C-and-Cpp/C3/Loops/Kannada

From Script | Spoken-Tutorial
Revision as of 17:58, 7 November 2014 by Chetana (Talk | contribs)

Jump to: navigation, search
Time Narration
00:01 c ಮತ್ತು c++ ನಲ್ಲಿ ಲೂಪ್ಸ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು:
00:09 ಫಾರ್ ಲೂಪ್
00:10 ವೈಲ್ ಲೂಪ್
00:12 ಡು ವೈಲ್ ಲೂಪ್
00:13 ಇದನ್ನು ನಾವು ಕೆಲವು ಉದಾಹರಣೆಗಳೊಂದಿಗೆ ಮಾಡೋಣ.
00:17 ನಾವು ಕೆಲವು ಸಾಮಾನ್ಯವಾಗಿ ಆಗುವ ಎರರ್ ಗಳನ್ನೂ ನೋಡೋಣ.
00:21 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ.
00:34 ಲೂಪ್ ನ ಪೀಠಿಕೆಯೊಂದಿಗೆ ಪ್ರಾರಂಭಿಸೋಣ.
00:38 ಇಂಸ್ಟ್ರಕ್ಷನ್ ಗಳ ಸಮೂಹವನ್ನು ಪದೇ ಪದೇ ಎಕ್ಸಿಕ್ಯೂಟ್ ಮಾಡಲು ಲೂಪ್ ಗಳನ್ನು ಬಳಸುತ್ತಾರೆ.
00:44 ಅವುಗಳ ಉದ್ದೇಶದ ಮೇರೆಗೆ ಅವುಗಳನ್ನು ಮೂರು ವಿಧವಾಗಿ ವಿಂಗಡಿಸಬಹುದು.
00:48 ವೈಲ್ ಲೂಪ್
00:49 ಡು ವೈಲ್ ಲೂಪ್ ಮತ್ತು
00:51 ಫಾರ್ ಲೂಪ್
00:52 ಮೊದಲು ವೈಲ್ ಲೂಪ್ ನೊಂದಿಗೆ ಪ್ರಾರಂಭಿಸೋಣ.
00:56 ವೈಲ್ ಲೂಪ್, ಕಂಡೀಶನ್ ಅನ್ನು ಮೊದಲಿಗೆ ಟೆಸ್ಟ್ ಮಾಡುತ್ತದೆ.
01:00 ಇದರ ರಚನೆ ಹೀಗಿದೆ,
01:01 ವೈಲ್ ಕಂಡೀಶನ್
01:03 ಬ್ರಾಕೆಟ್ ನ ಒಳಗೆ ಸ್ಟೇಟ್ಮೆಂಟ್ ಬ್ಲಾಕ್.
01:07 ಈಗ ಡು ವೈಲ್ ಲೂಪ್ ನೋಡೋಣ.

-

01:09 ಡು ವೈಲ್ ಲೂಪ್, ವ್ಯಾಲಿಡೇಟ್ ಆಗುವ ಮುನ್ನ ಕನಿಷ್ಠ ಒಮ್ಮೆಯಾದರೂ ಎಕ್ಸಿಕ್ಯೂಟ್ ಆಗಿರುತ್ತದೆ.
01:15 ಇದರ ರಚನೆ ಹೀಗಿದೆ,
01:17 ಡು ಬ್ರಾಕೆಟ್ ನ ಒಳಗೆ ಸ್ಟೇಟ್ಮೆಂಟ್ ಬ್ಲಾಕ್
01:20 ಬ್ರಾಕೆಟ್ ನ ನಂತರ ವೈಲ್ ಕಂಡೀಶನ್
01:23 ಕಂಡೀಶನ್ ಕೊನೆಯಲ್ಲಿ ಚೆಕ್ ಆಗುತ್ತದೆ ಎಂಬುದನ್ನು ನೋಡಬಹುದು.
01:27 ಈಗ, ವೈಲ್ ಲೂಪ್ ಮತ್ತು ಡು ವೈಲ್ ಲೂಪ್ ಗೆ ಉದಾಹರಣೆಯನ್ನು ನೋಡೋಣ.
01:32 ನಾನೀಗಾಗಲೇ ಎಡಿಟರ್ ನಲ್ಲಿ ಕೋಡ್ ಅನ್ನು ಟೈಪ್ ಮಾಡಿದ್ದೇನೆ.
01:35 ಅದನ್ನು ಒಪನ್ ಮಾಡುತ್ತೇನೆ.
01:37 ನಮ್ಮ ಫೈಲ್ ನ ಹೆಸರು ವೈಲ್ ಡಾಟ್ ಸಿ ಎಂಬುದನ್ನು ಗಮನದಲ್ಲಿಡಿ.
01:41 ಇಂದು ನಾವು, ಮೊದಲ ಹತ್ತು ಸಂಖ್ಯೆಗಳ ಮೊತ್ತವನ್ನು ವೈಲ್ ಲೂಪ್ ಉಪಯೋಗಿಸಿ ಕಂಡುಹಿಡಿಯುವುದನ್ನು ಕಲಿಯೋಣ.
01:47 ಈಗ ಕೋಡ್ ಅನ್ನು ವಿವರಿಸುತ್ತೇನೆ.
01:49 ಇದು ನಮ್ಮ ಹೆಡರ್ ಫೈಲ್.
01:51 ಮೈನ್ ಫಂಕ್ಷನ್ ನ ಒಳಗೆ x ಮತ್ತು y ಎಂದು ಎರಡು ಇಂಟಿಜರ್ ವೇರಿಯೇಬಲ್ ಡಿಕ್ಲೇರ್ ಮಾಡಿ ಝೀರೋ ಗೆ ಇನಿಶಿಯಲೈಸ್ ಮಾಡಿದ್ದೇವೆ.
01:59 ಇದು ನಮ್ಮ ವೈಲ್ ಲೂಪ್.
02:02 x ಹತ್ತಕ್ಕಿಂತ ಕಡಿಮೆ ಅಥವಾ ಸಮವಾಗಿದೆ ಎಂಬುದು ವೈಲ್ ಲೂಪ್ ನ ಕಂಡೀಶನ್ ಆಗಿದೆ.
02:06 ಇಲ್ಲಿ, x ನ ಮೌಲ್ಯವನ್ನು y ನ ಮೌಲ್ಯಕ್ಕೆ ಕೂಡಿಸುತ್ತಿದ್ದೇವೆ.
02:10 ಸಂಕಲನದ ನಂತರ ಬಂದ ಮೊತ್ತವನ್ನು y ನಲ್ಲಿ ಇಡಲಾಗುತ್ತದೆ.
02:15 ನಂತರ, y ನ ಮೌಲ್ಯವನ್ನು ಪ್ರಿಂಟ್ ಮಾಡುತ್ತೇವೆ.
02:18 ಇಲ್ಲಿ x ಅನ್ನು ಇನ್ಕ್ರಿಮೆಂಟ್ ಮಾಡುತ್ತಿದ್ದೇವೆ.
02:20 ಅಂದರೆ, ವೇರಿಯೇಬಲ್ x ಅನ್ನು ಒಂದರಿಂದ ಹೆಚ್ಚಿಸಲಾಗುತ್ತದೆ.
02:25 ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್.
02:27 ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
02:30 ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ.
02:39 gcc ಸ್ಪೇಸ್ ವೈಲ್ ಡಾಟ್ ಸಿ ಸ್ಪೇಸ್ ಹೈಫನ್ ಒ ಸ್ಪೇಸ್ ವೈಲ್ ಎಂದು ಟೈಪ್ ಮಾಡಿ.
02:45 Enter ಕೀಯನ್ನು ಒತ್ತಿ.
02:47 ಡಾಟ್ ಸ್ಲ್ಯಾಶ್ ವೈಲ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ.
02:52 ಔಟ್ ಪುಟ್ ತೋರಿಸುತ್ತದೆ.
02:54 ಈಗ ವೈಲ್ ಲೂಪ್ ಹೇಗೆ ಕೆಲಸ ಮಾಡುತ್ತದೆ ಎಂದು ನೋಡೋಣ.
02:57 ವಿಂಡೋವನ್ನು ರಿಸೈಸ್ ಮಾಡುತ್ತೇನೆ.
03:00 ಇಲ್ಲಿ, ಮೊದಲು x ಮತ್ತು y ಗಳ ಮೌಲ್ಯ ಸೊನ್ನೆಯಾಗಿದೆ.
03:04 ಇದು ನಮ್ಮ ವೈಲ್ ಕಂಡೀಶನ್.
03:06 ಇಲ್ಲಿ, x, ಹತ್ತಕ್ಕಿಂತ ಕಡಿಮೆ ಅಥವಾ ಸಮವಾಗಿದೆಯೇ ಎಂದು ಚೆಕ್ ಮಾಡುತ್ತೇವೆ, ಅಂದರೆ x ನ ಮೌಲ್ಯವು ಸೊನ್ನೆ ಮತ್ತು ಹತ್ತರ ನಡುವೆ ಇರುತ್ತದೆ.
03:15 ನಂತರ, x ಮತ್ತು y ಅನ್ನು ಕೂಡಿಸುತ್ತೇವೆ ಅಂದರೆ ಸೊನ್ನೆ ಪ್ಲಸ್ ಸೊನ್ನೆ ಯ ಮೊತ್ತವು ಸೊನ್ನೆಯಾಗುತ್ತದೆ.
03:22 ಇಲ್ಲಿ y ನ ಮೌಲ್ಯವನ್ನು ಪ್ರಿಂಟ್ ಮಾಡುತ್ತೇವೆ, ಇಲ್ಲಿ ಸೊನ್ನೆ ಎಂದು ಬರುತ್ತದೆ.
03:27 ನಂತರ, x ಅನ್ನು ಇಂಕ್ರಿಮೆಂಟ್ ಮಾಡುತ್ತೇವೆ, ಅಂದರೆ, ಈಗ x ನ ಮೌಲ್ಯ ಒಂದು ಆಗಿರುತ್ತದೆ.
03:33 ಪುನಃ ನಾವು ಕಂಡೀಶನ್ ಅನು ಚೆಕ್ ಮಾಡುತ್ತೇವೆ, ಒಂದು ಹತ್ತಕ್ಕಿಂತ ಕಡಿಮೆ ಅಥವಾ ಸಮವಾಗಿದೆ. ಈ ಕಂಡೀಶನ್ ಟ್ರು ಆಗಿದ್ದರೆ, ನಾವು ಮೌಲ್ಯಗಳನ್ನು ಕೂಡುತ್ತೇವೆ.
03:44 y ಎಂದರೆ, ಸೊನ್ನೆ, ಪ್ಲಸ್ x ಎಂದರೆ ಒಂದು. ಸೊನ್ನೆ ಪ್ಲಸ್ ಒಂದರ ಮೊತ್ತ ಒಂದು.
03:50 ಒಂದು ಎಂದು ಮೌಲ್ಯವನ್ನು ಪ್ರಿಂಟ್ ಮಾದುತ್ತೇವೆ.
03:53 ಪುನಃ x ಇಂಕ್ರಿಮೆಂಟ್ ಆಗುತ್ತದೆ.
03:55 ಈಗ x ನ ಮೌಲ್ಯ ಎರಡು.
03:59 ನಾವೀಗ ಪುನಃ ಕಂಡೀಶನ್ ಅನ್ನು ಚೆಕ್ ಮಾಡುತ್ತೇವೆ.
04:01 ಎರಡು ಹತ್ತಕ್ಕಿಂತ ಕಡಿಮೆ ಅಥವಾ ಸಮವಾಗಿದೆ ಎಂಬ ಕಂಡೀಶನ್ ಟ್ರು ಆದರೆ ಮೌಲ್ಯಗಳನ್ನು ಕೋಡುತ್ತೇವೆ ಅಂದರೆ ಒಂದು ಮತ್ತು ಎರಡರ ಮೊತ್ತ ಮೂರು ಎಂದಾಗುತ್ತದೆ.
04:11 ನಾವು ಮೌಲ್ಯವನ್ನು ಮೂರು ಎಂದು ಪ್ರಿಂಟ್ ಮಾಡುತ್ತೇವೆ.
04:13 ಹೀಗೆ ಇದು, x ಎಂಬುದು ಹತ್ತಕ್ಕಿಂತ ಕಡಿಮೆ ಅಥವಾ ಹತ್ತು ಆಗುವವರೆಗೆ ಮುಂದುವರೆಯುತ್ತದೆ.
04:20 ನಾವೀಗ ಇದೇ ಪ್ರೊಗ್ರಾಮ್ ಅನ್ನು ಡು ವೈಲ್ ಲೂಪ್ ಉಪಯೋಗಿಸಿ ಮಾಡೋಣ.
04:24 ನಮ್ಮ ಪ್ರೊಗ್ರಾಮ್ ಇಲ್ಲಿದೆ.
04:26 ನಮ್ಮ ಫೈಲ್ ನ ಹೆಸರು ಡು ಹೈಫನ್ ವೈಲ್ ಡಾಟ್ ಸಿ ಎಂದು ಗಮನದಲ್ಲಿಡಿ.
04:31 ಈ ಭಾಗವನ್ನು ಈಗಾಗಲೇ ಹಿಂದಿನ ಪ್ರೊಗ್ರಾಮ್ ನಲ್ಲಿ ವಿವರಿಸಲಾಗಿದೆ.
04:35 ಹಾಗಾಗಿ ಡು ವೈಲ್ ಲೂಪ್ ಗೆ ಹೋಗೋಣ.
04:38 ಇಲ್ಲಿ, ಮೊದಲು ಲೂಪ್ ನ ಒಳಗಿನ ಸ್ಟೇಟ್ಮೆಂಟ್ ಗಳು ಎಕ್ಸಿಕ್ಯೂಟ್ ಆಗುತ್ತದೆ, ನಂತರ, ಕಂಡೀಶನ್ ಚೆಕ್ ಆಗುತ್ತದೆ.
04:44 x ನ ಮೌಲ್ಯವನ್ನು y ನ ಮೌಲ್ಯಕ್ಕೆ ಕೂಡಿಸಿದ ನಂತರ ಬರುವ ಮೊತ್ತವನ್ನು y ನಲ್ಲಿ ಇಡಲಾಗುತ್ತದೆ.
04:52 ಇದರ ಲಾಜಿಕ್ ವೈಲ್ ಪ್ರೊಗ್ರಾಮ್ ನಂತೆಯೇ ಇದೆ.
04:55 ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
04:58 ನಮ್ಮ ಟರ್ಮಿನಲ್ ಗೆ ಹಿಂತಿರುಗಿ.
05:00 gcc ಸ್ಪೇಸ್ ಡು ಹೈಫನ್ ವೈಲ್ ಡಾಟ್ ಸಿ ಸ್ಪೇಸ್ ಹೈಫನ್ ಒ ಸ್ಪೇಸ್ ಡು ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ.
05:08 ಡಾಟ್ ಸ್ಲ್ಯಾಶ್ ಡು ಎಂದು ಟೈಪ್ ಮಾಡಿ Enter ಕೀಯನ್ನು ಒತ್ತಿ.
05:12 ಔಟ್ ಪುಟ್ ವೈಲ್ ಪ್ರೊಗ್ರಾಮ್ ನಂತೆಯೇ ಇರುವುದನ್ನು ನಾವು ನೋಡಬಹುದು.
05:16 ಈಗ ಡು ವೈಲ್ ಲೂಪ್ ಹೇಗೆ ಕೆಲಸ ಮಾಡುತ್ತದೆ ಎಂದು ನೋಡೋಣ.
05:20 ವಿಂಡೋವನ್ನು ರಿಸೈಸ್ ಮಾಡುತ್ತೇನೆ.
05:22 ಇಲ್ಲಿ x ಮತ್ತು y ನ ಮೌಲ್ಯ ಸೊನ್ನೆಯಾಗಿದೆ.
05:25 ಅವುಗಳನ್ನು ಕೂಡಿಸಿದರೆ ಮೊತ್ತ ಸೊನ್ನೆ ಎಂದು ಪಡೆಯುತ್ತೇವೆ.
05:29 ಈಗ y ನ ಮೌಲ್ಯ ಸೊನ್ನೆ ಎಂದಿದೆ.
05:31 ನಾವು ಸೊನ್ನೆ ಎಂದು ಪ್ರಿಂಟ್ ಮಾಡುತ್ತೇವೆ.
05:33 ನಂತರ, x ಅನ್ನು ಒಂದರಿಂದ ಇಂಕ್ರಿಮೆಂಟ್ ಮಾಡುತ್ತೇವೆ, ಇದರರ್ಥ, ಈಗ x ನ ಮೌಲ್ಯ ಒಂದು, ನಂತರ ಕಂಡೀಶನ್ ಚೆಕ್ ಆಗುತ್ತದೆ.
05:42 ಲೂಪ್ ನ ಒಳಗಿನ ಸ್ಟೇಟ್ಮೆಂಟ್ ಗಳು ಮೊದಲು ಎಕ್ಸಿಕ್ಯೂಟ್ ಅಗುವುದನ್ನು ನೀವು ನೋಡಬಹುದು.
05:45 ಕಂಡೀಶನ್ ಫಾಲ್ಸ್ ಆಗಿದ್ದರೂ ಕೂಡ, ಮೌಲ್ಯವು ಸೊನ್ನೆ ಎಂದು ಬರುತ್ತದೆ.
05:52 ಈಗ, ಇಲ್ಲಿ, ಒಂದು ಹತ್ತಕ್ಕಿಂತ ಕಡಿಮೆ ಅಥವಾ ಸಮವಾಗಿದೆಯೇ ಎಂದು ಚೆಕ್ ಮಾಡುತ್ತೇವೆ.
05:56 ಕಂಡೀಶನ್ ಟ್ರು ಇರುವುದರಿಂದ ನಾವು ಪುನಃ ಮೌಲ್ಯಗಳನ್ನು ಕೂಡುತ್ತೇವೆ.
06:00 ಈಗ ಸೊನ್ನೆ ಪ್ಲಸ್ ಒಂದು
06:02 ನಂತರ, ನಾವು y ನ ಮೌಲ್ಯವನ್ನು ಒಂದು ಎಂದು ಪ್ರಿಂಟ್ ಮಾಡುತ್ತೇವೆ.
06:05 ಪುನಃ x ಇಂಕ್ರಿಮೆಂಟ್ ಆಗುತ್ತದೆ.
06:08 ಈಗ x ನ ಮೌಲ್ಯವು ಎರಡು.
06:11 ನಂತರ, ಎರಡು ಹತ್ತಕ್ಕಿಂತ ಕಡಿಮೆ ಅಥವಾ ಸಮವಾಗಿದೆಯೇ ಎಂದು ಚೆಕ್ ಮಾಡುತ್ತೇವೆ.
06:15 ನಾವು ಇಲ್ಲಿಗೆ ಹಿಂದೆ ಬಂದು,
06:17 ಒಂದು ಮತ್ತು ಎರಡನ್ನು ಕೂಡಿಸುತ್ತೇವೆ, ಮೊತ್ತ ಮೂರು ಎಂದು ಬರುತ್ತದೆ.
06:20 ನಾವು y ನ ಮೌಲ್ಯವನ್ನು ಮೂರು ಎಂದು ಪ್ರಿಂಟ್ ಮಾಡುತ್ತೇವೆ.
06:23 ಹೀಗೆ x ಎಂಬುದು ಹತ್ತಕ್ಕಿಂತ ಕಡಿಮೆ ಅಥವಾ ಸಮವಾಗುವವರೆಗೆ ಕಂಡೀಶನ್ ಚೆಕ್ ಆಗುತ್ತದೆ.
06:30 ಮತ್ತು ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್.
06:33 ಇಲ್ಲಿ ವೈಲ್ ಕಂಡೀಶನ್ ಸೆಮಿಕೊಲನ್ ನೋದಿಗೆ ಅಂತ್ಯವಾಗುತ್ತದೆ ಎಂದು ಗಮನದಲ್ಲಿಡಿ.
06:38 ವೈಲ್ ಲೂಪ್ ನಲ್ಲಿ, ಕಂಡೀಶನ್ ನ ಕೊನೆಗೆ ಸೆಮಿಕೊಲನ್ ಬರುವುದಿಲ್ಲ.
06:43 ಈಗ, ಇದೇ ಪ್ರೊಗ್ರಾಮ್ ಗಳನ್ನು c++ ನಲ್ಲಿ ಹೇಗೆ ಎಕ್ಸಿಕ್ಯೂಟ್ ಮಾಡುವುದೆಂದು ನೋಡೋಣ.
06:48 ಇದು ನಮ್ಮ c++ ನ ವೈಲ್ ಪ್ರೊಗ್ರಾಮ್.
06:52 ಇದರ ಲಾಜಿಕ್ ಮತ್ತು ಇಂಪ್ಲಿಮೆಂಟೇಶನ್ c ಪ್ರೊಗ್ರಾಮ್ ನಂತೆಯೇ.
06:56 There are a few changes like the header file as iostream in place of stdio.h ಇಲ್ಲಿ ಕೆಲವು ಬದಲಾವಣೆಗಳಿವೆ, ಹೆಡರ್ ಫೈಲ್ ಎಸ್ ಟಿ ಡಿ ಐ ಒ ಡಾಟ್ ಹೆಚ್ ನ ಬದಲು ಐ ಒ ಸ್ಟ್ರೀಮ್ ಎಂದಿದೆ.
07:04 ಇಲ್ಲಿ ನಾವು ಯೂಸಿಂಗ್ ಸ್ಟೇಟ್ಮೆಂಟ್ ಅನ್ನು ಸೇರಿಸಿದ್ದೇವೆ, ಯೂಸಿಂಗ್ ನೇಂಸ್ಪೇಸ್ ಎಸ್ ಟಿ ಡಿ ಮತ್ತು, ಇಲ್ಲಿ ಪ್ರಿಂಟ್ ಎಫ್ ಫಂಕ್ಷನ್ ನ ಬದಲು ಸಿಔಟ್ ಫಂಕ್ಷನ್ ಅನ್ನು ಉಪಯೋಗಿಸಿದ್ದೇವೆ.
07:16 ವೈಲ್ ಲೂಪ್ ನ ರಚನೆ c ಪ್ರೊಗ್ರಾಮ್ ನಂತೆಯೇ ಇರುತ್ತದೆ.
07:21 ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
07:23 ಟರ್ಮಿನಲ್ ಗೆ ಹಿಂದಿರುಗಿ.
07:25 ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡೋಣ.
07:28 ಎಕ್ಸಿಕ್ಯೂಟ್ ಮಾಡಲು, g++ ಸ್ಪೇಸ್ ವೈಲ್ ಡಾಟ್ cpp ಸ್ಪೇಸ್ ಹೈಫನ್ ಒ ಸ್ಪೇಸ್ ವೈಲ್ ಒನ್ ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ.
07:38 ಡಾಟ್ ಸ್ಲ್ಯಾಶ್ ವೈಲ್ ಒನ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ.
07:43 ಈ ಔಟ್ ಪುಟ್, c ಯಲ್ಲಿನ ನಮ್ಮ ವೈಲ್ ಪ್ರೊಗ್ರಾಮ್ ನಂತೆಯೇ ಇರುವುದನ್ನು ಗಮನಿಸಬಹುದು.
07:48 ಈಗ ಡು ವೈಲ್ ಪ್ರೊಗ್ರಾಮ್ ಅನ್ನು c++ ನಲ್ಲಿ ಮಾಡೋಣ.
07:52 ಟೆಕ್ಸ್ಟ್ ಎಡಿಟರ್ ಗೆ ಹಿಂತಿರುಗಿ.
07:54 ಇಲ್ಲಿಯೂ ಕೆಲವು ಬದಲಾವಣೆಗಳಿವೆ, ಹೆಡರ್ ಫೈಲ್, ಯೂಸಿಂಗ್ ಸ್ಟೇಟ್ಮೆಂಟ್, ಮತ್ತು ಸಿಔಟ್ ಫಂಕ್ಷನ್.
08:03 ಉಳಿದ ಕೋಡ್ ನಲ್ಲಿ ಬದಲಾವಣೆಯಿಲ್ಲ.
08:06 ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
08:08 ಟರ್ಮಿನಲ್ ಗೆ ಹಿಂದಿರುಗಿ.
08:10 g++ ಸ್ಪೇಸ್ ಡು ಹೈಫನ್ ವೈಲ್ ಡಾಟ್ cpp ಸ್ಪೇಸ್ ಹೈಫನ್ ಒ ಸ್ಪೇಸ್ ಡು ಒನ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ.
08:19 ಡಾಟ್ ಸ್ಲ್ಯಾಶ್ ಡು ಒನ್ ಎಂದು ಟೈಪ್ ಮಾಡಿ Enter ಕೀಯನ್ನು ಒತ್ತಿ.
08:23 ಔಟ್ ಪುಟ್, c ಯಲ್ಲಿನ ಡು ವೈಲ್ ಪ್ರೊಗ್ರಾಮ್ ನಂತೆಯೇ ಇರುವುದನ್ನು ಗಮನಿಸಬಹುದು.
08:28 ಈಗ ನಾವು ಸಾಮಾನ್ಯ ಎರರ್ ಗಳನ್ನು ಮತ್ತು ಅವುಗಳನ್ನು ಸರಿಪಡಿಸುವ ಬಗೆಯನ್ನೂ ನೋಡೋಣ.
08:32 ಟೆಕ್ಸ್ಟ್ ಎಡಿಟರ್ ಗೆ ಹಿಂದಿರುಗಿ.
08:35 ಇಲ್ಲಿ ನಾನು x ನ ಮೌಲ್ಯವನ್ನು ಇಂಕ್ರಿಮೆಂಟ್ ಮಾಡುವುದಿಲ್ಲ.
08:41 Save ಅನ್ನು ಒತ್ತಿ.
08:42 ಈಗ ಏನಾಗುತ್ತದೆ ಎಂಬುದನ್ನು ನೋಡೋಣ.
08:44 ಟರ್ಮಿನಲ್ ಗೆ ಹಿಂದಿರುಗಿ.
08:45 ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡುತ್ತೇನೆ.
08:47 ಪ್ರೊಗ್ರಾಮ್ ಅನ್ನು ಪುನಃ ಎಕ್ಸಿಕ್ಯೂಟ್ ಮಾಡೋಣ.
08:50 ಎರಡು ಬಾರಿ ಅಪ್ ಆರೋ ಕೀಯನ್ನು ಒತ್ತಿ, Enter ಒತ್ತಿ.
08:54 ಪುನಃ ಅಪ್ ಆರೋ ಕೀಯನ್ನು ಒತ್ತಿ, Enter ಒತ್ತಿ.
08:57 ಔಟ್ ಪುಟ್ ತೋರಿಸುತ್ತದೆ.
08:59 ನಾವು ಝೀರೋಗಳನ್ನು ನೋಡಬಹುದು, ಏಕೆಂದರೆ ಲೂಪ್ ಅನ್ನು ಅಂತ್ಯಗೊಳಿಸಲು ಕಂಡೀಶನ್ ಇಲ್ಲ.
09:07 ಇದನ್ನು ಇಫೈನೈಟ್ ಲೂಪ್ ಎನ್ನುತ್ತಾರೆ.
09:10 ಇನ್ಫೈನೈಟ್ ಲೂಪ್ ನಿಂದಾಗಿ ಸಿಸ್ಟಮ್ ಸ್ಪಂದಿಸದಂತಾಗಬಹುದು.
09:14 ಇದು, ಎಲ್ಲಾ ಪ್ರೊಸೆಸರ್ ಗಳ ಸಮಯವನ್ನೂ ಪ್ರೊಗ್ರಾಮ್ ಬಳಸುವಂತೆ ಮಾಡಬಹುದು, ಆದರೆ ಈ ಪ್ರೊಗ್ರಾಮ್ ಅನ್ನು ಅಂತ್ಯಗೊಳಿಸಬಹುದು.
09:21 ಪ್ರೊಗ್ರಾಮ್ ಗೆ ಹಿಂತಿರುಗಿ, ಈ ಎರರ್ ಅನ್ನು ಸರಿಪಡಿಸೋಣ.
09:25 x++ ಸೆಮಿಕೊಲನ್ ಎಂದು ಟೈಪ್ ಮಾಡಿ.
09:28 Save ಅನ್ನು ಒತ್ತಿ. ಪುನಃ ಎಕ್ಸಿಕ್ಯೂಟ್ ಮಾಡೋಣ.
09:31 ಟರ್ಮಿನಲ್ ಗೆ ಹಿಂತಿರುಗಿ.
09:33 ಅಪ್ ಆರೋ ಕೀಯನ್ನು ಒತ್ತಿ, Enter ಒತ್ತಿ.
09:38 ಹೌದು, ಇದು ಕೆಲಸ ಮಾಡುತ್ತಿದೆ.
09:40 ಇಲ್ಲಿಗೆ, ಈ ಟುಟೋರಿಯಲ್ ಮುಗಿಯುತ್ತದೆ.
09:43 ನಮ್ಮ ಸ್ಲೈಡ್ ಗೆ ಹಿಂದಿರುಗಿ.
09:45 ಸಾರಾಂಶ ತಿಳಿಯೋಣ.
09:47 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತ ಅಂಶಗಳು:
09:50 ವೈಲ್ ಲೂಪ್
09:51 ಉದಾಹರಣೆಗೆ : ವೈಲ್ x ಈಸ್ ಲೆಸ್ ದ್ಯಾನ್ ಆರ್ ಈಕ್ವಲ್ ಟು ಟೆನ್
09:54 ಡು ವೈಲ್ ಲೂಪ್
09:56 ಉದಾಹರಣೆಗೆ ಡು ಸ್ಟೇಟ್ಮೆಂಟ್ ಬ್ಲಾಕ್ ಮತ್ತು
09:59 ಕೊನೆಗೆ ವೈಲ್ ಕಂಡೀಶನ್.
10:01 ಸೊನ್ನೆಯಿಂದ ಒಂಭತ್ತರವರೆಗೆ ಫಾರ್ ಲೂಪ್ ಉಪಯೋಗಿಸಿ ಪ್ರಿಂಟ್ ಮಾಡಲು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ.
10:10 ಫಾರ್ ಲೂಪ್ ನ ಸಿಂಟ್ಯಾಕ್ಸ್ ಹೀಗಿದೆ,
10:12 ಫಾರ್ ವೇರಿಯೇಬಲ್ ಇನಿಶಿಯಲೈಸೇಶನ್ ವೇರಿಯೇಬಲ್ ಕಂಡೀಶನ್ ಮತ್ತು ವೇರಿಯೇಬಲ್ ಇಂಕ್ರಿಮೆಂಟ್ ಅಥವಾ ಡಿಕ್ರಿಮೆಂಟ್
10:20 ಮತ್ತು, ಇಲ್ಲಿ ಲೂಪ್ ನ ಸ್ಟೇಟ್ಮೆಂಟ್ ಬ್ಲಾಕ್ ಬರುತ್ತದೆ.
10:24 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ.
10:27 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
10:30 ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
10:33 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ.


10:38 ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
10:42 ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ.
10:47 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ.
10:51 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
10:58 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ.
11:02 ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ. ಧನ್ಯವಾದಗಳು.


Contributors and Content Editors

Chetana, PoojaMoolya, Pratik kamble