Difference between revisions of "Java/C2/First-Java-Program/Kannada"

From Script | Spoken-Tutorial
Jump to: navigation, search
Line 85: Line 85:
 
|-
 
|-
 
| 02:33
 
| 02:33
|Dot java ಎಂಬು ಜಾವಾ ಫೈಲ್ ಗೆ ಕೊಟ್ಟ ಫೈಲ್ ಎಕ್ಸ್ಟೆನ್ಶನ್ ಆಗಿದೆ.
+
|Dot java ಎಂಬುದು ಜಾವಾ ಫೈಲ್ ಗೆ ಕೊಟ್ಟ ಫೈಲ್ ಎಕ್ಸ್ಟೆನ್ಶನ್ ಆಗಿದೆ.
 
|-
 
|-
 
|02:39
 
|02:39
Line 109: Line 109:
 
|-
 
|-
 
|  03:27
 
|  03:27
|Enter ಒತ್ತಿ ಹಾಗೂ ಕ್ಲೋಸ್ ಕರ್ಲು ಬ್ರಾಕೆಟ್ "}" ಅನ್ನು ಒತ್ತಿ.
+
|Enter ಒತ್ತಿ ಹಾಗೂ ಕ್ಲೋಸ್ ಕರ್ಲಿ ಬ್ರಾಕೆಟ್ "}" ಅನ್ನು ಒತ್ತಿ.
 
    
 
    
 
|-
 
|-
Line 149: Line 149:
 
|-
 
|-
 
|  04:56
 
|  04:56
| ls
+
|ಪುನಃ ls ಎಂದು ಬರೆದು Enter ಒತ್ತಿ.
 
