Blender/C2/Installation-Process-for-Windows/Kannada

From Script | Spoken-Tutorial
Revision as of 16:51, 8 October 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:04 ಬ್ಲೆಂಡರ್ ಟ್ಯುಟೋರಿಯಲ್ ಸರಣಿಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ಬ್ಲೆಂಡರ್ 2.59 ನ್ನು ಪಡೆಯುವ ಮತ್ತು ವಿಂಡೋಸ್ ಆಪರೇಟಿಂಗ್ ಸಿಸ್ಟೆಮ್ ನಲ್ಲಿ ಅದನ್ನು ಇನ್ಸ್ಟಾಲ್ ಮಾಡುವ ಹಾಗೂ ನಡೆಸುವ ಕುರಿತು ಇದೆ.
00:21 ಈ ಟ್ಯುಟೋರಿಯಲ್ ಗಾಗಿ ನಾನು Windows XP ಆಪರೇಟಿಂಗ್ ಸಿಸ್ಟೆಮ್ ಅನ್ನು ಬಳಸುತ್ತಿದ್ದೇನೆ.
00:28 ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೆಕರ್.
00:37 ನಿಮ್ಮ ಇಂಟರ್ನೆಟ್ ಬ್ರೌಸರ್ ಓಪನ್ ಮಾಡಿ. ನಾನು Firefox 3.09 ಉಪಯೋಗಿಸುತ್ತಿದ್ದೇನೆ. ಅಡ್ಡ್ರೆಸ್ ಬಾರ್ ನಲ್ಲಿ www.blender.org ಟೈಪ್ ಮಾಡಿ ಮತ್ತು Enter ಕೀ ಒತ್ತಿ.
00:54 ಇದು ನಿಮ್ಮನ್ನು ಅಧಿಕೃತ ಬ್ಲೆಂಡರ್ ವೆಬ್ಸೈಟ್ ಗೆ ಕರೆದೊಯ್ಯುತ್ತದೆ.
01:01 ಬ್ಲೆಂಡರ್ ಎಂಬುದು ಉಚಿತ ಹಾಗೂ ಓಪನ್ ಸೋರ್ಸ್ ಆಗಿದೆ.
01:05 ಬ್ಲೆಂಡರ್, ವೆಬ್ಸೈಟ್ ನಿಂದ ಎಕ್ಸ್ಟ್ರಾಕ್ಟ್ ಅಥವಾ ಸೋರ್ಸ್ ಕೋಡ್ ಡೌನ್ಲೋಡ್ ಮಾಡಲು ಲಭ್ಯವಿದೆ.
01:10 ಇಲ್ಲಿ, ಪೇಜ್ನ ಶೀರ್ಷಿಕೆಯ ಕೆಳಗಡೆ ಡೌನ್ಲೋಡ್ ಬ್ಲೆಂಡರ್ ಎನ್ನುವ ಲಿಂಕ್ ಇದೆ.
01:15 ಡೌನ್ಲೋಡ್ ಪೇಜ್ ಗೆ ಹೋಗಲು ನಾವು ಈ ಲಿಂಕ್ ಅನ್ನು ಕ್ಲಿಕ್ ಮಾಡೋಣ.
01:22 ನೀವು ನೋಡುವಂತೆ ಇದು ಬ್ಲೆಂಡರ್ ನ ಇತ್ತೀಚಿನ, ಸ್ಥಿರವಾದ ವರ್ಶನ್ ಇದೆ.
01:28 ಇಲ್ಲಿ ನಿಮಗೆ 32 bit ಅಥವಾ 64 bit ಇನ್ಸ್ಟಾಲ್ಲರ್ ಎಂದು ಎರಡು ಆಯ್ಕೆಗಳಿವೆ.
01:39 ಇವುಗಳಲ್ಲಿ ನಿಮ್ಮ ಮಶಿನ್ ಗೆ ಅನ್ವಯಿಸುವದನ್ನು ನೀವು ಡೌನ್ಲೋಡ್ ಮಾಡಬಹುದು.
01:44 32 bit ಮತ್ತು 64 bit ಸಿಸ್ಟೆಮ್ ಗಳ ಬಗ್ಗೆ ತಿಳಿಯಲು ನಮ್ಮ Blender Hardware Requirements (ಬ್ಲೆಂಡರ್ ಹಾರ್ಡ್ವೇರ್ ರಿಕ್ವೈರ್ಮೆಂಟ್ಸ್) ಎನ್ನುವ ಟ್ಯುಟೋರಿಯಲ್ ನ್ನು ನೋಡಿ.
01:56 ಈ ವೆಬ್ಸೈಟ್, ಬ್ಲೆಂಡರ್ ಪ್ರೊಗ್ರಾಮ್ ಫೈಲ್ಸ್ ನ ಝಿಪ್ಪ್ಡ್ ಆರ್ಕೈವ್ ಸಹ ಒದಗಿಸುತ್ತದೆ.
02:01 ಬ್ಲೆಂಡರ್ ರನ್ ಮಾಡಲು ಬೇಕಾಗುವ ಎಲ್ಲ ಫೈಲ್ ಗಳನ್ನು ಈ ಆರ್ಕೈವ್ ಒಳಗೊಂಡಿದೆ.
02:06 ನೀವು ನಿಮ್ಮ ಆಯ್ಕೆಯ ಫೋಲ್ಡರ್ ಗೆ ಫೈಲ್ಸ್ ಗಳನ್ನು ಅನ್ ಝಿಪ್ ಮತ್ತು ಎಕ್ಸ್ಟ್ರಾಕ್ಟ್ ಮಾಡಿ ಮತ್ತು ಬ್ಲೆಂಡರ್ ಎಕ್ಸಿಕ್ಯುಟೇಬಲ್ ನ್ನು ರನ್ ಮಾಡಿ.
02:15 ನಾನು ಈಗ ಮಾಡಿ ತೋರಿಸುತ್ತೇನೆ.
02:17 ಇನ್ಸ್ಟಾಲ್ಲರ್ ಹಾಗೂ ಆರ್ಕೈವ್ ಗಳಲ್ಲಿನ ಮುಖ್ಯ ಅಂತರವೆಂದರೆ-
02:22 ಡಿಫಾಲ್ಟ್ ಆಗಿ ಇನ್ಸ್ಟಾಲ್ಲರ್ ಬ್ಲೆಂಡರ್ ನ ಅಪ್ಪ್ಲಿಕೇಶನ್ ಫೈಲ್ಸ್ ನ್ನು C ಡ್ರೈವ್ ನ ಪ್ರೊಗ್ರಾಮ್ ಫೈಲ್ಸ್ ನಲ್ಲಿ ಇಡುತ್ತದೆ ಹಾಗೂ ಸ್ಟಾರ್ಟ್ ಮೆನ್ಯುನಲ್ಲಿ ಒಂದು ಐಕಾನ್ ನ್ನು ಸ್ಥಾಪಿಸುತ್ತದೆ.
02:31 ಡೆಸ್ಕಟಾಪ್ ಮೇಲೆ ಒಂದು ಐಕಾನ್ ಮತ್ತು ಬ್ಲೆಂಡರ್ ಜೊತೆಗೆ .blend ಫೈಲ್ಸ್ ಅನ್ನು ಸಹ ಓಪನ್ ಮಾಡುತ್ತದೆ.
02:40 ಝಿಪ್ ಆರ್ಕೈವ್ ನಲ್ಲಿ ಎಲ್ಲ ಅಪ್ಪ್ಲಿಕೇಶನ್ ಫೈಲ್ಸ್ ಮತ್ತು ಎಕ್ಸಿಕ್ಯೂಟೇಬಲ್ ಬ್ಲೆಂಡರ್ ಫೈಲ್ ಒಂದೇ ಫೋಲ್ಡರ್ ನಲ್ಲಿ ಇದ್ದು
02:48 ಕಂಪ್ಯೂಟರ್ ನ ಯಾವದೇ ಡ್ರೈವ್ ಗೆ ಅದನ್ನು ಕಾಪಿ ಮಾಡಬಹುದು.
02:53 ಈಗ ನಾನು ನನ್ನ ಮಶಿನ್ ಗೆ ಆರ್ಕೈವ್ ಉಪಯೋಗಿಸಬೇಕೆಂದರೆ ನನಗೆ 32-Bit ಆರ್ಕೈವ್ ಬೇಕು.
03:02 32-Bit ಆರ್ಕೈವ್ ನ ಡೌನ್ಲೋಡ್ ಲಿಂಕ್ ಮೇಲೆ ಲೆಫ್ಟ್ ಕ್ಲಿಕ್ ಮಾಡಿ, ಈಗ ಡೌನ್ಲೋಡ್ ಆರಂಭವಾಗುವದು.
03:09 ಈ ಮೊದಲೇ ಹೇಳಿದಂತೆ ನನ್ನ ಇಂಟರ್ನೆಟ್ ಬ್ರೌಸರ್ Firefox 3.09 ಆಗಿದೆ.
03:16 ಇಲ್ಲಿ ತೋರಿಸಿದ ಡೌನ್ಲೋಡ್ ನ ಹಂತಗಳು ಬೇರೆ ಇಂಟರ್ನೆಟ್ ಬ್ರೌಸರ್ ಗಳಲ್ಲಿಯೂ ಇದೇ ತರಹ ಇರುತ್ತವೆ.
03:23 ಡೌನ್ಲೋಡ್ ನ ಪ್ರೊಗ್ರೆಸ್ ಅನ್ನು ನೀವು ಇಲ್ಲಿ ಕಾಣಬಹುದು.
03:26 ಈ ಹಸಿರು ಉದ್ದದ ಪಟ್ಟಿಗಳಿರುವ ಅಡ್ಡವಾದ ಡೌನ್ಲೋಡ್ ಬಾರ್ ಎಷ್ಟು ಡೌನ್ಲೋಡ್ ಆಗಿದೆ ಎಂದು ತೋರಿಸುತ್ತದೆ.
03:44 ಡೌನ್ಲೋಡ್ ನ ವೇಗವು ನಿಮ್ಮ ಇಂಟರ್ನೆಟ್ ಕನೆಕ್ಷನ್ ನ್ನು ಅವಲಂಬಿಸಿದೆ.
03:48 ದಯವಿಟ್ಟು ಇದು ಮುಗಿಯುವ ವರೆಗೆ ಕಾಯಿರಿ.
04:02 ಆರ್ಕೈವ್ ನ್ನು ಎಕ್ಸ್ಟ್ರಾಕ್ಟ್ ಮಾಡಲು ಮೊದಲು download ಮೇಲೆ ರೈಟ್ ಕ್ಲಿಕ್ ಮಾಡಿ.
04:08 Open containing folder ಮೇಲೆ ಲೆಫ್ಟ್ ಕ್ಲಿಕ್ ಮಾಡಿ. zip ಮೇಲೆ ಲೆಫ್ಟ್ ಡಬಲ್ ಕ್ಲಿಕ್ ಮಾಡಿ.
04:16 ಯಾವುದೇ ವಿಂಡೋಸ್ ಮಶಿನ್ ನಲ್ಲಿ ಡಿಫಾಲ್ಟ್ ಇನ್ಸ್ಟಾಲ್ ಆಗಿರುವ ವಿನ್- ಝಿಪ್ ನಂತಹ ಆರ್ಕೈವರ್ ನಲ್ಲಿ ಅದು ಓಪನ್ ಆಗುವದು.
04:24 EXTRACT ಮೇಲೆ ಲೆಫ್ಟ್ ಕ್ಲಿಕ್ ಮಾಡಿ. ಲಿಸ್ಟ್ ನಿಂದ ನಿಮ್ಮ ಡೆಸ್ಟಿನೇಶನ್ ಫೋಲ್ಡರ್ ಆರಿಸಿಕೊಳ್ಳಿ.
04:32 ನಾನು My Documents ಗೆ ಎಕ್ಸ್ಟ್ರಾಕ್ಟ್ ಮಾಡುತ್ತಿದ್ದೇನೆ. Extract ಮೇಲೆ ಲೆಫ್ಟ್ ಕ್ಲಿಕ್ ಮಾಡಿ.
04:40 ಈ ಹಸಿರು ಪಟ್ಟಿಗಳಿರುವ ಪ್ರೊಗ್ರೆಸ್ ಬಾರ್ ಎಷ್ಟು ಎಕ್ಸ್ಟ್ರಾಕ್ಟ್ ಆಗಿದೆ ಎಂದು ತೋರಿಸುತ್ತದೆ.
04:56 ಈಗ ನೀವು ಎಕ್ಸ್ಟ್ರಾಕ್ಟೆಡ್ ಫೋಲ್ಡರ್ ನ್ನು ನಿಮ್ಮ ಸ್ಕ್ರೀನ್ ಮೇಲೆ ನೋಡಬಹುದು.
