GChemPaint/C3/Resonance-Structures/Kannada

From Script | Spoken-Tutorial
Revision as of 12:33, 7 December 2015 by Vasudeva ahitanal (Talk | contribs)

Jump to: navigation, search
Time Narration
00:01 ನಮಸ್ಕಾರ.
00:02 GChemPaint (ಜಿ-ಕೆಮ್-ಪೇಂಟ್) ನಲ್ಲಿಯ Resonance Structures (ರೆಸೊನನ್ಸ್ ಸ್ಟ್ರಕ್ಚರ್ಸ್) ಎನ್ನುವ ಈ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:06 ಈ ‘ಟ್ಯುಟೋರಿಯಲ್’ನಲ್ಲಿ ನಾವು,
00:09 * ರಾಸಾಯನಿಕ ಪ್ರತಿಕ್ರಿಯೆಗಳನ್ನು ಪ್ರತಿನಿಧಿಸಲು ವಿವಿಧ ಪ್ರಕಾರದ ‘ಆರೋ’ಗಳನ್ನು ಬಳಸುವುದು ಹಾಗೂ
00:14 * ‘ಚಾರ್ಜ್’ ಮತ್ತು ‘ಇಲೆಕ್ಟ್ರಾನ್ ಜೋಡಿ’ಗಳನ್ನು ಪರಮಾಣುವಿಗೆ ಸೇರಿಸುವುದನ್ನು ಕಲಿಯುವೆವು.
00:18 ಈ ‘ಟ್ಯುಟೋರಿಯಲ್’ಗಾಗಿ ನಾನು,
00:20 Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ
00:24 GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಗಳನ್ನು ಬಳಸುತ್ತಿದ್ದೇನೆ.
00:29 ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು GChemPaint (‘ಜೀ-ಕೆಮ್-ಪೇಂಟ್’) ಅನ್ನು ತಿಳಿದಿರಬೇಕು.
00:34 ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಹೋಗಿ. http://spoken-tutorial.org
00:39 ನಾನು GChemPaint ವಿಂಡೋ ಗೆ ಬದಲಾಯಿಸುತ್ತೇನೆ.
00:42 ನಾನು ಒಂದು ಹೊಸ GChemPaint ವಿಂಡೋ ಅನ್ನು ತೆರೆದಿದ್ದೇನೆ.
00:45 ಇಲ್ಲಿ ನೀವು ‘ಇಥೈಲ್ ಕ್ಲೋರೈಡ್’ ಹಾಗೂ ‘ಮಿಥೈಲ್ ಬ್ರೋಮೈಡ್’ಗಳ ರಚನೆಗಳನ್ನು ನೋಡಬಹುದು.
00:50 ‘ಕಾರ್ಬೊ-ಕ್ಯಾಟಯಾನ್’ಅನ್ನು ಹೇಗೆ ಪಡೆಯುವುದೆಂದು ನಾನು ತೋರಿಸುವೆನು.
00:55 ನಾವು ‘ಇಥೈಲ್ ಕ್ಲೋರೈಡ್’ನ ಕ್ಲೋರಿನ್ ಪರಮಾಣುವಿಗೆ ಒಂದು ಜೊತೆ ಎಲೆಕ್ಟ್ರಾನುಗಳನ್ನು ಸೇರಿಸೋಣ.
01:01 Add an electron pair ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
01:04 Chlorine ಪರಮಾಣುವಿನ ಮೇಲೆ ಕ್ಲಿಕ್ ಮಾಡಿ ಹಾಗೂ ಏನಾಗುತ್ತದೆ ಎಂದು ಗಮನಿಸಿ.
01:09 ಆನಂತರ, ‘ಕಾರ್ಬನ್-ಕ್ಲೋರಿನ್ ಬಾಂಡ್’ನಲ್ಲಿ ಎಲೆಕ್ಟ್ರಾನ್ ಜೋಡಿಯ ಸ್ಥಳಾಂತರವನ್ನು ನಾನು ತೋರಿಸುವೆನು.
01:14 Add a curved arrow to represent an electron pair move ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
01:18 ಪ್ರಾಪರ್ಟೀ ವಿಂಡೋ ತೆರೆದುಕೊಳ್ಳುತ್ತದೆ.
01:21 End arrow at center of new bond ನ ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
01:26 ಇದು ಎಲೆಕ್ಟ್ರಾನ್ ಜೋಡಿಯನ್ನು ಸರಿಯಾದ ಸ್ಥಾನಕ್ಕೆ ಸರಿಸುತ್ತದೆ.
01:30 ‘ಕಾರ್ಬನ್-ಕ್ಲೋರಿನ್’ ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
01:33 ಕರ್ಸರನ್ನು ‘ಕರ್ವ್ಡ್ ಆರೋ’ದ ಮೇಲೆ ಇರಿಸಿ ಹಾಗೂ ಎಲೆಕ್ಟ್ರಾನ್ ನ ಸ್ಥಳಾಂತರವನ್ನು ಗಮನಿಸಿ.
01:39 ನಾನು ಈ ರಚನೆಯನ್ನು ನಕಲು ಮಾಡುವೆನು.
01:42 Add an arrow ಎನ್ನುವುದರ ಮೇಲೆ ಕ್ಲಿಕ್ ಮಾಡಿ ಹಾಗೂ ರಚನೆಗಳ ನಡುವೆ ಕ್ಲಿಕ್ ಮಾಡಿ.
01:48 ‘ಸೋಡಿಯಂ ಹೈಡ್ರಾಕ್ಸೈಡ್(NaOH) ನಂತಹ ‘ಬೇಸ್’ನಿಂದ ‘ಕಾರ್ಬೊ-ಕ್ಯಾಟಾಯನ್’ನ ರಚನೆಯನ್ನು ಆರಂಭಿಸಲಾಗುತ್ತದೆ.
01:54 Add or modify a group of atoms ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ, ‘ಆರೋ’ದ ಮೇಲ್ಗಡೆ ಕ್ಲಿಕ್ ಮಾಡಿ.
02:00 NaOH ಎಂದು ಟೈಪ್ ಮಾಡಿ.
02:04 Selection ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ ಹಾಗೂ NaOH ಅನ್ನು ಆಯ್ಕೆಮಾಡಿ.
02:09 ‘ಆರೋ’ದ ಮೇಲೆ ರೈಟ್-ಕ್ಲಿಕ್ ಮಾಡಿ.
02:12 ಸಬ್-ಮೆನ್ಯುವಿನಲ್ಲಿ Arrow ಅನ್ನು ಆಯ್ಕೆಮಾಡಿ.
02:13 Attach selection to arrow ಎನ್ನುವುದರ ಮೇಲೆ ಕ್ಲಿಕ್ ಮಾಡಿ.
02:18 Arrow associated ಎನ್ನುವ ಶೀರ್ಷಿಕೆಯಿರುವ ಒಂದು ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
02:23 Role ನ ಡ್ರಾಪ್-ಡೌನ್ ನಲ್ಲಿ Reactant ಅನ್ನು ಆಯ್ಕೆಮಾಡಿ ಮತ್ತು Close ನ ಮೇಲೆ ಕ್ಲಿಕ್ ಮಾಡಿ.
02:29 ಈಗ, ನಾವು ಎರಡನೆಯ ‘ಇಥೈಲ್ ಕ್ಲೋರೈಡ್’ಅನ್ನು ‘ಇಥೈಲ್ ಕಾರ್ಬೋ- ಕ್ಯಾಟಾಯನ್’ ಹಾಗೂ ‘ಕ್ಲೋರೈಡ್ ಅಯಾನ್ಸ್’ಗೆ ಪರಿವರ್ತಿಸೋಣ.
02:36 Eraser ಟೂಲ್ನ ಮೇಲೆ ಕ್ಲಿಕ್ ಮಾಡಿ ಹಾಗೂ ‘ಕಾರ್ಬನ್-ಕ್ಲೋರಿನ್’ ಬಾಂಡ್ನ ಮೇಲೆ ಕ್ಲಿಕ್ ಮಾಡಿ.
02:42 ‘ಇಥೇನ್ (CH3-CH3)’ ಮತ್ತು HCl (ಎಚ್ ಸಿ ಎಲ್) ಗಳು ರೂಪುಗೊಂಡಿವೆ.
02:45 ಎಲೆಕ್ಟ್ರಾನ್ ಗಳು ‘ಕಾರ್ಬನ್’ನಿಂದ ‘ಕ್ಲೋರಿನ್’ಗೆ ಸ್ಥಳಾಂತರವಾದಾಗ, ‘ಕಾರ್ಬನ್’, ಒಂದು ಧನಾತ್ಮಕ ಚಾರ್ಜ್ ಅನ್ನು ಗಳಿಸುತ್ತದೆ.
02:51 Increment the charge ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
02:54 ‘ಕಾರ್ಬನ್-ಕ್ಲೋರಿನ್’ ಬಾಂಡ್ ಅನ್ನು ತೆಗೆದುಹಾಕಿದ ಸ್ಥಾನದಲ್ಲಿ ಕ್ಲಿಕ್ ಮಾಡಿ.
02:59 ‘ಇಥೈಲ್ ಕಾರ್ಬೋ- ಕ್ಯಾಟಾಯನ್’(CH3-CH2^+) ರೂಪುಗೊಂಡಿದೆ.
03:02 ‘ಕ್ಲೋರೈಡ್ ಅಯಾನ್’ಅನ್ನು ರೂಪಿಸಲು Decrement the charge ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
03:07 HCl ನ ಮೇಲೆ ಕ್ಲಿಕ್ ಮಾಡಿ. ‘ಕ್ಲೋರೈಡ್’ (Cl^-) ಅಯಾನ್ ರೂಪುಗೊಂಡಿದೆ.
03:12 ಈಗ ನಾವು ಒಂದೇ ಒಂದು ಎಲೆಕ್ಟ್ರಾನ್ ನ ಶಿಫ್ಟ್ ಗೆ ನಡೆಯೋಣ.
03:15 ನಾವು ‘ಫ್ರೀ ರಾಡಿಕಲ್’ಗಳನ್ನು ಪಡೆಯಲು, ‘ಮಿಥೈಲ್ ಬ್ರೋಮೈಡ್’ನ ರಚನೆಯನ್ನು ಬಳಸೋಣ.
03:20 Add a curved arrow to represent a single electron move ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
03:26 ಒಂದು ‘ಕರ್ವ್ಡ್ ಆರೋ’ ಪಡೆಯಲು, ‘ಮಿಥೈಲ್ ಬ್ರೋಮೈಡ್’ ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
03:30 Pencil ಟೂಲನ್ನು ಬಾಂಡ್ ನ ಮೇಲೆ ಸ್ವಲ್ಪ ಸ್ಥಳಾಂತರಿಸಿ, ಎರಡನೆಯ ‘ಕರ್ವ್ಡ್ ಆರೋ’ಅನ್ನು ಪಡೆಯಲು ಮತ್ತೊಮ್ಮೆ ಕ್ಲಿಕ್ ಮಾಡಿ.
03:38 ಒಂದು ‘ಆರೋ’, ‘ಬ್ರೋಮೋ (Br)’ ದೆಡೆಗೆ ಹಾಗೂ ಇನ್ನೊಂದು, ‘ಮಿಥೈಲ್(CH3)’ ನೆಡೆಗೆ ಸರಿಯುತ್ತದೆ.
03:44 ‘ಬಾಂಡೆಡ್ ಎಲೆಕ್ಟ್ರಾನ್’ಗಳ ಜೋಡಿಯಿಂದ ‘ಬ್ರೋಮೋ (Br)’ ಹಾಗೂ ‘ಮಿಥೈಲ್(CH3)’ ಗಳೆರಡೂ ಒಂದೊಂದು ಎಲೆಕ್ಟ್ರಾನ್ಅನ್ನು ಪಡೆಯುವವು.
03:51 ಉತ್ಪನ್ನಗಳನ್ನು ತೋರಿಸಲು ನಾವು ಒಂದು ‘ಆರೋ’ವನ್ನು ಸೇರಿಸೋಣ.
03:54 Add an arrow ದ ಮೇಲೆ ಕ್ಲಿಕ್ ಮಾಡಿ. ‘ಮಿಥೈಲ್ ಬ್ರೋಮೈಡ್’ನ ಪಕ್ಕದಲ್ಲಿ, ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ.
04:00 ‘ಫ್ರೀ ರಾಡಿಕಲ್’ಗಳನ್ನು ರಚಿಸುವ, ಪ್ರತಿಕ್ರಿಯೆಯು ಶಾಖವನ್ನು ಒಳಗೊಂಡಿರುತ್ತದೆ.
