮಾಡಿದ ಸೆಲ್ಸ್ ಗಳು ಇನ್ನೂ ಹೈಲೈಟ್ ಆಗಿವೆ. ಸೆಲೆಕ್ಟ್ ಮಾಡಿದ ಸೆಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು “Format Cells” ಆಯ್ಕೆ ಮಾಡಿ.
01:54 ಈಗ ಬೋರ್ಡರ್ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
01:56 ಇಲ್ಲಿ ನೀವು “Line arrangement”, “Line”, “Spacing to contents” ಮತ್ತು “Shadowstyle”.ಆಯ್ಕೆಗಳನ್ನು ನೋಡಬಹುದು.
02:05 ಹೀಗೆ ಪ್ರತಿಯೊಂದರಲ್ಲೂ ಡಿಸ್ಪ್ಲೇ ಆಗಿರುವ ಇವುಗಳು ಕ್ಯಾಲ್ಕ್ ನ ಡೀಫಾಲ್ಟ್ ಸೆಟಿಂಗ್ ಆಗಿದೆ.
02:10 ಆದರೆ ಅದನ್ನು ನಮ್ಮ ಅವಶ್ಯಕತೆ ಗೆ ತಕ್ಕಂತೆ ಬದಲಾಯಿಸಬಹುದು.
02:14 “User-defined” ನ ಕೆಳಗೆ ನಿಮಗೆ ಒಂದು ಸಣ್ಣ ಪ್ರಿವೀವ್ ವಿಂಡೋ ಕಾಣಿಸುತ್ತದೆ, ಅದು ನಾವು ಸೆಲೆಕ್ಟ್ ಮಾಡಿರುವುದನ್ನು ಡಿಸ್ಪ್ಲೇ ಮಾಡುತ್ತದೆ.
02:22 ನಾನು "ಡೀಫಾಲ್ಟ್" ಅಡಿಯಲ್ಲಿ ಮೂರನೇ ಆಯ್ಕೆಯನ್ನು ಆಯ್ಕೆ ಮಾಡುತ್ತೇನೆ ಮತ್ತು ನೀವು ಅದು ಪ್ರಿವಿವ್ ವಿಂಡೋವಲ್ಲಿ ರಿಫ್ಲೆಕ್ಟ್ ಆಗುವುದನ್ನು ನೋಡಬಹುದು.
02:29 ನಾನು “Style”, “Width” ಮತ್ತು “Color” ಕೂಡ ಬದಲಾಯಿಸುತ್ತೇನೆ.
02:33 ಪುನಃ ಪ್ರಿವಿವ್ ವಿಂಡೋವಲ್ಲಿ ಬದಲಾವಣೆ ಗಮನಿಸಿ.
02:38 Spacing ಕಂಟೆಂಟ್ ಗಳ ಸ್ಪೇಸಿಂಗ್ “Synchronize” ಆಯ್ಕೆ ಚೆಕ್ ಆಗಿದೆ.
02:42 ಇದರ ಅರ್ಥ ಒಂದೇ ತರಹದ ಸ್ಪೇಸಿಂಗ್ ಅನ್ನು ಎಲ್ಲಾ ಮಾರ್ಜಿನ್ಸ್ ಗೆ ಹಾಕಲಾಗಿದೆ.
02:47 ಅದನ್ನು ಅನ್ ಚೆಕ್ ಮಾಡಬಹುದು ಮತ್ತು ಅವಶ್ಯಕತೆ ಇದ್ದರೆ ಮಾರ್ಜಿನ್ ಸ್ಪೇಸಿಂಗ್ ಅನ್ನು ಬದಲಾಯಿಸಬಹುದು .
02:53 ನಾನು “Top” ಮತ್ತು “Bottom” ಮಾರ್ಜಿನ್ ಅನ್ನು 1.4pt ಗೆ ಬದಲಾಯಿಸುತ್ತೇನೆ.
03:00 ನಾನು ನಿಮಗೆ, ನಿಮ್ಮದೇ ಆದಂತಹ ವಿವಿಧ ಶ್ಯಾಡೊ ಶೈಲಿಗಳನ್ನು ಅನ್ವೇಷಣೆ ಮಾಡಲು ಬಿಡುತ್ತೇನೆ.
03:04 ಓಕೆ ಕ್ಲಿಕ್ ಮಾಡಿ.
03:06 ಈಗ ಆಯ್ಕೆಮಾಡಿದ ಶೈಲಿ ಸೆಲ್ಸ್ ಗೆ ಅನ್ವಯವಾಗುತ್ತವೆ.
03:11 ಬಾರ್ಡರ್ ಗಳನ್ನು ಅನ್ನು ಹೇಗೆ ಫಾರ್ಮ್ಯಾಟ್ ಮಾಡುವುದು ಎಂಬುದರ ಬಗ್ಗೆ ಕಲಿತ ನಂತರ, ಈಗ ಸೆಲ್ಸ್ ಗೆ ಹಿನ್ನೆಲೆ ಬಣ್ಣಗಳನ್ನು ಹೇಗೆ ನೀಡುವುದು ಎಂದು ಕಲಿಯೋಣ.
03:18 ಸೆಲ್ಸ್ ಗೆ ಹಿನ್ನೆಲೆ ಬಣ್ಣ ನೀಡುವುದರ ಸಲುವಾಗಿ, ಕ್ಯಾಲ್ಕ್ ಫಾರ್ಮ್ಯಾಟಿಂಗ್ ಟೂಲ್ಬಾರ್ ನಲ್ಲಿ “Background Color”, ಎಂಬ ಆಯ್ಕೆ ಇದೆ.
03:27 ಈಗ ಅದನ್ನು ಹೇಗೆ ಅಳವಡಿಸಲಾಗಿದೆ ಎಂದು ನೋಡೋಣ.
03:30 ಉದಾಹರಣೆಗೆ, ಹೆಡಿಂಗ್ ನ್ನು ಹೊಂದಿರುವ ಸೆಲ್ ಗಳಿಗೆ ಹಿನ್ನೆಲೆ ಬಣ್ಣವನ್ನು ನೀಡೋಣ.
03:36 ಅದ್ದರಿಂದ ಮೊದಲು ಸೀರಿಯಲ್ ನಂಬರ್ ಎಂದು ಹೆಡ್ಡಿಂಗ್ ಹೊಂದಿರುವ ಸೆಲ್ ಅನ್ನು ಕ್ಲಿಕ್ ಮಾಡಿ, ಅದನ್ನು "SN" ಮೂಲಕ ಸೂಚಿಸಲಾಗಿದೆ.
03:44 ಈಗ ಎಡ ಮೌಸ್ ಬಟನ್ ಹಿಡಿದಿಟ್ಟುಕೊಂಡು ಹೆಡ್ಡಿಂಗ್ ಗಳನ್ನು ಹೊಂದಿರುವ ಸೆಲ್ಸ್ ಗಳ ಜೊತೆಗೆ ಅದನ್ನು ಡ್ರ್ಯಾಗ್ ಮಾಡಿ.
03:50 ಹೆಡ್ಡಿಂಗ್ಸ್ ಗಳನ್ನು ಹೊಂದಿರುವ ಇಡೀ ಅಡ್ಡ ಸಾಲು ಸೆಲೆಕ್ಟ್ ಮಾಡಿದ ನಂತರ, ಫಾರ್ಮ್ಯಾಟಿಂಗ್ ಟೂಲ್ಬಾರ್ನಲ್ಲಿ ರಲ್ಲಿ “Background Color” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
04:00 ಒಂದು ಪೋಪ್ ಅಪ್ ಮೆನು ಓಪನ್ ಆಗುತ್ತದೆ, ಇಲ್ಲಿ ನೀವು ಒಂದು ಹಾಕಲು ಬಯಸುವ ಹಿನ್ನೆಲೆ ಬಣ್ಣವನ್ನು ಆಯ್ಕೆ ಮಾಡಬಹುದು.
04:08 " Grey " ಕಲರ್ ನ ಮೇಲೆ ಕ್ಲಿಕ್ ಮಾಡಿ.
04:11 ನೀವು ನೋಡಬಹುದು ಸೆಲ್ ನ ಹಿನ್ನೆಲೆ ಬೂದು ಬಣ್ಣಕ್ಕೆ ಬದಲಾಗಿದೆ.
04:17 ಟೆಕ್ಸ್ಟ್ ನ ಅನೇಕ ಸಾಲುಗಳನ್ನು ಫಾರ್ಮೆಟ್ ಮಾಡಲು ಕ್ಯಾಲ್ಕ್ ವಿವಿಧ ಆಯ್ಕೆಗಳನ್ನು ಒದಗಿಸುತ್ತದೆ.
04:22 ಮೊದಲನೆಯದನ್ನು “Automatic Wrapping” ಬಳಸುವುದರಿಂದ ಮಾಡಬಹುದು.
04:26 “Automatic Wrapping” ಒಂದು ಯುಸೆರ್ ಗೆ ಸಿಂಗಲ್ ಸೆಲ್ ನಲ್ಲಿ ಮಲ್ಟಿಪಲ್ ಟೆಕ್ಸ್ಟ್ ಸಾಲುಗಳನ್ನು ಒಳಬಿಡಲು ಅನುಮತಿಸುತ್ತದೆ.
04:33 ಈಗ ಇದನ್ನು ಹೇಗೆ ಕಾರ್ಯಗತಗೊಳಿಸಲಾಗಿದೆ ಎಂದು ನೋಡೋಣ.
04:37 ಈಗ ನಮ್ಮ “personal finance tracker.ods” ಶೀಟ್ ನಲ್ಲಿ, ಒಂದು ಖಾಲಿ ಸೆಲ್ ಕ್ಲಿಕ್ ಮಾಡೋಣ.
04:44 ಉದಾಹರಣೆಗೆ, ಸೆಲ್ ನಂಬರ್ " B12" ಮೇಲೆ ಕ್ಲಿಕ್ ಮಾಡೋಣ.
04:49 ಈಗ ಸೆಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ. ನಂತರ ಫಾರ್ಮಾಟ್ ಸೆಲ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
04:54 ಈಗ ಡೈಲಾಗ್ ಬಾಕ್ಸ್ ನಲ್ಲಿ “Alignment” ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
04:58 ಡೈಲಾಗ್ ಬಾಕ್ಸ್ ಕೆಳಗೆ “Wrap text automatically” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ “OK” ಬಟನ್ ಅನ್ನು ಕ್ಲಿಕ್ ಮಾಡಿ.
05:08 ಈಗ ನಾವು “THIS IS A PERSONAL FINANCE TRACKER. IT IS VERY USEFUL” ಎಂದು ಟೈಪ್ ಮಾಡೋಣ.
05:11 ಅನೇಕ ಹೇಳಿಕೆಗಳನ್ನು ಒಂದೇ ಸೆಲ್ ನಲ್ಲಿ ವ್ರಾಪ್ ಆಗಿರುವುದನ್ನು ನೀವು ನೋಡಬಹುದು.
05:19 ಬದಲಾವಣೆಗಳನ್ನು ಅಂಡು ಮಾಡೋಣ.
05:21 "“Automatic Wrapping” ತಿಳಿದ ನಂತರ, ನಾವು ಈಗ ಕ್ಯಾಲ್ಕ್ ನಲ್ಲಿ ಸೆಲ್ಸ್ ಗಳನ್ನು ಹೇಗೆ ಒಂದುಗೂಡಿಸುವುದು ಅಥವಾ ಮರ್ಜ್ ಮಾಡುವುದು ಎಂದು ತಿಳಿಯೋಣ.
05:29 ನಮ್ಮ “personal finance tracker.ods” ಫೈಲ್ ನಲ್ಲಿ, ನೀವು ಸೀರಿಯಲ್ ನಂಬರ್, “SN” ಹೆಡ್ಡಿಂಗ್ ಹೊಂದಿರುವ ಸೆಲ್ಸ್ ಮತ್ತು ಅದರ ಸರಿ ಹೊಂದುವ ಐಟಂಗಳನ್ನು ಮರ್ಜ್ ಮಾಡಲು, ಮೊದಲು “SN” ಹೆಡ್ಡಿಂಗ್ ಕೆಳಗೆ ಇರುವ ಡಾಟಾ ಎಂಟ್ರಿ '1'ಕ್ಲಿಕ್ ಮಾಡಿ.
05:46 ಈಗ ಕೀ ಬೋರ್ಡ್ ನಲ್ಲಿ “Shift” ಕೀ ಹಿಡಿದಿಟ್ಟುಕೊಳ್ಳಿ ಮತ್ತು “Salary” ಗೆ ಸಂಬಂಧಿಸಿದ ಸೆಲ್ ನ ಮೇಲೆ ಕ್ಲಿಕ್ ಮಾಡಿ.
05:55 ಈಗ ಮರ್ಜ್ ಆಗಬೇಕಿರುವ ಎರಡು ಸೆಲ್ ಗಳು ಹೈಲೈಟ್ ಆಗುತ್ತವೆ.
05:59 ನಂತರ ಮೆನು ಬಾರ್ನಲ್ಲಿ " Format " ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು " Merge Cells " ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:07 ಸೈಡ್ ಬಾರ್ ನ ಪೋಪ್ ಅಪ್ ಗಳಲ್ಲಿ, “Merge Cells” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:12 ಎರಡು ಸೆಲ್ ಗಳ ಕಂಟೆಂಟ್ ಗಳನ್ನು ಒಂದೇ ಸೆಲ್ ಗೆ ಮೂವ್ ಮಾಡಲು, ಕಾಣಿಸಿಕೊಳ್ಳುವ ಡೈಲಾಗ್ ಬಾಕ್ಸ್ ನಲ್ಲಿ “Yes” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:21 ಆಯ್ಕೆಮಾಡಿದ ಸೆಲ್ಸ್ ಗಳು ಒಂದೇ ಸೆಲ್ ನಲ್ಲಿ ಮರ್ಜ್ ಆಗಿರುದನ್ನು ಮತ್ತು ಕಂಟೆಂಟ್ಸ್ ಕೂಡ ಅದೇ ಸೆಲ್ ನ ಒಳಗೆ ಮರ್ಜ್ ಆಗಿರುದನ್ನು ಈಗ ನೀವು ನೋಡಬಹುದು.
06:31 ಈಗ ಟೂಲ್ಬಾರ್ ನಲ್ಲಿ “undo” ಆಯ್ಕೆಯ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅಥವಾ "CTRL + Z" ಪ್ರೆಸ್ ಮಾಡುವುದರ ಮೂಲಕ ಮರ್ಜ್ ಅನ್ನು ಅಂಡು ಮಾಡಬಹುದು.
06:37 ಮುಂದೆ ನಾವು, ಸೆಲ್ ನ ಒಳಗೆ ಸರಿಯಾಗಿ ಹೊಂದಿಕೊಳ್ಳುವಂತೆ ಟೆಕ್ಸ್ಟ್ ನ್ನು ಒತ್ತೊತ್ತಾಗಿ ಇರಿಸುವುದು ಹೇಗೆ ಎಂದು ಕಲಿಯೋಣ.
06:41 ಒಂದು ಸೆಲ್ ನಲ್ಲಿನ ಡಾಟಾದ ಫಾಂಟ್ ಗಾತ್ರವು ಸ್ವಯಂಚಾಲಿತವಾಗಿ ಸೆಲ್ ನ ಗಾತ್ರಕ್ಕೆ ಅನುಗುಣವಾಗಿ ಹೊಂದಿಕೊಂಡಿರುತ್ತದೆ.
06:49 ಇದನ್ನು ಹೇಗೆ ಮಾಡುವುದೆಂದು ಕಲಿಯೋಣ.
06:50 B14 ಸೆಲ್ ನಲ್ಲಿ “This is for the month of January” ಎಂದು ಟೈಪ್ ಮಾಡಿ.
07:00 ಟೆಕ್ಸ್ಟ್ ಸೆಲ್ ನ ಒಳಗೆ ಫಿಟ್ ಆಗದೇ ಇರುವುದನ್ನು ನೀವು ನೋಡಬಹುದು.
07:03 ಟೆಕ್ಸ್ಟ್ ಸೆಲ್ ನ ಒಳಗೆ ಫಿಟ್ ಆಗಲು ಅದನ್ನು ಶ್ರಿಂಕ್ ಮಾಡುವ ಸಲುವಾಗಿ, ಮೊದಲು B14 ಸೆಲ್ ಮೇಲೆ ಕ್ಲಿಕ್ ಮಾಡಿ.
07:11 ಈಗ ಮೆನು ಬಾರ್ನಲ್ಲಿ “Format” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Cells” ಮೇಲೆ ಕ್ಲಿಕ್ ಮಾಡಿ.
07:18 ಪರ್ಯಾಯವಾಗಿ, ಸೆಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು “Format Cells” ಮೇಲೆ ಕ್ಲಿಕ್ ಮಾಡಿ.
07:24 “Format Cells” ಡೈಲಾಗ್ ಬಾಕ್ಸ್ ತೆರೆಯಲ್ಪಡುವುದನ್ನು ನೀವು ನೋಡಬಹುದು.
07:28 ಡೈಲಾಗ್ ಬಾಕ್ಸ್ ನಲ್ಲಿ “Alignment” ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
07:31 ಡೈಲಾಗ್ ಬಾಕ್ಸ್ ನ ಕೆಳಗೆ “Shrink to fit cell size” ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ನಂತರ " OK " ಬಟನ್ ಅನ್ನು ಕ್ಲಿಕ್ ಮಾಡಿ.
07:41 ನೀವು ನೋಡಬಹುದು ಎಲ್ಲಾ ಟೆಕ್ಸ್ಟ್ ಗಳೂ ಫಾಂಟ್ ಸೈಜ್ ಕಡಿಮೆ ಮಾಡಿಕೊಂಡು ತನ್ನಷ್ಟಕ್ಕೆ ಶ್ರಿಂಕ್ ಆಗುತ್ತದೆ ಹೀಗೆ ಟೆಕ್ಸ್ಟ್ B14 ಸೆಲ್ ನ ಒಳಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ.
07:54 ಬದಲಾವಣೆಗಳನ್ನು ಅಂಡು ಮಾಡುವ
07:57 ಇದು ನಮ್ಮನ್ನು ನ ಲಿಬ್ರೆ ಆಫೀಸ್ ಕ್ಯಾಲ್ಕ್ ಸ್ಪೋಕನ್ ಟ್ಯುಟೋರಿಯಲ್ ನ ಮುಕ್ತಾಯಕ್ಕೆ ತರುತ್ತದೆ.
08:02 ನಾವು ಕಲಿತ, ಸಾರಾಂಶ: ಕ್ಯಾಲ್ಕ್ ನಲ್ಲಿ ಬಾರ್ಡರ್ ಗಳನ್ನು ಫಾರ್ಮೆಟ್ ಮಾಡುವುದು, ಬ್ಯಾಗ್ರೌಂಡ್ ವ್ರಾಪಿಂಗ್.
08:09 ಅಟೋಮ್ಯಾಟಿಕ್ ವ್ರಾಪಿಂಗ್ ಬಳಸಿಕೊಂಡು ಮಲ್ಟಿಪಲ್ ಲೈನ್ ಟೆಕ್ಸ್ಟ್ ಅನ್ನು ಫಾರ್ಮ್ಯಾಟಿಂಗ್ ಮಾಡುವುದು.
08:14 ಸೆಲ್ಸ್ ಅನ್ನು ಮರ್ಜ್ ಮಾಡುವುದು. ಸೆಲ್ ನ ಒಳಗೆ ಟೆಕ್ಸ್ಟ್ ಫಿಟ್ ಆಗಲು ಶ್ರಿಂಕ್ ಮಾಡುವುದು.
08:19 ಸಮಗ್ರ ಅಭ್ಯಾಸಗಳು
08:21 “spreadsheet practice.ods” ಶೀಟ್ ಓಪನ್ ಮಾಡಿ.
08:25 ಎಲ್ಲಾ ಹೆಡ್ಡಿಂಗ್ಸ್ ಗಳನ್ನೂ ಸೆಲೆಕ್ಟ್ ಮಾಡಿ.
08:27 ಹೆಡ್ಡಿಂಗ್ ನ ಹಿನ್ನೆಲೆಗೆ ನೀಲಿ ಬಣ್ಣವನ್ನು ಕೊಡಿ.
08:31 “Automatic Wrapping” ಬಳಸಿಕೊಂಡು “This is a Department Spreadsheet” ಎಂದು ಟೆಕ್ಸ್ಟ್ ಟೈಪ್ ಮಾಡಿ.
08:37 ಸೆಲ್ ಗೆ ಸರಿಹೊಂದುವಂತೆ ಟೆಕ್ಸ್ಟ್ ಶ್ರಿಂಕ್ ಮಾಡಿ.
08:40 ಈ ಲಿಂಕ್ ನಲ್ಲಿ ಸಿಗುವ ವೀಡಿಯೋನ್ನು ನೋಡಿ.
08:43 ಅದು ಈ ಸ್ಪೋಕನ್ ಟ್ಯುಟೋರಿಯಲ್ ನ ಸಾರಂಶವನ್ನು ಕೊಡುತ್ತದೆ.
08:46 ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲವಾದಲ್ಲಿ ಈ ವೀಡಿಯೋನ್ನು ಡೌನ್ ಲೋಡ್ ಮಾಡಿ ವೀಕ್ಸಿಸಿ.
08:51 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ತಂಡ ಸ್ಪೋಕನ್ ಟ್ಯುಟೋರಿಯಲ್ ಬಳಸಿ ವರ್ಕ್ ಶಾಪ್ ನಡೆಸುತ್ತದೆ.
08:56 ಆನ್ ಲೈನ್ ಪರೀಕ್ಷೆಗಳಲ್ಲಿ ಪಾಸ್ ಆದವರಿಗೆ ಸರ್ಟಿಫಿಕೇಟ್ ವದಗಿಸುತ್ತದೆ.
09:00 ಹೆಚ್ಚಿನ ಮಾಹಿತಿಗಾಗಿ ಇದಕ್ಕೆ ಬರೆಯಿರಿ : contact@spoken-tutorial.org
09:06 ಸ್ಪೋಕನ್ ಟ್ಯುಟೋರಿಯಲ್ ಗಳು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
09:11 ಇದು ಭಾರತ ಸರ್ಕಾರದ ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ, ಎಂಎಚ್ಆರ್ ಡಿ ಯಿಂದ ಸ್ಪೂರ್ತಿಗೊಂಡಿದೆ.
09:18 ಈ ಮಿಶನ್ ಮೇಲಿನ ಹೆಚ್ಚಿನ ಮಾಹಿತಿಯು ಇದರಲ್ಲಿ ಲಭ್ಯವಿದೆ: ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ org ಸ್ಲಾಶ್ NMEICT ಹೈಫನ್ ಇಂಟ್ರೋ.
09:29 ಈ ಟ್ಯುಟೋರಿಯಲ್ ದೇಸಿಕ್ರೂ ಸೋಲುಶನ್ ಪ್ರೈವೇಟ್ ಲಿಮಿಟೆಡ್ ನ ಕೊಡುಗೆಯಾಗಿದೆ.
09:35 ಸೇರಿರುವುದಕ್ಕಾಗಿ ವಂದನೆಗಳು.

Contributors and Content Editors

PoojaMoolya, Pratik kamble, Udaya, Vasudeva ahitanal