Health-and-Nutrition/C2/Vegetarian-recipes-for-7-month-old-babies/Kannada

From Script | Spoken-Tutorial
Revision as of 17:20, 26 November 2019 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time
Narration
00:00 Vegetarian recipes for 7 month old babies ಎಂಬ ಸ್ಪೋಕನ್-ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ, ನಾವು 7 ತಿಂಗಳ ವಯಸ್ಸಿನ ಶಿಶುಗಳಿಗೆ ಪೂರಕ ಆಹಾರದ ಮಹತ್ವ ಮತ್ತು
00:16 ಕೆಳಗೆ ವಿವರಿಸಿದ ಕೆಲವು ಸಸ್ಯಾಹಾರಿ ಪಾಕವಿಧಾನಗಳ ಬಗ್ಗೆ ಕಲಿಯುತ್ತೇವೆ:

ಹಲಸಿನಹಣ್ಣಿನ ಬೀಜಗಳ ಗಂಜಿ,

00:23 ಹುರುಳಿಕಾಳು ಹಾಗೂ ರಾಜಗಿರಿ ಸೊಪ್ಪಿನ (ದಂಟಿನ ಸೊಪ್ಪು) ಗಂಜಿ,
00:26 ದಂಟಿನ ಸೊಪ್ಪು ಹಾಗೂ ಅಲಸಂದೆ ಕಾಳಿನ ಗಂಜಿ,
00:28 ಮೆಂತ್ಯದ ಸೊಪ್ಪು ಮತ್ತು ಬೀನ್ಸ್ ಗಂಜಿ,

ಅರಕ (ಕೊಡೋ ಮಿಲ್ಲೆಟ್) ಹಾಗೂ ಕಡಲೆಕಾಳಿನ ಗಂಜಿ.

00:35 ಮೊದಲನೇ ವರ್ಷದಲ್ಲಿ, ಮಗು ತೆವಳಲು ಮತ್ತು ಚಲಿಸಲು ಆರಂಭಿಸಿದಾಗ ಬೆಳವಣಿಗೆಯು ತೀವ್ರವಾಗಿರುತ್ತದೆ.
00:43 ಮಗುವಿಗೆ ಶಕ್ತಿಯ ಅವಶ್ಯಕತೆ ಸಹ ಹೆಚ್ಚಾಗಿರುತ್ತದೆ.
00:48 6-8 ತಿಂಗಳ ವಯಸ್ಸಿನ ಶಿಶುಗಳಿಗೆ, ಪೂರಕ ಆಹಾರಗಳಿಂದ 200 ಕ್ಯಾಲೊರಿಗಳು ಬೇಕಾಗುತ್ತವೆ.
00:55 ಕೊಡುತ್ತಿರುವ ಆಹಾರದ ಪ್ರಮಾಣವನ್ನು ಕ್ರಮೇಣ ಹೆಚ್ಚಿಸಬೇಕಾಗುತ್ತದೆ.
00:59 ನೆನಪಿಡಿ, ಸಾಕಷ್ಟು ಪೂರಕ ಆಹಾರದ ಜೊತೆಗೆ ಸ್ತನ್ಯಪಾನವು ಸಹ ಅತ್ಯಂತ ಮುಖ್ಯವಾಗಿದೆ.
01:07 ಆದ್ದರಿಂದ ಮಗುವಿಗೆ ಏಳು ತಿಂಗಳಾದಾಗ, ದಿನಕ್ಕೆ ಮೂರು ಬಾರಿ ಅರ್ಧ ಕಪ್ ಪೂರಕ ಆಹಾರವನ್ನು ಕೊಡಲು ಪ್ರಾರಂಭಿಸಬೇಕು.
01:16 ಅರ್ಧ ಕಪ್ ಎಂದರೆ ಸುಮಾರು 125 ಮಿಲಿಲೀಟರ್ ಅಥವಾ 8 ಚಮಚ ಆಹಾರವಾಗಿದೆ.
01:22 6 ತಿಂಗಳ ಮಗುವಾಗಿದ್ದಾಗಲೇ ಪೂರಕ ಆಹಾರವನ್ನು ಪ್ರಾರಂಭಿಸಿದ್ದರಿಂದ
01:28 ಈಗ ಮಗು ವಿವಿಧ ಆಹಾರ ಪದಾರ್ಥಗಳಿಗೆ ಹೊಂದಿಕೊಂಡಿದೆ.
01:33 ಈಗ ಮಗುವಿಗೆ ಪೂರಕ ಆಹಾರಗಳನ್ನು ಪರಿಚಯಿಸಲು ಪ್ರಾರಂಭಿಸಿ.
01:38 ಗಮನಿಸಿ, ಹಿಸುಕಿ ಮೆತ್ತಗೆ ಮಾಡಿದ ಮತ್ತು ನುಣ್ಣಗಿರುವ ಆಹಾರವನ್ನು ಮಾತ್ರ ಕೊಡಬೇಕು.
01:44 ಮಗುವಿನ ಆಹಾರವು ಸ್ವಲ್ಪ ಗಟ್ಟಿಯಾಗಿದೆ, ನೀರಿನಂತೆ ತೆಳ್ಳಗಿಲ್ಲ ಎಂದು ಖಚಿತಪಡಿಸಿಕೊಳ್ಳಿ.
01:52 ಮಗುವಿನ ಆಹಾರವನ್ನು ತಯಾರಿಸುವಾಗ ಸ್ಥಳೀಯ ಮತ್ತು ಕಾಲೋಚಿತ ಪದಾರ್ಥಗಳನ್ನು ಬಳಸಿ.
01:59 ಎಣ್ಣೆಬೀಜಗಳು ಮತ್ತು ಬೀಜಗಳ ಪುಡಿ, ಮೊಳಕೆಯೊಡೆದ ಕಾಳುಗಳ ಪುಡಿ, ಕರಿಬೇವಿನ ಎಲೆಗಳ ಪುಡಿ, ನುಗ್ಗೆ ಎಲೆಗಳ ಪುಡಿ ಮುಂತಾದ
02:08 ವಿವಿಧ ಪೌಷ್ಟಿಕ ಪುಡಿಗಳನ್ನು ಸೇರಿಸಲು ಸಹ ನೆನಪಿಡಿ.
02:11 ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ ಇದನ್ನು ವಿವರಿಸಲಾಗಿದೆ.
02:17 ಮಗುವಿಗೆ ಒಂದು ವರ್ಷ ಆಗುವವರೆಗೆ ಅದರ ಆಹಾರದಲ್ಲಿ ಉಪ್ಪು ಸೇರಿಸಬೇಡಿ.
02:21 ಮತ್ತು, ಎರಡು ವರ್ಷವಾಗುವವರೆಗೆ ಅದರ ಆಹಾರದಲ್ಲಿ ಸಕ್ಕರೆ, ಬೆಲ್ಲವನ್ನು ಸೇರಿಸಬೇಡಿ.
02:27 ಮಗುವಿಗೆ ಪೂರಕ ಆಹಾರವಾಗಿ ಬಳಸಬಹುದಾದ ಕೆಲವು ಸಸ್ಯಾಹಾರಿ ಅಡುಗೆಗಳನ್ನು ಈಗ ನಾವು ನೋಡೋಣ.
02:35 ಮೊದಲನೆಯದಾಗಿ ಹಲಸಿನಹಣ್ಣಿನ ಬೀಜಗಳ ಗಂಜಿಯನ್ನು ತಯಾರಿಸುವುದು.
02:39 ಬೇಕಾಗುವ ಸಾಮಾನು:

15-20 ಹಲಸಿನಹಣ್ಣಿನ ಬೀಜಗಳು, ಒಂದು ಸಣ್ಣ ಅಥವಾ ದೊಡ್ಡದಿದ್ದರೆ ಅರ್ಧ ಬಾಳೆಹಣ್ಣು,

02:48 ತೆಂಗಿನ ಹಾಲು ಅಥವಾ ಎದೆ ಹಾಲು,
02:50 ಒಂದು ಟೀಚಮಚ ಎಣ್ಣೆಬೀಜಗಳು ಮತ್ತು ಬೀಜಗಳ ಪುಡಿ.
02:53 ಹಲಸಿನಹಣ್ಣಿನ ಬೀಜಗಳ ಗಂಜಿ ತಯಾರಿಸಲು:

ಹಲಸಿನ ಬೀಜಗಳನ್ನು ಚೆನ್ನಾಗಿ ತೊಳೆಯಿರಿ.

02:59 ಈ ಬೀಜಗಳನ್ನು ಒಂದು ಸ್ಟೀಲ್ ಪಾತ್ರೆಯಲ್ಲಿ ಇರಿಸಿ, ಬೀಜಗಳು ಮುಚ್ಚುವವರೆಗೆ ನೀರು ಸೇರಿಸಿ.
03:06 ಪ್ರೆಷರ್ ಕುಕ್ಕರ್ ನಲ್ಲಿ 5-6 ಸೀಟಿ ಆಗುವವರೆಗೆ ಬೇಯಿಸಿ.
03:09 ಈ ಬೀಜಗಳನ್ನು ಒಂದು ತಟ್ಟೆಗೆ ವರ್ಗಾಯಿಸಿ ಮತ್ತು ಇವು ತಣ್ಣಗಾಗಲು ಬಿಡಿ.
03:16 ನಂತರ ಅವುಗಳ ಹೊರಗಿನ ಸಿಪ್ಪೆಯನ್ನು ಸುಲಿಯಿರಿ.
03:20 ಆಮೇಲೆ, ಮಿಕ್ಸರ್ ಅಥವಾ ಕಲ್ಲಿನ ಗ್ರೈಂಡರ್ ಬಳಸಿ ನುಣ್ಣಗೆ ಪೇಸ್ಟ್ ಮಾಡಿ.
03:25 ಕಳಿತ ಬಾಳೆಹಣ್ಣಿನ ಸಿಪ್ಪೆ ಸುಲಿದು ಚಮಚದಿಂದ ಅದನ್ನು ಚೆನ್ನಾಗಿ ಹಿಸುಕಿ.
03:32 ಈಗ ಹಿಸುಕಿದ ಬಾಳೆಹಣ್ಣು ಮತ್ತು ಹಲಸಿನ ಬೀಜಗಳ ಪ್ಯೂರಿಯನ್ನು ಮಿಶ್ರಣ ಮಾಡಿ.
03:37 ಇದರಲ್ಲಿ 2 ಟೇಬಲ್ ಚಮಚ ತೆಂಗಿನ ಹಾಲು ಅಥವಾ ಎದೆಹಾಲು ಸೇರಿಸಿ.
03:42 ಅದರಲ್ಲಿ ಎಣ್ಣೆಬೀಜಗಳು ಮತ್ತು ಬೀಜಗಳ ಪುಡಿಯನ್ನು ಸೇರಿಸಿ.
03:45 ಚೆನ್ನಾಗಿ ಬೆರೆಸಿ.
03:47 ಈ ಮಿಶ್ರಣವನ್ನು 3-4 ನಿಮಿಷಗಳ ಕಾಲ ಸಣ್ಣಉರಿಯಲ್ಲಿ ಬೇಯಿಸಿ.
03:52 ಹಲಸಿನಹಣ್ಣಿನ ಬೀಜಗಳ ಗಂಜಿ ಸಿದ್ಧವಾಗಿದೆ.
03:56 ಈ ಗಂಜಿಯಲ್ಲಿ: ಪ್ರೋಟೀನ್,
03:59 ಒಮೆಗಾ 3 ಕೊಬ್ಬಿನಾಮ್ಲಗಳು,
04:02 ಪೊಟ್ಯಾಸಿಯಮ್ ಮತ್ತು ರಂಜಕಗಳು ಸಮೃದ್ಧವಾಗಿವೆ.
04:06 ಎರಡನೆಯ ಪಾಕವಿಧಾನವು ಹುರುಳಿಕಾಳು ಹಾಗೂ ದಂಟಿನ ಸೊಪ್ಪಿನ ಗಂಜಿ ಆಗಿದೆ.
04:11 ಇದನ್ನು ತಯಾರಿಸಲು ನಮಗೆ:

2 ಟೇಬಲ್ ಚಮಚ ಹುರುಳಿಕಾಳಿನ ಪುಡಿ, 2 ಕಪ್ ತೊಳೆದ ದಂಟಿನ ಸೊಪ್ಪು (ಅಮರಾಂತ್ ಎಲೆಗಳು),

04:19 ¼ ಟೀಸ್ಪೂನ್ ಕರಿಬೇವಿನ ಎಲೆಗಳ ಪುಡಿ,

½ ಟೀಚಮಚ ತುಪ್ಪ ಇವುಗಳು ಬೇಕಾಗುತ್ತವೆ.

04:24 ವಿಧಾನ: ಮೊದಲು, ಹುರುಳಿಕಾಳನ್ನು 7 ರಿಂದ 8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
04:31 ಆನಂತರ ಅದನ್ನು ಒಂದು ಜರಡಿಯಲ್ಲಿ ಹಾಕಿ ನೀರಿನಿಂದ ಚೆನ್ನಾಗಿ ತೊಳೆಯಿರಿ.
04:37 ಎಲ್ಲಾ ನೀರು ಬಸಿಯಿರಿ. ಈಗ ಶುಚಿಯಾದ ಒಂದು ಹತ್ತಿಬಟ್ಟೆಯಲ್ಲಿ ಕಟ್ಟಿ ಮೊಳಕೆ ಬರುವವರೆಗೆ ಅದನ್ನು ಬದಿಗೆ ಇರಿಸಿ.
04:47 ಮೊಳಕೆಯೊಡೆದ ಈ ಹುರುಳಿಕಾಳನ್ನು ಬಿಸಿಲಿನಲ್ಲಿ ಒಂದೆರಡು ದಿನ ಒಣಗಿಸಿ.
04:52 ಇದನ್ನು ಸಣ್ಣಉರಿಯಲ್ಲಿ 8-10 ನಿಮಿಷಗಳ ಕಾಲ ಹುರಿಯಿರಿ. ನಂತರ ತಣ್ಣಗಾಗಲು ಬಿಡಿ.
04:58 ಈಗ ಅದರ ಪುಡಿಯನ್ನು ತಯಾರಿಸಿ.

ಈ ಸಂಪೂರ್ಣ ಪ್ರಕ್ರಿಯೆಯನ್ನು ಮಾಲ್ಟಿಂಗ್ ಎನ್ನುತ್ತೇವೆ.

05:05 ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ.
05:10 ಅದರಲ್ಲಿ ತೊಳೆದ ದಂಟಿನ ಸೊಪ್ಪನ್ನು ಸೇರಿಸಿ.
05:13 ಇದನ್ನು 4-5 ನಿಮಿಷ ಹುರಿಯಿರಿ. ಈಗ ತಣ್ಣಗಾಗಲು ಬಿಡಿ.
05:17 ಮಿಕ್ಸರ್ ಅಥವಾ ಕಲ್ಲಿನ ಗ್ರೈಂಡರ್ ಬಳಸಿ ಅದರ ಪ್ಯೂರಿಯನ್ನು ತಯಾರಿಸಿ.
05:23 ನಂತರ, ಹುರುಳಿಕಾಳಿನ ಪುಡಿಯಲ್ಲಿ 2 ಟೇಬಲ್ ಚಮಚ ನೀರು ಸೇರಿಸಿ.
05:28 ಗಂಟುಗಳು ಆಗದಂತೆ ಅದನ್ನು ಚೆನ್ನಾಗಿ ಬೆರೆಸಿ.
05:32 ಈ ತೆಳುವಾದ ಪೇಸ್ಟ್ ಅನ್ನು ಸಣ್ಣಉರಿಯಲ್ಲಿ 6-7 ನಿಮಿಷ ಬೇಯಿಸಿ.
05:37 ಈಗ, ಈ ಹುರುಳಿಕಾಳಿನ ಪೇಸ್ಟ್ ನಲ್ಲಿ ದಂಟಿನ ಸೊಪ್ಪಿನ ಪ್ಯೂರೀಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
05:43 ಇದನ್ನು 2-3 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ.
05:48 ಅದರಲ್ಲಿ ಕರಿಬೇವಿನ ಪುಡಿಯನ್ನು ಸೇರಿಸಿ, ಚೆನ್ನಾಗಿ ಬೆರೆಸಿ.
05:52 ಇದನ್ನು ಒಲೆಯಿಂದ ಇಳಿಸಿ. ಈಗ ಹುರುಳಿಕಾಳು ಹಾಗೂ ದಂಟಿನ ಸೊಪ್ಪಿನ ಗಂಜಿ ಸಿದ್ಧವಾಗಿದೆ.
05:59 ಈ ಗಂಜಿಯು ಪ್ರೋಟೀನ್, ಒಮೆಗಾ 3 ಕೊಬ್ಬಿನಾಮ್ಲಗಳು, ಕ್ಯಾಲ್ಶಿಯಂ,
06:06 ರಂಜಕ, ಕಬ್ಬಿಣ ಹಾಗೂ ಪೊಟ್ಯಾಸಿಯಮ್ ಗಳನ್ನು ಹೇರಳವಾಗಿ ಹೊಂದಿದೆ.
06:10 ಗಮನಿಸಿ, ಈ ಗಂಜಿಗಳನ್ನು ತಯಾರಿಸಲು ನೀವು ಸ್ಥಳೀಯವಾಗಿ ಲಭ್ಯವಿರುವ ಯಾವುದೇ ಬೀನ್ಸ್ ಮತ್ತು ಸೊಪ್ಪುಗಳನ್ನು ಬಳಸಬಹುದು.
06:20 ಯಾವಾಗಲೂ ಬೀನ್ಸ್ ಅನ್ನು ಜೋಳ, ರಾಗಿ, ಅರಕ (ಕೊಡೋ ಮಿಲ್ಲೆಟ್) ಇತ್ಯಾದಿ ಧಾನ್ಯಗಳೊಂದಿಗೆ ಬಳಸಲು ಪ್ರಯತ್ನಿಸಿ.
06:31 ಇದರಿಂದ ಮಗುವಿಗೆ ಸಂಪೂರ್ಣ ಪ್ರೋಟೀನ್ ಸಿಗುತ್ತದೆ.
06:35 ನೀವು ಈ ಧಾನ್ಯಗಳ ಮಾಲ್ಟ್ ಗಳನ್ನು (ಪುಡಿ) ಮಗುವಿನ ಆಹಾರದಲ್ಲಿ ಸೇರಿಸಬಹುದು ಅಥವಾ
06:42 ಬೇಯಿಸಿದ ಮೊಳಕೆಕಾಳುಗಳನ್ನು ನುಣ್ಣಗೆ ಪೇಸ್ಟ್ ಮಾಡಿ ಈ ಗಂಜಿಗಳಲ್ಲಿ ಸೇರಿಸಬಹುದು.
06:48 ಮೂರನೆಯ ಪಾಕವಿಧಾನವು ದಂಟಿನ ಸೊಪ್ಪು ಹಾಗೂ ಅಲಸಂದೆ ಕಾಳಿನ ಗಂಜಿ ಆಗಿದೆ.
06:53 ಇದಕ್ಕಾಗಿ ನಿಮಗೆ:

2 ಟೇಬಲ್-ಚಮಚ ಮಾಲ್ಟೆಡ್ ರಾಜಗಿರಿ (ಅಮರಾಂತ್) ಪುಡಿ,

06:59 2 ಟೇಬಲ್-ಚಮಚ ಮೊಳಕೆಯೊಡೆದ ಅಲಸಂದೆ ಕಾಳುಗಳ ಪ್ಯೂರೆ ಮತ್ತು

¼ ಟೀಚಮಚ ನುಗ್ಗೆ ಎಲೆಗಳ ಪುಡಿ ಇವುಗಳು ಬೇಕು.

07:06 ವಿಧಾನ: ಮಾಲ್ಟೆಡ್ ರಾಜಗಿರಿ ಪುಡಿಯನ್ನು ತಯಾರಿಸಲು, ಇದೇ ಟ್ಯುಟೋರಿಯಲ್ ನ ಹಿಂದಿನ ಪಾಕವಿಧಾನದಲ್ಲಿ ವಿವರಿಸಿದ ಸೂಚನೆಗಳನ್ನು ಅನುಸರಿಸಿ.
07:17 ಮೊಳಕೆಯೊಡೆದ ಅಲಸಂದೆ ಕಾಳುಗಳನ್ನು ಒಂದು ಸ್ಟೀಲ್ ಪಾತ್ರೆಯಲ್ಲಿ ತೆಗೆದುಕೊಳ್ಳಿ.

ಪ್ರೆಷರ್ ಕುಕ್ಕರ್ ನಲ್ಲಿ ಇದನ್ನು 4 ರಿಂದ 5 ಸೀಟಿಗಳವರೆಗೆ ಬೇಯಿಸಿ.

07:26 ಈಗ ಬೇಯಿಸಿದ ಈ ಅಲಸಂದೆ ಕಾಳುಗಳ ಪ್ಯೂರೆಯನ್ನು ತಯಾರಿಸಿ.
07:30 ನಂತರ, ಒಂದು ಬಟ್ಟಲಿನಲ್ಲಿ ಎರಡು ಚಮಚ ಮಾಲ್ಟೆಡ್ ರಾಜಗಿರಿ ಪುಡಿಯನ್ನು ತೆಗೆದುಕೊಳ್ಳಿ.

ಅದರಲ್ಲಿ ಸಾಕಷ್ಟು ನೀರು ಸೇರಿಸಿ.

07:38 ಗಂಟುಗಳಾಗದಂತೆ ಇದನ್ನು ಚೆನ್ನಾಗಿ ಮಿಶ್ರಣ ಮಾಡಿ.
07:42 ಈ ತೆಳುವಾದ ಪೇಸ್ಟ್ ಅನ್ನು ಸಣ್ಣಉರಿಯಲ್ಲಿ 2-3 ನಿಮಿಷ ಬೇಯಿಸಿ.

ಅದರಲ್ಲಿ ಅಲಸಂದೆ ಕಾಳುಗಳ ಪ್ಯೂರೆಯನ್ನು ಸೇರಿಸಿ.

07:52 ಇದನ್ನು ಚೆನ್ನಾಗಿ ಬೆರೆಸಿ, 4-5 ನಿಮಿಷ ಬೇಯಿಸಿ. ನಂತರ ಒಲೆಯಿಂದ ಕೆಳಗಿಳಿಸಿ.
07:58 ಕೊನೆಗೆ, ಈ ಬೇಯಿಸಿದ ಗಂಜಿಯಲ್ಲಿ ¼ ಟೀಸ್ಪೂನ್ ನುಗ್ಗೆಎಲೆಗಳ ಪುಡಿಯನ್ನು ಸೇರಿಸಿ.

ದಂಟಿನ ಸೊಪ್ಪು ಹಾಗೂ ಅಲಸಂದೆ ಕಾಳಿನ ಗಂಜಿ ಸಿದ್ಧವಾಗಿದೆ.

08:09 ಈ ಗಂಜಿಯು:

ಪ್ರೋಟೀನ್, ಒಮೆಗಾ 3 ಕೊಬ್ಬಿನಾಮ್ಲಗಳು,

08:17 ರಂಜಕ, ಮೆಗ್ನೀಸಿಯಮ್, ಕಬ್ಬಿಣ, ಪೊಟ್ಯಾಸಿಯಮ್
08:20 ಹಾಗೂ ಕ್ಯಾಲ್ಶಿಯಂ ಗಳನ್ನು ಹೇರಳವಾಗಿ ಹೊಂದಿದೆ.
08:24 ಈ ಗಂಜಿಗಳನ್ನು ತಯಾರಿಸಲು, ನೀವು ರಾಗಿ, ಜೋಳ, ಮಡಿಕೆಕಾಳು, ಕಡಲೆ ಇತ್ಯಾದಿ
08:32 ಮೊಳಕೆಯೊಡೆದ ಕಾಳುಗಳನ್ನು ಒಟ್ಟಿಗೆ ಬಳಸಬಹುದು.
08:37 ನಾಲ್ಕನೆಯದು ಮೆಂತ್ಯದ ಸೊಪ್ಪು ಮತ್ತು ಬೀನ್ಸ್ ಗಂಜಿ ಆಗಿದೆ.
08:41 ಅಗತ್ಯವಿರುವ ಪದಾರ್ಥಗಳು:

2 ಕಪ್ ತೊಳೆದು ಆರಿಸಿದ ಮೆಂತ್ಯದ ಸೊಪ್ಪು, 1 ಟೀಸ್ಪೂನ್ ತುಪ್ಪ,

08:49 2 ಟೇಬಲ್-ಚಮಚ ಹಸಿ ಕೊಬ್ಬರಿ ಪೇಸ್ಟ್‌,
08:52 2 ಟೇಬಲ್-ಚಮಚ ಮೊಳಕೆಯೊಡೆದ ಬೀನ್ಸ್‌ ಪುಡಿ,
08:56 ಬೀನ್ಸ್ ಪುಡಿಯನ್ನು ತಯಾರಿಸಲು, ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾದ ಸೂಚನೆಗಳನ್ನು ಅನುಸರಿಸಿ.
09:04 ವಿಧಾನ: ಬಾಣಲೆಯಲ್ಲಿ 1 ಟೀಸ್ಪೂನ್ ತುಪ್ಪವನ್ನು ಬಿಸಿಮಾಡಿ.
09:09 ಮೆಂತ್ಯದ ಸೊಪ್ಪನ್ನು ಸೇರಿಸಿ 2-3 ನಿಮಿಷ ಬೇಯಿಸಿ.
09:13 ಅದನ್ನು ಶುಚಿಯಾದ ಒಂದು ತಟ್ಟೆಗೆ ವರ್ಗಾಯಿಸಿ, ತಣ್ಣಗಾಗಲು ಸ್ವಲ್ಪ ಸಮಯ ಬಿಡಿ.
09:18 ನಂತರ, ಗ್ರೈಂಡರ್ ಅಥವಾ ಮಿಕ್ಸರ್ ಬಳಸಿ ಅದರ ಪ್ಯೂರೆಯನ್ನು ತಯಾರಿಸಿ.
09:23 ಈ ಪ್ಯೂರೀಯನ್ನು ಮಂದ ಉರಿಯಲ್ಲಿ ಒಂದು ನಿಮಿಷ ಬೇಯಿಸಿ.

ಇದರಲ್ಲಿ 2 ಟೇಬಲ್-ಚಮಚ ಬೀನ್ಸ್ ಪುಡಿಯನ್ನು ಸೇರಿಸಿ.

09:31 ಗಂಟುಗಳಾಗದಂತೆ ಇದನ್ನು ಚೆನ್ನಾಗಿ ಮಿಶ್ರಣ ಮಾಡಿ.
09:35 ಅಗತ್ಯವಿದ್ದರೆ ಅದರಲ್ಲಿ ಸ್ವಲ್ಪ ನೀರನ್ನು ಸೇರಿಸಿಕೊಳ್ಳಿ.
09:40 ಈಗ ಅದರಲ್ಲಿ 2 ಟೇಬಲ್-ಚಮಚ ತೆಂಗಿನಕಾಯಿ ಪೇಸ್ಟ್ ಅನ್ನು ಸೇರಿಸಿ.
09:44 ತೆಂಗಿನಕಾಯಿ ಪೇಸ್ಟ್ ತಯಾರಿಸಲು, ಕಾಯಿತುರಿಯನ್ನು ನುಣ್ಣಗೆ ರುಬ್ಬಿ.
09:51 ನಂತರ ಈ ಮಿಶ್ರಣವನ್ನು 7-8 ನಿಮಿಷಗಳ ಕಾಲ ನಿರಂತರವಾಗಿ ಕಲಕುತ್ತ ಸಣ್ಣ ಉರಿಯಲ್ಲಿ ಬೇಯಿಸಿ.
09:58 ಈಗ ಮೆಂತ್ಯದ ಸೊಪ್ಪು ಹಾಗೂ ಬೀನ್ಸ್ ಗಂಜಿಯು ಸಿದ್ಧವಾಗಿದೆ.
10:03 ಈ ಮೆಂತ್ಯದ ಸೊಪ್ಪು ಹಾಗೂ ಬೀನ್ಸ್ ಗಂಜಿಯು:

ಪ್ರೋಟೀನ್, ಒಮೆಗಾ 3 ಕೊಬ್ಬಿನಾಮ್ಲಗಳು,

10:10 ಫೋಲೇಟ್, ಕಬ್ಬಿಣ,
10:12 ಕ್ಯಾಲ್ಶಿಯಂ, ರಂಜಕ,
10:14 ಸತುವು ಹಾಗೂ ಪೊಟ್ಯಾಸಿಯಮ್ ಗಳಲ್ಲಿ ಸಮೃದ್ಧವಾಗಿದೆ.
10:16 ಈ ಪಾಕವಿಧಾನವನ್ನು ತಯಾರಿಸುವಾಗ, ಮೊದಲೇ ವಿವರಿಸಿದಂತೆ ವಿವಿಧ ಧಾನ್ಯಗಳು ಮತ್ತು ಮಿಲ್ಲೆಟ್ ಗಳನ್ನು ಸೇರಿಸಲು ಮರೆಯಬೇಡಿ.
10:27 ಐದನೇ ಪಾಕವಿಧಾನ ಅರಕ (ಕೊಡೋ ಮಿಲ್ಲೆಟ್) ಹಾಗೂ ಕಡಲೆಕಾಳಿನ ಪ್ಯೂರೆ ಆಗಿದೆ.
10:32 ಬೇಕಾಗುವ ಪದಾರ್ಥಗಳು:

2 ಟೇಬಲ್-ಚಮಚ ಅರಕ (ಕೊಡೋ ಮಿಲ್ಲೆಟ್),

10:35 2 ಟೇಬಲ್-ಚಮಚ ಮೊಳಕೆಯೊಡೆದ ಕಡಲೆಕಾಳು,
10:38 3 ಟೇಬಲ್-ಚಮಚ ತೆಂಗಿನ ಹಾಲು ಮತ್ತು 1 ಟೀ ಚಮಚ ತುಪ್ಪ.
10:43 ವಿಧಾನ: ಒಂದು ಸ್ಟೀಲ್ ಪಾತ್ರೆಯಲ್ಲಿ 2 ಚಮಚ ಅರಕ ತೆಗೆದುಕೊಳ್ಳಿ.
10:48 ಅದನ್ನು ಚೆನ್ನಾಗಿ ತೊಳೆಯಿರಿ. ನಂತರ ಅದರಲ್ಲಿ 3-4 ಟೇಬಲ್-ಚಮಚ ನೀರನ್ನು ಸೇರಿಸಿ.
10:55 ಪ್ರೆಷರ್ ಕುಕ್ಕರ್ ನಲ್ಲಿ 3-4 ಸೀಟಿ ಆಗುವವರೆಗೆ ಬೇಯಿಸಿ.
10:58 ಮೊಳಕೆಯೊಡೆದ ಕಡಲೆಕಾಳನ್ನು ಪ್ರೆಷರ್ ಕುಕ್ಕರ್ ನಲ್ಲಿ 4-5 ಸೀಟಿ ಆಗುವವರೆಗೆ ಬೇಯಿಸಿ.
11:04 ನಂತರ ಅದರ ಪ್ಯೂರೆಯನ್ನು ತಯಾರಿಸಿ.
11:07 ಸ್ಟೀಲ್ ಪಾತ್ರೆಯಲ್ಲಿ 1 ಟೀಸ್ಪೂನ್ ತುಪ್ಪವನ್ನು ಬಿಸಿ ಮಾಡಿ.
11:11 ಅದರಲ್ಲಿ ಬೇಯಿಸಿದ ಅರಕ, ಕಡಲೆಕಾಳಿನ ಪ್ಯೂರೆ ಮತ್ತು ತೆಂಗಿನ ಹಾಲು ಸೇರಿಸಿ.

ಇದನ್ನು ಚೆನ್ನಾಗಿ ಬೆರೆಸಿ.

11:18 4-5 ನಿಮಿಷ ಬೇಯಿಸಿ ಇದನ್ನು ತಣ್ಣಗಾಗಲು ಬಿಡಿ.

ಈಗ, ಅರಕ ಹಾಗೂ ಕಡಲೆಕಾಳಿನ ಪ್ಯೂರೆ ಸಿದ್ಧವಾಗಿದೆ.

11:27 ಈ ಪ್ಯೂರೆ:

ಪ್ರೋಟೀನ್, ಕಬ್ಬಿಣ,

11:30 ರಂಜಕ, ಮೆಗ್ನೀಸಿಯಮ್,
11:33 ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಗಳಲ್ಲಿ ಸಮೃದ್ಧವಾಗಿದೆ.
11:36 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀಮತಿ ನಯನಾ ಭಟ್. ಧನ್ಯವಾದಗಳು.

Contributors and Content Editors

Sandhya.np14