Difference between revisions of "Avogadro/C2/Build-molecules/Kannada"

From Script | Spoken-Tutorial
Jump to: navigation, search
(Created page with "{| border =1 |'''Time''' |'''Narration''' |- | 00:01 | ''' Build Molecules ''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್...")
 
Line 158: Line 158:
 
|-
 
|-
 
| 03:49
 
| 03:49
|ಅಚಲವಾದ ದೃಢೀಕರವನ್ನು ಪಡೆಯಲು, ಪ್ಯಾನಲ್ ನಲ್ಲಿ '''Aniline '''  ಸ್ಟ್ರಕ್ಚರ್ ಅನ್ನು ಆಪ್ಟಿಮೈಜ್ ಮಾಡಬೇಕು. |-
+
|ಅಚಲವಾದ ದೃಢೀಕರವನ್ನು ಪಡೆಯಲು, ಪ್ಯಾನಲ್ ನಲ್ಲಿ '''Aniline '''  ಸ್ಟ್ರಕ್ಚರ್ ಅನ್ನು ಆಪ್ಟಿಮೈಜ್ ಮಾಡಬೇಕು.
 +
|-
 
| 03:56
 
| 03:56
 
|ಆಪ್ಟಿಮೈಜ್ ಮಾಡಲು, ಟೂಲ್ ಬಾರ್ ನಲ್ಲಿ,  '''  Auto Optimization Tool '''  ನ ಮೇಲೆ ಕ್ಲಿಕ್ ಮಾಡಿ.  
 
|ಆಪ್ಟಿಮೈಜ್ ಮಾಡಲು, ಟೂಲ್ ಬಾರ್ ನಲ್ಲಿ,  '''  Auto Optimization Tool '''  ನ ಮೇಲೆ ಕ್ಲಿಕ್ ಮಾಡಿ.  

Revision as of 12:43, 24 March 2018

Time Narration
00:01 Build Molecules ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು: ಡೇಟಾಬೇಸ್ ನಿಂದ ಮೊಲಿಕ್ಯೂಲ್ ಗಳನ್ನು ಇಂಪೋರ್ಟ್ ಮಾಡುವುದು,
00:11 ತಿರುಗಿಸುವುದು(ರೋಟೇಟ್ ಮಾಡುವುದು), ಝೂಮ್ ಇನ್ ಮಾಡುವುದು ಮತ್ತು ಝೂಮ್ ಔಟ್ ಮಾಡುವುದು,
00:15 ಪ್ಯಾನಲ್ ನ ಮೇಲೆ ಮೊಲಿಕ್ಯೂಲ್ ಗಳನ್ನು ನಿರ್ಮಿಸುವುದು,
00:17 ಬಲಕ್ಷೇತ್ರ (ಫೋರ್ಸ್ ಫೀಲ್ಡ್) ಅನ್ನು ಸೆಟ್ ಮಾಡುವುದು ಮತ್ತು ಜೊಮೆಟ್ರಿ ಯನ್ನು ಆಪ್ಟಿಮೈಜ್ ಮಾಡುವುದು
00:21 ಬಾಂಡ್ ನ ಉದ್ದ,ಕೋನ ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು,
00:25 ಫ್ರ್ಯಾಗ್ಮೆಂಟ್ ಲೈಬ್ರರಿಯನ್ನು ತೋರಿಸುವುದು,
00:27 ಡಿ.ಎನ್.ಎ. ಮೊಲಿಕ್ಯೂಲ್ ಗಳನ್ನು ಮತ್ತು Peptide (ಪೆಪ್ಟೈಡ್) ಗಳನ್ನು ನಿರ್ಮಿಸುವುದು- ಇವುಗಳ ಕುರಿತು ಕಲಿಯುವೆವು.
00:31 ಇಲ್ಲಿ ನಾನು Ubuntu Linux OS 14.04 ಆವೃತ್ತಿ,

Avogadro 1.1.1 ಆವೃತ್ತಿ ಮತ್ತು ಇಂಟರ್ನೆಟ್ ಸಂಪರ್ಕ- ಇವುಗಳನ್ನು ಬಳಸುತ್ತಿದ್ದೇನೆ.

00:44 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ಕೆಮೆಸ್ಟ್ರಿ (ರಸಾಯನ ಶಾಸ್ತ್ರ) ದ ಜ್ಞಾನವನ್ನು ಹೊಂದಿರಬೇಕು. Avogadro ವನ್ನು ಡೌನ್ಲೋಡ್ ಮಾಡಲು, ದಯವಿಟ್ಟುsourceforge.net/projects/avogadro ಈ ಲಿಂಕ್ ಅನ್ನು ಬಳಸಿ.
00:53 ನಾನು ಈಗಾಗಲೇ Avogadro ವನ್ನು ಡೌನ್ಲೋಡ್ ಮಾಡಿದ್ದೇನೆ.
00:56 Avogadro ವನ್ನು ಓಪನ್ ಮಾಡಲು , Dash home ನ ಮೇಲೆ ಕ್ಲಿಕ್ ಮಾಡಿ.
01:00 ಸರ್ಚ್ ಬಾರ್ ನಲ್ಲಿ avogadro ಎಂದು ಟೈಪ್ ಮಾಡಿ.
01:02 ಅಪ್ಲಿಕೇಷನ್ ಅನ್ನು ಓಪನ್ ಮಾಡಲು, Avogadro ಐಕಾನ್ ನ ಮೇಲೆ ಕ್ಲಿಕ್ ಮಾಡಿ.
01:08 ಈಗ ಒಂದು xylene (ಕ್ಸೈಲೀನ್) ಮೊಲಿಕ್ಯೂಲ್ ಅನ್ನು chemical structure database (ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್) ನಿಂದ ಇಂಪೋರ್ಟ್ ಮಾಡುವುದರಿಂದ ಆರಂಭಿಸೋಣ.
01:15 ಮೊಲಿಕ್ಯೂಲ್ ಅನ್ನು ಇಂಪೋರ್ಟ್ ಮಾಡಲು, ಕಾರ್ಯ ನಿರ್ವಹಿಸುತ್ತಿರುವ ಇಂಟರ್ನೆಟ್ ಸಂಪರ್ಕ ಬೇಕು.
01:19 File ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ, Import ಗೆ ಹೋಗಿ.
01:23 ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ.
01:25 Fetch by chemical name (ಫೆಚ್ ಬೈ ಕೆಮಿಕಲ್ ನೇಮ್) ಅನ್ನು ಆಯ್ಕೆ ಮಾಡಿ.
01:28 Chemical name ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
01:30 ವಿವರಣೆಗಾಗಿ , ನಾನು ಸರ್ಚ್ ಬಾಕ್ಸ್ ನಲ್ಲಿ xylene(ಕ್ಸೈಲೀನ್) ಎಂದು ಟೈಪ್ ಮಾಡುವೆನು.
01:36 OK ಬಟನ್ ನ ಮೇಲೆ ಕ್ಲಿಕ್ ಮಾಡಿ.
01:38 ಈಗ ಪ್ಯಾನಲ್ ನ ಮೇಲೆ ನಾವು xylene ಮೊಲಿಕ್ಯೂಲ್ ಅನ್ನು ಹೊಂದಿದ್ದೇವೆ.
01:42 ಈಗ Panel ನಲ್ಲಿ ಮೊಲಿಕ್ಯೂಲ್ ಅನ್ನು ತಿರುಗಿಸೋಣ.
01:45 ಟೂಲ್ ಬಾರ್ ನಲ್ಲಿ Navigation tool ನ ಮೇಲೆ ಕ್ಲಿಕ್ ಮಾಡಿ.
01:49 ಕರ್ಸರ್ ಅನ್ನು ಮೊಲಿಕ್ಯೂಲ್ ನ ಮೇಲೆ ಇಡಿ.
01:52 ಮೌಸ್ ನ ಎಡ ಬಟನ್ ಅನ್ನು ಹಿಡಿದುಕೊಂಡು ಡ್ರ್ಯಾಗ್ ಮಾಡಿ.
01:56 ಗಮನಿಸಿ: ದಿಕ್ಸೂಚಿ ಬಾಣಗಳು, ಡ್ರ್ಯಾಗ್ ಮಾಡಿರುವುದನ್ನು ಸೂಚಿಸುತ್ತದೆ.
02:00 ಮೊಲಿಕ್ಯೂಲ್ ಅನ್ನು ಟ್ರಾನ್ಸ್ಲೇಟ್ ಮಾಡಲು, ಮೌಸ್ ನ ಬಲ ಬಟನ್ ಅನ್ನು ಒತ್ತಿ ಡ್ರ್ಯಾಗ್ ಮಾಡಿ.
02:06 ಸ್ಟ್ರಕ್ಚರ್ ಅನ್ನು ಝೂಮ್ ಇನ್ ಮತ್ತು ಝೂಮ್ ಔಟ್ ಮಾಡಲು, ಮೌಸ್ ನ ಚಕ್ರವನ್ನು ಸ್ಕ್ರೋಲ್ ಮಾಡಿ.
02:10 ಈಗ ಒಂದು ಮೊಲಿಕ್ಯೂಲ್ ಅನ್ನು ರಚಿಸುವುದು ಹೇಗೆ ಎಂದು ಕಲಿಯೋಣ.
02:14 ಮೊಲಿಕ್ಯೂಲ್ ಅನ್ನು ರಚಿಸಲು, ಟೂಲ್ ಬಾರ್ ನಲ್ಲಿ Draw Tool ಐಕಾನ್ ಅನ್ನು ಕ್ಲಿಕ್ ಮಾಡಿ.
02:19 Draw Settings ಮೆನ್ಯುವಿನಡಿಯಲ್ಲಿ, ನಾವು Element ಡ್ರಾಪ್ ಡೌನ್ ಬಟನ್,

Bond Order ಡ್ರಾಪ್ ಡೌನ್ ಬಟನ್ ಮತ್ತು Adjust Hydrogens ಚೆಕ್ ಬಾಕ್ಸ್ ಅನ್ನು ನೋಡಬಹುದು.

02:30 ನಿಮಗೆ ಸ್ಟ್ರಕ್ಚರ್ ನಲ್ಲಿ ಹೈಡ್ರೋಜನ್(ಜಲಜನಕ) ಬೇಡವಾದಲ್ಲಿ Adjust Hydrogens ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ.
02:37 Element ಡ್ರಾಪ್ ಡೌನ್ ಲಿಸ್ಟ್ ಎಲಿಮೆಂಟ್ ಗಳ ಪಟ್ಟಿಯನ್ನು ತೋರಿಸುತ್ತದೆ.
02:42 ಸಂಪೂರ್ಣ Periodic table (ಪೀರಿಯೋಡಿಕ್ ಟೇಬಲ್) ಅನ್ನು ಬೇರೆಯದೇ ವಿಂಡೋದಲ್ಲಿ ನೋಡಲು, Other ನ ಮೇಲೆ ಕ್ಲಿಕ್ ಮಾಡಿ.
02:48 ವಿಂಡೋವನ್ನು ಕ್ಲೋಸ್ ಮಾಡಲು Close (X) ನ ಮೇಲೆ ಕ್ಲಿಕ್ ಮಾಡಿ.
02:51 ಈಗ ಪ್ಯಾನಲ್ ನ ಮೇಲೆ Aniline (ಅನಿಲಿನ್) on the Panel .
02:55 Element ಡ್ರಾಪ್ ಡೌನ್ ಲಿಸ್ಟ್ ನಲ್ಲಿ Carbon ಅನ್ನು ಆಯ್ಕೆ ಮಾಡಿ.
02:59 Bond Order ಡ್ರಾಪ್ ಡೌನ್ ಲಿಸ್ಟ್ ನಲ್ಲಿ Single ಅನ್ನು ಆಯ್ಕೆ ಮಾಡಿ.
03:03 Panel ನ ಮೇಲೆ ಕ್ಲಿಕ್ ಮಾಡಿ.
03:05 ಆರು ಕಾರ್ಬನ್ (ಇಂಗಾಲ) ನ ಅಣುಗಳ ಮುಚ್ಚಿದ ಸರಪಣಿಯನ್ನು ರಚಿಸಲು ಡ್ರ್ಯಾಗ್ ಮಾಡಿ, ಡ್ರಾಪ್ ಮಾಡಿ.
03:10 ಡಬಲ್ ಬಾಂಡ್ ಗಳನ್ನು ತೋರಿಸಲು, Bond Order ಡ್ರಾಪ್ ಡೌನ್ ಲಿಸ್ಟ್ ನಲ್ಲಿ Double ಅನ್ನು ಆಯ್ಕೆ ಮಾಡಿ.
03:16 Benzene (ಬೆಂಝೀನ್) ನ ಸ್ಟ್ರಕ್ಚರ್ ಅನ್ನು ಪಡೆಯಲು alternate bonds ಅನ್ನು ಕ್ಲಿಕ್ ಮಾಡಿ.
03:21 ಈಗ Aniline ನ ಸ್ಟ್ರಕ್ಚರ್ ಅನ್ನು ಮುಗಿಸೋಣ.
03:24 Element ಡ್ರಾಪ್ ಡೌನ್ ಲಿಸ್ಟ್ ನಲ್ಲಿ, Nitrogen ಅನ್ನು ಆಯ್ಕೆ ಮಾಡಿ.
03:29 Bond Order ಡ್ರಾಪ್ ಡೌನ್ ನಲ್ಲಿ Single ಅನ್ನು ಆಯ್ಕೆ ಮಾಡಿ.
03:33 ಸ್ಟ್ರಕ್ಚರ್ ನಲ್ಲಿ ಯಾವುದಾದರೂ ಒಂದು ಕಾರ್ಬನ್ (ಇಂಗಾಲ) ಅಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ.
03:39 Build ಮೆನ್ಯುವಿಗೆ ಹೋಗಿ ಮತ್ತು Add Hydrogens ನ ಮೇಲೆ ಕ್ಲಿಕ್ ಮಾಡಿ.
03:45 ನಾವು ಪ್ಯಾನಲ್ ನಲ್ಲಿ Aniline ನ ಸ್ಟ್ರಕ್ಚರ್ ಅನ್ನು ಹೊಂದಿದ್ದೇವೆ.
03:49 ಅಚಲವಾದ ದೃಢೀಕರವನ್ನು ಪಡೆಯಲು, ಪ್ಯಾನಲ್ ನಲ್ಲಿ Aniline ಸ್ಟ್ರಕ್ಚರ್ ಅನ್ನು ಆಪ್ಟಿಮೈಜ್ ಮಾಡಬೇಕು.
03:56 ಆಪ್ಟಿಮೈಜ್ ಮಾಡಲು, ಟೂಲ್ ಬಾರ್ ನಲ್ಲಿ, Auto Optimization Tool ನ ಮೇಲೆ ಕ್ಲಿಕ್ ಮಾಡಿ.
04:02 ಎಡ ಭಾಗದಲ್ಲಿ AutoOptimization Settings ಮೆನ್ಯು ಕಾಣಿಸುತ್ತದೆ.
04:06 Force Field ಡ್ರಾಪ್ ಡೌನ್ ಲಿಸ್ಟ್ ನಲ್ಲಿ, MMFF94 ಅನ್ನು ಆಯ್ಕೆ ಮಾಡಿ.
04:13 MMFF94 ಅನ್ನು ಸಾಮಾನ್ಯವಾಗಿ, ಆರ್ಗ್ಯಾನಿಕ್ ಮೊಲಿಕ್ಯೂಲ್ ಗಳನ್ನು ಆಪ್ಟಿಮೈಜ್ ಮಾಡಲು ಬಳಸಲಾಗುತ್ತದೆ.
04:20 Start ಬಟನ್ ನ ಮೇಲೆ ಕ್ಲಿಕ್ ಮಾಡಿ.
04:23 ಇದು ಆಪ್ಟಿಮೈಜ್ ಮಾಡಲು ಕೆಲವು ಸೆಕೆಂಡ್ ಗಳನ್ನು ತೆಗೆದುಕೊಳ್ಳುತ್ತದೆ.
04:28 Optimization Setting ಗಳನ್ನು ಕ್ಲೋಸ್ ಮಾಡಲು Stop ನ ಮೇಲೆ ಕ್ಲಿಕ್ ಮಾಡಿ.
04:33 ಈಗ Aniline ನ ಬಾಂಡ್ ನ ಉದ್ದ, ಬಾಂಡ್ ನ ಕೋನ ಮತ್ತು dihedral angle ಗಳನ್ನು ಅಳತೆ ಮಾಡೋಣ.
04:40 ಟೂಲ್ ಬಾರ್ ನಲ್ಲಿ Click to Measure ಐಕಾನ್ ಅನ್ನು ಆಯ್ಕೆ ಮಾಡಿ.
04:44 ಅಂತರವನ್ನು ಅಳೆಯಲು, ಯಾವುದಾದರೂ ಎರಡು ಕ್ರಮಾನುಗತ ಕಾರ್ಬನ್(ಇಂಗಾಲ) ಅಣುಗಳ ಮೇಲೆ ಕ್ಲಿಕ್ ಮಾಡಿ.
04:49 ಕೋನಗಳನ್ನು ಅಳೆಯಲು, ಯಾವುದಾದರೂ ಮೂರು ಕ್ರಮಾನುಗತ ಕಾರ್ಬನ್(ಇಂಗಾಲ) ಅಣುಗಳ ಮೇಲೆ ಕ್ಲಿಕ್ ಮಾಡಿ.
04:55 dihedral angle ಗಳನ್ನು ಅಳೆಯಲು, ಯಾವುದಾದರೂ ನಾಲ್ಕು ಕ್ರಮಾನುಗತ ಕಾರ್ಬನ್(ಇಂಗಾಲ) ಅಣುಗಳ ಮೇಲೆ ಕ್ಲಿಕ್ ಮಾಡಿ.
05:02 ಅಳತೆ ಮಾಡಿದ ವ್ಯಾಲ್ಯುಗಳು ಪ್ಯಾನಲ್ ನ ಕೆಳಭಾಗದಲ್ಲಿ ಕಾಣಿಸುತ್ತದೆ.
05:07 ಫೈಲ್ ಅನ್ನು ಸೇವ್ ಮಾಡಲು, File ಅನ್ನು ಕ್ಲಿಕ್ ಮಾಡಿ ಮತ್ತು ನಂತರ Save As ಅನ್ನು ಕ್ಲಿಕ್ ಮಾಡಿ.
05:13 Save Molecule As ಡಯಲಾಗ್ ಬಾಕ್ಸ್ ಬರುತ್ತದೆ.
05:17 ಫೈಲ್ ನೇಮ್ ಅನ್ನು Aniline.cml ಎಂದು ಟೈಪ್ ಮಾಡಿ.
05:21 ಲೊಕೇಷನ್ ಅನ್ನು Desktop ಎಂದು ಆಯ್ಕೆಮಾಡಿ ಮತ್ತು Save ಬಟನ್ ನ ಮೇಲೆ ಕ್ಲಿಕ್ ಮಾಡಿ.
05:28 ಹೊಸ ವಿಂಡೋ ವನ್ನು ಓಪನ್ ಮಾಡಲು, New ಐಕಾನ್ ಅನ್ನು ಕ್ಲಿಕ್ ಮಾಡಿ.
05:32 Avogadro ಸಾಪ್ಟ್ವೇರ್, fragment ಲೈಬ್ರರಿಯನ್ನು ಬಳಸಿ, ಕಾಂಪ್ಲೆಕ್ಸ್ ಮೊಲಿಕ್ಯೂಲ್ ಗಳನ್ನು ರಚಿಸಲು ಒಂದು ವಿಧಾನವನ್ನು ಹೊಂದಿದೆ.
05:38 Build ಮೆನ್ಯುವಿಗೆ ಹೋಗಿ.
05:40 ನಂತರ Insert ಗೆ ಹೋಗಿ, Fragment ಆಯ್ಕೆಯನ್ನು ಆರಿಸಿಕೊಳ್ಳಿ.
05:45 Insert Fragment ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
05:49 ನಾವು ಬೇರೆ ಬೇರೆ ರಾಸಾಯನಿಕ ಸ್ಟ್ರಕ್ಚರ್ ಗಳನ್ನು ಹೊಂದಿರುವ cml ಫೈಲ್ ಗಳಿರುವ ಫೋಲ್ಡರ್ ಗಳನ್ನು ನೋಡಬಹುದು.
05:55 ಉದಾಹರಣೆಗೆ ನಾವು alkenes (ಆಲ್ಕೀನ್ಸ್) ಫೋಲ್ಡರ್ ಅನ್ನು ಓಪನ್ ಮಾಡೋಣ.
06:00 ಫೋಲ್ಡರ್ ನಲ್ಲಿರುವ ಕಂಟೆಂಟ್ ಗಳನ್ನು ನೋಡಲು ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ.
06:04 2-methyl-buta-1,3-diene.cml ಅನ್ನು ಆಯ್ಕೆ ಮಾಡಿಕೊಳ್ಳಿ.
06:10 Insert ಬಟನ್ ನ ಮೇಲೆ ಕ್ಲಿಕ್ ಮಾಡಿ.
06:13 ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು Close ಬಟನ್ ಅನ್ನು ಕ್ಲಿಕ್ ಮಾಡಿ.
06:17 ಪ್ಯಾನಲ್ ನಲ್ಲಿ 2-methyl-1,3-butadiene ಸ್ಟ್ರಕ್ಚರ್ ಡಿಸ್ಪ್ಲೇ ಆಗುತ್ತದೆ.
06:22 ಇದನ್ನು ಸಾಮಾನ್ಯವಾಗಿ Isoprene (ಐಸೋಪ್ರೀನ್) ಎಂದು ಕರೆಯುತ್ತಾರೆ.
06:26 ನಾವು Isoprene (ಐಸೋಪ್ರೀನ್) ಅನ್ನು ಬಳಸಿ ಅನೇಕ ಸ್ವಾಭಾವಿಕ ಉತ್ಪನ್ನಗಳನ್ನು ರಚಿಸಬಹುದು.
06:30 ಮೊಲಿಕ್ಯೂಲ್ ಸೆಲೆಕ್ಟ್ ಮೋಡ್ ನಲ್ಲಿದೆ.
06:33 ಡಿ-ಸೆಲೆಕ್ಟ್ ಮಾಡಲು, CTRL, SHIFT ' ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ.
06:39 ಉದಾಹರಣೆಗೆ : ನಾನು Vitamin A ಮತ್ತು natural rubber ಅನ್ನು Isoprene ಅನ್ನು ಬಳಸಿ ರಚಿಸುವುದನ್ನು ತೋರಿಸುವೆನು.
06:47 Vitamin A, natural rubber
06:51 ನಾನು Isoprene (ಐಸೋಪ್ರೀನ್) ಅನ್ನು ಒಂದು ಮೂಲೆಯಲ್ಲಿಡುವೆನು.
06:56 Build ಮೆನ್ಯು ವಿನ ಮೇಲೆ ಕ್ಲಿಕ್ ಮಾಡಿ, Insert ಗೆ ಹೋಗಿ, Fragment ಅನ್ನು ಆಯ್ಕೆ ಮಾಡಿ.
07:02 macrocycles ಫೋಲ್ಡರ್ ಗೆ ಸ್ಕ್ರೋಲ್ ಮಾಡಿ, ಓಪನ್ ಮಾಡಲು ಡಬಲ್ ಕ್ಲಿಕ್ ಮಾಡಿ.
07:08 porphin ಫ್ರ್ಯಾಗ್ಮೆಂಟ್ ಅನ್ನು ಆಯ್ಕೆ ಮಾಡಿಕೊಳ್ಳಿ ಮತ್ತು Insert ಅನ್ನು ಕ್ಲಿಕ್ ಮಾಡಿ.
07:14 ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
07:16 porphyrin ಫ್ರ್ಯಾಗ್ಮೆಂಟ್ ಅನ್ನು ಬಳಿಸಿ, ನಾವು Chlorophyll ಮತ್ತು Vitamin B12 ಗಳಂತಹ

ಸಂಕೀರ್ಣ ರಾಸಾಯನಿಕ ಸ್ಟ್ರಕ್ಚರ್ ಗಳನ್ನು ರಚಿಸಬಹುದು.

07:25 Chlorophyll
07:27 Vitamin B12.
07:30 Avogadro ವನ್ನು ಬಳಸಿ, DNA ಮತ್ತು peptide ಗಳಂತಹ ಸಂಕೀರ್ಣ ಮೊಲಿಕ್ಯೂಲ್ ಗಳನ್ನು ರಚಿಸಬಹುದು.
07:37 New ಐಕಾನ್ ಅನ್ನು ಬಳಸಿ ಹೊಸ ವಿಂಡೋವನ್ನು ಓಪನ್ ಮಾಡಿ.
07:41 DNA ಮೊಲಿಕ್ಯೂಲ್ ಅನ್ನು ಇನ್ಸರ್ಟ್ ಮಾಡಲು, Build ಮೆನ್ಯುಗೆ ಹೋಗಿ, Insert ಗೆ ಹೋಗಿ, ಸಬ್ ಮೆನ್ಯುವಿನಲ್ಲಿ DNA/RNA ಯನ್ನು ಕ್ಲಿಕ್ ಮಾಡಿ.
07:51 Insert Nucleic Acids ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
07:55 DNA/RNA Builder ಡ್ರಾಪ್ ಡೌನ್ ಮೆನ್ಯುವಿನಲ್ಲಿ , DNA ಯನ್ನು ಆಯ್ಕೆ ಮಾಡಿ.
08:00 ನಾಲ್ಕು nucleic acid base ಗಳು ಬಟನ್ ಗಳಾಗಿ ತೋರಿಸಲ್ಪಡುತ್ತವೆ.
08:05 nucleic acid ಕ್ರಮವನ್ನು ಆಯ್ಕೆ ಮಾಡಲು, ಬಟನ್ ಗಳ ಮೇಲೆ ಕ್ಲಿಕ್ ಮಾಡಿ.
08:10 ನೀವು ನಿಮಗೆ ಬೇಕಾದ acid ಗಳ ಕ್ರಮವನ್ನು ಆರಿಸಿಕೊಳ್ಳಬಹುದು..
08:14 ವಿವರಣೆಗಾಗಿ ನಾನು A T G C A T G C ಯನ್ನು ಆರಿಸಿಕೊಳ್ಳುತ್ತೇನೆ.
08:26 nucleic acid ಗಳ ಆಯ್ಕೆಯ ಕ್ರಮವು Sequence ಟೆಕ್ಸ್ಟ್ ಬಾಕ್ಸ್ ನಲ್ಲಿ ಕಾಣಿಸುತ್ತದೆ.
08:32 Bases Per Turn ಡ್ರಾಪ್ ಡೌನ್ ನಲ್ಲಿ A ಯನ್ನು ಆಯ್ಕೆ ಮಾಡಿ, "5": ( the number of base pairs per Helix ) ಪ್ರತಿ Helix ಗೆ ಇರುವ ಬೇಸ್ ಪೇರ್ ನ ಸಂಖ್ಯೆ ಆಗಿದೆ. .
08:41 Strands ಅನ್ನು Single ಎಂದು ಆಯ್ಕೆ ಮಾಡಿ ಮತ್ತು Insert ಬಟನ್ ನ ಮೇಲೆ ಕ್ಲಿಕ್ ಮಾಡಿ.
08:47 ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, Close ಅನ್ನು ಒತ್ತಿ.
08:51 ಈಗ ನಾವು ಪ್ಯಾನಲ್ ನಲ್ಲಿ ಸಿಂಗಲ್ ಸ್ಟ್ರ್ಯಾಂಡೆಡ್ DNA ಮೊಲಿಕ್ಯೂಲ್ ಅನ್ನು ಹೊಂದಿದ್ದೇವೆ.
08:56 ಸ್ಟ್ರಕ್ಚರ್ ಅನ್ನು ಝೂಮ್ ಔಟ್ ಮಾಡಿ, ಪ್ಯಾನಲ್ ನ ಮಧ್ಯಭಾಗಕ್ಕೆ ಡ್ರ್ಯಾಗ್ ಮಾಡಿ.
09:01 ಪ್ಯಾನಲ್ ನಲ್ಲಿ DNA ಮೊಲಿಕ್ಯೂಲ್ ಅನ್ನು ಡಿಸೆಲೆಕ್ಟ್ ಮಾಡಲು CTRL, Shift ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ.
09:09 ನಾವು, Insert ಮೆನ್ಯುವಿನಲ್ಲಿ Peptide ಆಯ್ಕೆಯನ್ನು ಬಳಸಿ Peptide ನ ಸರಣಿಯನ್ನು ಕೂಡ ರಚಿಸಬಹುದು.
09:16 ಹೊಸ ವಿಂಡೋವನ್ನು ಓಪನ್ ಮಾಡಲು New ಐಕಾನ್ ನ ಮೇಲೆ ಕ್ಲಿಕ್ ಮಾಡಿ.
09:21 Build ಮೆನ್ಯು ಗೆ ಹೋಗಿ , Insert ಗೆ ಸ್ಕ್ರೋಲ್ ಮಾಡಿ, ನಂತರ Peptide ಅನ್ನು ಆಯ್ಕೆ ಮಾಡಿ.
09:26 Insert Peptide ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
09:29 amino acids ಬಟನ್ ಗಳನ್ನು ಕ್ಲಿಕ್ ಮಾಡುವುದರ ಮೂಲಕ Peptide ಸರಣಿಗೆ amino acid ಗಳನ್ನು ಆಯ್ಕೆ ಮಾಡಿ.
09:36 ವಿವರಣೆಗಾಗಿ, ನಾನು Glycine(Gly) -Valine(Val) -Proline(Pro) and Cystine(Cys) ಸರಣಿಯನ್ನು ಆಯ್ಕೆ ಮಾಡಿಕೊಳ್ಳುವೆನು.
09:45 ಆಯ್ಕೆಯ ಕ್ರಮವು Sequence ಟೆಕ್ಸ್ಟ್ ಬಾಕ್ಸ್ ನಲ್ಲಿ ಬರುತ್ತದೆ.
09:50 Insert Peptide ಬಟನ್ ನ ಮೇಲೆ ಕ್ಲಿಕ್ ಮಾಡಿ.
09:53 Insert Peptide ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
09:57 ಪ್ಯಾನಲ್ ನ ಮೇಲೆ Peptide ನ ಸರಪಣಿ ಕಾಣುತ್ತದೆ.
10:00 ಪ್ಯಾನಲ್ ನಲ್ಲಿ Peptide ಅನ್ನು ಡಿಸೆಲೆಕ್ಟ್ ಮಾಡಲು, CTRL, Shift ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ.
10:07 ನೀವು ನಿಮ್ಮ ಆಯ್ಕೆಯ amino acid ಗಳನ್ನು ಆಯ್ಕೆ ಮಾಡಿಕೊಂಡು, Peptide ಸರಣಿಯನ್ನು ರಚಿಸಬಹುದು.
10:13 ಸಂಕ್ಷಿಪ್ತವಾಗಿ,
10:15 ಈ ಟ್ಯುಟೋರಿಯಲ್ ನಲ್ಲಿ ನಾವು :
10:18 ಡೇಟಾಬೇಸ್ ನಿಂದ ಮೊಲಿಕ್ಯೂಲ್ ಗಳನ್ನು ಇಂಪೋರ್ಟ್ ಮಾಡುವುದು,
10:21 ತಿರುಗಿಸುವುದು(ರೋಟೇಟ್ ಮಾಡುವುದು), ಝೂಮ್ ಇನ್ ಮಾಡುವುದು ಮತ್ತು ಝೂಮ್ ಔಟ್ ಮಾಡುವುದು,
10:24 ಪ್ಯಾನಲ್ ನ ಮೇಲೆ ಮೊಲಿಕ್ಯೂಲ್ ಗಳನ್ನು ನಿರ್ಮಿಸುವುದು,
10:26 ಬಲಕ್ಷೇತ್ರ (ಫೋರ್ಸ್ ಫೀಲ್ಡ್) ಅನ್ನು ಸೆಟ್ ಮಾಡುವುದು ಮತ್ತು ಜೊಮೆಟ್ರಿ ಯನ್ನು ಆಪ್ಟಿಮೈಜ್ ಮಾಡುವುದು
10:30

ಬಾಂಡ್ ನ ಉದ್ದ,ಕೋನ ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು,

10:35 ಫ್ರ್ಯಾಗ್ಮೆಂಟ್ ಲೈಬ್ರರಿಯನ್ನು ತೋರಿಸುವುದು
10:37 DNA ಮೊಲಿಕ್ಯೂಲ್ ಮತ್ತು Peptide ಗಳನ್ನು ರಚಿಸುವುದು- ಇವುಗಳ ಕುರಿತು ಕಲಿತಿದ್ದೇವೆ.
10:41 ಅಸೈನ್ಮೆಂಟ್ - ಈ ಕೆಳಗಿನ ಅಮಿನೋ ಆಸಿಡ್ ರೆಸಿಡ್ಯೂಗಳನ್ನು ಬಳಸಿ ಪ್ರೋಟೀನ್ ಸರಣಿಯನ್ನು ರಚಿಸಿ:
10:49 UFF ಬಲಕ್ಷೇತ್ರ(ಫೋರ್ಸ್ ಫೀಲ್ಡ್) ಅನ್ನು ಬಳಸಿ ಜೊಮೆಟ್ರಿಯನ್ನು ಆಪ್ಟಿಮೈಜ್ ಮಾಡಿ.
10:53 ಇಮೇಜ್ ಅನ್ನು .cml ಫೈಲ್ ಆಗಿ ಸೇವ್ ಮಾಡಿ.
10:58 Nucleic acids: AUGC ಗಳನ್ನು ಬಳಸಿ RNA ಸರಣಿಯನ್ನು ರಚಿಸಿ.
11:04 MMFF94 ಬಲಕ್ಷೇತ್ರ (ಫೋರ್ಸ್ ಫೀಲ್ಡ್ ) ಅನ್ನು ಬಳಸಿ ಜೊಮೆಟ್ರಿಯನ್ನು ಆಪ್ಟಿಮೈಜ್ ಮಾಡಿ.
11:10 ಇಮೇಜ್ ಅನ್ನು .cml ಫೈಲ್ ಆಗಿ ಸೇವ್ ಮಾಡಿ.
11:14 ಈ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.
11:18 ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ಲೋಡ್ ಮಾಡಿ ನೋಡಿಕೊಳ್ಳಬಹುದು.
11:23 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
11:30 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD ಭಾರತ ಸರ್ಕಾರ ಧನಸಹಾಯ ಮಾಡುತ್ತದೆ.
11:36 ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು

Contributors and Content Editors

Anjana310312, Sandhya.np14