GChemPaint/C3/Features-of-GChem3D/Kannada

From Script | Spoken-Tutorial
Revision as of 15:19, 29 January 2015 by Sandhya.np14 (Talk | contribs)

Jump to: navigation, search
Time Narration
00:01 ನಮಸ್ಕಾರ. Features of GChem3D ಎನ್ನುವ ಈ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, ಕೆಳಗಿನವುಗಳ ಬಗ್ಗೆ ಕಲಿಯುವೆವು:
00:10 * ಮೆನ್ಯು ಬಾರ್
00:11 * ಫೈಲ್ ಟೈಪ್ ಫಾರ್ಮ್ಯಾಟ್ಸ್
00:13 * ಮಾಡೆಲ್ ನ ವಿವಿಧ ಪ್ರಕಾರಗಳು ಮತ್ತು
00:15 * ‘ಬ್ಯಾಕ್‌ಗ್ರೌಂಡ್ ಕಲರ್’ಅನ್ನು ಹೇಗೆ ಬದಲಾಯಿಸುವುದು.
00:18 ಈ ‘ಟ್ಯುಟೋರಿಯಲ್’ಗಾಗಿ ನಾನು, Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು),
00:24 GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಹಾಗೂ
00:29 GChem3D (ಜಿ-ಕೆಮ್-3D) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಇವುಗಳನ್ನು ಬಳಸುತ್ತಿದ್ದೇನೆ.
00:34 ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು 'GChemPaint' (‘ಜೀ-ಕೆಮ್-ಪೇಂಟ್’) ಅನ್ನು ತಿಳಿದಿರಬೇಕು.
00:38 ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್‌ಸೈಟ್ ಗೆ ಹೋಗಿ. http://spoken-tutorial.org
00:44 ನಾನು ಒಂದು ಹೊಸ ‘GChemPaint ವಿಂಡೋ’ಅನ್ನು ತೆರೆದಿದ್ದೇನೆ.
00:47 Templates ನ ಡ್ರಾಪ್-ಡೌನ್ ಅನ್ನು ಬಳಸಿ,
00:49 ನಾನು Adenosine (ಅಡಿನೋಸಿನ್) ನ ರಚನೆಯನ್ನು ‘ಡಿಸ್ಪ್ಲೇ ಏರಿಯಾ’ದ ಮೇಲೆ ಲೋಡ್ ಮಾಡುತ್ತೇನೆ.
00:53 ಫೈಲ್ ಅನ್ನು ‘ಸೇವ್’ ಮಾಡಲು, ‘ಟೂಲ್ ಬಾರ್’ನ ಮೇಲಿರುವ Save ಐಕಾನ್ ನ ಮೇಲೆ ಕ್ಲಿಕ್ ಮಾಡಿ.
00:58 Save as ಎನ್ನುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
01:02 GChem3D ಯಲ್ಲಿ ಫೈಲನ್ನು ವೀಕ್ಷಿಸಲು, ಅದನ್ನು '.mol', '.mdl' ಹಾಗೂ '.pdb' ಗಳಂತಹ ಫೈಲ್ ಫಾರ್ಮ್ಯಾಟ್ ಗಳಲ್ಲಿ ಸೇವ್ ಮಾಡಿರಬೇಕು.
01:11 ಪೈಲ್ ನ ಹೆಸರನ್ನು 'adenosine.pdb' ಎಂದು ಟೈಪ್ ಮಾಡಿ.
01:15 ಫೈಲ್ ಅನ್ನು ಡೆಸ್ಕ್ಟಾಪ್ ನ ಮೇಲೆ ಸೇವ್ ಮಾಡಲು Desktop ನ ಮೇಲೆ ಕ್ಲಿಕ್ ಮಾಡಿ.
01:18 Save ಬಟನ್ ನ ಮೇಲೆ ಕ್ಲಿಕ್ ಮಾಡಿ.
01:21 ನಾನು GChemPaint ವಿಂಡೋ ಅನ್ನು ‘ಕ್ಲೋಸ್’ ಮಾಡುತ್ತೇನೆ.
01:25 ಈಗ ನಾವು ‘GChem3D ಅಪ್ಪ್ಲಿಕೇಶನ್’ನ ಬಗ್ಗೆ ತಿಳಿಯೋಣ.
01:29 GChem3D ಯನ್ನು,
01:34 Synaptic Package Manager (ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್) ಅನ್ನು ಬಳಸಿ, GChemPaint ನ ‘ಯೂಟಿಲಿಟೀ ಸಾಫ್ಟ್ವೇರ್’ ಎಂದು ಇನ್ಸ್ಟಾಲ್ ಮಾಡಬಹುದು.
01:38 Synaptic Package Manager ಎನ್ನುವಲ್ಲಿಗೆ ಹೋಗಿ.
01:40 Quick filter ಎನ್ನುವ ಬಾಕ್ಸ್ ನಲ್ಲಿ gchempaint ಎಂದು ಟೈಪ್ ಮಾಡಿ.
01:44 ‘GChemPaint ಯುಟಿಲಿಟಿ’ಗಳನ್ನು ಪೂರ್ತಿಯಾಗಿ ಇನ್ಸ್ಟಾಲ್ ಮಾಡಲು, ‘gcu-plugin (ಜಿ-ಸಿ-ಯು ಪ್ಲಗ್-ಇನ್)’, 'libgcu-dbg (ಲಿಬ್-ಜಿ-ಸಿ-ಯು ಡಿ-ಬಿ-ಜಿ)' ಹಾಗೂ 'gcu-bin (ಜಿ-ಸಿ-ಯು ಬಿನ್)' ಗಳನ್ನು ಇನ್ಸ್ಟಾಲ್ ಮಾಡಿ.
01:55 ನಾನು ಈಗಾಗಲೇ ಎಲ್ಲ ಫೈಲ್ ಗಳನ್ನು ಇನ್ಸ್ಟಾಲ್ ಮಾಡಿದ್ದೆ.
01:59 GChem3D, ‘3 ಡೈಮೆನ್ಶನಲ್ ಮೊಲೆಕ್ಯುಲರ್ ಸ್ಟ್ರಕ್ಚರ್ ವಿಜುವಲೈಜರ್ (visualizer) ಆಗಿದೆ.
02:04 ಇದು ‘ಜಿ-ಕೆಮ್-ಪೇಂಟ್’ನ ಉಪಯುಕ್ತತೆಯ ವೈಶಿಷ್ಟ್ಯವಾಗಿದೆ.
02:07 ‘ಜಿ-ಕೆಮ್-ಪೇಂಟ್’ನಲ್ಲಿ ಡ್ರಾ ಮಾಡಿದ ರಚನೆಗಳನ್ನು ‘ಜಿ-ಕೆಮ್-3D’ಯಲ್ಲಿ ವೀಕ್ಷಿಸಬಹುದು.
02:12 GChem3D ಯನ್ನು ‘ಓಪನ್’ ಮಾಡಲು Dash Home ನ ಮೇಲೆ ಕ್ಲಿಕ್ ಮಾಡಿ.
02:15 ಈಗ ಕಾಣಿಸಿಕೊಳ್ಳುವ ‘ಸರ್ಚ್-ಬಾರ್’ನಲ್ಲಿ, gchem3d ಎಂದು ಟೈಪ್ ಮಾಡಿ.
02:20 Molecules viewer (ಮೊಲೆಕ್ಯುಲ್ಸ್ ವ್ಯೂಅರ್) ಎನ್ನುವ ‘ಐಕಾನ್’ನ ಮೇಲೆ ಕ್ಲಿಕ್ ಮಾಡಿ.
02:24 GChem3d Viewer ವಿಂಡೋ, ‘ಮೆನ್ಯು-ಬಾರ್’ ಮತ್ತು ‘ಡಿಸ್ಪ್ಲೇ ಏರಿಯಾ’ಗಳನ್ನು ಒಳಗೊಂಡಿದೆ.
02:30 ‘ಮೆನ್ಯು-ಬಾರ್’, GChem3D ಯೊಂದಿಗೆ ಕೆಲಸ ಮಾಡಲು ನಿಮಗೆ ಅಗತ್ಯವಿರುವ ಎಲ್ಲ ‘ಕಮಾಂಡ್’ಗಳನ್ನು ಒಳಗೊಂಡಿದೆ.
02:36 ’ಡಿಸ್ಪ್ಲೇ ಏರಿಯಾ’, ತೆರೆಯಲಾದ ಫೈಲ್ನಲ್ಲಿ ಇರುವ ವಿಷಯಗಳನ್ನು ತೋರಿಸುತ್ತದೆ.
02:40 ಫೈಲನ್ನು ಓಪನ್ ಮಾಡಲು, File ಅನ್ನು ಆಯ್ಕೆಮಾಡಿ, Open ಮೇಲೆ ಕ್ಲಿಕ್ ಮಾಡಿ.
02:46 Open ಎನ್ನುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
02:49 ನಿಮಗೆ ‘ಒಪನ್’ ಮಾಡಬೇಕಾಗಿರುವ ಫೈಲ್ ಅನ್ನು ಆಯ್ಕೆಮಾಡಿ.
02:52 ನಾನು, ನನ್ನ ಡೆಸ್ಕ್ಟಾಪ್ ಮೇಲೆ 'adenosine.pdb' ಯನ್ನು ಆಯ್ಕೆಮಾಡುವೆನು.
02:57 ಈಗ Open ಬಟನ್ ನ ಮೇಲೆ ಕ್ಲಿಕ್ ಮಾಡಿ.
02:59 ಫೈಲ್ ಅನ್ನು ‘ಡಿಸ್ಪ್ಲೇ ಏರಿಯಾ’ದ ಮೇಲೆ ತೋರಿಸಲಾಗಿದೆ.
03:02 ನಾವು ಈ ‘ವ್ಯೂ’ಅನ್ನು ಒಂದು ‘ಇಮೇಜ್’ನ ಹಾಗೆ ಸೇವ್ ಮಾಡಲು ಕಲಿಯೋಣ.
03:05 File ನ ಮೇಲೆ ಕ್ಲಿಕ್ ಮಾಡಿ. Save As Image ಎನ್ನುವಲ್ಲಿಗೆ ಹೋಗಿ.
03:10 Save as image ಎನ್ನುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
03:12 ಅಡಿಯಲ್ಲಿ Width ಹಾಗೂ Height ಎನ್ನುವ ‘ಪ್ಯಾರಾಮೀಟರ್’ಗಳಿರುವುದನ್ನು ಗಮನಿಸಿ.
03:17 ಡೀ-ಫಾಲ್ಟ್ ಇಮೇಜ್ ಸೈಜ್, 300 ಪಿಕ್ಸೆಲ್ ಗಳ Width ಹಾಗೂ 300 ಪಿಕ್ಸೆಲ್ ಗಳ Height ಅನ್ನು ಹೊಂದಿದೆ.
03:24 ‘ಸ್ಕ್ರೋಲರ್’ಗಳನ್ನು ಬಳಸಿ ನೀವು ವ್ಯಾಲ್ಯುಗಳನ್ನು ಹೆಚ್ಚು ಅಥವಾ ಕಡಿಮೆ ಮಾಡಬಹುದು.
03:29 ಈಗ 'File type' ಆಯ್ಕೆಗೆ.
03:31 GChem3D ವಿವಿಧ ಫೈಲ್ ಫಾರ್ಮ್ಯಾಟ್ ಗಳನ್ನು ಬೆಂಬಲಿಸುತ್ತದೆ.
03:35 VRML, PDF, PNG ಮತ್ತು ಇನ್ನಿತರ ಪ್ರಕಾರದ ಫೈಲ್ ಗಳು ಡ್ರಾಪ್-ಡೌನ್ ಲಿಸ್ಟ್ ನಲ್ಲಿ ದೊರೆಯುತ್ತವೆ.
03:45 ಫೈಲ್ ನ ಪ್ರಕಾರವನ್ನು ಸೂಚಿಸದಿದ್ದರೆ, GChem3d, ಫೈಲ್ ನ ಹೆಸರಿನಿಂದ ಫೈಲ್ ನ ಪ್ರಕಾರವನ್ನು ನಿರ್ಣಯಿಸಲು ಯತ್ನಿಸುತ್ತದೆ.
03:52 ಅದು ಯಶಸ್ವಿಯಾಗದಿದ್ದರೆ, ಡೀ-ಫಾಲ್ಟ್ ಫೈಲ್ ಟೈಪ್ VRML ಅನ್ನು ಬಳಸಲಾಗುವುದು.
03:58 ನಾವು ರಚನೆಯನ್ನು VRML ಫೈಲ್ ಫಾರ್ಮ್ಯಾಟ್ ನಲ್ಲಿ ಸೇವ್ ಮಾಡೋಣ.
04:03 VRML document ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳಿ.
04:07 ಫೈಲ್ ನ ಹೆಸರನ್ನು adenosine ಎಂದು ಟೈಪ್ ಮಾಡಿ.
04:11 ಫೈಲನ್ನು ಡೆಸ್ಕ್ಟಾಪ್ ಮೇಲೆ ಸೇವ್ ಮಾಡಲು, Desktop ಮೇಲೆ ಕ್ಲಿಕ್ ಮಾಡಿ.
04:14 Save ಬಟನ್ ನ ಮೇಲೆ ಕ್ಲಿಕ್ ಮಾಡಿ.
04:17 VRML File type ಎಂದರೆ ಏನು ಎನ್ನುವುದನ್ನು ಈಗ ನಾವು ತಿಳಿಯುವೆವು.
04:22 VRML ಎನ್ನುವುದು ಟೆಕ್ಸ್ಟ್ ಫೈಲ್ ಫಾರ್ಮ್ಯಾಟ್ ಆಗಿದ್ದು ‘.wrl’ ಎಕ್ಸ್ಟೆನ್ಶನ್ ಅನ್ನು ಹೊಂದಿದೆ.
04:28 3D ಬಹುಭುಜಾಕೃತಿಯ ಲಕ್ಷಣಗಳಾದ ‘ವರ್ಟೈಸಿಸ್’ (vertices), 'ಎಜ್ಜಸ್' (edges) , 'ಸರ್ಫೇಸ್ ಕಲರ್', (surface color) ಗಳನ್ನು ಸೂಚಿಸಬಹುದು.
04:35 VRML ಫೈಲ್ ಗಳು ಸಾಮಾನ್ಯ ಟೆಕ್ಸ್ಟ್ ನಲ್ಲಿ ಇದ್ದು Gzip ಆಗಿ ‘ಕಾಂಪ್ರೆಸ್’ ಆಗುತ್ತವೆ.
04:40 3D ಮಾಡೆಲಿಂಗ್ ಪ್ರೊಗ್ರಾಂಗಳು, ‘ಒಬ್ಜೆಕ್ಟ್’ಗಳು ಮತ್ತು ದೃಶ್ಯಗಳನ್ನು ಇದರಲ್ಲಿ ಸೇವ್ ಮಾಡುತ್ತವೆ.
04:45 ಸೇವ್ ಮಾಡಿದ ಫೈಲನ್ನು ‘ಓಪನ್’ ಮಾಡೋಣ.
04:48 adenosine.wrl ಎನ್ನುವ ಫೈಲ್ನ ಮೇಲೆ ರೈಟ್-ಕ್ಲಿಕ್ ಮಾಡಿ. Open with Text Editor ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳಿ.
04:55 Text editor (ಟೆಕ್ಸ್ಟ್ ಎಡಿಟರ್) ರಚನೆಯ ಬಗ್ಗೆ ಎಲ್ಲ ವಿವರಗಳನ್ನು ತೋರಿಸುತ್ತದೆ.
05:01 ಈಗ ನಾವು Page Setup ಗೆ ಹೋಗೋಣ.
05:04 ಪ್ರಿಂಟ್ ಮಾಡುವಾಗ, GChem3d, 300 dpi (ಮುನ್ನೂರು ಡಿ-ಪಿ-ಐ) ರೆಸಲ್ಯೂಶನ್ಅನ್ನು ಬಳಸುತ್ತದೆ.
05:09 ‘ಪೇಜ್-ಸೆಟ್ ಅಪ್’ನ ಗುಣಲಕ್ಷಣಗಳು ‘ಜಿ-ಕೆಮ್-ಪೇಂಟ್’ನಲ್ಲಿ ಇದ್ದಂತೆಯೇ ಆಗಿವೆ.
05:14 ಈ ಸರಣಿಯಲ್ಲಿ GChemPaint ಟ್ಯುಟೋರಿಯಲ್ ಗಳಲ್ಲಿ, ನಾನು ಈಗಾಗಲೇ ಚರ್ಚಿಸಿದ್ದೇನೆ.
05:19 ನಾನು ವಿಂಡೋ ಅನ್ನು ‘ಕ್ಲೋಸ್’ ಮಾಡುವೆನು.
05:21 ಈಗ ನಾವು View ಮೆನ್ಯುವಿಗೆ ಹೋಗೋಣ.
05:25 View ಮೆನ್ಯುವನ್ನು ಆಯ್ಕೆಮಾಡಿ.
05:27 GChem3D, ಅಣುವನ್ನು ನಾಲ್ಕು ಪ್ರಕಾರದ ಮಾಡೆಲ್ ಗಳನ್ನು ಬಳಸಿ ಪ್ರದರ್ಶಿಸುತ್ತದೆ.
05:32 * Balls and sticks (ಬಾಲ್ಸ್ ಆಂಡ್ ಸ್ಟಿಕ್ಸ್) * Space filling (ಸ್ಪೇಸ್ ಫಿಲ್ಲಿಂಗ್)
05:35 * Cylinders (ಸಿಲಿಂಡರ್ಸ್) ಹಾಗೂ * Wireframe (ವೈರ್ ಫ್ರೇಮ್).
05:39 Balls and sticks ಡೀ-ಫಾಲ್ಟ್ ಮಾಡೆಲ್ ಆಗಿದೆ.
05:42 ಈ ಮಾಡೆಲ್ ಅನ್ನು ಬಳಸಿ, ‘ಮಲ್ಟಿಪಲ್ ಬಾಂಡ್’ ಹಾಗೂ ‘ಕರೆಕ್ಟ್ ಬಾಂಡ್’ ಸ್ಥಾನಗಳನ್ನು ವೀಕ್ಷಿಸಬಹುದು.
05:48 ನಾನು Space Filling ನ ಮೇಲೆ ಕ್ಲಿಕ್ ಮಾಡುವೆನು ಹಾಗೂ ನೀವು ವ್ಯತ್ಯಾಸವನ್ನು ನೋಡಬಹುದು.
05:53 Space Filling ಮಾಡೆಲ್, ಅಣುಗಳನ್ನು ಸಾಂದ್ರವಾದ ರೂಪದಲ್ಲಿ ತೋರಿಸುತ್ತದೆ.
05:58 Cylinders ಎನ್ನುವ ಮಾಡೆಲ್, ರಚನೆಯನ್ನು ಸಿಲಿಂಡರಾಕಾರದ ಕೊಳವೆಗಳ ರೂಪದಲ್ಲಿ ತೋರಿಸುತ್ತದೆ.
06:03 Wireframe ಮಾಡೆಲ್, ‘ಸ್ಕೆಲೆಟಲ್’ ರಚನೆಯನ್ನು ತೋರಿಸುತ್ತದೆ.
06:08 ನಾವು ಮರಳಿ Balls and sticks ಗೆ ಬದಲಾಯಿಸೋಣ.
06:11 ಈಗ ನಾವು Background color ಎನ್ನುವಲ್ಲಿಗೆ ನಡೆಯೋಣ.
06:14 ‘ಬ್ಲ್ಯಾಕ್’, ಡಿ-ಫಾಲ್ಟ್ ಬ್ಯಾಕ್‌ಗ್ರೌಂಡ್ ಕಲರ್ ಆಗಿದೆ.
06:17 View ಮೆನ್ಯುವನ್ನು ಆಯ್ಕೆಮಾಡಿ, Background color ಎನ್ನುವಲ್ಲಿಗೆ ಹೋಗಿ.
06:21 ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ.
06:23 ಸಬ್-ಮೆನ್ಯುವಿನ ಕೊನೆಯಲ್ಲಿರುವ Custom color ಅನ್ನು ಆಯ್ಕೆಮಾಡಿ.
06:26 Background color ಎನ್ನುವ ವಿಂಡೋ ತೆರೆದುಕೊಳ್ಳುತ್ತದೆ.
06:30 ಈ ವಿಂಡೋ, ನಮಗೆ ಬೇಕಾಗಿರುವ ಬಣ್ಣವನ್ನು ಆರಿಸಿಕೊಳ್ಳಲು ವಿವಿಧ ಫೀಲ್ಡ್ ಗಳನ್ನು ಹೊಂದಿದೆ.
06:35 Hue ಅನ್ನು ಬಳಸಿ ನಾವು ‘ಬ್ಯಾಕ್‌ಗ್ರೌಂಡ್ ಕಲರ್’ಅನ್ನು ಬದಲಾಯಿಸಬಹುದು.
06:39 ಸ್ಕ್ರೋಲರ್ ನ ಮೇಲೆ ಕ್ಲಿಕ್ ಮಾಡಿ. ವ್ಯಾಲ್ಯೂನಲ್ಲಿಯ ಬದಲಾವಣೆಯನ್ನು ಮತ್ತು ‘ಕಲರ್ ಸರ್ಕಲ್’ನ ಚಲನೆಯನ್ನು ಗಮನಿಸಿ.
06:45 Saturation ಅನ್ನು ಬಳಸಿ, ನಾವು ಬಣ್ಣದ ಸಾಂದ್ರತೆಯನ್ನು ಬದಲಾಯಿಸಬಹುದು.
06:51 ಒಂದೇ ಬಣ್ಣದ ವಿಭಿನ್ನ ಛಾಯೆಗಳನ್ನು ಪಡೆಯಲು, Value ಅನ್ನು ಬಳಸಿ ನಾವು RGB ಸಂಯೋಜನೆಯನ್ನು ಬದಲಾಯಿಸಬಹುದು.
06:59 ಇದು ‘ಪ್ರಿವ್ಯೂ’ ಬಾಕ್ಸ್ ಆಗಿದ್ದು, ಬದಿಯಲ್ಲಿ eyedropper ಐಕಾನ್ ಅನ್ನು ಹೊಂದಿದೆ.
07:04 eyedropper ಐಕಾನ್ ನ ಮೇಲೆ ಕ್ಲಿಕ್ ಮಾಡಿ.
07:07 ನಿಮಗೆ ಇಷ್ಟವಾದ ಬಣ್ಣವನ್ನು ಆಯ್ದುಕೊಳ್ಳಲು, ‘ಕಲರ್ ರಿಂಗ್’ನ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ.
07:11 OK ಬಟನ್ ನ ಮೇಲೆ ಕ್ಲಿಕ್ ಮಾಡಿ. ‘ಸ್ಕ್ರೀನ್’ನ ಮೇಲೆ ‘ಬ್ಯಾಕ್‌ಗ್ರೌಂಡ್ ಕಲರ್’ ಬದಲಾಗುವುದು.
07:18 ನಾವು ಕಲಿತಿರುವುದನ್ನು ಸಾರಾಂಶಗೊಳಿಸೋಣ.
07:20 ಈ ‘ಟ್ಯುಟೋರಿಯಲ್’ನಲ್ಲಿ ನಾವು,
07:23 * ವಿಭಿನ್ನ ಮೆನ್ಯುಗಳು
07:24 * ಫೈಲ್ ಟೈಪ್ ಫಾರ್ಮ್ಯಾಟ್ ಗಳು
07:26 * ‘ಮಾಡೆಲ್’ನ ಪ್ರಕಾರಗಳು ಮತ್ತು * ‘ಬ್ಯಾಕ್‌ಗ್ರೌಂಡ್ ಕಲರ್’ಅನ್ನು ಹೇಗೆ ಬದಲಾಯಿಸುವುದು ಇತ್ಯಾದಿಗಳ ಬಗ್ಗೆ ಕಲಿತಿದ್ದೇವೆ.
07:30 ಇಲ್ಲಿ ಒಂದು ಅಸೈನ್ಮೆಂಟ್ ಇದೆ:
07:33 1. ‘ಜಿ-ಕೆಮ್-ಪೇಂಟ್’ನಿಂದ ಒಂದು Saccharide (ಸ್ಯಾಕರೈಡ್) ಅನ್ನು ಲೋಡ್ ಮಾಡಿ ಹಾಗೂ ಫೈಲನ್ನು '.mdl' ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ.
07:39 2. ರಚನೆಯನ್ನು Molecules viewer ನಲ್ಲಿ ‘ಓಪನ್’ ಮಾಡಿ.
07:42 3. ಇಮೇಜ್ಅನ್ನು PNG ಹಾಗೂ PDF ಫೈಲ್ ಟೈಪ್ ನಲ್ಲಿ ಸೇವ್ ಮಾಡಿ.
07:46 4. ವಿವಿಧ ‘ಬ್ಯಾಕ್‌ಗ್ರೌಂಡ್ ಕಲರ್’ಗಳನ್ನು ಪ್ರಯತ್ನಿಸಿ.
07:49 ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. http://spoken-tutorial.org/What_is_a_Spoken_Tutorial
07:53 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ.
07:56 ಒಳ್ಳೆಯ ‘ಬ್ಯಾಂಡ್‌ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:01 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
08:06 ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:10 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
08:17 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
08:22 ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ.
08:29 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro
08:35 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………….. .

ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal