Difference between revisions of "Biopython/C2/Introduction-to-Biopython/Kannada"

From Script | Spoken-Tutorial
Jump to: navigation, search
Line 316: Line 316:
 
|ಈ ಟ್ಯುಟೋರಿಯಲ್ ನ ಅನುವಾದಕಿ ಚೇತನಾ. ಧನ್ಯವಾದಗಳು
 
|ಈ ಟ್ಯುಟೋರಿಯಲ್ ನ ಅನುವಾದಕಿ ಚೇತನಾ. ಧನ್ಯವಾದಗಳು
 
|}
 
|}
 
 
Outline:
 
ಬಯೋಪೈಥಾನ್ ನ ಪ್ರಮುಖ ಲಕ್ಷಣಗಳು
 
Linux OS ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡುವ ಬಗ್ಗೆ ಮಾಹಿತಿ.
 
ಕೊಟ್ಟಿರುವ DNA ಸ್ಟ್ರ್ಯಾಂಡ್ಗಾಗಿ ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು ರಚಿಸಿ.
 
DNA ಸೀಕ್ವೆನ್ಸ್ ಇಂದ mRNA ಗೆ Transcription.
 
mRNA ಇಂದ ಪ್ರೊಟೀನ್ ಸೀಕ್ವೆನ್ಸ್ ಗೆ Translation.
 
ರಿವರ್ಸ್ ಕಾಂಪ್ಲಿಮೆಂಟ್ ಮೆಥಡ್ ಅನ್ನು ಬಳಸುವುದರ ಮೂಲಕ ಡಿಎನ್ಎ ಸ್ಟ್ರಾಂಡ್ ಅನ್ನು ಟೆಂಪ್ಲೇಟ್ ಡಿಎನ್ಎ ಸ್ಟ್ರ್ಯಾಂಡ್ಗೆ ಕೋಡಿಂಗ್ ಮಾಡಿ.
 

Revision as of 16:20, 8 December 2017

Time
Narration
00:01 ಬಯೋಪೈಥಾನ್ಗೆ ಪೀಠಿಕೆ ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು: * ಬಯೋಪೈಥಾನ್ ನ ಮುಖ್ಯ ವೈಶಿಷ್ಟ್ಯಗಳು
00:10 * ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಡೌನ್ ಲೋಡ್ ಮಾಡಿ, ಇನ್ಸ್ಟಾಲ್ ಮಾಡುವ ಬಗ್ಗೆ ಮಾಹಿತಿ
00:15 * ಮತ್ತು ಬಯೋಪೈಥಾನ್ ನ ಟೂಲ್ಸ್ ಅನ್ನು ಬಳಸಿ, DNA sequence(ಸೀಕ್ವೆನ್ಸ್) ನಿಂದ ಪ್ರೊಟೀನ್ ಸೀಕ್ವೆನ್ಸ್ ಗೆ ಟ್ರ್ಯಾನ್ಸ್ಲೇಶನ್ (translation) ಮಾಡುವುದು.
00:22 ಈ ಟ್ಯುಟೋರಿಯಲ್ ಅನ್ನು ಅರ್ಥ ಮಾಡಿಕೊಳ್ಳಲು, ನೀವು ಈ ವಿಷಯಗಳನ್ನು ತಿಳಿದಿರಬೇಕು
00:25 ಅಂಡರ್ ಗ್ರಾಡ್ಯುಯೇಟ್ (undergraduate) ಬಯೋಕೆಮಿಸ್ಟ್ರಿ (Biochemistry) ಅಥವಾ ಬಯೋಇನ್ಫಾರ್ಮಟಿಕ್ಸ್ (Bioinformatics)
00:29 ಮತ್ತು ಬೇಸಿಕ್ ಪೈಥಾನ್ ಪ್ರೊಗ್ರಾಮಿಂಗ್
00:31 ಪೈಥಾನ್ ಟ್ಯುಟೋರಿಯಲ್ ನ ಲಿಂಕ್ ಅನ್ನು ನೋಡಿ.
00:35 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Ubuntu OS ನ 12.04 ನೇ ಆವೃತ್ತಿ,
00:41 ಪೈಥಾನ್ ನ 2.7.3 ನೇ ಆವೃತ್ತಿ
00:44 Ipython ನ 0.12.1 ಆವೃತ್ತಿ ಮತ್ತು
00:48 ಬಯೋಪೈಥಾನ್ ನ 1.58 ಆವೃತ್ತಿಯನ್ನು ಉಪಯೋಗಿಸಿದ್ದೇನೆ.
00:51 ಬಯೋಪೈಥಾನ್ ಎನ್ನುವುದು ಕಾಂಪ್ಯುಟೇಶನಲ್ ಬಯಾಲಜಿಗಾಗಿ ಮಾಡ್ಯೂಲ್ಗಳ ಸಂಗ್ರಹವಾಗಿದೆ.
00:57 ಇದು ಬಯೊ ಇನ್ಫಾರ್ಮ್ಯಾಟಿಕ್ಸ್ ಗೆ ಬೇಕಾಗುವ ಬೇಸಿಕ್ ಮತ್ತು ಅಡ್ವಾನ್ಸ್ಡ್ ಕಾರ್ಯಗಳನ್ನು ಮಾಡಬಲ್ಲದು.
01:03 ಬಯೋಪೈಥಾನ್ ಟೂಲ್ ಗಳನ್ನು :
01:05 ಪಾರ್ಸಿಂಗ್, ಅಂದರೆ ವಿವಿಧ ರೀತಿಯ ಫೈಲ್ ಫಾರ್ಮ್ಯಾಟ್ ಗಳ, ಫೈಲ್ ಗಳಿಂದ ಮಾಹಿತಿಗಳನ್ನು ಪಡೆಯಬಹುದು. ಉದಾಹರಣೆಗೆ FASTA, Genbank ಇತ್ಯಾದಿ
01:14 * ಡಾಟಾಬೇಸ್ ವೆಬ್ ಸೈಟ್ ಗಳಾದ NCBI, ExPASY ಇತ್ಯಾದಿ, ಇವುಗಳಿಂದ ಮಾಹಿತಿಗಳನ್ನು ಡೌನ್ ಲೋಡ್ ಮಾಡಬಹುದು.
01:22 * BLAST ಇತ್ಯಾದಿ Bioinformatic algorithm (ಬಯೊ ಇನ್ಫಾರ್ಮ್ಯಾಟಿಕ್ ಅಲ್ಗಾರಿದಮ್) ಅನ್ನು Run ಮಾಡಬಹುದು.
01:26 * ಕ್ರಮದಲ್ಲಿ ಸಾಮಾನ್ಯ ಕಾರ್ಯಾಚರಣೆಗಳನ್ನು ನಿರ್ವಹಿಸುವ ಸಾಧನಗಳನ್ನು ಇದು ಹೊಂದಿದೆ.
01:31 ಉದಾಹರಣೆಗೆ - complements, transcription, translation ಇತ್ಯಾದಿಗಳನ್ನು ಪಡೆಯುವುದು.
01:38 ಅಲೈನ್ಮೆಂಟ್ ಗಳನ್ನು ಮಾಡಲು ,
01:40 ಮತ್ತು ಕಾರ್ಯಗಳನ್ನು ಪ್ರತ್ಯೇಕ ಕಾರ್ಯವಿಧಾನಗಳನ್ನಾಗಿ ಮಾಡಲು ಕೋಡ್ ಬರೆಯಬಹುದು.
01:46 ಡೌನ್ ಲೋಡ್ ನ ಬಗೆಗೆ ಮಾಹಿತಿ :
01:48 ಬಯೋಪೈಥಾನ್ ಪ್ಯಾಕೇಜ್, ಪೈಥಾನ್ ನ ಭಾಗವಲ್ಲ. ಇದನ್ನು ಸ್ವತಂತ್ರವಾಗಿ ಡೌನ್ ಲೋಡ್ ಮಾಡಬೇಕು.
01:54 ವಿವರಗಳಿಗಾಗಿ, ಕೆಳಗಿನ ಲಿಂಕ್ ಅನ್ನು ನೋಡಿ.
01:59 ಲಿನಕ್ಸ್ ಸಿಸ್ಟಮ್ ನಲ್ಲಿ ಇನ್ಸ್ಟಲೇಶನ್ :
02:02 Synaptic Package Manager ಅನ್ನು ಉಪಯೋಗಿಸಿ Python, Ipython ಮತ್ತು ಬಯೋಪೈಥಾನ್ ಪ್ಯಾಕೇಜ್ ಗಳನ್ನು ಇನ್ಸ್ಟಾಲ್ ಮಾಡಿ.
02:08 ಪ್ರಿರಿಕ್ವಿಸಿಟ್ ಸಾಫ್ಟ್ ವೇರ್ ಗಳು ತಾವಾಗಿಯೇ ಇನ್ಸ್ಟಾಲ್ ಆಗುತ್ತವೆ.
02:13 ಗ್ರಾಫಿಕ್ ಔಟ್ ಪುಟ್ ಮತ್ತು ಪ್ಲಾಟ್ ಗಾಗಿ ಹೆಚ್ಚುವರಿ ಪ್ಯಾಕೇಜ್ಗಳನ್ನು ಇನ್ಸ್ಟಾಲ್ ಮಾಡಬೇಕು
02:18 Ctrl, Alt ಮತ್ತು T ಕೀಗಳನ್ನು ಒಮ್ಮೆಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ.
02:24 Python, Ipython ಮತ್ತು Biopython ಗಳನ್ನು ನಾನು ಈಗಾಗಲೇ ನನ್ನ ಸಿಸ್ಟಮ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ.
02:30 Ipython ಇಂಟರ್ ಪ್ರೆಟರ್ ಅನ್ನು ಸ್ಟಾರ್ಟ್ ಮಾಡಲು ipython ಎಂದು ಟೈಪ್ ಮಾಡಿ Enter ಕೀಯನ್ನು ಒತ್ತಿ.
02:35 IPython ಎಂಬ ಪ್ರಾಂಪ್ಟ್ ಸ್ಕ್ರೀನ್ ನ ಮೇಲೆ ಕಾಣುತ್ತದೆ.
02:38 Biopython ನ ಇನ್ಸ್ಟಲೇಶನ್ ಅನ್ನು ಪರೀಕ್ಷಿಸಲು ಪ್ರಾಮ್ಟ್ ನಲ್ಲಿ import Bio ಎಂದು ಟೈಪ್ ಮಾಡಿ Enter ಕೀಯನ್ನು ಒತ್ತಿ.
02:48 ಯಾವುದೇ ಎರರ್ ಮೆಸೇಜ್ ಬರದಿದ್ದಲ್ಲಿ ಬಯೋಪೈಥಾನ್ ಇನ್ಸ್ಟಾಲ್ ಆಗಿದೆ ಎಂದು ಅರ್ಥ.
02:54 ಇಲ್ಲಿ, ನಾನು ನಿಮಗೆ, ಪೈಥಾನ್ ಲಾಂಗ್ವೇಜ್, ಕೇಸ್ ಸೆನ್ಸಿಟಿವ್ ಆಗಿದೆ ಎಂದು ನೆನಪಿಸಲು ಬಯಸುತ್ತೇನೆ.
02:59 ಕೀವರ್ಡ್ಗ್ ಗಳನ್ನು, ವೇರಿಯೇಬಲ್ ಅಥವಾ ಫಂಕ್ಷನ್ ಗಳನ್ನು, ಟೈಪ್ ಮಾಡುವಾಗ ಮುನ್ನೆಚ್ಚರಿಕೆವಹಿಸಿ.
03:04 ಉದಾಹರಣೆಗೆ, ಮೇಲಿನ ಸಾಲಿನಲ್ಲಿ import ನ i, lowercase ನಲ್ಲಿಯೂ ಮತ್ತು Bio ಶಬ್ದದ B uppercase ನಲ್ಲಿಯೂ ಇದೆ.
03:12 ಈ ಟ್ಯುಟೋರಿಯಲ್ ನಲ್ಲಿ, Biopython ನ ಮಾಡ್ಯೂಲ್ ಅನ್ನು ಉಪಯೋಗಿಸಿ, DNA sequence ಅನ್ನು translate ಮಾಡುತ್ತೇವೆ.
03:19 ಇದು, ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ.
03:22 ಮೊದಲಿಗೆ, DNA strand ಅನ್ನು ಕೋಡ್ ಮಾಡಲು, sequence object ಅನ್ನು ರಚಿಸಿ.
03:27 ನಂತರ, DNA strand ನಿಂದ mRNA ಮಾಡುವ ಕೋಡ್ ನ transcription.
03:32 ಕೊನೆಗೆ, mRNA ಇಂದ protein sequence ಗೆ translation.
03:37 ನಾವು, ಈ ಸ್ಲೈಡ್ ನಲ್ಲಿರುವ DNA strand ನ ಕೋಡಿಂಗ್ ಅನ್ನು ಉದಾಹರಣೆಯಾಗಿ ಉಪಯೋಗಿಸುತ್ತೇವೆ.
03:42 ಇದು , ಸಣ್ಣ protein ಸೀಕ್ವೆನ್ಸ್ ಅನ್ನು ಕೋಡ್ ಮಾಡುತ್ತದೆ.
03:46 ಮೊದಲನೇ ಹಂತದಲ್ಲಿ, ಮೇಲಿನ DNA strand ಗಾಗಿ sequence object ಅನ್ನು ರಚಿಸುತ್ತೇವೆ.
03:52 terminal ಗೆ ಹಿಂದಿರುಗೋಣ.
03:55 ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು ರಚಿಸಲು, Bio ಪ್ಯಾಕೇಜ್ ನಿಂದ Seq ಮಾಡ್ಯೂಲ್ ಅನ್ನು ಇಂಪೋರ್ಟ್ ಮಾಡಿಕೊಳ್ಳಬೇಕು.
04:02 Seq ಮಾಡ್ಯೂಲ್, ಸೀಕ್ವೆನ್ಸ್ ಆಬ್ಜೆಕ್ಟ್ ಗಳನ್ನು ಸಂಗ್ರಹಿಸಲು ಮತ್ತು ಪ್ರೊಸೆಸ್ ಮಾಡಲು ಮೆಥಡ್ ಗಳನ್ನು ಒದಗಿಸುತ್ತದೆ.
04:08 ಪ್ರಾಂಪ್ಟ್ ನಲ್ಲಿ, from Bio dot Seq import Seq ಎಂದು ಟೈಪ್ ಮಾಡಿ Enter ಕೀಯನ್ನು ಒತ್ತಿ.
04:17 ನಂತರ, ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು ರಚಿಸುವಾಗ, ಸ್ಟ್ರ್ಯಾಂಡ್ ನ ಅಲ್ಫಾಬೆಟ್ ಗಳನ್ನು ಸ್ಪಷ್ಟವಾಗಿ ಸೂಚಿಸಿ.
04:24 ಅಂದರೆ, ಅಲ್ಫಾಬೆಟ್ ಗಳ ಸಾಲು, nucleotides (ನ್ಯೂಕ್ಲಿಯೋಟೈಡ್ಸ್) ಗಾಗಿ ಅಥವಾ amino acids(ಅಮೈನೊ ಅಸಿಡ್ಸ್) ಗಾಗಿ ಕೋಡ್ ಮಾಡುತ್ತದೆ ಎಂಬುದನ್ನು ಸೂಚಿಸಬೇಕು.
04:32 ಹಾಗೆ ಮಾಡಲು, ನಾವು ಆಲ್ಫಾಬೆಟ್ ಪ್ಯಾಕೇಜ್ನಿಂದ ಐಯುಪಿಎಸಿ ಘಟಕವನ್ನು ಬಳಸುತ್ತೇವೆ.
04:38 ಪ್ರಾಂಪ್ಟಿನಲ್ಲಿ, from Bio dot Alphabet import IUPAC ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ.
04:48 ನಾವು import ಮತ್ತು from ಸ್ಟೇಟ್ಮೆಂಟ್ ಗಳನ್ನು Seq ಮತ್ತು IUPAC ಮಾಡ್ಯೂಲ್ ಗಳನ್ನು load ಮಾಡಲು ಬಳಸಿದ್ದೇವೆ ಎಂಬುದನ್ನು ಗಮನಿಸಿ.
04:56 ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು cdna ಎಂಬ ವೇರಿಯೇಬಲ್ ನಲ್ಲಿ ಸಂಗ್ರಹಿಸಿ.
05:01 ಪ್ರಾಂಪ್ಟ್ ನಲ್ಲಿ, ಸಾಮಾನ್ಯ string ನಂತೆ, cdna equal to Seq ಎಂದು ಟೈಪ್ ಮಾಡಿ.
05:08 ಸೀಕ್ವೆನ್ಸ್ ಅನ್ನು ಡಬಲ್ ಕೋಟ್ಸ್ ಮತ್ತು ಆವರಣದೊಳಗೆ ಎನ್ಕ್ಲೋಸ್ ಮಾಡಿ.
05:13 ನಮ್ಮ ಸೀಕ್ವೆನ್ಸ್ DNA ನ ತುಣುಕು ಎಂದು ನಮಗೆ ಗೊತ್ತಿರುವುದರಿಂದ, unambiguous DNA ಎಂದು ಟೈಪ್ ಮಾಡಿ. ಅಲ್ಫಾಬೆಟ್ ಆಬ್ಜೆಕ್ಟ್ ಆರ್ಗ್ಯುಮೆಂಟ್ ಆಗಿರುತ್ತದೆ.
05:21 ಔಟ್ ಪುಟ್ ಗಾಗಿ, cdna ಎಂದು ಟೈಪ್ ಮಾಡಿ ಮತ್ತು Enter ಕೀಯನ್ನು ಒತ್ತಿ.
05:26 ಔಟ್ಪುಟ್, DNA sequence ಅನ್ನು ಸೀಕ್ವೆನ್ಸ್ ಆಬ್ಜೆಕ್ಟ್ ಆಗಿ ತೋರಿಸುತ್ತದೆ.
05:30 DNA ಸ್ಟ್ರ್ಯಾಂಡ್ ಅನ್ನು ಅದಕ್ಕೆ ಅನುರೂಪವಾದ mRNA ಗೆ ಲಿಪ್ಯಂತರಣ ಮಾಡೋಣ.
05:35 ನಾವು Seq ಮಾಡ್ಯೂಲ್ ನ buit-in ವಿಧಾನವಾದ transcribe ಅನ್ನು ಬಳಸುತ್ತೇವೆ.
05:39 ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ.
05:41 ಈ ಕೆಳಗಿನ ಔಟ್ ಔಟ್ ಅನ್ನು mma ವೇರಿಯೇಬಲ್ ನಲ್ಲಿ ಸಂಗ್ರಹಿಸಿ.
05:45 ಪ್ರಾಂಪ್ಟ್ ನಲ್ಲಿ mma equal to cdna dot transcribe open and close parentheses ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ.
05:55 ಔಟ್ ಪುಟ್ ಗಾಗಿ, mma ಎಂದು ಟೈಪ್ ಮಾಡಿ Enter ಕೀಯನ್ನು ಒತ್ತಿ.
06:01 ಔಟ್ ಪುಟ್ ಅನ್ನು ಗಮನಿಸಿ. transcribe ಮೆಥಡ್ ಅನ್ನು ಬಳಸಿ, DNA ಸೀಕ್ವೆನ್ಸ್ ನಲ್ಲಿರುವ thiamin ಅನ್ನು Uracil ನೊಂದಿಗೆ ಬದಲಾಯಿಸಲಾಗಿದೆ.
06:09 ನಂತರ, mRNA ಯನ್ನು ಅದರ protein ಸೀಕ್ವೆನ್ಸ್ ಗೆ translate ಮೆಥಡ್ ಅನ್ನು ಉಪಯೋಗಿಸಿ, translate ಮಾಡಿ.
06:16 ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ. protein equal to mrna dot translate open and close parentheses. Enter ಕೀಯನ್ನು ಒತ್ತಿ.
06:27 ನಿರ್ದೇಶಿತವಾಗಿಲ್ಲದಿದ್ದರೆ, translate ಮೆಥಡ್ RNA ಅಥವಾ DNA ಸೀಕ್ವೆನ್ಸ್ ಅನ್ನು ಸ್ಟ್ಯಾಂಡರ್ಡ್ ಜನೆಟಿಕ್ ಕೋಡ್ ಅನ್ನು ಉಪಯೋಗಿಸಿ ಟ್ರ್ಯಾನ್ಸ್ಲೇಟ್ ಮಾಡುತ್ತದೆ.
06:36 ಔಟ್ಪುಟ್ ಒಂದು ಅಮೈನೊ ಆಸಿಡ್ ಸೀಕ್ವೆನ್ಸ್ ಅನ್ನು ತೋರಿಸುತ್ತದೆ.
06:40 ಟ್ರ್ಯಾನ್ಸ್ಲೇಟೆಡ್ ಸೀಕ್ವೆನ್ಸ್ ನಲ್ಲಿ, stop codons (ಸ್ಟಾಪ್ ಕೋಡಾನ್ಸ್) ನ ಉಪಸ್ಥಿತಿಯ ಬಗ್ಗೆ ಮಾಹಿತಿಯನ್ನೂ ಔಟ್ ಪುಟ್ ತೋರಿಸುತ್ತದೆ.
06:47 ಪ್ರೊಟೀನ್ ಸೀಕ್ವೆನ್ಸ್ ನ ಅಂತ್ಯದಲ್ಲಿರುವ ನಕ್ಷತ್ರವನ್ನು ಗಮನಿಸಿ. ಇದು 'ಸ್ಟಾಪ್ ಕೋಡಾನ್' ಅನ್ನು ಸೂಚಿಸುತ್ತದೆ.
06:53 ಮೇಲಿನ ಕೋಡ್ನಲ್ಲಿ, ನಾವು ಟ್ರಾನ್ಸ್ಕ್ರಿಪ್ಷನ್ ಗಾಗಿ, ಡಿಎನ್ಎ ಸ್ಟ್ರಾಂಡ್ ನ ಕೋಡಿಂಗ್ ಅನ್ನು ಬಳಸಿದ್ದೇವೆ.
06:59 ಬಯೋಪೈಥಾನ್ ನಲ್ಲಿ, ಟ್ರಾನ್ಸ್ಕ್ರೈಬ್ ಮೆಥಡ್, ಡಿಎನ್ಎ ಸ್ಟ್ರ್ಯಾಂಡ್ ನ ಕೋಡಿಂಗ್ನಲ್ಲಿ ಮಾತ್ರ ಕೆಲಸ ಮಾಡುತ್ತದೆ.
07:04 ಆದಾಗ್ಯೂ, ನೈಜ ಜೈವಿಕ ವ್ಯವಸ್ಥೆಗಳಲ್ಲಿ, ಟ್ರಾನ್ಸ್ಕ್ರಿಪ್ಷನ್ ಪ್ರಕ್ರಿಯೆಯು ಟೆಂಪ್ಲೆಟ್ ಸ್ಟ್ರಾಂಡ್ ನೊಂದಿಗೆ ಆರಂಭವಾಗುತ್ತದೆ.
07:11 ನೀವು ಟೆಂಪ್ಲೆಟ್ ಸ್ಟ್ರ್ಯಾಂಡ್ ನೊಂದಿಗೆ ಪ್ರಾರಂಭಿಸುತ್ತಿದ್ದರೆ ಟರ್ಮಿನಲ್ನಲ್ಲಿ ತೋರಿಸಿರುವಂತೆ, ರಿವರ್ಸ್ ಕಾಂಪ್ಲಿಮೆಂಟ್ ಮೆಥಡ್ ಅನ್ನು ಬಳಸಿಕೊಂಡು ಕೋಡಿಂಗ್ ಸ್ಟ್ರಾಂಡ್ ಗೆ ಪರಿವರ್ತಿಸಿ.
07:20 ಕೋಡಿಂಗ್ ಸ್ಟ್ರ್ಯಾಂಡ್ಗಾಗಿ, ಮೇಲಿನ ಉಳಿದ ಭಾಗದ ಕೋಡ್ನ ಗಳನ್ನು ಅನುಸರಿಸಿ.
07:24 ಬಯೊಪೈಥಾನ್ ನ ಮೆಥಡ್ ಗಳನ್ನು ಬಳಸಿ ನಾವು ಒಂದು ಡಿಎನ್ಎ ಸೀಕ್ವೆನ್ಸ್ ಅನ್ನು ಪ್ರೋಟೀನ್ ಸೀಕ್ವೆನ್ಸ್ ಗೆ ಟ್ರ್ಯಾನ್ಸ್ಲೇಟ್ ಮಾಡಿದ್ದೇವೆ.
07:31 ಯಾವುದೇ ಗಾತ್ರದ ಡಿಎನ್ಎ ಸೀಕ್ವೆನ್ಸ್ ಅನ್ನು ಪ್ರೊಟೀನ್ ಸೀಕ್ವೆನ್ಸ್ ಗೆ ಈ ಕೋಡ್ ಅನ್ನು ಬಳಸಿ ಟ್ರ್ಯಾನ್ಸ್ಲೇಟ್ ಮಾಡಬಹುದು.
07:37 ಇಲ್ಲಿಗೆ, ನಾವು ಸಂಕ್ಷಿಪ್ತಗೊಳಿಸೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತ ಅಂಶಗಳು:
07:41 ಬಯೋಪೈಥಾನ್ ನ ಪ್ರಮುಖ ಲಕ್ಷಣಗಳು
07:43 Linux OS ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡುವ ಬಗ್ಗೆ ಮಾಹಿತಿ.
07:48 ಕೊಟ್ಟಿರುವ DNA ಸ್ಟ್ರ್ಯಾಂಡ್ಗಾಗಿ ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು ರಚಿಸಿ.
07:52 DNA ಸೀಕ್ವೆನ್ಸ್ ಇಂದ mRNA ಗೆ Transcription.
07:56 mRNA ಇಂದ ಪ್ರೊಟೀನ್ ಸೀಕ್ವೆನ್ಸ್ ಗೆ Translation.
08:00 ಈಗ, ಅಸೈನ್ಮೆಂಟ್ ಗಾಗಿ -
08:02 ಕೊಟ್ಟಿರುವ DNA ಸೀಕ್ವೆನ್ಸ್ ಅನ್ನು protein ಸೀಕ್ವೆನ್ಸ್ ಗೆ ಟ್ರ್ಯಾನ್ಸ್ಲೇಟ್ ಮಾಡುವುದು.
08:06 ಔಟ್ ಪುಟ್ ಅನ್ನು ಗಮನಿಸಿ.
08:08 ಪ್ರೊಟೀನ್ ಸೀಕ್ವೆನ್ಸ್ ಆಂತರಿಕ stop codon ಅನ್ನು ಹೊಂದಿದೆ.
08:11 ಪ್ರಕೃತಿಯಲ್ಲಿ ಸಂಭವಿಸುವಂತೆ, ಫ್ರೇಮ್ ನಲ್ಲಿ, ಮೊದಲ stop codon ವರೆಗೆ DNA ಅನ್ನು ಟ್ರ್ಯಾನ್ಸ್ಲೇಟ್ ಮಾಡಿ.
08:17 ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್, ಈ ಕೆಳಗಿನ ಕೋಡ್ ಅನ್ನು ಹೊಂದಿರಬೇಕು.
08:20 ನಾವು to underscore stop ಆರ್ಗ್ಯುಮೆಂಟ್ ಅನ್ನು translate() ಮೆಥಡ್ ನಲ್ಲಿ ಉಪಯೋಗಿಸಿದ್ದೇವೆ ಎಂಬುದನ್ನು ಗಮನಿಸಿ. ಔಟ್ಪುಟ್ ಗಮನಿಸಿ.
08:27 stop codon ಸ್ವತಃ ಟ್ರ್ಯಾನ್ಸ್ಲೇಟ್ ಆಗಿರುವುದಿಲ್ಲ.
08:31 ನಿಮ್ಮ protein ಸೀಕ್ವೆನ್ಸ್ ನ ಕೊನೆಯಲ್ಲಿ ಸ್ಟಾಪ್ ಚಿಹ್ನೆಯನ್ನು ಸೇರಿಸಲಾಗಿಲ್ಲ.
08:36 ಈ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
08:39 ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
08:43 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. ಆನ್ ಲೈನ್ ಟೆಸ್ಟ್ ನಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
08:50 ಹೆಚ್ಚಿನ ಮಾಹಿತಿಗಾಗಿ, contact @ spoken-tutorial.org ಗೆ ಬರೆಯಿರಿ.
08:53 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
08:59 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ.
09:03 ಈ ಟ್ಯುಟೋರಿಯಲ್ ನ ಅನುವಾದಕಿ ಚೇತನಾ. ಧನ್ಯವಾದಗಳು

Contributors and Content Editors

Chetana, Sandhya.np14