C-and-Cpp/C2/If-And-Else-If-statement/Kannada

From Script | Spoken-Tutorial
Revision as of 13:55, 25 September 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:02 ಸಿ ಮತ್ತು ಸಿ ಪ್ಲಸ್ ಪ್ಲಸ್ (C++) ನಲ್ಲಿ ಕಂಡೀಶನಲ್ ಸ್ಟೇಟ್ಮೆಂಟ್ ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು,
00:11 ಒಂದೇ ಸ್ಟೇಟ್ಮೆಂಟ್ ಅನ್ನು ಎಕ್ಸಿಕ್ಯೂಟ್ ಮಾಡುವುದು ಹೇಗೆ ಮತ್ತು
00:14 ಸ್ಟೇಟ್ಮೆಂಟ್ ನ ಗುಂಪನ್ನು ಎಕ್ಸಿಕ್ಯೂಟ್ ಮಾಡುವುದು ಹೇಗೆ?
00:16 ಎಂಬುದನ್ನು ನಾವು ಉದಾಹರಣೆಯೊಂದಿಗೆ ಕಲಿಯಲಿದ್ದೇವೆ ಹಾಗೂ,
00:19 ಕೆಲವು ಸಾಮಾನ್ಯವಾಗಿ ಆಗುವ ಎರರ್ ಗಳನ್ನೂ ಮತ್ತು ಅವುಗಳ ಪರಿಹಾರವನ್ನೂ ನೋಡಲಿದ್ದೇವೆ.
00:25 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ನ11.10 ನೇಆವೃತ್ತಿ ಮತ್ತು gcc ಮತ್ತುg++ಕಂಪೈಲರ್ನ4.6.1 ನೇಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ.
00:38 ಸ್ಟೇಟ್ಮೆಂಟ್ಸ್ ಅನ್ನು ಪೀಠಿಕೆಯೊಂದಿಗೆ ಪ್ರಾರಂಭಿಸೋಣ.
00:43 ಸ್ಟೇಟ್ಮೆಂಟ್ ಎಂಬುದು ಪ್ರೊಗ್ರಾಮ್ ಎಕ್ಸಿಕ್ಯೂಟ್ ಆಗುವ ರೀತಿಯನ್ನು ನಿಯಂತ್ರಿಸುತ್ತದೆ.
00:49 ಇದು, ಯಾವ ಕೋಡ್ ಎಕ್ಸಿಕ್ಯೂಟ್ ಆಗಬೇಕು ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.
00:55 ನಾವು, ಕಂಡೀಶನ್ ಗಳು ಸರಿ ಅಥವಾ ತಪ್ಪು ಎಂಬುದನ್ನು ನಿರ್ಧಾರಿಸಬಹುದು.
01:00 ನಾವು, ಒಂದು ಸ್ಟೇಟ್ಮೆಂಟ್ ಅಥವಾ ಸ್ಟೇಟ್ಮೆಂಟ್ ಗಳ ಗುಂಪನ್ನು ಎಕ್ಸಿಕ್ಯೂಟ್ ಮಾಡಬಹುದು.
01:07 ಇಫ್ ಸ್ಟೇಟ್ಮೆಂಟ್ ನ ಹರಿವನ್ನು ತಿಳಿಯೋಣ.
01:13 ಇಲ್ಲಿ, ಕಂಡೀಶನ್ ಸರಿಯಾಗಿದ್ದಲ್ಲಿ statement1ಎಕ್ಸಿಕ್ಯೂಟ್ ಆಗುತ್ತದೆ,
01:20 ಕಂಡೀಶನ್ ತಪ್ಪಾಗಿದ್ದಲ್ಲಿ ಸ್ಟೇಟ್ಮೆಂಟ್ ಟು ಎಕ್ಸಿಕ್ಯೂಟ್ ಆಗುತ್ತದೆ.
01:29 ಈಗ, ನಾವು ಎಲ್ಸ್ ಇಫ್ ಸ್ಟೇಟ್ಮೆಂಟ್ ನ ಹರಿವನ್ನು ತಿಳಿಯೋಣ.
01:32 ಇಲ್ಲಿ, ಕಂಡೀಶನ್ ಒನ್(condition1) ಸರಿಯಾಗಿದ್ದಲ್ಲಿ ಸ್ಟೇಟ್ಮೆಂಟ್ ಒನ್ (statement1)ಎಕ್ಸಿಕ್ಯೂಟ್ ಆಗುತ್ತದೆ,
01:41 condition1 ತಪ್ಪಾಗಿದ್ದಲ್ಲಿ, ಮತ್ತೊಂದು ಕಂಡೀಶನ್ ಆದ condition2 ಅನ್ನು ಪರಿಶೀಲಿಸುತ್ತದೆ,
01:49 condition2 ಸರಿಯಾಗಿದ್ದಲ್ಲಿ, statement3ಎಕ್ಸಿಕ್ಯೂಟ್ ಆಗುತ್ತದೆ,
01:54 ಮತ್ತು condition2 ತಪ್ಪಾಗಿದ್ದಲ್ಲಿ statement2ಎಕ್ಸಿಕ್ಯೂಟ್ ಆಗುತ್ತದೆ.
02:02 ಈಗ, ನಮ್ಮ ಪ್ರೊಗ್ರಾಮ್ ಅನ್ನು ನೋಡೋಣ.
02:06 ನಾನೀಗಾಗಲೇ ಪ್ರೊಗ್ರಾಮ್ ಅನ್ನು ಎಡಿಟರ್ ನಲ್ಲಿ ಟೈಪ್ ಮಾಡಿದ್ದೇನೆ.
02:09 ಹಾಗಾಗಿ ಅದನ್ನು ಒಪನ್ ಮಾಡೋಣ.
02:13 ನಮ್ಮ ಫೈಲ್ ನ ಹೆಸರು ಇಫ್ ಎಸ್ ಟಿ ಎಮ್ ಟಿ(ifstmt) ಡಾಟ್ c ಎಂದು ಗಮದಲ್ಲಿಡಿ.
02:18 ಈ ಪ್ರೊಗ್ರಾಮ್ ನಲ್ಲಿ ಎರಡು ಸಂಖ್ಯೆಗಳ ಮೊತ್ತವನ್ನು ಕಂಡುಹಿಡಿದು, ಕೆಲವು ಕಂಡೀಶನ್ ಗಳನ್ನು ಪರಿಶೀಲಿಸುತ್ತೇವೆ.
02:26 ಈಗ, ಕೋಡ್ ಅನ್ನು ವಿವರಿಸುತ್ತೇನೆ.
02:30 ಇದು ನಮ್ಮ ಹೆಡರ್ ಫೈಲ್.
02:34 ಇದು ನಮ್ಮ ಮೈನ್ ಫಂಕ್ಷನ್.
02:38 ಇಲ್ಲಿ ನಾವು ಮೂರು ಇಂಟಿಜರ್ ವೇರಿಯೇಬಲ್ a, b ಮತ್ತು ಸಮ್(sum) ಗಳನ್ನು ಡಿಕ್ಲೇರ್ ಮಾಡಿದ್ದೇವೆ.
02:46 ಇಲ್ಲಿ, ನಾವು ಯೂಸರ್ ಇಂದ ಇನ್ಪುಟ್ ಕೇಳುತ್ತಿದ್ದೇವೆ.
02:49 a ಮತ್ತು b ಯ ಮೌಲ್ಯವನ್ನು ಯೂಸರ್ ಕೊಡುತ್ತಾನೆ.
02:52 ಮೌಲ್ಯಗಳನ್ನು ವೇರಿಯೇಬಲ್ a ಮತ್ತು ವೇರಿಯೇಬಲ್ b ಯಲ್ಲಿ ಇಡಲಾಗುತ್ತದೆ.
02:58 ಸ್ಕ್ಯಾನ್ ಎಫ್(scanf) ಫಂಕ್ಷನ್, ಡಾಟಾವನ್ನು ಕಂಸೋಲ್ ಇಂದ ಪಡೆಯುತ್ತದೆ,
03:02 ನಂತರ ಕೊಟ್ಟ ವೇರಿಯೇಬಲ್ ನಲ್ಲಿ ಇಡುತ್ತದೆ.
03:06 scanf ನಲ್ಲಿರುವ ಫಾರ್ಮ್ಯಾಟ್ ಸ್ಪೆಸಿಫೈರ್, ಡಾಟಾದ ಟೈಪ್ ಅನ್ನು ತಿಳಿಯಲು ಸಹಾಯ ಮಾಡುತ್ತದೆ.
03:10 ಇಲ್ಲಿರುವ ಪರ್ಸೆಂಟ್ ಡಿ, ನಾವು ಇಂಟಿಜರ್ ಡಾಟಾ ಟೈಪ್ ಅನ್ನು ಉಪಯೋಗಿಸುತ್ತಿದ್ದೇವೆ ಎಂಬುದನ್ನು ಸೂಚಿಸುತ್ತದೆ.
03:18 ಇಲ್ಲಿ a ಮತ್ತು b ಯ ಮೌಲ್ಯಗಳನ್ನು ಕೂಡುತ್ತೇವೆ.
03:22 ಮೊತ್ತವನ್ನು ಸಮ್ ನಲ್ಲಿ ಇಡುತ್ತೇವೆ.
03:25 ನಂತರ ಫಲಿತಾಂಶವನ್ನು ಪ್ರಿಂಟ್ ಮಾಡುತ್ತೇವೆ.
03:29 ಇದು ನಮ್ಮ ಇಫ್ ಸ್ಟೇಟ್ಮೆಂಟ್.
03:30 ಇಲ್ಲಿ, ಸಮ್ ಇಪ್ಪತ್ತಕ್ಕಿಂತ ದೊಡ್ಡದೇ ಎಂದು ಕಂಡೀಶನ್ ಪರಿಶೀಲಿಸುತ್ತೇವೆ.
03:36 ಕಂಡೀಶನ್ ಸರಿಯಾಗಿದ್ದಲ್ಲಿ, ಸಮ್ ಈಸ್ ಗ್ರೇಟರ್ ದೆನ್ ಟ್ವೆಂಟಿ ಎಂದು ಪ್ರಿಂಟ್ ಮಾಡುತ್ತೇವೆ.
03:42 ಈಗ, ಈ ಲೈನ್ ಗಳನ್ನು ಕಮೆಂಟ್ ಮಾಡೋಣ.
03:48 ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್.
03:51 ಈಗ, save ಒತ್ತಿ.
03:53 ಮೊದಲು, ಇಫ್ ಸ್ಟೇಟ್ಮೆಂಟ್ ನ ಎಕ್ಸಿಕ್ಯೂಶನ್ ನೋಡೋಣ.
03:58 ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ.
04:09 ಕಂಪೈಲ್ ಮಾಡಲು, “gcc”ಸ್ಪೇಸ್ ಇಫ್ ಎಸ್ ಟಿ ಎಮ್ ಟಿ(ifstmt)ಡಾಟ್ c ಸ್ಪೇಸ್ ಹೈಫನ್(-) ಒ (O) ಸ್ಪೇಸ್ ಇಫ್(if)ಎಂದು ಟೈಪ್ ಮಾಡಿ, Enter ಒತ್ತಿ.
04:20 ಎಕ್ಸಿಕ್ಯೂಟ್ ಮಾಡಲು ಡಾಟ್ ಸ್ಲ್ಯಾಶ್ ಇಫ್ ಎಂದು ಟೈಪ್ ಮಾಡಿ, Enter ಒತ್ತಿ.
04:26 ಎಂಟರ್ ದ ವ್ಯಾಲ್ಯೂ ಆಫ್ a ಎಂಡ್ b ಎಂದು ತೋರಿಸುತ್ತದೆ.
04:31 ಹತ್ತು ಮತ್ತು ಹನ್ನೆರಡು ಎಂದು ಮೌಲ್ಯಗಳನ್ನು ಕೊಡುತ್ತೇನೆ.
04:38 ಸಮ್ ಆಫ್ a ಎಂಡ್ b ಈಸ್ ಟ್ವೆಂಟಿಟು. ಸಮ್ ಈಸ್ ಗ್ರೇಟರ್ ದಾನ್ ಟ್ವೆಂಟಿ ಎಂದು ಔಟ್ ಪುಟ್ ತೋರಿಸುತ್ತದೆ.
04:45 ಈಗ, ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
04:48 ಇನ್ನೊಂದು ಕಂಡೀಶನ್ ಅನ್ನು ಪರಿಶೀಲಿಸೋಣ.
04:52 ಇಲ್ಲಿಂದ ಕಮೆಂಟ್ ತೆಗೆಯುತ್ತೇನೆ.
04:56 ಇಲ್ಲಿ ಕಮೆಂಟ್ ಮಾಡುತ್ತೇನೆ.
05:00 ಈಗ, save ಒತ್ತಿ.
05:03 ಇದು ನಮ್ಮ ಎಲ್ಸಿಫ್ ಸ್ಟೇಟ್ಮೆಂಟ್.
05:05 ಇಲ್ಲಿ, ನಾವು, ಸಮ್ ಹತ್ತಕ್ಕಿಂತ ದೊಡ್ಡದೇ? ಎಂದು ಇನ್ನೊಂದು ಕಂಡೀಶನ್ ಅನ್ನು ಪರಿಶೀಲಿಸೋಣ.
05:11 ಕಂಡೀಶನ್ ಸರಿಯಾಗಿದ್ದಲ್ಲಿ ಸಮ್ ಈಸ್ ಗ್ರೇಟರ್ ದೆನ್ ಟೆನ್ ಎಂಡ್ ಲೆಸ್ ದೆನ್ ಟ್ವೆಂಟಿ ಎಂದು ಪ್ರಿಂಟ್ ಮಾಡುತ್ತೇವೆ.
05:18 ಈಗ ನಮ್ಮ ಟರ್ಮಿನಲ್ ಗೆ ಹಿಂತಿರುಗಿ.
05:20 ಮೊದಲಿನಂತೆ ಕಂಪೈಲ್ ಮಾಡಿ.
05:23 ಮೊದಲಿನಂತೆ ಎಕ್ಸಿಕ್ಯೂಟ್ ಮಾಡೋಣ.
05:26 ಎಂಟರ್ ದ ವ್ಯಾಲ್ಯೂ ಆಫ್ a ಎಂಡ್ b ಎಂದು ತೋರಿಸುತ್ತದೆ.
05:30 ಹತ್ತು ಮತ್ತು ಎರಡು ಎಂದು ಮೌಲ್ಯಗಳನ್ನು ಕೊಡುತ್ತೇನೆ.
05:35 ಸಮ್ ಆಫ್ a ಎಂಡ್ b ಈಸ್ ಟ್ವೆಲ್ವ್. ಸಮ್ ಈಸ್ ಗ್ರೇಟರ್ ದಾನ್ ಟೆನ್ ಎಂಡ್ ಲೆಸ್ ದಾನ್ ಟ್ವೆಂಟಿ ಎಂದು ಔಟ್ ಪುಟ್ ತೋರಿಸುತ್ತದೆ.
05:42 ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡುತ್ತೇನೆ.
05:44 ಈಗ, ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
05:48 ಇಲ್ಲಿ ಮತ್ತು ಇಲ್ಲಿಂದ ಕಮೆಂಟ್ ಅನ್ನು ತೆಗೆಯುತ್ತೇನೆ. ಈಗ, Save ಒತ್ತಿ.
05:56 ಮೇಲಿನ ಎರಡೂ ಕಂಡೀಶನ್ ಗಳೂ ತಪ್ಪಾಗಿದ್ದಲ್ಲಿ, ಸಮ್ ಈಸ್ ಲೆಸ್ ದೆನ್ ಟೆನ್ ಎಂದು ಪ್ರಿಂಟ್ ಮಾಡುತ್ತೇವೆ.
06:04 ಇದು ನಮ್ಮ ಎಲ್ಸ್ ಸ್ಟೇಟ್ಮೆಂಟ್.
06:07 ಈಗ, ಎಕ್ಸಿಕ್ಯೂಟ್ ಮಾಡಿ ನೋಡೋಣ. ನಮ್ಮ ಟರ್ಮಿನಲ್ ಗೆ ಹಿಂತಿರುಗಿ.
06:11 ಮೊದಲಿನಂತೆ ಕಂಪೈಲ್ ಮಾಡಿ. ಮೊದಲಿನಂತೆ ಎಕ್ಸಿಕ್ಯೂಟ್ ಮಾಡಿ.
06:18 ಎಂಟರ್ ದ ವ್ಯಾಲ್ಯೂ ಆಫ್ a ಎಂಡ್ b ಎಂದು ತೋರಿಸುತ್ತದೆ.
06:22 ಮೂರು ಮತ್ತು ಐದು ಎಂದು ಮೌಲ್ಯಗಳನ್ನು ಕೊಡುತ್ತೇನೆ.
06:27 ಸಮ್ ಆಫ್ a ಎಂಡ್ b ಈಸ್ ಏಟ್(8). ಸಮ್ ಈಸ್ ಲೆಸ್ ದೆನ್ ಟೆನ್ ಎಂದು ಔಟ್ ಪುಟ್ ತೋರಿಸುತ್ತದೆ.
06:34 ಈಗ ನಾವು ಸಾಮಾನ್ಯವಾಗಿ ಆಗುವ ಕೆಲವು ಎರರ್ ಗಳನ್ನು ನೋಡೋಣ.
06:38 ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
06:41 ಇಲ್ಲಿ, ಇಫ್ ಸ್ಟೇಟ್ಮೆಂಟ್ ನ ಕೊನೆಯಲ್ಲಿ ಸೆಮಿಕೊಲನ್ ಅನ್ನು ಟೈಪ್ ಮಾಡುತ್ತೇನೆ ಎಂದೆಣಿಸಿ.
06:47 ಈಗ ಏನಾಗುತ್ತದೆ ಎಂದು ನೋಡೋಣ. Save ಒತ್ತಿ.
06:50 ಎಕ್ಸಿಕ್ಯೂಟ್ ಮಾಡೋಣ. ನಮ್ಮ ಟರ್ಮಿನಲ್ ಗೆ ಹಿಂತಿರುಗಿ.
06:53 ಮೊದಲಿನಂತೆ ಕಂಪೈಲ್ ಮಾಡೋಣ.
06:56 ಎಲ್ಸ್ ವಿತೌಟ್ ಅ ಪ್ರಿವಿಯಸ್ ಇಫ್ ಎಂದು ಎರರ್ ತೋರಿಸುತ್ತದೆ.
07:02 ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. ಇದು ಸಿಂಟಾಕ್ಸ್ ಎರರ್.
07:07 ಇಫ್ ಸ್ಟೇಟ್ಮೆಂಟ್ ಯಾವಾಗಲೂ ಸೆಮಿಕೊಲನ್ ನಿಂದ ಅಂತ್ಯಗೊಳ್ಳುವುದಿಲ್ಲ.
07:10 ಮತ್ತು, ಎಲ್ಸಿಫ್ ಸ್ಟೇಟ್ಮೆಂಟ್ , ಇಫ್ ಸ್ಟೇಟ್ಮೆಂಟ್ ಇಲ್ಲದೆ ಕೆಲಸ ಮಾಡುವುದಿಲ್ಲ.
07:16 ಈಗ ಎರರ್ ಅನ್ನು ಸರಿಪಡಿಸೋಣ. ಇಲ್ಲಿ ಸೆಮಿಕೊಲನ್ ಅನ್ನು ಡಿಲೀಟ್ ಮಾಡಿ.
07:22 ಈಗ Save ಒತ್ತಿ.
07:25 ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹಿಂತಿರುಗಿ.
07:29 ಮೊದಲಿನಂತೆ ಕಂಪೈಲ್ ಮಾಡಿ. ಮೊದಲಿನಂತೆ ಎಕ್ಸಿಕ್ಯೂಟ್ ಮಾಡಿ.
07:35 ಎಂಟರ್ ದ ವ್ಯಾಲ್ಯೂ ಆಫ್ a ಎಂಡ್ b.
07:37 ಮೂರು ಮತ್ತು ಆರು ಎಂದು ಮೌಲ್ಯಗಳನ್ನು ಕೊಡುತ್ತೇನೆ.
07:43 ಸಮ್ ಆಫ್ a ಎಂಡ್ b ಈಸ್ ನೈನ್. ಸಮ್ ಈಸ್ ಲೆಸ್ ದಾನ್ ಟೆನ್ ಎಂದು ಔಟ್ ಪುಟ್ ತೋರಿಸುತ್ತದೆ.
07:52 ಈಗ, ಇದೇ ಪ್ರೊಗ್ರಾಮ್ ಅನ್ನು c++ ನಲ್ಲಿ ಹೇಗೆ ಎಕ್ಸಿಕ್ಯೂಟ್ ಮಾಡುವುದೆಂದು ನೋಡೋಣ.
07:57 ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
07:59 ಇಲ್ಲಿ ಕೆಲವನ್ನು ಬದಲಾಯಿಸುತ್ತೇನೆ.
08:03 Shift, Ctrl ಮತ್ತು S ಕೀ ಗಳನ್ನು ನಿಮ್ಮ ಕೀಬೋರ್ಡ್ ನಲ್ಲಿ ಒಂದೇ ಬಾರಿಗೆ ಒತ್ತಿ.
08:11 ಈಗ ಫೈಲ್ ಅನ್ನು ಡಾಟ್ cpp ಎಂಬ ಎಕ್ಸ್ಟೆಂಶನ್ ನೊಂದಿಗೆ ಸೇವ್ ಮಾಡಿ. Save ಒತ್ತಿ.
08:20 ಹೆಡರ್ ಫೈಲ್ ಅನ್ನು ಐಒಸ್ಟ್ರೀಮ್ ಎಂದು ಬದಲಾಯಿಸೋಣ.
08:26 ಯೂಸಿಂಗ್ ಸ್ಟೇಟ್ಮೆಂಟ್ ಅನ್ನು ಇಲ್ಲಿ ಸೇರಿಸೋಣ.
08:30 ಈಗ ಸರ್ಚ್ ಫಾರ್ ಎಂಡ್ ರಿಪ್ಲೇಸ್ ಟೆಕ್ಸ್ಟ್ ಎಂಬ ಆಪ್ಶನ್ ಒತ್ತಿ.
08:35 ಪ್ರಿನ್ಟ್ ಎಫ್ ಸ್ಟೇಟ್ಮೆಂಟ್ ಅನ್ನು ಸಿಔಟ್ ಸ್ಟೇಟ್ಮೆಂಟ್ ಇಂದ ರಿಪ್ಲೇಸ್ ಮಾಡಿ.
08:40 ರಿಪ್ಲೇಸ್ ಆಲ್ ಒತ್ತಿ ಮತ್ತು save ಒತ್ತಿ.
08:46 ಈಗ ಇಲ್ಲಿರುವ, ಕ್ಲೋಸಿಂಗ್ ಬ್ರಾಕೆಟ್ ಗಳನ್ನು ಡಿಲೀಟ್ ಮಾಡಿ.
08:49 ಸ್ಕ್ಯಾನ್ ಎಫ್ ಸ್ಟೇಟ್ಮೆಂಟ್ ಅನ್ನು ಸಿಇನ್ ಸ್ಟೇಟ್ಮೆಂಟ್ ಇಂದ ರಿಪ್ಲೇಸ್ ಮಾಡಿ.
08:54 c++ ನಲ್ಲಿ ಲೈನ್ ಅನ್ನು ರೀಡ್ ಮಾಡಲು ಸಿಇನ್ ಫಂಕ್ಷನ್ ಉಪಯೋಗಿಸುವುದರಿಂದ, ಸಿಇನ್ ಮತ್ತು ಎರಡು ಕ್ಲೋಸಿಂಗ್ ಆಂಗಲ್ ಬ್ರಾಕೆಟ್ ಗಳನ್ನು ಟೈಪ್ ಮಾಡಿ.
09:05 ಈಗ, ಫಾರ್ಮಾಟ್ ಸ್ಪೆಸಿಫೈರ್ ಗಳನ್ನು ಡಿಲೀಟ್ ಮಾಡಿ.
09:09 ”,”(comma) ಮತ್ತು ಆಂಪರ್ಸಾಂಡ್ ಅನ್ನು ಡಿಲೀಟ್ ಮಾಡಿ.
09:12 ಇಲ್ಲಿ ”,”(comma) ಅನ್ನು ಡಿಲೀಟ್ ಮಾಡಿ ಮತ್ತು ಎರಡು ಕ್ಲೋಸಿಂಗ್ ಆಂಗಲ್ ಬ್ರಾಕೆಟ್ ಅನ್ನು ಟೈಪ್ ಮಾಡಿ.
09:17 ಪುನಃ ಆಂಪರ್ಸಾಂಡ್ ಮತ್ತು ಕ್ಲೋಸಿಂಗ್ ಬ್ರಾಕೆಟ್ ಗಳನ್ನು ಡಿಲೀಟ್ ಮಾಡಿ. ಈಗ save ಒತ್ತಿ.
09:25 ಇಲ್ಲಿ ಕ್ಲೋಸಿಂಗ್ ಬ್ರಾಕೆಟ್ ಮತ್ತು ”,”(comma) ಗಳನ್ನು ಡಿಲೀಟ್ ಮಾಡಿ.
09:31 ಈಗ ಬ್ಯಾಕ್ ಸ್ಲ್ಯಾಶ್ ಎನ್ ಮತ್ತು ಫಾರ್ಮಾಟ್ ಸ್ಪೆಸಿಫೈರ್ ಅನ್ನು ಡಿಲೀಟ್ ಮಾಡಿ.
09:37 ಈಗ, ಎರಡು ಒಪನಿಂಗ್ ಆಂಗಲ್ ಬ್ರಾಕೆಟ್ ಅನ್ನು ಟೈಪ್ ಮಾಡಿ.
09:42 ಪುನಃ, ಎರಡು ಒಪನಿಂಗ್ ಆಂಗಲ್ ಬ್ರಾಕೆಟ್ ಮತ್ತು ಡಬಲ್ ಕೋಟ್ಸ್ ಒಳಗೆ ಬ್ಯಾಕ್ ಸ್ಲ್ಯಾಶ್ ಎನ್ ಎಂದು ಟೈಪ್ ಮಾಡಿ.
09:49 ಇಲ್ಲಿಯೂ, ಕ್ಲೋಸಿಂಗ್ ಬ್ರಾಕೆಟ್ ಅನ್ನು ಡಿಲೀಟ್ ಮಾಡೋಣ.
09:53 ಈಗ ಪುನಃ ಇಲ್ಲಿ ಮತ್ತು ಇಲ್ಲಿ ಕ್ಲೋಸಿಂಗ್ ಬ್ರಾಕೆಟ್ ಅನ್ನು ಡಿಲೀಟ್ ಮಾಡಿ.
09:59 ಈಗ, Save ಒತ್ತಿ.
10:02 ಎಕ್ಸಿಕ್ಯೂಟ್ ಮಾಡೋಣ.
10:04 ಟರ್ಮಿನಲ್ ಗೆ ಹಿಂದಿರುಗಿ. ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡುತ್ತೇನೆ.
10:10 ಕಂಪೈಲ್ ಮಾಡಲು g++ ಸ್ಪೇಸ್ ifstmt ಡಾಟ್ cpp ಸ್ಪೇಸ್ ಹೈಫನ್ ಒ ಸ್ಪೇಸ್ ಇಫ್ ಒನ್ ಎಂದು ಟೈಪ್ ಮಾಡಿ.
10:20 ifstmt ಡಾಟ್ c ಯ if ಔಟ್ ಪುಟ್ ಪಾರಾಮೀಟರ್ ಒವರ್ ರೈಟ್ ಆಗದಿರಲು ಇಲ್ಲಿ if1 ಎಂದು ಇದೆ.
10:31 ಈಗ Enter ಒತ್ತಿ.
10:32 ಎಕ್ಸಿಕ್ಯೂಟ್ ಮಾಡಲು ಡಾಟ್ ಸ್ಲ್ಯಾಶ್ if1 ಎಂದು ಟೈಪ್ ಮಾಡಿ Enter ಒತ್ತಿ.
10:39 ಎಂಟರ್ ದ ವ್ಯಾಲ್ಯೂ ಆಫ್ a ಎಂಡ್ b. ನಾನು ಇಪ್ಪತ್ತು ಮತ್ತು ಹತ್ತು ಎಂದು ಮೌಲ್ಯಗಳನ್ನು ಕೊಡುತ್ತೇನೆ.
10:48 ಸಮ್ ಆಫ್ a ಎಂಡ್ b ಈಸ್ ಥರ್ಟಿ. ಸಮ್ ಈಸ್ ಗ್ರೇಟರ್ ದೆನ್ ಟ್ವೆನ್ಟಿ. ಎಂದು ಔಟ್ ಪುಟ್ ತೋರಿಸುತ್ತದೆ.
10:56 ಇಲ್ಲಿಗೆ, ಈ ಟ್ಯುಟೋರಿಯಲ್ ಅಂತ್ಯಗೊಳ್ಳುತ್ತದೆ.
10:59 ಈಗ ನಮ್ಮ ಸ್ಲೈಡ್ ಗೆ ಹಿಂದಿರುಗಿ.
11:02 ಸಾರಾಂಶ ತಿಳಿಯೋಣ.
11:04 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತ ಅಂಶಗಳು : ಇಫ್ ಸ್ಟೇಟ್ಮೆಂಟ್, ಉದಾಹರಣೆಗೆ ಇಫ್ ಕಂಡೀಶನ್
11:11 ಮತ್ತು ಎಲ್ಸಿಫ್ ಸ್ಟೇಟ್ಮೆಂಟ್ ಉದಾಹರಣೆಗೆ ಎಲ್ಸ್ ಇಫ್ ಕಂಡೀಶನ್.
11:17 a ಎಂಬುದು b ಗಿಂತ ದೊಡ್ಡದೋ ಅಥವಾ ಸಣ್ಣದೋ ಎಂದು ಪರಿಶೀಲಿಸಲು ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ.
11:24 ಸುಳಿವು : ಇಫ್ ಸ್ಟೇಟ್ಮೆಂಟ್ ಅನ್ನು ಉಪಯೋಗಿಸಿ.
11:28 a, b ಅಥವಾ c ಗಳಲ್ಲಿ ಯಾವುದು ದೊಡ್ಡದು ಎಂದು ಪರಿಶೀಲಿಸಲು ಮತ್ತೊಂದು ಪ್ರೊಗ್ರಾಮ್ ಬರೆಯಿರಿ.
11:34 ಸುಳಿವು : ಎಲ್ಸ್ ಇಫ್ ಸ್ಟೇಟ್ಮೆಂಟ್ ಅನ್ನು ಉಪಯೋಗಿಸಿ.
11:38 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ.
11:41 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
11:44 ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
11:48 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್,
11:50 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ.
11:54 ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
11:57 ಹೆಚ್ಚಿನ ಮಾಹಿತಿಗಾಗಿ,contact@spoken-tutorial.org ಗೆ ಬರೆಯಿರಿ.
12:04 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ.
12:09 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
12:15 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ.
12:20 ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Vasudeva ahitanal