Blender/C2/Types-of-Windows-Properties-Part-2/Kannada

From Script | Spoken-Tutorial
Revision as of 15:58, 29 October 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:04 ಬ್ಲೆಂಡರ್ ನ ಟ್ಯುಟೋರಿಯಲ್ಸ್ ಸರಣಿಗೆ ಸ್ವಾಗತ.
00:08 ಈ ಟ್ಯುಟೋರಿಯಲ್, ಬ್ಲೆಂಡರ್ 2.59 ನಲ್ಲಿಯ ಪ್ರಾಪರ್ಟೀಸ್ ವಿಂಡೋ ಕುರಿತು ಆಗಿದೆ.
00:15 ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೇಕರ್.
00:28 ಈ ಟ್ಯುಟೋರಿಯಲ್ ಅನ್ನು ನೋಡಿದ ನಂತರ, ಪ್ರಾಪರ್ಟೀಸ್ ವಿಂಡೋ ಎಂದರೇನು;
00:35 ಪ್ರಾಪರ್ಟೀಸ್ ವಿಂಡೋದಲ್ಲಿ ಸೀನ್ ಪ್ಯಾನಲ್, ವರ್ಲ್ಡ್ ಪ್ಯಾನಲ್ ಮತ್ತು ಓಬ್ಜೆಕ್ಟ್ ಪ್ಯಾನಲ್ ಗಳೆಂದರೇನು ;
00:42 ಮತ್ತು ಪ್ರಾಪರ್ಟೀಸ್ ವಿಂಡೋದ ಅಡಿಯಲ್ಲಿ, ಸೀನ್ ಪ್ಯಾನಲ್, ವರ್ಲ್ಡ್ ಪ್ಯಾನಲ್ ಹಾಗೂ ಓಬ್ಜೆಕ್ಟ್ ಪ್ಯಾನಲ್ ಗಳಲ್ಲಿ ಇರುವ ವಿವಿಧ ಸೆಟ್ಟಿಂಗ್ ಗಳು, ಮುಂತಾದವುಗಳ ಬಗೆಗೆ ನಾವು ಕಲಿಯುವೆವು.
00:52 ಬ್ಲೆಂಡರ್ ಇಂಟರ್ಫೇಸ್ ನ ಮೂಲ ಅಂಶಗಳನ್ನು ನೀವು ತಿಳಿದಿರುವಿರಿ ಎಂದು ನಾನು ಭಾವಿಸುತ್ತೇನೆ.
00:57 ಇಲ್ಲವಾದಲ್ಲಿ, ದಯವಿಟ್ಟು ನಮ್ಮ ಮೊದಲಿನ ಟ್ಯುಟೋರಿಯಲ್ Basic Description of the Blender Interface (ಬೇಸಿಕ್ ಡಿಸ್ಕ್ರಿಪ್ಶನ್ ಅಫ್ ದ ಬ್ಲೆಂಡರ್ ಇಂಟರ್ಫೇಸ್) ಎನ್ನುವುದನ್ನು ನೋಡಿರಿ.
01:05 ಈ ಪ್ರಾಪರ್ಟೀಸ್ ವಿಂಡೋ ಎನ್ನುವುದು ನಮ್ಮ ಸ್ಕ್ರೀನ್ ನ ಬಲಬದಿಗೆ ಇರುತ್ತದೆ.
01:11 ಪ್ರಾಪರ್ಟೀಸ್ ವಿಂಡೋದ ಮೊದಲನೆಯ ಪ್ಯಾನಲ್ ಹಾಗೂ ಸೆಟ್ಟಿಂಗ್ ಗಳನ್ನು ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಈಗಾಗಲೇ ನೋಡಿದ್ದೇವೆ.
01:17 ಪ್ರಾಪರ್ಟೀಸ್ ವಿಂಡೋದಲ್ಲಿಯ ಮುಂದಿನ ಪ್ಯಾನಲ್ ಗಳನ್ನು ನಾವು ನೋಡೋಣ.
01:21 ಮೊದಲು, ಉತ್ತಮ ವೀಕ್ಷಣೆ ಮತ್ತು ಗ್ರಹಿಕೆಗಳಿಗಾಗಿ ನಮ್ಮ ಪ್ರಾಪರ್ಟೀಸ್ ವಿಂಡೋವನ್ನು ನಾವು ರಿಸೈಜ್ ಮಾಡಲೇಬೇಕು.
01:27 ಪ್ರಾಪರ್ಟೀಸ್ ವಿಂಡೋದ ಎಡ ಅಂಚಿನ ಮೇಲೆ ಲೆಫ್ಟ್ ಕ್ಲಿಕ್ ಮಾಡಿ, ಹಿಡಿಯಿರಿ ಮತ್ತು ಎಡಗಡೆಗೆ ಎಳೆಯಿರಿ.
01:37 ಪ್ರಾಪರ್ಟೀಸ್ ವಿಂಡೋದಲ್ಲಿಯ ಆಯ್ಕೆಗಳನ್ನು ಈಗ ನಾವು ಹೆಚ್ಚು ಸ್ಪಷ್ಟವಾಗಿ ನೋಡಬಹುದು.
01:42 ಬ್ಲೆಂಡರ್ ನ ವಿಂಡೋ ಗಳನ್ನು ಹೇಗೆ ರಿಸೈಜ್ ಮಾಡುವದೆಂದು ತಿಳಿಯಲು How to Change Window Types in Blender (ಹೌ ಟು ಚೇಂಜ್ ವಿಂಡೋ ಟೈಪ್ಸ್ ಇನ್ ಬ್ಲೆಂಡರ್) ಎನ್ನುವ ನಮ್ಮ ಟ್ಯುಟೋರಿಯಲ್ ನೋಡಿರಿ.
01:51 ಪ್ರಾಪರ್ಟೀಸ್ ವಿಂಡೋದಲ್ಲಿ ಮೇಲಿನ ಸಾಲಿನಲ್ಲಿರುವ ಎರಡನೆಯ ಐಕಾನ್ ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಇದು Scene ಪ್ಯಾನಲ್ ಆಗಿದೆ.
02:02 Camera ಎನ್ನುವುದು ಸೀನ್ ಅನ್ನು ರೆಂಡರ್ ಮಾಡಲು ಬಳಸುವ ಆಕ್ಟಿವ್ ಕ್ಯಾಮೆರಾ ಆಗಿದೆ.
02:08 Units ಎನ್ನುವುದು ಸೀನ್ ನಲ್ಲಿಯ ಓಬ್ಜೆಕ್ಟ್ ಗಳ ಅಳತೆಯನ್ನು ನಿರ್ಧರಿಸುತ್ತದೆ.
02:14 ಬ್ಲೆಂಡರ್ ನಲ್ಲಿ ಅನಿಮೇಟ್ ಮಾಡಲು ಇದು ತುಂಬಾ ಉಪಯುಕ್ತ ಹಾಗೂ ಮುಖ್ಯವಾಗಿದೆ.
02:20 ಡೀಫಾಲ್ಟ್ ಆಗಿ, Units ಎನ್ನುವುದು None ಮತ್ತು Degrees ಗಳಿಗೆ ಸೆಟ್ ಮಾಡಲಾಗಿದೆ.
02:26 Metric ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಈಗ ನಮ್ಮ ಸೀನ್ ನಲ್ಲಿಯ ಎಲ್ಲ ಓಬ್ಜೆಕ್ಟ್ ಗಳು ಮೀಟರ್ ನಲ್ಲಿ ಅಳೆಯಲ್ಪಡುವವು.
02:35 Gravity ಎನ್ನುವುದರತ್ತ ಒಂದು ಸಲ ನೋಡಿರಿ.
02:38 ಗ್ರಾವಿಟಿ ಎನ್ನುವುದರ x,y,z ಯುನಿಟ್ ಗಳು, ಮೀಟರ್ಸ್ ಪರ್ ಸೆಕೆಂಡ್ ಸ್ಕ್ವೇರ್ ಗೆ ಬದಲಾಯಿಸಿರುವದನ್ನು ಗಮನಿಸಿರಿ.
02:46 ಬ್ಲೆಂಡರ್ ನಲ್ಲಿ, ಭೌತಶಾಸ್ತ್ರವನ್ನು ಬಳಸಿಕೊಂಡು ನಾವು ಓಬ್ಜೆಕ್ಟ್ ಗಳನ್ನು ಅನಿಮೇಟ್ ಮಾಡುವಾಗ, ಗ್ರಾವಿಟಿ ಎನ್ನುವುದು ಉಪಯೋಗಕ್ಕೆ ಬರುತ್ತದೆ.
02:52 ನಾವು ಅದನ್ನು ಮುಂದಿನ ಟ್ಯುಟೋರಿಯಲ್ ಗಳಲ್ಲಿ ನೋಡುವೆವು.
02:56 ಪ್ರಾಪರ್ಟೀಸ್ ವಿಂಡೋದಲ್ಲಿ, ಮೇಲಿನ ಸಾಲಿನಲ್ಲಿರುವ ಮೂರನೆಯ ಐಕಾನ್ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
03:03 ಇದು World ಪ್ಯಾನಲ್ ಆಗಿದೆ. ಇಲ್ಲಿ ನಾವು ಬ್ಲೆಂಡರ್ ನ, ವರ್ಲ್ಡ್ ಅಥವಾ ಬ್ಯಾಕ್ ಗ್ರೌಂಡ್ ನ ಸೆಟ್ಟಿಂಗ್ ಗಳನ್ನು ಬದಲಾಯಿಸಬಹುದು.
03:12 Blend Sky ದ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಪ್ರಿವ್ಯೂ, ಗ್ರೇಡಿಯಂಟ್ ಬಣ್ಣಕ್ಕೆ ಬದಲಾಯಿಸುತ್ತದೆ.
03:21 ಆದರೆ 3D ವ್ಯೂ ಇದ್ದ ಹಾಗೆಯೇ ಕಾಣುತ್ತದೆ. ಆದ್ದರಿಂದ, ಬ್ಯಾಕ್ಗ್ರೌಂಡ್ ನಿಜವಾಗಿ ಬದಲಾಯಿಸಿದೆ ಎಂದು ನಮಗೆ ಹೇಗೆ ತಿಳಿಯುತ್ತದೆ ?
03:30 ‘ಆಕ್ಟಿವ್ ಕ್ಯಾಮೆರಾ ವ್ಯೂ’ ಅನ್ನು ರೆಂಡರ್ ಮಾಡಲು F12 ಅನ್ನು ಒತ್ತಿರಿ.
03:36 ಈಗ ನಾವು ಬ್ಯಾಕ್ ಗ್ರೌಂಡ್ ನಲ್ಲಿ ಬದಲಾವಣೆಯನ್ನು ನೋಡಬಹುದು.
03:40 ಈ ರೆಂಡರ್ ಡಿಸ್ಪ್ಲೇ ಅನ್ನು ಕ್ಲೋಸ್ ಮಾಡಿರಿ.
03:46 Zenith Color ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಮೆನ್ಯುವಿನಿಂದ ಒಂದು ಬಣ್ಣವನ್ನು ಆರಿಸಿಕೊಳ್ಳಿ. ನಾನು ಬಿಳಿ ಬಣ್ಣವನ್ನು ಆರಿಸಿಕೊಳ್ಳುತ್ತಿದ್ದೇನೆ.
03:58 ಈಗ ಬ್ಯಾಕ್ ಗ್ರೌಂಡ್, ಬ್ಲ್ಯಾಕ್ ಆಂಡ್ ವೈಟ್ ಗ್ರೇಡಿಯಂಟ್ ನೊಂದಿಗೆ ರೆಂಡರ್ ಮಾಡಲ್ಪಡುವದು.
04:03 ವರ್ಲ್ಡ್ ಪ್ಯಾನಲ್ ನಲ್ಲಿರುವ ಇತರ ಸೆಟ್ಟಿಂಗ್ ಗಳೆಂದರೆ-Ambient Occlusion (ಆಂಬಿಯೆಂಟ್ ಅಕ್ಲೂಶನ್), Environment Lighting (ಎನ್ವೈರ್ನ್ಮೆಂಟ್ ಲೈಟಿಂಗ್), Indirect Lighting (ಇಂಡೈರೆಕ್ಟ್ ಲೈಟಿಂಗ್), Gather (ಗ್ಯಾದರ್), Mist (ಮಿಸ್ಟ್), Stars (ಸ್ಟಾರ್ಸ್) ಮುಂತಾದವುಗಳು.
04:21 ಬ್ಲೆಂಡರ್ ನಲ್ಲಿ ಲೈಟಿಂಗ್ ನ ಬಗೆಗೆ ಇರುವ ಮುಂದುವರಿದ ಟ್ಯುಟೋರಿಯಲ್ ಗಳಲ್ಲಿ, ಈ ಸೆಟ್ಟಿಂಗ್ ಗಳು ವಿವರಿಸಲ್ಪಡುವವು.
04:29 ಪ್ರಾಪರ್ಟೀಸ್ ವಿಂಡೋದ ಮೇಲಿನ ಸಾಲಿನಲ್ಲಿರುವ ನಾಲ್ಕನೆಯ ಐಕಾನ್ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
04:37 ಇದು Object ಪ್ಯಾನಲ್ ಆಗಿದೆ. ಇಲ್ಲಿ ಆಕ್ಟಿವ್ ಓಬ್ಜೆಕ್ಟ್ ಗಾಗಿ ಸೆಟ್ಟಿಂಗ್ ಗಳಿವೆ.
04:45 ಡೀಫಾಲ್ಟ್ ಆಗಿ ಈ ಕ್ಯೂಬ್, ಆಕ್ಟಿವ್ ಓಬ್ಜೆಕ್ಟ್ ಆಗಿದೆ. ಹೀಗಾಗಿ, ಇಲ್ಲಿಯ ಎಲ್ಲ ಸೆಟ್ಟಿಂಗ್ ಗಳು ಕ್ಯೂಬ್ ಗಾಗಿ ಇರುತ್ತವೆ.
04:54 Transform ಎನ್ನುವುದು ಆಕ್ಟಿವ್ ಓಬ್ಜೆಕ್ಟ್ ನ ಸ್ಥಾನ, ತಿರುಗುವಿಕೆ ಮತ್ತು ಅಳತೆಗಳನ್ನು ನಿರ್ಧರಿಸುತ್ತದೆ.
05:04 ಲೊಕೇಶನ್ ನ ಅಡಿಯಲ್ಲಿಯ X : 0 ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ನಿಮ್ಮ ಕೀಬೋರ್ಡ್ ನ ಮೇಲೆ 1 ಅನ್ನು ಟೈಪ್ ಮಾಡಿರಿ ಮತ್ತು Enter ಅನ್ನು ಒತ್ತಿರಿ.
05:14 ಈ ಕ್ಯೂಬ್, x ಆಕ್ಸಿಸ್ ನ ಮೇಲೆ, 1 ಯೂನಿಟ್ ಮುಂದಕ್ಕೆ ಸರಿಯುತ್ತದೆ.
05:20 ಹೀಗೆ, ಆಕ್ಟಿವ್ ಓಬ್ಜೆಕ್ಟ್ ಅನ್ನು ಸ್ಥಳಾಂತರಿಸಲು, ತಿರುಗಿಸಲು ಮತ್ತು ಅದರ ಅಳತೆಯನ್ನು ಬದಲಾಯಿಸಲು ಈ ರೀತಿಯಲ್ಲಿ, ನಾವು ಓಬ್ಜೆಕ್ಟ್ ಪ್ಯಾನಲ್ ಅನ್ನು ಉಪಯೋಗಿಸಬಹುದು.
05:28 ಬ್ಲೆಂಡರ್ ನಲ್ಲಿ, ಕೀ ಫ್ರೇಮ್ಸ್ ಗಳನ್ನು ಅನಿಮೇಟ್ ಮಾಡುವಾಗ ಇದು ಬಹಳ ಉಪಯುಕ್ತವಾಗಿದೆ.
05:35 3D ವ್ಯೂನಲ್ಲಿರುವ ಕ್ಯಾಮೆರಾದ ಮೇಲೆ ರೈಟ್ ಕ್ಲಿಕ್ ಮಾಡಿರಿ.
05:40 ಓಬ್ಜೆಕ್ಟ್ ಪ್ಯಾನಲ್ ನಲ್ಲಿಯ ಟ್ರಾನ್ಸ್ಫಾರ್ಮ್ ನ ಅಡಿಯಲ್ಲಿ ಇರುವ, ಲೊಕೇಶನ್, ರೊಟೇಶನ್ ಹಾಗೂ ಸ್ಕೇಲ್ ಗಳ ಯೂನಿಟ್ ಗಳು ಹೇಗೆ ಬದಲಾಯಿಸಿವೆ ಎನ್ನುವುದನ್ನು ಗಮನಿಸಿರಿ.
05:50 ಇವುಗಳು, ಆಯ್ಕೆಯಾದ ಕ್ಯಾಮೆರಾಗಾಗಿ ಸೆಟ್ಟಿಂಗ್ ಗಳು ಇರುತ್ತವೆ.
05:55 Relations ಎನ್ನುವುದು ಮುಂದಿನ ಸೆಟ್ಟಿಂಗ್ ಆಗಿದೆ. ನಮ್ಮ ಆಕ್ಟಿವ್ ಓಬ್ಜೆಕ್ಟ್ ಗಾಗಿ, ಲೇಯರ್ ಮತ್ತು ಪೇರೆಂಟ್ ಗಳ ಆಯ್ಕೆಗಳನ್ನು ಇಲ್ಲಿ ನಾವು ಸೂಚಿಸಬಹುದು.
06:07 Layers ನ ಅಡಿಯಲ್ಲಿ, ಎರಡನೆಯ ಚೌಕದ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಈಗ ಕ್ಯಾಮೆರಾ ಮರೆಮಾಡಲ್ಪಟ್ಟಿದೆ.
06:13 ವಾಸ್ತವದಲ್ಲಿ, ಅದು ಎರಡನೆಯ ಲೇಯರ್ ಗೆ ಸ್ಥಳಾಂತರಿಸಲ್ಪಟ್ಟಿದೆ. ಲೇಯರ್, ಅಡಗಿಸಲ್ಪಟ್ಟ ಕಾರಣದಿಂದ ಕ್ಯಾಮೆರಾ ಸಹ ಅಡಗಿಕೊಂಡಿದೆ.
06:23 3D ವ್ಯೂನ ಕೆಳಗಿನ ಎಡಗಡೆಯ ಮೂಲೆಯಲ್ಲಿರುವ View ಗೆ ಹೋಗಿರಿ. ಮೆನ್ಯುವನ್ನು ಓಪನ್ ಮಾಡಲು ಲೆಫ್ಟ್ ಕ್ಲಿಕ್ ಮಾಡಿರಿ.
06:32 Show all layers ಅನ್ನು ಆಯ್ಕೆಮಾಡಿರಿ. 3D ವ್ಯೂನಲ್ಲಿ ಕ್ಯಾಮೆರಾವನ್ನು ಮತ್ತೆ ಕಾಣಬಹುದು.
06:42 ಒಂದೇ ಸೀನ್ ನಲ್ಲಿ, ಅನೇಕ ಓಬ್ಜೆಕ್ಟ್ ಗಳ ಜೊತೆಗೆ ಕೆಲಸ ಮಾಡುವಾಗ ಲೇಯರ್ಸ್ ತುಂಬಾ ಉಪಯುಕ್ತವಾಗಿದೆ.
06:50 ಓಬ್ಜೆಕ್ಟ್ ಪ್ಯಾನಲ್ ನಲ್ಲಿ, Relations ನ ಅಡಿಯಲ್ಲಿರುವ Parent ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
06:55 Parent ಎನ್ನುವುದು, ಎಲ್ಲ 3D ಅನಿಮೇಶನ್ ಸಾಫ್ಟ್ವೇರ್ ಗಳಲ್ಲಿ ಉಪಯೋಗಿಸಲ್ಪಡುವ, ಅತಿ ಮುಖ್ಯವಾದ ಅನಿಮೇಶನ್ ಟೂಲ್ ಆಗಿದೆ.
07:03 ಬ್ಲೆಂಡರ್ ನ ಅನಿಮೇಶನ್ ಟ್ಯುಟೋರಿಯಲ್ ಗಳಲ್ಲಿ ಇದನ್ನು ನಾವು ಬಹಳಷ್ಟು ಉಪಯೋಗಿಸುವೆವು.
07:10 Cube ಅನ್ನು ಆಯ್ಕೆಮಾಡಿರಿ,
07:13 ಕ್ಯಾಮೆರಾ, ಕ್ಯೂಬ್ ಗೆ ಪೇರೆಂಟೆಡ್ ಮಾಡಲ್ಪಟ್ಟಿದೆ.
07:16 ಈ ಕ್ಯೂಬ್, ಪೇರೆಂಟ್ ಓಬ್ಜೆಕ್ಟ್ ಆಗಿದೆ ಮತ್ತು ಈ ಕ್ಯಾಮೆರಾ, ಚೈಲ್ಡ್ ಓಬ್ಜೆಕ್ಟ್ ಆಗಿದೆ. ಹೀಗೆಂದರೇನು ಎಂದು ನಾವು ನೋಡೋಣ.
07:24 3D ವ್ಯೂನಲ್ಲಿಯ ಕ್ಯೂಬ್ ಅನ್ನು ಆಯ್ಕೆಮಾಡಲು ರೈಟ್ ಕ್ಲಿಕ್ ಮಾಡಿರಿ.
07:28 ನೀಲಿ ಹ್ಯಾಂಡಲ್ ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿ, ಹಿಡಿದು, ನಿಮ್ಮ ಮೌಸ್ ಅನ್ನು ಮೇಲೆ ಮತ್ತು ಕೆಳಗೆ ಕೊಂಡೊಯ್ಯಿರಿ.
07:36 ಈ ಕ್ಯಾಮೆರಾ, ಕ್ಯೂಬ್ ನೊಂದಿಗೆ ಮೇಲೆ ಹಾಗೂ ಕೆಳಗೆ ಸರಿದಾಡುತ್ತದೆ.
07:44 ಕ್ಯೂಬ್ ಗಾಗಿ ಒಂದು ಹೊಸ ಸ್ಥಳವನ್ನು ಖಚಿತಪಡಿಸಲು ಸ್ಕ್ರೀನ್ ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
07:51 3D ವ್ಯೂ ನಲ್ಲಿಯ ಕ್ಯಾಮೆರಾದ ಮೇಲೆ ರೈಟ್ ಕ್ಲಿಕ್ ಮಾಡಿರಿ. ಈಗ, ಒಬ್ಜೆಕ್ಟ್ ಪ್ಯಾನಲ್ ನಲ್ಲಿಯ Parent ಗೆ ಹೋಗಿರಿ.
08:02 Parent ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ನಿಮ್ಮ ಕೀಬೋರ್ಡ್ ನ ಮೇಲೆ Backspace ಒತ್ತಿರಿ ಮತ್ತು Enter ಕೀ ಅನ್ನು ಒತ್ತಿ.
08:11 ಕ್ಯಾಮೆರಾ ಇನ್ನು ಮುಂದೆ ಕ್ಯೂಬ್ ಗೆ ಪೇರೆಂಟೆಡ್ ಆಗಿಲ್ಲ.
08:15 ಅದು, 3D ವ್ಯೂನಲ್ಲಿನ ತನ್ನ ಮೊದಲಿನ ಸ್ಥಾನಕ್ಕೆ ಸ್ನಾಪ್ ಆಗುತ್ತದೆ ಹಾಗೆಯೇ ಕ್ಯೂಬ್ ಹೊಸ ಸ್ಥಾನದಲ್ಲಿ ಉಳಿಯುತ್ತದೆ.
08:22 ಹೀಗೆಂದರೆ, ಪೇರೆಂಟಿಂಗ್ ಎನ್ನುವುದು ಚೈಲ್ಡ್ ಒಬ್ಜೆಕ್ಟ್ ನ ಮೊದಲಿನ ಟ್ರಾನ್ಸ್ಫಾರ್ಮ್ ಸೆಟ್ಟಿಂಗ್ ಗಳನ್ನು ಮಾರ್ಪಡಿಸುವದಿಲ್ಲ.
08:29 ಹಾಗಾಗಿ, ಈ ಟ್ಯುಟೋರಿಯಲ್ ನಲ್ಲಿ ಸೀನ್ ಪ್ಯಾನಲ್, ವರ್ಲ್ಡ್ ಪ್ಯಾನಲ್ ಮತ್ತು ಓಬ್ಜೆಕ್ಟ್ ಪ್ಯಾನಲ್ ಗಳನ್ನು ಪ್ರಾಪರ್ಟೀಸ್ ವಿಂಡೋದ ಅಡಿಯಲ್ಲಿ ನಾವು ನೋಡಿದ್ದೇವೆ.
08:39 ಇನ್ನುಳಿದ ಪ್ಯಾನಲ್ ಗಳನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗುವುದು.
08:45 ಈಗ, ಮುಂದುವರಿಯಿರಿ ಮತ್ತು ಒಂದು ಹೊಸ ಬ್ಲೆಂಡ್ ಫೈಲ್ ಅನ್ನು ಕ್ರಿಯೇಟ್ ಮಾಡಿರಿ. ಸೀನ್ ನಲ್ಲಿ ಯೂನಿಟ್ಸ್ ಅನ್ನು ಮೆಟ್ರಿಕ್ ಗೆ ಬದಲಾಯಿಸಿರಿ.
08:52 ವರ್ಲ್ಡ್ ದ ಬಣ್ಣವನ್ನು ಬ್ಲೆಂಡ್ ಸ್ಕೈ ಗೆ, ಕೆಂಪು ಮತ್ತು ಕಪ್ಪುಗಳಿಗೆ, ಬದಲಾಯಿಸಿರಿ.
08:58 ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯ ಆಧಾರದಿಂದ ಮತ್ತು Project Oscar ಅವರಿಂದ ತಯಾರಿಸಲ್ಪಟ್ಟಿದೆ.
09:08 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ಗಳ ಮೇಲೆ ಲಭ್ಯವಿದೆ.

oscar.iitb.ac.in ಮತ್ತು spoken-tutorial.org/NMEICT-Intro.

09:28 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು
09:30 ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
09:33 ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:38 ಹೆಚ್ಚಿನ ವಿವರಗಳಿಗೆ ದಯವಿಟ್ಟು contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
09:45 ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು.

Contributors and Content Editors

Pratik kamble, Vasudeva ahitanal