Blender/C2/Types-of-Windows-Properties-Part-4/Kannada

From Script | Spoken-Tutorial
Revision as of 15:59, 29 October 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:04 ಬ್ಲೆಂಡರ್ ನ ಟ್ಯುಟೋರಿಯಲ್ಸ್ ಸರಣಿಗೆ ಸ್ವಾಗತ.
00:07 ಈ ಟ್ಯುಟೋರಿಯಲ್, ಬ್ಲೆಂಡರ್ 2.59 ನಲ್ಲಿಯ ಪ್ರಾಪರ್ಟೀಸ್ ವಿಂಡೋ ಕುರಿತು ಆಗಿದೆ.
00:15 ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೇಕರ್.
00:28 ಈ ಟ್ಯುಟೋರಿಯಲ್ ಅನ್ನು ನೋಡಿದ ಮೇಲೆ, ಪ್ರಾಪರ್ಟೀಸ್ ವಿಂಡೋ ಎಂದರೇನು;
00:33 ಪ್ರಾಪರ್ಟೀಸ್ ವಿಂಡೋದಲ್ಲಿ ಮೆಟೀರಿಯಲ್ ಪ್ಯಾನಲ್ ಎಂದರೇನು ;
00:37 ಮತ್ತು ಪ್ರಾಪರ್ಟೀಸ್ ವಿಂಡೋದ ಮೆಟೀರಿಯಲ್ ಪ್ಯಾನಲ್ ನಲ್ಲಿ ಇರುವ ವಿವಿಧ ಸೆಟ್ಟಿಂಗ್ ಗಳು ಮುಂತಾದವುಗಳ ಬಗೆಗೆ ನಾವು ಕಲಿಯುವೆವು.
00:44 ಬ್ಲೆಂಡರ್ ಇಂಟರ್ಫೇಸ್ ನ ಮೂಲ ಅಂಶಗಳನ್ನು ನೀವು ತಿಳಿದಿರುವಿರಿ ಎಂದು ನಾನು ಭಾವಿಸುತ್ತೇನೆ.
00:49 ಇಲ್ಲವಾದಲ್ಲಿ, ದಯವಿಟ್ಟು ನಮ್ಮ ಮೊದಲಿನ ಟ್ಯುಟೋರಿಯಲ್ Basic Description of the Blender Interface (ಬೇಸಿಕ್ ಡಿಸ್ಕ್ರಿಪ್ಶನ್ ಆಫ್ ದ ಬ್ಲೆಂಡರ್ ಇಂಟರ್ಫೇಸ್) ಎನ್ನುವುದನ್ನು ನೋಡಿರಿ.
00:57 ಈ ಪ್ರಾಪರ್ಟೀಸ್ ವಿಂಡೋ ಎನ್ನುವುದು ನಮ್ಮ ಸ್ಕ್ರೀನ್ ನ ಬಲಬದಿಗೆ ಇರುತ್ತದೆ.
01:03 ಪ್ರಾಪರ್ಟೀಸ್ ವಿಂಡೋದ ಮೊದಲಿನ ಪ್ಯಾನಲ್ ಗಳು ಹಾಗೂ ಅವುಗಳ ಸೆಟ್ಟಿಂಗ್ ಗಳನ್ನು ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಈಗಾಗಲೇ ನೋಡಿದ್ದೇವೆ.
01:10 ಪ್ರಾಪರ್ಟೀಸ್ ವಿಂಡೋದಲ್ಲಿಯ ಮುಂದಿನ ಪ್ಯಾನಲ್ ಅನ್ನು ನಾವು ನೋಡೋಣ.
01:14 ಮೊದಲು, ಉತ್ತಮ ವೀಕ್ಷಣೆ ಮತ್ತು ಗ್ರಹಿಕೆಗಳಿಗಾಗಿ ನಮ್ಮ ಪ್ರಾಪರ್ಟೀಸ್ ವಿಂಡೋವನ್ನು ನಾವು ರಿಸೈಜ್ ಮಾಡಲೇಬೇಕು.
01:20 ಪ್ರಾಪರ್ಟೀಸ್ ವಿಂಡೋದ ಎಡ ಅಂಚಿನ ಮೇಲೆ ಲೆಫ್ಟ್ ಕ್ಲಿಕ್ ಮಾಡಿ ಹಿಡಿಯಿರಿ ಮತ್ತು ಎಡಗಡೆಗೆ ಎಳೆಯಿರಿ.
01:28 ಪ್ರಾಪರ್ಟೀಸ್ ವಿಂಡೋದಲ್ಲಿಯ ಆಯ್ಕೆಗಳನ್ನು ಈಗ ಹೆಚ್ಚು ಸ್ಪಷ್ಟವಾಗಿ ನಾವು ನೋಡಬಹುದು.
01:33 ಬ್ಲೆಂಡರ್ ನ ವಿಂಡೋ ಗಳನ್ನು ಹೇಗೆ ರಿಸೈಜ್ ಮಾಡುವದೆಂದು ತಿಳಿಯಲು, How to Change Window Types in Blender (ಹೌ ಟು ಚೇಂಜ್ ವಿಂಡೋ ಟೈಪ್ಸ್ ಇನ್ ಬ್ಲೆಂಡರ್) ಎನ್ನುವ ನಮ್ಮ ಟ್ಯುಟೋರಿಯಲ್ ನೋಡಿರಿ.
01:43 ಪ್ರಾಪರ್ಟೀಸ್ ವಿಂಡೋದ ಮೇಲಿನ ಸಾಲಿಗೆ ಹೋಗಿರಿ.
01:51 ಪ್ರಾಪರ್ಟೀಸ್ ವಿಂಡೋದ ಮೇಲಿನ ಸಾಲಿನಲ್ಲಿರುವ sphere ಐಕಾನ್ ದ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
01:58 ಇದು ಮೆಟೀರಿಯಲ್ ಪ್ಯಾನಲ್ ಆಗಿದೆ. ಇಲ್ಲಿ ನಾವು ಆಕ್ಟಿವ್ ಒಬ್ಜೆಕ್ಟ್ ಗೆ ಮೆಟೀರಿಯಲ್ ಅನ್ನು ಸೇರಿಸಬಹುದಾಗಿದೆ.
02:05 ಡೀಫಾಲ್ಟ್ ಆಗಿ, ಕ್ಯೂಬ್ ಗೆ ಒಂದು ಸ್ಟಾಂಡರ್ಡ್ ಮೆಟೀರಿಯಲ್ ಸೇರಿಸಲ್ಪಟ್ಟಿದೆ.
02:10 ಈ ಮೆಟೀರಿಯಲ್, blue ಬಣ್ಣದಲ್ಲಿ ಹೈಲೈಟ್ ಮಾಡಿರುವ Material ಸ್ಲಾಟ್ ನ ಭಾಗವಾಗಿದೆ.
02:15 ಹೊಸದೊಂದು ಮೆಟೀರಿಯಲ್ ಸ್ಲಾಟ್ ಅನ್ನು ಸೇರಿಸಲು, ಮೆಟೀರಿಯಲ್ ಪ್ಯಾನಲ್ ನ ಮೇಲ್ಗಡೆ ಬಲಮೂಲೆಯಲ್ಲಿರುವ plus sign ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
02:24 ಹೊಸದೊಂದು ಮೆಟೀರಿಯಲ್ ಅನ್ನು ಸೇರಿಸಲು New ದ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಡೀಫಾಲ್ಟ್ ಆಗಿ, ಎಲ್ಲ ಹೊಸ ಮೆಟೀರಿಯಲ್ ಗಳು ಮೂಲ ಸೆಟ್ಟಿಂಗ್ ಗಳೊಂದಿಗೆ ಸೇರಿಸಲ್ಪಟ್ಟಿವೆ.
02:34 ಹೊಸ ಮೆಟೀರಿಯಲ್ ಸ್ಲಾಟ್ ಅನ್ನು ತೆಗೆದುಹಾಕಲು ಪ್ಲಸ್ ಸೈನ್ ನ ಕೆಳಗಿರುವ minus sign ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
02:41 ನಾವು ನಮ್ಮ ಮೊದಲಿನ ಮೆಟೀರಿಯಲ್ ಗೆ ಹಿಂತಿರುಗಿದ್ದೇವೆ. ನಾವು ಇದನ್ನು White ಎಂದು ಮರುಹೆಸರಿಸೋಣ.
02:46 ಮೆಟೀರಿಯಲ್ ಸ್ಲಾಟ್ ಬಾಕ್ಸ್ ಮತ್ತು ಪ್ರಿವ್ಯೂ ವಿಂಡೋದ ನಡುವೆ ಇರುವ ID ನೇಮ್ ಬಾರ್ ನಲ್ಲಿ Material ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
02:55 ನಿಮ್ಮ ಕೀಬೋರ್ಡ್ ನ ಮೇಲೆ White ಎಂದು ಟೈಪ್ ಮಾಡಿರಿ ಮತ್ತು Enter ಕೀಯನ್ನು ಒತ್ತಿರಿ.
03:01 ಮೆಟೀರಿಯಲ್ ಮತ್ತು ಮೆಟೀರಿಯಲ್ ಸ್ಲಾಟ್, ಎರಡರಲ್ಲಿಯೂ ಹೆಸರುಗಳು White ಎಂದು ಬದಲಾಗಿವೆ.
03:06 ಮೆಟೀರಿಯಲ್ ಸ್ಲಾಟ್ ಅನ್ನು ಸೇರಿಸದೆಯೇ ನಾವು ಒಂದು ಹೊಸ ಮೆಟೀರಿಯಲ್ ಅನ್ನು ಸಹ ಸೇರಿಸಬಹುದು.
03:12 ಮೆಟೀರಿಯಲ್ ID ನೇಮ್ ಬಾರ್ ನ ಬಲಗಡೆಯಲ್ಲಿರುವ plus sign ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
03:18 ಮೆಟೀರಿಯಲ್ ಸ್ಲಾಟ್ ಗೆ ಒಂದು ಹೊಸ ಮೆಟೀರಿಯಲ್, ಸೇರಿಸಲ್ಪಟ್ಟಿದೆ. ಇದನ್ನು red ಎಂದು ಮರುಹೆಸರಿಸಿರಿ. ನೀವು ಊಹಿಸಿದ್ದೀರಿ.
03:27 ನಾವು ಈ ಮೆಟೀರಿಯಲ್ ನ ಬಣ್ಣವನ್ನು ಬಿಳಿಯಿಂದ ಕೆಂಪು ಬಣ್ಣಕ್ಕೆ ಬದಲಾಯಿಸುತ್ತಿದ್ದೇವೆ.
03:31 ಆದರೆ, ಮೊದಲು ನಾವು ಮೆಟೀರಿಯಲ್ ID ನೇಮ್ ಬಾರ್ ನ ಕೆಳಗೆ ಇರುವ ಬಟನ್ ಗಳ ಸಾಲಿನ ಕಡೆಗೆ ಒಮ್ಮೆ ನೋಡೋಣ.
03:37 Surface ಎನ್ನುವುದು, ಆಕ್ಟಿವ್ ಒಬ್ಜೆಕ್ಟ್ ನ ಮೆಟೀರಿಯಲ್ ಅನ್ನು ಅದರ ಹೊರಮೈಯ ಹಾಗೆ ರೆಂಡರ್ ಮಾಡುತ್ತದೆ.
03:44 ಇದು ಬ್ಲೆಂಡರ್ ನಲ್ಲಿ, ಡೀಫಾಲ್ಟ್ ರೆಂಡರ್ ಮೆಟೀರಿಯಲ್ ಆಗಿದೆ.
03:48 Wire ಎನ್ನುವುದು ಮೆಟೀರಿಯಲ್ ಅನ್ನು, ಒಬ್ಜೆಕ್ಟ್ ನ ಬಹುಭುಜಾಕೃತಿಗಳ ಅಂಚುಗಳನ್ನು ಮಾತ್ರ ತೋರಿಸುವ, ತಂತಿಯ ಜಾಲರಿಯ ಹಾಗೆ ರೆಂಡರ್ ಮಾಡುತ್ತದೆ.
03:55 ಇದು ಮಾಡೆಲಿಂಗ್ ಮತ್ತು ರೆಂಡರಿಂಗ್ ಗಳ ಸಮಯವನ್ನು ಉಳಿಸುವ ಒಂದು ಉಪಯುಕ್ತ ಟೂಲ್ ಆಗಿದೆ.
04:00 ವೈಯರ್ಡ್ ಮೆಶ್, ಎಡ್ಜಸ್ ಮತ್ತು ಪಾಲಿಗನ್ಗಳನ್ನು ಕುರಿತು, ಬ್ಲೆಂಡರ್ ನಲ್ಲಿ ಮಾಡೆಲಿಂಗ್ ನ ಬಗೆಗೆ ಇರುವ ಹೆಚ್ಚು ಮುಂದುವರಿದ ಟ್ಯುಟೋರಿಯಲ್ ಗಳಲ್ಲಿ, ನಾವು ವಿವರವಾಗಿ ಕಲಿಯುವೆವು.
04:09 Volume ಎನ್ನುವುದು, ಮೆಟೀರಿಯಲ್ ಅನ್ನು ಆಕ್ಟಿವ್ ಒಬ್ಜೆಕ್ಟ್ ನ ಸಂಪೂರ್ಣ ಗಾತ್ರದಂತೆ ರೆಂಡರ್ ಮಾಡುತ್ತದೆ.
04:15 ಇದರ ಮೆಟೀರಿಯಲ್ ಸೆಟ್ಟಿಂಗ್ ಗಳು ಸರ್ಫೇಸ್ ಹಾಗೂ ವೈಯರ್ ಗಳ ಸೆಟ್ಟಿಂಗ್ ಗಳಿಗಿಂತ ವಿಭಿನ್ನವಾಗಿವೆ.
04:20 ನಂತರದ ಟ್ಯುಟೋರಿಯಲ್ ಗಳಲ್ಲಿ ನಾವು ವಾಲ್ಯೂಮ್ ಮೆಟೀರಿಯಲ್ ಅನ್ನು ಬಳಸುವಾಗ ಈ ಸೆಟ್ಟಿಂಗ್ ಗಳನ್ನು ವಿವರವಾಗಿ ನೋಡುವೆವು.
04:26 Halo (ಹ್ಯಾಲೋ) ಎನ್ನುವುದು, ಮೆಟೀರಿಯಲ್ ಅನ್ನು ಆಕ್ಟಿವ್ ಒಬ್ಜೆಕ್ಟ್ ನ ಸುತ್ತಲೂ ಹ್ಯಾಲೊ ಕಣಗಳಂತೆ ರೆಂಡರ್ ಮಾಡುತ್ತದೆ.
04.32 ಮತ್ತೆ, ಮೆಟೀರಿಯಲ್ ಸೆಟ್ಟಿಂಗ್ ಗಳು ಬದಲಾಗಿವೆ.
04:36 ನಂತರದ ಟ್ಯುಟೋರಿಯಲ್ ಗಳಲ್ಲಿ, ನಾವು ಹ್ಯಾಲೊ ಮೆಟೀರಿಯಲ್ ಅನ್ನು ಬಳಸುವಾಗ ಈ ಸೆಟ್ಟಿಂಗ್ ಗಳನ್ನು ವಿವರವಾಗಿ ನೋಡುವೆವು.
04:42 ಇವುಗಳಲ್ಲಿ ಯಾವ ಆಯ್ಕೆಯೂ 3D ವ್ಯೂನಲ್ಲಿ ಕಾಣಿಸುತ್ತಿಲ್ಲ ಎನ್ನುವುದನ್ನು ಗಮನಿಸಿರಿ.
04:47 ಅದು ಏಕೆಂದರೆ, ಇವುಗಳನ್ನು ರೆಂಡರ್ ಡಿಸ್ಪ್ಲೇನಲ್ಲಿ ಮಾತ್ರ ನೋಡಬಹುದು.
04:52 ರೆಂಡರ್ ಡಿಸ್ಪ್ಲೇ ಬಗೆಗೆ ತಿಳಿಯಲು Types of windows Properties part 1 (ಟೈಪ್ಸ್ ಆಫ್ ವಿಂಡೋಸ್ ಪ್ರಾಪರ್ಟೀಸ್ ಪಾರ್ಟ್1) ಎನ್ನುವ ಟ್ಯುಟೋರಿಯಲ್ ಅನ್ನು ನೋಡಿರಿ.
05:02 Surface ಎನ್ನುವಲ್ಲಿಗೆ ಹಿಂದಿರುಗಿರಿ. ಸರ್ಫೇಸ್ ಮೆಟೀರಿಯಲ್ ಗಾಗಿ ಸೆಟ್ಟಿಂಗ್ ಗಳನ್ನು ನಾವು ನೋಡುವೆವು.
05:05 ಕೆಳಗಿರುವದು, ರೆಂಡರ್ ಆದ ಮೆಟೀರಿಯಲ್ ನ ಪ್ರಿವ್ಯೂಅನ್ನು ತೋರಿಸುವ ಪ್ರಿವ್ಯೂ ವಿಂಡೋ ಆಗಿದೆ.
05:17 ಬಲಗಡೆಗೆ, ವಿಭಿನ್ನ ಪ್ರಿವ್ಯೂ ಆಯ್ಕೆಗಳಿಗಾಗಿ ಬಟನ್ ಗಳ ಕಾಲಮ್ ಒಂದು ಇರುತ್ತದೆ.
05:22 Plane
05:24 Sphere
05:26 Cube
05:29 Monkey
05:32 Hair
05:34 ಮತ್ತು Sky. ಈಗ, ನಾವು ನಮ್ಮ ಮೆಟೀರಿಯಲ್ ನ ಬಣ್ಣವನ್ನು ಬಿಳಿಯಿಂದ ಕೆಂಪು ಬಣ್ಣಕ್ಕೆ ಬದಲಾಯಿಸೋಣ.
05:42 Diffuse ಎನ್ನುವಲ್ಲಿಗೆ ಹೋಗಿರಿ. Diffuse ನ ಕೆಳಗಿರುವ ವೈಟ್ ಬಾರ್ ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
05:49 ಒಂದು ಕಲರ್ ಮೆನ್ಯು ಕಾಣಿಸುತ್ತದೆ. ಈ ಮೆನ್ಯುವಿನಿಂದ ನಮಗೆ ಬೇಕಾದ ಯಾವುದೇ ಬಣ್ಣವನ್ನು ಆರಿಸಿಕೊಳ್ಳಬಹುದು. ನಾನು ಕೆಂಪು ಬಣ್ಣವನ್ನು ಆರಿಸಿಕೊಳ್ಳುತ್ತಿದ್ದೇನೆ.
05:59 ಬಣ್ಣದ ವರ್ತುಲದ ಕೇಂದ್ರದಲ್ಲಿರುವ ವೈಟ್ ಡಾಟ್ ಮೇಲೆ ಲೆಫ್ಟ್ ಕ್ಲಿಕ್ ಮಾಡಿ ಹಿಡಿಯಿರಿ.
06:05 ನಿಮ್ಮ ಮೌಸ್ ಅನ್ನು ವರ್ತುಲದ ಕೆಂಪುವಲಯದತ್ತ ಎಳೆಯಿರಿ.
06:11 3D ವ್ಯೂನಲ್ಲಿ ಮತ್ತು ಮೆಟೀರಿಯಲ್ ಪ್ಯಾನಲ್ ನ ಪ್ರಿವ್ಯೂ ವಿಂಡೋದಲ್ಲಿ, ಕ್ಯೂಬ್ ನ ಬಣ್ಣವು ಬಿಳಿಯಿಂದ ಕೆಂಪು ಬಣ್ಣಕ್ಕೆ ಬದಲಾಗುತ್ತದೆ.
06:22 ಇನ್ನೊಂದು ವಿಧವೆಂದರೆ – ಮತ್ತೊಮ್ಮೆ, Diffuse ನ ಕೆಳಗಿರುವ ರೆಡ್ ಬಾರ್ ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
06:28 ಬಣ್ಣದ ವರ್ತುಲದ ಕೆಳಗೆ R, G ಮತ್ತು B ಎನ್ನುವ ಮೂರು ಬಾರ್ ಗಳು ನಿಮಗೆ ಕಾಣುತ್ತಿವೆಯೇ?
06:35 R ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ನಿಮ್ಮ ಕೀಬೋರ್ಡ್ ನ ಮೇಲೆ 1 ಅನ್ನು ಟೈಪ್ ಮಾಡಿ, Enter ಕೀಯನ್ನು ಒತ್ತಿರಿ.
06:43 G ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ನಿಮ್ಮ ಕೀಬೋರ್ಡ್ ನ ಮೇಲೆ 0 ಅನ್ನು ಟೈಪ್ ಮಾಡಿ, Enter ಕೀಯನ್ನು ಒತ್ತಿರಿ.
06:52 B ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ನಿಮ್ಮ ಕೀಬೋರ್ಡ್ ನ ಮೇಲೆ 0 ಅನ್ನು ಟೈಪ್ ಮಾಡಿ Enter ಕೀಯನ್ನು ಒತ್ತಿರಿ. ಈಗ ಕ್ಯೂಬ್ ನ ಬಣ್ಣವು ಪರಿಪೂರ್ಣ ಕೆಂಪಾಗಿದೆ.
07:05 ಹೀಗೆಯೇ, Specular ಎನ್ನುವುದರ ಕೆಳಗಿರುವ ವೈಟ್ ಬಾರ್ ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಕಲರ್ ಮೆನ್ಯುನಲ್ಲಿರುವ ಯಾವುದೇ ಬಣ್ಣವನ್ನು ಆಯ್ಕೆಮಾಡಿರಿ.
07:14 ನಾನು ಹಸಿರು ಬಣ್ಣವನ್ನು ಆರಿಸಿಕೊಳ್ಳುತ್ತಿದ್ದೇನೆ.
07:17 ಹಾಗೆಯೇ, ಕ್ಯೂಬ್ ನ ಮೇಲಿನ ಹೊಳಪು, ಬಿಳಿ ಬಣ್ಣದಿಂದ ತಿಳಿ ಹಸಿರು ಬಣ್ಣಕ್ಕೆ ಬದಲಾಯಿಸಿದ್ದನ್ನು ನೋಡಿರಿ.
07:22 ಈಗ, ನಾನು ವೈಟ್ ಮೆಟೀರಿಯಲ್ ಅನ್ನು ಮತ್ತೆ ಬಳಸಬೇಕಾಗಿದ್ದರೆ? ನಾನು ಅದನ್ನು ಹೇಗೆ ಮರಳಿ ಪಡೆಯುತ್ತೇನೆ?
07:29 Material ಎನ್ನುವುದರ ID ನೇಮ್ ಬಾರ್ ಗೆ ಹೋಗಿರಿ. ಇಲ್ಲಿ, ನೇಮ್ ಬಾರ್ ನ ಎಡಗಡೆಗೆ ಇನ್ನೊಂದು sphere ಐಕಾನ್ ಇರುತ್ತದೆ.
07:37 sphere ಐಕಾನ್ ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಇದು ಮೆಟೀರಿಯಲ್ ನ ಮೆನ್ಯು ಆಗಿದೆ.
07:43 ಸೀನ್ ನಲ್ಲಿ ಬಳಸಿದ ಎಲ್ಲ ಮೆಟೀರಿಯಲ್ ಗಳು ಇಲ್ಲಿ ಲಿಸ್ಟ್ ಮಾಡಲ್ಪಟ್ಟಿವೆ. ಸಧ್ಯಕ್ಕೆ ಎರಡು ಮೆಟೀರಿಯಲ್ ಗಳನ್ನು ಮಾತ್ರ ತೋರಿಸಲಾಗುತ್ತಿದೆ- Red ಮತ್ತು White.
07:53 White ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಮತ್ತೊಮ್ಮೆ, ಕ್ಯೂಬ್, ಕೆಂಪು ಬಣ್ಣದಿಂದ ಬಿಳಿ ಬಣ್ಣಕ್ಕೆ ಬದಲಾಯಿಸಿದೆ.
08:00 Diffuse ಮತ್ತು Specular ಎನ್ನುವ ಈ ಎರಡೂ ಬಾರ್ ಗಳ ಕೆಳಗೆ Intensity ಎನ್ನುವ ಬಾರ್ ಗಳಿವೆ.
08:05 ಡೀಫಾಲ್ಟ್ ಆಗಿ, Diffuse ಎನ್ನುವುದಕ್ಕೆ ಇಂಟೆನ್ಸಿಟಿ ಯು 0.8 ಮತ್ತು Specular ಎನ್ನುವುದಕ್ಕೆ 0.5 ಆಗಿದೆ.
08:15 ಮೆಟೀರಿಯಲ್ ಗೆ ಬೇಕಾದ ಫಿನಿಶ್ ಗೆ ಅನುಸಾರವಾಗಿ ಇವುಗಳನ್ನು ಬದಲಾಯಿಸಬಹುದು.
08:21 ಮ್ಯಾಟ್ ಫಿನಿಶ್ ಎಂದರೆ ಡಿಫ್ಯೂಸ್ ಮತ್ತು ಸ್ಪೆಕ್ಯುಲರ್ ಇವುಗಳೆರಡರ ಇಂಟೆನ್ಸಿಟಿ ಯು ಕಡಿಮೆ ಆಗಿರುವುದು.
08:27 ಉದಾಹರಣೆಗೆ, ನೈಸರ್ಗಿಕ ಮರದ ವಸ್ತುವು ಮ್ಯಾಟ್ ಫಿನಿಶ್ ಅನ್ನು ಹೊಂದಿರುವುದು.
08:33 ಗ್ಲಾಸೀ ಫಿನಿಶ್ ಎಂದರೆ ಡಿಫ್ಯೂಸ್ ಮತ್ತು ಸ್ಪೆಕ್ಯುಲರ್ ಇವುಗಳೆರಡರ ಇಂಟೆನ್ಸಿಟಿ ಯು ಹೆಚ್ಚು ಇರುವುದು.
08:39 ಉದಾಹರಣೆಗೆ, ಕಾರಿನ ಪೇಂಟ್ ನ ಮೆಟೀರಿಯಲ್, ಗ್ಲಾಸೀ ಫಿನಿಶ್ ಹೊಂದಿರುವುದು.
08:46 ಬ್ಲೆಂಡರ್ನಲ್ಲಿ ಡೀಫಾಲ್ಟ್ ಆಗಿ, Lambert ಎನ್ನುವುದು, ಡಿಫ್ಯೂಸ್ ಗಾಗಿ ಶೇಡರ್ ಆಗಿದೆ.
08:52 Lambert ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಇದು Diffuse ನ ಶೇಡರ್ ಮೆನ್ಯು ಆಗಿದೆ.
08:57 ಇಲ್ಲಿ, ನಾವು Fresnel (ಫ್ರೆಸ್ನಲ್), Minnaert (ಮಿನ್ನಿಯರ್ಟ್), Toon (ಟೂನ್), Oren-Nayar (ಓರೆನ್ ನೇಯರ್) ಮತ್ತು Lambert (ಲ್ಯಾಂಬರ್ಟ್) ಇತ್ಯಾದಿಗಳಿಂದ ನಮಗೆ ಬೇಕಾದ ಶೇಡರ್ ಅನ್ನು ಆರಿಸಿಕೊಳ್ಳಬಹುದು.
09:08 ಇಂಟೆನ್ಸಿಟೀಯಂತೆ ಶೇಡರ್ ಗಳು ಸಹ ವಿವಿಧ ರೀತಿಯ ಮೆಟೀರಿಯಲ್ ಗಳಿಗೆ ವಿಭಿನ್ನವಾಗಿರುತ್ತವೆ. ಉದಾಹರಣೆಗೆ, ಗಾಜಿನ ಮೆಟೀರಿಯಲ್, Fresnel ಎನ್ನುವ ಶೇಡರ್ ಅನ್ನು ಬಳಸುವುದು.
09:19 ಹೀಗೆಯೇ, ಬ್ಲೆಂಡರ್ ನಲ್ಲಿ, Cooktorr (ಕುಕ್ಟೋರ್) ಎನ್ನುವುದು ಸ್ಪೆಕ್ಯುಲರ್ ಗಾಗಿ ಇರುವ ಡೀಫಾಲ್ಟ್ ಶೇಡರ್ ಆಗಿದೆ.
09:25 Cooktorr ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಇದು Specular ದ ಶೇಡರ್ ಮೆನ್ಯು ಆಗಿದೆ.
09:32 Blinn (ಬ್ಲಿನ್) ಮತ್ತು phong (ಫೋಂಗ್), ಇವೆರಡೂ ಬಹಳ ಸಾಮಾನ್ಯವಾದ ಸ್ಪೆಕ್ಯುಲರ್ ಶೇಡರ್ ಗಳಾಗಿದ್ದು 90% ಮೆಟೀರಿಯಲ್ ಗಳಲ್ಲಿ ಬಳಸಲ್ಪಡುತ್ತವೆ.
09:40 Hardness ಎನ್ನುವುದು ಒಬ್ಜೆಕ್ಟ್ ನ ಸ್ಪೆಕ್ಯುಲ್ಯಾರಿಟೀ ಅಥವಾ ಹೊಳಪಿನ ಹರಡುವಿಕೆಯನ್ನು ನಿರ್ಧರಿಸುತ್ತದೆ.
09:48 Hardness 50 ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ನಿಮ್ಮ ಕೀಬೋರ್ಡ್ ನ ಮೇಲೆ 100 ಅನ್ನು ಟೈಪ್ ಮಾಡಿರಿ ಹಾಗೂ Enter ಕೀಯನ್ನು ಒತ್ತಿರಿ.
09:57 ಸ್ಪೆಕ್ಯುಲರ್ ಏರಿಯಾ, ಪ್ರಿವ್ಯೂ ಸ್ಫಿಯರ್ ನ ಮೇಲೆ ಒಂದು ಚಿಕ್ಕ ವರ್ತುಲವಾಗಿ ಕುಗ್ಗುತ್ತದೆ.
10:04 ಮತ್ತೊಮ್ಮೆ Hardness 100 ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ನಿಮ್ಮ ಕೀಬೋರ್ಡ್ ನ ಮೇಲೆ 10 ಅನ್ನು ಟೈಪ್ ಮಾಡಿರಿ ಹಾಗೂ Enter ಕೀಯನ್ನು ಒತ್ತಿರಿ.
10:13 ಈಗ ಸ್ಪೆಕ್ಯುಲರ್ ಏರಿಯಾ ದೊಡ್ಡದಾಗುತ್ತದೆ ಮತ್ತು ಪ್ರಿವ್ಯೂ ಸ್ಫಿಯರ್ ನ ಮೇಲೆ ಹರಡಿಕೊಳ್ಳುತ್ತದೆ.
10:20 ಹೀಗೆ, ಇವುಗಳು ಮೆಟೀರಿಯಲ್ ಪ್ಯಾನಲ್ ನ ಮೂಲ ಸೆಟ್ಟಿಂಗ್ ಗಳಾಗಿವೆ.
10:25 ಉಳಿದ ಸೆಟ್ಟಿಂಗ್ ಗಳನ್ನು ನಂತರದ ಟ್ಯುಟೋರಿಯಲ್ ಗಳಲ್ಲಿ ವಿವರಿಸಲಾಗುವುದು.
10:29 ಈಗ ನೀವು ಮುಂದುವರಿದು ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಬಹುದು;
10:33 ಕ್ಯೂಬ್ ಗೆ ಒಂದು ಹೊಸ ಮೆಟೀರಿಯಲ್ ಅನ್ನು ಸೇರಿಸಿರಿ ಮತ್ತು ಅದರ ಬಣ್ಣ ಹಾಗೂ ಹೆಸರನ್ನು ‘Blue’ ಎಂದು ಬದಲಾಯಿಸಿರಿ.
10:39 ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯ ಆಧಾರದಿಂದ ಮತ್ತು Project Oscar ಅವರಿಂದ ತಯಾರಿಸಲ್ಪಟ್ಟಿದೆ.
10:48 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ಗಳ ಮೇಲೆ ಲಭ್ಯವಿದೆ.

oscar.iitb.ac.in ಮತ್ತು spoken-tutorial.org/NMEICT-Intro

11:08 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು
11:11 ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
11:14 ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
11:19 ಹೆಚ್ಚಿನ ವಿವರಗಳಿಗೆ ದಯವಿಟ್ಟು contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
11:25 ಧನ್ಯವಾದಗಳು.
11:27 ಐ ಐ ಟಿ ಬಾಂಬೆ ಯಿಂದ ಪ್ರವಾಚಕ ………………

Contributors and Content Editors

Pratik kamble, Vasudeva ahitanal