Java/C2/Numerical-Datatypes/Kannada

From Script | Spoken-Tutorial
Jump to: navigation, search
Time' Narration
00:01 ಜಾವಾ ದಲ್ಲಿ ನ್ಯುಮೆರಿಕಲ್ ಡಾಟಾಟೈಪ್ ನ ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು,
00:10 ಜಾವಾ ದಲ್ಲಿ ಲಭ್ಯವಿರುವ ವಿವಿಧ ನ್ಯೂಮೆರಿಕಲ್ ಡಾಟಾಟೈಪ್ ಗಳ ಬಗ್ಗೆ ಹಾಗೂ,
00:13 ಅವುಗಳನ್ನು ನ್ಯೂಮೆರಿಕ್ ಡಾಟಾ ವನ್ನು ಸಂಗ್ರಹಿಸಲು ಹೇಗೆ ಉಪಯೋಗಿಸುವುದೆಂದು ಕಲಿಯಲಿದ್ದೇವೆ.
00:18 ಈ ಟ್ಯುಟೋರಿಯಲ್ ನಲ್ಲಿ ನಾವು
  • Ubuntu 11.10,
  • JDK 1.6 ಮತ್ತು
  • Eclipse 3.7.0 ಅನ್ನು ಉಪಯೋಗಿಸುತ್ತಿದ್ದೇವೆ.
00:27 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಎಕ್ಲಿಪ್ಸ್ ನಲ್ಲಿ ಪ್ರೊಗ್ರಾಮ್ ಅನ್ನು ಬರೆಯುವುದು ಮತ್ತು ಅದನ್ನು ರನ್ ಮಾಡುವುದು ಹೇಗೆ ಎಂಬುದನ್ನು ತಿಳಿದಿರಬೇಕು.
00:34 ಇಲ್ಲವಾದಲ್ಲಿ ಇದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಕೆಳಗೆ ತೋರಿಸಿರುವ ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ.
00:42 ಇಂಟಿಜೆರ್ ಅನ್ನು ಸಂಗ್ರಹಿಸಲು ಇರುವ ಡಾಟಾ ಟೈಪ್ ಅನ್ನು int ಎನ್ನುತ್ತೇವೆ.
00:47 ಡೆಸಿಮಲ್ ಅನ್ನು ಸಂಗ್ರಹಿಸಲು ಇರುವ ಡಾಟಾ ಟೈಪ್ ಅನ್ನು float ಎನ್ನುತ್ತೇವೆ.
00:52 ಮೊದಲಿಗೆ ನಾನು ಇಂಟಿಜೆರ್ ಅನ್ನು ವಿವರಿಸುತ್ತೇನೆ ಮತ್ತು ಉಪಯೋಗಿಸುತ್ತೇನೆ.
01:02 ಇಲ್ಲಿ ನಾವು, Here, we have the Eclipse IDE and the skeleton required for the rest of the code.
01:10 ನಾವು NumericalData ಎಂಬ ಕ್ಲಾಸ್ ಅನ್ನು ರಚಿಸಿದ್ದೇವೆ ಮತ್ತು ಇದಕ್ಕೆ ಮೇನ್ ಮೆಥೆಡ್ ಅನ್ನು ಸೇರಿಸಿದ್ದೇವೆ.
01:15 ಈಗ ಸಂಖ್ಯೆಯನ್ನು ಹೇಗೆ ಸಂಗ್ರಹಿಸಿವುದೆಂದು ನೋಡೋಣ.
01:20 int distance equal to (=) 28
01:27 ಈ ಸ್ಟೇಟ್ಮೆಂಟ್ ಎಂಬುದು ಇಂಟಿಜೆರ್ ವ್ಯಾಲ್ಯೂ ಅನ್ನು distance ನ ಹೆಸರಿನಲ್ಲಿ ಸಂಗ್ರಹಿಸುತ್ತದೆ.
01:33 distance ಎಂಬ ಹೆಸರನ್ನು ಇಂಟಿಜೆರ್ ವೇರಿಯೇಬಲ್ ಎಂದು ಕರೆಯುತ್ತಾರೆ.
01:37 ಈಗ ನಾವು ಡಿಸ್ಟೆನ್ಸ್ ಎಂಬ ವೇರಿಯೇಬಲ್ ಅನ್ನು ಅದರಲ್ಲಿನ ವ್ಯಾಲ್ಯೂವನ್ನು ಪ್ರಿಂಟ್ ಮಾಡಲು ಬಳಸಬಹುದು.
01:47 System dot out dot println. ಪೆರಂಥಿಸಿಸ್ ನಲ್ಲಿ distance.
02:01 ಈ ಸ್ಟೇಟ್ಮೆಂಟ್ ಡಿಸ್ಟೆಂಟ್ ವೇರಿಯೇಬಲ್ ನ ವ್ಯಾಲ್ಯೂವನ್ನು ಪ್ರಿಂಟ್ ಮಾಡುತ್ತದೆ.
02:06 ಫೈಲ್ ಅನ್ನು Save ಮಾಡಿ ಹಾಗೂ Run ಮಾಡಿ.
02:14 28 ಎಂಬ ವ್ಯಾಲ್ಯೂ ಡಿಸ್ಟೆನ್ಸ್ ಎಂಬಲ್ಲಿ ಸಂಗ್ರಹವಾಗಿ ಪ್ರಿಂಟ್ ಆಗಿದೆ ಎಂದು ನಾವು ನೋಡಬಹುದು.
02:21 ಈಗ ನಾವು ವೇರಿಯೇಬಲ್ ನಲ್ಲಿ ಸಂಗ್ರಹವಾದ ವ್ಯಾಲ್ಯೂವನ್ನು ಬದಲಿಸೋಣ.
02:25 28 ರಿಂದ 24 ಕ್ಕೆ ಬದಲಿಸೋಣ.
02:29 Save ಮಾಡಿ Run ಮಾಡಿ.
02:34 ನೋಡಿ, ಇದಕ್ಕನುಗುಣವಾಗಿ ಔಟ್ಪುಟ್ ಕೂಡಾ ಬದಲಾಗಿದೆ.
02:39 int ಎಂಬುದು ನೆಗೆಟೀವ್ ವ್ಯಾಲ್ಯೂಗಳನ್ನು ಕೂಡಾ ಸಂಗ್ರಹಿಸುತ್ತದೆ.
02:42 24 ಅನ್ನು minus 25 ಗೆ ಬದಲಿಸಿ.
02:48 Save ಮಾಡಿ Run ಮಾಡಿ.
02:56 ನೋಡಿ, ನೆಗೆಟೀವ್ ವ್ಯಾಲ್ಯೂವನ್ನು ಕೂಡಾ int ಎಂಬ ವೇರಿಯೇಬಲ್ ಸಂಗ್ರಹಿಸುತ್ತದೆ.
03:02 int ಎಂಬ ಡಾಟಾ ಟೈಪ್ ಹೆಚ್ಚಿನ ಪ್ರೊಗ್ರಾಮಿಂಗ್ ನ ಅವಶ್ಯಕತೆಗಳನ್ನು ಪೂರೈಸುತ್ತದೆ.
03:06 ಆದರೆ ಇದು ಒಂದು ಮಿತಿಯವರೆಗೆ ಮಾತ್ರ ವ್ಯಾಲ್ಯೂವನ್ನು ಸಂಗ್ರಹಿಸುತ್ತದೆ.
03:10 ನಾವೀಗ ಒಂದು ದೊಡ್ಡ ಮೊತ್ತದ ವ್ಯಾಲ್ಯೂವನ್ನು ಸಂಗ್ರಹಿಸಲು ಪ್ರಯತ್ನಿಸೋಣ.
03:25 ನೋಡಿ, ಸಂಖ್ಯೆಯ ಕೆಳಗೆ ಕೆಂಪು ಬಣ್ಣದ ಲೈನ್ ಕಾಣುತ್ತದೆ, ಇದು ಎರರ್ ಅನ್ನು ಸೂಚಿಸುತ್ತದೆ.
03:34 ಆ ಎರರ್, ಸಂಖ್ಯೆಯು int ಯ ವೇರಿಯೇಬಲ್ ನ ಮಿತಿಯನ್ನು ದಾಟಿದೆ ಎಂದು ಹೇಳುತ್ತದೆ.
03:42 int ಎಂಬುದು ಕೇವಲ 32 bits memory ಯನ್ನು ತೆಗೆದುಕೊಳ್ಳುತ್ತದೆ ಹಾಗೂ -2 power 31 ರಿಂದ 2 power 31 ರ ವರೆಗಿನ ವ್ಯಾಲ್ಯೂವನ್ನು ಮಾತ್ರ ಸಂಗ್ರಹಿಸುತ್ತದೆ.
03:49 ದೋಡ್ಡ ಸಂಖ್ಯೆಯನ್ನು ಸಂಗ್ರಹಿಸಲು ಜಾವಾ, long ಡಾಟಾ ಟೈಪ್ ಅನ್ನು ಒದಗಿಸುತ್ತದೆ.
03:54 ಇದನ್ನು ನಾವು ದೊಡ್ಡ ವ್ಯಾಲ್ಯೂವನ್ನು ಸಂಗ್ರಹಿಸಲು ಬಳಸೋಣ.
03:59 int ಯನ್ನು long ಗೆ ಬದಲಿಸಿ.
04:04 ಸಂಖ್ಯೆಯ ಕೊನೆಯಲ್ಲಿ ದೊಡ್ಡ L ಅನ್ನು ಸೇರಿಸಿ.
04:11 Ctrl, S ಒತ್ತಿ ಸೇವ್ ಮಾಡಿ.
04:16 ನೋಡಿ, ಈಗ ಯಾವುದೇ ಎರರ್ ಗಳಿಲ್ಲ.
04:19 ಇದನ್ನು Ctrl, F11 ಒತ್ತುವುದರ ಮೂಲಕ ರನ್ ಮಾಡೋಣ. ಈಗ ವ್ಯಾಲ್ಯೂ ಪ್ರಿಂಟ್ ಆಗಿದೆ.
04:27 ನೋಡಿ, ದೊಡ್ಡ ಸಂಖ್ಯೆಗಳು long ಎಂಬ ವೇರಿಯೇಬಲ್ ನಲ್ಲಿ ಸಂಗ್ರಹವಾಗುತ್ತವೆ.
04:32 ಈಗ ನಾವು, int ಎಂಬ ವೇರಿಯೇಬಲ್ ನಲ್ಲಿ ಡೆಸಿಮಲ್ ಸಂಖ್ಯೆಯನ್ನು ಸಂಗ್ರಹಿಸೋಣ.
04:37 long ಅನ್ನು int ಗೆ ಬದಲಾಯಿಸಿ ಹಾಗೂ ಸಂಖ್ಯೆಯನ್ನು 23.5 ಎಂದು ಬದಲಾಯಿಸಿ.
04:50 ಈಗ ನಾವು ಎರರ್ ಅನ್ನು ನೋಡುತ್ತೇವೆ. ಏಕೆಂದರೆ, int ಎಂಬುದು ಕೇವಲ ಪೂರ್ಣಾಂಕವನ್ನು ಸಂಗ್ರಹಿಸುತ್ತದೆ.
05:00 ದಶಮಾಂಶ ಸಂಖ್ಯೆಯನ್ನು ಸಂಗ್ರಹಿಸಲು ನಾವು float ಅನ್ನು ಉಪಯೋಗಿಸಬೇಕು.
05:05 ಡಾಟಾ ಟೈಪ್ ಅನ್ನು float ಗೆ ಬದಲಿಸಿ.
05:10 ಹಾಗೂ ವ್ಯಾಲ್ಯೂವಿನ ಕೊನೆಯಲ್ಲಿ f ಅನ್ನು ಸೇರಿಸಿ.
05:17 ಸೇವ್ ಮಾಡಿ.
05:19 ನಾವೀಗ ಇಲ್ಲಿ ಎರರ್ ಅನ್ನು ನೋಡುವುದಿಲ್ಲ.
05:22 Control F11 ಒತ್ತುವುದರ ಮೂಲಕ ರನ್ ಮಾಡೋಣ.
05:29 ನೋಡಿ, ದಶಮಾಂಶ ಸಂಖ್ಯೆಯು ಸಂಗ್ರಹವಾಗಿದೆ ಹಾಗೂ ಪ್ರಿಂಟ್ ಆಗಿದೆ.
05:37 ನಾವೀಗ ಡಿಸ್ಟೆನ್ಸ್ ಎಂಬ ವೇರಿಯೇಬಲ್ ನ ವ್ಯಾಲ್ಯೂವನ್ನು ಬದಲಾಯಿಸೋಣ.
05:46 ಇಲ್ಲಿ ತೋರಿಸಿರುವಂತೆ ದಶಮಾಂಶ ಬಿಂದುವಿನ ನಂತರ ಹಲವು ಸಂಖ್ಯೆಗಳನ್ನು ಸೇರಿಸಿ.
05:53 Save ಮಾಡಿ ಹಾಗೂ Run ಮಾಡಿ.
06:01 ನೋಡಿ, ಔಟ್ಪುಟ್ ಎಂಬುದು ಸಂಗ್ರಹದಲ್ಲಿರುವುದಕ್ಕಿಂತ ಸ್ವಲ್ಪ ಭಿನ್ನವಾಗಿ ಇದೆ.
06:06 ಏಕೆಂದರೆ, ಚರ ಸಂಖ್ಯೆಯ ನಿಖರತೆಗೆ ಒಂದು ಮಿತಿಯಿದೆ.
06:11 ಇದು ನಿಖರವಾಗಿ ಸಂಗ್ರಹವಾಗಿರದಿದ್ದಲ್ಲಿ ಅದರ ಹತ್ತಿರದ ಸಂಖ್ಯೆಯನ್ನು ಸೂಚಿಸುತ್ತದೆ.
06:18 ಈಗ ನಾವು ವೇರಿಯೇಬಲ್ ಗೆ ಇರುವ ಹೆಸರಿನ ನಿಯಮಗಳ ಬಗ್ಗೆ ನೋಡೋಣ.
06:23 ಹೆಸರಿಗೆ ಮುಂಚೆ 2 ಎಂಬ ಸಂಖ್ಯೆಯನ್ನು ಸೇರಿಸಿ.
06:30 ನೋಡಿ, ಇಲ್ಲಿ syntax error ಕಾಣುತ್ತದೆ.
06:34 ಏಕೆಂದರೆ, ವೇರಿಯೇಬಲ್ ನ ಹೆಸರು ಯಾವಾಗಲೂ ಕೂಡಾ ಅಕ್ಷರಗಳಿಂದಲೇ ಶುರುವಾಗಬೇಕು.
06:40 ಹಾಗೂ ಸಾಮಾನ್ಯವಾಗಿ underscore ಎಂಬುದನ್ನು ವೇರಿಯೇಬಲ್ ನ ಹೆಸರಿನ ಶುರುವಿನಲ್ಲಿ ಉಪಯೋಗಿಸುವುದಿಲ್ಲ.
06:45 ಈಗ ಸಂಖ್ಯೆಯನ್ನು ವೇರಿಯೇಬಲ್ ಹೆಸರಿನ ಕೊನೆಯಲ್ಲಿ ಸೇರಿಸೋಣ.
06:55 ನೋಡಿ, ಈಗ ಎರರ್ ಗಳಿಲ್ಲ.
06:59 ವೇರಿಯೇಬಲ್ ನ ಹೆಸರಿನಲ್ಲಿ ಸಂಖ್ಯೆಗಳಿರಬಹುದು ಆದರೆ ಶುರುವಿನಲ್ಲಲ್ಲ.
07:04 ಈಗ ಹೆಸರಿನ ಮಧ್ಯದಲ್ಲಿ underscore ಅನ್ನು ಸೇರಿಸೋಣ.
07:15 ನೋಡಿ, ಈಗಲೂ ಯಾವುದೇ ಎರರ್ ಗಳಿಲ್ಲ.
07:17 ಅಂದರೆ underscore ಎಂಬುದುದನ್ನು ವೇರಿಯೇಬಲ್ ಹೆಸರಿನಲ್ಲಿ ಉಪಯೋಗಿಸಬಹುದು.
07:22 ಆದರೆ ಬೇರಾವ ಚಿಹ್ನೆಗಳೂ ಕೂಡಾ ವೇರಿಯೇಬಲ್ ಹೆಸರಿನಲ್ಲಿ ಇದ್ದಲ್ಲಿ ಅದು syntax error ಅಥವಾ ಇತರ error ಗಳನ್ನು ತೋರಿಸುತ್ತದೆ.
07:28 ಹೀಗೆ ನೀವು ಜಾವಾದಲ್ಲಿ numerical data ವನ್ನು ಸಂಗ್ರಹಿಸುತ್ತೀರಿ.
07:35 ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ.
07:38 ಈ ಟ್ಯುಟೋರಿಯಲ್ ನಲ್ಲಿ ನಾವು ವಿವಿಧ numerical datatype ಗಳ ಬಗ್ಗೆ ತಿಳಿದೆವು.
07:44 ಹಾಗೂ numerical data ಗಳನ್ನು ಹೇಗೆ ಸಂಗ್ರಹಿಸುವುದೆಂದೂ ತಿಳಿದೆವು.
07:46 ಮತ್ತು ನಾವು ವೇರಿಯೇಬಲ್ ನ ಹೆಸರಿನಲ್ಲಿರುವ ನಿಯಮಗಳನ್ನೂ ತಿಳಿದುಕೊಂಡೆವು.
07:51 ಈ ಟ್ಯುಟೋರಿಯಲ್ ನ ಅಭ್ಯಾಸಕ್ಕಾಗಿ,
07:53 ಬೇರೆ numerical data type ಗಳ ಬಗ್ಗೆ ಓದಿ.
07:56 ಅವುಗಳು int ಹಾಗೂ float ಗಿಂತ ಹೇಗೆ ವಿಭಿನ್ನವಾಗಿದೆ ಎಂಬುದನ್ನು ನೋಡಿ.
08:00 ಜಾವಾ ಟ್ಯುಟೋರಿಯಲ್ ಗಳು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
08:05 ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು spoken-tutorial.org/What_is_a_Spoken_Tutorial ಎಂಬ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ.
08:11 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
08:14 ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
08:20 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
08:24 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
08:35 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
08:39 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
08:45 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅನ್ನು ನೋಡಿ.
08:51 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

Pratik kamble, Vasudeva ahitanal