|-
 
|-
 
|  04:59
 
|  04:59

Revision as of 16:52, 3 June 2014

Time' Narration
00:02 First java program ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ ನಾವು,
00:11 ಸರಳವಾದ ಜಾವಾ ಪ್ರೊಗ್ರಾಮ್ ಅನ್ನು ರಚಿಸುವುದು,
00:14 ಪ್ರೊಗ್ರಾಮ್ ಅನ್ನು ಕಂಪೈಲ್ ಮಾಡುವುದು,
00:16 ಪ್ರೊಗ್ರಾಮ್ ಅನ್ನು ರನ್ ಮಾಡುವುದು ಮತ್ತು
00:19 ಜಾವಾ ದಲ್ಲಿ ಅನುಸರಿಸುವ ನೇಮಿಂಗ್ ಕನ್ವೆನ್ಶನ್ ಗಳ ಬಗ್ಗೆ ಕಲಿಯಲಿದ್ದೇವೆ.
00:23 ಇಲ್ಲಿ ನಾವು Ubuntu ವಿನ 11.10 ನೇ ಆವೃತ್ತಿಯನ್ನು ಹಾಗೂ jdk 1.6 ಅನ್ನು ಉಪಯೋಗಿಸುತ್ತಿದ್ದೇವೆ.
00:32 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಿಮ್ಮ ಸಿಸ್ಟಮ್ ನಲ್ಲಿ JDK 1.6 ಇನ್ಸ್ಟಾಲ್ ಆಗಿರುವುದು ಅನಿವಾರ್ಯವಾಗಿದೆ.
00:39 ಇಲ್ಲವಾದಲ್ಲಿ ಅದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್ ಗಳನ್ನು ಕೆಳಕಂಡ ವೆಬ್ಸೈಟ್ ನಲ್ಲಿ ನೋಡಬಹುದು.
00:46 ಈಗ ನಾವು ನಮ್ಮ ಮೊದಲ ಜಾವಾ ಪ್ರೊಗ್ರಾಮ್ ಅನ್ನು ರಚಿಸೋಣ.
00:51 ಇದಕ್ಕಾಗಿ ನೀವು Terminal ಹಾಗೂ Text Editor ಅನ್ನು ಹೊಂದಿರಬೇಕು.
00:56 ನಾನು gedit ಅನ್ನು ನನ್ನ Text Editor ಆಗಿ ಉಪಯೋಗಿಸುತ್ತಿದ್ದೇನೆ.
01:01 Text editor ನಲ್ಲಿ, ನಾವು ಮೊದಲು HelloWorld ಎಂಬ ಕ್ಲಾಸ್ ಅನ್ನು ರಚಿಸೋಣ.
01:06 ಹಾಗಾದರೆ, class HelloWorld ಎಂದು ಟೈಪ್ ಮಾಡಿ. HelloWorld ಎಂಬುದು ಕ್ಲಾಸ್ ನ ಹೆಸರಾಗಿದೆ.
01:17 ಈಗ Open curly bracket ಅನ್ನು ಒತ್ತಿ. Enter ಒತ್ತಿ ಹಾಗೂ close curly bracket ಅನ್ನು ಒತ್ತಿ.
01:24 ಈ ಎರಡು ಕರ್ಲಿ ಬ್ರೆಕೆಟ್ ಗಳ ನಡುವಿನ ಕೋಡ್ HelloWorld ಗೆ ಸೇರಿದ್ದಾಗಿರುತ್ತವೆ.
01:33 ಈಗ ಮೇಲಿರುವ Save ಐಕಾನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಈ ಫೈಲ್ ಅನ್ನು ಸೇವ್ ಮಾಡಿ.
01:37 ಹೀಗೆ ಆಗಾಗ ಫೈಲ್ ಅನ್ನು ಸೇವ್ ಮಾಡುವುದು ಉತ್ತಮ ಅಭ್ಯಾಸವಾಗಿದೆ.
01:43 ಈಗ Save As ಎಂಬ ಡೈಯಲಾಗ್ ಬಾಕ್ಸ್ ಕಾಣಿಸುತ್ತದೆ.
01:46 ನೀವು ಫೈಲ್ ಅನ್ನು ಸೇವ್ ಮಾಡಬಯಸಿದ ಸ್ಥಾನವನ್ನು ಹುಡುಕಿ.
01:51 ಇಲ್ಲಿ, ನಾನು ಹೋಮ್ ಡೈರಕ್ಟರಿಯಲ್ಲಿ ಒಂದು ಫೋಲ್ಡರ್ ಅನ್ನು ರಚಿಸುತ್ತೇನೆ.
01:57 ಅದಕ್ಕೆ Demo ಎಂದು ಹೆಸರಿಡೋಣ. Enter ಒತ್ತಿ.
02:02 ಈ ಫೋಲ್ಡರ್ ನ ಒಳಗೆ ನಾವು ಫೈಲ್ ಅನ್ನು ಸೇವ್ ಮಾಡೋಣ.
02:08 Name ಎಂಬ ಬಾಕ್ಸ್ ನಲ್ಲಿ ಕ್ಲಾಸ್ ನ ಹೆಸರನ್ನು ಟೈಪ್ ಮಾಡಿ.
02:13 ಜಾವಾ ದಲ್ಲಿ ಕ್ಲಾಸ್ ನ ಹೆಸರು ಮತ್ತು ಫೈಲ್ ನ ಹೆಸರು ಒಂದೇ ಆಗಿರಬೇಕು.
02:20 ನೆನಪಿಸಿಕೊಳ್ಳಿ, ನಾವು HelloWorld ಎಂಬ ಕ್ಲಾಸ್ ಅನ್ನು ರಚಿಸಿದ್ದೆವು.
02:25 ಹಾಗಾದರೆ ನಾವು ಫೈಲ್ ಅನ್ನು HelloWorld dot java ಎಂದು ಸೇವ್ ಮಾಡೊಣ.
02:33 Dot java ಎಂಬುದು ಜಾವಾ ಫೈಲ್ ಗೆ ಕೊಟ್ಟ ಫೈಲ್ ಎಕ್ಸ್ಟೆನ್ಶನ್ ಆಗಿದೆ.
02:39 ನಂತರ Save ಬಟನ್ ಮೇಲೆ ಕ್ಲಿಕ್ ಮಾಡಿ, ಇದರಿಂದ ಫೈಲ್ ಸೇವ್ ಆಗುತ್ತದೆ.
02:47 ಕ್ಲಾಸ್ ನ ಒಳಗೆ ನಾವು main ಎಂಬ ಮೆಥೆಡ್ ಅನ್ನು ಬರೆಯೋಣ.
02:53 ಹಾಗಾದರೆ ಹೀಗೆ ಟೈಪ್ ಮಾಡಿ:
02:54 public static void main ಪೆರಂಥಿಸಿಸ್ "()", ಆ ಪೆರಂಥಿಸಿಸ್ ನ ಒಳಗೆ String arg ಮತ್ತು ಸ್ಕ್ವೇರ್ ಬ್ರಾಕೆಟ್ಸ್ "[]".
03:10 Main ಎಂಬ ಕ್ರಿಯೆಯು ಪ್ರೊಗ್ರಾಮ್ ನ ಸ್ಟಾರ್ಟಿಂಗ್ ಪೋಯಿಂಟ್ ಅನ್ನು ಗುರುತಿಸುತ್ತದೆ.
03:15 ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ public, static, void ಮತ್ತು String ಗಳ ಬಗ್ಗೆ ವಿವರಿಸಲಿದ್ದೇವೆ.
03:23 ಹಾಗಾದರೆ, ಪುನಃ ಓಪನ್ ಕರ್ಲಿ ಬ್ರಾಕೆಟ್ "{" ಅನ್ನು ಒತ್ತಿ.
03:27 Enter ಒತ್ತಿ ಹಾಗೂ ಕ್ಲೋಸ್ ಕರ್ಲಿ ಬ್ರಾಕೆಟ್ "}" ಅನ್ನು ಒತ್ತಿ.
03:32 ಈ ಎರಡು ಕರ್ಲಿ ಬ್ರೆಕೆಟ್ ಗಳ ನಡುವಿನ ಕೋಡ್ main ಎಂಬ ಮೆಥಡ್ ಗೆ ಸೇರಿದ್ದಾಗಿರುತ್ತವೆ.
03:41 ನಾವೀಗ Terminal ನಲ್ಲಿ ಲೈನ್ ಪ್ರದರ್ಶಿತವಾಗಲು ಒಂದು ಕೋಡ್ ಅನ್ನು ಬರೆಯೋಣ.
03:46 ಹಾಗಾಗಿ, main ಎಂಬ ಮೆಥಡ್ ನ ಒಳಗೆ System dot out dot println parentheses semi-colon ಎಂದು ಟೈಪ್ ಮಾಡಿ.
03:59 ಈ ಸ್ಟೇಟ್ಮೆಂಟ್ ಅನ್ನು ಲೈನ್ ಅನ್ನು ಪ್ರಿಂಟ್ ಮಾಡಲು ಉಪಯೋಗಿಸುತ್ತಾರೆ.
04:05 semi-colon ಎಂಬುದು ಲೈನ್ ಅನ್ನು ಟರ್ಮಿನೇಟ್ ಮಾಡಲು ಉಪಯೋಗಿಸುತ್ತಾರೆ.
04:10 ಈಗ ನಾವು ಜಾವಾ ಗೆ ಏನು ಪ್ರಿಂಟ್ ಮಾಡಬೇಕೆಂದು ಹೇಳೋಣ.
04:13 ಹಾಗಾಗಿ parentheses ನ ಒಳಗೆ double quotes ನಲ್ಲಿ My first java program ಆಶ್ಚರ್ಯಸೂಚಕ ಚಿಹ್ನೆ ಹೀಗೆ ಟೈಪ್ ಮಾಡಿ.
04:30 ನಾವೀಗ ಈ ಫೈಲ್ ಅನ್ನು Save ಐಕಾನ್ ಮೇಲೆ ಕ್ಲಿಕ್ ಮಾಡಿ ಸೇವ್ ಮಾಡೋಣ.
04:36 ಈಗ Terminal ಗೆ ಹೋಗೋಣ.
04:38 ನೀವು HelloWorld.java ಎಂಬುದು ಎಲ್ಲಿ ಸೇವ್ ಆಗಿದೆಯೋ ಅದೇ ಡೈರಕ್ಟರಿಯಲ್ಲಿ ಇದ್ದೀರಾ ಎಂದು ಖಚಿತಪಡಿಸಿಕೊಳ್ಳಿ.
04:46 ನೆನಪಿಸಿಕೊಳ್ಳಿ, ನಾನು ನನ್ನ ಹೋಮ್ ಡೈರಕ್ಟರಿಯಲ್ಲಿದ್ದೇನೆ.
04:50 ಈಗ, cd Space Demo ಎಂದು ಟೈಪ್ ಮಾಡಿ Enter ಒತ್ತಿ.
04:56 ಪುನಃ ls ಎಂದು ಬರೆದು Enter ಒತ್ತಿ.
04:59 ನಾವು HelloWorld.java ಎಂಬ ಫೈಲ್ Demo ಎಂಬ ಫೋಲ್ಡರ್ ನಲ್ಲಿ ಇದೆ ಎಂದು ನೋಡುತ್ತೇವೆ.
05:06 ಈಗ ಈ ಫೈಲ್ ಅನ್ನು ಕಂಪೈಲ್ ಮಾಡೋಣ, javac Space HelloWorld dot java ಎಂದು ಟೈಪ್ ಮಾಡಿ Enter ಒತ್ತಿ.
05:21 ಇದು ನಾವು ರಚಿಸಿದ ಫೈಲ್ ಅನ್ನು ಕಂಪೈಲ್ ಮಾಡುತ್ತದೆ.
05:25 ಸರಿ, ಯಾವುದೇ ಎರರ್ ಗಳಿಲ್ಲದೆಯೇ ಫೈಲ್ ಕಂಪೈಲ್ ಆಗಿದೆ.
05:30 ನಾವು HelloWorld.class ಎಂಬ ಫೈಲ್ ರಚಿತವಾಗಿದೆ ಎಂದು ನೋಡಬಹುದು.
05:36 ಈ ಫೈಲ್ ಅನ್ನು ಎಲ್ಲಿ ಕೂಡಾ ರನ್ ಮಾಡಬಹುದು.
05:38 ಅಂದರೆ, ಯಾವ ಆಪರೇಟಿಂಗ್ ಸಿಸ್ಟಮ್ ನಲ್ಲಿ ಕೂಡಾ ರನ್ ಮಾಡಬಹುದೆಂದರ್ಥ.
05:41 ಇಲ್ಲಿ ನಮಗೆ ಜಾವಾ ಕಂಪೈಲರ್ ನ ಆವಶ್ಯಕತೆಯಿರುವುದಿಲ್ಲ.
05:45 ಹಾಗಾಗಿಯೇ, ಜಾವಾ ದ ವಿವರಣೆ ಹೀಗಿರುವುದು, "ಒಮ್ಮೆ ಬರೆಯಿರಿ ಹಾಗೂ ಎಲ್ಲೆಡೆ ರನ್ ಮಾಡಿ".
05:51 ಹಾಗಾಗಿ, ಒಮ್ಮೆ ಕಂಪೈಲೇಶನ್ ಎಂಬುದು ಯಶಸ್ವಿಯಾಗಿ ಆದ ಮೇಲೆ ಕಮಾಂಡ್ ನ ಉಪಯೋಗದಿಂದ ಪ್ರೊಗ್ರಾಮ್ ಅನ್ನು ರನ್ ಮಾಡಿ,
05:56 java (ಈ ಬಾರಿ c ಎಂಬುದಿಲ್ಲ) space HelloWorld (dot java ಎಂಬುದೂ ಇಲ್ಲ) ಮತ್ತು Enter ಒತ್ತಿ.
06:07 ನೀವು My first java program! ಎಂಬ ಔಟ್ಪುಟ್ ಅನ್ನು ಪಡೆಯುತ್ತೀರಿ.
06:13 ಈಗ ನಾವು ನಮ್ಮ ಮೊದಲ ಜಾವಾ ಪ್ರೊಗ್ರಾಮ್ ಅನ್ನು ಬರೆದಿದ್ದೇವೆ. ನಾವೀಗ editor ಗೆ ಹಿಂತಿರುಗೋಣ.
06:22 ಈಗ ಸ್ಟೇಟ್ಮೆಂಟ್ ನ ಕೊನೆಯಲ್ಲಿರುವ semi-colon ಅನ್ನು ತೆಗೆಯೋಣ.
06:27 Save ಐಕಾನ್ ನ ಮೇಲೆ ಕ್ಲಿಕ್ ಮಾಡಿ.
06:29 Terminal ಗೆ ಹಿಂತಿರುಗೋಣ.
06:33 javac HelloWorld dot java ಎಂಬ ಕಮಾಂಡ್ ಅನ್ನು ರನ್ ಮಾಡಿ.
06:41 ಕಂಪೈಲರ್ ಎಂಬುದು ಎರರ್ ಅನ್ನು ತೋರಿಸುತ್ತದೆ.
06:44 ಅದು, 5 ನೇ ಲೈನ್ ನಲ್ಲಿ ಸೆಮಿ ಕೊಲೊನ್ ಎಂಬುದರ ಅಗತ್ಯ ಇದೆ ಎಂದು ಹೇಳುತ್ತದೆ.
06:52 ಅಪ್ ಏರೋ ಎಂಬುದು ಎರರ್ ಸ್ಟೇಟ್ಮೆಂಟ್ ಅನ್ನು ಸೂಚಿಸುತ್ತದೆ.
06:57 ನಾವೀಗ Editor ಗೆ ಹಿಂತಿರುಗೋಣ.
07:01 ಜಾವಾ ದಲ್ಲಿ, ಎಲ್ಲಾ ಸ್ಟೇಟ್ಮೆಂಟ್ ಗಳು ಸೆಮಿ ಕೊಲೊನ್ ನೊಂದಿಗೆ ಕೊನೆಗೊಳ್ಳುತ್ತವೆ.
07:06 ಹಾಗಾಗಿ, 5 ನೇ ಲೈನ್ ಗೆ ಹೋಗಿ ಹಾಗೂ ಸೆಮಿ ಕೊಲೊನ್ ಅನ್ನು ಸೇರಿಸಿ.
07:13 Save ಐಕಾನ್ ನ ಮೇಲೆ ಕ್ಲಿಕ್ ಮಾಡಿ. ಕಂಪೈಲಿಂಗ್ ಗೂ ಮೊದಲು ಫೈಲ್ ಅನ್ನು ಸೇವ್ ಮಾಡುವುದು ಅನಿವಾರ್ಯವಾಗಿದೆ.
07:22 Terminal ಗೆ ಹಿಂತಿರುಗೋಣ.
07:25 javac HelloWorld dot java ಎಂಬುದರ ಸಹಾಯದಿಂದ ಫೈಲ್ ಅನ್ನು ಕಂಪೈಲ್ ಮಾಡಿ.
07:32 ಫೈಲ್ ಎಂಬುದು ಯಾವುದೇ ಎರರ್ ಇಲ್ಲದೆಯೇ ಯಶಸ್ವಿಯಾಗಿ ಕಂಪೈಲ್ ಆಗಿದೆಯೆಂದು ನಾವು ನೋಡಬಹುದು.
07:36 ಈಗ, java HelloWorld ಎಂಬ ಕಮಾಂಡ್ ನ ಸಹಾಯದಿಂದ ಪ್ರೊಗ್ರಾಮ್ ಅನ್ನು ರನ್ ಮಾಡಿ.
07:45 ಈಗ ನಾವು My first java program! ಎಂಬ ಔಟ್ಪುಟ್ ಅನ್ನು ನೋಡುತ್ತೇವೆ.
07:49 ನಾವು ಜಾವಾದಲ್ಲಿ ಹೀಗೆ ಎರರ್ ಅನ್ನು ನಿರ್ವಹಿಸುತ್ತೇವೆ.
07:54 ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ಎರರ್ ಗಳ ಬಗ್ಗೆ ಇನ್ನೂ ಹೆಚ್ಚು ತಿಳಿಯೋಣ.
08:02 ಈಗ ನಾವು ಜಾವಾ ದಲ್ಲಿ ನೇಮಿಂಗ್ ಕನ್ವೆನ್ಶನ್ ಎಂದರೇನು ಎಂಬುದನ್ನು ತಿಳಿಯೋಣ.
08:06 * ಕ್ಲಾಸ್ ನ ಹೆಸರು ಯಾವಾಗಲೂ ಕ್ಯಾಮಲ್ ಕೇಸ್ ನಲ್ಲಿಯೇ ಇರಬೇಕು.
08:10 * ಅಂದರೆ, ಇಲ್ಲಿ ಪ್ರತಿ ಹೊಸ ಪದವು ಅಪ್ಪರ್ ಕೇಸ್ ನಿಂದ ಶುರುವಾಗುತ್ತದೆ.
08:14 * ಉದಾಹರಣೆಗೆ: class HelloWorld, class ChessGame.
08:19 ಇಲ್ಲಿ, Hello ನಲ್ಲಿನ H ಹಾಗೂ World ನಲ್ಲಿನ W ಎಂಬುದು ಅಪ್ಪರ್ ಕೇಸ್ ನಲ್ಲಿದೆ.
08:25 ಹಾಗೆಯೇ, ChessGame ಎಂಬಲ್ಲಿನ C ಮತ್ತು G ಗಳೂ ಕೂಡಾ ಅಪ್ಪರ್ ಕೇಸ್ ನಲ್ಲಿಯೇ ಇದೆ.
08:31 ಮೆಥಡ್ ನ ಹೆಸರು ಯಾವಾಗಲೂ ಮಿಕ್ಸಡ್ ಕೇಸ್ ನಲ್ಲಿರಬೇಕು.
08:35 ಅಂದರೆ, ಅದರ ಮೊದಲ ಪದವು ಲೋವರ್ ಕೇಸ್ ನಲ್ಲಿರಬೇಕು.
08:39 ಹಾಗೂ ಉಳಿದ ಎಲ್ಲಾ ಹೊಸ ಪದಗಳು ಅಪ್ಪರ್ ಕೇಸ್ ನಲ್ಲಿರಬೇಕು.
08:44 ಹಾಗೂ ಮೆಥಡ್ ನ ಹೆಸರು ಕ್ರಿಯಾಪದವಾಗಿರಬೇಕು.
08:48 ಉದಾಹರಣೆಗಾಗಿ: showString(), main(), goToHelp(). ಇಲ್ಲಿ show ಎಂಬಲ್ಲಿನ s ಎಂಬುದು ಲೋವರ್ ಕೇಸ್ ನಲ್ಲಿದೆ ಹಾಗೂ String ಎಂಬಲ್ಲಿನ S ಎಂಬುದು ಅಪ್ಪರ್ ಕೇಸ್ ನಲ್ಲಿದೆ.
09:02 ವೇರಿಯೇಬಲ್ ನ ಹೆಸರು ಅಂಕೆಗಳಿಂದ ಶುರುವಾಗುವುದಿಲ್ಲ.
09:06 ನಾವು ನಮ್ಮ ಕ್ಲಾಸ್, ಮೆಥಡ್ ಹಾಗೂ ವೇರಿಯೇಬಲ್ ನ ಹೆಸರುಗಳಿಗೆ ಕೀವರ್ಡ್ ಅನ್ನು ಉಪಯೋಗಿಸುವುದಿಲ್ಲ.
09:13 ಉದಾಹರಣೆಗೆ: public, private, void, static ಎಂಬೀ ಮುಂತಾದ ಕೀವರ್ಡ್ ಗಳನ್ನು ಉಪಯೋಗಿಸುವುದಿಲ್ಲ.
09:22 ಒಟ್ಟಿನಲ್ಲಿ ನಾವು ಈ ಟ್ಯುಟೋರಿಯಲ್ ನಲ್ಲಿ ನಾವು ಸರಳವಾದ ಜಾವಾ ಪ್ರೊಗ್ರಾಮ್ ಅನ್ನು ಬರೆಯಲು, ಕಂಪೈಲ್ ಮಾಡಲು ಹಾಗೂ ರನ್ ಮಾಡಲು ಕಲಿತೆವು.
09:30 ಹಾಗೂ ನಾವು ಜಾವಾ ದಲ್ಲಿನ ನೇಮಿಂಗ್ ಕನ್ವಿನ್ಶನ್ ಗಳನ್ನು ಕೂಡಾ ನೋಡಿದೆವು.
09:35 ಸ್ವಕೀಯ ಮೌಲ್ಯಮಾಪನಕ್ಕಾಗಿ ನೀವು Java file name and class name should be same ಎಂಬುದನ್ನು ಪ್ರಿಂಟ್ ಮಾಡಲು ಜಾವಾ ಪ್ರೊಗ್ರಾಮ್ ಅನ್ನು ಬರೆಯಿರಿ.
09:47 ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು spoken-tutorial.org/What_is_a_Spoken_Tutorial ಎಂಬ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ.
09:58 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
10:02 ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
10:08 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
10:13 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
10:17 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
10:25 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
10:30 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
10:38 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
10:49 ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ.
10:51 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

PoojaMoolya, Vasudeva ahitanal