05:00 ಫೋಲ್ಡರ್ ಒಪನ್ ಮಾಡಲು ಲೆಫ್ಟ್ ಡಬಲ್ ಕ್ಲಿಕ್ ಮಾಡಿ. Blender Executable ಮೇಲೆ ಲೆಫ್ಟ್ ಡಬಲ್ ಕ್ಲಿಕ್ ಮಾಡಿ.
05:08 ವಿಂಡೋಸ್, ದಿ ಪಬ್ಲಿಶರ್ ಕುಡ್ ನಾಟ್ ಬಿ ವೆರಿಫೈಡ್ ಎನ್ನುವ ಸೆಕ್ಯುರಿಟಿ ವಾರ್ನಿಂಗ್ ತೋರಿಸುತ್ತದೆ.
05:14 ಇದಕ್ಕಾಗಿ ಚಿಂತಿಸಬೇಕಿಲ್ಲ. ಹಾಗೆ Run ಬಟನ್ ಮೇಲೆ ಕ್ಲಿಕ್ ಮಾಡಿ. ನೀವು ಮುಂದುವರೆಯುವಿರಿ.
05:27 ಈಗ ನಿಮಗೆ ಇನ್ಸ್ಟಾಲ್ಲರ್ ಉಪಯೋಗಿಸಬೇಕೆಂದಿದ್ದರೆ ನಾವು ಮರಳಿ ಬ್ಲೆಂಡರ್ ವೆಬ್ಸೈಟ್ ಗೆ ಹೋಗೋಣ.
05:35 ಈ ಪೇಜ್ ನ ಮೇಲ್ಭಾಗದಲ್ಲಿ ಇರುವ Download ಮೇಲೆ ಕ್ಲಿಕ್ ಮಾಡಿ. ಇದು ನಮ್ಮನ್ನು ಡೌನ್ಲೋಡ್ ಪೇಜ್ ಗೆ ಮರಳಿ ಕರೆದೊಯ್ಯುತ್ತದೆ.
05:44 ನನ್ನ ಮಶಿನ್ ಗಾಗಿ ನನಗೆ 32-Bit ಇನ್ಸ್ಟಾಲ್ಲರ್ ನ ಅವಶ್ಯಕತೆಯಿದೆ.
05:48 ಆದ್ದರಿಂದ ನಾನು 32-Bit ಇನ್ಸ್ಟಾಲ್ಲರ್ ನ Download ಲಿಂಕ್ ಮೇಲೆ ಲೆಫ್ಟ್ ಕ್ಲಿಕ್ ಮಾಡುತ್ತೇನೆ, ಆಗ ಡೌನ್ಲೋಡ್ ಆರಂಭವಾಗುತ್ತದೆ.
06:03 ಮಾಡಿ ತೋರಿಸುವದು ಸುಲಭವಾಗಲಿ ಎಂದು ನಾನು ಈಗಾಗಲೆ ಇನ್ಸ್ಟಾಲ್ಲರ್ ನ್ನು ಬ್ಲೆಂಡರ್ ವೆಬ್ಸೈಟ್ ನಿಂದ ನನ್ನ ಮಶಿನ್ ಗೆ ಡೌನ್ಲೋಡ್ ಮಾಡಿದ್ದೇನೆ.
06:11 ಈಗ ನಾನು ನಿಮಗೆ ಇನ್ಸ್ಟಾಲ್ಲೇಶನ್ ನ ಹಂತಗಳನ್ನು ಪರಿಚಯ ಮಾಡಿಸುತ್ತೆನೆ. installer ಮೇಲೆ ಲೆಫ್ಟ್ ಡಬಲ್ ಕ್ಲಿಕ್ ಮಾಡಿ.
06:22 ವಿಂಡೋಸ್, ದಿ ಪಬ್ಲಿಶರ್ ಕುಡ್ ನಾಟ್ ಬಿ ವೆರಿಫೈಡ್ ಎನ್ನುವ ಸೆಕ್ಯುರಿಟಿ ವಾರ್ನಿಂಗ್ ತೋರಿಸುತ್ತದೆ.
06:29 ಇದಕ್ಕಾಗಿ ಚಿಂತಿಸಬೇಕಿಲ್ಲ. Run ಬಟನ್ ಮೇಲೆ ಕ್ಲಿಕ್ ಮಾಡಿ.
06:35 ಬ್ಲೆಂಡರ್ ಸೆಟ್-ಅಪ್ ವಿಝಾರ್ಡ್ ಹೀಗೆ ಕಾಣುತ್ತದೆ.
06:39 ಇನ್ಸ್ಟಾಲ್ ಮಾಡುವ ಕ್ರಿಯೆಯಲ್ಲಿ ಮುಂದಿನ ಹಂತಕ್ಕೆ ಹೋಗಲು ಇಲ್ಲಿ Next ಮೇಲೆ ಕ್ಲಿಕ್ ಮಾಡಿ.
06:48 ಬಹುತರ ಸಾಫ್ಟವೇರ್ ಗಳಂತೆ ಇನ್ಸ್ಟಾಲ್ಲರ್ ಲೈಸೆನ್ಸ್ ಅಗ್ರೀಮೆಂಟ್ ತೋರಿಸುತ್ತದೆ.
06:53 ಇನ್ನುಳಿದ ಅಗ್ರೀಮೆಂಟ್ ನೋಡಲು page down ಒತ್ತಿ.
07:07 ಇದನ್ನು ಸಂಪೂರ್ಣವಾಗಿ ಓದಲು ನಾನು ಸಲಹೆ ಕೊಡುತ್ತೇನೆ.
07:11 ಬ್ಲೆಂಡರ್ ಎಂಬುದು ಉಚಿತ ಹಾಗೂ ಒಪನ್ ಸೋರ್ಸ್ ಆಗಿದೆ ಎಂಬುದನ್ನು ಗಮನಿಸಿ.
07:14 ಬ್ಲೆಂಡರ್ ಇನ್ಸ್ಟಾಲ್ ಮಾಡಲು ನೀವು ಈ ಲೈಸೆನ್ಸ್ ಅಗ್ರೀಮೆಂಟ್ ನ್ನು ಒಪ್ಪಿಕೊಳ್ಳಲೇಬೇಕು.
07:21 ಮುಂದುವರೆಸಲು ಈಗ I agree ಬಟನ್ ಮೇಲೆ ಕ್ಲಿಕ್ ಮಾಡಿ.
07:27 ಈ ಮುಂದಿನ ಹಂತ ನಿಮಗೆ ಇನ್ಸ್ಟಾಲ್ ಮಾಡಲು ಕಾಂಪೋನೆಂಟ್ ಗಳನ್ನು ಆರಿಸಿಕೊಳ್ಳಲು ಅನುಮತಿಸುತ್ತದೆ.
07:32 ಡಿಫಾಲ್ಟ್ ಆಗಿ ಆಯ್ಕೆ ಆದ ಎಲ್ಲ ಘಟಕಗಳನ್ನು ಇನ್ಸ್ಟಾಲ್ ಮಾಡಲು ನಾನು ನಿಮಗೆ ಸಲಹೆ ಕೊಡುತ್ತೇನೆ ಹಾಗೂ ಇನ್ಸ್ಟಾಲ್ ಮಾಡುವದನ್ನು ಮುಂದುವರೆಸಲು next ಬಟನ್ ಒತ್ತಿ.
07:41 ಇಲ್ಲಿ ನೀವು ಬ್ಲೆಂಡರ್ ಇನ್ಸ್ಟಾಲ್ ಮಾಡುವ ಸ್ಥಳ ಆರಿಸಿಕೊಳ್ಳಲು ಆಯ್ಕೆಗಳಿವೆ.
07:48 ಡಿಫಾಲ್ಟ್ ನಿಂದ ಪ್ರೊಗ್ರ್ಯಾಮ್ ಫೈಲ್ಸ್ ಫೋಲ್ಡರ್ ಆಯ್ಕೆಯಾಗಿದೆ.
07:51 ಇದು ಬ್ಲೆಂಡರ್ ಇನ್ಸ್ಟಾಲ್ ಮಾಡಲು ಒಳ್ಳೆಯ ಸ್ಥಳ. ಆದ್ದರಿಂದ Install ಬಟನ್ ಒತ್ತಿ.
08:04 ಈ ಹಸಿರು ಪಟ್ಟಿಗಳಿರುವ ಪ್ರೊಗ್ರೆಸ್ ಬಾರ್ ಎಷ್ಟು ಇನ್ಸ್ಟಾಲ್ಲೇಶನ್ ಮುಗಿದಿದೆ ಎಂದು ತೋರಿಸುತ್ತದೆ.
08:10 ಸಾಮಾನ್ಯವಾಗಿ ಒಂದು ನಿಮಿಷದ ಒಳಗೆ ಇದು ಮುಗಿಯುತ್ತದೆ.
08:33 ಬ್ಲೆಂಡರ್ ಸೆಟ್ಅಪ್ ಇಲ್ಲಿಗೆ ಮುಗಿಯಿತು.
08:36 ಬ್ಲೆಂಡರ್ ನಿಮ್ಮ ಮಶಿನ್ ನಲ್ಲಿ ಇನ್ಸ್ಟಾಲ್ ಮಾಡಲ್ಪಟ್ಟಿದೆ.
08:39 Run Blender ಚೆಕ್ ಬಾಕ್ಸ್ ಸೆಲೆಕ್ಟ್ ಮಾಡಿ ಇಟ್ಟುಕೊಳ್ಳಿ.
08:42 Finish ಬಟನ್ ಒತ್ತಿ.
08:45 ಬ್ಲೆಂಡರ್ ಸ್ವಯಂಚಾಲಿತವಾಗಿ ರನ್ ಆಗಲು ಆರಂಭಿಸಬೇಕು.
08:52 ಇದು ಬ್ಲೆಂಡರ್ ಬೈನರಿ ಯು ಮೂಲ ಎಕ್ಸ್ಟ್ರಾಕ್ಟ್ ಮಾಡಿದ ಡಿರೆಕ್ಟರಿ ಯಲ್ಲಿ ಇದ್ದರೆ ಮಾತ್ರ.
08:57 ಹೆಚ್ಚಿನ ಅವಲಂಬನೆಗಳಿಲ್ಲದೆ ಬ್ಲೆಂಡರ್ ಸ್ವತಂತ್ರವಾಗಿ ರನ್ ಆಗುವದು.
09:03 ಯಾವದೇ ಸಿಸ್ಟೆಮ್ ಲೈಬ್ರರಿ ಅಥವಾ ಸಿಸ್ಟೆಮ್ ಪ್ರಿಫರೆನ್ಸಸ್ ನ್ನು ಮಾರ್ಪಡಿಸಲಾಗಿಲ್ಲ.
09:10 ಈ ಟ್ಯುಟೋರಿಯಲ್ ನಲ್ಲಿ ವಿಂಡೋಸ್ ಆಪರೇಟಿಂಗ್ ಸಿಸ್ಟೆಮ್ ನಲ್ಲಿ ಬ್ಲೆಂಡರ್ ನ್ನು ಹೇಗೆ ಇನ್ಸ್ಟಾಲ್ ಮಾಡುವದೆಂದು ನಾವು ಕಲಿತಿದ್ದೇವೆ.
09:19 ಈಗ ಬ್ಲೆಂಡರ್ ವೆಬ್ಸೈಟ್ ನಿಂದ ಬ್ಲೆಂಡರ್ ನ್ನು ಡೌನ್ಲೋಡ್ ಮಾಡಲು ಪ್ರಯತ್ನಿಸಿ ಹಾಗೂ ನಿಮ್ಮ ಮಶಿನ್ ನಲ್ಲಿ ಬ್ಲೆಂಡರ್ ನ್ನು ಇನ್ಸ್ಟಾಲ್ ಹಾಗೂ ರನ್ ಮಾಡಿ.
09:28 ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯನ್ನು ಆಧರಿಸಿದ್ದು Project Oscar ಅವರಿಂದ ತಯಾರಿಸಲ್ಪಟ್ಟಿದೆ.
09:37 ಇದರ ಬಗ್ಗೆ ಹೆಚ್ಚಿನ ಮಾಹಿತಿ oscar.iitb.ac.in
09:45 ಮತ್ತು spoken-tutorial.org/NMEICT-Intro ಲಿಂಕ್ ಗಳ ಮೇಲೆ ಲಭ್ಯವಿದೆ.
09:55 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
10:01 ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
10:06 ಹೆಚ್ಚಿನ ವಿವರಗಳಿಗೆ ದಯವಿಟ್ಟು contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
10:16 ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು.

Contributors and Content Editors

Vasudeva ahitanal