Difference between revisions of "Health-and-Nutrition/C2/Cradle-Hold-for-Breastfeeding/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
 +
{|border=1
 +
|<center>Time</center>
 +
|<center>Narration</center>
  
 +
|-
 +
|00:01
 +
| '''Cradle hold for Breastfeeding''' (ಸ್ತನ್ಯಪಾನಕ್ಕಾಗಿ ಕ್ರೇಡಲ್ ಹೋಲ್ಡ್) 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
 +
|-
 +
|00:06
 +
| ಈ ಟ್ಯುಟೋರಿಯಲ್ ನಲ್ಲಿ, ನಾವು -
 +
|-
 +
|00:09
 +
|ತಾಯಿಯು ಮಗುವಿಗೆ ಹಾಲುಣಿಸುವ ಆರಿಸಿಕೊಳ್ಳಬೇಕಾದ ಸರಿಯಾದ ವಿಧಾನ,
 +
|-
 +
|00:15
 +
| ಹಾಲುಣಿಸುವ ಮೊದಲು ತಾಯಿಯ ಪೂರ್ವ ಸಿದ್ಧತೆಗಳು,
 +
|-
 +
|00:18
 +
| 'ಕ್ರೇಡಲ್ ಹೋಲ್ಡ್' ಅನ್ನು ಮಾಡುವ ಬಗೆ ಇವುಗಳನ್ನು ಕಲಿಯುವೆವು.
 +
|-
 +
|00:22
 +
| ತಾಯಂದಿರು ವಿವಿಧ ರೀತಿಯಲ್ಲಿ ಶಿಶುವನ್ನು ಹಿಡಿದುಕೊಂಡು ಸ್ತನ್ಯಪಾನ ಮಾಡಿಸುತ್ತಾರೆ.
 +
ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ ಹೇಳಿದಂತೆ, ತಾಯಿಯು ಮಗುವಿಗೆ ಹಾಲುಣಿಸುವ ಅತ್ಯುತ್ತಮ ವಿಧಾನದಲ್ಲಿ -
 +
|-
 +
|00:39
 +
| ತಾಯಿ, ಮಗು ಇಬ್ಬರೂ ಹಾಲುಣಿಸುವ ಅವಧಿಯಲ್ಲಿ ಆರಾಮವಾಗಿ ಇರುತ್ತಾರೆ.
 +
|-
 +
|00:45
 +
|ಮಗು, ತಾಯಿಯ ಸ್ತನಕ್ಕೆ ಸರಿಯಾಗಿ ಅಂಟಿಕೊಳ್ಳಲು (attach),
 +
|-
 +
|00:50
 +
| ಮತ್ತು ಸಾಕಷ್ಟು ಹಾಲನ್ನು ಪಡೆಯಲು ಸಾಧ್ಯವಾಗುತ್ತದೆ.
 +
|-
 +
|00:54
 +
|ಈಗ 'ಕ್ರೇಡಲ್ ಹೋಲ್ಡ್' ಎಂಬ ವಿಧಾನದ ಬಗ್ಗೆ ಕಲಿಯೋಣ.
 +
|-
 +
|00:59
 +
| ಮಗುವಿಗೆ ಹಾಲುಣಿಸುವ ಮೊದಲು, ತಾಯಿಯು ಸಾಬೂನು ಮತ್ತು ನೀರಿನಿಂದ ತನ್ನ ಕೈಗಳನ್ನು
 +
|-
 +
|01:05
 +
| ತೊಳೆದುಕೊಂಡು ಚೆನ್ನಾಗಿ ಒಣಗಿಸಿಕೊಳ್ಳಬೇಕು.
 +
|-
 +
|01:10
 +
| ನಂತರ, ಅವಳು ಒಂದು ಲೋಟ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು.
 +
|-
 +
|01:15
 +
|ಹಾಲುಣಿಸುವ ತಾಯಂದಿರು, ದಿನದಲ್ಲಿ ಸರಾಸರಿ 750 ರಿಂದ 850 ಮಿಲಿಲೀಟರ್ ಹಾಲನ್ನು ಕೊಡುತ್ತಾರೆ.
 +
|-
 +
|01:22
 +
|ಆದ್ದರಿಂದ, ಅವರು ತಮ್ಮ ದೈನಂದಿನ ನೀರಿನ ಸೇವನೆಯನ್ನು ಹೆಚ್ಚಿಸುವುದು ಅವಶ್ಯವಾಗಿದೆ.
 +
|-
 +
|01:27
 +
| ತಾಯಿಯ ಸ್ಥಿತಿಯ ಬಗ್ಗೆ (position) ಈಗ ನಾವು ಚರ್ಚಿಸೋಣ.
 +
|-
 +
|01:31
 +
| ತಾಯಿಯು ನೆಲದ ಮೇಲೆ ಅಥವಾ ಹಾಸಿಗೆಯ ಮೇಲೆ, ಸುಖಾಸನದಲ್ಲಿ (cross legged position)
 +
|-
 +
|01:36
 +
| ಅಥವಾ ಕುರ್ಚಿಯಲ್ಲಿ ನೆಲದ ಮೇಲೆ ಪಾದಗಳನ್ನು ಊರಿ ಕುಳಿತುಕೊಳ್ಳಬೇಕು.
 +
|-
 +
|01:41
 +
|ಕುರ್ಚಿ ತುಂಬಾ ಎತ್ತರವಿದ್ದು ಅವಳ ಪಾದಗಳು ನೆಲಕ್ಕೆ ತಾಗದಿದ್ದರೆ, ಆಗ-
 +
|-
 +
|01:47
 +
| ಆಕೆಯು ತನ್ನ ಪಾದಗಳನ್ನು ಸಣ್ಣ ಸ್ಟೂಲ್ ಅಥವಾ ನೆಲದ ಮೇಲಿರಿಸಿದ ದಿಂಬುಗಳ ಮೇಲೆ ಇಡಬಹುದು.
 +
|-
 +
|01:53
 +
| ಕುಳಿತಿರುವಾಗ ಬೆನ್ನು ನೋವನ್ನು ತಪ್ಪಿಸಲು- ಅವಳ ಬೆನ್ನು ನೇರವಾಗಿದ್ದು
 +
|-
 +
|02:00
 +
| ಭುಜಗಳು ಏರಿಸಿದ ಅಥವಾ ಇಳಿಸಿದ ಸ್ಥಿತಿಯಲ್ಲಿರದೆ, ವಿರಾಮದಲ್ಲಿ ಇರುವಂತೆ ನೋಡಿಕೊಳ್ಳಬೇಕು.
 +
|-
 +
|02:05
 +
| ಈ ವಿರಾಮದ ಸ್ಥಿತಿಯು ಹಾಲುಣಿಸುವ ಅವಧಿಯ ಉದ್ದಕ್ಕೂ ಹಾಗೆಯೇ ಇರಬೇಕು.
 +
|-
 +
|02:12
 +
|ಈಗ, ತಾಯಿಯು ಮಗುವಿಗೆ ಹಾಲುಣಿಸುವ ಸ್ತನವನ್ನು ಮಾತ್ರ ಹೊರಗೆ ತೆಗೆಯಬೇಕು.
 +
|-
 +
|02:18
 +
| ಅವಳು ಸ್ತನದ ಮೇಲೆ ಬ್ರಾ ಅಥವಾ ರವಿಕೆಯ ಒತ್ತಡವು ಬಾರದಂತೆ ನೋಡಿಕೊಳ್ಳಬೇಕು.
 +
|-
 +
|02:25
 +
| ಅವಳು ಆರಾಮವಾಗಿ ಕುಳಿತ ಮೇಲೆ ಮಗುವನ್ನು ಅವಳ ಬಳಿಗೆ ತರಬೇಕು.
 +
|-
 +
|02:29
 +
| ತಾಯಿಯು ಹಾಲುಣಿಸುವ ಸ್ತನದ ಬದಿಯ ತೋಳಿನಿಂದ, ಮಗುವನ್ನು ಹಿಡಿದಿರಬೇಕು. 
 +
|-
 +
|02:37
 +
|ಮಗುವಿನ ತಲೆಯನ್ನು ಅದೇ ಕೈಯ ಮೊಣಕೈನ ಒಳಭಾಗದಲ್ಲಿ ಆರಾಮವಾಗಿ ಇರಿಸಬೇಕು.
 +
|-
 +
|02:44
 +
| ಅದೇ ತೋಳಿನಿಂದ, ಶಿಶುವಿನ ತಲೆ, ಕುತ್ತಿಗೆ ಮತ್ತು ದೇಹವನ್ನು ಹಿಡಿದುಕೊಂಡಿರಬೇಕು.
 +
|-
 +
|02:51
 +
| ಈ ಚಿತ್ರದಲ್ಲಿ, ತಾಯಿಯು ಮಗುವಿಗೆ ತನ್ನ ಬಲಗಡೆಯ ಸ್ತನದಿಂದ ಹಾಲುಣಿಸುವಳು.
 +
|-
 +
|02:56
 +
|ಆದ್ದರಿಂದ, ಮಗುವಿನ ಶರೀರವನ್ನು ಹಿಡಿದುಕೊಳ್ಳಲು ಅವಳು ಬಲತೋಳನ್ನು ಬಳಸುತ್ತಿದ್ದಾಳೆ ಮತ್ತು
 +
|-
 +
|03:04
 +
|ಮಗುವಿನ ತಲೆಯು ಬಲಗಡೆಯ ಮೊಣಕೈನ ಒಳಭಾಗದಲ್ಲಿ ಇರಿಸಲ್ಪಟ್ಟಿದೆ.
 +
|-
 +
|03:10
 +
|ಮಗುವನ್ನು ಎತ್ತಿಕೊಳ್ಳಲು ಸಹಾಯವು ಬೇಕಾಗಿದ್ದರೆ, ಅವಳು ಮಗುವಿನ ಕೆಳಗೆ, ತನ್ನ ತೊಡೆಯ ಮೇಲೆ ದಿಂಬನ್ನು ಇಡಬಹುದು.
 +
|-
 +
|03:19
 +
| ನೆನಪಿಡಿ, ತಾಯಿಯು ತನ್ನ ಬೆನ್ನನ್ನು ಬಗ್ಗಿಸಿ ಸ್ತನವನ್ನು ಮಗುವಿನ ಹತ್ತಿರ ತರಬಾರದು.
 +
|-
 +
|03:25
 +
| ಇದರಿಂದ ಅವಳಿಗೆ ತೊಂದರೆಯಾಗುತ್ತದೆ ಮತ್ತು ಬೆನ್ನು ನೋವು ಬರುತ್ತದೆ.
 +
|-
 +
|03:30
 +
| ಅವಳು ಬೆನ್ನನ್ನು ನೇರವಾಗಿಟ್ಟು, ಮಗುವನ್ನು ತನ್ನ ಎದೆಗೆ ತಲುಪುವಂತೆ ಎತ್ತಿಕೊಳ್ಳಬೇಕು.
 +
|-
 +
|03:36
 +
|ಈಗ, ಮಗುವನ್ನು ಸರಿಯಾಗಿ ಹೇಗೆ ಇಡುವುದು ಎಂದು ತಿಳಿಯೋಣ.
 +
|-
 +
|03:42
 +
| ಮಗುವಿನ ಹೊಟ್ಟೆಯು, ತಾಯಿಯ ದೇಹಕ್ಕೆ ಮೃದುವಾಗಿ ಒತ್ತಿರಬೇಕು.
 +
|-
 +
|03:47
 +
|ಅವರ ದೇಹಗಳ ನಡುವಿನ ದೂರವು ಕಡಿಮೆಯಾದರೆ, ಸ್ತನವನ್ನು ತಲುಪುವ ಮಗುವಿನ ಪ್ರಯತ್ನವೂ ಕಡಿಮೆ ಆಗುತ್ತದೆ.
 +
|-
 +
|03:54
 +
| ಮತ್ತು, ಮಗುವಿಗೆ ಸರಿಯಾಗಿ ಜೋಡಿಸಿಕೊಳ್ಳಲು ಸುಲಭವಾಗುತ್ತದೆ.
 +
|-
 +
|04:00
 +
| ಮಗುವನ್ನು ಹಿಡಿದುಕೊಳ್ಳುವ ವಿಧಾನವು ಎರಡನೇ ಮುಖ್ಯ ಅಂಶವಾಗಿದೆ.
 +
|-
 +
|04:08
 +
|ನಾವು ಆಹಾರವನ್ನು ಸೇವಿಸುವಾಗ ನಮ್ಮ ತಲೆ, ಕುತ್ತಿಗೆ ಮತ್ತು ದೇಹವು ಯಾವಾಗಲೂ ಒಂದೇ ದಿಕ್ಕಿನಲ್ಲಿ ಇರುತ್ತದೆ.
 +
|-
 +
|04:16
 +
| ಆದರೆ ಸ್ತನ್ಯಪಾನ ಮಾಡಿಸುವಾಗ, ಕೆಲವು ಸಲ ತಾಯಂದಿರು ಮಗುವಿನ ತಲೆಯನ್ನು ಪಕ್ಕಕ್ಕೆ ಹೊರಳಿಸಿರುತ್ತಾರೆ.
 +
|-
 +
|04:23
 +
|ಹಾಲುಣಿಸುವಾಗ ಇದು ಮಗುವಿಗೆ ಅನಾನುಕೂಲವನ್ನು ಮಾಡುತ್ತದೆ.
 +
|-
 +
|04:28
 +
|ಸ್ತನ್ಯಪಾನ ಮಾಡಿಸುವಾಗ, ಮಗುವಿನ ತಲೆ, ಕುತ್ತಿಗೆ ಮತ್ತು ದೇಹವು ಒಂದೇ ಸಾಲಿನಲ್ಲಿರಬೇಕು.
 +
|-
 +
|04:35
 +
|ಇದರಿಂದ ಮಗುವಿಗೆ ಹಾಲನ್ನು ನುಂಗಲು ಸುಲಭವಾಗುತ್ತದೆ.
 +
|-
 +
|04:41
 +
|ಮಗುವನ್ನು ಹೊಂದಿಸುವ ಬಗ್ಗೆ, ಈಗ ಮೂರನೆಯ ಅಂಶಕ್ಕೆ ಬರುತ್ತೇವೆ.
 +
|-
 +
|04:46
 +
|ತಾಯಿಯು ಮಗುವಿನ ಪೂರ್ತಿ ಶರೀರವನ್ನು ಹಿಡಿದುಕೊಳ್ಳಬೇಕು.
 +
|-
 +
|04:51
 +
|ಇಲ್ಲದಿದ್ದರೆ, ಮಗುವು ಸ್ತನಕ್ಕೆ ಸರಿಯಾಗಿ ಜೋಡಿಸಿಕೊಳ್ಳಲು (attach) ಪ್ರಯತ್ನಿಸಬೇಕಾಗುವುದು.
 +
|-
 +
|04:58
 +
|ನಂತರ, ಮಗುವಿನ ಮೂಗು ಮತ್ತು ಗದ್ದಗಳ ಸ್ಥಾನವನ್ನು ನೋಡೋಣ.
 +
|-
 +
|05:03
 +
|ಶಿಶುವಿನ ಮೂಗು ಮತ್ತು ಮೊಲೆತೊಟ್ಟು ಒಂದೇ ಸಾಲಿನಲ್ಲಿರಬೇಕು.
 +
|-
 +
|05:07
 +
|ಮತ್ತು, ಗದ್ದವು ಮುಂದೆ ಬಂದಿದ್ದು ಸ್ತನಕ್ಕೆ ಅತೀ ಹತ್ತಿರವಾಗಿರಬೇಕು.
 +
|-
 +
|05:13
 +
| ಇದರಿಂದ ಲ್ಯಾಚಿಂಗ್ ನಲ್ಲಿ, ಶಿಶು ಅರಿಯೋಲಾದ ಕೆಳಗಿನ ಹೆಚ್ಚು ಭಾಗವನ್ನು ಒಳಗೆ ತೆಗೆದುಕೊಳ್ಳುತ್ತದೆ.
 +
|-
 +
|05:19
 +
|ಹೀಗಾಗಿ, ಹೆಚ್ಚು ಹಾಲನ್ನು ಕುಡಿಯಲು ಕೆಳದವಡೆಯನ್ನು ಬಳಸುತ್ತದೆ.
 +
|-
 +
|05:26
 +
| ಗಮನಿಸಿ: ಅರಿಯೋಲಾ, ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗವಾಗಿದೆ.
 +
|-
 +
|05:32
 +
| ಈಗ ಮಗುವನ್ನು ಸರಿಯಾಗಿ ಹಿಡಿದಿರುವುದರಿಂದ,
 +
|-
 +
|05:35
 +
| ಸ್ತನವನ್ನು ಹಿಡಿದುಕೊಳ್ಳುವ ಬಗೆಯನ್ನು ಕಲಿಯೋಣ.
 +
|-
 +
|05:39
 +
|ತಾಯಿಯು ತನ್ನ ಖಾಲಿ ಇರುವ ಕೈ ಬೆರಳುಗಳನ್ನು ಬಳಸಿ, U ಆಕಾರದಲ್ಲಿ ಮೇಲಿನಿಂದ ತನ್ನ ಸ್ತನವನ್ನು ಹಿಡಿಯಬೇಕು.
 +
|-
 +
|05:48
 +
|ಈ ಚಿತ್ರದಲ್ಲಿ, ತಾಯಿಯು ತನ್ನ ಬಲ ಸ್ತನವನ್ನು ಹಿಡಿಯಲು ಎಡಗೈಯನ್ನು ಬಳಸುತ್ತಾಳೆ.
 +
|-
 +
|05:55
 +
|ಹೆಬ್ಬೆರಳು ಮತ್ತು ಬೆರಳುಗಳ ಸರಿಯಾದ ಸ್ಥಾನವನ್ನು ತಿಳಿಯಲು, ತಾಯಿಯ ಬಲ ಮೊಲೆತೊಟ್ಟನ್ನು ಗಡಿಯಾರದ ಕೇಂದ್ರ ಎಂದು ಊಹಿಸಿ.
 +
|-
 +
|06:04
 +
|ತಾಯಿಯು ಎಡ ಹೆಬ್ಬೆರಳನ್ನು, ಈ ಗಡಿಯಾರದಲ್ಲಿ ಗಂಟೆ 3 ಆದ ಹಾಗೆ ಇಡಬೇಕು.
 +
|-
 +
|06:10
 +
|ಅವಳ ಎಡ ತೋರುಬೆರಳು ಮತ್ತು ಮಧ್ಯದ ಬೆರಳನ್ನು ಗಂಟೆ 9 ಆದಾಗಿನ ಹಾಗೆ ಇಡಬೇಕು.
 +
|-
 +
|06:18
 +
|ಸ್ತನವನ್ನು ಹಿಡಿದಿರುವ ತಾಯಿಯ ಬೆರಳುಗಳು, ಮಗುವಿನ ತುಟಿಗಳಿರುವ ದಿಕ್ಕಿನಲ್ಲಿಯೇ ಇರಬೇಕು.
 +
|-
 +
|06:25
 +
| ಯಾಕೆ?
 +
ಒಂದು ಉದಾಹರಣೆಯನ್ನು ಬಳಸಿ, ಇದನ್ನು ತಿಳಿದುಕೊಳ್ಳೋಣ.
 +
|-
 +
|06:30
 +
| ವಡಾ-ಪಾವ್ ಅಥವಾ ಬರ್ಗರ್ ತಿನ್ನುವಾಗ, ನಮ್ಮ ತುಟಿಗಳು ಅಡ್ಡಲಾಗಿ ತೆರೆದಿವೆ.
 +
|-
 +
|06:35
 +
|ದೊಡ್ಡ ತುತ್ತು ತೆಗೆದುಕೊಳ್ಳಲು, ವಡಾ-ಪಾವ್ ಅಥವಾ ಬರ್ಗರ್ ಅನ್ನು ಅಡ್ಡಲಾಗಿ ಹಿಡಿಯುತ್ತೇವೆ.
 +
|-
 +
|06:40
 +
|ಇಲ್ಲಿ, ಹೆಬ್ಬೆರಳು ಮತ್ತು ಬೆರಳುಗಳನ್ನು ತುಟಿಗಳ ದಿಕ್ಕಿನಲ್ಲಿ ಇಡುತ್ತೇವೆ.
 +
|-
 +
|06:46
 +
|ವಡಾ-ಪಾವ್ ಅಥವಾ ಬರ್ಗರ್ ಅನ್ನು ನೆಟ್ಟಗೆ ಹಿಡಿದಿದ್ದರೆ, ದೊಡ್ಡ ತುತ್ತನ್ನು ಕಚ್ಚಲು ಸಾಧ್ಯವಾಗುವುದಿಲ್ಲ.
 +
|-
 +
|06:53
 +
| ಹಾಗೆಯೇ, ಮಗುವಿನ ತುಟಿಗಳ ದಿಕ್ಕನ್ನು ಗಮನಿಸಿ. ತುಟಿಗಳು ಇಲ್ಲಿ ಲಂಬವಾಗಿವೆ.
 +
|-
 +
|07:00
 +
|ಆದ್ದರಿಂದ, ಬೆರಳುಗಳು ಮತ್ತು ಹೆಬ್ಬೆರಳನ್ನು ಕೂಡ ಸ್ತನದ ಮೇಲೆ ಲಂಬವಾಗಿ ಇಡಬೇಕು.
 +
|-
 +
|07:06
 +
|ಇದರಿಂದ, ಮಗುವಿಗೆ ಬಾಯಿಯಲ್ಲಿ ಕೆಳಗಿನ ಅರಿಯೋಲಾದ ದೊಡ್ಡ ಭಾಗವನ್ನು ತೆಗೆದುಕೊಳ್ಳಲು ಸಹಾಯವಾಗುತ್ತದೆ.
 +
|-
 +
|07:13
 +
|ಅಲ್ಲದೆ, ತಾಯಿಯ ಹೆಬ್ಬೆರಳು ಮತ್ತು ಬೆರಳುಗಳು ಯಾವಾಗಲೂ ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರದಲ್ಲಿ ಇರಬೇಕು.
 +
|-
 +
|07:23
 +
| ವಡಾ-ಪಾವ್ ಅಥವಾ ಬರ್ಗರ್ ತಿನ್ನುವಾಗ, ಅದನ್ನು ಬಹಳ ಹತ್ತಿರದಲ್ಲಿ ಹಿಡಿದುಕೊಂಡರೆ, ನಮ್ಮ ಬೆರಳುಗಳು ದೊಡ್ಡ ತುತ್ತನ್ನು ಕಚ್ಚುವಾಗ ಬಾಯಿಗೆ ಅಡ್ಡಬರುತ್ತವೆ.
 +
|-
 +
|07:34
 +
| ತುಂಬಾ ದೂರದಲ್ಲಿ ಹಿಡಿದರೆ, ಅದು ನಮ್ಮ ಬಾಯಿಯಲ್ಲಿ ಸಾಲುವ ಆಕಾರದಲ್ಲಿ ಇರುವುದಿಲ್ಲ.
 +
|-
 +
|07:41
 +
|ಹೀಗಾಗಿ, ದೊಡ್ಡ ತುತ್ತನ್ನು ಕಚ್ಚಲು, ಅದನ್ನು ಸರಿಯಾದ ದೂರದಲ್ಲಿ ಹಿಡಿಯುತ್ತೇವೆ.
 +
|-
 +
|07:47
 +
| ಈ ಚಿತ್ರದಲ್ಲಿ ತೋರಿಸಿರುವಂತೆ, ಮಗುವಿಗೆ ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರವು ಸರಿಯಾಗಿದೆ.
 +
|-
 +
|07:55
 +
| ಈ ಅಂತರವು, ಕೆಳಗಿನ ಅಂಶಗಳನ್ನು ಖಚಿತಪಡಿಸುತ್ತದೆ-
 +
ಮಗುವು ತನ್ನ ಬಾಯಿಯಲ್ಲಿ ಅರಿಯೋಲಾದ ದೊಡ್ಡ ಭಾಗವನ್ನು ಕಚ್ಚಿದಾಗ ತಾಯಿಯ ಬೆರಳುಗಳು ಅಡ್ಡಬರುವುದಿಲ್ಲ,
 +
|-
 +
|08:05
 +
|ತಾಯಿಯು ಮೊಲೆತೊಟ್ಟನ್ನು ಮಾತ್ರ ಒತ್ತುವುದಿಲ್ಲ. ಇದರಿಂದ ತುಂಬಾ ಕಡಿಮೆ ಹಾಲು ಸಿಗುತ್ತದೆ.
 +
|-
 +
|08:11
 +
| ಹೆಚ್ಚು ಹಾಲು ಬರಲು, ಅರಿಯೋಲಾದ ಕೆಳಗಿನ ಹಾಲಿನ ದೊಡ್ಡ ನಾಳಗಳನ್ನು ಒತ್ತುತ್ತಾಳೆ.
 +
|-
 +
|08:17
 +
| ಮತ್ತು, ಮಗು ಸರಿಯಾಗಿ ಅಂಟಿಕೊಳ್ಳುವಂತೆ ಸ್ತನವನ್ನು ಹಿಡಿಯಲಾಗಿದೆ.
 +
|-
 +
|08:23
 +
|ನೆನಪಿಡಿ- ಮಗುವಿನ ಗದ್ದ ಇರುವ ಸ್ತನದ ಬದಿಯಲ್ಲಿ, ತಾಯಿಯ ಹೆಬ್ಬೆರಳು
 +
|-
 +
|08:30
 +
| ಮತ್ತು ಮಗುವಿನ ಮೂಗು ಇರುವ ಸ್ತನದ ಬದಿಯಲ್ಲಿ 2 ಬೆರಳುಗಳು ಇರಬೇಕು.
 +
|-
 +
|08:36
 +
| ವಡಾ- ಪಾವ್ ಅಥವಾ ಬರ್ಗರ್ ನ ಉದಾಹರಣೆಗೆ ಹಿಂತಿರುಗಿ.
 +
|-
 +
|08:41
 +
|ವಡಾ-ಪಾವ್ ಅಥವಾ ಬರ್ಗರ್ ಅನ್ನು ಸರಿಯಾಗಿ ಹಿಡಿದ ನಂತರ, ದೊಡ್ಡದಾಗಿ ಕಚ್ಚಲು ಅದನ್ನು ಅದುಮಿ ಹಿಡಿಯುತ್ತೇವೆ.
 +
|-
 +
|08:48
 +
|ಹೀಗೆಯೇ, ತಾಯಿಯು ಮೇಲಿನಿಂದ U ಆಕಾರದಲ್ಲಿ, ಸ್ತನವನ್ನು ಮೆತ್ತಗೆ ಒತ್ತಿ ಹಿಡಿಯಬೇಕು.
 +
|-
 +
|08:54
 +
|ಇದು, ಮಗುವಿಗೆ ಕೆಳಗಿನ ಅರಿಯೋಲಾದ ದೊಡ್ಡ ಭಾಗವನ್ನು ಬಾಯಿಯಲ್ಲಿ ಹಿಡಿಯಲು ಸಹಾಯ ಮಾಡುತ್ತದೆ.
 +
|-
 +
|09:01
 +
| ನೆನಪಿಡಿ, ತಾಯಿಯು ಸ್ತನವನ್ನು ತಲೆಕೆಳಗಾದ V ಆಕಾರದಲ್ಲಿ ಅದುಮಬಾರದು.
 +
|-
 +
|09:07
 +
|V ಆಕಾರದ ಒತ್ತುವಿಕೆಯು ಸ್ತನವನ್ನು ಹಿಸುಕಿ, ನಿಪ್ಪಲ್ ಫೀಡಿಂಗ್ ಗೆ  ಕಾರಣವಾಗುತ್ತದೆ.
 +
|-
 +
|09:14
 +
|ಅಲ್ಲದೆ, ಹೆಬ್ಬೆರಳು ಮತ್ತು ಬೆರಳುಗಳಿಂದ ಸ್ತನವನ್ನು ಸಮನಾಗಿ ಒತ್ತವುದನ್ನು ಖಚಿತಪಡಿಸಿಕೊಳ್ಳಿ.
 +
|-
 +
|09:21
 +
|ಇಲ್ಲದಿದ್ದರೆ, ಮೊಲೆತೊಟ್ಟು ಬಲ ಅಥವಾ ಎಡಭಾಗಕ್ಕೆ ಸರಿಯುತ್ತದೆ
 +
|-
 +
|09:27
 +
|ಮತ್ತು ಸ್ತನಕ್ಕೆ ಸರಿಯಾಗಿ ಜೋಡಿಸಿಕೊಳ್ಳಲು ಮಗುವಿಗೆ ಸಾಧ್ಯವಾಗುವುದಿಲ್ಲ.
 +
|-
 +
|09:32
 +
|ನೆನಪಿಡಿ, ಮಗುವಿನ ಕಡೆಗೆ ಸ್ತನವನ್ನು ಬದಿಯಿಂದ ತಳ್ಳುವ ಮೂಲಕ ಅದನ್ನು ಮಗುವಿನೆಡೆಗೆ ತರಬೇಡಿ.
 +
|-
 +
|09:39
 +
| ಯಾವಾಗಲೂ ಮಗುವನ್ನು ಸ್ತನದ ಕಡೆಗೆ ತನ್ನಿ.
 +
|-
 +
|09:43
 +
|ಈಗ, ಮಗು 'ಕ್ರೇಡಲ್ ಹೋಲ್ಡ್' ನಲ್ಲಿದೆ ಮತ್ತು ಸ್ತನ್ಯಪಾನಕ್ಕಾಗಿ ಜೋಡಿಸಿಕೊಳ್ಳಲು ಸಿದ್ಧವಾಗಿದೆ.
 +
|-
 +
|09:49
 +
| ಸ್ತನಕ್ಕೆ ಮಗುವಿನ ಸರಿಯಾದ ಜೋಡಣೆಯ ಬಗ್ಗೆ, ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
 +
|-
 +
|09:58
 +
| ಮಗು ಸ್ತನಕ್ಕೆ ಸರಿಯಾಗಿ ಅಂಟಿಕೊಂಡ ಮೇಲೆ ಮತ್ತು ಸ್ತನವು ತುಂಬಾ ಭಾರವಾಗಿರದಿದ್ದರೆ ಆಗ -
 +
|-
 +
|10:05
 +
| ತಾಯಿಯು ಸ್ತನವನ್ನು ಕೈಯಿಂದ ಬಿಡಬೇಕು.
 +
|-
 +
|10:09
 +
| ಮತ್ತು ಆ ಕೈಯನ್ನು ಮಗುವನ್ನು ಹಿಡಿಯಲು ಕೆಳಗೆ ತರಬೇಕು.
 +
|-
 +
|10:14
 +
| ಈ ಸ್ಥಾನದಲ್ಲಿ, ತಾಯಿಯು ತನ್ನ ಎರಡೂ ತೋಳುಗಳನ್ನು ಶರೀರದ ಹತ್ತಿರಕ್ಕೆ ತರಬೇಕು.
 +
|-
 +
|10:21
 +
| ಹಾಲುಣಿಸುವ ಸಮಯದಲ್ಲಿ ಇದು ಅವಳನ್ನು ಆರಾಮವಾಗಿಡುತ್ತದೆ.
 +
|-
 +
|10:26
 +
| ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
 +
|-
 +
|10:29
 +
| ಧನ್ಯವಾದಗಳು.
 +
|}

Revision as of 13:57, 18 May 2019

Time
Narration
00:01 Cradle hold for Breastfeeding (ಸ್ತನ್ಯಪಾನಕ್ಕಾಗಿ ಕ್ರೇಡಲ್ ಹೋಲ್ಡ್) 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು -
00:09 ತಾಯಿಯು ಮಗುವಿಗೆ ಹಾಲುಣಿಸುವ ಆರಿಸಿಕೊಳ್ಳಬೇಕಾದ ಸರಿಯಾದ ವಿಧಾನ,
00:15 ಹಾಲುಣಿಸುವ ಮೊದಲು ತಾಯಿಯ ಪೂರ್ವ ಸಿದ್ಧತೆಗಳು,
00:18 'ಕ್ರೇಡಲ್ ಹೋಲ್ಡ್' ಅನ್ನು ಮಾಡುವ ಬಗೆ ಇವುಗಳನ್ನು ಕಲಿಯುವೆವು.
00:22 ತಾಯಂದಿರು ವಿವಿಧ ರೀತಿಯಲ್ಲಿ ಶಿಶುವನ್ನು ಹಿಡಿದುಕೊಂಡು ಸ್ತನ್ಯಪಾನ ಮಾಡಿಸುತ್ತಾರೆ.

ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ ಹೇಳಿದಂತೆ, ತಾಯಿಯು ಮಗುವಿಗೆ ಹಾಲುಣಿಸುವ ಅತ್ಯುತ್ತಮ ವಿಧಾನದಲ್ಲಿ -

00:39 ತಾಯಿ, ಮಗು ಇಬ್ಬರೂ ಹಾಲುಣಿಸುವ ಅವಧಿಯಲ್ಲಿ ಆರಾಮವಾಗಿ ಇರುತ್ತಾರೆ.
00:45 ಮಗು, ತಾಯಿಯ ಸ್ತನಕ್ಕೆ ಸರಿಯಾಗಿ ಅಂಟಿಕೊಳ್ಳಲು (attach),
00:50 ಮತ್ತು ಸಾಕಷ್ಟು ಹಾಲನ್ನು ಪಡೆಯಲು ಸಾಧ್ಯವಾಗುತ್ತದೆ.
00:54 ಈಗ 'ಕ್ರೇಡಲ್ ಹೋಲ್ಡ್' ಎಂಬ ವಿಧಾನದ ಬಗ್ಗೆ ಕಲಿಯೋಣ.
00:59 ಮಗುವಿಗೆ ಹಾಲುಣಿಸುವ ಮೊದಲು, ತಾಯಿಯು ಸಾಬೂನು ಮತ್ತು ನೀರಿನಿಂದ ತನ್ನ ಕೈಗಳನ್ನು
01:05 ತೊಳೆದುಕೊಂಡು ಚೆನ್ನಾಗಿ ಒಣಗಿಸಿಕೊಳ್ಳಬೇಕು.
01:10 ನಂತರ, ಅವಳು ಒಂದು ಲೋಟ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು.
01:15 ಹಾಲುಣಿಸುವ ತಾಯಂದಿರು, ದಿನದಲ್ಲಿ ಸರಾಸರಿ 750 ರಿಂದ 850 ಮಿಲಿಲೀಟರ್ ಹಾಲನ್ನು ಕೊಡುತ್ತಾರೆ.
01:22 ಆದ್ದರಿಂದ, ಅವರು ತಮ್ಮ ದೈನಂದಿನ ನೀರಿನ ಸೇವನೆಯನ್ನು ಹೆಚ್ಚಿಸುವುದು ಅವಶ್ಯವಾಗಿದೆ.
01:27 ತಾಯಿಯ ಸ್ಥಿತಿಯ ಬಗ್ಗೆ (position) ಈಗ ನಾವು ಚರ್ಚಿಸೋಣ.
01:31 ತಾಯಿಯು ನೆಲದ ಮೇಲೆ ಅಥವಾ ಹಾಸಿಗೆಯ ಮೇಲೆ, ಸುಖಾಸನದಲ್ಲಿ (cross legged position)
01:36 ಅಥವಾ ಕುರ್ಚಿಯಲ್ಲಿ ನೆಲದ ಮೇಲೆ ಪಾದಗಳನ್ನು ಊರಿ ಕುಳಿತುಕೊಳ್ಳಬೇಕು.
01:41 ಕುರ್ಚಿ ತುಂಬಾ ಎತ್ತರವಿದ್ದು ಅವಳ ಪಾದಗಳು ನೆಲಕ್ಕೆ ತಾಗದಿದ್ದರೆ, ಆಗ-
01:47 ಆಕೆಯು ತನ್ನ ಪಾದಗಳನ್ನು ಸಣ್ಣ ಸ್ಟೂಲ್ ಅಥವಾ ನೆಲದ ಮೇಲಿರಿಸಿದ ದಿಂಬುಗಳ ಮೇಲೆ ಇಡಬಹುದು.
01:53 ಕುಳಿತಿರುವಾಗ ಬೆನ್ನು ನೋವನ್ನು ತಪ್ಪಿಸಲು- ಅವಳ ಬೆನ್ನು ನೇರವಾಗಿದ್ದು
02:00 ಭುಜಗಳು ಏರಿಸಿದ ಅಥವಾ ಇಳಿಸಿದ ಸ್ಥಿತಿಯಲ್ಲಿರದೆ, ವಿರಾಮದಲ್ಲಿ ಇರುವಂತೆ ನೋಡಿಕೊಳ್ಳಬೇಕು.
02:05 ಈ ವಿರಾಮದ ಸ್ಥಿತಿಯು ಹಾಲುಣಿಸುವ ಅವಧಿಯ ಉದ್ದಕ್ಕೂ ಹಾಗೆಯೇ ಇರಬೇಕು.
02:12 ಈಗ, ತಾಯಿಯು ಮಗುವಿಗೆ ಹಾಲುಣಿಸುವ ಸ್ತನವನ್ನು ಮಾತ್ರ ಹೊರಗೆ ತೆಗೆಯಬೇಕು.
02:18 ಅವಳು ಸ್ತನದ ಮೇಲೆ ಬ್ರಾ ಅಥವಾ ರವಿಕೆಯ ಒತ್ತಡವು ಬಾರದಂತೆ ನೋಡಿಕೊಳ್ಳಬೇಕು.
02:25 ಅವಳು ಆರಾಮವಾಗಿ ಕುಳಿತ ಮೇಲೆ ಮಗುವನ್ನು ಅವಳ ಬಳಿಗೆ ತರಬೇಕು.
02:29 ತಾಯಿಯು ಹಾಲುಣಿಸುವ ಸ್ತನದ ಬದಿಯ ತೋಳಿನಿಂದ, ಮಗುವನ್ನು ಹಿಡಿದಿರಬೇಕು.
02:37 ಮಗುವಿನ ತಲೆಯನ್ನು ಅದೇ ಕೈಯ ಮೊಣಕೈನ ಒಳಭಾಗದಲ್ಲಿ ಆರಾಮವಾಗಿ ಇರಿಸಬೇಕು.
02:44 ಅದೇ ತೋಳಿನಿಂದ, ಶಿಶುವಿನ ತಲೆ, ಕುತ್ತಿಗೆ ಮತ್ತು ದೇಹವನ್ನು ಹಿಡಿದುಕೊಂಡಿರಬೇಕು.
02:51 ಈ ಚಿತ್ರದಲ್ಲಿ, ತಾಯಿಯು ಮಗುವಿಗೆ ತನ್ನ ಬಲಗಡೆಯ ಸ್ತನದಿಂದ ಹಾಲುಣಿಸುವಳು.
02:56 ಆದ್ದರಿಂದ, ಮಗುವಿನ ಶರೀರವನ್ನು ಹಿಡಿದುಕೊಳ್ಳಲು ಅವಳು ಬಲತೋಳನ್ನು ಬಳಸುತ್ತಿದ್ದಾಳೆ ಮತ್ತು
03:04 ಮಗುವಿನ ತಲೆಯು ಬಲಗಡೆಯ ಮೊಣಕೈನ ಒಳಭಾಗದಲ್ಲಿ ಇರಿಸಲ್ಪಟ್ಟಿದೆ.
03:10 ಮಗುವನ್ನು ಎತ್ತಿಕೊಳ್ಳಲು ಸಹಾಯವು ಬೇಕಾಗಿದ್ದರೆ, ಅವಳು ಮಗುವಿನ ಕೆಳಗೆ, ತನ್ನ ತೊಡೆಯ ಮೇಲೆ ದಿಂಬನ್ನು ಇಡಬಹುದು.
03:19 ನೆನಪಿಡಿ, ತಾಯಿಯು ತನ್ನ ಬೆನ್ನನ್ನು ಬಗ್ಗಿಸಿ ಸ್ತನವನ್ನು ಮಗುವಿನ ಹತ್ತಿರ ತರಬಾರದು.
03:25 ಇದರಿಂದ ಅವಳಿಗೆ ತೊಂದರೆಯಾಗುತ್ತದೆ ಮತ್ತು ಬೆನ್ನು ನೋವು ಬರುತ್ತದೆ.
03:30 ಅವಳು ಬೆನ್ನನ್ನು ನೇರವಾಗಿಟ್ಟು, ಮಗುವನ್ನು ತನ್ನ ಎದೆಗೆ ತಲುಪುವಂತೆ ಎತ್ತಿಕೊಳ್ಳಬೇಕು.
03:36 ಈಗ, ಮಗುವನ್ನು ಸರಿಯಾಗಿ ಹೇಗೆ ಇಡುವುದು ಎಂದು ತಿಳಿಯೋಣ.
03:42 ಮಗುವಿನ ಹೊಟ್ಟೆಯು, ತಾಯಿಯ ದೇಹಕ್ಕೆ ಮೃದುವಾಗಿ ಒತ್ತಿರಬೇಕು.
03:47 ಅವರ ದೇಹಗಳ ನಡುವಿನ ದೂರವು ಕಡಿಮೆಯಾದರೆ, ಸ್ತನವನ್ನು ತಲುಪುವ ಮಗುವಿನ ಪ್ರಯತ್ನವೂ ಕಡಿಮೆ ಆಗುತ್ತದೆ.
03:54 ಮತ್ತು, ಮಗುವಿಗೆ ಸರಿಯಾಗಿ ಜೋಡಿಸಿಕೊಳ್ಳಲು ಸುಲಭವಾಗುತ್ತದೆ.
04:00 ಮಗುವನ್ನು ಹಿಡಿದುಕೊಳ್ಳುವ ವಿಧಾನವು ಎರಡನೇ ಮುಖ್ಯ ಅಂಶವಾಗಿದೆ.
04:08 ನಾವು ಆಹಾರವನ್ನು ಸೇವಿಸುವಾಗ ನಮ್ಮ ತಲೆ, ಕುತ್ತಿಗೆ ಮತ್ತು ದೇಹವು ಯಾವಾಗಲೂ ಒಂದೇ ದಿಕ್ಕಿನಲ್ಲಿ ಇರುತ್ತದೆ.
04:16 ಆದರೆ ಸ್ತನ್ಯಪಾನ ಮಾಡಿಸುವಾಗ, ಕೆಲವು ಸಲ ತಾಯಂದಿರು ಮಗುವಿನ ತಲೆಯನ್ನು ಪಕ್ಕಕ್ಕೆ ಹೊರಳಿಸಿರುತ್ತಾರೆ.
04:23 ಹಾಲುಣಿಸುವಾಗ ಇದು ಮಗುವಿಗೆ ಅನಾನುಕೂಲವನ್ನು ಮಾಡುತ್ತದೆ.
04:28 ಸ್ತನ್ಯಪಾನ ಮಾಡಿಸುವಾಗ, ಮಗುವಿನ ತಲೆ, ಕುತ್ತಿಗೆ ಮತ್ತು ದೇಹವು ಒಂದೇ ಸಾಲಿನಲ್ಲಿರಬೇಕು.
04:35 ಇದರಿಂದ ಮಗುವಿಗೆ ಹಾಲನ್ನು ನುಂಗಲು ಸುಲಭವಾಗುತ್ತದೆ.
04:41 ಮಗುವನ್ನು ಹೊಂದಿಸುವ ಬಗ್ಗೆ, ಈಗ ಮೂರನೆಯ ಅಂಶಕ್ಕೆ ಬರುತ್ತೇವೆ.
04:46 ತಾಯಿಯು ಮಗುವಿನ ಪೂರ್ತಿ ಶರೀರವನ್ನು ಹಿಡಿದುಕೊಳ್ಳಬೇಕು.
04:51 ಇಲ್ಲದಿದ್ದರೆ, ಮಗುವು ಸ್ತನಕ್ಕೆ ಸರಿಯಾಗಿ ಜೋಡಿಸಿಕೊಳ್ಳಲು (attach) ಪ್ರಯತ್ನಿಸಬೇಕಾಗುವುದು.
04:58 ನಂತರ, ಮಗುವಿನ ಮೂಗು ಮತ್ತು ಗದ್ದಗಳ ಸ್ಥಾನವನ್ನು ನೋಡೋಣ.
05:03 ಶಿಶುವಿನ ಮೂಗು ಮತ್ತು ಮೊಲೆತೊಟ್ಟು ಒಂದೇ ಸಾಲಿನಲ್ಲಿರಬೇಕು.
05:07 ಮತ್ತು, ಗದ್ದವು ಮುಂದೆ ಬಂದಿದ್ದು ಸ್ತನಕ್ಕೆ ಅತೀ ಹತ್ತಿರವಾಗಿರಬೇಕು.
05:13 ಇದರಿಂದ ಲ್ಯಾಚಿಂಗ್ ನಲ್ಲಿ, ಶಿಶು ಅರಿಯೋಲಾದ ಕೆಳಗಿನ ಹೆಚ್ಚು ಭಾಗವನ್ನು ಒಳಗೆ ತೆಗೆದುಕೊಳ್ಳುತ್ತದೆ.
05:19 ಹೀಗಾಗಿ, ಹೆಚ್ಚು ಹಾಲನ್ನು ಕುಡಿಯಲು ಕೆಳದವಡೆಯನ್ನು ಬಳಸುತ್ತದೆ.
05:26 ಗಮನಿಸಿ: ಅರಿಯೋಲಾ, ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗವಾಗಿದೆ.
05:32 ಈಗ ಮಗುವನ್ನು ಸರಿಯಾಗಿ ಹಿಡಿದಿರುವುದರಿಂದ,
05:35 ಸ್ತನವನ್ನು ಹಿಡಿದುಕೊಳ್ಳುವ ಬಗೆಯನ್ನು ಕಲಿಯೋಣ.
05:39 ತಾಯಿಯು ತನ್ನ ಖಾಲಿ ಇರುವ ಕೈ ಬೆರಳುಗಳನ್ನು ಬಳಸಿ, U ಆಕಾರದಲ್ಲಿ ಮೇಲಿನಿಂದ ತನ್ನ ಸ್ತನವನ್ನು ಹಿಡಿಯಬೇಕು.
05:48 ಈ ಚಿತ್ರದಲ್ಲಿ, ತಾಯಿಯು ತನ್ನ ಬಲ ಸ್ತನವನ್ನು ಹಿಡಿಯಲು ಎಡಗೈಯನ್ನು ಬಳಸುತ್ತಾಳೆ.
05:55 ಹೆಬ್ಬೆರಳು ಮತ್ತು ಬೆರಳುಗಳ ಸರಿಯಾದ ಸ್ಥಾನವನ್ನು ತಿಳಿಯಲು, ತಾಯಿಯ ಬಲ ಮೊಲೆತೊಟ್ಟನ್ನು ಗಡಿಯಾರದ ಕೇಂದ್ರ ಎಂದು ಊಹಿಸಿ.
06:04 ತಾಯಿಯು ಎಡ ಹೆಬ್ಬೆರಳನ್ನು, ಈ ಗಡಿಯಾರದಲ್ಲಿ ಗಂಟೆ 3 ಆದ ಹಾಗೆ ಇಡಬೇಕು.
06:10 ಅವಳ ಎಡ ತೋರುಬೆರಳು ಮತ್ತು ಮಧ್ಯದ ಬೆರಳನ್ನು ಗಂಟೆ 9 ಆದಾಗಿನ ಹಾಗೆ ಇಡಬೇಕು.
06:18 ಸ್ತನವನ್ನು ಹಿಡಿದಿರುವ ತಾಯಿಯ ಬೆರಳುಗಳು, ಮಗುವಿನ ತುಟಿಗಳಿರುವ ದಿಕ್ಕಿನಲ್ಲಿಯೇ ಇರಬೇಕು.
06:25 ಯಾಕೆ?

ಒಂದು ಉದಾಹರಣೆಯನ್ನು ಬಳಸಿ, ಇದನ್ನು ತಿಳಿದುಕೊಳ್ಳೋಣ.

06:30 ವಡಾ-ಪಾವ್ ಅಥವಾ ಬರ್ಗರ್ ತಿನ್ನುವಾಗ, ನಮ್ಮ ತುಟಿಗಳು ಅಡ್ಡಲಾಗಿ ತೆರೆದಿವೆ.
06:35 ದೊಡ್ಡ ತುತ್ತು ತೆಗೆದುಕೊಳ್ಳಲು, ವಡಾ-ಪಾವ್ ಅಥವಾ ಬರ್ಗರ್ ಅನ್ನು ಅಡ್ಡಲಾಗಿ ಹಿಡಿಯುತ್ತೇವೆ.
06:40 ಇಲ್ಲಿ, ಹೆಬ್ಬೆರಳು ಮತ್ತು ಬೆರಳುಗಳನ್ನು ತುಟಿಗಳ ದಿಕ್ಕಿನಲ್ಲಿ ಇಡುತ್ತೇವೆ.
06:46 ವಡಾ-ಪಾವ್ ಅಥವಾ ಬರ್ಗರ್ ಅನ್ನು ನೆಟ್ಟಗೆ ಹಿಡಿದಿದ್ದರೆ, ದೊಡ್ಡ ತುತ್ತನ್ನು ಕಚ್ಚಲು ಸಾಧ್ಯವಾಗುವುದಿಲ್ಲ.
06:53 ಹಾಗೆಯೇ, ಮಗುವಿನ ತುಟಿಗಳ ದಿಕ್ಕನ್ನು ಗಮನಿಸಿ. ತುಟಿಗಳು ಇಲ್ಲಿ ಲಂಬವಾಗಿವೆ.
07:00 ಆದ್ದರಿಂದ, ಬೆರಳುಗಳು ಮತ್ತು ಹೆಬ್ಬೆರಳನ್ನು ಕೂಡ ಸ್ತನದ ಮೇಲೆ ಲಂಬವಾಗಿ ಇಡಬೇಕು.
07:06 ಇದರಿಂದ, ಮಗುವಿಗೆ ಬಾಯಿಯಲ್ಲಿ ಕೆಳಗಿನ ಅರಿಯೋಲಾದ ದೊಡ್ಡ ಭಾಗವನ್ನು ತೆಗೆದುಕೊಳ್ಳಲು ಸಹಾಯವಾಗುತ್ತದೆ.
07:13 ಅಲ್ಲದೆ, ತಾಯಿಯ ಹೆಬ್ಬೆರಳು ಮತ್ತು ಬೆರಳುಗಳು ಯಾವಾಗಲೂ ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರದಲ್ಲಿ ಇರಬೇಕು.
07:23 ವಡಾ-ಪಾವ್ ಅಥವಾ ಬರ್ಗರ್ ತಿನ್ನುವಾಗ, ಅದನ್ನು ಬಹಳ ಹತ್ತಿರದಲ್ಲಿ ಹಿಡಿದುಕೊಂಡರೆ, ನಮ್ಮ ಬೆರಳುಗಳು ದೊಡ್ಡ ತುತ್ತನ್ನು ಕಚ್ಚುವಾಗ ಬಾಯಿಗೆ ಅಡ್ಡಬರುತ್ತವೆ.
07:34 ತುಂಬಾ ದೂರದಲ್ಲಿ ಹಿಡಿದರೆ, ಅದು ನಮ್ಮ ಬಾಯಿಯಲ್ಲಿ ಸಾಲುವ ಆಕಾರದಲ್ಲಿ ಇರುವುದಿಲ್ಲ.
07:41 ಹೀಗಾಗಿ, ದೊಡ್ಡ ತುತ್ತನ್ನು ಕಚ್ಚಲು, ಅದನ್ನು ಸರಿಯಾದ ದೂರದಲ್ಲಿ ಹಿಡಿಯುತ್ತೇವೆ.
07:47 ಈ ಚಿತ್ರದಲ್ಲಿ ತೋರಿಸಿರುವಂತೆ, ಮಗುವಿಗೆ ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರವು ಸರಿಯಾಗಿದೆ.
07:55 ಈ ಅಂತರವು, ಕೆಳಗಿನ ಅಂಶಗಳನ್ನು ಖಚಿತಪಡಿಸುತ್ತದೆ-

ಮಗುವು ತನ್ನ ಬಾಯಿಯಲ್ಲಿ ಅರಿಯೋಲಾದ ದೊಡ್ಡ ಭಾಗವನ್ನು ಕಚ್ಚಿದಾಗ ತಾಯಿಯ ಬೆರಳುಗಳು ಅಡ್ಡಬರುವುದಿಲ್ಲ,

08:05 ತಾಯಿಯು ಮೊಲೆತೊಟ್ಟನ್ನು ಮಾತ್ರ ಒತ್ತುವುದಿಲ್ಲ. ಇದರಿಂದ ತುಂಬಾ ಕಡಿಮೆ ಹಾಲು ಸಿಗುತ್ತದೆ.
08:11 ಹೆಚ್ಚು ಹಾಲು ಬರಲು, ಅರಿಯೋಲಾದ ಕೆಳಗಿನ ಹಾಲಿನ ದೊಡ್ಡ ನಾಳಗಳನ್ನು ಒತ್ತುತ್ತಾಳೆ.
08:17 ಮತ್ತು, ಮಗು ಸರಿಯಾಗಿ ಅಂಟಿಕೊಳ್ಳುವಂತೆ ಸ್ತನವನ್ನು ಹಿಡಿಯಲಾಗಿದೆ.
08:23 ನೆನಪಿಡಿ- ಮಗುವಿನ ಗದ್ದ ಇರುವ ಸ್ತನದ ಬದಿಯಲ್ಲಿ, ತಾಯಿಯ ಹೆಬ್ಬೆರಳು
08:30 ಮತ್ತು ಮಗುವಿನ ಮೂಗು ಇರುವ ಸ್ತನದ ಬದಿಯಲ್ಲಿ 2 ಬೆರಳುಗಳು ಇರಬೇಕು.
08:36 ವಡಾ- ಪಾವ್ ಅಥವಾ ಬರ್ಗರ್ ನ ಉದಾಹರಣೆಗೆ ಹಿಂತಿರುಗಿ.
08:41 ವಡಾ-ಪಾವ್ ಅಥವಾ ಬರ್ಗರ್ ಅನ್ನು ಸರಿಯಾಗಿ ಹಿಡಿದ ನಂತರ, ದೊಡ್ಡದಾಗಿ ಕಚ್ಚಲು ಅದನ್ನು ಅದುಮಿ ಹಿಡಿಯುತ್ತೇವೆ.
08:48 ಹೀಗೆಯೇ, ತಾಯಿಯು ಮೇಲಿನಿಂದ U ಆಕಾರದಲ್ಲಿ, ಸ್ತನವನ್ನು ಮೆತ್ತಗೆ ಒತ್ತಿ ಹಿಡಿಯಬೇಕು.
08:54 ಇದು, ಮಗುವಿಗೆ ಕೆಳಗಿನ ಅರಿಯೋಲಾದ ದೊಡ್ಡ ಭಾಗವನ್ನು ಬಾಯಿಯಲ್ಲಿ ಹಿಡಿಯಲು ಸಹಾಯ ಮಾಡುತ್ತದೆ.
09:01 ನೆನಪಿಡಿ, ತಾಯಿಯು ಸ್ತನವನ್ನು ತಲೆಕೆಳಗಾದ V ಆಕಾರದಲ್ಲಿ ಅದುಮಬಾರದು.
09:07 V ಆಕಾರದ ಒತ್ತುವಿಕೆಯು ಸ್ತನವನ್ನು ಹಿಸುಕಿ, ನಿಪ್ಪಲ್ ಫೀಡಿಂಗ್ ಗೆ ಕಾರಣವಾಗುತ್ತದೆ.
09:14 ಅಲ್ಲದೆ, ಹೆಬ್ಬೆರಳು ಮತ್ತು ಬೆರಳುಗಳಿಂದ ಸ್ತನವನ್ನು ಸಮನಾಗಿ ಒತ್ತವುದನ್ನು ಖಚಿತಪಡಿಸಿಕೊಳ್ಳಿ.
09:21 ಇಲ್ಲದಿದ್ದರೆ, ಮೊಲೆತೊಟ್ಟು ಬಲ ಅಥವಾ ಎಡಭಾಗಕ್ಕೆ ಸರಿಯುತ್ತದೆ
09:27 ಮತ್ತು ಸ್ತನಕ್ಕೆ ಸರಿಯಾಗಿ ಜೋಡಿಸಿಕೊಳ್ಳಲು ಮಗುವಿಗೆ ಸಾಧ್ಯವಾಗುವುದಿಲ್ಲ.
09:32 ನೆನಪಿಡಿ, ಮಗುವಿನ ಕಡೆಗೆ ಸ್ತನವನ್ನು ಬದಿಯಿಂದ ತಳ್ಳುವ ಮೂಲಕ ಅದನ್ನು ಮಗುವಿನೆಡೆಗೆ ತರಬೇಡಿ.
09:39 ಯಾವಾಗಲೂ ಮಗುವನ್ನು ಸ್ತನದ ಕಡೆಗೆ ತನ್ನಿ.
09:43 ಈಗ, ಮಗು 'ಕ್ರೇಡಲ್ ಹೋಲ್ಡ್' ನಲ್ಲಿದೆ ಮತ್ತು ಸ್ತನ್ಯಪಾನಕ್ಕಾಗಿ ಜೋಡಿಸಿಕೊಳ್ಳಲು ಸಿದ್ಧವಾಗಿದೆ.
09:49 ಸ್ತನಕ್ಕೆ ಮಗುವಿನ ಸರಿಯಾದ ಜೋಡಣೆಯ ಬಗ್ಗೆ, ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
09:58 ಮಗು ಸ್ತನಕ್ಕೆ ಸರಿಯಾಗಿ ಅಂಟಿಕೊಂಡ ಮೇಲೆ ಮತ್ತು ಸ್ತನವು ತುಂಬಾ ಭಾರವಾಗಿರದಿದ್ದರೆ ಆಗ -
10:05 ತಾಯಿಯು ಸ್ತನವನ್ನು ಕೈಯಿಂದ ಬಿಡಬೇಕು.
10:09 ಮತ್ತು ಆ ಕೈಯನ್ನು ಮಗುವನ್ನು ಹಿಡಿಯಲು ಕೆಳಗೆ ತರಬೇಕು.
10:14 ಈ ಸ್ಥಾನದಲ್ಲಿ, ತಾಯಿಯು ತನ್ನ ಎರಡೂ ತೋಳುಗಳನ್ನು ಶರೀರದ ಹತ್ತಿರಕ್ಕೆ ತರಬೇಕು.
10:21 ಹಾಲುಣಿಸುವ ಸಮಯದಲ್ಲಿ ಇದು ಅವಳನ್ನು ಆರಾಮವಾಗಿಡುತ್ತದೆ.
10:26 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
10:29 ಧನ್ಯವಾದಗಳು.

Contributors and Content Editors

Debosmita, Nayana, Sandhya.np14