Geogebra/C2/Introduction-to-Geogebra/Kannada

From Script | Spoken-Tutorial
Revision as of 13:06, 17 March 2015 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ನಮಸ್ಕಾರ. Introduction to Geogebra(ಇಂಟ್ರೊಡಕ್ಶನ್ ಟು ಜಿಯೊಜಿಬ್ರಾ) ಎನ್ನುವ ಟ್ಯುಟೋರಿಯಲ್ ಗೆ ಸ್ವಾಗತ. ಈ ಟ್ಯುಟೋರಿಯಲ್ ನಲ್ಲಿ, Geogebra ಸಾಫ್ಟ್ವೇರ್ ದ ಜೊತೆಗೆ ಕೆಲಸವನ್ನು ಮಾಡುವ ಬಗ್ಗೆ ನಿಮಗೆ ಪರಿಚಯ ಮಾಡಿ ಕೊಡುತ್ತೇನೆ.
00:09 Geogebra (ಜಿಯೊಜಿಬ್ರಾ) ಎಂದರೇನು? ಇದು ಗಣಿತದ ಒಂದು ಉಚಿತ ಸಾಫ್ಟ್ವೇರ್ ಆಗಿದ್ದು www.geogebra.org ಎನ್ನುವಲ್ಲಿ ಡೌನ್ಲೋಡ್ ಮಾಡಲು ಲಭ್ಯವಿದೆ.
00:17 ಇದು ‘ಇಂಟರಾಕ್ಟಿವ್’ ಆಗಿದೆ. ಅಲ್ಲದೇ ರೇಖಾಗಣಿತದ ಆಕೃತಿ ಹಾಗೂ ಅದರ ಬೀಜಗಣಿತದ ನಿರೂಪಣೆಯನ್ನು ಪ್ರತಿಕ್ರಮದಲ್ಲಿ (vice versa) ನೀವು ನೋಡಲು ಸಾಧ್ಯವಿದೆ. ಆದ್ದರಿಂದ ಇದು ಕಂಪ್ಯೂಟರ್ ಆಧಾರಿತ ಕಲಿಯುವಿಕೆಗೆ ಉಪಯುಕ್ತವಾಗಿದೆ.
00:25 ಇದು ರೇಖಾಗಣಿತ, ಬೀಜಗಣಿತ ಹಾಗೂ ‘ಕ್ಯಾಲ್ಕ್ಯುಲಸ್’ ಗಳನ್ನು ಒಟ್ಟುಗೂಡಿಸುತ್ತದೆ. ಹೀಗಾಗಿ ನೀವು ರೇಖಾಗಣಿತದ ಆಕೃತಿಗಳನ್ನು ರಚಿಸುವುದು, ಸಮೀಕರಣಗಳನ್ನು ನಮೂದಿಸುವುದು (enter), ವೇರಿಯೆಬಲ್ ಹಾಗೂ ವೆಕ್ಟರ್ ಗಳನ್ನು ನಿಭಾಯಿಸುವುದು ಇತ್ಯಾದಿಗಳನ್ನು ಮಾಡಬಹುದು..
00:35 ‘ಜಿಯೊಜಿಬ್ರಾ’ವನ್ನು ಪ್ರಾರಂಭಿಸಲು, ನಾನು Linux ಆಪರೇಟಿಂಗ್ ಸಿಸ್ಟಂ Ubuntu ವರ್ಷನ್ 10.04 LTS (ಎಲ್ ಟಿ ಎಸ್) ಹಾಗೂ Geogebra ವರ್ಷನ್ 3.2.40.0 ಗಳನ್ನು ಬಳಸುತ್ತಿದ್ದೇನೆ.
00:47 ನೀವು ಈಗಾಗಲೇ ‘ಜಿಯೊಜಿಬ್ರಾ’ ಇನ್ಸ್ಟಾಲ್ ಮಾಡಿದ್ದರೆ, Ubuntu ಮೆನು ಐಟಂಗಳಾದ Applications , Education ಅಥವಾ Science ಎನ್ನುವಲ್ಲಿಗೆ ಕ್ರಮವಾಗಿ ಹೋಗಿ ಹಾಗೂ Geogebra ಅಪ್ಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ.
00:58 ನೀವು ‘ಜಿಯೊಜಿಬ್ರಾ’ ಇನ್ಸ್ಟಾಲ್ ಮಾಡಿರದಿದ್ದರೆ, ದಯವಿಟ್ಟು ಇದನ್ನು ಇನ್ಸ್ಟಾಲ್ ಮಾಡಲು ಕ್ರಮವಾಗಿ System , Administration, Synaptic Package Manager ಗಳಿಗೆ ಹೋಗಿ.
01:08 ಈಗ ನಾವು ‘ಜಿಯೊಜಿಬ್ರಾ’ ವಿಂಡೋವನ್ನು ಒಳಹೊಕ್ಕು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾನು ಮೆನು ಬಾರ್, ಟೂಲ್ ಬಾರ್ ಹಾಗೂ ಟೂಲ್ ವ್ಯೂ, ಗ್ರಾಫಿಕ್ಸ್ ವ್ಯೂ ಹಾಗೂ ಆಲ್ಜಿಬ್ರಾ ವ್ಯೂ, ಇನ್ಪುಟ್ ಬಾರ್ ಹಾಗೂ ಕಮಾಂಡ್ ಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುವೆನು.
01:20 ಮಾದರಿಯ Geogebra ವಿಂಡೋ ಹೀಗೆ ಕಾಣಿಸುತ್ತದೆ. ಯಾವುದೇ ‘ವಿಂಡೋ’ ಆಧಾರಿತ ಅಪ್ಲಿಕೇಶನ್ ನಂತೆ ಇದು ಸ್ಟ್ಯಾಂಡರ್ಡ್ ಮೆನು- ಬಾರ್ ಅನ್ನು ಹೊಂದಿದೆ.
01:28 ಟೂಲ್- ಬಾರ್, ‘ಜಿಯೊಜಿಬ್ರಾ’ದ ಕಂಪಾಸ್ ಬಾಕ್ಸ್ ನ ಹಾಗೆ.
01:32 ಟೂಲ್ ವ್ಯೂ, ಯಾವ ಟೂಲ್ ಆಯ್ಕೆಯಾಗಿದೆ ಹಾಗೂ ಬಳಸಲು ಸಿದ್ಧವಿದೆ ಎನ್ನುವುದನ್ನು ನಿಮಗೆ ಹೇಳುತ್ತದೆ.
01:36 ‘ಗ್ರಾಫಿಕ್ ವ್ಯೂ’ (graphic view), ‘ಜಿಯೊಜಿಬ್ರಾ’ದ ‘ಡ್ರಾಯಿಂಗ್ ಪ್ಯಾಡ್’, ಆಗಿದೆ. ಈ ಪ್ಯಾಡ್ ನ ಮೇಲೆ ನೀವು ರೇಖಾಗಣಿತದ ಆಕೃತಿಗಳನ್ನು ರಚಿಸಬಹುದು.
01:42 ಇದು ‘ಆಲ್ಜಿಬ್ರಾ ವ್ಯೂ’ (algebra view) ಆಗಿದೆ. ಈ ವಿಂಡೋನಲ್ಲಿ, ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ರಚಿಸಲಾದ ರೇಖಾಗಣಿತದ ಎಲ್ಲ ಆಕೃತಿಗಳ ಬೀಜಗಣಿತದ ನಿರೂಪಣೆಗಳನ್ನು ನೀವು ನೋಡಬಹುದು.
01:50 ಬೀಜಗಣಿತದ ಸಮೀಕರಣಗಳನ್ನು ಸೇರಿಸಲು ‘ಇನ್ಪುಟ್ ಬಾರ್’(Input Bar) ನಿಮಗೆ ಅವಕಾಶ ನೀಡುತ್ತದೆ. ಇವು ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಹಾಗೂ ‘ಆಲ್ಜಿಬ್ರಾ ವ್ಯೂ’ನಲ್ಲಿ ಕಾಣಿಸಿಕೊಳ್ಳುತ್ತವೆ.
01:59 ‘ಇನ್ಪುಟ್ ಬಾರ್’ಗಾಗಿ ‘ಜಿಯೊಜಿಬ್ರಾ’ ದಿಂದ ಬೆಂಬಲಿತವಾದ ಕಮಾಂಡ್ ಗಳು ಈ ಡ್ರಾಪ್-ಡೌನ್ ಮೆನುನಲ್ಲಿ ಇರುತ್ತವೆ.
02:05 ‘ಡ್ರಾಯಿಂಗ್ ಪ್ಯಾಡ್’, ‘ಜಿಯೊಜಿಬ್ರಾ’ದಲ್ಲಿ ಯಾವಾಗಲೂ ಗೋಚರಿಸುತ್ತದೆ ಹಾಗೂ ಇದನ್ನು ಮುಚ್ಚಲು ಸಾಧ್ಯವಿಲ್ಲ.
02:10 View ಗೆ ಹೋಗಿ Grid ಎನ್ನುವ ಆಯ್ಕೆಯನ್ನು ‘ಚೆಕ್’ ಮಾಡುವ ಮೂಲಕ ಇದನ್ನು ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ನೀವು ಉಪಯೋಗಿಸಬಹುದು.
02:17 ಹಾಗೆಯೇ, ನಿಮಗೆ Axes ಅನ್ನು ನೋಡುವುದು ಬೇಡವಾಗಿದ್ದರೆ ನೀವು ಅದನ್ನು ಅನ್-ಚೆಕ್ ಮಾಡಬಹುದು. ಈ ಟ್ಯುಟೋರಿಯಲ್ ಗಾಗಿ ನಾವು Axes ಹಾಗೂ Grid ಗಳನ್ನು ಕಾಣುವಂತೆ ಇಡುವೆವು.
02:25 ಒಂದುವೇಳೆ ನೀವು ‘ಆಲ್ಜಿಬ್ರಾ ವ್ಯೂ’ ಅಥವಾ ‘ಇನ್ಪುಟ್ ಬಾರ್’ ಅನ್ನು ‘ಕ್ಲೋಸ್’ ಮಾಡಲು ಬಯಸಿದರೆ View ಗೆ ಹೋಗಿ ಆ ಆಯ್ಕೆಯನ್ನು ಅನ್-ಚೆಕ್ ಮಾಡಬಹುದು. ಈ ಟ್ಯುಟೋರಿಯಲ್ ನಲ್ಲಿ ನಾವು ‘ಇನ್ಪುಟ್ ಬಾರ್’ಅನ್ನು ತೆಗೆದುಹಾಕೋಣ.
02:38 ಈಗ, ಒಂದು ಕಂಪಾಸ್ ಬಾಕ್ಸ್ ನಂತಿರುವ ಈ ಟೂಲ್-ಬಾರ್ ಬಗ್ಗೆ ಹೆಚ್ಚಿನ ವಿವರಗಳು. ಯಾವುದೇ ಒಂದು ಟೂಲನ್ನು ಬಳಸಲು, ಒಂದು ಐಟಂ ನ ಮೇಲೆ ಕ್ಲಿಕ್ ಮಾಡಿ.
02:47 ನೀವು ಒಂದು ವಸ್ತುವಿನ ಮೇಲೆ ಕ್ಲಿಕ್ ಮಾಡಿದಾಗ, ಅದು ಆಯ್ಕೆಯಾಗಿದೆ ಎಂದು ಸೂಚಿಸಲು ಅದರ ಸುತ್ತಲೂ ಗಾಢ ನೀಲಿ ಬಣ್ಣದ ಅಂಚು ಕಾಣಿಸಿಕೊಳ್ಳುತ್ತದೆ ಎಂದು ಗಮನಿಸಿ. ಅದರ ಹೆಸರು ಹಾಗೂ ಅದನ್ನು ಬಳಸುವ ಬಗ್ಗೆ ಸೂಚನೆ ಸಹ ಟೂಲ್ ವ್ಯೂ ನಲ್ಲಿ ಕಾಣಿಸಿಕೊಳ್ಳುತ್ತವೆ.
02:59 Move Drawing Pad ಎನ್ನುವುದು ಬಲತುದಿಯಲ್ಲಿರುವ ಟೂಲ್ ಆಗಿದೆ. ಅದರ ಮೇಲೆ ಕ್ಲಿಕ್ ಮಾಡಿ ಆಮೇಲೆ ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಕ್ಲಿಕ್ ಮಾಡಿ. ಲೆಫ್ಟ್ ಕ್ಲಿಕ್ ಅನ್ನು ಒತ್ತಿ ಹಿಡಿದು ‘ಡ್ರಾಯಿಂಗ್ ಪ್ಯಾಡ್’ಅನ್ನು ಬೇಕಾದ ಸ್ಥಾನಕ್ಕೆ ಸ್ಥಳಾಂತರಿಸಿ.
03:13 ಕಂಪಾಸ್ ಬಾಕ್ಸ್ ನಲ್ಲಿಯ ಪೆನ್ಸಿಲ್ ನಿಂದ ಆರಂಭಿಸೋಣ. ನಾವು ರೇಖಾಗಣಿತದಲ್ಲಿ ಪೆನ್ಸಿಲ್ ನಿಂದ ಬಿಂದುವನ್ನು ‘ಡ್ರಾ’ ಮಾಡಬಹುದು.
03:19 ಇಲ್ಲಿ ಪೆನ್ಸಿಲ್ ಟೂಲ್ಗಳಿವೆ. ಟೂಲ್ನ ಮೂಲೆಯಲ್ಲಿರುವ ಚಿಕ್ಕ ಕೆಂಪು ತ್ರಿಕೋನದ ಮೇಲೆ ನೀವು ಕ್ಲಿಕ್ ಮಾಡಿದರೆ ನೀವು ಎಲ್ಲ ಪೆನ್ಸಿಲ್ ಆಥವಾ Point ಟೂಲ್ಗಳನ್ನು ನೋಡುವಿರಿ.
03:29 ಹೀಗೆಯೇ, ಮುಂದಿನ ಟೂಲ್ ಐಟಂಗಳ ಸೆಟ್, ರೇಖೆ (ಲೈನ್) ಗಳಿಗಾಗಿ ಇರುತ್ತದೆ. ಆಮೇಲೆ ಈ Perpendicular lines ಹಾಗೂ Bisectors, Polygons, circles ಮುಂತಾದವುಗಳು.
03:42 ಈ ಟ್ಯುಟೋರಿಯಲ್ ನಲ್ಲಿ ನಾನು ನಿಮಗೆ ಬಿಂದು, ರೇಖೆಗಳು, ಸಮಾನಾಂತರ ಹಾಗೂ ಲಂಬ ರೇಖೆಗಳು, ಆಬ್ಜೆಕ್ಟ್ ಗಳ ಮಾಪನ, ಆಬ್ಜೆಕ್ಟ್ ಗಳ ಗುಣಲಕ್ಷಣಗಳನ್ನು ಬದಲಾಯಿಸುವುದು ಮತ್ತು ಫೈಲನ್ನು ಸೇವ್ ಮಾಡುವುದು ಇವುಗಳ ಬಗ್ಗೆ ತಿಳಿಸಲಿದ್ದೇನೆ.
04:01 ಈಗ ನಾವು ಬಿಂದುಗಳನ್ನು ಬರೆಯೋಣ (draw). New point ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ. ನಿಮಗೆ ಹೊಸ ಬಿಂದುಗಳು ಸಿಗುತ್ತವೆ.
04:12 ಈ ಬಿಂದು, ‘ಡ್ರಾಯಿಂಗ್ ಪ್ಯಾಡ್’ ಮೇಲೆ ಹಾಗೂ ‘ಆಲ್ಜಿಬ್ರಾ ವ್ಯೂ’ನಲ್ಲಿ ಸಹ ಕಾಣಿಸುವುದನ್ನು ಗಮನಿಸಿ.
04:19 ‘ಜಿಯೊಜಿಬ್ರಾ’ನಲ್ಲಿ, ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಡ್ರಾ ಮಾಡಲ್ಪಟ್ಟ ಎಲ್ಲ ಟೂಲ್ ಐಟಂಗಳನ್ನು ‘ಆಬ್ಜೆಕ್ಟ್’ ಎಂದು ಕರೆಯಲಾಗುತ್ತದೆ.
04:24 A ಮತ್ತು B ಬಿಂದುಗಳು Free Objects (ಫ್ರೀ ಆಬ್ಜೆಕ್ಟ್) ಆಗಿವೆ. ಎಂದರೆ ಇವುಗಳು ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಬೇರೆ ಯಾವುದೇ ಆಬ್ಜೆಕ್ಟ್ ನ ಮೇಲೆ ಅವಲಂಬಿಸಿಲ್ಲ.
04:32 Segment between Two Points ಎನ್ನುವ ಆಯ್ಕೆಗೆ ಹೋಗಿ, ಈಗಿರುವ A ಮತ್ತು B ಗಳಂತಹ ಎರಡು ಬಿಂದುಗಳನ್ನು ಬಳಸಿ, ನೀವು ಒಂದು ರೇಖೆಯನ್ನು ಎಳೆಯಬಹುದು. ಅಥವಾ ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಬೇರೆ ಎಲ್ಲಿಯಾದರೂ ಕ್ಲಿಕ್ ಮಾಡಿ. ನಿಮಗೆ ಎರಡು ಹೊಸ ಬಿಂದುಗಳು ಹಾಗೂ ಇವುಗಳ ನಡುವಿನ ರೇಖೆ ಸಿಗುತ್ತವೆ.
04:51 ಹೀಗೆಯೇ, ಒಂದು ಬಿಂದು ಹಾಗೂ ಆನಂತರ ಒಂದು ರೇಖೆಯನ್ನು ಚೆಕ್ ಮಾಡುವುದರಿಂದ ನೀವು ಒಂದು ಲಂಬರೇಖೆಯನ್ನು ಎಳೆಯಬಹುದು. D ಬಿಂದುವಿನ ಮೂಲಕ ಹಾಯ್ದುಹೋಗುವ, CD ರೇಖೆಗೆ ಲಂಬವಾಗಿರುವ ಒಂದು ಲಂಬರೇಖೆಯು ನಿಮಗೆ ಸಿಗುತ್ತದೆ.
05:10 ಇಲ್ಲಿ ಎಲ್ಲಿಯಾದರೂ ಒಂದು ಬಿಂದುವಿನ ಮೇಲೆ ಕ್ಲಿಕ್ ಮಾಡುವೆನು ಹಾಗೂ AB ಯನ್ನು ಆಯ್ಕೆಮಾಡುವೆನು. E ಬಿಂದುವಿನಲ್ಲಿ ಹಾಯ್ದುಹೋಗುವ ಮತ್ತು AB ಗೆ ಸಮಾನಾಂತರವಾಗಿರುವ ಒಂದು ರೇಖೆಯು ನನಗೆ ಸಿಗುತ್ತದೆ.
05:25 ಈಗ, ಇಲ್ಲಿ ಈ ಟೂಲ್ ಗೆ ಹೋಗಿ, Intersect two objects ನ ಮೇಲೆ ಕ್ಲಿಕ್ ಮಾಡುವುದರಿಂದ ಎರಡು ಆಬ್ಜೆಕ್ಟ್ ಗಳ ಛೇದಕ ಬಿಂದುವನ್ನು ನೀವು ಕಂಡುಹಿಡಿಯಬಹುದು.
05:32 ನೀವು ನಿಮ್ಮ ಮೌಸನ್ನು ಛೇದನದ (intersection) ಮೇಲೆ ಅಲುಗಾಡಿಸಿದಾಗ ಎರಡೂ ಆಬ್ಜೆಕ್ಟ್ ಗಳು ಹೈಲೈಟ್ ಆಗುತ್ತವೆ. ಆ ಸಮಯದಲ್ಲಿ ಕ್ಲಿಕ್ ಮಾಡಿ, ನಿಮಗೆ ಎರಡು ಆಬ್ಜೆಕ್ಟ್ ಗಳ ಛೇದನವು ಸಿಗುತ್ತದೆ.
05:44 ದೂರವನ್ನು ಅಳೆಯಲು, ಟೂಲ್ ಬಾರ್ ನ ಮೇಲೆ ಬಲಗಡೆಯಿಂದ ನಾಲ್ಕನೆಯ ಟೂಲ್ನ ಮೇಲೆ ಕ್ಲಿಕ್ ಮಾಡಿ ಮತ್ತು Distance or length ಎಂಬ ಟೂಲನ್ನು ಆಯ್ಕೆಮಾಡಿ.
05:52 ಎರಡು ಬಿಂದುಗಳನ್ನು ಆಯ್ಕೆಮಾಡುವುದರ ಮೂಲಕ ನೀವು ಅವುಗಳ ನಡುವಿನ ದೂರವನ್ನು ಅಳೆಯಬಹುದು. ಇಲ್ಲಿ D,F ನ ಮೇಲೆ ಕ್ಲಿಕ್ ಮಾಡಿ ಅಥವಾ ಇಡೀ ರೇಖೆಯನ್ನು ನೀವು ಆಯ್ಕೆಮಾಡಬಹುದು.
06:02 ‘ಗ್ರಿಡ್’ನ ಮೇಲೆ ‘ಯೂನಿಟ್’ಗಳಿಲ್ಲ ಎನ್ನುವುದನ್ನು ಗಮನಿಸಿ. ನಾವು ‘ಯೂನಿಟ್’ನ ಹೆಸರುಗಳನ್ನು ಮುಂದುವರಿದ ಟಾಪಿಕ್ ಗಳಲ್ಲಿ ನೋಡೋಣ.
06:12 ಪ್ರತಿಯೊಂದು ಆಬ್ಜೆಕ್ಟ್ ನ ‘ಲೇಬಲ್’ ಹಾಗೂ ‘ಕಲರ್’ನಂತಹ ಗುಣಲಕ್ಷಣಗಳನ್ನು ನೀವು ಬದಲಾಯಿಸಬಹುದು. ಅದಕ್ಕೂ ಮೊದಲು
06:19 ನಿಮಗೆ ಯಾವುದೇ ಆಬ್ಜೆಕ್ಟ್ ಅನ್ನು ಡ್ರಾ ಮಾಡುವದು ಬೇಡವಾಗಿದ್ದರೆ ದಯವಿಟ್ಟು ಇಲ್ಲಿಯ ‘ಆರೋ’ ಕೀಯನ್ನು ಬಳಸಿ. ನೀವು ಅದನ್ನು ಬಳಸಿದರೆ ಅದು ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಯಾವುದೇ ಆಬ್ಜೆಕ್ಟ್ ಅನ್ನು ಡ್ರಾ ಮಾಡುವುದಿಲ್ಲ.
06:30 ಈಗ, ಆಬ್ಜೆಕ್ಟ್ ನ ಗುಣಲಕ್ಷಣಗಳನ್ನು ಬದಲಾಯಿಸಲು, ನಿಮ್ಮ ಮೌಸನ್ನು ಆಬ್ಜೆಕ್ಟ್ ನ ಮೇಲೆ ನಡೆಸಿ. ಅದು ಹೈಲೈಟ್ ಆದಾಗ ರೈಟ್-ಕ್ಲಿಕ್ ಮಾಡಿ. ಆನಂತರ Object Properties ನ ಮೇಲೆ ಕ್ಲಿಕ್ ಮಾಡಿ.
06:41 ಇಲ್ಲಿ ನಿಮಗೆ ಕೆಲವು ಮೂಲಭೂತ ಗುಣಲಕ್ಷಣಗಳನ್ನು ತಿಳಿಸುತ್ತೇನೆ, ಹೆಚ್ಚಿನ ಮಾಹಿತಿಯನ್ನು ಇನ್ನೊಂದು ಮುಂದುವರಿದ ಟಾಪಿಕ್ ನಲ್ಲಿ ನೋಡೋಣ.
06:48 Name ಅನ್ನು ಬದಲಾಯಿಸಲು ಹೊಸ ಹೆಸರನ್ನು ಟೈಪ್ ಮಾಡಿ. ನೀವು ‘ಕ್ಯಾಪ್ಶನ್’ಅನ್ನು ಸಹ ಟೈಪ್ ಮಾಡಬಹುದು. ನೀವು ಆಬ್ಜೆಕ್ಟ್ ಅನ್ನು ಕಾಣುವಂತೆ ಅಥವಾ ಕಾಣದಿರುವಂತೆ ಮಾಡಲು ಆರಿಸಿಕೊಳ್ಳಬಹುದು.
07:02 ನೀವು ‘ಲೇಬಲ್’ ಕಾಣದಂತೆ ಮಾಡಬಹುದು ಅಥವಾ ಇವುಗಳಲ್ಲಿ ಯಾವುದಾದರೂ ಒಂದು ಆಯ್ಕೆಯನ್ನು ತೋರಿಸಬಹುದು. ನಾವು caption (ಕ್ಯಾಪ್ಶನ್) ಅನ್ನು ಇಟ್ಟುಕೊಳ್ಳೋಣ.
07:11 Colour ಟ್ಯಾಬ್ ನಲ್ಲಿ ನೀವು ರೇಖೆಯ ಬಣ್ಣವನ್ನು ಬದಲಾಯಿಸಬಹುದು.
07:14 Style ಟ್ಯಾಬ್ ನಲ್ಲಿ ನೀವು ರೇಖೆಯ ದಪ್ಪವನ್ನು ಹಾಗೂ ಶೈಲಿಯನ್ನು ಬದಲಾಯಿಸಬಹುದು.
07:19 ಇದನ್ನು ‘ಕ್ಲೋಸ್’ ಮಾಡಿದಾಗ ನಿಮಗೆ ರೇಖೆಯು ಹೊಸ ರೂಪದಲ್ಲಿ ಸಿಗುತ್ತದೆ.
07:25 Move ಎಂಬ ಎಡತುದಿಯಲ್ಲಿರುವ ಟೂಲ್ ಐಟಂ, ಕಲಿಸಲು ಬಹಳ ಉಪಯುಕ್ತವಾದ ಟೂಲ್ ಆಗಿದೆ. ಇದು ಪಾಠವನ್ನು ಕ್ರಿಯಾತ್ಮಕ ಹಾಗೂ ಇಂಟರ್ಯಾಕ್ಟಿವ್ ಆಗಿ ಮಾಡುತ್ತದೆ.
07:34 ಎಲ್ಲ Free Objects (‘ಫ್ರೀ ಆಬ್ಜೆಕ್ಟ್’) ಗಳನ್ನು ಸ್ಥಳಾಂತರಿಸಬಹುದು.
07:38 ‘ಫ್ರೀ ಆಬ್ಜೆಕ್ಟ್’ಅನ್ನು ಸ್ಥಳಾಂತರಿಸಿದಾಗ ಅವುಗಳ ಎಲ್ಲ ‘ಡಿಪೆಂಡೆಂಟ್ ಆಬ್ಜೆಕ್ಟ್’ಗಳು (Dependent Objects) ತಮ್ಮ ಗುಣಧರ್ಮಗಳನ್ನು ಉಳಿಸಿಕೊಂಡು ಸ್ಥಳಾಂತರವಾಗುತ್ತವೆ.
07:45 ಉದಾಹರಣೆಗೆ: A ಅಥವಾ B, ಈ ಬಿಂದುಗಳನ್ನು ನಾವು ಸ್ಥಳಾಂತರಿಸಿದರೆ ಸಮಾನಾಂತರ ರೇಖೆಯು ಸಹ ತನ್ನ ಸಮಾನಾಂತರ ಗುಣವನ್ನು ಉಳಿಸಿಕೊಂಡು ಜೊತೆಯಲ್ಲಿಯೇ ಚಲಿಸುತ್ತದೆ ಎಂದು ನೀವು ನೋಡುವಿರಿ.
07:57 ಫೈಲ್ ಅನ್ನು ಸೇವ್ ಮಾಡಲು, ಕ್ರಮವಾಗಿ File , Save As ಗಳನ್ನು ಆಯ್ಕೆಮಾಡಿ. ಫೋಲ್ಡರ್ ಅನ್ನು ಆಯ್ಕೆಮಾಡಿ. ನಾನು Documents ನಲ್ಲಿ Geogebra ಎನ್ನುವಲ್ಲಿಗೆ ಹೋಗುತ್ತೇನೆ. ಫೈಲ್ ನ ಹೆಸರನ್ನು ಸೇರಿಸಿ ಹಾಗೂ Save ನ ಮೇಲೆ ಕ್ಲಿಕ್ ಮಾಡಿ.
08:20 ಹೆಸರು, ಮೇಲ್ತುದಿಯ ಪ್ಯಾನೆಲ್ ನಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಅದನ್ನು ಎಲ್ಲ ‘ಜಿಯೊಜಿಬ್ರಾ’ ಫೈಲ್ ಗಳಂತೆ .ggb ಫೈಲ್ ಎಂದು ಸೇವ್ ಮಾಡಲಾಗಿದೆ ಎಂಬುದನ್ನು ಗಮನಿಸಿ.
08:28 ಈಗ ಯಾವುದೇ ಫೈಲನ್ನು ತೆರೆಯಲು, ಕ್ರಮವಾಗಿ File, Open ಗಳ ಮೇಲೆ ಕ್ಲಿಕ್ ಮಾಡಿ ನೀವು ಫೈಲನ್ನು ಆಯ್ಕೆ ಮಾಡಬೇಕು.
08:38 ಕೊನೆಯದಾಗಿ, ಅಸೈನ್ಮೆಂಟ್.
08:44 ಅಸೈನ್ಮೆಂಟ್ ನಲ್ಲಿ, ನೀವು Segment between two points ಎನ್ನುವ ಟೂಲನ್ನು ಬಳಸಿ ಒಂದು ಆಯತವನ್ನು ರಚಿಸುವುದರಿಂದ ಆರಂಭಿಸಿ.
08:53 ಆಮೇಲೆ Parallel Line, Perpendicular Line, Intersect two Objects ಮತ್ತು Distance or Length ಟೂಲ್ ಗಳನ್ನು ಬಳಸಿ.
09:00 ಕೊನೆಯದಾಗಿ, ನೀವು ರಚಿಸಿದ ಆಯತವನ್ನು Move ಟೂಲನ್ನು ಬಳಸಿ, ‘ಫ್ರೀ ಆಬ್ಜೆಕ್ಟ್’ಗಳನ್ನು ಸ್ಥಳಾಂತರಿಸುವುದರಿಂದ ಪರೀಕ್ಷಿಸಿ.
09:07 ನಾನು ಈಗಾಗಲೇ ಈ ಅಸೈನ್ಮೆಂಟ್ ಅನ್ನು ಇಲ್ಲಿ ರಚಿಸಿದ್ದೇನೆ. ‘ಲೈನ್ ಸೆಗ್ಮೆಂಟ್ AB’ಯೊಂದಿಗೆ ಆರಂಭಿಸಿ ABED ಆಯತವನ್ನು ರಚಿಸಿದ್ದೇನೆ.
09:20 ಒಂದುವೇಳೆ ಈಗ ನಾನು Move ಟೂಲ್ ಐಟಂನ ಮೇಲೆ ಕ್ಲಿಕ್ ಮಾಡಿ Free objects ಅನ್ನು ಅಲುಗಾಡಿಸಿದರೆ, ನಾನು ಅದನ್ನು ಸರಿಯಾಗಿ ರಚಿಸಿದ್ದರೆ, ABED ಆಯತವು ಯಾವ ಸ್ಥಾನದಲ್ಲಿಯೂ ಆಯತವಾಗಿಯೇ ಉಳಿಯುತ್ತದೆ ಎಂದು ಗಮನಿಸಿ.
09:37 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
09:43 ಇದು ICT, MHRD ಮೂಲಕ ಭಾರತ ಸರ್ಕಾರದ ರಾಷ್ಟ್ರೀಯ ಸಾಕ್ಷರತಾ ಮಿಷನ್ ನ ಆಧಾರವನ್ನು ಪಡೆದಿದೆ.
09:48 ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ವೆಬ್ಸೈಟ್ ನಲ್ಲಿ ನೀವು ನೋಡಬಹುದು.
09:53 IIT Bombay ಯಿಂದ, ಈ ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ---------- .

ವಂದನೆಗಳು.

Contributors and Content Editors

Sandhya.np14