Difference between revisions of "GChemPaint/C3/Aromatic-Molecular-Structures/Kannada"

From Script | Spoken-Tutorial
Jump to: navigation, search
(Created page with " <font size="2"> {|border=1 !'''Time''' !'''Narration''' </font> |- | 00:01 | ನಮಸ್ಕಾರ. |- | 00:02 | '''GChemPaint''' (ಜಿ-ಕೆಮ್-ಪೇಂಟ್) ನಲ...")
 
Line 283: Line 283:
 
|-
 
|-
 
| 06:12
 
| 06:12
|* 3 ಮತ್ತು 5- ‘ಮೆಟಾ’ ಎಂದು,
+
|* 3 ಮತ್ತು 5- ‘ಮೆಟಾ’ ಎಂದು ಬದಲಾಯಿಸಬಹುದು.
ಬದಲಾಯಿಸಬಹುದು.
+
 
|-
 
|-
 
| 06:15
 
| 06:15

Revision as of 20:38, 17 January 2015

Time Narration

00:01 ನಮಸ್ಕಾರ.
00:02 GChemPaint (ಜಿ-ಕೆಮ್-ಪೇಂಟ್) ನಲ್ಲಿಯ Aromatic Molecular Structures (ಆರೋಮ್ಯಾಟಿಕ್ ಮೊಲೆಕ್ಯುಲರ್ ಸ್ಟ್ರಕ್ಚರ್ಸ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:07 ಈ ‘ಟ್ಯುಟೋರಿಯಲ್’ನಲ್ಲಿ ನಾವು,
00:10 ‘ಸೈಕ್ಲೋಹೆಕ್ಸೇನ್’ಅನ್ನು ‘ಸೈಕ್ಲೋಹೆಕ್ಸೀನ್’ಗೆ ಪರಿವರ್ತಿಸುವುದು,
00:13 ‘ಸೈಕ್ಲೋಹೆಕ್ಸೀನ್’ಅನ್ನು ‘ಬೆಂಜೀನ್’ಗೆ ಪರಿವರ್ತಿಸುವುದು,
00:16 ‘ಬೆಂಜೀನ್ ರಿಂಗ್’ನ ‘ಹೈಡ್ರೋಜನ್’ಗೆ ಬದಲಾಗಿ ಬೇರೆ ಪರಮಾಣುಗಳನ್ನು ಸೇರಿಸುವುದು,
00:20 ‘ಬೆಂಜೀನ್ ರಿಂಗ್’ನ ‘ಹೈಡ್ರೋಜನ್’ಗೆ ಬದಲಾಗಿ ಬೇರೆ ಪರಮಾಣುಗಳ ಸಮೂಹವನ್ನು ಸೇರಿಸುವುದು ಹಾಗೂ
00:24 ಎರಡು ಅಣುಗಳನ್ನು ಒಂದುಗೂಡಿಸುವುದು ಇತ್ಯಾದಿಗಳನ್ನು ಕಲಿಯುವೆವು.
00:26 ಇಲ್ಲಿ ನಾನು,
00:28 Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ
00:32 GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಗಳನ್ನು ಬಳಸುತ್ತಿದ್ದೇನೆ.
00:37 ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು
00:41 'GChemPaint' chemical structure editor (‘ಜೀ-ಕೆಮ್-ಪೇಂಟ್’ ಕೆಮಿಕಲ್ ಸ್ಟ್ರಕ್ಚರ್ ಎಡಿಟರ್) ಅನ್ನು ತಿಳಿದಿರಬೇಕು.
00:44 ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್‌ಸೈಟ್ ಗೆ ಹೋಗಿ.
00:50 ನಾನು ಒಂದು ಹೊಸ ‘GChemPaint ಅಪ್ಪ್ಲಿಕೇಶನ್’ಅನ್ನು ತೆರೆದಿದ್ದೇನೆ.
00:54 ಮೊದಲು, ಒಂದು ‘ಸಿಕ್ಸ್ ಮೆಂಬರ್ಡ್ ಸೈಕಲ್’ಅನ್ನು ನಾವು ‘ಡಿಸ್ಪ್ಲೇ ಏರಿಯಾ’ಗೆ ಸೇರಿಸೋಣ.
00:59 Add a six membered cycle ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
01:02 ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ.
01:04 Add a bond or change the multiplicity of the existing one ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
01:10 ‘ಸೈಕಲ್’ನ ಪ್ರತಿಯೊಂದು ಮೂಲೆಯ ಮೇಲೆ ಎರಡು ‘ಬಾಂಡ್’ಗಳನ್ನು ಸೇರಿಸಿ.
01:14 ಯಾವುದೇ ಎರಡು ‘ಬಾಂಡ್’ಗಳು ಒಂದನ್ನೊಂದು ಸ್ಪರ್ಶಿಸದಂತೆ ಅವುಗಳನ್ನು ಇರಿಸಿ.
01:19 ಹೀಗೆ ಮಾಡಲು, ‘ಬಾಂಡ್’ಗಳ ಮೇಲೆ ಕ್ಲಿಕ್ ಮಾಡಿ ಅವುಗಳನ್ನು ಸರಿಯಾದ ಸ್ಥಾನಗಳಿಗೆ ಎಳೆಯಿರಿ.
01:24 ‘ಸೈಕಲ್’ನ ಎಲ್ಲ ಮೂಲೆಗಳ ಮೇಲೆ ‘ಕಾರ್ಬನ್’ ಪರಮಾಣುಗಳನ್ನು ನಾವು ತೋರಿಸೋಣ.
01:28 ಯಾವುದೇ ಒಂದು ಮೂಲೆಯ ಮೇಲೆ ರೈಟ್ ಕ್ಲಿಕ್ ಮಾಡಿ.
01:31 ಒಂದು ಸಬ್-ಮೆನ್ಯೂ ಕಾಣಿಸಿಕೊಳ್ಳುತ್ತದೆ.
01:33 Atom ಅನ್ನು ಆಯ್ಕೆಮಾಡಿ. ಆಮೇಲೆ Display symbol ನ ಮೇಲೆ ಕ್ಲಿಕ್ ಮಾಡಿ.
01:36 ಹೀಗೆಯೇ, ‘ಕಾರ್ಬನ್’ ಪರಮಾಣುಗಳನ್ನು ಸೈಕಲ್ ನ ಎಲ್ಲ ಮೂಲೆಗಳ ಮೇಲೆ ಸೇರಿಸಿ.
01:42 ‘ಬಾಂಡ್’ಗಳಿಗೆ ‘ಹೈಡ್ರೋಜನ್’ ಪರಮಾಣುಗಳನ್ನು ಸೇರಿಸಲು, ಕೀಬೋರ್ಡ್ ನ ಮೇಲೆ ‘H' ಅನ್ನು ಒತ್ತಿ.
01:47 Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
01:51 ‘ಬಾಂಡ್’ಗಳ ಎಲ್ಲ ಸ್ಥಾನಗಳ ಮೇಲೆ ಕ್ಲಿಕ್ ಮಾಡಿ.
01:54 ಮತ್ತೆ, ಯಾವುದೇ ಎರಡು ‘ಹೈಡ್ರೋಜನ್’ಗಳು ಪರಸ್ಪರ ಒಂದರ ಮೇಲೆ ಇನ್ನೊಂದು ಇರದಂತೆ ನೋಡಿಕೊಳ್ಳಿ.
01:59 ಪಡೆದ ರಚನೆಯು ‘(C6H12) Cyclohexane’ (ಸಿ-ಸಿಕ್ಸ್-ಎಚ್-ಟ್ವೆಲ್ವ್-ಸೈಕ್ಲೋಹೆಕ್ಸೇನ್) ಆಗಿದೆ.
02:04 ನಾವು ರಚನೆಯನ್ನು ‘ಕಾಪಿ ಮತ್ತು ಪೇಸ್ಟ್’ ಮಾಡೋಣ.
02:07 ರಚನೆಯನ್ನು ಆಯ್ಕೆಮಾಡಲು Ctrl+A ಒತ್ತಿ.
02:10 ರಚನೆಯನ್ನು ‘ಕಾಪಿ’ ಮಾಡಲು Ctrl+C ಹಾಗೂ ಪೇಸ್ಟ್ ಮಾಡಲು Ctrl+V ಒತ್ತಿ.
02:15 ನಾವು ಎರಡನೆಯ ‘ಸೈಕ್ಲೋಹೆಕ್ಸೇನ್’ ರಚನೆಯನ್ನು ‘ಸೈಕ್ಲೋಹೆಕ್ಸೀನ್’ಗೆ ಪರಿವರ್ತಿಸೋಣ.
02:19 Eraser ಟೂಲ್ನ ಮೇಲೆ ಕ್ಲಿಕ್ ಮಾಡಿ.
02:22 ಅಕ್ಕಪಕ್ಕದ ಒಂದು ಜೊತೆ ‘ಕಾರ್ಬನ್’ ಪರಮಾಣುಗಳಿಂದ ಒಂದೊಂದು ‘ಹೈಡ್ರೋಜನ್ ಬಾಂಡ್’ಅನ್ನು ತೆಗೆದುಹಾಕಿ.
02:27 Add a bond or change the multiplicity of the existing one ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
02:33 ತೆಗೆದುಹಾಕಿದ ‘ಹೈಡ್ರೋಜನ್ ಬಾಂಡ್’ಗಳ ನಡುವಿನ ‘ಬಾಂಡ್’ನ ಮೇಲೆ ಕ್ಲಿಕ್ ಮಾಡಿ.
02:37 ಒಂದು ‘ಡಬಲ್ ಬಾಂಡ್’, ರೂಪುಗೊಂಡಿದೆ.
02:40 ಪಡೆದ ರಚನೆಯು Cyclohexene(C6H10) (ಸೈಕ್ಲೋಹೆಕ್ಸೀನ್ ಸಿ-ಸಿಕ್ಸ್-ಎಚ್-ಟೆನ್) ಆಗಿದೆ.
02:44 ನಾವು ‘ಸೈಕ್ಲೋಹೆಕ್ಸೀನ್’ಅನ್ನು ‘ಸೈಕ್ಲೋಹೆಕ್ಸಾಡಾಈನ್’ಗೆ ಮತ್ತು ಆನಂತರ ‘ಬೆಂಜೀನ್’ಗೆ ಪರಿವರ್ತಿಸೋಣ.
02:51 Current element ‘ಕಾರ್ಬನ್’ ಆಗಿದೆ ಎಂದು ಖಚಿತಪಡಿಸಿಕೊಳ್ಳಿ.
02:56 Eraser ಟೂಲ್ನ ಮೇಲೆ ಕ್ಲಿಕ್ ಮಾಡಿ.
02:58 ಅಕ್ಕಪಕ್ಕದ ಒಂದು ಜೊತೆ ‘ಕಾರ್ಬನ್’ ಪರಮಾಣುಗಳಿಂದ ಒಂದೊಂದು ‘ಹೈಡ್ರೋಜನ್ ಬಾಂಡ್’ಅನ್ನು ತೆಗೆದುಹಾಕಿ.
03:03 Add a bond or change the multiplicity of the existing one ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
03:09 ತೆಗೆದುಹಾಕಿದ ‘ಹೈಡ್ರೋಜನ್ ಬಾಂಡ್’ಗಳ ನಡುವಿನ ‘ಬಾಂಡ್’ನ ಮೇಲೆ ಕ್ಲಿಕ್ ಮಾಡಿ.
03:13 ಎರಡನೆಯ ‘ಡಬಲ್ ಬಾಂಡ್’, ರೂಪುಗೊಂಡಿದೆ.
03:16 ಪಡೆದ ರಚನೆಯು Cyclohexadiene(C6H8) (ಸೈಕ್ಲೋಹೆಕ್ಸಾಡಾಈನ್ ಸಿ-ಸಿಕ್ಸ್-ಎಚ್-ಏಟ್) ಆಗಿದೆ.
03:22 ಹೀಗೆಯೇ, ಮೂರನೆಯ ‘ಡಬಲ್ ಬಾಂಡ್’ಅನ್ನು ರೂಪಿಸಲು ಈ ಪ್ರಕ್ರಿಯೆಯನ್ನು ನಾವು ಮತ್ತೆ ಮಾಡೋಣ.
03:28 ಪಡೆದ ರಚನೆಯು Benzene(C6H6) (ಬೆಂಜೀನ್ ಸಿ-ಸಿಕ್ಸ್-ಎಚ್-ಸಿಕ್ಸ್) ಆಗಿದೆ.
03:33 ಒಂದು ಅಸೈನ್ಮೆಂಟ್ ಎಂದು,
03:35 * ‘ಸೈಕ್ಲೋಬ್ಯುಟೇನ್’ ರಚನೆಯನ್ನು ‘ಡ್ರಾ’ ಮಾಡಿ ಮತ್ತು ‘ಸೈಕ್ಲೋಬ್ಯುಟಾಡಾಈನ್’ಗೆ ಪರಿವರ್ತಿಸಿ.
03:39 * ‘ಸೈಕ್ಲೋಪೆಂಟೇನ್’ ರಚನೆಯನ್ನು ‘ಡ್ರಾ’ ಮಾಡಿ ಮತ್ತು ‘ಸೈಕ್ಲೋಪೆಂಟಾಡಾಈನ್’ಗೆ ಪರಿವರ್ತಿಸಿ.
03:45 ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಹೀಗೆ ಕಾಣಬೇಕು.
03:49 ಇನ್ನುಮುಂದೆ ನಾವು ‘ಬೆಂಜೀನ್’ನ ‘ಡೆರಿವೇಟಿವ್ಸ್’ ಬಗ್ಗೆ ತಿಳಿಯೋಣ.
03:53 ವಿವಿಧ ರಾಸಾಯನಿಕ ಸಂಯುಕ್ತಗಳನ್ನು ಪಡೆಯಲು, ‘ಬೆಂಜೀನ್’ನಲ್ಲಿಯ ‘ಹೈಡ್ರೋಜನ್’ಗಳನ್ನು ‘ಫಂಕ್ಷನಲ್ ಗ್ರುಪ್’ಗಳಿಂದ ಬದಲಿಸಬಹುದು.
03:59 ‘ಹೈಡ್ರೋಜನ್’ಗೆ ಬದಲಾಗಿ ಸೇರಿಸುವ ‘ಫಂಕ್ಷನಲ್ ಗ್ರುಪ್’ಗಳೆಂದರೆ,
04:02 ‘ಫ್ಲೋರೋ’ (F),
04:03 ‘ಮಿಥೈಲ್’ (CH3),
04:04 ‘ನೈಟ್ರೋ’ (NO2),
04:05 ’ಹೈಡ್ರಾಕ್ಸೀ’ (OH) ಮತ್ತು
04:06 ಇನ್ನೂ ಕೆಲವು.
04:08 ‘ಬೆಂಜೀನ್’ನ ರಚನೆಯನ್ನು ‘ಕಾಪಿ’ ಮಾಡಿ, ‘ಡಿಸ್ಪ್ಲೇ ಏರಿಯಾ’ದ ಮೇಲೆ ಎರಡು ಸಲ ‘ಪೇಸ್ಟ್’ ಮಾಡೋಣ.
04:13 ‘ಬೆಂಜೀನ್’ನ ರಚನೆಯನ್ನು ಆಯ್ಕೆಮಾಡಲು Select one or more objects ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
04:18 ‘ಕಾಪಿ’ ಮಾಡಲು Ctrl+C ಒತ್ತಿ ಮತ್ತು ರಚನೆಗಳನ್ನು ಪೇಸ್ಟ್ ಮಾಡಲು Ctrl+V ಎರಡು ಸಲ ಒತ್ತಿ.
04:24 ಮೊದಲನೆಯ ‘ಬೆಂಜೀನ್’ನ ರಚನೆಯಲ್ಲಿ, ‘ಹೈಡ್ರೋಜನ್’ಗೆ ಬದಲಾಗಿ ‘ಫ್ಲೋರಿನ್’ ಪರಮಾಣುವನ್ನು ಸೇರಿಸೋಣ.
04:30 ಕೀಬೋರ್ಡ್ ಮೇಲಿನ 'F' ಒತ್ತಿ.
04:32 Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
04:35 Hydrogen ಅನ್ನು Fluorine (ಫ್ಲೋರೀನ್) ನಿಂದ ಬದಲಿಸಲು ಅದರ ಮೇಲೆ ಕ್ಲಿಕ್ ಮಾಡಿ.
04:40 ಪಡೆದ ರಚನೆಯು Fluorobenzene (ಫ್ಲೋರೋಬೆಂಜೀನ್) ಆಗಿದೆ.
04:44 ಆನಂತರ, ಎರಡನೆಯ ‘ಬೆಂಜೀನ್’ನಲ್ಲಿಯ ‘ಹೈಡ್ರೋಜನ್’ಗೆ ಬದಲಾಗಿ ಪರಮಾಣುಗಳ ಒಂದು ಸಮೂಹವನ್ನು ಸೇರಿಸೋಣ.
04:50 Add or modify a group of atoms ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
04:54 ಯಾವುದೇ ಒಂದು ‘ಹೈಡ್ರೋಜನ್’ನ ಮೇಲೆ ಕ್ಲಿಕ್ ಮಾಡಿ.
04:57 ‘ಹೈಡ್ರೋಜನ್’, ಮಿನುಗುವ ಕರ್ಸರ್ ಹೊಂದಿದ ಹಸಿರು ಬಣ್ಣದ ಬಾಕ್ಸ್ ನ ಒಳಗೆ ಇದೆ.
05:03 ನಾವು ‘ಹೈಡ್ರೋಜನ್’ಅನ್ನು ಒಂದು ‘ಮಿಥೈಲ್ ಗ್ರುಪ್’ನಿಂದ ಬದಲಿಸೋಣ.
05:06 ‘ಹೈಡ್ರೋಜನ್’ಅನ್ನು ತೆಗೆದುಹಾಕಿ ಮತ್ತು ದೊಡ್ಡಕ್ಷರ C, H ಹಾಗೂ 3 ಗಳನ್ನು ಟೈಪ್ ಮಾಡಿ.
05:12 ‘ಡಿಸ್ಪ್ಲೇ ಏರಿಯಾ’ದ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ.
05:15 ಪಡೆದ ರಚನೆಯು ‘ಮಿಥೈಲ್ ಬೆಂಜೀನ್’ ಆಗಿದೆ.
05:19 ಮೂರನೆಯ ‘ಬೆಂಜೀನ್’ನ ‘ಹೈಡ್ರೋಜನ್’ಅನ್ನು ‘ನೈಟ್ರೋ ಗ್ರುಪ್’ನಿಂದ ಬದಲಿಸೋಣ.
05:24 ಯಾವುದೇ ಒಂದು ‘ಹೈಡ್ರೋಜನ್’ನ ಮೇಲೆ ಕ್ಲಿಕ್ ಮಾಡಿ.
05:27 ‘ಹೈಡ್ರೋಜನ್’ಅನ್ನು ತೆಗೆದುಹಾಕಿ ಮತ್ತು ದೊಡ್ಡಕ್ಷರ N, O ಹಾಗೂ 2 ಗಳನ್ನು ಟೈಪ್ ಮಾಡಿ.
05:32 ಪಡೆದ ರಚನೆಯು ‘ನೈಟ್ರೋಬೆಂಜೀನ್’ ಆಗಿದೆ.
05:36 ‘ಬೆಂಜೀನ್ ರಿಂಗ್’ನಲ್ಲಿ, ‘ಕಾರ್ಬನ್’ನ ಸ್ಥಾನಗಳನ್ನು ನೋಡೋಣ.
05:40 ‘ಬೆಂಜೀನ್’ನಲ್ಲಿ, ಆರು ‘ಕಾರ್ಬನ್’ನ ಪರಮಾಣುಗಳಿಗೆ 1 ರಿಂದ 6 ಸಂಖ್ಯೆಗಳನ್ನು ಕೊಡಲಾಗಿದೆ.
05:45 ‘ಹೈಡ್ರೋಜನ್’ಅನ್ನು ಬದಲಿಸುವ ಮೊದಲು ಈ ಆರು ಸ್ಥಾನಗಳು ಸರಿಸಮವಾಗಿವೆ.
05:51 ‘ಹೈಡ್ರೋಜನ್’ಅನ್ನು ‘ಫಂಕ್ಷನಲ್ ಗ್ರುಪ್’ನಿಂದ ಬದಲಿಸಿದಾಗ ರಿಂಗ್ ನ ‘ಇಲೆಕ್ಟ್ರಾನ್ ಡೆನ್ಸಿಟೀ’ ಬದಲಾಗುತ್ತದೆ.
05:57 ‘ಇಲೆಕ್ಟ್ರಾನ್ ಡೆನ್ಸಿಟೀ’, ‘ಸಬ್ಸ್ಟಿಟ್ಯುಯಂಟ್’ನ ಮೇಲೆ ಅವಲಂಬಿಸಿದೆ.
06:01 ‘ಬೆಂಜೀನ್’ನ ‘ಮೋನೊ-ಸಬ್ಸ್ಟಿಟ್ಯೂಟೆಡ್’ ಸಂಯುಕ್ತದ ಈ ಸ್ಥಾನಗಳಲ್ಲಿ:
06:06 * 1 ಮತ್ತು 4- ‘ಪ್ಯಾರಾ’ ಎಂದು,
06:09 * 2 ಮತ್ತು 6- ‘ಆರ್ಥೋ’ ಎಂದು,
06:12 * 3 ಮತ್ತು 5- ‘ಮೆಟಾ’ ಎಂದು ಬದಲಾಯಿಸಬಹುದು.
06:15 ಈಗ ‘ಮಿಥೈಲ್ ಬೆಂಜೀನ್’ ರಚನೆಯನ್ನು ಇನ್ನೊಂದು ‘ಮಿಥೈಲ್ ಗ್ರುಪ್’ನಿಂದ ಬದಲಿಸೋಣ.
06:20 Add or modify a group of atoms ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
06:24 ‘ರಿಂಗ್’ನಲ್ಲಿ, ಎರಡನೆಯ ‘ಹೈಡ್ರೋಜನ್’ನ ಸ್ಥಾನದ ಮೇಲೆ ಕ್ಲಿಕ್ ಮಾಡಿ.
06:28 ಹಸಿರು ಬಾಕ್ಸ್ ನಲ್ಲಿಯ ‘ಹೈಡ್ರೋಜನ್’ಅನ್ನು ‘ಮಿಥೈಲ್ ಗ್ರುಪ್’ನಿಂದ ಬದಲಿಸಲು,
06:32 ದೊಡ್ಡಕ್ಷರ C, H ಹಾಗೂ3 ಗಳನ್ನು ಟೈಪ್ ಮಾಡಿ.
06:35 ಪಡೆದ ಈ ಹೊಸ ರಚನೆಯು ‘ಆರ್ಥೋ-ಝೈಲೀನ್’ ಆಗಿದೆ.
06:39 ನಾವು ‘ನೈಟ್ರೋ ಬೆಂಜೀನ್’ಅನ್ನು ‘ಕಾರ್ಬಾಕ್ಸಿ ಗ್ರುಪ್’ನಿಂದ ಬದಲಿಸೋಣ.
06:44 ‘ರಿಂಗ್’ನಲ್ಲಿ, ನಾಲ್ಕನೆಯ ‘ಹೈಡ್ರೋಜನ್’ನ ಸ್ಥಾನದ ಮೇಲೆ ಕ್ಲಿಕ್ ಮಾಡಿ.
06:48 ಹಸಿರು ಬಾಕ್ಸ್ ನಲ್ಲಿಯ ‘ಹೈಡ್ರೋಜನ್’ಅನ್ನು ‘ಕಾರ್ಬಾಕ್ಸಿ ಗ್ರುಪ್’ನಿಂದ ಬದಲಿಸಲು,
06:52 ದೊಡ್ಡಕ್ಷರ C, O, O,H ಗಳನ್ನು ಟೈಪ್ ಮಾಡಿ.
06:57 ಪಡೆದ ಈ ಹೊಸ ರಚನೆಯು ‘ಪ್ಯಾರಾ-ನೈಟ್ರೋಬೆಂಜೋಯಿಕ್ ಆಸಿಡ್’ ಆಗಿದೆ.
07:02 ಈ ಪ್ರಕ್ರಿಯೆಯನ್ನು ‘ಅನ್-ಡು’ ಮಾಡಲು Ctrl+Z ಒತ್ತಿ.
07:05 ‘ನೈಟ್ರೋ ಬೆಂಜೀನ್’ನ ಮೂರನೆಯ ‘ಹೈಡ್ರೋಜನ್’ ಸ್ಥಾನವನ್ನು ‘ನೈಟ್ರೋ ಗ್ರುಪ್’ನಿಂದ ಬದಲಿಸಿ.
07:11 ಹೈಡ್ರೋಜನ್’ಅನ್ನು ತೆಗೆದುಹಾಕಿ ಮತ್ತು ದೊಡ್ಡಕ್ಷರ N, O ಹಾಗೂ 2 ಗಳನ್ನು ಟೈಪ್ ಮಾಡಿ.
07:17 ಪಡೆದ ಈ ಹೊಸ ರಚನೆಯು ‘ಮೆಟಾ-ಡೈನೈಟ್ರೋಬೆಂಜೀನ್’ ಆಗಿದೆ.
07:22 ಒಂದು ಅಸೈನ್ಮೆಂಟ್ ಎಂದು,
07:24 ‘ಬೆಂಜೀನ್’ನ ಏಳು ರಚನೆಗಳನ್ನು ‘ಡ್ರಾ’ ಮಾಡಿ.
07:25 ಕೆಳಗಿನವುಗಳ ಯಾವುದೇ ಒಂದು ‘ಹೈಡ್ರೋಜನ್’ಅನ್ನು ಬದಲಿಸಿ:
07:28 ಮೊದಲನೆಯ ‘ಬೆಂಜೀನ್’ನಲ್ಲಿ ‘ಬ್ರೋಮೋ’ದಿಂದ (Br),
07:30 ಎರಡನೆಯ ‘ಬೆಂಜೀನ್’ನಲ್ಲಿ ‘ಅಯೊಡೋ’ದಿಂದ (I),
07:32 ಮೂರನೆಯ ‘ಬೆಂಜೀನ್’ನಲ್ಲಿ ‘ಹೈಡ್ರಾಕ್ಸೀ’ಯಿಂದ (OH),
07:34 ನಾಲ್ಕನೆಯ ‘ಬೆಂಜೀನ್’ನಲ್ಲಿ ‘ಅಮೈನೋ’ದಿಂದ (NH2),
07:36 ಐದನೆಯ ‘ಬೆಂಜೀನ್’ನಲ್ಲಿ ‘ಇಥೈಲ್’ನಿಂದ (C2H5),
07:39 ಅಲ್ಲದೇ, ಆರನೆಯ ‘ಬೆಂಜೀನ್’ನಲ್ಲಿಯ ಯಾವುದೇ ಎರಡು ‘ಹೈಡ್ರೋಜನ್’ಗಳನ್ನು ‘ಕ್ಲೋರಿನ್’(Cl) ಪರಮಾಣುಗಳಿಂದ, ಹಾಗೂ
07:44 ಏಳನೆಯ ‘ಬೆಂಜೀನ್’ನಲ್ಲಿಯ ಮೊದಲನೆಯ ಮತ್ತು ನಾಲ್ಕನೆಯ ‘ಹೈಡ್ರೋಜನ್’ ಸ್ಥಾನಗಳನ್ನು ‘ಕಾರ್ಬಾಕ್ಸಿ ಗ್ರುಪ್’(COOH) ಗಳಿಂದ ಬದಲಿಸಿ.
07:51 ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಹೀಗೆ ಕಾಣಬೇಕು.
07:55 ಈಗ, ಎರಡು ರಚನೆಗಳನ್ನು ಒಂದುಗೂಡಿಸಲು ಕಲಿಯೋಣ.
07:57 ನಾವು ಒಂದು ಹೊಸ ವಿಂಡೋವನ್ನು ತೆರೆಯೋಣ.
08:00 Current element ‘ಕಾರ್ಬನ್’ ಆಗಿದೆ ಎಂದು ಖಚಿತಪಡಿಸಿಕೊಳ್ಳಿ.
08:04 Add a four membered cycle ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
08:07 ‘ಡಿಸ್ಪ್ಲೇ ಏರಿಯಾ’ದ ಮೇಲೆ ಎರಡು ಸಲ ಕ್ಲಿಕ್ ಮಾಡಿ.
08:10 Select one or more objects ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
08:14 ಎರಡನೆಯ ರಚನೆಯ ಮೇಲೆ ಕ್ಲಿಕ್ ಮಾಡಿ.
08:16 ಅದನ್ನು ಎಳೆದುತನ್ನಿ ಮತ್ತು ಮೊದಲನೆಯ ರಚನೆಯ ಸಮೀಪದಲ್ಲಿ,
08:20 ಅವುಗಳು ಒಂದನ್ನೊಂದು ಸ್ಪರ್ಶಿಸುವಂತೆ ಇರಿಸಿ.
08:23 ರಚನೆಯನ್ನು ಆಯ್ಕೆಮಾಡಲು Ctrl+A ಒತ್ತಿ.
08:26 Merge two molecules ಎನ್ನುವ ಟೂಲ್, ಸಕ್ರಿಯವಾಗುತ್ತದೆ.
08:30 ಅಣುಗಳನ್ನು ಒಂದುಗೂಡಿಸಲು Merge two molecules ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
08:34 ರಚನೆಗಳು ಒಂದುಗೂಡುವುದನ್ನು ನೋಡಲು ಅವುಗಳನ್ನು ಎಳೆಯಿರಿ.
08:38 ನಾವು ಕಲಿತಿರುವುದನ್ನು ಸಾರಾಂಶಗೊಳಿಸೋಣ.
08:41 ಈ ‘ಟ್ಯುಟೋರಿಯಲ್’ನಲ್ಲಿ ನಾವು,
08:43 ‘ಸೈಕ್ಲೋಹೆಕ್ಸೇನ್’ಅನ್ನು, ‘ಸೈಕ್ಲೋಹೆಕ್ಸೀನ್’ಗೆ ಪರಿವರ್ತಿಸುವುದು,
08:46 ‘ಸೈಕ್ಲೋಹೆಕ್ಸೀನ್’ಅನ್ನು, ‘ಬೆಂಜೀನ್’ಗೆ ಪರಿವರ್ತಿಸುವುದು,
08:49 ‘ಬೆಂಜೀನ್’ನ ‘ಹೈಡ್ರೋಜನ್’ಗೆ ಬದಲಾಗಿ ಫ್ಲೋರೋ(F), ಮಿಥೈಲ್(CH3), ನೈಟ್ರೋ(NO2) ಮತ್ತು ಕಾರ್ಬಾಕ್ಸಿ (COOH) ಗುಂಪುಗಳನ್ನು ಸೇರಿಸುವುದು,
08:55 ಎರಡು ‘ಫೋರ್ ಮೆಂಬರ್ಡ್ ಸೈಕಲ್’ಗಳನ್ನು ಒಂದುಗೂಡಿಸುವುದು ಇತ್ಯಾದಿಗಳನ್ನು ಕಲಿತಿದ್ದೇವೆ.
08:58 ಇಲ್ಲಿ ಒಂದು ಅಸೈನ್ಮೆಂಟ್ ಇದೆ.
09:00 ಇವುಗಳನ್ನು ಒಂದುಗೂಡಿಸಿ: * ಎರಡು ‘ಬೆಂಜೀನ್’ ಅಣುಗಳು
09:02 * ಎರಡು ‘ಪೆಂಟೇನ್’ ರಚನೆಗಳು
09:04 * ‘ಸೈಕ್ಲೋಪೆಂಟೇನ್’ ಮತ್ತು ‘ಸೈಕ್ಲೋಹೆಕ್ಸೇನ್’ ಅಣುಗಳು
09:08 ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಹೀಗೆ ಕಾಣಿಸಬೇಕು.
09:12 ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. http://spoken-tutorial.org/What_is_a_Spoken_Tutorial
09:15 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ.
09:19 ಒಳ್ಳೆಯ ‘ಬ್ಯಾಂಡ್‌ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:23 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
09:27 ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:31 ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
09:37 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
09:41 ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ.
09:48 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro
09:53 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ …………..
09:57 ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal