Introduction-to-Computers/C2/Getting-to-know-computers/Kannada

From Script | Spoken-Tutorial
Revision as of 10:58, 14 December 2015 by Vasudeva ahitanal (Talk | contribs)

Jump to: navigation, search
Time Narration
Getting to know computers ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ (Spoken Tutorial) ನಿಮಗೆ ಸ್ವಾಗತ.
ಈ ಟ್ಯುಟೋರಿಯಲ್ ನಲ್ಲಿ, ನಾವು
ಕಂಪ್ಯೂಟರ್ ನ ವಿವಿಧ ಘಟಕಗಳ ಬಗ್ಗೆ ಕಲಿಯುವೆವು.
ನಾವು ವಿವಿಧ ಘಟಕಗಳನ್ನು ಸೇರಿಸಲು ಸಹ ಕಲಿಯುವೆವು.
ಸಾಮಾನ್ಯವಾಗಿ, ಕಂಪ್ಯೂಟರ್ಗಳಲ್ಲಿ ಎರಡು ವಿಧಗಳಿವೆ -
‘ಡೆಸ್ಕ್ಟಾಪ್’ ಅಥವಾ 'ಪರ್ಸನಲ್ ಕಂಪ್ಯೂಟರ್' ಮತ್ತು 'ಲ್ಯಾಪ್ಟಾಪ್'.
ಇತ್ತೀಚಿನ ದಿನಗಳಲ್ಲಿ, ‘ಚಿಕ್ಕದಾಗಿ 'ಟ್ಯಾಬ್ಸ್' ಎಂದು ಕರೆಯಲ್ಪಡುವ ಟ್ಯಾಬ್ಲೆಟ್ PC’ ಗಳು ಸಹ ಸಾಕಷ್ಟು ಜನಪ್ರಿಯವಾಗಿವೆ.
ಕಂಪ್ಯೂಟರ್ ನ ಕಾರ್ಯಗಳು -
'ಕಂಪ್ಯೂಟರ್', ಅದರ ಗಾತ್ರವನ್ನು ಲೆಕ್ಕಿಸದೆ ಐದು ಮುಖ್ಯ ಕಾರ್ಯಗಳನ್ನು ಮಾಡುತ್ತದೆ -
* ಅದು 'ಡೇಟಾ' ಅಥವಾ 'ಇನ್ಸ್ಟ್ರಕ್ಶನ್'ಗಳನ್ನು 'ಇನ್ಪುಟ್' ಮುಖಾಂತರ ತೆಗೆದುಕೊಳ್ಳುತ್ತದೆ.
* 'ಡೇಟಾ'ವನ್ನು ಬಳಕೆದಾರನಿಗೆ (ಯೂಸರ್) ಬೇಕಾದಂತೆ ಪರಿಷ್ಕರಿಸುತ್ತದೆ.
* ಅದನ್ನು ಸಂಗ್ರಹಿಸುತ್ತದೆ.
* 'ಔಟ್ಪುಟ್'ನ ರೂಪದಲ್ಲಿ ಫಲಿತಾಂಶವನ್ನು ಕೊಡುತ್ತದೆ.
* 'ಕಂಪ್ಯೂಟರ್'ನ ಒಳಗಿನ ಎಲ್ಲ ಕಾರ್ಯಾಚರಣೆಯನ್ನು ನಿಯಂತ್ರಿಸುತ್ತದೆ.
'ಕಂಪ್ಯೂಟರ್'ನ ಮೂಲಭೂತ ಸಂಘಟನೆಯು, ಈ ‘ಬ್ಲಾಕ್ ಡೈಗ್ರಾಂ’ನಲ್ಲಿ ತೋರಿಸಿದಂತೆ ಇರುತ್ತದೆ.
'Input unit',
'Central Processing unit' ಹಾಗೂ
'Output unit'.
'ಇನ್ಪುಟ್ ಯುನಿಟ್',
'ಡೇಟಾ' ಮತ್ತು ಪ್ರೊಗ್ರಾಂಗಳನ್ನು 'ಕಂಪ್ಯೂಟರ್' ಸಿಸ್ಟಂನಲ್ಲಿ ಒಂದು ವ್ಯವಸ್ಥಿತ ರೀತಿಯಲ್ಲಿ ನಮೂದಿಸಲು (enter) ಸಹಾಯ ಮಾಡುತ್ತದೆ.
'ಕೀ ಬೋರ್ಡ್, ಮೌಸ್, ಕ್ಯಾಮೆರಾ' ಮತ್ತು 'ಸ್ಕ್ಯಾನರ್' ಇವುಗಳು ಕೆಲವು ಇನ್ಪುಟ್ ಸಾಧನಗಳಾಗಿವೆ.
'ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್' (Central Processing unit),
ಅಂಕಗಣಿತ ಮತ್ತು ಲಾಜಿಕಲ್ ಕ್ರಿಯೆಗಳನ್ನು (operations) ಮಾಡುತ್ತದೆ ಮತ್ತು
'ಡೇಟಾ' ಹಾಗೂ 'ಇನ್ಸ್ಟ್ರಕ್ಶನ್'ಗಳನ್ನು ಸಂಗ್ರಹಿಸುತ್ತದೆ (store).
ಸಾಮಾನ್ಯವಾಗಿ, 'ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್' ಅಥವಾ 'CPU' ಹೀಗೆ ಕಾಣುತ್ತದೆ.
ಯೂನಿಟ್ ನ ಮುಂದೆ ಹಾಗೂ ಹಿಂದೆ ಅನೇಕ 'ಪೋರ್ಟ್'ಗಳಿವೆ.
ಶೀಘ್ರದಲ್ಲಿಯೇ ನಾವು ಅವುಗಳ ಬಗ್ಗೆ ಕಲಿಯುವೆವು.
ಇದು 'ಡೇಟಾ' ಹಾಗೂ 'ಇನ್ಸ್ಟ್ರಕ್ಶನ್'ಗಳನ್ನು ತೆಗೆದುಕೊಳ್ಳುತ್ತದೆ, ಅವುಗಳನ್ನು ಪರಿಷ್ಕರಿಸುತ್ತದೆ ಮತ್ತು ಔಟ್ಪುಟ್ ಅಥವಾ ಫಲಿತಾಂಶವನ್ನು ಕೊಡುತ್ತದೆ.
ಈ ಕಾರ್ಯಾಚರಣೆಗಳನ್ನು (operations) ಮಾಡುವುದನ್ನು ‘ಪ್ರೊಸೆಸಿಂಗ್’ ಎಂದು ಕರೆಯಲಾಗುತ್ತದೆ.
ಆಮೇಲೆ ಔಟ್ಪುಟ್ ಅನ್ನು 'ಡೇಟಾ' ಹಾಗೂ 'ಇನ್ಸ್ಟ್ರಕ್ಶನ್'ಗಳ ಜೊತೆಗೆ ‘ಸ್ಟೋರೇಜ್ ಯೂನಿಟ್’ನಲ್ಲಿ ಸಂಗ್ರಹಿಸಲಾಗುತ್ತದೆ.
‘ಔಟ್ಪುಟ್ ಯೂನಿಟ್’ ಎಂಬ ಘಟಕವು, ಡೇಟಾದಿಂದ ಫಲಿತಾಂಶಗಳನ್ನು ಉತ್ಪಾದಿಸುವ ಪ್ರಕ್ರಿಯೆಯನ್ನು ಮಾಡುತ್ತದೆ.
'ಮಾನಿಟರ್' ಮತ್ತು 'ಪ್ರಿಂಟರ್'ಗಳು ಕೆಲವು ' ಔಟ್ಪುಟ್' ಸಾಧನಗಳಾಗಿವೆ.
ಸಾಮಾನ್ಯವಾಗಿ 'ಡೆಸ್ಕ್ಟಾಪ್ ಕಂಪ್ಯೂಟರ್', 4 ಮುಖ್ಯ ಘಟಕಗಳನ್ನು ಹೊಂದಿದೆ:
* 'Monitor' (ಮಾನಿಟರ್)
* 'CPU' (ಸಿ-ಪಿ-ಯು)
* 'Keyboard' (ಕೀ ಬೋರ್ಡ್) ಮತ್ತು
* 'ಮೌಸ್ ' (ಮೌಸ್).
'ಕ್ಯಾಮೆರಾ, ಪ್ರಿಂಟರ್' ಅಥವಾ 'ಸ್ಕ್ಯಾನರ್' ಗಳನ್ನು ಸಹ ಕಂಪ್ಯೂಟರ್ ಗೆ ಜೋಡಿಸಬಹುದು (connect).
ಇದು ಮಾನಿಟರ್ ಅಥವಾ ನಾವು ಕರೆಯುವಂತೆ 'ಕಂಪ್ಯೂಟರ್ ಸ್ಕ್ರೀನ್' ಆಗಿದೆ.
ಇದು 'TV ಪರದೆ'ಯ ಹಾಗೆ ಕಾಣುತ್ತದೆ.
ಇದು 'ಕಂಪ್ಯೂಟರ್ ನ 'ವಿಜುವಲ್ ಡಿಸ್ಪ್ಲೇ ಯೂನಿಟ್' ಆಗಿದೆ.
ಇದು ಕಂಪ್ಯೂಟರ್ ನ 'ಯೂಸರ್ ಇಂಟರ್ಫೇಸ್'ಅನ್ನು ತೋರಿಸುತ್ತದೆ.
ನಾವು ಕೀಬೋರ್ಡ್ ಮತ್ತು ಮೌಸ್ ಗಳನ್ನು ಬಳಸಿ, ವಿವಿಧ ಪ್ರೊಗ್ರಾಂಗಳನ್ನು ಓಪನ್ ಮಾಡಬಹುದು ಮತ್ತು ಕಂಪ್ಯೂಟರ್ ನೊಂದಿಗೆ ಪರಸ್ಪರ ವ್ಯವಹಾರ (interact) ಮಾಡಬಹುದು.
ಟೆಕ್ಸ್ಟ್, ಅಕ್ಷರಗಳು ಮತ್ತು ಇನ್ನಿತರ ‘ಕಮಾಂಡ್’ಗಳನ್ನು ಕಂಪ್ಯೂಟರ್ ನಲ್ಲಿ ಸೇರಿಸಲು (enter), ಕೀಬೋರ್ಡ್ ಅನ್ನು ವಿನ್ಯಾಸ ಮಾಡಲಾಗಿದೆ.
ಇದು ಕಂಪ್ಯೂಟರ್ ನ ಮೌಸ್ ಆಗಿದೆ.
ಸಾಮಾನ್ಯವಾಗಿ ಇದು, 2 (ಎರಡು) ಕ್ಲಿಕ್ ಮಾಡಬಲ್ಲ ಬಟನ್ ಗಳನ್ನು ಮತ್ತು ಮಧ್ಯದಲ್ಲಿ ಒಂದು ' ಸ್ಕ್ರೋಲ್' ಬಟನ್ ಅನ್ನು ಹೊಂದಿದೆ.
'ಲೆಫ್ಟ್ ಮೌಸ್ ಬಟನ್' (‘ಮೌಸ್’ನ ಎಡ ಗುಂಡಿ) ಅನ್ನು ಒತ್ತಿ, ಬಹುಮಟ್ಟಿಗೆ ಎಲ್ಲ ಕ್ರಿಯೆಗಳನ್ನು ಸಕ್ರಿಯಗೊಳಿಸಲಾಗುತ್ತದೆ.
'ರೈಟ್ ಮೌಸ್ ಬಟನ್' ಅನ್ನು ಒತ್ತಿ, ‘ಶಾರ್ಟ್ಕಟ್’ (shortcut) ನಂತಹ ಹೆಚ್ಚು ಸ್ಟಾಂಡರ್ಡ್ ಅಲ್ಲದ ಕ್ರಿಯೆಗಳನ್ನು ಸಕ್ರಿಯಗೊಳಿಸಲಾಗುತ್ತದೆ.
' ಸ್ಕ್ರೋಲ್ ಬಟನ್' ಅನ್ನು ಉರುಳಿಸಿ ಮೇಲೆ ಕೆಳಗೆ ಸ್ಕ್ರೋಲ್ ಮಾಡಲು 'ಮೌಸ್ ವ್ಹೀಲ್'ಅನ್ನು ಬಳಸಲಾಗುತ್ತದೆ.
ಕೀಬೋರ್ಡ್ ನ ಹೊರತಾಗಿ, 'ಕಂಪ್ಯೂಟರ್'ನೊಂದಿಗೆ ವ್ಯವಹರಿಸಲು 'ಕಂಪ್ಯೂಟರ್ ಮೌಸ್', ಒಂದು ಪರ್ಯಾಯವಾದ ವಿಧಾನವಾಗಿದೆ.
ಈಗ, 'CPU' ನ ವಿವಿಧ ಭಾಗಗಳನ್ನು ನಾವು ನೋಡೋಣ.
ಇಲ್ಲಿ, 'CPU' ನ ಮುಂಭಾಗದಲ್ಲಿ, ಒಂದು ಪ್ರಮುಖವಾದ ಬಟನ್ ಇದೆ. ಇದು 'POWER ON' (ಪಾವರ್ ಆನ್) ಸ್ವಿಚ್ ಆಗಿದೆ.
'ಕಂಪ್ಯೂಟರ್'ಅನ್ನು ‘ಆನ್’ (ON) ಮಾಡಲು , ಈ ಸ್ವಿಚ್ ಅನ್ನು ಒತ್ತುವುದು ಅವಶ್ಯವಾಗಿದೆ.
ಇಲ್ಲಿ ಒಂದು 'reset' (ರಿ-ಸೆಟ್) ಬಟನ್ ಸಹ ಇದೆ. ಅಗತ್ಯವಿದ್ದಾಗ, 'ಕಂಪ್ಯೂಟರ್'ಅನ್ನು 'ರಿ-ಸ್ಟಾರ್ಟ್' (restart) ಮಾಡಲು ಇದು ನಮಗೆ ಸಹಾಯ ಮಾಡುತ್ತದೆ.
ಅಲ್ಲದೇ, ಮುಂಭಾಗದಲ್ಲಿ, ಎರಡು ಅಥವಾ ಅದಕ್ಕಿಂತ ಹೆಚ್ಚು 'USB ಪೋರ್ಟ್'ಗಳನ್ನು ಮತ್ತು ಒಂದು 'DVD/CD-ROM ರೀಡರ್-ರೈಟರ್'ಅನ್ನು ನೀವು ನೋಡುವಿರಿ.
'ಪೆನ್-ಡ್ರೈವ್’ಗಳನ್ನು ಕಂಪ್ಯೂಟರ್ ಗೆ ಜೋಡಿಸಲು 'USB ಪೋರ್ಟ್'ಗಳನ್ನು ಬಳಸಲಾಗುತ್ತದೆ.
ಮತ್ತು 'CD' ಅಥವಾ 'DVD'ಯನ್ನು, ‘ರೀಡ್’ (ಓದಲು) ಅಥವಾ ‘ರೈಟ್’ ಮಾಡಲು (ಬರೆಯಲು) 'DVD/CD-ROM ರೀಡರ್-ರೈಟರ್'ಅನ್ನು ಬಳಸಲಾಗುತ್ತದೆ.
ಈಗ ನಾವು ಕಂಪ್ಯೂಟರ್ ನ ಹಿಂಭಾಗವನ್ನು ನೋಡೋಣ.
'CPU' ಅನ್ನು ಕಂಪ್ಯೂಟರ್ ನ ಇತರ ಸಾಧನಗಳಿಗೆ ಜೋಡಿಸಲು, ಹಿಂಭಾಗದಲ್ಲಿಯ ಪೋರ್ಟ್ ಗಳು ಬಳಸಲ್ಪಡುತ್ತವೆ.
'ಕೇಬಲ್’ಗಳನ್ನು ಬಳಸಿ ಇದನ್ನು ಮಾಡಲಾಗುತ್ತದೆ.
'CPU'ನ ಒಳಗಡೆ ಅನೇಕ ಘಟಕಗಳಿವೆ (components).
ಕಂಪ್ಯೂಟರ್ ON ಇದ್ದಾಗ, ಈ ಎಲ್ಲ ಘಟಕಗಳು ಕೆಲಸ ಮಾಡುತ್ತವೆ ಮತ್ತು ಶಾಖವನ್ನು ಉತ್ಪತ್ತಿ ಮಾಡುತ್ತವೆ.
ಹಿಂಭಾಗದಲ್ಲಿನ 'ಫ್ಯಾನ್'ಗಳು, ಘಟಕಗಳನ್ನು ತಂಪಾಗಿಸಲು ಬೇಕಾದ ಗಾಳಿಯ ಸಂಚಾರವನ್ನು ಒದಗಿಸುತ್ತವೆ.
ಇಲ್ಲದಿದ್ದರೆ, ಅತಿಯಾದ ತಾಪವು 'CPU' ಗೆ ಹಾನಿಯನ್ನುಂಟುಮಾಡಬಹುದು. ಅನೇಕ ವೇಳೆ ಇದು ಡೇಟಾದ ನಷ್ಟಕ್ಕೆ ಕಾರಣವಾಗಬಹುದು.
ಇದು 'ಕೇಸ್ ಕೂಲಿಂಗ್ ಫ್ಯಾನ್' ಆಗಿದೆ.
ಇದು 'CPU' ನ ತಾಪಮಾನವನ್ನು ಸಹಜ ಸ್ಥಿತಿಯಲ್ಲಿ ಇಡುತ್ತದೆ ಮತ್ತು ಹೆಚ್ಚು ಬಿಸಿಯಾಗುವುದನ್ನು ತಡೆಗಟ್ಟುತ್ತದೆ.
'PSU' ಎಂದು ಸಹ ಕರೆಯಲ್ಪಡುವ 'ಪವರ್ ಸಪ್ಲೈ ಯೂನಿಟ್', ಕಂಪ್ಯೂಟರ್ ಗೆ ವಿದ್ಯುಚ್ಛಕ್ತಿಯನ್ನು ಒದಗಿಸುತ್ತದೆ.
ಈಗ, 'CPU' ಗೆ ವಿವಿಧ ಘಟಕಗಳನ್ನು ಹೇಗೆ ಕನೆಕ್ಟ್ ಮಾಡುವುದೆಂದು ನಾವು ತಿಳಿಯೋಣ.
ಇಲ್ಲಿ ತೋರಿಸಿದಂತೆ, ಎಲ್ಲ ಕಾಂಪೋನೆಂಟ್ ಗಳನ್ನು ಟೇಬಲ್ ಮೇಲೆ ಇರಿಸಿ.
ಹಾಗೆಯೇ, ಎಲ್ಲ ಕೇಬಲ್ ಗಳನ್ನು ಟೇಬಲ್ ಮೇಲೆ ಇರಿಸಿ.
ಮೊದಲು, ನಾವು ಮಾನಿಟರ್ ಅನ್ನು 'CPU' ಗೆ ಜೋಡಿಸೋಣ (connect).
ಇಲ್ಲಿ ತೋರಿಸಿದಂತೆ, ‘ಪವರ್ ಕೇಬಲ್’ಅನ್ನು ಮಾನಿಟರ್ ಗೆ ಜೋಡಿಸಿ.
ಈಗ, ಇನ್ನೊಂದು ತುದಿಯನ್ನು 'ಪವರ್ ಸಪ್ಪ್ಲೈ ಸಾಕೆಟ್ ಗೆ' ಕನೆಕ್ಟ್ ಮಾಡಿ.
ಇದು CPU ನ ಪವರ್-ಕೇಬಲ್ ಆಗಿದೆ.
ಇಲ್ಲಿ ತೋರಿಸಿದಂತೆ, ಇದನ್ನು 'CPU' ಗೆ ಸೇರಿಸಿ.
ಆಮೇಲೆ, ಇದನ್ನು 'ಪವರ್ ಸಪ್ಪ್ಲೈ ಸಾಕೆಟ್ ಗೆ' ಕನೆಕ್ಟ್ ಮಾಡಿ.
ನಂತರ ಇಲ್ಲಿ ತೋರಿಸಿದಂತೆ, ಕೀಬೋರ್ಡ್ ಕೇಬಲ್ ಅನ್ನು 'CPU' ಗೆ ಕನೆಕ್ಟ್ ಮಾಡಿ.
ಕೀಬೋರ್ಡ್ ಗಾಗಿ ಇರುವ ಪೋರ್ಟ್, ಸಾಮಾನ್ಯವಾಗಿ ನೇರಳೆ (purple) ಬಣ್ಣದ್ದಾಗಿರುತ್ತದೆ.
'ಮೌಸ್'ಅನ್ನು ನೀವು ಹಸಿರು (green) ಬಣ್ಣದ ಪೋರ್ಟ್ ಗೆ ಕನೆಕ್ಟ್ ಮಾಡಬಹುದು.
ಪರ್ಯಾಯವಾಗಿ, 'USB ಕೀಬೋರ್ಡ್' ಮತ್ತು 'ಮೌಸ್'ಅನ್ನು ನೀವು ಯಾವುದೇ 'USB ಪೋರ್ಟ್'ಗಳಿಗೆ ಕನೆಕ್ಟ್ ಮಾಡಬಹುದು.
ಇನ್ನುಳಿದ 'USB ಪೋರ್ಟ್'ಗಳನ್ನು ‘ಪೆನ್ ಡ್ರೈವ್, ಹಾರ್ಡ್ ಡಿಸ್ಕ್’ ಇತ್ಯಾದಿಗಳನ್ನು ಕನೆಕ್ಟ್ ಮಾಡಲು ಬಳಸಬಹುದು.
ಇದು ‘LAN ಕೇಬಲ್’
ಮತ್ತು ಇದು LAN ಪೋರ್ಟ್ ಆಗಿದೆ.
ಇದು, ಕಂಪ್ಯೂಟರ್ ಅನ್ನು ಒಂದು ನೆಟ್ವರ್ಕ್ ಗೆ ಕನೆಕ್ಟ್ ಮಾಡಲು ಅನುಮತಿಸುವ ಒಂದು ‘ವೈಯರ್ಡ್ ಕನೆಕ್ಷನ್’ (ತಂತಿ ಸಂಪರ್ಕ) ಆಗಿದೆ.
‘LAN ಕೇಬಲ್’ನ ಇನ್ನೊಂದು ಕೊನೆಯನ್ನು ‘ಮೊಡೆಮ್’ ಅಥವಾ ‘wi-fi ರೌಟರ್’ಗೆ ಕನೆಕ್ಟ್ ಮಾಡಲಾಗಿದೆ.
ನೀವು ‘wi-fi ಕನೆಕ್ಷನ್’ಗಳನ್ನು ಸಂರಚಿಸುವ (configuring) ಬಗ್ಗೆ ಬೇರೊಂದು ಟ್ಯುಟೋರಿಯಲ್ ನಲ್ಲಿ ಕಲಿಯುವಿರಿ.
‘LAN ಪೋರ್ಟ್’ ಸಕ್ರಿಯವಾಗಿದ್ದಾಗ ಮತ್ತು ಚಟುವಟಿಕೆಯನ್ನು ಪಡೆಯುತ್ತಿರುವಾಗ ‘LED ಲೈಟ್’ ಮಿನುಗುವುದು.
‘CPU’ನ ಮೇಲೆ ಬೇರೆ ‘ಸೀರಿಯಲ್ ಪೋರ್ಟ್’ಗಳಿರುವುದನ್ನು ನೀವು ಗಮನಿಸಬಹುದು.
‘PDAಗಳು, ಇವುಗಳನ್ನು ಮೊಡೆಮ್’ ಅಥವಾ ಇತರ ‘ಸೀರಿಯಲ್ ಡಿವೈಸ್’ಗಳನ್ನು ಕನೆಕ್ಟ್ ಮಾಡಲು ಬಳಸಲಾಗುತ್ತದೆ.
‘CPU’ನ ಮೇಲೆ, ಕೆಲವು ‘ಪ್ಯಾರಲಲ್ ಪೋರ್ಟ್’ಗಳಿರುವುದನ್ನು ಸಹ ನೀವು ಗಮನಿಸುವಿರಿ.
‘ಪ್ರಿಂಟರ್, ಸ್ಕ್ಯಾನರ್’ ಗಳಂತಹ ಸಾಧನಗಳನ್ನು ಕನೆಕ್ಟ್ ಮಾಡಲು ಇವುಗಳನ್ನು ಬಳಸಲಾಗುತ್ತದೆ.
ಈಗ, ನಾವು ‘ಆಡಿಯೋ ಜಾಕ್’ಗಳತ್ತ ನೋಡೋಣ.
‘ಮೈಕ್ರೋಫೋನ್’ಅನ್ನು ಕನೆಕ್ಟ್ ಮಾಡಲು, ಗುಲಾಬಿ ಬಣ್ಣದಲ್ಲಿರುವ (pink) ಪೋರ್ಟ್ ಅನ್ನು ಬಳಸಲಾಗುತ್ತದೆ.
‘ಲೈನ್ ಇನ್’ಅನ್ನು, ಉದಾ - ರೇಡಿಯೋ ಅಥವಾ ಟೇಪ್ ಪ್ಲೇಯರ್ ಅನ್ನು ಕನೆಕ್ಟ್ ಮಾಡಲು, ನೀಲಿ ಬಣ್ಣದಲ್ಲಿರುವ ಪೋರ್ಟ್ ಇರುತ್ತದೆ.
‘ಹೆಡ್-ಫೋನ್/ಸ್ಪೀಕರ್’ ಅಥವಾ ‘ಲೈನ್ ಔಟ್’ಅನ್ನು ಕನೆಕ್ಟ್ ಮಾಡಲು, ಹಸಿರು ಬಣ್ಣದಲ್ಲಿರುವ ಪೋರ್ಟ್ ಇರುತ್ತದೆ.
ಈಗ ನಾವು ನಮ್ಮ ಎಲ್ಲ ಡಿವೈಸ್ ಗಳನ್ನು ಕನೆಕ್ಟ್ ಮಾಡಿರುವುದರಿಂದ, ಕಂಪ್ಯೂಟರ್ ಅನ್ನು ON (ಆನ್) ಮಾಡೋಣ.
ಮೊಟ್ಟ ಮೊದಲು, ಮಾನಿಟರ್ ನ ಮತ್ತು ‘CPU’ನ ‘ಪವರ್ ಸಪ್ಲೈ’ ಬಟನ್ ಗಳನ್ನು ಸ್ವಿಚ್-ಆನ್ ಮಾಡಿ.
ಈಗ, ಮಾನಿಟರ್ ನ ಮೇಲಿರುವ ‘POWER ON’ ಬಟನ್ ಅನ್ನು ಒತ್ತಿ.
ಆಮೇಲೆ, ‘CPU’ನ ಮುಂಭಾಗದಲ್ಲಿರುವ ‘POWER ON’ ಸ್ವಿಚ್ ಅನ್ನು ಒತ್ತಿ.
ಸಾಮಾನ್ಯವಾಗಿ, ನಿಮ್ಮ ಕಂಪ್ಯೂಟರ್, ಮೊದಲನೆಯ ಸಲ ON ಆದಾಗ, ಕಪ್ಪು ಸ್ಕ್ರೀನ್ ನ ಮೇಲೆ ಶಬ್ದಗಳ ಒಂದು ಸ್ಟ್ರಿಂಗ್ ಅನ್ನು ನೀವು ನೋಡುವಿರಿ.
ಇದು, ಈ ಕೆಳಗಿನವುಗಳ ಬಗ್ಗೆ ಮಾಹಿತಿಯನ್ನು ತೋರಿಸುವ ‘BIOS ಸಿಸ್ಟಂ’ ಆಗಿದೆ:
‘ಕಂಪ್ಯೂಟರ್'ನ ‘ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್’,
ಕಂಪ್ಯೂಟರ್, ಎಷ್ಟು ‘ಮೆಮರೀ’ಯನ್ನು ಹೊಂದಿದೆ ಎಂಬುದರ ಬಗ್ಗೆ ಮಾಹಿತಿ
ಮತ್ತು ‘ಹಾರ್ಡ್ ಡಿಸ್ಕ್ ಡ್ರೈವ್’ಗಳ ಹಾಗೂ ‘ಫ್ಲಾಪಿ ಡಿಸ್ಕ್ ಡ್ರೈವ್’ಗಳ ಬಗ್ಗೆ ಮಾಹಿತಿ.
'BIOS', ಕಂಪ್ಯೂಟರ್ ಅನ್ನು ON ಮಾಡಿದಾಗ, ‘CPU’ಗೆ ಅದರ ಮೊದಲ ‘ಇನ್ಸ್ಟ್ರಕ್ಶನ್’ಗಳನ್ನು (instructions) ಕೊಡುವ ಸಾಫ್ಟ್ವೇರ್ ಆಗಿದೆ.
‘ಆಪರೇಟಿಂಗ್ ಸಿಸ್ಟಂ’ ಅನ್ನು ಲೋಡ್ ಮಾಡುವ ಒಟ್ಟಾರೆ ಪ್ರಕ್ರಿಯೆಯನ್ನು ಕಂಪ್ಯೂಟರ್ ನ ‘ಬೂಟಿಂಗ್’ ಎಂದು ಕರೆಯಲಾಗುತ್ತದೆ.
ಅವಶ್ಯವಿರುವ ಎಲ್ಲ ತಪಾಸಣೆಗಳನ್ನು ಮಾಡಿದ ಮೇಲೆ, ‘ಆಪರೇಟಿಂಗ್ ಸಿಸ್ಟಂ’ನ ‘ಇಂಟರ್ಫೇಸ್’ಅನ್ನು ನೀವು ನೋಡುವಿರಿ.
ನೀವು ‘ಉಬಂಟು ಲಿನಕ್ಸ್’ಅನ್ನು ಬಳಸುತ್ತಿದ್ದರೆ, ಈ ಸ್ಕ್ರೀನ್ ಅನ್ನು ನೋಡುವಿರಿ.
ಮತ್ತು ನೀವು ‘ವಿಂಡೋಸ್’ಅನ್ನು ಬಳಸುತ್ತಿದ್ದರೆ, ಈ ಸ್ಕ್ರೀನ್ ಅನ್ನು ನೋಡುವಿರಿ.
ಈಗ, ನಾವು ಒಂದು ‘ಲ್ಯಾಪ್ಟಾಪ್’ನತ್ತ ಸ್ವಲ್ಪ ನೋಡೋಣ.
‘ಲ್ಯಾಪ್ಟಾಪ್’ಗಳು, ಪೋರ್ಟೇಬಲ್ ಮತ್ತು ಕಾಂಪ್ಯಾಕ್ಟ್ ಕಂಪ್ಯೂಟರ್ ಗಳಾಗಿವೆ.
‘ಲ್ಯಾಪ್ಟಾಪ್’, ಚಿಕ್ಕದಾಗಿದ್ದು ಉಪಯೋಗಿಸುವಾಗ ವ್ಯಕ್ತಿಯ ತೊಡೆಯ ಮೇಲೆ ಇಟ್ಟುಕೊಳ್ಳುವಷ್ಟು ಹಗುರವಾಗಿದೆ.
ಆದ್ದರಿಂದ ಇದು, ‘ಲ್ಯಾಪ್ಟಾಪ್’ ಎಂದು ಕರೆಯಲ್ಪಡುತ್ತದೆ.
ಇದು ಬಹುಮಟ್ಟಿಗೆ ‘ಡೆಸ್ಕ್ಟಾಪ್ ಕಂಪ್ಯೂಟರ್’ ಹೊಂದಿರುವ ಘಟಕಗಳನ್ನೇ ಹೊಂದಿದೆ.
ಒಂದು ಡಿಸ್ಪ್ಲೇ,
ಒಂದು ಕೀಬೋರ್ಡ್,
ಸೂಚಿಸುವ (pointing) ಮತ್ತು ನ್ಯಾವಿಗೇಟ್ ಮಾಡುವ ಸಾಧನವಾಗಿರುವ ಒಂದು ‘ಟಚ್ ಪ್ಯಾಡ್’,
‘CD/DVD ರೀಡರ್-ರೈಟರ್’ ಮತ್ತು
‘ಮೈಕ್’ ಹಾಗೂ ಸ್ಪೀಕರ್, ಇವುಗಳನ್ನು ಒಂದೇ ಯೂನಿಟ್ ನಲ್ಲಿ ನಿರ್ಮಿಸಲಾಗಿದೆ.
ಇದು ಸಹ ‘ಲಾನ್ ಪೋರ್ಟ್’ ಮತ್ತು ‘USB ಪೋರ್ಟ್’ಗಳನ್ನು ಹೊಂದಿದೆ.
ಇಲ್ಲಿ ಒಂದು ‘ವೀಡಿಯೊ ಪೋರ್ಟ್’ ಇದೆ. ಇದನ್ನು ಬಳಸಿ ಪ್ರೊಜೆಕ್ಟರ್ ಅನ್ನು ಲ್ಯಾಪ್ಟಾಪ್ ಗೆ ಕನೆಕ್ಟ್ ಮಾಡಬಹುದು.
‘ಆಡಿಯೋ ಜಾಕ್’ಗಳನ್ನು ಮಿಕ್ ಹಾಗೂ ‘ಹೆಡ್ ಫೋನ್’ಗಳ ಆಯಾ ಐಕಾನ್ ಗಳಿಂದ ಸುಲಭವಾಗಿ ಗುರುತಿಸಬಹುದು.
ಇದು, ಲ್ಯಾಪ್ಟಾಪ್ ನಲ್ಲಿಯ ಇನ್-ಬಿಲ್ಟ್ ‘ಕೂಲಿಂಗ್ ಫ್ಯಾನ್’ ಆಗಿದೆ.
ಲ್ಯಾಪ್ಟಾಪ್, ಹೆಚ್ಚು ಬಿಸಿಯಾಗುವುದನ್ನು ತಡೆಯಲು ಇದು ಸಹಾಯ ಮಾಡುತ್ತದೆ.
‘AC ಅಡಾಪ್ಟರ್’ನ ಮೂಲಕ ಲ್ಯಾಪ್ಟಾಪ್ ಗೆ ವಿದ್ಯುಚ್ಛಕ್ತಿಯನ್ನು ಪೂರೈಸಲಾಗುತ್ತದೆ ಮತ್ತು ಇದು ರೀ-ಚಾರ್ಜ್ ಮಾಡಬಹುದಾದ ಬ್ಯಾಟರಿಯನ್ನು ಹೊಂದಿದೆ.
ಆದ್ದರಿಂದ,ಇದು ಪೋರ್ಟೇಬಲ್ ಆಗಿದೆ ಮತ್ತು ಇದನ್ನು ವಿದ್ಯುತ್ ಮೂಲದಿಂದ ದೂರದಲ್ಲಿ ಉಪಯೋಗಿಸಬಹುದು.
ಸಂಕ್ಷಿಪ್ತವಾಗಿ- ಈ ಟ್ಯುಟೋರಿಯಲ್ ನಲ್ಲಿ, ನಾವು
ಡೆಸ್ಕ್ಟಾಪ್ ಮತ್ತು ಲ್ಯಾಪ್ಟಾಪ್ ಗಳ ವಿವಿಧ ಘಟಕಗಳ ಬಗ್ಗೆ
ಮತ್ತು ಡೆಸ್ಕ್ಟಾಪ್ ನ ವಿವಿಧ ಘಟಕಗಳನ್ನು ಜೋಡಿಸುವುದರ ಬಗ್ಗೆ ಕಲಿತಿದ್ದೇವೆ.
ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
“ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
* ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

"ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದ್ದು
ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.
ಈ ಟ್ಯುಟೋರಿಯಲ್ ಗಾಗಿ, ಅನಿಮೇಶನ್ ಮತ್ತು 3D ಮಾಡೆಲಿಂಗ್ ಅನ್ನು Ms. ಆರತಿ ಅವರು ಮಾಡಿದ್ದಾರೆ.
IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ .
ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal