C-and-Cpp/C4/Understanding-Pointers/Kannada

From Script | Spoken-Tutorial
Revision as of 08:20, 25 June 2015 by Chetana (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 c ಮತ್ತು c++ ನಲ್ಲಿ ಪಾಯಿಂಟರ್ಸ್(pointers) ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು,
00:08 ಪಾಯಿಂಟರ್ಸ್.
00:10 ಪಾಯಿಂಟರ್ಸ್ ಗಳನ್ನು ರಚಿಸುವುದು
00:12 ಮತ್ತು ಪಾಯಿಂಟರ್ಸ್ ಗಳನ್ನು ಉಪಯೋಗಿಸುವುದು.
00:14 ಇದನ್ನು ನಾವು ಒಂದು ಉದಾಹರಣೆಯೊಂದಿಗೆ ಮಾಡೋಣ.
00:18 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ.
00:31 ಪಾಯಿಂಟರ್ಸ್ ಅನ್ನು ಪೀಠಿಕೆಯೊಂದಿಗೆ ಆರಂಭಿಸೋಣ.
00:34 ಪಾಯಿಂಟರ್ ಗಳು ಮೆಮೊರಿಯಲ್ಲಿನ ಸ್ಥಾನಗಳನ್ನು ಸೂಚಿಸುತ್ತದೆ.
00.38 ಪಾಯಿಂಟರ್ ಗಳು ಮೆಮೊರಿಯ ಅಡ್ರೆಸ್ ಅನ್ನು ಹೊಂದಿರುತ್ತವೆ.
00:41 ಆ ಅಡ್ರೆಸ್ ನಲ್ಲಿ ಇರುವ ಮೌಲ್ಯವನ್ನೂ ಕೂಡ ಕೊಡುತ್ತದೆ.
00:45 ಈಗ ಪಾಯಿಂಟರ್ಸ್ ಗಳ ಒಂದು ಉದಾಹರಣೆಯನ್ನು ನೋಡೋಣ.
00:48 ನಮ್ಮ ಫೈಲ್ ನ ಹೆಸರು ಪಾಯಿಂಟರ್ಸ್ ಡೆಮೊ ಡಾಟ್ ಸಿ (pointers_demo.c) ಎಂಬುದನ್ನು ಗಮನದಲ್ಲಿಡಿ.
00:54 ಈಗ ಕೋಡ್ ಅನ್ನು ನೋಡೋಣ.
00:56 ಇದು ನಮ್ಮ ಹೆಡರ್ ಫೈಲ್ ಎಸ್ ಟಿ ಡಿ ಐ ಒ ಡಾಟ್ ಹೆಚ್(stdio.h)
01:00 ಇದು ನಮ್ಮ ಮೈನ್ ಫಂಕ್ಷನ್.
01:03 ಇಲ್ಲಿರುವ ಲಾಂಗ್ ಇಂಟಿಜರ್ ಟೈಪ್ ನ ವೇರಿಯೇಬಲ್ ಗೆ ಹತ್ತು ಎಂಬ ಮೌಲ್ಯವನ್ನು ಕೊಡಲಾಗಿದೆ.
01:09 ನಂತರ ನಾವು ಪಾಯಿಂಟರ್ ಟೈಪ್ ನ ptr(ಪಿ ಟಿ ಆರ್) ಎಂಬ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ.
01:12 ಪಾಯಿಂಟರ್ ಅನ್ನು ಡಿಕ್ಲೇರ್ ಮಾಡಲು ನಕ್ಷತ್ರ ಚಿಹ್ನೆಯನ್ನು ಬಳಸುತ್ತಾರೆ.
01:16 ಈ ಪಾಯಿಂಟರ್ ಲಾಂಗ್ ಇಂಟ್ ಟೈಪ್ ನ ಮೆಮೊರಿ ಯನ್ನು ಸೂಚಿಸಬಲ್ಲದು.
01:20 ಪ್ರಿಂಟ್ ಎಫ್ ಸ್ಟೇಟ್ಮೆಂಟ್ ನಲ್ಲಿರುವ ಆಂಪರ್ಸ್ಯಾಂಡ್ ಚಿಹ್ನೆಯನ್ನು ಮೆಮೊರಿ ಅಡ್ರೆಸ್ ಅನ್ನು ಪಡೆಯಲು ಬಳಸಲಾಗಿದೆ.
01:28 ಹಾಗಾಗಿ, ಆಂಪರ್ಸ್ಯಾಂಡ್ ನಮ್(num) ಎಂಬುದು num ನ ಮೆಮೊರಿ ಅಡ್ರೆಸ್ ಅನ್ನು ಕೊಡುತ್ತದೆ.
01:33 ಈ ಸ್ಟೇಟ್ಮೆಂಟ್, ವೇರಿಯೇಬಲ್ num ನ ಅಡ್ರೆಸ್ ಅನ್ನು ಪ್ರಿಂಟ್ ಮಾಡುತ್ತದೆ.
01:37 ಇಲ್ಲಿ, ptr ಎಂಬುದು num ನ ಅಡ್ರೆಸ್ ಅನ್ನು ಹೊಂದಿರುತ್ತದೆ.
01:41 ಈ ಸ್ಟೇಟ್ಮೆಂಟ್, ptr ನ ಅಡ್ರೆಸ್ ಅನ್ನು ಪ್ರಿಂಟ್ ಮಾಡುತ್ತದೆ.
01:45 Sizeof (ಸೈಸ್ ಆಫ್) ಎಂಬ ಫಂಕ್ಷನ್, ptr ನ ಗಾತ್ರವನ್ನು ಕೊಡುತ್ತದೆ.
01:49 ಇದು ptr ನ ಮೌಲ್ಯವನ್ನು ಕೊಡುತ್ತದೆ.
01:51 ಇದು num ನ ಮೆಮೊರಿ ಅಡ್ರೆಸ್,
01:54 ಮತ್ತು, ಇಲ್ಲಿರುವ ನಕ್ಷತ್ರ ಚಿಹ್ನೆ ಮತ್ತು ptr, ಅಡ್ರೆಸ್ ನ ಮೌಲ್ಯವನ್ನು ಕೊಡುತ್ತದೆ.
01:59 ಹಾಗಾಗಿ, ನಕ್ಶತ್ರ ಚಿಹ್ನೆಯನ್ನು ಬಳಸುವುದರಿಂದ ಮೆಮೊರಿ ಅಡ್ರೆಸ್ ಸಿಗುವುದಿಲ್ಲ.
02:03 ಅದರ ಬದಲಾಗಿ, ಅದರ ಮೌಲ್ಯವನ್ನು ಕೊಡುತ್ತದೆ.
02:06 %ld (ಪರ್ಸೆಂಟ್ ಎಲ್ ಡಿ) ಎಂಬುದು ಲಾಂಗ್ ಇಂಟ್ ನ ಫಾರ್ಮ್ಯಾಟ್ ಸ್ಪೆಸಿಫೈರ್ ಆಗಿದೆ.
02:10 ಈಗ, ಪ್ರೋಗ್ರಾಮ್ ಅನ್ನು ಏಕ್ಸಿಕ್ಯೂಟ್ ಮಾಡೋಣ.
02:13 ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ.
02:21 ಕಂಪೈಲ್ ಮಾಡಲು, gcc ಸ್ಪೇಸ್ poiners_demo.c (ಪಾಯಿಂಟರ್ಸ್ ಅಂಡರ್ ಸ್ಕೋರ್ ಡೆಮೊ ಡಾಟ್ ಸಿ) ಸ್ಪೇಸ್ –o (ಹೈಫನ್ ಒ) ಸ್ಪೇಸ್ point (ಪಾಯಿಂಟ್) ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ.
02:34 ./point ( ಡಾಟ್ ಸ್ಲ್ಯಾಶ್ ಪಾಯಿಂಟ್) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ.
02:39 ಔಟ್ ಪುಟ್ ಹೀಗೆ ತೋರಿಸುತ್ತದೆ,
02:42 num ನ ಅಡ್ರೆಸ್ ಮತ್ತು ptr ನ ಮೌಲ್ಯ ಒಂದೇ ಇರುವುದನ್ನು ನಾವು ನೋಡಬಹುದು.
02:48 ಆದರೆ num ಮತ್ತು ptr ನ ಮೆಮೊರಿ ಅಡ್ರೆಸ್ ಭಿನ್ನವಾಗಿದೆ.
02:53 ಪಾಯಿಂಟರ್ ನ ಗಾತ್ರವು ಎಂಟು ಬೈಟ್ ಗಳು, ಹಾಗೂ, ptr ಸೂಚಿಸುತ್ತಿರುವ ಮೌಲ್ಯವು ಹತ್ತು, ಮತ್ತು ಇದನ್ನು ನಮ್ (num) ಗೆ ಅಸೈನ್ ಮಾಡಲಾಗಿತ್ತು.
03:03 ಈಗ, ಇದೇ ಪ್ರೊಗ್ರಾಮ್ ಅನ್ನು C++ ನಲ್ಲಿ ನೋಡೋಣ.
03:07 ನಮ್ಮ ಫೈಲ್ ನ ಹೆಸರು ಪಾಯಿಂಟರ್ ಅಂಡರ್ಸ್ಕೋರ್ ಡೆಮೋ ಡಾಟ್ ಸಿಪಿಪಿ(pointer_demo.cpp) ಎಂಬುದನ್ನು ಗಮನದಲ್ಲಿಡಿ.
03:13 ಇಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು. ಹೆಡರ್ ಫೈಲ್ ಐ ಒ ಸ್ಟ್ರೀಮ್ ಎಂದಿರಬೇಕು.
03:19 ನಂತರ, std namespace (ಎಸ್ ಟಿ ಡಿ ನೇಮ್ಸ್ಪೇಸ್) ಅನ್ನು ಉಪಯೋಗಿಸುತ್ತಿದ್ದೇವೆ,
03:23 ಮತ್ತು, ಪ್ರಿಂಟ್ ಎಫ್ ಅನ್ನು ಸಿಔಟ್ ಫಂಕ್ಷನ್ ಆಗಿ ಬದಲಾಯಿಸಿದ್ದೇವೆ.
03:28 ಉಳಿದ ಕೋಡ್ ಮೊದಲಿನಂತೆಯೇ ಇದೆ.
03:30 ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹಿಂತಿರುಗಿ.
03:34 ಕಂಪೈಲ್ ಮಾಡಲು, g++ ಸ್ಪೇಸ್ pointers_demo.cpp ಸ್ಪೇಸ್ ಹೈಫನ್ ಒ(-o) ಸ್ಪೇಸ್ point1(ಪಾಯಿಂಟ್ ಒನ್) ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
03:50 ಡಾಟ್ ಸ್ಲ್ಯಾಶ್ ಪಾಯಿಂಟ್ ಒನ್ (./point1) ಎಂದು ಟೈಪ್ ಮಾಡಿ, enter ಅನ್ನು ಒತ್ತಿ.
03:55 ಈ ಔಟ್ ಪುಟ್ ನಮ್ಮ c ಕೋಡ್ ನ ಔಟ್ ಪುಟ್ ನಂತೆ ಇರುವುದನ್ನು ನೋಡಬಹುದು.
04:00 ಇಲ್ಲಿಗೆ ನಮ್ಮ ಟ್ಯುಟೋರಿಯಲ್ ಮುಗಿಯುತ್ತದೆ.
04:03 ಈಗ ನಮ್ಮ ಸ್ಲೈಡ್ ಗೆ ಹಿಂದಿರುಗಿ.
04:05 ಈಗ ಸಾರಾಂಶ ತಿಳಿಯೋಣ.
04:06 ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು :
04:08 ಪಾಯಿಂಟರ್ ನ ಬಗೆಗೆ.
04:10 ಪಾಯಿಂಟರ್ ಅನ್ನು ರಚಿಸುವುದು,
04:12 ಮತ್ತು, ಪಾಯಿಂಟರ್ ಅನ್ನು ಉಪಯೋಗಿಸುವುದು.
04:14 ಒಂದು ವೇರಿಯೇಬಲ್ ಮತ್ತು ಪಾಯಿಂಟರ್ ಅನ್ನು ಡಿಕ್ಲೇರ್ ಮಾಡುವುದು, ವೇರಿಯೇಬಲ್ ನ ಅಡ್ರೆಸ್ ಅನ್ನು ಪಾಯಿಂಟರ್ ನಲ್ಲಿ ಇಡುವುದು, ಮತ್ತು ಪಾಯಿಂಟರ್ ನ ಮೌಲ್ಯವನ್ನು ಪ್ರಿಂಟ್ ಮಾಡುವುದು, ಈ ಕಾರ್ಯಗಳನ್ನು ನಿರ್ವಹಿಸಲು, C ಮತ್ತು C++ ನಲ್ಲಿ ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ.
04:27 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ.
04:30 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
04:33 ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
04:37 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ.
04:43 ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
04:47 ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ.
04:53 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ.
04:58 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
05:06 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ.
05:10 ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
05:14 ಧನ್ಯವಾದಗಳು.

Contributors and Content Editors

Chetana, PoojaMoolya, Vasudeva ahitanal