Difference between revisions of "Firefox/C4/Add-ons/Kannada"

From Script | Spoken-Tutorial
Jump to: navigation, search
(Created page with '{| border=1 || Visual Cue || Narration |- || 00.01 ||ಮೊಝಿಲ್ಲಾ ಫೈರ್ ಫಾಕ್ಸ್ ನಲ್ಲಿನ ಅಡ್ವಾನ್ಸ್ ಫೈರ್ ಫಾ…')
 
Line 110: Line 110:
 
|| 03.48
 
|| 03.48
 
|| next ಅನ್ನು ಕ್ಲಿಕ್ ಮಾಡಿ. Please Confirm You're Not a Robot (ಪ್ಲೀಸ್ ಕನ್ಫರ್ಮ್ ಯು ಆರ್ ನಾಟ್ ಎ ರೋಬೋಟ್) ಎಂಬ ಡಯಲಾಗ್ ಬಾಕ್ಸ್ ನಲ್ಲಿ,  
 
|| next ಅನ್ನು ಕ್ಲಿಕ್ ಮಾಡಿ. Please Confirm You're Not a Robot (ಪ್ಲೀಸ್ ಕನ್ಫರ್ಮ್ ಯು ಆರ್ ನಾಟ್ ಎ ರೋಬೋಟ್) ಎಂಬ ಡಯಲಾಗ್ ಬಾಕ್ಸ್ ನಲ್ಲಿ,  
 +
|-
 
|| 03.53
 
|| 03.53
 
|| ಕಾಣುವ ಅಕ್ಷರಗಳನ್ನು ಬರೆಯಿರಿ. ಸೆಟ್ ಅಪ್ ಸಂಪೂರ್ಣಗೊಳ್ಳುತ್ತದೆ.
 
|| ಕಾಣುವ ಅಕ್ಷರಗಳನ್ನು ಬರೆಯಿರಿ. ಸೆಟ್ ಅಪ್ ಸಂಪೂರ್ಣಗೊಳ್ಳುತ್ತದೆ.

Revision as of 13:11, 17 July 2014

Visual Cue Narration
00.01 ಮೊಝಿಲ್ಲಾ ಫೈರ್ ಫಾಕ್ಸ್ ನಲ್ಲಿನ ಅಡ್ವಾನ್ಸ್ ಫೈರ್ ಫಾಕ್ಸ್ ಫೀಚರ್ಸ್ ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00.08 ಈ ಟ್ಯುಟೋರಿಯಲ್ ನಲ್ಲಿ ನಾವು ಫೈರ್ ಫಾಕ್ಸ್ ನ ಅಡ್ವಾನ್ಸ್ಡ್ ಫೀಚರ್ ಗಳಾದ Quick find link (ಕ್ವಿಕ್ ಫೈನ್ಡ್ ಲಿಂಕ್), Firefox Sync (ಫೈರ್ ಫಾಕ್ಸ್ ಸಿಂಕ್) ಮತ್ತು Plug-ins (ಪ್ಲಗ್ ಇನ್ಸ್) ಗಳ ಬಗ್ಗೆ ಕಲಿಯಲಿದ್ದೇವೆ.
00.19 ಇಲ್ಲಿ ನಾವು ಉಬಂಟು 10.04ರಲ್ಲಿ ಫೈರ್ ಫಾಕ್ಸ್ ನ ಆವೃತ್ತಿ 7.0ಯನ್ನು ಬಳಸುತ್ತಿದ್ದೇವೆ.
00.26 ನಾವೀಗ ಫೈರ್ ಫಾಕ್ಸ್ ಬ್ರೌಸರನ್ನು ತೆರೆಯೋಣ.
00.29 ಡಿಫಾಲ್ಟ್ ಆಗಿ yahoo ಹೋಮ್ ಪೇಜ್ ತೆರೆದುಕೊಳ್ಳುತ್ತದೆ.
00.33 ಈಗ ನಾವು ಫೈರ್ ಫಾಕ್ಸ್ ನಲ್ಲಿ ಲಿಂಕ್ ಗಳನ್ನು ಹುಡುಕುವುದನ್ನು ಕಲಿಯೋಣ.
00.37 ಒಂದೇ ವೆಬ್ ಪುಟದಲ್ಲಿ ಸರ್ಚ್ ಮಾಡಲು ಮತ್ತು ಲಿಂಕ್ ಗಳನ್ನು ಹುಡುಕಲು ಫೈರ್ ಫಾಕ್ಸ್ ಅನುವು ಮಾಡಿಕೊಡುತ್ತದೆ.
00.43 ಅಡ್ರೆಸ್ ಬಾರ್ ನಲ್ಲಿ WWW. Google.co.in ಎಂದು ಬರೆದು enter ಒತ್ತಿರಿ.
00.51 ಕರ್ಸರ್ Google (ಗೂಗಲ್) ಸರ್ಚ್ ಬಾರ್ ನ ಒಳಗೆ ಇರುವುದನ್ನು ಗಮನಿಸಿ..
00.58 ನಂತರ, ಸರ್ಚ್ ಬಾರ್ ನ ಹೊರಗೆ ಎಲ್ಲಿ ಬೇಕಾದಲ್ಲಿ ಕರ್ಸರ್ ಅನ್ನು ಕ್ಲಿಕ್ ಮಾಡಿ.
01.04 ಈಗ ಕೀಬೋರ್ಡ್ ನ ಮುಖಾಂತರ apostrophe (ಅಪೋಸ್ಟ್ರೊಪಿ) ಕೀಯನ್ನು ಒತ್ತಿರಿ.
01.09 quick find link (ಕ್ವಿಕ್ ಫೈಂಡ್ ಲಿಂಕ್ಸ್) ಎಂಬ ಸರ್ಚ್ ಬಾಕ್ಸ್ ವಿಂಡೋವಿನ ಎಡಬದಿಯ ಮೇಲ್ಭಾಗದ ಮೂಲೆಯಲ್ಲಿ ಗೋಚರಗೊಳ್ಳುತ್ತದೆ.
01.16 ಬಾಕ್ಸ್ ನ ಒಳಗೆ Bengali (ಬೆಂಗಾಲಿ) ಎಂದು ಬರೆಯೋಣ. Bengali (ಬಂಗಾಲಿ) ಎಂಬ ಲಿಂಕ್ ಹೈಲೈಟ್ ಆಗಿರುವುದನ್ನು ಗಮನಿಸಿ.
01.25 ನೀವೀಗ ವೆಬ್ ಪೇಜ್ ನಲ್ಲಿ ಸುಲಭವಾಗಿ ಮತ್ತು ವೇಗವಾಗಿ ಲಿಂಕ್ ಅನ್ನು ಹುಡುಕಬಹುದು.
01.31 ಒಂದು ವೇಳೆ ಫೈರ್ ಫಾಕ್ಸ್ ಬ್ರೌಸರ್ ಅನ್ನು ಈ ಸೆಟ್ಟಿಂಗ್ ಮತ್ತು ಪ್ರಿಫರೆನ್ಸ್ ಗಳೊಂದಿಗೆ ಬೇರೆ ಕಂಪ್ಯೂಟರ್ ಅಥವಾ ನಿಮ್ಮ ಮೊಬೈಲ್ ಫೋನ್ ಗಳಂತಹ ಬೇರೆ ಸಾಧನಗಳಲ್ಲಿ ಬಳಸಲು ಸಾಧ್ಯವೇ? ಎಂದಲ್ಲಿ ಖಂಡಿತ ಸಾಧ್ಯ!
01.43 ಹೌದು! firefox sync features (ಫೈರ್ ಫಾಕ್ಸ್ ಸಿಂಕ್ ಫೀಚರ್ಸ್), ನಿಮ್ಮ ಬುಕ್ಮಾರ್ಕ್ಸ್, ಹಿಸ್ಟರಿ ಮತ್ತು ಇನ್ಸ್ಟಾಲ್ಡ್ ಎಕ್ಸ್ಟೆನ್ಷನ್ ಗಳಂತಹ ಎಲ್ಲಾ ಡಾಟಾಗಳನ್ನೂ ಮೊಝಿಲ್ಲಾ ಸರ್ವರ್ ನಲ್ಲಿ ಭದ್ರವಾಗಿ ಸ್ಟೋರ್ ಮಾಡಿರುತ್ತದೆ.
01.55 ನೀವು ನಿಮ್ಮ ಕಂಪ್ಯೂಟರನ್ನು ಈ ಸರ್ವರ್ ಗೆ ಸಿಂಕ್ ಮಾಡುವ ಮುಖಾಂತರ ನಿಮ್ಮ ಬ್ರೌಸರ್ ಡಾಟಾ ವನ್ನು ಆಕ್ಸಸ್ ಮಾಡಬಹುದು.
02.02 ನಾವೀಗ ಸಿಂಕ್ ಫೀಚರನ್ನು ಎನೇಬಲ್ ಮಾಡೋಣ.
02.06 ಮೆನ್ಯು ಬಾರ್ ನಲ್ಲಿ tools (ಟೂಲ್ಸ್) ನ ಮೇಲೆ ಕ್ಲಿಕ್ ಮಾಡಿ ನಂತರ set up sync (ಸೆಟ್ ಅಪ್ ಸಿಂಕ್) ಅನ್ನು ಕ್ಲಿಕ್ ಮಾಡಿ. The Firefox sink setup (ದ ಫೈರ್ ಫಾಕ್ಸ್ ಸ್ಕಿನ್ ಸೆಟ್ ಅಪ್) ಎಂಬ ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
02.15 ನಾವು ಮೊದಲ ಬಾರಿಗೆ ಸಿಂಕ್ ಅನ್ನು ಉಪಯೋಗಿಸುತ್ತಿರುವುದರಿಂದ create a new account ಎಂಬಲ್ಲಿ ಕ್ಲಿಕ್ ಮಾಡಿ.
02.21 The account details (ದ ಅಕೌಂಟ್ ಡೀಟೇಲ್ಸ್) ಎಂಬ ಡಯಲಾಗ್ ಬಾಕ್ಸ್ ಗೋಚರವಾಗುತ್ತದೆ.
02.24 ಈ ಟ್ಯುಟೋರಿಯಲ್ ನ ಕಾರ್ಯಕ್ಕಾಗಿ ನಾವಾಗಲೇ g mail (ಜಿ ಮೇಲ್) ಎಂಬ ಅಕೌಂಟನ್ನು ರಚಿಸಿದ್ದೇವೆ.
02.30 email address ನಲ್ಲಿ ST.USERFF@gmail.com (ಎಸ್ ಟಿ ಡಾಟ್ ಯೂಸರ್ ಎಫ್ ಎಫ್ ಅಟ್ ಜಿಮೇಲ್ ಡಾಟ್ ಕಾಮ್) ಎಂದು ಬರೆಯಿರಿ.
02.42 choose a password (ಚೂಸ್ ಅ ಪಾಸ್ವರ್ಡ್) ಎಂಬಲ್ಲಿ ಪಾಸ್ ವರ್ಡ್ ಅನ್ನು ಬರೆಯೋಣ.
02.47 confirm password (ಕನ್ಫರ್ಮ್) ಎಂಬಲ್ಲಿ, ಪಾಸ್ ವರ್ಡ್ ಅನ್ನು ಮತ್ತೆ ಬರೆಯೋಣ.
02.52 ಡಿಫಾಲ್ಟ್ ಆಗಿ server (ಸರ್ವರ್) ನಲ್ಲಿ firefox sync server (ಫೈರ್ ಫಾಕ್ಸ್ ಸಿಂಕ್ ಸರ್ವರ್) ಆಯ್ಕೆಯಾಗಿರುತ್ತದೆ.
02.58 ಈ ಸೆಟ್ಟಿಂಗ್ ಅನ್ನು ನಾವೀಗ ಪರಿವರ್ತಿಸುವುದಿಲ್ಲ. “terms of service” (ಟರ್ಮ್ಸ್ ಆಫ್ ಸರ್ವೀಸ್) ಮತ್ತು “privacy policy” (ಪ್ರೈವಸಿ ಪಾಲಿಸಿ) ಬಾಕ್ಸ್ ಗಳನ್ನು ಚೆಕ್ ಮಾಡಿ.
03.08 “next” (ನೆಕ್ಸ್ಟ್) ಅನ್ನು ಕ್ಲಿಕ್ ಮಾಡಿ. ಫೈರ್ ಫಾಕ್ಸ್ sync key (ಸಿಂಕ್ ಕೀ) ಯನ್ನು ತೋರಿಸುತ್ತದೆ.
03.11
ಬೇರೆ ಮೆಷಿನ್ ಗಳನ್ನು ಸಿಂಕ್ ಮುಖಾಂತರ ಆಕ್ಸಿಸ್ ಮಾಡಲು ಈ ಕೀಯನ್ನು ಆ ಸಿಸ್ಟಮ್ ಗಳಲ್ಲಿ ಬಳಸಬೇಕಾಗುತ್ತದೆ.
03.18 “save” (ಸೇವ್) ಬಟನ್ ನ ಮೇಲೆ ಕ್ಲಿಕ್ ಮಾಡಿ. save sync key ಎಂಬ ಡಯಲಾಗ್ ಬಾಕ್ಸ್ ಗೋಚರವಾಗುತ್ತದೆ.
03.24 desktopಗೆ ಬ್ರೌಸ್ ಮಾಡಿ. “save” ಅನ್ನು ಒತ್ತಿರಿ.
03.28 firefox sync key.html ಎಂಬ ಎಚ್ ಟಿ ಎಮ್ ಎಲ್ ಫೈಲ್ ಡೆಸ್ಕ್ ಟಾಪ್ ನಲ್ಲಿ ಸೇವ್ ಆಗಿರುತ್ತದೆ.
03.35 ಈ ಕೀಯನ್ನು ಗಮನದಲ್ಲಿಟ್ಟುಕೊಂಡಿರಿ ಮತ್ತು ನೀವು ಆಕ್ಸಸ್ ಮಾಡಲು ಸುಲಭವಾಗುವ ಸ್ಥಳದಲ್ಲಿ ಈ ನಂಬರ್ ಅನ್ನು ಸೇವ್ ಮಾಡಿರಿ.
03.41 ಈ ಕೀಯನ್ನು ಬಳಸದ ಹೊರತಾಗಿ ನೀವು ಬೇರೆ ಕಂಪ್ಯೂಟನಿಂದ ನಿಮ್ಮ ಸಿಂಕ್ ಅಕೌಂಟನ್ನು ಆಕ್ಸಸ್ ಮಾಡಲು ಸಾಧ್ಯವಿಲ್ಲ.
03.48 next ಅನ್ನು ಕ್ಲಿಕ್ ಮಾಡಿ. Please Confirm You're Not a Robot (ಪ್ಲೀಸ್ ಕನ್ಫರ್ಮ್ ಯು ಆರ್ ನಾಟ್ ಎ ರೋಬೋಟ್) ಎಂಬ ಡಯಲಾಗ್ ಬಾಕ್ಸ್ ನಲ್ಲಿ,
03.53 ಕಾಣುವ ಅಕ್ಷರಗಳನ್ನು ಬರೆಯಿರಿ. ಸೆಟ್ ಅಪ್ ಸಂಪೂರ್ಣಗೊಳ್ಳುತ್ತದೆ.
03.59 “firefox sync setup” (ಫೈರ್ ಫಾಕ್ಸ್ ಸಿಂಕ್ ಸೆಟ್ ಅಪ್) ಡಯಲಾಗ್ ಬಾಕ್ಸ್ ನ ಎಡಬದಿಯಲ್ಲಿನ “sync option” (ಸಿಂಕ್ ಆಪ್ಷನ್) ಬಟನ್ ನ ಮೇಲೆ ಕ್ಲಿಕ್ ಮಾಡಿ.
04.06 ನೀವಿಲ್ಲಿ ನಿಮ್ಮ ಸಿಂಕ್ ಆಪ್ಷನ್ ನನ್ನು ಸೆಟ್ ಮಾಡಬಹುದು.
04.09 ಈ ಟ್ಯುಟೋರಿಯಲ್ ನ ಉಪಯೋಗಕ್ಕಾಗಿ ಡಿಫಾಲ್ಟ್ ಆಪ್ಷನ್ ನನ್ನು ನಾವು ಪರಿವರ್ತಿಸುವುದಿಲ್ಲ. “done” (ಡನ್) ನ ಮೇಲೆ ಕ್ಲಿಕ್ ಮಾಡಿ.
04.17 Next (ನೆಕ್ಸ್ಟ್) ನ ಮೇಲೆ ಕ್ಲಿಕ್ ಮಾಡಿ. ಫೈರ್ ಫಾಕ್ಸ್, ಕಂಟೆಂಟ್ ಅನ್ನು ಪರಿಶೀಲಿಸುತ್ತದೆ. ನಂತರ finish (ಫಿನಿಷ್) ಬಟನ್ ಕಾಣುತ್ತದೆ. “finish”ನ ಮೇಲೆ ಕ್ಲಿಕ್ ಮಾಡಿ.
04.25 ನೀವೀಗ ನಿಮ್ಮ ಕಂಪ್ಯೂಟರ್ ನಲ್ಲಿ ಫೈರ್ ಫಾಕ್ಸ್ ಸಿಂಕ್ ಸೆಟ್ ಅಪ್ ಅನ್ನು ಹೊಂದಿದ್ದೀರಿ.
04.29 ಬೇರೆ ಕಂಪ್ಯೂಟರ್ ನಿಂದ ನಿಮ್ಮ ಬ್ರೌಸರ್ ಡಾಟಾ ವನ್ನು ಹೇಗೆ ಆಕ್ಸಸ್ ಮಾಡುವಿರಿ?
04.35 ಅದಕ್ಕೆ ನೀವು ಸಿಂಕ್ ಟು ಅದರ್ ಕಂಪ್ಯೂಟರ್ ಆರ್ ಡಿವೈಸ್ ಎಂಬ ಟೂಲ್ ಅನ್ನು ಹೊಂದಿರಬೇಕಾಗುತ್ತದೆ.
04.40 ಈ ಟ್ಯುಟೋರಿಯಲ್ ನ ಅನುಕೂಲಕ್ಕಾಗಿ ಸ್ಲೈಡ್ ಗಳ ಮುಖಾಂತರ ಆದೇಶಗಳನ್ನು ಹೇಳಲಿದ್ದೇವೆ.
04.46 ನೀವು ಇನ್ನೊಂದು ಕಂಪ್ಯೂಟರ್ ಅಥವಾ ಡಿವೈಸ್ ನ ಜೊತೆ ಸಿಂಕ್ ಮಾಡಲು ಈ ಆದೇಶಗಳನ್ನು ಪಾಲಿಸಬಹುದು.
04.52 ಇನ್ನೊಂದು ಕಂಪ್ಯೂಟರ್ ಅಥವಾ ಡಿವೈಸ್ ನಲ್ಲಿ ಫೈರ್ ಫಾಕ್ಸ್ ಬ್ರೌಸರ್ ಅನ್ನು ತೆರೆಯಿರಿ.
04.57 ಮೆನ್ಯು ಬಾರ್ ನಲ್ಲಿ tools (ಟೂಲ್ಸ್) ನ ಮೇಲೆ ಕ್ಲಿಕ್ ಮಾಡಿ ಮತ್ತು setup firefox sync (ಸೆಟ್ ಅಪ್ ಫೈರ್ ಫಾಕ್ಸ್ ಸಿಂಕ್) ಅನ್ನು ಆಯ್ಕೆ ಮಾಡಿ.
05.03 I have a firefox sync account (ಐ ಹ್ಯಾವ್ ಎ ಫೈರ್ ಫಾಕ್ಸ್ ಸಿಂಕ್ ಅಕೌಂಟ್) ಎಂಬಲ್ಲಿ ಕ್ಲಿಕ್ ಮಾಡಿ. ನಿಮ್ಮ E Mail IDಮತ್ತು Password ಅನ್ನು ಬರೆಯಿರಿ.
05.10 ನಿಮ್ಮ sync key ಯನ್ನು ಬರೆಯಿರಿ . finish (ಫಿನಿಷ್) ಮೇಲೆ ಕ್ಲಿಕ್ ಮಾಡಿ.
05.15 ಇನ್ನೊಂದು ಕಂಪ್ಯೂಟರ್ ಈಗ ಸಿಂಕ್ ಗೊಂಡಿದೆ. ನೀವು ನಿಮ್ಮ ಬ್ರೌಸರ್ ಡಾಟಾ ವನ್ನು ಅದರ್ ಕಂಪ್ಯೂಟರ್ ಟೂಲ್ ಎಂಬುದರಿಂದ ಆಕ್ಸಸ್ ಮಾಡಬಹುದು.
05.23 ನೀವಿಲ್ಲಿ ಹೊಸ ಬುಕ್ಮಾರ್ಕ್ ಅನ್ನು ಸೇವ್ ಮಾಡಬಹುದು ಮತ್ತು ನಿಮ್ಮ ಕಂಪ್ಯೂಟರ್ ನ ಪ್ರಿಫರೆನ್ಸ್ ಅನ್ನು ಬದಲಿಸಲೂಬಹುದು.
05.28 ಈ ಬದಲಾವಣೆಗಳು ಸ್ವಯಂ ಚಾಲಿತವಾಗಿ ಸಿಂಕ್ ಮ್ಯಾನೇಜರ್ನಲ್ಲಿ ಅಪ್ ಡೇಟ್ ಗೊಳ್ಳುತ್ತದೆ.
05.34 ಕೊನೆಯದಾಗಿ, ಸಿಂಕ್ ಮ್ಯಾನೇಜರ್ ನಲ್ಲಿನ ಅಪ್ ಡೇಟೆಡ್ ಡಾಟಾ ಗಳನ್ನು ಪ್ರಧಾನ ಕಂಪ್ಯೂಟರ್ ನಲ್ಲಿ ಸಿಂಕ್ ಮಾಡುವುದು ಹೇಗೆಂದು ಕಲಿಯೋಣ.
05.42 ಈಗ ಮೆನ್ಯು ಬಾರ್ ನಲ್ಲಿ tools ಅನ್ನು ಕ್ಲಿಕ್ ಮಾಡಿ.
05.46 ಸಿಂಕ್ ಆಪ್ಷನ್ ಈಗ (sync now) ಸಿಂಕ್ ನೌ ಎಂದು ಗೋಚರಿಸುತ್ತಿರುವುದನ್ನು ಗಮನಿಸಿ.
05.51 ನೀವು ಇದರ ಮೇಲೆ ಕ್ಲಿಕ್ ಮಾಡುವ ಮುಖಾಂತರ ಸಿಂಕ್ ಮ್ಯಾನೇಜರ್ ನ ಜೊತೆ ನಿಮ್ಮ ಡಾಟಾ ವನ್ನು ಸಿಂಕ್ ಮಾಡಬಹುದು.
05.55 ನೀವು ನಿಮ್ಮ ಫೈರ್ ಫಾಕ್ಸ್ ಸಿಂಕ್ ಅಕೌಂಟನ್ನು ಡಿಲಿಟ್ ಮಾಡಬಹುದು ಅಥವಾ ಸಿಂಕ್ ಡಾಟಾವನ್ನು ಅಳಿಸಲೂಬಹುದು.
06.02 ಇದನ್ನು ಮಡುವುದಾದರೂ ಹೇಗೆ? ಅದೂ ಕೂಡಾ ತುಂಬಾ ಸರಳ.
06.06 ಹೊಸ ಬ್ರೌಸರ್ ಅನ್ನು ತೆರೆಯಿರಿ. ಅಡ್ರೆಸ್ ಬಾರ್ ನಲ್ಲಿ https://account.services.mozilla.com. ಎಂದು ಟೈಪ್ ಮಾಡಿ Enter ಒತ್ತಿರಿ.
06.21 username ನಲ್ಲಿ ST.USERFF@gmail.com ಎಂದು ಬರೆಯಿರಿ
06.28 ಈಗ ಪಾಸ್ ವರ್ಡ್ ಅನ್ನು ಬರೆದು login ಮೇಲೆ ಕ್ಲಿಕ್ ಮಾಡಿ.
06.33 ಫೈರ್ ಫಾಕ್ಸ್ ಸಿಂಕ್ ವೆಬ್ ಪೇಜ್ ತೆರೆದುಕೊಳ್ಳುತ್ತದೆ.
06.36 ನೀವೀಗ ಫೈರ್ ಫಾಕ್ಸ್ ಸೆಟ್ಟಿಂಗ್ ಮತ್ತು ಡಾಟಾ ವನ್ನು ಪರಿವರ್ತಿಸಬಹುದು.
06.40 ನಾವೀಗ ಈ ಪೇಜ್ ನಿಂದ ಹೊರಗೆ ಹೋಗೋಣ.
06.43 ಇನ್ನು ಪ್ಲಗ್ ಇನ್ಸ್ ನ ಬಗ್ಗೆ ಕಲಿಯೋಣ. ಪ್ಲಗ್ ಇನ್ಸ್ ಎಂದರೇನು?
06.49 ಪ್ಲಗ್ ಇನ್ಸ್ ಎಂಬುದು ಫೈರ್ ಫಾಕ್ಸ್ ಬ್ರೌಸರ್ ಗೆ ನಿರ್ದಿಷ್ಟ ಕಾರ್ಯನಿರ್ವಹಣೆಯನ್ನು ಸೇರಿಸುವ ಸಾಫ್ಟ್ ವೇರ್ ಪ್ರೋಗ್ರಾಮ್.
06.57 ಹಾಗಾಗಿಯೂ ಪ್ಲಗ್ ಇನ್ಸ್ ಎಂಬುವು ಎಕ್ಸ್ಟೆನ್ಷನ್ ಗಳಿಗಿಂತ ಭಿನ್ನವಾದವುಗಳು.
07.00 ಪ್ಲಗ್ ಇನ್ಸ್ ಎಂಬುವು ಬೇರೆ ಬೇರೆ ಕಂಪನಿಗಳಿಂದ ತಯಾರಿಸಲ್ಪಟ್ಟ ಪ್ರೋಗ್ರಾಮ್ ಗಳು.
07.04 ಪ್ಲಗ್ ಇನ್ ಗಳು ಮೂರನೇ ವ್ಯಕ್ತಿಯ ಪ್ರೋಗ್ರಾಮ್ ಗಳನ್ನು ಫೈರ್ ಫಾಕ್ಸ್ ಬ್ರೌಸರ್ನಲ್ಲಿ ಇಂಟಿಗ್ರೇಟ್ ಮಾಡುತ್ತವೆ.
07.10 ಪ್ಲಗ್ ಇನ್ ಗಳು ವೀಡಿಯೋವನ್ನು ನೋಡಲು, ಮಲ್ಟಿ ಮೀಡಿಯಾ ಕಂಟೆಟ್ ಅನ್ನು ನೋಡಲು, ವೈರಸ್ ಸ್ಕ್ಯಾನ್ ಅನ್ನು ನಡೆಸಲು ಮತ್ತು ಫೈರ್ ಫಾಕ್ಸ್ ನಲ್ಲಿ ಪವರ್ ಆನಿಮೇಷನ್ ಅನ್ನು ಮಾಡಲು ಅನುವು ಮಾಡಿಕೊಡುತ್ತದೆ.
07.21 ಉದಾಹರಣೆಗೆ, ಫ್ಲಾಷ್ ಎಂಬುದು ವೀಡಿಯೋವನ್ನು ನೋಡಲು ನೀವು ಫೈರ್ ಫಾಕ್ಸ್ ಬ್ರೌಸರ್ನಲ್ಲಿ ಇನ್ಸ್ಟಾಲ್ ಮಾಡಿದ ಒಂದು ಪ್ಲಗ್ ಇನ್.
07.28 ನಾವೀಗ ಫೈರ್ ಫಾಕ್ಸ್ ಬ್ರೌಸರ್ ನಲ್ಲಿ ಇನ್ ಸ್ಟಾಲ್ ಆಗಿರುವ ಪ್ಲಗ್ ಇನ್ ಗಳನ್ನು ನೋಡೋಣ.
07.33 ಮೆನ್ಯು ಬಾರ್ ನಲ್ಲಿ tools ಮೇಲೆ ಕ್ಲಿಕ್ ಮಾಡಿ ನಂತರ addons ಅನ್ನು ಆರಿಸಿ.
07.38 addon manager ಎಂಬ ಟ್ಯಾಬ್ ತೆರೆದುಕೊಳ್ಳುತ್ತದೆ. ಎಡಬದಿಯ ಪ್ಯಾನಲ್ ನಲ್ಲಿರುವ plug-ins ಬಟನ್ ಮೇಲೆ ಕ್ಲಿಕ್ ಮಾಡಿ.
07.45 ಈಗ ಬಲಬದಿಯ ಪ್ಯಾನಲ್ ನಲ್ಲಿ ನೀಮ್ಮ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಆಗಿರುವ ಪ್ಲಗ್ ಇನ್ ಗಳ ಪಟ್ಟಿಯೇ ಗೋಚರವಾಗುತ್ತದೆ.
07.50 ಪ್ಲಗ್ ಇನ್ ಗಳನ್ನು ಇನ್ಸ್ಟಾಲ್ ಮಾಡುವುದಾದರೂ ಹೇಗೆ?
07.53 ಪ್ರತಿಯೊಂದು ಪ್ಲಗ್ ಇನ್ ಅನ್ನು ಕೂಡಾ ಇನ್ಸ್ಟಾಲ್ ಮಾಡಲು ಅದಕ್ಕೆ ಸಂಬಂಧ ಪಟ್ಟ ಸೈಟ್ ನಿಂದ ಅದನ್ನು ಡೌನ್ಲೋಡ್ ಮಾಡಿ ನಂತರ ಇನ್ಸ್ಟಾಲ್ ಮಾಡಬಹುದು.
08.01 ಇನ್ಸ್ಟಾಲೇಷನ್ ಪ್ರೊಡ್ಯೂಸರ್ ಒಂದೊಂದು ಪ್ಲಗ್ ಇನ್ ಗಳಲ್ಲಿ ಒಂದೊಂದು ತರಹ ಇರಬಹುದು.
8.05 ಪ್ಲಗ್ ಇನ್ ಗಳ ಇನ್ಸ್ಟಾಲೇಷನ್ ಮಾಹಿತಿಗಾಗಿ ಮತ್ತು ಫೈರ್ ಫಾಕ್ಸ್ ನಲ್ಲಿನ ಪ್ಲಗಿನ್ಸ್ ಉಪಲಭ್ಯತೆಯ ಮಾಹಿತಿಗಾಗಿ ದಯವಿಟ್ಟು mozilla websiteಗೆ ಭೇಟಿ ನೀಡಿ.
08.16 ನಾವೀಗ ಬ್ರೌಸರನ್ನು ಮುಚ್ಚೋಣ.
08.19 ಪ್ಲಗಿನ್ ಗಳನ್ನು ನಿಷೇಧಗೊಳಿಸಲು disable ಬಟನ್ ನ ಮೇಲೆ ಕ್ಲಿಕ್ ಮಾಡಿ.
08.24 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದೆವು.
08.27 ಈ ಟ್ಯುಟೋರಿಯಲ್ ನಲ್ಲಿ ನಾವು
* ಲಿಂಕ್ ಗಳನ್ನು ಶೀಘ್ರವಾಗಿ ಹುಡುಕುವುದು
* ಫೈರ್ ಫಾಕ್ಸ್ ಸಿಂಕ್ ಮತ್ತು ಪ್ಲಗ್ ಇನ್ಸ್ ಇವುಗಳ ಬಗ್ಗೆ ಕಲಿತಿದ್ದೇವೆ.
08.36 ಇಲ್ಲಿ ನಿಮಗೆ ಅಭ್ಯಾಸವಿದೆ.
08.38 ಫೈರ್ ಫಾಕ್ಸ್ ಗಾಗಿ 3 ಪ್ಲಗ್ ಇನ್ ಗಳನ್ನು ಡೌನ್ಲೋಡ್ ಮಾಡಿ ನಂತರ ಇನ್ಸ್ಟಾಲ್ ಮಾಡಿ.
08.43 ಫೈರ್ ಫಾಕ್ಸ್ ಸಿಂಕ್ ಅಕೌಂಟನ್ನು ರಚಿಸಿರಿ. ಬೇರೆ ಕಂಪ್ಯೂಟರ್ ನಿಂದ ನಿಮ್ಮ ಫೈರ್ ಫಾಕ್ಸ್ ಬ್ರೌಸರ್ ಅನ್ನು ಆಕ್ಸಸ್ ಮಾಡಿ.
08.50 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
08.56 ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
09.01 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
09.06 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
09.10 ಹೆಚ್ಚಿನ ಮಾಹಿತಿಗಾಗಿ contact at spoken hyphen tutorial dot org ಎಂಬ ಈ-ಮೇಲ್ ಮೂಲಕ ಸಂಪರ್ಕಿಸಿ.
09.16 ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ.
09.21 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
09.28 ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನು ನೋಡಿ
09.31 spoken hyphen tutorial dot org slash NMEICT hyphen Intro
09.36 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಬೆಂಗಳೂರಿನಿಂದ ಶಶಾಂಕ. ಸಹಯೊಗಕ್ಕಾಗಿ ಧನ್ಯವಾದಗಳು.

Contributors and Content Editors

PoojaMoolya, Vasudeva ahitanal