04:04 Add or modify a text ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
04:08 ‘ಆರೋ’ದ ಮೇಲ್ಭಾಗದಲ್ಲಿ, ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ.
04:11 ಹಸಿರು ಬಾಕ್ಸ್ ನಲ್ಲಿ Heat ಎಂದು ಟೈಪ್ ಮಾಡಿ.
04:14 Selection ಟೂಲ್ನ ಮೇಲೆ ಕ್ಲಿಕ್ ಮಾಡಿ ಹಾಗೂ Heat ಅನ್ನು ಆಯ್ಕೆಮಾಡಿ.
04:19 ‘ಆರೋ’ದ ಮೇಲೆ ರೈಟ್-ಕ್ಲಿಕ್ ಮಾಡಿ.
04:21 ಸಬ್-ಮೆನ್ಯುನಲ್ಲಿ, Arrow ಅನ್ನು ಆಯ್ಕೆಮಾಡಿ ಹಾಗೂ Attach selection to arrow ದ ಮೇಲೆ ಕ್ಲಿಕ್ ಮಾಡಿ.
04:27 Arrow associated ಎನ್ನುವ ಶೀರ್ಷಿಕೆಯಿರುವ ಒಂದು ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
04:32 Role ನ ಡ್ರಾಪ್-ಡೌನ್ ಲಿಸ್ಟ್ , ಹೆಚ್ಚು ಆಯ್ಕೆಗಳನ್ನು ಹೊಂದಿದೆ ಎನ್ನುವುದನ್ನು ಗಮನಿಸಿ.
04:37 Role ನ ಡ್ರಾಪ್-ಡೌನ್ ನಲ್ಲಿ Temperature ಅನ್ನು ಆಯ್ಕೆಮಾಡಿ ಮತ್ತು
04:40 Close ನ ಮೇಲೆ ಕ್ಲಿಕ್ ಮಾಡಿ.
04:43 ಈಗ ನಾವು ‘ಫ್ರೀ ರಾಡಿಕಲ್’ಗಳನ್ನು ಕ್ರಿಯೇಟ್ ಮಾಡೋಣ.
04:46 ನಾನು ಈ ರಚನೆಯ ಒಂದು ‘ಕಾಪಿ’ಯನ್ನು ಮಾಡುವೆನು.
04:50 Eraser ಟೂಲ್ನ ಮೇಲೆ ಕ್ಲಿಕ್ ಮಾಡಿ ಹಾಗೂ ‘ಕಾರ್ಬನ್-ಬ್ರೋಮಿನ್’ ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
04:55 ‘ಮಿಥೇನ್(CH4)’ ಹಾಗೂ ‘ಹೈಡ್ರೋಜನ್ ಬ್ರೋಮೈಡ್(HBr)’ ಗಳು ರಚನೆಯಾಗಿರುತ್ತವೆ.
04:59 Add an unpaired electron ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
05:02 ‘ಮಿಥೇನ್(CH4)’ ಹಾಗೂ ‘ಹೈಡ್ರೋಜನ್ ಬ್ರೋಮೈಡ್(HBr)’ ಗಳ ಮೇಲೆ ಕ್ಲಿಕ್ ಮಾಡಿ.
05:06 ‘ಮಿಥೈಲ್(CH3)’ ಹಾಗೂ ‘ಬ್ರೋಮಿಯಂ(Br)’ ಎನ್ನುವ ‘ಫ್ರೀ ರಾಡಿಕಲ್’ಗಳು ರಚನೆಯಾಗಿರುತ್ತವೆ.
05:10 Selection ಟೂಲ್ನ ಮೇಲೆ ಕ್ಲಿಕ್ ಮಾಡಿ.
05:12 ‘ರಿಯಾಕ್ಶನ್ ಪಾಥ್ ವೇ’ಯನ್ನು ರಚಿಸಲು, ಮೊದಲು ಪೂರ್ತಿ ಪ್ರತಿಕ್ರಿಯೆಯನ್ನು ಆಯ್ಕೆಮಾಡಿ.
05:17 ಈಗ ಆಯ್ಕೆಯ ಮೇಲೆ ರೈಟ್-ಕ್ಲಿಕ್ ಮಾಡಿ.
05:20 ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ.
05:22 Create a new reaction ನ ಮೇಲೆ ಕ್ಲಿಕ್ ಮಾಡಿ.
05:25 ‘ರಿಯಾಕ್ಶನ್ ಪಾಥ್’ಅನ್ನು ರಚಿಸಲಾಗಿದೆ.
05:28 ‘ರಿಯಾಕ್ಶನ್ ಪಾಥ್ ವೇ’ಯನ್ನು ನೋಡಲು ಎಳೆಯಿರಿ.
05:30 ಹೀಗೆಯೇ, ನಾನು ಹಿಂದಿನ ಪ್ರತಿಕ್ರಿಯೆಗಾಗಿ ‘ರಿಯಾಕ್ಶನ್ ಪಾಥ್ ವೇ’ಯನ್ನು ರಚಿಸುವೆನು.
05:37 ನಾವು ಬಯಸಿದರೆ, ‘ರಿಯಾಕ್ಶನ್ ಪಾಥ್ ವೇ’ಯನ್ನು ತೆಗೆದುಹಾಕಬಹುದು.
05:41 ಹೀಗೆ ಮಾಡಲು, ಪ್ರತಿಕ್ರಿಯೆಯ ಮೇಲೆ ಇನ್ನೊಮ್ಮೆ ರೈಟ್-ಕ್ಲಿಕ್ ಮಾಡಿ.
05:45 Destroy the reaction ನ ಮೇಲೆ ಕ್ಲಿಕ್ ಮಾಡಿ.
05:48 ಈ ಕ್ರಿಯೆಯು ‘ರಿಯಾಕ್ಶನ್ ಪಾಥ್ ವೇ’ಯನ್ನು ತೆಗೆದುಹಾಕುವುದು.
05:51 ಯಾವುದೇ ಒಬ್ಜೆಕ್ಟ್ ಅನ್ನು ಎಳೆಯಿರಿ ಹಾಗೂ ಅವುಗಳನ್ನು ಒಂದೊಂದಾಗಿ ಸರಿಸಬಹುದು ಎನ್ನುವುದನ್ನು ನೀವು ನೋಡುವಿರಿ.
05:57 ಈಗ, ‘ಡಬಲ್ ಹೆಡೆಡ್ ಆರೋ’ ಬಳಸಿ, ನಾವು ‘ರೆಸೊನನ್ಸ್’ ಅಥವಾ ‘ಮೆಸೊಮೆರಿ’ ಎನ್ನುವುದರತ್ತ ನಡೆಯೋಣ.
06:02 ’ನೈಟ್ರೋಮಿಥೇನ್’ನ ರಚನೆಯೊಂದಿಗೆ ನಾನು ಒಂದು ಹೊಸ GChemPaint ವಿಂಡೋ ಅನ್ನು ತೆರೆದಿದ್ದೇನೆ.
06:08 ರಚನೆಗಳ ಒಳಗೆ ಎಲೆಕ್ಟ್ರಾನ್ ನ ಶಿಫ್ಟ್ ಗಳನ್ನು ತೋರಿಸಲು, ನಾನು ‘ಕರ್ವ್ಡ್ ಆರೋ’ಗಳನ್ನು ಹಾಗೂ ‘ಚಾರ್ಜ್’ಗಳನ್ನು ಸೇರಿಸಿದ್ದೆ.
06:14 ಈಗ ನಾವು ಒಂದು ‘ಡಬಲ್ ಹೆಡೆಡ್ ಆರೋ’ಅನ್ನು ಸೇರಿಸೋಣ.
06:16 Add a double headed arrow ದ ಮೇಲೆ ಕ್ಲಿಕ್ ಮಾಡಿ.
06:20 ’ನೈಟ್ರೋಮಿಥೇನ್’ಗಳ ನಡುವಿನ ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ.
06:25 ಈ ಎರಡು ರಚನೆಗಳು ’ನೈಟ್ರೋಮಿಥೇನ್’ನ ‘ರೆಸೊನನ್ಸ್ ಸ್ಟ್ರಕ್ಚರ್’ಗಳಾಗಿವೆ.
06:30 ರಚನೆಗಳನ್ನು ಆಯ್ಕೆಮಾಡಲು Ctrl+A ಒತ್ತಿ.
06:33 ಆಯ್ಕೆಯ ಮೇಲೆ ರೈಟ್-ಕ್ಲಿಕ್ ಮಾಡಿ.
06:35 ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ.
06:37 Create a new mesomery relationship ಎನ್ನುವುದರ ಮೇಲೆ ಕ್ಲಿಕ್ ಮಾಡಿ.
06:41 ಈ ಸಂಬಂಧವನ್ನು ನೋಡಲು ಎಳೆಯಿರಿ.
06:44 ಇಲ್ಲಿ, ‘ರೆಸೊನನ್ಸ್ ಸ್ಟ್ರಕ್ಚರ್ಸ್ ಆಫ್ ಬೆಂಜೀನ್’ಗಾಗಿ ಸ್ಲೈಡ್ ಇದೆ.
06:48 ಈಗ, ‘ರೆಟ್ರೊ-ಸಿಂಥೆಟಿಕ್ ಪಾಥ್ ವೇ’ಯನ್ನು ರಚಿಸಲು ನಾವು ಕಲಿಯೋಣ.
06:52 ಅಗತ್ಯವಿರುವ ರಚನೆಗಳೊಂದಿಗೆ ನಾನು ಒಂದು ಹೊಸ GChemPaint ವಿಂಡೋ ಅನ್ನು ತೆರೆದಿದ್ದೇನೆ.
06:57 ‘ರೆಟ್ರೊಸಿಂಥೆಟಿಕ್ ಪಾಥ್ ವೇ’, ಉತ್ಪನ್ನದೊಂದಿಗೆ ಆರಂಭವಾಗಿ ಎಲ್ಲ ಮಧ್ಯಂತರಗಳ ಜೊತೆಗೆ ಪ್ರತಿಕ್ರಿಯಾಕಾರಿಯ ಕಡೆಗೆ ಹೋಗುತ್ತದೆ.
07:04 ಈ ‘ಪಾಥ್ ವೇ’ಯಲ್ಲಿ, ‘ಆರ್ಥೋನೈಟ್ರೋಫಿನಾಲ್’, ಅಂತಿಮ ಉತ್ಪನ್ನವಾಗಿದೆ ಹಾಗೂ ‘ಬೆಂಜೀನ್’ ಆರಂಭದ ವಸ್ತುವಾಗಿದೆ.
07:10 ‘ರೆಟ್ರೊ-ಸಿಂಥೆಟಿಕ್ ಪಾಥ್ ವೇ’ಯನ್ನು ತೋರಿಸಲು ನಾವು ಒಂದು ‘ರೆಟ್ರೊ-ಸಿಂಥೆಟಿಕ್ ಆರೋ’ಅನ್ನು ಸೇರಿಸೋಣ.
07:15 Add an arrow for a retrosynthetic step ನ ಮೇಲೆ ಕ್ಲಿಕ್ ಮಾಡಿ.
07:20 ಎಲ್ಲ ಸಂಯುಕ್ತಗಳ ನಡುವೆ ಕ್ಲಿಕ್ ಮಾಡಿ.
07:25 ರಚನೆಗಳನ್ನು ಆಯ್ಕೆಮಾಡಲು Ctrl+A ಒತ್ತಿ.
07:28 ಆಯ್ಕೆಯ ಮೇಲೆ ರೈಟ್-ಕ್ಲಿಕ್ ಮಾಡಿ.
07:30 ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ.
07:32 Create a new retrosynthesis pathway ಯ ಮೇಲೆ ಕ್ಲಿಕ್ ಮಾಡಿ ನಂತರ,
07:36 ರಚಿಸಿದ ಈ ‘ಪಾಥ್ ವೇ’ಅನ್ನು ನೋಡಲು ಎಳೆಯಿರಿ.
07:39 ನಾವು ಕಲಿತಿರುವುದನ್ನು ಸಾರಾಂಶಗೊಳಿಸೋಣ.
07:41 ಈ ಟ್ಯುಟೋರಿಯಲ್ ನಲ್ಲಿ ನಾವು, ಕೆಳಗಿನವುಗಳನ್ನು ಕಲಿತಿದ್ದೇವೆ.
07:44 * ‘ಕರ್ವ್ಡ್ ಆರೋ’ (curved arrows) ಗಳನ್ನು ಬಳಸಿ ಎಲೆಕ್ಟ್ರಾನ್ ನ ಶಿಫ್ಟ್ ಗಳನ್ನು ತೋರಿಸುವುದು,
07:48 * ಪ್ರತಿಕ್ರಿಯೆಯ ನಿಯಮಗಳನ್ನು, ‘ರಿಯಾಕ್ಶನ್ ಆರೋ’ಗಳಿಗೆ ಜೋಡಿಸುವುದು,
07:52 * ‘ರಿಯಾಕ್ಶನ್ ಆರೋ’ಬಳಸಿ, ‘ರಿಯಾಕ್ಶನ್ ಪಾಥ್ ವೇ’ಯನ್ನು ರಚಿಸುವುದು ಹಾಗೂ ನಾಶಮಾಡುವುದು,
07:57 * ‘ಡಬಲ್ ಹೆಡೆಡ್ ಆರೋ’ ಬಳಸಿ ಒಂದು ಹೊಸ ‘ಮೆಸೋಮೆರಿ ರಿಲೇಶನ್ ಶಿಪ್’ಅನ್ನು ರಚಿಸುವುದು ಹಾಗೂ
08:01 * ‘ರೆಟ್ರೋಸಿಂಥೆಟಿಕ್ ಆರೋ’ಅನ್ನು ಬಳಸಿ ‘ರೆಟ್ರೋಸಿಂಥೆಟಿಕ್ ಪಾಥ್ ವೇ’ಯನ್ನು ರಚಿಸುವುದು.
08:06 ಒಂದು ಅಸೈನ್ಮೆಂಟ್ ಎಂದು,
08:07 ‘ಆರೋ’ದ ಪ್ರಾಪರ್ಟೀಗಳನ್ನು ಬಳಸಿ,
08:10 1. ‘ಬ್ಯೂಟೇನ್’ ಮತ್ತು ‘ಸೋಡಿಯಂ ಬ್ರೋಮೈಡ್’ಗಳನ್ನು ಪಡೆಯಲು, ದ್ರಾವಕ ಡ್ರೈ ಈಥರ್ ನೊಂದಿಗೆ ‘ಬ್ರೋಮೋ-ಇಥೇನ್(C2H5Br)’ ಹಾಗೂ ಸೋಡಿಯಂ (Na)ಗಳ ಪ್ರತಿಕ್ರಿಯೆಗಾಗಿ ‘ರಿಯಾಕ್ಶನ್ ಪಾಥ್ ವೇ’ಯನ್ನು ರಚಿಸಿ.
08:20 2. ಪ್ರತಿಕ್ರಿಯೆಯ ಅಣುಗಳಿಗೆ, ‘ಸ್ಟೈಕಿಯೊಮೆಟ್ರಿಕ್ ಕೊಎಫಿಷಿಯಂಟ್’ಗಳನ್ನು ಸೇರಿಸಿ.
08:24 3. ನ್ಯಾಫ್ತಲೀನ್, ಆಂಥ್ರಸೀನ್ ಹಾಗೂ ಕಾರ್ಬನ್ ಡೈಆಕ್ಸೈಡ್ ಗಳ ‘ರೆಸೊನನ್ಸ್ ಸ್ಟ್ರಕ್ಚರ್’ ಗಳನ್ನು ‘ಡ್ರಾ’ ಮಾಡಿ.
08:30 ಇದು, ಬೇಕಾಗಿರುವ ಪ್ರತಿಕ್ರಿಯೆಯ ‘ಪಾಥ್ ವೇ’ ಆಗಿದೆ.
08:33 ಇವು, ನ್ಯಾಫ್ತಲೀನ್, ಆಂಥ್ರಸೀನ್ ಹಾಗೂ ಕಾರ್ಬನ್ ಡೈಆಕ್ಸೈಡ್ ಗಳ ‘ರೆಸೊನನ್ಸ್ ಸ್ಟ್ರಕ್ಚರ್’ಗಳಾಗಿವೆ.
08:39 ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. http://spoken-tutorial.org/What_is_a_Spoken_Tutorial
08:43 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ.
08:45 ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:50 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
08:54 ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:57 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
09:03 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
09:08 ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ.
09:16 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro
09:21 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ.

ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal