Difference between revisions of "FrontAccounting-2.4.7/C2/Installation-of-FrontAccounting-on-Linux-OS/Kannada"

From Script | Spoken-Tutorial
Jump to: navigation, search
(Created page with "{| border=1 ||'''Time''' || '''Narration''' |- ||00:01 || ಲೀನಕ್ಸ್ ಅಪರೇಟಿಂಗ್ ಸಿಸ್ಟಂಗೆ FrontAccounting ಅಳವಡಿಸುವ...")
 
(Blanked the page)
Line 1: Line 1:
{| border=1
 
||'''Time'''
 
|| '''Narration'''
 
  
 
|-
 
||00:01
 
|| ಲೀನಕ್ಸ್ ಅಪರೇಟಿಂಗ್ ಸಿಸ್ಟಂಗೆ FrontAccounting ಅಳವಡಿಸುವ ಕುರಿತ ಸ್ಪೋಕನ್ ಟುಟೋರಿಯಲ್ಗೆ ಸ್ವಾಗತ.
 
|-
 
||00:08
 
|| ಈ ಟ್ಯುಟೋರಿಯಲ್ನಲ್ಲಿ ನಾವು-
 
XAMPP ಅಳವಡಿಸಲು,
 
 
|-
 
||00:13
 
|| FrontAccounting ಸಾಫ್ಟ್ವೇರ್ ಅಳವಡಿಸಲು,
 
 
|-
 
||00:15
 
|| ಡೇಟಾಬೇಸ್ ಸೆಟಪ್ ಮಾಡಲು ಮತ್ತು
 
ಲೀನಕ್ಸ್ ಒ.ಎಸ್ ನಲ್ಲಿ FrontAccounting ಅಳವಡಿಸಲು ಕಲಿಯಲಿದ್ದೇವೆ.
 
 
|-
 
||00:22
 
|| ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು
 
ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04,
 
 
|-
 
||00:29
 
|| ಅಪಾಚೆ, ಮೈ SQL ಮತ್ತು  XAMPP 5.5.19 ಯಿಂದ ಗಳಿಸಿದ PHP,
 
 
|-
 
||00:36
 
|| FrontAccounting 2.4.7,
 
 
|-
 
||00:40
 
|| ಫೈರ್ಫಾಕ್ಸ್ ವೆಬ್ ಬ್ರೌಸರ್ ಮತ್ತು ಕೆಲಸ ಮಾಡುತ್ತಿರುವ ಇಂಟರ್ನೆಟ್ ಸಂಪರ್ಕ ಬಳಸುತ್ತಿದ್ದೇನೆ.
 
 
|-
 
||00:45
 
|| ನೀವು ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಬಳಸಬಹುದು.
 
 
|-
 
||00:50
 
|| FrontAccounting ಎನ್ನುವುದು ಸರ್ವರ್ ಆಧರಿತ ಅಕೌಂಟಿಂಗ್ ಸಿಸ್ಟಂ ಆಗಿದೆ. 
 
 
|-
 
||00:54
 
|| ಹೀಗಾಗಿ ನಾವು ನಮ್ಮ ಮಶಿನ್ನಲ್ಲಿ ವೆಬ್ ಸರ್ವರ್ ಸೆಟಪ್ ಮಾಡಲು XAMPP ಬಳಸಲಿದ್ದೇವೆ.
 
 
|-
 
||00:59
 
|| ವೆಬ್ ಬ್ರೌಸರ್ ಒಂದನ್ನು ತೆರೆಯಿರಿ.
 
ಅಡ್ರೆಸ್ ಬಾರ್ನಲ್ಲಿ ಈ URL ಟೈಪ್ ಮಾಡಿ ಮತ್ತು Enter ಒತ್ತಿ.
 
 
|-
 
||01:06
 
|| ಇಲ್ಲಿ ಪೇಜ್ ಅನ್ನು ಡೌನ್ಲೋಡ್ ಮಾಡಲು XAMPP ಬಳಸಬೇಕಾಗುತ್ತದೆ.
 
 
|-
 
||01:10
 
|| ಎಲ್ಲಾ ಅಪರೇಟಿಂಗ್ ಸಿಸ್ಟಂಗಳಿಗೆ ಡೌನ್ಲೋಡ್ ಮಾಡಲು ಇಲ್ಲಿ XAMPP ಲಭ್ಯ.
 
 
|-
 
||01:15
 
|| ಈ ಹಸಿರು ಬಟನ್ ಒತ್ತಿ XAMPP ನ ಇತ್ತೀಚಿನ ವರ್ಶನ್ ಅನ್ನು ಡೌನ್ಲೋಡ್ ಮಾಡಬಹುದು.
 
 
|-
 
||01:20
 
|| ಆದರೂ, ನಿಮ್ಮ ಸಾಫ್ಟ್ವೇರ್ ಅಗತ್ಯತೆಗೆ ಹೊಂದಿಕೊಂಡು, ನಿಮಗೆ XAMPP ನ ಬೇರೆ ವರ್ಶನ್ ಬೇಕಾಗಬಹುದು.
 
 
|-
 
||01:27
 
|| ನನ್ನ ವಿಚಾರದಲ್ಲಿ ನನಗೆ XAMPP ವರ್ಶನ್ 5.5.19 ಬೇಕು.
 
 
|-
 
||01:33
 
|| ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು XAMPP ಲೀನಕ್ಸ್ ಆರಿಸಿ.
 
 
|-
 
||01:37
 
|| ರಿಡೈರೆಕ್ಟ್ ಮಾಡಿದ ಪೇಜ್, ಇಲ್ಲಿತನಕದ ಎಲ್ಲಾ XAMPP ವರ್ಶನ್ಗಳನ್ನು ತೋರಿಸುತ್ತದೆ.
 
 
|-
 
||01:42
 
|| ಈ ಅಳವಡಿಕೆಗೆ ನಾನು XAMPP ವರ್ಶನ್ 5.5.19 ಆರಿಸುತ್ತೇನೆ.
 
 
|-
 
||01:49
 
|| ನನ್ನ ಸಿಸ್ಟಂ 64 ಬಿಟ್ ಅಪರೇಟಿಂಗ್ ಸಿಸ್ಟಂ ಆಗಿದೆ. ಹೀಗಾಗಿ ನಾನು xampp-linux-x64-5.5.19-0-installer.run ಡೌನ್ಲೋಡ್ ಮಾಡಲಿದ್ದೇನೆ.
 
 
|-
 
||02:05
 
|| ಈಗ Save file ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ OK ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||02:10
 
|| ನನ್ನ ಮಶಿನ್ನಲ್ಲಿ ಇದನ್ನು Downloads ಫೋಲ್ಡರ್ನಲ್ಲಿ ಸೇವ್ ಮಾಡಲಾಗಿದೆ.
 
 
|-
 
||02:14
 
|| ನಾವೀಗ Ctrl + Alt + T ಕೀಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಒಂದನ್ನು ತೆರೆಯೋಣ.
 
 
|-
 
||02:21
 
|| ಟರ್ಮಿನಲ್ನಲ್ಲಿ cd space Downloads ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು Enter ಒತ್ತಿ. 
 
 
|-
 
||02:27
 
|| ಇದು ಕರಂಟ್ ವರ್ಕಿಂಗ್ ಡೈರೆಕ್ಟರಿಯನ್ನು ಡೌನ್ಲೋಡ್ಸ್ ಗೆ ಬದಲಾಯಿಸಲಿದೆ.
 
 
|-
 
||02:31
 
|| ನಂತರ ಇಲ್ಲಿ ತೋರಿಸಿರುವ ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು Enter ಒತ್ತಿ.
 
 
|-
 
||02:36
 
|| ಈಗ ಇನ್ಸ್ಟಾಲರ್ ಫೈಲ್ ಅನ್ನು ರನ್ ಮಾಡಿ, ಇಲ್ಲಿ ತೋರಿಸಿರುವ ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು Enter ಒತ್ತಿ.
 
ಕೇಳಿದರೆ ಅಡ್ಮಿನ್ ಪಾಸ್ವರ್ಡ್ ನಮೂದಿಸಿ.
 
 
|-
 
||02:46
 
|| ಈಗ ಸೆಟಪ್ ವಿಜಾರ್ಡ್ ಡೈಲಾಗ್ ಬಾಕ್ಸ್ ತೆರೆಯುತ್ತದೆ.
 
 
|-
 
||02:50
 
|| ಕೇಳಿದಾಗಲೆಲ್ಲ Next ಬಟನ್ ಒತ್ತಿ ಮತ್ತು ಇಲ್ಲಿ ತೋರಿಸಿರುವಂತೆ ಇನ್ಸ್ಟಾಲೇಶನ್ ಹಂತಗಳನ್ನು ಅನುಸರಿಸಿ.
 
 
|-
 
||02:56
 
|| Learn more about Bitnami for XAMPP ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ.
 
ನಂತರ Next ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರಿಯಿರಿ.
 
 
|-
 
||03:05
 
|| ಅಳವಡಿಸುವುದನ್ನು ಮುಗಿದ ನಂತರ, Launch XAMPP ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ.
 
 
|-
 
||03:10
 
|| ಕೊನೆಯದಾಗಿ Finish ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||03:13
 
|| ಈಗ XAMPP ಯನ್ನು ನಮ್ಮ ಮಶಿನ್ನಲ್ಲಿ ಯಶಸ್ವಿಯಾಗಿ ಅಳವಡಿಸಲಾಗಿದೆಯೇ ಇಲ್ಲವೇ ಎಂಬುದನ್ನು ನಾವು ನೋಡಬೇಕು.
 
 
|-
 
||03:19
 
|| ಟರ್ಮಿನಲ್ನಲ್ಲಿ, sudo space slash opt slash lampp slash lampp space start ಎಂದು ಟೈಪ್ ಮಾಡಿ XAMPP ಸರ್ವಿಸ್ ಪ್ರಾರಂಭಿಸಿ.
 
 
|-
 
||03:31
 
|| ಕೇಳಿದಾಗ ಅಡ್ಮಿನ್ ಪಾಸ್ವರ್ಡ್ ಟೈಪ್ ಮಾಡಿ ಮತ್ತು Enter ಒತ್ತಿ.
 
 
|-
 
||03:36
 
|| ನೀವು ಇಲ್ಲಿ ತೋರಿಸಿರುವ ಮೆಸೆಜ್ ಪಡೆಯುಬಹುದು.
 
XAMPP ಯನ್ನು ನಿಮ್ಮ ಸಿಸ್ಟಂನಲ್ಲಿ ಅಳವಡಿಸಲಾಗಿದೆ ಮತ್ತು ನೀವು ಸರ್ವಿಸ್ ಪ್ರಾರಂಭಿಸಿದ್ದೀರಿ ಎಂಬುದನ್ನು ಇದು ತೋರಿಸುತ್ತದೆ.
 
 
|-
 
||03:46
 
|| ಒಂದುವೇಳೆ ನೀವು Command not found ಎನ್ನುವ ಮೆಸೆಜ್ ಪಡೆದರೆ, ನಿಮ್ಮ ಮಶಿನ್ನಲ್ಲಿ XAMPP ಯನ್ನು ಅಳವಡಿಸಿಲ್ಲ ಎಂದರ್ಥ.
 
 
|-
 
||03:54
 
|| ನೀವು ಈ ಕೆಳಗಿನ ಎರರ್ ಮೆಸೆಜ್ ಪಡೆಯಬಹುದು
 
“Apache shutdown unexpectedly”
 
ಅಥವಾ
 
 
|-
 
||04:00
 
|| “Port 80 in use for Apache Server”
 
ಅಥವಾ
 
 
 
 
|-
 
||04:05
 
|| “Unable to connect to any of the specified MySQL hosts for MySQL database.”
 
 
|-
 
||04:13
 
|| ಇದು ಏಕೆಂದರೆ ಅಪಾಚೆ ಮತ್ತು ಮೈ SQL ಗೆ ನೀಡಲಾದ ಡಿಫಾಲ್ಟ್ ಪೋರ್ಟ್ಗಳನ್ನು ಇನ್ನೊಂದು ಸಾಫ್ಟ್ವೇರ್ ತೆಗೆದುಕೊಂಡಿದೆ.
 
 
|-
 
||04:21
 
|| ಅಪಾಚೆಗೆ ಡಿಫಾಲ್ಟ್ ಪೋರ್ಟ್ ಸಂಖ್ಯೆ 80 ಮತ್ತು ಮೈ SQL ಗೆ 3306.
 
 
|-
 
||04:30
 
|| ಈ ಪೋರ್ಟ್ಗಳನ್ನು ಬದಲಾಯಿಸಲು, ಈ ಟ್ಯುಟೋರಿಯಲ್ನ ಅಡಿಷನಲ್ ರೀಡಿಂಗ್ ಮಟೀರಿಯಲ್ ನೋಡಿ.
 
 
|-
 
||04:36
 
|| ಹಾಗೂ ಮುಂದುವರಿಸುವ ಮುನ್ನ ಸರಿಯಾದ ಪೋರ್ಟ್ ಸಂಖ್ಯೆಗಳನ್ನು ನೀಡಿ. ಉದಾಹರಣೆಗೆ: 8080
 
 
|-
 
||04:44
 
|| ಈಗ ಫೈರ್ಫಾಕ್ಸ್ ವೆಬ್ ಬ್ರೌಸರ್ ತೆರೆಯಿರಿ.
 
ಅಡ್ರೆಸ್ ಬಾರ್ನಲ್ಲಿ localhost ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
 
 
|-
 
||04:52
 
|| ನಮಗೆ ಈಗ XAMPP ಸ್ಕ್ರೀನ್ ನೋಡಲು ಸಾಧ್ಯವಾಗಬೇಕು.
 
 
|-
 
||04:56
 
|| ಭಾಷೆಯ ಆಯ್ಕೆಯನ್ನು ಕೇಳಿದರೆ, ಇಂಗ್ಲಿಷ್ ಆರಿಸಿ.
 
 
|-
 
||05:01
 
|| ನಾವೀಗ XAMPP ಹೋಂ ಪೇಜ್ ನಲ್ಲಿದ್ದೇವೆ.
 
 
|-
 
||05:04
 
|| ಸ್ಕ್ರೀನ್ನ ಎಡಗಡೆಯಲ್ಲಿರುವ ಮೆನುವಿನಲ್ಲಿ  PHPinfo ಮೇಲೆ ಕ್ಲಿಕ್ ಮಾಡಿ.
 
 
|-
 
||05:10
 
|| ಈಗ Ctrl + F ಕೀ ಗಳನ್ನು ಒತ್ತಿ ಮತ್ತು DOCUMENT underscore ROOT ಗೆ ಹುಡುಕಿ.
 
 
|-
 
||05:18
 
|| ಇದನ್ನು Apache Environment ಟೇಬಲ್ನಲ್ಲಿ ಕಾಣಬಹುದು.
 
 
|-
 
||05:22
 
|| DOCUMENT underscore ROOT ನ ಮೌಲ್ಯವು
 
slash opt slash lampp slash htdocs ಅಥವಾ slash var slash www ಆಗಿರಬಹುದು. 
 
 
|-
 
||05:35
 
|| ನನ್ನ ಮಶಿನ್ನಲ್ಲಿ ಇದು slash opt slash lampp slash htdocs ಆಗಿದೆ.
 
 
|-
 
||05:41
 
|| ದಯವಿಟ್ಟು ಈ ಪಾತ್ ಅನ್ನು ನೆನಪಿಡಿ.
 
ನಾವಿಲ್ಲಿ FrontAccounting ಅಳವಡಿಸಲಿದ್ದೇವೆ.
 
 
|-
 
||05:47
 
|| ನಾವೀಗ FrontAccounting ನ ಡೌನ್ಲೋಡ್ ಪ್ರಾರಂಭಿಸೋಣ.
 
 
|-
 
||05:50
 
|| ವೆಬ್ ಬ್ರೌಸರ್ನಲ್ಲಿ ಇನ್ನೊಂದು ಟ್ಯಾಬ್ ತೆರೆಯಿರಿ ಮತ್ತು ಈ URL ಗೆ ಹೋಗಿ.
 
 
|-
 
||05:57
 
|| frontaccounting-2.4.7.tar.gz ಮೇಲೆ ಕ್ಲಿಕ್ ಮಾಡಿ.
 
 
|-
 
||06:04
 
|| ತಕ್ಷಣವೇ ಡೌನ್ಲೋಡ್ ಶುರುವಾಗುತ್ತದೆ.
 
Save File ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು OK ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||06:12
 
|| ಟರ್ಮಿನಲ್ಗೆ ವಾಪಸ್ ಬನ್ನಿ.
 
 
|-
 
||06:15
 
|| ನಂತರ, ನಾವು ಡೌನ್ಲೋಡ್ ಮಾಡಿದ tar.gz ಫೈಲ್ನಿಂದ ಕಂಟೆಂಟ್ ಗಳನ್ನು ಪಡೆಯಬೇಕು.
 
 
|-
 
||06:22
 
|| ಇದಕ್ಕಾಗಿ sudo space tar space hyphen zxvf space frontaccounting hyphen 2.4.7.tar.gz ಎಂದು ಟೈಪ್ ಮಾಡಿ.
 
 
|-
 
||06:39
 
|| ಕೇಳಿದರೆ ಅಡ್ಮಿನ್ ಪಾಸ್ವರ್ಡ್ ಟೈಪ್ ಮಾಡಿ ಮತ್ತು Enter ಒತ್ತಿ.
 
 
|-
 
||06:44
 
|| ಒಮ್ಮೆ ಪಡೆದ ನಂತರ, FrontAccounting ನಿಂದ ಪಡೆದ ಫೋಲ್ಡರ್ ಅನ್ನು ನಾನು account ಎಂದು ಮರುನಾಮಕಾರಣ ಮಾಡುತ್ತೇನೆ.
 
 
|-
 
||06:50
 
|| mv space frontaccounting space account ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು Enter ಒತ್ತಿ.
 
 
|-
 
||06:58
 
|| ಫೋಲ್ಡರ್ ಹೆಸರಿನ ಮರುನಾಮಕರಣವು ಐಚ್ಛಿಕ. ಆದರೆ,
 
ಒಂದೇ ಮಶಿನ್ನಲ್ಲಿ ಅಳವಡಿಸಲಾದ FrontAccounting ನ ಅನೇಕ ಇನ್ಸ್ಟನ್ಸ್ಗಳನ್ನು ಗುರುತಿಸಲು ಇದು ಸಹಕರಿಸುತ್ತದೆ.
 
 
|-
 
||07:08
 
|| ಈಗ ಟರ್ಮಿನಲ್ಗೆ ಮರಳಿ.
 
 
|-
 
||07:11
 
|| ನಾವೀಗ ಫೋಲ್ಡರ್ ಅಕೌಂಟ್ ಅನ್ನು ಅಪಾಚೆ ಹೋಂ ಡೈರೆಕ್ಟರಿಗೆ ಸರಿಸಬೇಕು.
 
 
|-
 
||07:17
 
|| ಅಕೌಂಟ್ ಫೋಲ್ಡರ್ ಅನ್ನು ಅಪಾಚೆ ಹೋಂ ಡೈರೆಕ್ಟರಿಗೆ ಸರಿಸಲು,
 
sudo space mv space account space /opt/lampp/htdocs/ ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
 
 
|-
 
||07:34
 
|| ನಾವೀಗ ಅಪಾಚೆ ಹೋಂ ಡೈರೆಕ್ಟರಿಗೆ ಸಾಗೋಣ.
 
 
|-
 
||07:37
 
|| ಹೀಗೆ ಮಾಡಲು cd space /opt/lampp/htdocs/ ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
 
 
|-
 
||07:47
 
|| ಅಕೌಂಟ್ ಫೋಲ್ಡರ್ ಪರ್ಮಿಶನ್ ಬದಲಾಯಿಸಲು,
 
sudo space chmod space -R space 777 space account slash ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
 
 
|-
 
||08:01
 
|| ನಾವೀಗ XAMPP ಸರ್ವರ್ ಅನ್ನು ಯಶಸ್ವಿಯಾಗಿ ಅಳವಡಿಸಿದ್ದೇವೆ.
 
 
|-
 
||08:05
 
|| FrontAccounting ಇನ್ಸ್ಟಾಲರ್, ವೆಬ್ ಸರ್ವರ್ನ ರೂಟ್ ಡೈರೆಕ್ಟರಿಯಲ್ಲಿದೆ ಎಂಬುದನ್ನು ಖಚಿತಪಡಿಸಿ.
 
 
|-
 
||08:11
 
|| ನಂತರ, ಮುಂದೆ ಸಾಗಲು FrontAccounting ಗಾಗಿ ನಾವು ಡೇಟಾಬೇಸ್ ಒಂದನ್ನು ರಚಿಸಬೇಕು.
 
 
|-
 
||08:17
 
|| ನಾವಿದನ್ನು phpmyadmin ನಲ್ಲಿ ಮಾಡಲಿದ್ದೇವೆ. ಇದು ಮೈ SQL ನ ಗ್ರಾಫಿಕಲ್ ಯೂಸರ್ ಇಂಟರ್ಫೇಸ್ ಆಗಿದೆ.
 
ಇದು XAMPP ಅಳವಡಿಕೆಯ ಜೊತೆ ಬರುತ್ತದೆ.
 
 
|-
 
||08:28
 
|| ನಾವೀಗ ಬ್ರೌಸರ್ನಲ್ಲಿ XAMPP ಪೇಜ್ಗೆ ಸಾಗೋಣ.
 
XAMPP ಪೇಜ್ನಲ್ಲಿ, ಎಡಗಡೆಗೆ ಇರುವ ಮೆನುವಿನಲ್ಲಿ phpMyadmin ಮೇಲೆ ಟೈಪ್ ಮಾಡಿ.
 
 
|-
 
||08:39
 
|| ಮೇಲ್ಗಡೆಯ ಮೆನುವಿನಲ್ಲಿ Users ಮೇಲೆ ಕ್ಲಿಕ್ ಮಾಡಿ ಮತ್ತು Add User ಮೇಲೆ ಕ್ಲಿಕ್ ಮಾಡಿ.
 
 
|-
 
||08:47
 
|| ಈಗ ತೆರೆಯುವ ಹೊಸ ವಿಂಡೋದಲ್ಲಿ ನಿಮ್ಮ ಆಯ್ಕೆಯ ಯೂಸರ್ನೇಮ್ ನಮೂದಿಸಿ.
 
ನಾನಿಲ್ಲಿ frontacc ಅನ್ನು ನನ್ನ ಯೂಸರ್ನೇಮ್ ಆಗಿ ಟೈಪ್ ಮಾಡುತ್ತೇನೆ.
 
 
|-
 
||08:56
 
|| Host ಡ್ರಾಪ್-ಡೌನ್ ಲಿಸ್ಟ್ನಿಂದ Local ಆರಿಸಿ.
 
 
|-
 
||09:01
 
|| Password ಟೆಕ್ಸ್ಟ್-ಬಾಕ್ಸ್ನಲ್ಲಿ ನಿಮ್ಮ ಆಯ್ಕೆಯ ಪಾಸ್ವರ್ಡ್ ನಮೂದಿಸಿ.
 
 
|-
 
||09:06
 
|| ನಾನಿಲ್ಲಿ admin123 ಅನ್ನು ನನ್ನ ಪಾಸ್ವರ್ಡ್ ಆಗಿ ಟೈಪ್ ಮಾಡುತ್ತೇನೆ.
 
 
|-
 
||09:11
 
|| Re-type ಟೆಕ್ಸ್ಟ್ ಬಾಕ್ಸ್ನಲ್ಲಿ ಅದೇ ಪಾಸ್ವರ್ಡ್ ಅನ್ನು ಇನ್ನೊಮ್ಮೆ ಟೈಪ್ ಮಾಡಿ.
 
 
|-
 
||09:16
 
|| ಸದ್ಯಕ್ಕೆ Generate Password prompt ಮೇಲೆ ಕ್ಲಿಕ್ ಮಾಡಬೇಡಿ.
 
 
|-
 
||09:21
 
|| Database for user ಅಡಿ ನಾವು ಈ ಆಯ್ಕೆಯನ್ನು ನೋಡಬಹುದು:
 
Create database with the same name and grant all privileges.
 
 
|-
 
||09:29
 
|| ನಾವು ಆ ಆಯ್ಕೆಯನ್ನು ಪರೀಕ್ಷಿಸಿ ಕೆಳಕ್ಕೆ ಸ್ಕ್ರಾಲ್ ಮಾಡಲಿದ್ದೇವೆ.
 
 
|-
 
||09:33
 
|| ನಂತರ ಪೇಜ್ನ ಬಲಗಡೆಗೆ ಕೆಳಕ್ಕೆ Go ಬಟನ್ ಮೇಲೆ ಕ್ಲಿಕ್ ಮಾಡಲಿದ್ದೇವೆ.
 
 
|-
 
||09:38
 
|| ನಾವಿಲ್ಲಿ “You have added a new user” ಮೆಸೇಜ್ ಕಾಣಬಹುದು.
 
frontacc ಹೆಸರಿನ ಮತ್ತು frontacc ಯೂಸರ್ನ ಹೊಸ ಡೇಟಾಬೇಸ್ ರಚಿಸಲಾಗಿದೆ ಎಂಬುದನ್ನು ಇದು ಸೂಚಿಸುತ್ತದೆ.
 
 
|-
 
||09:50
 
|| ಯೂಸರ್ನೇಮ್ ಮತ್ತು ಪಾಸ್ವರ್ಡ್ ಕೇವಲ ಡೇಟಾಬೇಸ್ ಲಾಗಿನ್ ಉದ್ದೇಶಕ್ಕೆ ಮಾತ್ರ.
 
 
|-
 
||09:56
 
|| ಯೂಸರ್ನೇಮ್, ಪಾಸ್ವರ್ಡ್ ಮತ್ತು ಡೇಟಾಬೇಸ್ ಹೆಸರುಗಳನ್ನು ನೆನಪಿಡಿ.
 
 
|-
 
||10:01
 
|| ಇದು FrontAccounting ನ ಸಂಪೂರ್ಣ ಅಳವಡಿಕೆಗೆ ನಂತರ ಬೇಕಾಗುತ್ತದೆ.
 
 
|-
 
||10:06
 
|| ದಯವಿಟ್ಟು ಗಮನಿಸಿ: ಡೇಟಾಬೇಸ್ ಹೆಸರು ಮತ್ತು ಯೂಸರ್ನೇಮ್ ಒಂದೇ ಆಗಬೇಕೆಂದು ಏನೂ ಇಲ್ಲ.
 
 
|-
 
||10:11
 
|| ಬೇರೆ ಬೇರೆ ಹೆಸರುಗಳನ್ನು ಹೊಂದಲು ಮೊದಲಿಗೆ ಡೇಟಾಬೇಸ್ ರಚಿಸಿ ಮತ್ತು ನಂತರ ಆ ಡೇಟಾಬೇಸ್ಗೆ ಯೂಸರ್ ಒಂದನ್ನು ರಚಿಸಿ.
 
 
|-
 
||10:18
 
|| ಅಲ್ಲದೆ, ಹೆಸರಿಸುವ ವಾಡಿಕೆಯ ಪ್ರಕಾರ, ಯೂಸರ್ನೇಮ್ನ ನಡುವೆ ಯಾವುದೇ ಬಿಟ್ಟ ಸ್ಥಳ ಇರಬಾರದು.
 
 
|-
 
||10:25
 
|| ಈಗ ನಮ್ಮ XAMPP ಚಾಲನೆಯಲ್ಲಿದೆ ಮತ್ತು ನಮ್ಮ ಡೇಟಾಬೇಸ್ ತಯಾರಾಗಿದೆ.
 
 
|-
 
||10:29
 
|| ನಾವೀಗ Front Accounting ಅಳವಡಿಸುವುದನ್ನು ಮುಂದುವರಿಸಲು ಸಜ್ಜಾಗಿದ್ದೇವೆ.
 
 
|-
 
||10:33
 
|| ವೆಬ್ ಬ್ರೌಸರ್ನಲ್ಲಿ ಹೊಸ ಟ್ಯಾಬ್ ತೆರೆಯಿರಿ.
 
ಅಡ್ರೆಸ್ ಬಾರ್ನಲ್ಲಿ localhost/account ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
 
 
 
|-
 
||10:44
 
|| ನಾವೀಗ Step 1: System Diagnostics ಎಂದು ತೋರಿಸುವ FrontAccounting ವೆಬ್ಪೇಜ್ ಅನ್ನು ಕಾಣಬಹುದು.
 
 
|-
 
||10:51
 
|| Select install wizard language ಇಂಗ್ಲಿಷ್ನಲ್ಲಿದೆ ಎಂಬುದನ್ನು ಖಚಿತಪಡಿಸಿ.
 
 
|-
 
||10:56
 
|| ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು ಪೇಜ್ ನ ಕೆಳಗಡೆ ಇರುವ Continue ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||11:02
 
|| ಮುಂದಿನ ವೆಬ್ ಪೇಜ್ನ ಶೀರ್ಷಿಕೆಯು:
 
Step 2: Database Server Settings.
 
 
|-
 
||11:08
 
|| ಇಲ್ಲಿ ನಾನು ಸರ್ವರ್ ಪೋರ್ಟ್ ಅನ್ನು ಖಾಲಿ ಇಡುತ್ತೇನೆ.
 
 
|-
 
||11:12
 
|| ನೀವು ಮೈ SQL ಡಿಫಾಲ್ಟ್ ಪೋರ್ಟ್ ಸಂಖ್ಯೆಯನ್ನು 3306 ಹೊರತುಪಡಿಸಿ ಬೇರೆ ಯಾವುದಕ್ಕೂ ಬದಲಾಯಿಸಿದ್ದರೆ ಆ ಪೋರ್ಟ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ.
 
 
|-
 
||11:21
 
|| ಈ ಹಿಂದೆ ರಚಿಸಿದ ಈ ಕೆಳಗಿನ ವಿವರಗಳನ್ನು ನಮೂದಿಸಿ –
 
frontacc ಅನ್ನು ಡೇಟಾಬೇಸ್ ನೇಮ್ ಆಗಿ
 
Frontacc ಅನ್ನು ಡೇಟಾಬೇಸ್ ಯೂಸರ್ ಆಗಿ
 
 
|-
 
||11:33
 
|| admin123 ಅನ್ನು ಡೇಟಾಬೇಸ್ ಪಾಸ್ವರ್ಡ್ ಆಗಿ
 
 
|-
 
||11:38
 
|| ಉಳಿದ ಆಯ್ಕೆಗಳನ್ನು ಕಡೆಗಣಿಸಿ ಮತ್ತು ಕೆಳಗೆ ಇರುವ Continue ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||11:45
 
|| ನಂತರ, ನೀವು ನಿಮ್ಮ ಸ್ವಂತ ಕಂಪನಿಯ ವಿವರಗಳನ್ನು ಸೇರಿಸಬೇಕು.
 
ಇದನ್ನು ಹೇಗೆ ಮಾಡಬೇಕು ಎಂಬುದನ್ನು ನಾನು ತೋರಿಸುತ್ತೇನೆ.
 
 
|-
 
||11:53
 
|| Company Name ಫೀಲ್ಡ್ನಲ್ಲಿ ನಾನು ST Company Pvt Ltd ಎಂದು ಟೈಪ್ ಮಾಡುತ್ತೇನೆ.
 
 
|-
 
||11:59
 
|| ನಾನು ಅಡ್ಮಿನ್ ಲಾಗಿನ್ ಅನ್ನು admin ಆಗಿ ಇಡುತ್ತೇನೆ.
 
 
|-
 
||12:02
 
|| ನಂತರ ಅಡ್ಮಿನ್ ಪಾಸ್ವರ್ಡ್ ಅನ್ನು spoken ಎಂದು ಟೈಪ್ ಮಾಡುತ್ತೇನೆ.
 
ನೀವು ನಿಮ್ಮ ಆಯ್ಕೆಯ ಯಾವುದೇ ಪಾಸ್ವರ್ಡ್ ಕೊಡಬಹುದು.
 
 
|-
 
||12:10
 
|| ಅದೇ ಪಾಸ್ವರ್ಡ್ ಅನ್ನು ಪುನಃ ನಮೂದಿಸಿ.
 
ಇದು ಲಾಗಿನ್ ಪಾಸ್ವರ್ಡ್ ಆಗಿದೆ ಎಂಬುದನ್ನು ನೆನಪಿಡಿ.
 
 
|-
 
||12:16
 
|| ನಂತರ ನಾವು Charts of Accounts ಗೆ ಎರಡು ಆಯ್ಕೆಗಳನ್ನು ನೋಡಬಹುದು.
 
 
|-
 
||12:21
 
|| ನಾನು Standard new company American COA ಆರಿಸುತ್ತೇನೆ.
 
 
 
|-
 
||12:26
 
|| ಡಿಫಾಲ್ಟ್ ಲ್ಯಾಂಗ್ವೇಜ್ ಅನ್ನು ಇಂಗ್ಲಿಷ್ ಆಗಿ ಆರಿಸಿ.
 
 
|-
 
||12:30
 
|| Install ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||12:34
 
|| ನಾವು ನಮ್ಮ ಸ್ಕ್ರೀನ್ ಮೇಲೆ ಅಂತಿಮ ಮೆಸೆಜ್ ಅನ್ನು ನೋಡಬಹುದು. FrontAccounting ERP ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.
 
 
|-
 
||12:46
 
|| FrontAccounting ಇಂಟರ್ಫೇಸ್ಗೆ ಲಾಗಿನ್ ಆಗಲು Click here to start ಲಿಂಕ್ ಮೇಲೆ ಕ್ಲಿಕ್ ಮಾಡಿ.
 
|-
 
||12:53
 
|| ಲಾಗಿನ್ ಸ್ಕ್ರೀನ್ನಲ್ಲಿ ಈ ಕೆಳಗಿನ ವಿವರಗಳನ್ನು ನಮೂದಿಸಿ:
 
admin ಅನ್ನು ಯೂಸರ್ ನೇಮ್ ಆಗಿ
 
spoken ಅನ್ನು ಪಾಸ್ವರ್ಡ್ ಆಗಿ
 
 
|-
 
||13:03
 
|| ST Company Pvt. Ltd ಅನ್ನು ಕಂಪನಿಯಾಗಿ.
 
ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||13:11
 
|| ನಾವೀಗ Front Accounting Administration ಪೇಜ್ಗೆ ತಲುಪಿದ್ದೇವೆ.
 
ಈ ಪೇಜ್ನಲ್ಲಿ ಬೇರೆಬೇರೆ ಟ್ಯಾಬ್ಗಳನ್ನು ನೋಡಬಹುದು.
 
 
|-
 
||13:18
 
|| ಇವುಗಳಲ್ಲಿ ಹೆಚ್ಚಿನವುಗಳ ಬಳಕೆಯನ್ನು ಸರಣಿಯ ಮುಂದಿನ ಭಾಗದಲ್ಲಿ ನಾವು ಕಲಿಯಲಿದ್ದೇವೆ.
 
 
 
|-
 
||13:23
 
|| ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಯ ಭಾಗಕ್ಕೆ ತಲುಪಿದ್ದೇವೆ.
 
 
|-
 
||13:28
 
|| ಈ ಟ್ಯುಟೋರಿಯಲ್ನಲ್ಲಿ ನಾವು XAMPP ಡೌನ್ಲೋಡ್ ಮಾಡಲು ಮತ್ತು ಅಳವಡಿಸಲು,
 
 
|-
 
||13:34
 
|| FrontAccounting ಸಾಫ್ಟ್ವೇರ್ ಡೌನ್ಲೋಡ್ ಮಾಡಲು ಮತ್ತು ಅಳವಡಿಸಲು,
 
 
|-
 
||13:38
 
|| ಮತ್ತು ಲೀನಕ್ಸ್ ಒ.ಎಸ್ ನಲ್ಲಿ ಡೇಟಾಬೇಸ್ ಸೆಟಪ್ ಮಾಡಲು ಕಲಿತೆವು.
 
 
|-
 
||13:42
 
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
 
 
|-
 
||13:50
 
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
 
 
|-
 
||14:00
 
||  ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?
 
ದಯವಿಟ್ಟು ಈ ಸೈಟ್ಗೆ ಭೇಟಿ ನೀಡಿ.
 
 
|-
 
||14:05
 
|| ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ.
 
ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
 
 
|-
 
||14:12
 
|| ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡುತ್ತಾರೆ.
 
 
|-
 
||14:15
 
|| ಸ್ಪೋಕನ್ ಟ್ಯುಟೋರಿಯಲ್ ಫಾರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ.
 
ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ.
 
 
|-
 
||14:25
 
|| ಇದು ಅಸ್ತವ್ಯಸ್ತತೆಯನ್ನು ಕಡಿಮೆ ಮಾಡಲು ಸಹಕರಿಸಲಿದೆ.
 
ಕಡಿಮೆ ಅಸ್ತವ್ಯಸ್ತತೆಯೊಂದಿಗೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು.
 
 
|-
 
||14:34
 
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
 
 
 
|-
 
||14:40
 
|| ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
 
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
 

Revision as of 20:57, 1 June 2020

Contributors and Content Editors

Melkamiyar, Sandhya.np14