Java-Business-Application/C2/Database-and-validation/Kannada

From Script | Spoken-Tutorial
Revision as of 17:55, 17 March 2017 by Pratik kamble (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 Database and validation ಎನ್ನುವ ‘ಸ್ಪೋಕನ್ ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು -
00:08 * ಡೇಟಾ-ಬೇಸ್ ನೊಂದಿಗೆ ವ್ಯವಹರಿಸಲು ಮತ್ತು
00:10 * ಫೀಲ್ಡ್ ಗಳನ್ನು ವ್ಯಾಲಿಡೇಟ್ ಮಾಡಲು ಕಲಿಯುವೆವು.
00:12 ಇಲ್ಲಿ, ನಾವು Ubuntu (ಉಬಂಟು) 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು),
00:15 Netbeans IDE 7.3 (ನೆಟ್ ಬೀನ್ಸ್ ಐ-ಡಿ-ಇ ಏಳು ಪಾಯಿಂಟ್ ಮೂರು),
00:19 JDK 1.7 (ಜೆ-ಡಿ-ಕೆ ಒಂದು ಪಾಯಿಂಟ್ ಏಳು) ಹಾಗೂ
00:21 ‘Firefox’ (ಫೈರ್ ಫಾಕ್ಸ್) ವೆಬ್ ಬ್ರೌಸರ್ 21.0 ಇವುಗಳನ್ನು ಬಳಸುತ್ತಿದ್ದೇವೆ.
00:24 ನೀವು, ನಿಮಗೆ ಇಷ್ಟವಾದ ಯಾವುದೇ ವೆಬ್-ಬ್ರೌಸರ್ ಅನ್ನು ಉಪಯೋಗಿಸಬಹುದು.
00:28 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು -
00:31 * ಜಾವಾ ಸರ್ವ್ಲೆಟ್ಸ್ ಹಾಗೂ JSP ಗಳ ಪರಿಚಯ,
00:35 * ‘Netbeans IDE’ ಯಿಂದ MySQL ಡೇಟಾ-ಬೇಸ್ ಗೆ ಸಂಪರ್ಕ ಕಲ್ಪಿಸುವುದು ಮತ್ತು
00:39 * ಡೇಟಾ-ಬೇಸ್ ಹಾಗೂ ‘ಟೇಬಲ್’ಗಳನ್ನು ತಯಾರಿಸುವುದು ಇವುಗಳನ್ನು ತಿಳಿದಿರಬೇಕು.
00:42 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
00:47 ಈಗ, ನಾವು Netbeans IDE ಗೆ ಹೋಗೋಣ.
00:52 ನಾನು MySQL ಸರ್ವರನ್ನು ಆರಂಭಿಸಿದ್ದೇನೆ.
00:55 ಅದರಲ್ಲಿ ನಾನು ‘library’ ಎಂಬ ಹೆಸರಿನ ಡೇಟಾಬೇಸನ್ನು ‘ಕ್ರಿಯೇಟ್’ ಮಾಡಿದ್ದೇನೆ.
01:00 ನಾನು ಅದರಲ್ಲಿ ‘Users’ ಎಂಬ ಹೆಸರಿನ ‘ಟೇಬಲ್’ಅನ್ನು ತಯಾರಿಸಿದ್ದೇನೆ.
01:04 ನಾನು ಈ ಟೇಬಲ್ ನಲ್ಲಿ ಕೆಲವು ವ್ಯಾಲ್ಯೂಗಳನ್ನು ಈಗಾಗಲೇ ಸೇರಿಸಿದ್ದೇನೆ.
01:08 ಈಗ ಅವುಗಳನ್ನು ತೋರಿಸುವೆನು.
01:10 ಅದಕ್ಕಾಗಿ, ‘Users’ ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು View Data ದ ಮೇಲೆ ಕ್ಲಿಕ್ ಮಾಡಿ.
01:15 ಕೆಳತುದಿಯಲ್ಲಿರುವ Output ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
01:19 ಇಲ್ಲಿ, 15 ‘ಯೂಸರ್’ಗಳು (ಬಳಕೆದಾರರು) ಇರುವುದನ್ನು ನಾವು ನೋಡಬಹುದು.
01:23 FirstName, Surname, Age, Gender, email, Username ಹಾಗೂ Password ಗಳನ್ನು ನಾವು ನೋಡಬಹುದು.
01:31 ಈಗ, ನಾವು JDBC Driver ಅನ್ನು ಎಂದರೆ “Java Database Connectivity Driver” ಅನ್ನು ಲೋಡ್ ಮಾಡೋಣ.
01:39 ಅದಕ್ಕಾಗಿ, ‘Projects’ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
01:42 ‘Libraries’ ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ‘Add Library’ ಯ ಮೇಲೆ ಕ್ಲಿಕ್ ಮಾಡಿ.
01:46 ನಂತರ ‘MySQL JDBC Driver’ ನ ಮೇಲೆ ಕ್ಲಿಕ್ ಮಾಡಿ
01:50 ಮತ್ತು ‘Add Library’ ಯ ಮೇಲೆ ಕ್ಲಿಕ್ ಮಾಡಿ.
01:53 ಇದು ‘JDBC Driver’ ಅನ್ನು ಲೋಡ್ ಮಾಡುವುದು.
01:56 ನಾವು ಈ ಮೊದಲು ಮಾಡಿದಂತೆ, ‘Project’ ಅನ್ನು ‘ರನ್’ ಮಾಡೋಣ.
02:00 ಈಗ, ‘User Name’ ಅನ್ನು “arya” ಎಂದು ಮತ್ತು ‘Password’ ಅನ್ನು “arya123*” (ಆರ್ಯಾ 1-2-3 ಸ್ಟಾರ್) ಎಂದು ಟೈಪ್ ಮಾಡಿ.
02:06 ನಂತರ ‘Sign In’ ನ ಮೇಲೆ ಕ್ಲಿಕ್ ಮಾಡಿ.
02:08 ನಾವು ‘Success Greeting Page’ ಅನ್ನು ನೋಡಬಹುದು.
02:12 ‘ಲಾಗ್-ಔಟ್’ ಮಾಡಲು, “here” ನ ಮೇಲೆ ಕ್ಲಿಕ್ ಮಾಡಿ.
02:15 ಈಗ, ನಾವು IDE ಗೆ ಹಿಂದಿರುಗೋಣ.
02:17 ನಾವು ‘GreetingServlet ಡಾಟ್ java’ ಗೆ ಹೋಗುವೆವು.
02:21 ‘doPost’ ಮೆಥಡ್ ಗೆ ಬನ್ನಿ.
02:23 ಮೊದಲು, ನಾವು ‘getParameter()’ ಮೆಥಡ್ ಅನ್ನು ಬಳಸಿ, ‘request’ ನಿಂದ ‘username’ ಹಾಗೂ ‘password’ ಗಳನ್ನು ಪಡೆಯುತ್ತೇವೆ.
02:31 ನಂತರ, ನಾವು ‘JDBC ಕನೆಕ್ಷನ್’ಗಾಗಿ, ‘ಕೋಡ್’ಅನ್ನು ನೋಡುವೆವು.
02:35 ನಾವು Connection ಆಬ್ಜೆಕ್ಟ್, PreparedStatement ಆಬ್ಜೆಕ್ಟ್ ಮತ್ತು ResultSet ಆಬ್ಜೆಕ್ಟ್ ಗಳನ್ನು ‘null’ ಎಂದು ‘ಇನಿಶಿಯಲೈಸ್’ ಮಾಡಿದ್ದೇವೆ.
02:44 ಆಮೇಲೆ ನಾವು, ನಮ್ಮ ಪ್ರೊಗ್ರಾಂನಲ್ಲಿ ‘ಡ್ರೈವರ್’ಅನ್ನು ರಿಜಿಸ್ಟರ್ ಮಾಡುತ್ತೇವೆ.
02:48 ನಂತರ ನಾವು ಡೇಟಾಬೇಸ್ ಗೆ ಕನೆಕ್ಷನ್ ಅನ್ನು ಕ್ರಿಯೇಟ್ ಮಾಡುತ್ತೇವೆ.
02:52 ನಂತರ, ನಾವು ‘Connection’ ಆಬ್ಜೆಕ್ಟ್ ನ ಮೇಲೆ ‘prepareStatement() ಮೆಥಡ್’ ಅನ್ನು ಎಕ್ಸಿಕ್ಯೂಟ್ ಮಾಡುತ್ತೇವೆ.
02:58 ‘Users ಟೇಬಲ್’ ನಿಂದ, ‘ಯೂಸರ್’ನ ವಿವರಗಳನ್ನು ಪಡೆಯಲು ನಾವು ‘ಕ್ವೆರಿ’ಯನ್ನು ಕೊಡುತ್ತೇವೆ.
03:03 ‘username’ ಹಾಗೂ ‘password’ ಗಳು, ಫಾರ್ಮ್ ನಲ್ಲಿ ನಮೂದಿಸದಂತೆಯೇ ಇವೆಯೋ ಎನ್ನುವುದನ್ನು ನಾವು ಪರೀಕ್ಷಿಸುತ್ತೇವೆ.
03:09 ಇಲ್ಲಿ, ಪ್ರಶ್ನಾರ್ಥಕ ಚಿಹ್ನೆಯು, ಡೇಟಾಬೇಸ್ ನಲ್ಲಿಯ ಪ್ರತಿಯೊಂದು ಫೀಲ್ಡ್ ಅನ್ನು ಸೂಚಿಸುತ್ತದೆ.
03:15 ಪ್ರಶ್ನಾರ್ಥಕ ಚಿಹ್ನೆಯ ಸ್ಥಾನದಲ್ಲಿ ವ್ಯಾಲ್ಯೂಗಳನ್ನು ಒದಗಿಸಲು, ನಾವು setString() ಮೆಥಡ್ ಅನ್ನು ಎಕ್ಸಿಕ್ಯೂಟ್ ಮಾಡುತ್ತೇವೆ.
03:22 ನಾವು ‘PreparedStatement’ ಆಬ್ಜೆಕ್ಟ್ ಅನ್ನು ಬಳಸಿ ಇದನ್ನು ಮಾಡುತ್ತೇವೆ.
03:26 ಆಮೇಲೆ, ನಾವು PreparedStatement ಆಬ್ಜೆಕ್ಟ್ ನ ಮೇಲೆ, executeQuery() ಮೆಥಡ್ ಅನ್ನು ಎಕ್ಸಿಕ್ಯೂಟ್ ಮಾಡುತ್ತೇವೆ.
03:33 ನಾವು ಫಲಿತಾಂಶವನ್ನು ‘Resultset’ ಆಬ್ಜೆಕ್ಟ್ ನಲ್ಲಿ ಸ್ಟೋರ್ ಮಾಡುತ್ತೇವೆ.
03:37 ಯಶಸ್ವಿಯಾದ ‘ಲಾಗ್-ಇನ್’ಗಾಗಿ, ನಾವು ‘successGreeting’ ಪೇಜನ್ನು ಪ್ರದರ್ಶಿಸುತ್ತೇವೆ.
03:43 ನಾವು ಇದಕ್ಕಾಗಿ, ‘RequestDispatcher’ ಇಂಟರ್ಫೇಸ್ ಅನ್ನು ಬಳಸುತ್ತೇವೆ.
03:48 ನಾವು ‘RequestDispatcher’ ಆಬ್ಜೆಕ್ಟ್ ಅನ್ನು ಪಡೆಯಲು, ‘request’ ನ ಮೇಲೆ ‘getRequestDispatcher()’ ಮೆಥಡ್ ಅನ್ನು ಬಳಸುತ್ತೇವೆ.
03:56 ಆಮೇಲೆ ನಾವು, ‘RequestDispatcher’ ಆಬ್ಜೆಕ್ಟ್ ನ ಮೇಲೆ, forward() ಮೆಥಡ್ ಅನ್ನು ಇನ್ವೋಕ್ ಮಾಡುತ್ತೇವೆ (ಬೇಡುತ್ತೇವೆ).
04:02 ಈ ರೀತಿಯಲ್ಲಿ, ನಾವು 'successGreeting ಡಾಟ್ jsp’ಗೆ ಫಾರ್ವರ್ಡ್ ಮಾಡುತ್ತೇವೆ.
04:07 ಈಗ ಸ್ಲೈಡ್ ಗಳಿಗೆ ಹಿಂತಿರುಗಿ.
04:10 ನಾವು ‘RequestDispatcher Interface’ ನ (ರಿಕ್ವೆಸ್ಟ್ ಡಿಸ್ಪ್ಯಾಚರ್ ಇಂಟರ್ಫೇಸ್) ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.
04:15 ಈ ಇಂಟರ್ಫೇಸ್, ‘request’ ಅನ್ನು ಇನ್ನೊಂದು ರಿಸೋರ್ಸ್ ಗೆ ಕಳಿಸುವ ಸೌಲಭ್ಯವನ್ನು ಒದಗಿಸುತ್ತದೆ.
04:22 ಈ ರಿಸೋರ್ಸ್, html, ಸರ್ವ್ಲೆಟ್ ಅಥವಾ JSP (ಜೆ-ಎಸ್-ಪಿ) ಆಗಿರಬಹುದು.
04:26 ಈಗ, ನಾವು IDE ಗೆ ಹಿಂದಿರುಗೋಣ.
04:29 ನಾವು 'successGreeting ಡಾಟ್ jsp’ ಗೆ ಬರೋಣ.
04:33 ಇಲ್ಲಿ, “You have successfully logged in” ಎಂಬ ‘ಸಕ್ಸೆಸ್ ಮೆಸೇಜ’ನ್ನು ನಾವು ತೋರಿಸುತ್ತಿದ್ದೇವೆ.
04:38 ಈಗ, ಬ್ರೌಸರ್ ಗೆ ಹಿಂದಿರುಗಿ.
04:41 ಡೇಟಾಬೇಸ್ ನಲ್ಲಿ ನಾವು ಸೇರಿಸದೇ ಇರುವ username ಮತ್ತು password ಗಳನ್ನು ಟೈಪ್ ಮಾಡಿ.
04:47 ಹಾಗಾಗಿ, ನಾನು username ಅನ್ನು “abc” ಮತ್ತು password ಅನ್ನು “abc123*” (a-b-c-1-2-3-ಸ್ಟಾರ್) ಎಂದು ಟೈಪ್ ಮಾಡುತ್ತೇನೆ.
04:56 ನಂತರ, ‘Sign In’ ನ ಮೇಲೆ ಕ್ಲಿಕ್ ಮಾಡಿ.
04:59 ನಾವು ‘ಎರರ್ ಮೆಸೇಜ’ನ್ನು ಅದೇ ಪೇಜ್ ನ ಮೇಲೆ ಪಡೆಯುತ್ತೇವೆ ಎಂಬುದನ್ನು ನೋಡಬಹುದು.
05:03 “Please correct the following errors!!! Invalid username or password.”
05:09 ಈಗ, ನಾವು ಇದಕ್ಕಾಗಿ ‘ಕೋಡ್’ಅನ್ನು ನೋಡೋಣ.
05:12 ಆದ್ದರಿಂದ, IDE ಗೆ ಹಿಂದಿರುಗಿ.
05:14 ‘GreetingServlet ಡಾಟ್ java’ ಗೆ ಹೋಗಿ.
05:17 ಒಂದುವೇಳೆ, ವ್ಯಾಲಿಡೇಶನ್ ವಿಫಲವಾದರೆ, ಆಗ ನಾವು ‘ಎರರ್ ಮೆಸೇಜ’ನ್ನು ತೋರಿಸಬೇಕು.
05:22 ಮೊದಲು, ನಾವು errorMsgs ನ ಒಂದು ಲಿಸ್ಟನ್ನು ‘ಇನಿಶಿಯಲೈಸ್’ ಮಾಡಿದ್ದೇವೆ.
05:27 ನಾವು setAttribute() ಮೆಥಡ್ ಅನ್ನು ಬಳಸಿ, request ನ ಸ್ಕೋಪ್ ನಲ್ಲಿ ‘errorMsgs’ ಎಂಬ ವೇರಿಯೆಬಲ್ ಅನ್ನು ಸೆಟ್ ಮಾಡುತ್ತೇವೆ.
05:35 ಇಲ್ಲಿ, errorMsgs ಎನ್ನುವುದು ‘ಅಟ್ರಿಬ್ಯೂಟ್’ ನ ಹೆಸರು ಆಗಿದೆ.
05:39 ನಾವು ‘id’ ಎನ್ನುವ ಸ್ಟ್ರಿಂಗ್ ವೇರಿಯೆಬಲ್ ಅನ್ನು, ‘null’ ಗೆ ಇನಿಶಿಯಲೈಸ್ ಮಾಡಿದ್ದೇವೆ.
05:44 ಆಮೇಲೆ, ಡೇಟಾಬೇಸ್ ನಲ್ಲಿ ಯೂಸರ್,ಇರುವನೇ ಎಂದು ನಾವು ಪರಿಶೀಲಿಸುತ್ತೇವೆ.
05:48 ಒಂದುವೇಳೆ ಇದ್ದರೆ, ನಾವು ವ್ಯಾಲ್ಯೂವನ್ನು ‘id’ ಎಂಬ ವೇರಿಯೆಬಲ್ ನಲ್ಲಿ ಸ್ಟೋರ್ ಮಾಡುತ್ತೇವೆ.
05:53 ಇಲ್ಲದಿದ್ದರೆ, “Invalid username or password” ಎನ್ನುವ ‘ಎರರ್’ ಅನ್ನು, ‘errorMsgs ಲಿಸ್ಟ್’ ಗೆ ನಾವು ಸೇರಿಸುತ್ತೇವೆ.
06:00 ಒಂದುವೇಳೆ ‘errorMsgs’ ಲಿಸ್ಟ್, ಖಾಲಿ ಇಲ್ಲದಿದ್ದರೆ, ನಾವು ‘ಎರರ್-ಮೆಸೇಜ್’ ಗಳನ್ನು 'index ಡಾಟ್ jsp’ ಯ ಮೇಲೆ ತೋರಿಸುತ್ತೇವೆ.
06:09 ಆದ್ದರಿಂದ, ನಾವು 'index ಡಾಟ್ jsp’ಗೆ ರಿ-ಡೈರೆಕ್ಟ್ ಮಾಡಬೇಕು.
06:13 ‘RequestDispatcher’ ಅನ್ನು (ರಿಕ್ವೆಸ್ಟ್-ಡಿಸ್ಪ್ಯಾಚರ್) ಬಳಸಿ, ಬೇರೊಂದು ಪೇಜ್ ಗೆ ಹೇಗೆ ರಿಡೈರೆಕ್ಟ್ ಮಾಡುವುದೆಂದು ನಾವು ಈಗಾಗಲೇ ನೋಡಿದ್ದೇವೆ.
06:20 ‘exception’ ನ ಸನ್ನಿವೇಶಗಳನ್ನು ನಿಭಾಯಿಸಲು, ಈ ಕೋಡನ್ನು ನಾವು ‘try catch’ (ಟ್ರೈ-ಕ್ಯಾಚ್) ಬ್ಲಾಕ್ ನ ಒಳಗೆ ಸೇರಿಸಿದ್ದೇವೆ ಎಂದು ಗಮನಿಸಿ.
06:27 ಈಗ 'index ಡಾಟ್ jsp’ಯಲ್ಲಿ, ‘errorMsgs’ ಎಂಬ ವೇರಿಯೆಬಲ್ ಅನ್ನು ಹೇಗೆ ತರುವುದೆಂದು ನಾವು ನೋಡುವೆವು.
06:34 ಮೊದಲು, ನಾವು errorMsgs ಎನ್ನುವ ಅಟ್ರಿಬ್ಯೂಟ್ ನ ವ್ಯಾಲ್ಯೂವನ್ನು ಪಡೆದುಕೊಳ್ಳುತ್ತೇವೆ.
06:38 ‘request’ ನ ಮೇಲೆ, ‘getAttribute() ಮೆಥಡ್’ ಅನ್ನು ಬಳಸಿ ಇದನ್ನು ಮಾಡಲಾಗುವುದು.
06:44 ನಾವು, ‘ಓಪನಿಂಗ್ ಟ್ಯಾಗ್’- ‘ಲೆಸ್ ದ್ಯಾನ್’ ಚಿಹ್ನೆ ಪರ್ಸೆಂಟೇಜ್ ಚಿಹ್ನೆ (<%) ಮತ್ತು ‘ಕ್ಲೋಸಿಂಗ್ ಟ್ಯಾಗ್’- ಪರ್ಸೆಂಟೇಜ್ ಚಿಹ್ನೆ ‘ಗ್ರೇಟರ್ ದ್ಯಾನ್’ ಚಿಹ್ನೆ (%>), ಇವುಗಳ ಒಳಗಡೆ ಜಾವಾ (Java) ಕೋಡನ್ನು ಸೇರಿಸಿದ್ದೇವೆ ಎನ್ನುವುದನ್ನು ಗಮನಿಸಿ.
06:57 ‘ಕೋಡ್’ನ ಈ ಬ್ಲಾಕ್ ಅನ್ನು ‘ಸ್ಕ್ರಿಪ್ಟ್ಲೆಟ್’ (scriptlet) ಎಂದು ಕರೆಯುತ್ತಾರೆ.
07:02 ಇದು ಜಾವಾ ಕೋಡನ್ನು ಒಳಗೊಂಡಿದೆ ಹಾಗೂ ಪ್ರತಿಯೊಂದು ಬಾರಿ JSP ಯನ್ನು ಇನ್ವೋಕ್ ಮಾಡಿದಾಗ, ಇದನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ.
07:08 ‘errorMsgs’ ನ ವ್ಯಾಲ್ಯೂ, null ಆಗಿರದಿದ್ದರೆ ಆಗ ನಾವು ಈ ಮೆಸೇಜನ್ನು ಪ್ರದರ್ಶಿಸುತ್ತೇವೆ.
07:15 “Please correct the following errors!!!!”
07:18 ನಂತರ errorMsgs ಲಿಸ್ಟ್ ನ ಮೂಲಕ ನಾವು ‘ಇಟರೇಟ್’ ಮಾಡುತ್ತೇವೆ.
07:23 ಆಮೇಲೆ ನಾವು ‘ಎರರ್-ಮೆಸೇಜ್’ ಗಳನ್ನು ಒಂದು ಲಿಸ್ಟ್ ನಂತೆ ತೋರಿಸುತ್ತೇವೆ.
07:27 'index ಡಾಟ್ jsp’ಯ ಮೇಲೆ, ‘ಎರರ್-ಮೆಸೇಜ್’ಗಳನ್ನು ನಾವು ಈ ರೀತಿಯಾಗಿ ತೋರಿಸುತ್ತೇವೆ.
07:32 ಡೇಟಾಬೇಸ್ ನಲ್ಲಿ ‘ಯೂಸರ್’ ಅನ್ನು ಹೇಗೆ ಸೇರಿಸುವುದೆಂದು ಈಗ ನಾವು ನೋಡೋಣ.
07:37 ಡೇಟಾಬೇಸ್ ನಲ್ಲಿ ಒಂದು ‘ಯೂಸರ್’ಅನ್ನು ಸೇರಿಸುವ ಮೊದಲು, ನಾವು ‘User table’ ಗಾಗಿ ಒಂದು ಮಾಡೆಲ್ ಅನ್ನು ತಯಾರಿಸಬೇಕು.
07:44 ಈಗ ನಾವು ‘ಮಾಡೆಲ್’ ಎಂದರೆ ಏನು ಎನ್ನುವುದನ್ನು ನೋಡೋಣ.
07:48 ‘ಮಾಡೆಲ್’ (model): ‘ಸಾಫ್ಟ್ವೇರ್ ಅಪ್ಲಿಕೇಶನ್’ನಲ್ಲಿ ಆಧಾರವಾಗಿರುವ ಡೇಟಾದ ‘ಲಾಜಿಕಲ್ ಸ್ಟ್ರಕ್ಚರ್’ ಅನ್ನು ಮತ್ತು
07:55 * ‘ಅಟ್ರಿಬ್ಯೂಟ್ಸ್’ ಗಳೊಂದಿಗೆ ‘ಜಾವಾ ಕ್ಲಾಸ್’ ಅನ್ನು ಹಾಗೂ ಅವುಗಳಿಗಾಗಿ getters (ಗೆಟ್ಟರ್ಸ್) ಮತ್ತು setters (ಸೆಟ್ಟರ್ಸ್) ಗಳನ್ನು ಪ್ರತಿನಿಧಿಸುತ್ತದೆ.
08:00 ಈ ರೀತಿಯಲ್ಲಿ, ಪ್ರತ್ಯೇಕ ಅಟ್ರಿಬ್ಯೂಟ್ ಗೆ ಬದಲಾಗಿ, ‘ಮಾಡೆಲ್’ಅನ್ನು ನಾವು ಪೂರ್ತಿಯಾಗಿ ಪರಿಗಣಿಸಬಹುದು.
08:07 ಈಗ, ‘Netbeans IDE’ ಗೆ ಹಿಂದಿರುಗಿ.
08:11 'User ಡಾಟ್ java’ ಎಂಬ ಮಾಡೆಲ್ ಅನ್ನು ನಾನು ಈಗಾಗಲೇ ತಯಾರಿಸಿದ್ದೇನೆ.
08:16 ನಾವು ಈ ‘ಜಾವಾ class’ ಅನ್ನು, “org ಡಾಟ್ spokentutorial ಡಾಟ್ model” ಎಂಬ ಪ್ಯಾಕೇಜ್ ನ ಒಳಗೆ ಕ್ರಿಯೇಟ್ ಮಾಡಿದ್ದೇವೆ ಎಂಬುದನ್ನು ಗಮನಿಸಿ.
08:24 ನಾವು firstName, surname, age, gender, email, username, password ಎಂಬ ‘ಅಟ್ರಿಬ್ಯೂಟ್’ ಗಳನ್ನು ಹೊಂದಿದ್ದೇವೆ.
08:33 ನಾವು ಅವುಗಳನ್ನು ಖಾಲಿ ವ್ಯಾಲ್ಯೂಗಳಿಗೆ ‘ಇನಿಶಿಯಲೈಜ್’ (initialize) ಮಾಡಿದ್ದೇವೆ.
08:37 ಆಮೇಲೆ, ನಾವು ‘ಪ್ಯಾರಾಮೀಟರೈಜ್ಡ್ ಕನ್ಸ್ಟ್ರಕ್ಟರ್’ ಅನ್ನು (parameterized constructor) ಹೊಂದಿದ್ದೇವೆ.
08:41 ನಾವು ‘ಡೀಫಾಲ್ಟ್ ಕನ್ಸ್ಟ್ರಕ್ಟರ್’ ಅನ್ನು ಸಹ ಹೊಂದಿದ್ದೇವೆ.
08:44 ‘getFirstName()’ ಎಂಬ ಮೆಥಡ್ ಅನ್ನು ನಾವು ವ್ಯಾಖ್ಯಾನಿಸುತ್ತೇವೆ (define).
08:47 ‘setFirstName()’ ಎಂಬ ಮೆಥಡ್ ಅನ್ನು ಸಹ ನಾವು ವ್ಯಾಖ್ಯಾನಿಸುತ್ತೇವೆ.
08:51 ಹೀಗೆಯೇ, ನಾವು ಪ್ರತಿಯೊಂದು ಅಟ್ರಿಬ್ಯೂಟ್ ಗಾಗಿ ‘set’ ಮತ್ತು ‘get’ ಮೆಥಡ್ ಗಳನ್ನು ವ್ಯಾಖ್ಯಾನಿಸುತ್ತೇವೆ.
08:57 ಬ್ರೌಸರ್ ಗೆ ಹಿಂದಿರುಗಿ.
08:59 ಈಗ, ರಿಜಿಸ್ಟರ್ ಮಾಡಲು, ‘here’ ಎಂಬ ಲಿಂಕ್ ನ ಮೇಲೆ ನಾವು ಕ್ಲಿಕ್ ಮಾಡೋಣ.
09:03 ‘ರಿಜಿಸ್ಟ್ರೇಶನ್ ಪೇಜ್’ನಲ್ಲಿ, ಎಲ್ಲ ಫೀಲ್ಡ್ ಗಳಲ್ಲಿ ಟೈಪ್ ಮಾಡಿ.
09:07 ಆಮೇಲೆ ‘Add User’ ನ ಮೇಲೆ ಕ್ಲಿಕ್ ಮಾಡಿ.
09:10 ನಾವು ‘Add User Success’ ಎಂಬ ಪೇಜನ್ನು ಪಡೆಯುತ್ತೇವೆ.
09:14 ನಮಗೆ “Your request to add harshita was successful” ಎಂಬ ಮೆಸೇಜ್ (ಸಂದೇಶ) ಸಿಗುತ್ತದೆ.
09:20 ಇಲ್ಲಿ, “harshita” ಎನ್ನುವುದು ನಾವು ಕೊಟ್ಟಿರುವ username ಆಗಿತ್ತು.
09:24 ನಾವು ಈಗ ಇದನ್ನು ಹೇಗೆ ಮಾಡಲಾಗಿದೆ ಎನ್ನುವುದನ್ನು ನೋಡೋಣ.
09:28 ಆದ್ದರಿಂದ, IDE ಗೆ ಬದಲಾಯಿಸಿ.
09:30 ‘AddUserServlet.Java’ ಗೆ (ಆಡ್ ಯೂಸರ್ ಸರ್ವ್ಲೆಟ್ ಡಾಟ್ ಜಾವಾ) ಹೋಗಿ.
09:35 ಈ ಹಂತಗಳು, 'GreetingServlet ಡಾಟ್java'ದಲ್ಲಿ ನಾವು ಅನುಸರಿಸಿದಂತೆಯೇ ಆಗಿವೆ.
09:40 ಮೊದಲು, ನಾವು ‘getParameter()’ ಮೆಥಡ್ ಅನ್ನು ಬಳಸಿ ಫಾರ್ಮ್ ನ (form) ಪ್ಯಾರಾಮೀಟರ್ ಗಳನ್ನು ಪಡೆಯುತ್ತೇವೆ.
09:46 User ಮಾಡೆಲ್ ನ ‘ಇನ್ಸ್ಟನ್ಸ್’ (ಉದಾಹರಣೆ) ಎಂದು, ಪ್ರತ್ಯೇಕ ಅಟ್ರಿಬ್ಯೂಟ್ ಗಳೊಂದಿಗೆ ವೇರಿಯೆಬಲ್ user ಅನ್ನು ನಾವು ಇನಿಶಿಯಲೈಜ್ ಮಾಡುತ್ತೇವೆ.
09:53 ನಾವು setAttribute() ಮೆಥಡ್ ಅನ್ನು ಬಳಸಿ, ವೇರಿಯೆಬಲ್ user ಅನ್ನು, request ನ ಸ್ಕೋಪ್ ನಲ್ಲಿ, ಸೆಟ್ ಮಾಡುತ್ತೇವೆ.
10:01 ಫಾರ್ಮನ್ನು ತುಂಬುವಾಗ ‘ಎರರ್’ಗಳು ಇರದಿದ್ದರೆ, Users ಎಂಬ ಟೇಬಲ್ ನಲ್ಲಿ ವ್ಯಾಲ್ಯೂಗಳನ್ನು ಸೇರಿಸಲು, ನಾವು ಕ್ವೆರಿಯನ್ನು ಎಕ್ಸಿಕ್ಯೂಟ್ ಮಾಡುತ್ತೇವೆ.
10:10 ಆಮೇಲೆ ನಾವು ‘successUser’ ಪೇಜ್ ಗೆ ಕಳಿಸುತ್ತೇವೆ (ಫಾರ್ವರ್ಡ್).
10:15 ಈಗ, ನಾವು ‘successUser ಡಾಟ್ jsp’ಗೆ ಬರೋಣ.
10:19 ಮೊದಲು, ನಾವು ‘User ಡಾಟ್ java’ ಅನ್ನು ಇಂಪೋರ್ಟ್ ಮಾಡಿದ್ದೇವೆ.
10:24 ‘JSP’ ಯಲ್ಲಿ, ಕೋಡ್ ನ ಈ ಸಾಲನ್ನು ‘ಡೈರೆಕ್ಟಿವ್’ ಎಂದು ಕರೆಯುತ್ತಾರೆ.
10:28 ‘JSP ಡೈರೆಕ್ಟಿವ್’, ಓಪನಿಂಗ್ ಟ್ಯಾಗ್ ನೊಂದಿಗೆ- ‘ಲೆಸ್ ದ್ಯಾನ್ ಚಿಹ್ನೆ (<) ಶೇಕಡಾ ಚಿಹ್ನೆ (%) ಹಾಗೂ ಆಟ್-ದ- ರೇಟ್ ಚಿಹ್ನೆ (@)’ ಆರಂಭವಾಗುತ್ತದೆ ಮತ್ತು ಕ್ಲೋಸಿಂಗ್ ಟ್ಯಾಗ್ ನೊಂದಿಗೆ – ‘ಶೇಕಡಾ ಚಿಹ್ನೆ (%) ಹಾಗೂ ಗ್ರೇಟರ್ ದ್ಯಾನ್ ಚಿಹ್ನೆ (>)’ ಕೊನೆಗೊಳ್ಳುತ್ತದೆ.
10:42 ಇದು, ‘ಪೇಜ್ ಡಿರೆಕ್ಟಿವ್’ ಆಗಿದೆ.
10:45 ಈ ‘ಪೇಜ್ ಡಿರೆಕ್ಟಿವ್’, ಇಂಪೋರ್ಟ್ ಮಾಡಿಕೊಂಡ ಎಲ್ಲ ಪ್ಯಾಕೇಜ್ ಗಳ ಲಿಸ್ಟನ್ನು ಒಳಗೊಂಡಿದೆ.
10:50 ‘user’ ಎಂಬ ಅಟ್ರಿಬ್ಯೂಟ್ ನ ವ್ಯಾಲ್ಯೂವನ್ನು ನಾವು ಪಡೆಯುತ್ತೇವೆ ಮತ್ತು ಅದನ್ನು User ಆಬ್ಜೆಕ್ಟ್ ಎಂದು ಸ್ಟೋರ್ ಮಾಡುತ್ತೇವೆ.
10:57 ಆಮೇಲೆ, ಇಲ್ಲಿ ‘ಸಕ್ಸೆಸ್ ಮೆಸೇಜ್’ ಇದೆ.
11:00 ಇಲ್ಲಿ, ನಾವು Username ಅನ್ನು ಪಡೆದುಕೊಂಡಿದ್ದೇವೆ.
11:04 ನಾವು request ಆಬ್ಜೆಕ್ಟ್ ನ ಮೇಲೆ, getUsername() ಮೆಥಡ್ ಅನ್ನು ಉಪಯೋಗಿಸಿದ್ದೇವೆ.
11:09 ‘ಸ್ಕ್ರಿಪ್ಟ್ಲೆಟ್ ಟ್ಯಾಗ್’ ಗಳನ್ನು ಬಳಸಿ ನಾವು ಇದನ್ನು ಮಾಡಿದ್ದೇವೆ.
11:12 ಈಗ, ನಾವು ಬ್ರೌಸರ್ ಗೆ ಹಿಂತಿರುಗೋಣ.
11:15 ಡೇಟಾಬೇಸ್ ನಲ್ಲಿ ಈಗಾಗಲೇ ಇರುವ ಯೂಸರನ್ನು ಸೇರಿಸಲು ನಾವು ಪ್ರಯತ್ನಿಸೋಣ.
11:20 ಆದ್ದರಿಂದ, ನಾನು ಇನ್ನೊಮ್ಮೆ harshita ಳನ್ನು ಸೇರಿಸಲು ಪ್ರಯತ್ನಿಸುವೆನು.
11:24 ನಮಗೆ “Please correct the following errors!!!! Duplicate entry 'harshita' for key ‘UserName’ ” ಎಂಬ ಎರರ್ ಮೆಸೇಜ್ ಸಿಗುವುದನ್ನು ನಾವು ನೋಡಬಹುದು.
11:33 ಒಂದು ಯೂಸರ್ ಗಾಗಿ ನಾವು ಈಗ ಮತ್ತೊಮ್ಮೆ ರಿಜಿಸ್ಟರ್ ಮಾಡೋಣ.
11:37 ಇಲ್ಲಿ, ಈಗ ನಾನು ಫಾರ್ಮನ್ನು ತುಂಬಿದ್ದೇನೆ.
11:40 Age ಫೀಲ್ಡ್ ನಲ್ಲಿ ನಾನು ಒಂದು ತಪ್ಪನ್ನು ಸೃಷ್ಟಿಸಿದ್ದೇನೆ.
11:44 ಸರಿಯಾದ ಸಂಖ್ಯೆಗೆ ಬದಲಾಗಿ ನಾನು ‘ab’ ಎಂದು ಟೈಪ್ ಮಾಡಿದ್ದೇನೆ.
11:48 ಈಗ, ‘Add User’ ನ ಮೇಲೆ ಕ್ಲಿಕ್ ಮಾಡಿ.
11:51 ನಮಗೆ “The age must be a positive integer” ಎಂಬ ಎರರ್-ಮೆಸೇಜ್ ಸಿಗುವುದನ್ನು ನಾವು ನೋಡುತ್ತೇವೆ.
11:57 ಈಗ, ಇದನ್ನು ಹೇಗೆ ಮಾಡಲಾಗಿದೆ ಎನ್ನುವುದನ್ನು ನಾವು ನೋಡೋಣ.
12:00 IDE ಗೆ ಬದಲಾಯಿಸಿ.
12:03 ‘AddUserServlet ಡಾಟ್ java’ (ಆಡ್ ಯೂಸರ್ ಸರ್ವ್ಲೆಟ್ ಡಾಟ್ ಜಾವಾ) ಅನ್ನು ಓಪನ್ ಮಾಡಿ.
12:08 ಇಲ್ಲಿಯೂ ಸಹ, ‘errorMsgs’ ಗಾಗಿ ನಾವು ಒಂದು ಲಿಸ್ಟ್ ಅನ್ನು ತಯಾರಿಸಿದ್ದೇವೆ.
12:11 ಆಮೇಲೆ, ನಾವು setAttribute() ಮೆಥಡ್ ಅನ್ನು ಬಳಸಿ, request ನ ಸ್ಕೋಪ್ ನಲ್ಲಿ errorMsgs ಎಂಬ ವೇರಿಯೆಬಲ್ ಅನ್ನು ಸೆಟ್ ಮಾಡುತ್ತೇವೆ.
12:18 ನಂತರ, ನಾವು integer ಟೈಪ್ ನ ‘ageUser’ ಅನ್ನು ಡಿಕ್ಲೇರ್ ಮಾಡಿ, ಅದನ್ನು -1 ಗೆ ‘ಇನಿಶಿಯಲೈಸ್’ ಮಾಡಿದ್ದೇವೆ.
12:26 ‘try catch’ ಬ್ಲಾಕ್ ನ ಒಳಗಡೆ, ನಾವು parseInt() (ಪಾರ್ಸ್ ಇಂಟ್) ಮೆಥಡ್ ಅನ್ನು ಬಳಸಿದ್ದೇವೆ.
12:31 ಒಂದು ಸಂಖ್ಯೆಯನ್ನು ಸ್ಟ್ರಿಂಗ್ ನ ರೂಪದಲ್ಲಿ ಇನ್ಪುಟ್ ಎಂದು ಕೊಟ್ಟಾಗ, ಇದು ಇಂಟಿಜರ್ ಅನ್ನು (ಪೂರ್ಣಸಂಖ್ಯೆ) ಹಿಂದಿರುಗಿಸುವುದು.
12:37 ಹೀಗಾಗಿ, age ಫೀಲ್ಡ್, ಸರಿಯಾದ ಪೂರ್ಣಸಂಖ್ಯೆಯನ್ನು ಹೊಂದಿರುವಂತೆ ಇಲ್ಲಿ ನಾವು ವ್ಯಾಲಿಡೇಟ್ ಮಾಡುತ್ತೇವೆ.
12:44 ಒಂದುವೇಳೆ ವ್ಯಾಲಿಡೇಶನ್ ವಿಫಲವಾದರೆ, ಆಗ ನಾವು errorMsgs ಲಿಸ್ಟ್ ಗೆ ‘ಎರರ್ ಮೆಸೇಜ’ನ್ನು ಸೇರಿಸುತ್ತೇವೆ.
12:51 “The age must be a positive integer”.
12:54 ಹೀಗೆಯೇ, ಉಳಿದೆಲ್ಲ ಫೀಲ್ಡ್ ಗಳು ಸಹ ಸರಿಯಾದ ಡೇಟಾ ಅನ್ನು ಹೊಂದಿರುವಂತೆ ನಾವು ವ್ಯಾಲಿಡೇಟ್ ಮಾಡಬೇಕು.
13:01 ಒಂದುವೇಳೆ ‘errorMsgs ಲಿಸ್ಟ್’ ಖಾಲಿ ಇರದಿದ್ದರೆ, ಆಗ ನಾವು errorMsgs ಅನ್ನು ‘addUser ಡಾಟ್ jsp’ಯ ಮೇಲೆಯೇ ತೋರಿಸುತ್ತೇವೆ.
13:09 RequestDispatcher ಅನ್ನು ಬಳಸಿ, ಇದನ್ನು ಹೇಗೆ ಮಾಡುವುದೆಂದು ನಾವು ಈಗಾಗಲೇ ನೋಡಿದ್ದೇವೆ.
13:15 ಈಗ, ನಾವು ‘addUser ಡಾಟ್ jsp’ ಗೆ ಬರೋಣ.
13:19 ಇಲ್ಲಿ ಸಹ, ಮೊದಲು ನಾವು ‘User ಡಾಟ್ java’ ಅನ್ನು ಇಂಪೋರ್ಟ್ ಮಾಡಿದ್ದೇವೆ.
13:24 ‘ಸ್ಕ್ರಿಪ್ಟ್ಲೆಟ್ ಟ್ಯಾಗ್’ಗಳ ಒಳಗಡೆ, User ಟೈಪ್ ನ ಒಂದು ಆಬ್ಜೆಕ್ಟ್ ಅನ್ನು ನಾವು ಕ್ರಿಯೇಟ್ ಮಾಡಿದ್ದೇವೆ.
13:31 ನಂತರ, ನಾವು getAttribute() ಮೆಥಡ್ ಅನ್ನು ಬಳಸಿ, errorMsgs ಎಂಬ ಅಟ್ರಿಬ್ಯೂಟ್ ನ ವ್ಯಾಲ್ಯೂವನ್ನು ಪಡೆಯುತ್ತೇವೆ.
13:38 ಈ ವ್ಯಾಲ್ಯೂ, ‘null’ ಆಗಿದೆಯೇ ಎಂದು ನಾವು ಪರೀಕ್ಷಿಸುತ್ತೇವೆ.
13:43 ಅದು ‘null’ (ನಲ್) ಆಗಿರದಿದ್ದರೆ, ಆಗ ನಾವು ‘index ಡಾಟ್ jsp’ಗೆ ಮಾಡಿದಂತೆಯೇ ‘ಎರರ್ ಮೆಸೇಜ್’ಅನ್ನು ತೋರಿಸುತ್ತೇವೆ.
13:51 ಇಲ್ಲದಿದ್ದರೆ, ನಾವು ‘User ಮಾಡೆಲ್’ಅನ್ನು ಬಳಸಿ, ‘request’ ನಿಂದ ‘user’ ಎಂಬ ಅಟ್ರಿಬ್ಯೂಟ್ ನ ವ್ಯಾಲ್ಯೂವನ್ನು ಪಡೆಯುವೆವು.
13:59 ಆಮೇಲೆ, ಇಲ್ಲಿ ‘ಫಾರ್ಮ್’ ಇದೆ.
14:01 ಈ ಫಾರ್ಮ್ ಟ್ಯಾಗ್, action ಅನ್ನು AddUserServlet ಎಂದು ಹಾಗೂ method ಅನ್ನು POST ಎಂದು ಹೊಂದಿದೆ.
14:07 ಮೊದಲನೆಯ ಫೀಲ್ಡ್, First Name ಆಗಿದ್ದು ‘input type’ಅನ್ನು “text” ಎಂದು, ‘name’,ಅನ್ನು “firstName” ಎಂದು ಮತ್ತು ‘value’ಅನ್ನು “user ಡಾಟ್ getFirstName” ಎಂದು ಪಡೆದಿದೆ.
14:18 ಇಲ್ಲಿ, ನಾವು ‘firstName’ ನ ವ್ಯಾಲ್ಯೂವನ್ನು ಖಾಲಿ ಸ್ಟ್ರಿಂಗ್ ಗೆ ‘ಇನಿಶಿಯಲೈಸ್’ ಮಾಡುತ್ತಿದ್ದೇವೆ.
14:24 ಹೀಗೆಯೇ, ಉಳಿದ ಫೀಲ್ಡ್ ಗಳಿಗಾಗಿ ನೀವು ಮಾಡಬೇಕು.
14:28 ನಾವು ಒಂದು ‘submit ಬಟನ್’ಅನ್ನು ಸಹ ಹೊಂದಿದ್ದೇವೆ ಮತ್ತು ಇದರ ವ್ಯಾಲ್ಯೂ ‘Add User’ ಎಂದು ಇರುತ್ತದೆ.
14:33 ‘addUser.jsp’ ಯಲ್ಲಿನ ಫೀಲ್ಡ್ ಗಳನ್ನು ನಾವು ಈ ರೀತಿಯಾಗಿ ವ್ಯಾಲಿಡೇಟ್ ಮಾಡುತ್ತೇವೆ.
14:38 ‘addUser’ ಪೇಜ್ ನ ಮೇಲೆ ನೀವು ವಿವಿಧ ‘ಎರರ್’ಗಳನ್ನು ಪ್ರಯತ್ನಿಸಬಹುದು.
14:42 ಈಗ, ಯೂಸರ್ “harshita”ಳನ್ನು ಡೇಟಾಬೇಸ್ ಗೆ ಸೇರಿಸಲಾಗಿದೆಯೇ ಎನ್ನುವುದನ್ನು ನಾವು ನೋಡೋಣ.
14:49 ಆದ್ದರಿಂದ Users ಟೇಬಲ್ ಗೆ ಹಿಂತಿರುಗಿ. ‘harshita’ ಳನ್ನು ಡೇಟಾಬೇಸ್ ಗೆ ಸೇರಿಸಲಾಗಿದೆ ಎಂದು ನಾವು ನೋಡಬಹುದು.
14:56 ಈ ಟ್ಯುಟೋರಿಯಲ್ ನಲ್ಲಿ, ನಾವು -
14:58 ‘ಡೇಟಾಬೇಸ್ ಕನೆಕ್ಟಿವಿಟೀ’ ಮತ್ತು
15:00 ‘ಫೀಲ್ಡ್ ವ್ಯಾಲಿಡೇಶನ್’ಗಳನ್ನು ಕಲಿತಿದ್ದೇವೆ.
15:02 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ.

http://spoken-tutorial.org/What_is_a_Spoken_Tutorial

15:07 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
15:11 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
15:15 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು:
15:17 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
15:20 ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
15:23 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.

contact@spoken-tutorial.org

15:29 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
15:32 ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ.
15:38 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro
15:48 ಒಂದು ಪ್ರಮುಖ ಸಾಫ್ಟ್ವೇರ್ MNC, ತಮ್ಮ Corporate Social Responsibility programme ನ ಮೂಲಕ ಈ Library Management System ಅನ್ನು ಕೊಡುಗೆಯಾಗಿ ನೀಡಿದ್ದಾರೆ.
15:57 ಈ ಸ್ಪೋಕನ್ ಟ್ಯುಟೋರಿಯಲ್ ಗಾಗಿ ಅವರು ವಿಷಯವನ್ನು ಸಹ ಊರ್ಜಿತಗೊಳಿಸಿದ್ದಾರೆ (validated).
16:02 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ .

ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal