What-is-Spoken-Tutorial/C2/What-is-Spoken-Tutorial-2min/Kannada

From Script | Spoken-Tutorial
Jump to: navigation, search
Time Narration
00:00 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಎರಡು ನಿಮಿಷಗಳ ಈ ಅವಲೋಕನಕ್ಕೆ ನಿಮಗೆ ಸ್ವಾಗತ.
00:06 ಸ್ಪೋಕನ್ ಟ್ಯುಟೋರಿಯಲ್, ರನ್ನಿಂಗ್ ಕಾಮೆಂಟ್ರಿಯನ್ನು ಹೊಂದಿರುವ ಒಂದು ಸ್ಕ್ರೀನ್ ಕಾಸ್ಟ್ ಆಗಿದೆ.
00:10 ಸ್ವಯಂ ಕಲಿಕೆಗಾಗಿ ರಚಿಸಲಾದ ಒಂದು ಅವಧಿಯ (session) ರೆಕಾರ್ಡಿಂಗ್ ಆಗಿದೆ.
00:13 ಡಿಜಿಟಲ್-ಡಿವೈಡ್ ಅನ್ನು ನಿವಾರಿಸಲು ಉಪಯುಕ್ತವಾದ FOSS ಅನ್ನು (ಫಾಸ್) ಉಚಿತವಾಗಿ ಡೌನ್‌ಲೋಡ್ ಮಾಡಲು ನಾವು ಪ್ರಚಾರ ಮಾಡುತ್ತೇವೆ.
00:19 ನಮ್ಮ ವೆಬ್‌ಸೈಟ್‌ಗೆ ಹೋಗೋಣ. ಇಲ್ಲಿ 'spoken tutorial.org' ಇದೆ.
00:26 ಇಲ್ಲಿ ಮಾದರಿಯ ಒಂದು ಸ್ಪೋಕನ್ ಟ್ಯುಟೋರಿಯಲ್ ಇದೆ.
00:29 “ Recording File”
00:34 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ತಯಾರಿಸುವ ಪ್ರಕ್ರಿಯೆಯನ್ನು ನಾವು ಈಗ ವಿವರಿಸುತ್ತೇವೆ.
00:38 ಇಲ್ಲಿ ತೋರಿಸಿರುವಂತೆ ನಾವು ಒಂದು ಔಟ್‌ಲೈನ್ ಅನ್ನು ಪ್ರಾರಂಭಿಸುತ್ತೇವೆ.
00:41 ಪ್ರತಿಯೊಂದು ಟ್ಯುಟೋರಿಯಲ್ ಗಾಗಿ, ಇಲ್ಲಿ ತೋರಿಸಿದಂತೆ ಸ್ಕ್ರಿಪ್ಟ್ ಅನ್ನು ಬರೆಯುತ್ತೇವೆ.
00:45 ನಂತರ ಸ್ಕ್ರಿಪ್ಟ್ ಅನ್ನು ರೆಕಾರ್ಡ್ ಮಾಡುತ್ತೇವೆ.
00:47 ಈಗಾಗಲೇ ನಾವು ರೆಕಾರ್ಡಿಂಗ್ ಅನ್ನು ನೋಡಿದ್ದೇವೆ. ನಂತರ ಇಲ್ಲಿ ತೋರಿಸಿರುವಂತೆ ಸ್ಕ್ರಿಪ್ಟ್ ಅನ್ನು ಅನುವಾದಿಸುತ್ತೇವೆ.
00:51 ಇಲ್ಲಿ ತೋರಿಸಿರುವಂತೆ ಅದನ್ನು ಡಬ್ ಮಾಡುತ್ತೇವೆ.
00:53 "Recording files"
00:59 ಈ ಟ್ಯುಟೋರಿಯಲ್ ಹಿಂದಿಯಲ್ಲಿ ಇತ್ತು.
01:03 ನಾವು ಇಲ್ಲಿಗೆ ಹಿಂತಿರುಗುತ್ತೇವೆ.
01:06 ಸ್ಪೋಕನ್ ಟ್ಯುಟೋರಿಯಲ್ ನ ರಚನೆ ಹಾಗೂ ವಿನ್ಯಾಸ (architecture) ಇಲ್ಲಿದೆ.
01:10 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ. ಇದಕ್ಕಾಗಿ ತಜ್ಞರ ಅಗತ್ಯವಿಲ್ಲ.
01:15 ಈ ಕಾರ್ಯಶಾಲೆಗಳ ಅವಧಿಯು 2 ಗಂಟೆ ಆಗಿರುತ್ತದೆ.
01:18 ವಿದ್ಯಾರ್ಥಿಗಳು ತಮ್ಮದೇ ಆದ ವೇಗದಲ್ಲಿ ಕಲಿಯುತ್ತಾರೆ.
01:21 ಅವರು ತಮ್ಮ ಆಯ್ಕೆಯ ಭಾಷೆಯನ್ನು ಬಳಸಬಹುದು.
01:23 ಅವರೆಲ್ಲರೂ ಕಲಿಕೆಯಲ್ಲಿ ಒಂದೇ ಮಟ್ಟವನ್ನು ತಲುಪಬಹುದು.
01:26 ಕಾರ್ಯಶಾಲೆಗಳು ಬಹಳ ಪರಿಣಾಮಕಾರಿಯಾಗಿವೆ ಎಂದು ನಮಗೆ ತಿಳಿದುಬಂದಿದೆ.
01:30 ಈ ಕಾರ್ಯಶಾಲೆಗಳು ಬಹಳ ಜನಪ್ರಿಯವಾಗುತ್ತಿವೆ.
01:33 ಪ್ರಸ್ತುತ ನಾವು ತಿಂಗಳಿಗೆ 200 ಕಾರ್ಯಶಾಲೆಗಳನ್ನು ನಡೆಸುತ್ತೇವೆ.
01:36 ಉತ್ತರ, ಪಶ್ಚಿಮ, ಪೂರ್ವ ಮತ್ತು ದಕ್ಷಿಣದಲ್ಲಿ ನಿರ್ಧರಿಸಲಾದ ಕಾರ್ಯಶಾಲೆಗಳ ಸಂಖ್ಯೆ ಹೀಗಿದೆ.
01:42 ನಮ್ಮ ವೆಬ್‌ಸೈಟ್‌ಗೆ ತ್ರೈಮಾಸಿಕವಾರು ಭೇಟಿಗಳ ಒಂದು ಗ್ರಾಫ್ ಇಲ್ಲಿದೆ.
01:48 ಇಲ್ಲಿಗೆ ಹಿಂತಿರುಗೋಣ. ನಾವು digital divide ಟ್ಯುಟೋರಿಯಲ್ ಗಳನ್ನು ಪ್ರಾರಂಭಿಸುತ್ತಿದ್ದೇವೆ.
01:53 ಇಲ್ಲಿ ಒಂದು ಉದಾಹರಣೆ ಇದೆ. “Recording file”
02:00 ಇಲ್ಲಿFirst Aid (ಪ್ರಥಮ ಚಿಕಿತ್ಸೆ) ಬಗ್ಗೆ ಒಂದು ಮಾದರಿ ಟ್ಯುಟೋರಿಯಲ್ ಇದೆ.
02:04 “ Recording file”
02:16 ಈ ಟ್ಯುಟೋರಿಯಲ್ ಗಳು ಬಹುಸಂಖ್ಯಾತ ಭಾರತೀಯರಿಗೆ ಅತ್ಯಂತ ಉಪಯುಕ್ತವಾಗಿದೆ.
02:20 ಈ ಟ್ಯುಟೋರಿಯಲ್, ಈ ಪ್ರೊಜೆಕ್ಟ್ ಅನ್ನು ಹೆಚ್ಚು ವಿಸ್ತಾರವಾಗಿ ವಿವರಿಸುತ್ತದೆ.
02:25 ನಮ್ಮಲ್ಲಿ ಕೆಲವು ಪ್ರಕಟಣೆಗಳಿವೆ. ನಮಗೆ ಧನಸಹಾಯ ನೀಡಿದವರು ಯಾರು?
02:28 ಧನ್ಯವಾದಗಳು.

Contributors and Content Editors

Sandhya.np14