Spoken-Tutorial-Technology/C2/Editing-using-Audacity/Kannada

From Script | Spoken-Tutorial
Jump to: navigation, search
Time Narration
00:01 ನಮಸ್ಕಾರ. Editing using Audacity ಕುರಿತು ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್, ಒಂದು ಆಡಿಯೋ ಫೈಲ್ ಅನ್ನು ಹೇಗೆ ಎಡಿಟ್ ಮಾಡುವುದೆಂದು ವಿವರಿಸುವುದು.
00:14 ನಾವು:
  • ಓಡಾಸಿಟೀ ಯಲ್ಲಿ ಆಡಿಯೋ ಫೈಲ್ ಅನ್ನು ಹೇಗೆ ತೆರೆಯುವುದು
00:16
  • ಸ್ಟೀರಿಯೋ ಫೈಲ್ ಅನ್ನು ಮೋನೊ ಗೆ (mono) ಹೇಗೆ ಪರಿವರ್ತಿಸುವುದು
  • ಲೇಬಲ್ ಗಳನ್ನು ಹೇಗೆ ಲಗತ್ತಿಸುವುದು
  • ಆಡಿಯೋವನ್ನು 'Cut, delete, move' ಮತ್ತು 'amplify' (ಆಂಪ್ಲಿಫೈ) ಹೇಗೆ ಮಾಡುವುದು
  • ಹಿನ್ನಲೆಯಲ್ಲಿಯ ಶಬ್ದವನ್ನು ಹೇಗೆ ಫಿಲ್ಟರ್ (Filter) ಮಾಡುವುದು
  • ಆಡಿಯೋ ಫೈಲ್ ಅನ್ನು ಹೇಗೆ ಸೇವ್ ಮತ್ತು ಎಕ್ಸ್ಪೋರ್ಟ್ ಮಾಡುವುದು

ಇತ್ಯಾದಿಗಳನ್ನು ಕಲಿಯುವೆವು.

00:27 ಈ ಟ್ಯುಟೋರಿಯಲ್ ಗಾಗಿ, ನಾನು Ubuntu Linux (ಉಬಂಟು ಲಿನಕ್ಸ್) ಆವೃತ್ತಿ 10.04 ಆಪರೇಟಿಂಗ್ ಸಿಸ್ಟಂ ಮತ್ತು Audacity ಆವೃತ್ತಿ 1.3 ಇವುಗಳನ್ನು ಬಳಸುತ್ತಿದ್ದೇನೆ.
00:36 ಓಡಾಸಿಟಿ' (Audacity),
00:39 * WAV (Windows Wave format)
00:41 * AIFF (Audio Interchange File Format)
00:43 * Sun Au / NeXT
00:46 * RCAM (Institut de Recherce et Coordination Acoustique / Musique)
00:49 * MP3 (MPEG I, layer 3) (export ಗೆ ಪ್ರತ್ಯೇಕ ಎನ್ಕೋಡರ್ ನ ಅಗತ್ಯವಿದೆ. Lame Installation ಅನ್ನು ನೋಡಿ)
  • Ogg Vorbis ಗಳಂತಹ ಅನೇಕ ಆಡಿಯೋ ಫಾರ್ಮ್ಯಾಟ್ ಗಳನ್ನು ಬೆಂಬಲಿಸುತ್ತದೆ.
00:53 ನಾವು Audacity ಗೆ, ಮೇನ್ ಮೆನ್ಯು ಐಟಂ ಮೂಲಕ ಹೀಗೆ ಹೋಗೋಣ. ಕ್ರಮವಾಗಿ 'Applications >> Sound & Video >> Audacity'.
01:04 ಒಂದು 'Audacity Help box' ತೆರೆದುಕೊಳ್ಳುತ್ತದೆ. ನಾವು 'OK' ಯನ್ನು ಕ್ಲಿಕ್ ಮಾಡೋಣ.
01:09 ಒಂದು ಆಡಿಯೋ ಫೈಲ್ ಅನ್ನು ಎಡಿಟ್ ಮಾಡಲು, ಮೊದಲು ನಾವು ಅದನ್ನು Audacity ಯಲ್ಲಿ ಇಂಪೋರ್ಟ್ ಮಾಡಬೇಕು. ಹೀಗೆ ಮಾಡಲು, ಕ್ರಮವಾಗಿ 'File >> Import >> Audio' ಗಳಿಗೆ ಹೋಗಿ.
01:21 ಬ್ರೌಸರ್ ವಿಂಡೋ ತೆರೆದುಕೊಂಡಾಗ, ಎಡಿಟ್ ಮಾಡಬೇಕಾಗಿರುವ ಆಡಿಯೋ ಫೈಲ್ ಗಾಗಿ ಬ್ರೌಸ್ ಮಾಡಿ ಮತ್ತು 'Open' ಮೇಲೆ ಕ್ಲಿಕ್ ಮಾಡಿ.
01:31 Audacity ವಿಂಡೋನಲ್ಲಿ ಫೈಲ್ ತೆರೆದುಕೊಳ್ಳುತ್ತದೆ.
01:36 ಕ್ರಮವಾಗಿ 'File >> Save Project As' ಗಳ ಮೇಲೆ ಕ್ಲಿಕ್ ಮಾಡಿ, ಈ ಫೈಲ್ ಅನ್ನು 'a u p' ಫೈಲ್ (i.e. Audacity project File) ನ ಹಾಗೆ ಸೇವ್ ಮಾಡಿ.
01:47 ಈಗ ತೆರೆದುಕೊಳ್ಳುವ ಬಾಕ್ಸ್ ನಲ್ಲಿ 'OK' ಯನ್ನು ಕ್ಲಿಕ್ ಮಾಡಿ.
01:51 ನಿಮ್ಮ ಫೈಲ್ ಗೆ ಒಂದು ಹೆಸರನ್ನು ಕೊಡಿ. ಇಲ್ಲಿ ನಾವು “Editing in Audacity” ಎಂದು ಟೈಪ್ ಮಾಡುವೆವು.
01:55 ಫೋಲ್ಡರ್ ಅನ್ನು ಚೆಕ್ ಮಾಡಿ ಮತ್ತು 'Save' ಮೇಲೆ ಕ್ಲಿಕ್ ಮಾಡಿ.
02:00 'Copy All Audio into Project (safer)' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
02:05 ಇದು, ಎಲ್ಲ ಓಡಾಸಿಟೀ ಪ್ರೊಜೆಕ್ಟ್ ಡೇಟಾ ಫೈಲ್ ಗಳನ್ನು ಒಳಗೊಂಡಿರುವ ಒಂದು ಫೋಲ್ಡರ್ ಅನ್ನು ತಯಾರಿಸುತ್ತದೆ.
02:11 'ಟ್ರ್ಯಾಕ್'ಗಳನ್ನು ನೋಡಿ. ಒಂದುವೇಳೆ ಟ್ರ್ಯಾಕ್ ಒಂದೇ ಒಂದು ಇದ್ದರೆ, ಆಗ ಆಡಿಯೋ 'MONO' (ಮೋನೊ) ದಲ್ಲಿ ಇರುತ್ತದೆ.
02:16 ಇದನ್ನು ಎಡಭಾಗದ ಪ್ಯಾನೆಲ್ ನ ಮೇಲೆ 'Label' ನಲ್ಲಿ ಸಹ ಉಲ್ಲೇಖಿಸಲಾಗುವುದು.
02:21 ಈಗ, ನಾವು ಇನ್ನೊಂದು ಆಡಿಯೋ ಫೈಲ್ ಅನ್ನು ತೆರೆಯೋಣ.
02:35 ಒಂದುವೇಳೆ ಇಲ್ಲಿ 2 ಟ್ರ್ಯಾಕ್ ಗಳಿದ್ದರೆ, ಆಗ ಆಡಿಯೋ 'STEREO' ನಲ್ಲಿ ಇರುತ್ತದೆ. ಮತ್ತೆ, ಎಡಭಾಗದ ಪ್ಯಾನೆಲ್ ನ ಮೇಲೆ 'Label' ನಲ್ಲಿ ಇದನ್ನು ಉಲ್ಲೇಖಿಸಲಾಗುವುದು.
02:45 ಒಂದು ಟ್ರ್ಯಾಕ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲು - ಟ್ರ್ಯಾಕ್ ಅನ್ನು ಆಯ್ಕೆಮಾಡಿ, 'Tracks' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ ಮತ್ತು 'Remove Tracks' ಅನ್ನು ಆಯ್ಕೆಮಾಡಿ.
02:59 ಪರ್ಯಾಯವಾಗಿ, ಎಡತುದಿಯಲ್ಲಿ 'X' ನ ಮೇಲೆ ಕ್ಲಿಕ್ ಮಾಡಿ ಟ್ರ್ಯಾಕ್ ಗಳನ್ನು ಡಿಲೀಟ್ ಮಾಡಿ.
03:04 ಒಂದುವೇಳೆ ಆಡಿಯೋ ಫೈಲ್ 'stereo' ಮೋಡ್ ನಲ್ಲಿದ್ದರೆ, ಹಾಗೂ ಸ್ಟೀರಿಯೋ ಔಟ್ಪುಟ್ ಬೇಡವಾಗಿದ್ದರೆ, ಆಗ ನಾವು ಮೋಡ್ ಅನ್ನು 'mono' ಗೆ ಪರಿವರ್ತಿಸಬಹುದು.
03:12 ಇದನ್ನು ಮಾಡಲು, 'Tracks' ಟ್ಯಾಬ್ ಗೆ ಹೋಗಿ ಮತ್ತು 'Mix and Render' ಅನ್ನು ಆಯ್ಕೆಮಾಡಿ.
03:20 ಈಗ, ಆಡಿಯೋ ಫೈಲ್ ನ ಎಡಗಡೆ, ಪ್ಯಾನೆಲ್ ನ ಮೇಲೆ ಡ್ರಾಪ್-ಡೌನ್ ಆರೋದ ಮೇಲೆ ಕ್ಲಿಕ್ ಮಾಡಿ. ಮತ್ತು 'Split stereo to Mono' ಅನ್ನು ಆಯ್ಕೆಮಾಡಿ.
03:30 ಒಂದು ಟ್ರ್ಯಾಕ್ ಅನ್ನು ಡಿಲೀಟ್ ಮಾಡಿ.
03:35 ಒಂದು ಫೈಲ್ ನಲ್ಲಿ, ಝೂಮ್-ಇನ್ ಅಥವಾ ಝೂಮ್-ಔಟ್ ಮಾಡಲು - ಫೈಲ್ ನಲ್ಲಿ, ನಿಮಗೆ ಝೂಮ್ ಮಾಡಬೇಕಾಗಿರುವಲ್ಲಿ ಕರ್ಸರ್ ಅನ್ನು ಕ್ಲಿಕ್ ಮಾಡಿ ಮತ್ತು 'Edit' ಪ್ಯಾನೆಲ್ ನಲ್ಲಿ zoom-in ಅಥವಾ zoom-out ಬಟನ್ ನ ಮೇಲೆ ಕ್ಲಿಕ್ ಮಾಡಿ.
03:52 ಪರ್ಯಾಯವಾಗಿ, ನಿಮಗೆ ಝೂಮ್-ಇನ್ ಅಥವಾ ಝೂಮ್-ಔಟ್ ಮಾಡಬೇಕಾದ ಫೈಲ್ ನ ಭಾಗದ ಮೇಲೆ ಕರ್ಸರ್ ಅನ್ನು ಇರಿಸಿ.
04:03 ಈಗ, 'Ctrl' ಕೀಯನ್ನು ಕೆಳಗೆ ಒತ್ತಿ ಮತ್ತು ಝೂಮ್-ಇನ್ ಅಥವಾ ಝೂಮ್-ಔಟ್ ಮಾಡಲು ನಿಮ್ಮ ಮೌಸ್ ನ ಸ್ಕ್ರೋಲ್-ವ್ಹೀಲ್ ಅನ್ನು ಬಳಸಿ.
04:19 ಒಂದು ಆಡಿಯೋ ಫೈಲ್ ನಲ್ಲಿ- ಬೇಡವಾದ ಭಾಗಗಳನ್ನು ತೆಗೆದುಹಾಕಲು 'ಕಟ್' (cut) ಮಾಡಬಹುದು. ಕಾಪಿ, ಪೇಸ್ಟ್, ಡಿಲೀಟ್ ಮಾಡಬಹುದು ಮತ್ತು ಕೆಲವು ವಿಶಿಷ್ಟ ಪರಿಣಾಮಗಳನ್ನು ಬಳಸಬಹುದು.
04:29 ಫೈಲ್ ನ ಗಾತ್ರವನ್ನು ಸಹ ಹೆಚ್ಚು ಅಥವಾ ಕಡಿಮೆ ಮಾಡಬಹುದು.
04:35 ಎಡಿಟ್ ಮಾಡುವ ಮೊದಲು, ಯಾವಾಗಲೂ, ಪೂರ್ತಿ ಆಡಿಯೋ ಫೈಲ್ ಅನ್ನು ಆಲಿಸಿ. ಕೇಳುತ್ತಿರುವಂತೆಯೇ, ನಿಮಗೆ ಭಾಗಗಳನ್ನು ಲೇಬಲ್ ಮಾಡಬೇಕಾಗಬಹುದು. ಇದರಿಂದ ನಂತರ ರೆಫರೆನ್ಸ್ ಮಾಡುವುದು ಸುಲಭವಾಗುತ್ತದೆ.
04:44 ಇದನ್ನು ಮಾಡಲು, 'Tracks >> Add New' ಮತ್ತು 'Label Track' ಗಳ ಮೇಲೆ ಕ್ಲಿಕ್ ಮಾಡಿ ಒಂದು ಲೇಬಲ್ ಟ್ರ್ಯಾಕ್ ಅನ್ನು ಸೇರಿಸಿ.
04:56 ಒಂದು ಪಾಯಿಂಟ್ ನಲ್ಲಿ ಲೇಬಲ್ ಅನ್ನು ಸೇರಿಸಲು, ಕರ್ಸರ್ ನಿಂದ ಪಾಯಿಂಟ್ ಅನ್ನು ಆಯ್ಕೆಮಾಡಿ, 'Tracks' ಟ್ಯಾಬ್ ಗೆ ಹೋಗಿ
05:05 ಮತ್ತು 'Add Label At Selection' ಅನ್ನು ಆಯ್ಕೆಮಾಡಿ.
05:08 ನೀವು ಲೇಬಲ್ ನ ಒಳಗಡೆ ಟೈಪ್ ಮಾಡಬಹುದು.
05:16 ಪರ್ಯಾಯವಾಗಿ, ಈ ಪಾಯಿಂಟ್ ನಲ್ಲಿ ಕ್ಲಿಕ್ ಮಾಡಿ,
05:24 'Ctrl +B' ಯನ್ನು ಒತ್ತಿ.
05:28 ಇದು ಮೊದಲನೆಯ ಸಲ ಒಂದು ಹೊಸ ಲೇಬಲ್ ಟ್ರ್ಯಾಕ್ ಅನ್ನು ತೆರೆಯುತ್ತದೆ.
05:32 ಕ್ರಮಾನುಗತ 'Ctrl+B', ಇದೇ ಟ್ರ್ಯಾಕ್ ನ ಮೇಲೆ ಹೊಸ ಲೇಬಲ್ ಗಳನ್ನು ತೆರೆಯುವುದು.
05:47 ಟೈಮ್-ಲೈನ್ ನ ಮೇಲೆ ಕರ್ಸರ್ ಅನ್ನು ಇರಿಸಿದಲ್ಲಿ ಒಂದು ಲೇಬಲ್ ತೆರೆದುಕೊಳ್ಳುವುದು.
05:53 ಪ್ರತಿಯೊಂದು ಹೊಸ ಲೇಬಲ್ ಗಾಗಿ, ಬೇಕಾದಲ್ಲೆಲ್ಲ ಕರ್ಸರ್ ಅನ್ನು ಇರಿಸಿ ಮತ್ತು 'Ctrl+B' ಯನ್ನು ಒತ್ತಿ.
06:07 'ಲೇಬಲ್' ಗಳನ್ನು ಸ್ಥಳಾಂತರಿಸಲೂಬಹುದು.
06:15 ಲೇಬಲ್ ಗಳನ್ನು ತೆಗೆದುಹಾಕಲು, ಟೆಕ್ಸ್ಟ್-ಬಾಕ್ಸ್ ನ ಒಳಗೆ ಕ್ಲಿಕ್ ಮಾಡಿ ಮತ್ತು ಲೇಬಲ್ ಡಿಲೀಟ್ ಆಗುವವರೆಗೆ 'ಬ್ಯಾಕ್-ಸ್ಪೇಸ್' ಅನ್ನು ಒತ್ತಿ.
06:27 ಇದನ್ನು ಮಾಡುವ ಇನ್ನೊಂದು ವಿಧಾನ ಹೀಗಿದೆ. ಕ್ರಮವಾಗಿ 'Tracks >> Edit Labels' ಗಳಿಗೆ ಹೋಗಿ.
06:34 ಪಟ್ಟಿಮಾಡಿದ ಎಲ್ಲ ಲೇಬಲ್ ಗಳೊಂದಿಗೆ ಒಂದು ವಿಂಡೋ ಕಾಣಿಸಿಕೊಳ್ಳುವುದು. ತೆಗೆದುಹಾಕಬೇಕಾಗಿರುವ ಲೇಬಲ್ ಗಳನ್ನು ಆಯ್ಕೆಮಾಡಿ ಹಾಗೂ 'Remove' ಬಟನ್ ನ ಮೇಲೆ ಕ್ಲಿಕ್ ಮಾಡಿ ಡಿಲೀಟ್ ಮಾಡಬಹುದು.
06:46 'OK' ಯನ್ನು ಕ್ಲಿಕ್ ಮಾಡಿ.
06:55 ಒಮ್ಮೆ ಅಥವಾ ಹಲವು ಬಾರಿ ಇಡೀ ಆಡಿಯೋ ಫೈಲ್ ಅನ್ನು ಕೇಳಿದ ನಂತರ, ಎಡಿಟ್ ಅನ್ನು ಯಾವ ರೀತಿಯಲ್ಲಿ ಮಾಡಬೇಕು ಎಂಬುದನ್ನು ನಿರ್ಧರಿಸಬಹುದು. ಅವಶ್ಯಕತೆಗೆ ತಕ್ಕಂತೆ ಫೈಲ್ ನ ಕೆಲವು ಭಾಗಗಳನ್ನು ಡಿಲೀಟ್ ಮಾಡಬಹುದು ಅಥವಾ ಸ್ಥಳಾಂತರಿಸಬಹುದು.
07:07 ಪರಿಚಯ, ವಿವರ (body) ಮತ್ತು ತೀರ್ಮಾನ (conclusion) ಗಳಿಗೆ ಸೂಕ್ತವಾದುದನ್ನು ಆಧರಿಸಿ 'edit' ಅನ್ನು ರೂಪಿಸಿ.
07:15 ಪುನರಾವರ್ತಿಸಿರುವುದನ್ನು ಮತ್ತು ಕೆಟ್ಟದಾಗಿರುವ ಧ್ವನಿಯನ್ನು ತೆಗೆದುಹಾಕಿ. ಮೆಸೇಜ್ ನ ಪ್ರಭಾವವನ್ನು ಹೆಚ್ಚಿಸಲು ಪರಿಣಾಮಗಳನ್ನು (effects) ಬಳಸಬಹುದು.
07:21 ಮಾತಿನ ಜೊತೆಗೆ ಅತಿಕ್ರಮಿಸದೇ ಇರುವ ಉಗ್ಗುವ ಮತ್ತು ಕೆಮ್ಮುಗಳಂತಹ ಬೇಡವಾದ ಶಬ್ದಗಳನ್ನು, ಪುನರಾವರ್ತನೆಗಳನ್ನು ಮತ್ತು ದೀರ್ಘ ಮೌನಗಳನ್ನು ತೆಗೆದುಹಾಕಬಹುದು.
07:32 ಡಿಲೀಟ್ ಮಾಡಲು-

'Selection Tool' ಅನ್ನು ಆಯ್ಕೆಮಾಡಿ ಮತ್ತು ಲೆಫ್ಟ್-ಕ್ಲಿಕ್ ಮಾಡಿ ಡಿಲೀಟ್ ಮಾಡಬೇಕಾಗಿರುವ ಆಡಿಯೋದ ಭಾಗವನ್ನು ಆಯ್ಕೆಮಾಡಿ. ಡ್ರ್ಯಾಗ್ ಮಾಡಿ ಮತ್ತು ರಿಲೀಸ್ ಮಾಡಿ. ಆಡಿಯೋದ ಆ ಭಾಗವನ್ನು ತೆಗೆದುಹಾಕಲು 'Delete' ಅನ್ನು ಒತ್ತಿ.

07:50 ಆಡಿಯೋದ ಒಂದು ಭಾಗವನ್ನು (segment) ಇನ್ನೊಂದೆಡೆಗೆ ಸ್ಥಳಾಂತರಿಸಲು - ಆಡಿಯೋದ ಸರಿಸಬೇಕಾದ ಭಾಗವನ್ನು ಲೆಫ್ಟ್-ಕ್ಲಿಕ್ ಮಾಡಿ ಆಯ್ಕೆಮಾಡಿ. ಡ್ರ್ಯಾಗ್ ಮಾಡಿ ಮತ್ತು ರಿಲೀಸ್ ಮಾಡಿ. ಆಮೇಲೆ ಆ ಭಾಗವನ್ನು ಕೀಬೋರ್ಡ್ ಶಾರ್ಟ್ಕಟ್ 'Ctrl+X' ಅನ್ನು ಬಳಸಿ ಕಟ್ ಮಾಡಿ.
08:07 ನಾವು 'Edit' ಟೂಲ್ಸ್ ಪ್ಯಾನೆಲ್ ನಲ್ಲಿ, 'Cut' ಬಟನ್ ನ ಮೇಲೆ ಕ್ಲಿಕ್ ಮಾಡಬಹುದು ಅಥವಾ 'Edit >> Cut' ಆಯ್ಕೆಯ ಮೇಲೆ ಸಹ ಕ್ಲಿಕ್ ಮಾಡಬಹುದು.
08:22 ಆಡಿಯೋದ ಭಾಗವನ್ನು ತೆಗೆದುಕೊಂಡು ಹೋಗಬೇಕಾದ ಜಾಗಕ್ಕೆ ಕರ್ಸರ್ ಅನ್ನು ಸರಿಸಿ.
08:31 ಅಲ್ಲಿ ಕ್ಲಿಕ್ ಮಾಡಿ ಮತ್ತು ಆಡಿಯೋ ಭಾಗವನ್ನು (segment) ಪೇಸ್ಟ್ ಮಾಡಿ.
08:33 ಇದನ್ನು ಕೀಬೋರ್ಡ್ ಶಾರ್ಟ್ಕಟ್ 'Ctrl+V' ಅಥವಾ 'Paste' ಬಟನ್ ಗಳಿಂದ
08:40 'Edit' ಟೂಲ್ಸ್ ಪ್ಯಾನೆಲ್ ನಲ್ಲಿ ಅಥವಾ
08:47 'Edit >> Paste' ಆಯ್ಕೆಯಿಂದ ಮಾಡಬಹುದು.
08:52 ಜೋರಾಗಿ ಕೇಳಿಸುವ ಶ್ವಾಸವನ್ನು ಕಡಿಮೆ ಮಾಡಲು:

ಆಡಿಯೋ ಸ್ಟ್ರೀಮ್ ನಲ್ಲಿಯ ಶ್ವಾಸದ ಭಾಗವನ್ನು ಆಯ್ಕೆಮಾಡಿ.

09:14 ಲೆಫ್ಟ್-ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ ಮತ್ತು ರಿಲೀಸ್ ಮಾಡಿ.
09:17 'Effect >> Amplify' ಗಳಿಗೆ ಹೋಗಿ.
09:26 ನಿಮಗೆ ಶಬ್ದವನ್ನು ಎಷ್ಟು ಕಡಿಮೆ ಮಾಡಬೇಕಾಗಿದೆಯೋ ಅದಕ್ಕೆ ಅನುಸಾರವಾಗಿ 'Amplification' ಬಾಕ್ಸ್ ನಲ್ಲಿ -5 ಅಥವಾ -7 ಅಥವಾ ಅದಕ್ಕಿಂತ ದೊಡ್ದದನ್ನು ನಮೂದಿಸಿ. ಮತ್ತು 'OK' ಯನ್ನು ಕ್ಲಿಕ್ ಮಾಡಿ.
09:43 ಮೆತ್ತಗೆ ರೆಕಾರ್ಡ್ ಮಾಡಲಾದ ಭಾಗಗಳ ವಾಲ್ಯೂಮ್ ಅನ್ನು ಹೆಚ್ಚಿಸಲು, ಆಡಿಯೋವನ್ನು ಆಯ್ಕೆಮಾಡಿ. ಕ್ರಮವಾಗಿ 'Effect >> Amplify' ಗಳಿಗೆ ಹೋಗಿ.
09:56 ಈಗಾಗಲೇ ಅಲ್ಲಿ ನೀವು ಒಂದು ವ್ಯಾಲ್ಯೂಅನ್ನು ನೋಡುವಿರಿ. ಈ ವ್ಯಾಲ್ಯೂ, ಈ ಫೈಲ್ ಗಾಗಿ ಅತ್ಯುತ್ತಮ ಆಂಪ್ಲಿಫಿಕೇಶನ್ (amplification) ಆಗಿದೆ. ನೀವು ನಿಮಗೆ ಬೇಕಾದ ಪ್ರಮಾಣವನ್ನು ಸಹ ನಮೂದಿಸಬಹುದು.
10:12 'OK' ಯನ್ನು ಕ್ಲಿಕ್ ಮಾಡಿ.
10:15 ಒಂದುವೇಳೆ, 'OK' ಬಟನ್ ಸಕ್ರಿಯವಾಗಿರದಿದ್ದರೆ, 'Allow Clipping' ಎಂಬ ಆಯ್ಕೆಯನ್ನು ಚೆಕ್ ಮಾಡಿ.
10:34 ಗೊಂದಲದ ಹಿನ್ನೆಲೆ ಶಬ್ದಗಳನ್ನು ಫಿಲ್ಟರ್ ಮಾಡಲು, ಟ್ರ್ಯಾಕ್ ನ ಮೇಲೆ ಶಬ್ದದ ನಮೂನೆಯೊಂದಿಗೆ ಒಂದು ಭಾಗವನ್ನು ಆಯ್ಕೆಮಾಡಿ.
10:47 ಧ್ವನಿಯಿರದ ಒಂದು ಭಾಗವನ್ನು ಆಯ್ಕೆಮಾಡಲು ನೆನಪಿಡಿ.
10:55 ಈಗ, ಕ್ರಮವಾಗಿ 'Effect >> Noise Removal' ಗಳ ಮೇಲೆ ಕ್ಲಿಕ್ ಮಾಡಿ.
10:59 'Get Noise Profile' ಮೇಲೆ ಕ್ಲಿಕ್ ಮಾಡಿ.
11:02 ಇದು ಫಿಲ್ಟರ್ ಮಾಡಬೇಕಾದ ಶಬ್ದದ ನಮೂನೆಯನ್ನು (noise sample) ಗುರುತಿಸುವುದು.
11:06 ಈಗ, ಆಡಿಯೋ ಟ್ರ್ಯಾಕ್ ನ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ, ಪೂರ್ತಿ ಟ್ರ್ಯಾಕ್ ಅನ್ನು ಆಯ್ಕೆಮಾಡಿ.
11:11 ಮತ್ತೊಮ್ಮೆ, ಕ್ರಮವಾಗಿ 'Effect >> Noise Removal' ಗಳ ಮೇಲೆ ಕ್ಲಿಕ್ ಮಾಡಿ.
11:16 'Noise Reduction Level' ಅನ್ನು ಆರಿಸಿಕೊಳ್ಳಿ.
11:26 ಸಪ್ಪಳವನ್ನು ಸಹಿಸಬಹುದಾದ ಮಟ್ಟಕ್ಕೆ ಕಡಿಮೆಮಾಡಬಲ್ಲ ಅತ್ಯಂತ ಕಡಿಮೆ ವ್ಯಾಲ್ಯೂಅನ್ನು ಬಳಸಿ.
11:31 ಹೆಚ್ಚಿನ ವ್ಯಾಲ್ಯೂಗಳು ಸಪ್ಪಳವನ್ನು ಸಂಪೂರ್ಣವಾಗಿ ತೆಗೆದುಹಾಕುವವು. ಆದರೆ ಉಳಿದುಕೊಂಡ ಆಡಿಯೋದ ತಿರುಚುವಿಕೆಯು (distortion) ಪರಿಣಮಿಸುವುದು.
11:37 ನಾವು 'OK' ಯನ್ನು ಕ್ಲಿಕ್ ಮಾಡೋಣ.
11:44 ಆಡಿಯೋವನ್ನು, ಬಾಕ್ಸ್ ನಲ್ಲಿ ಶಿಫಾರಸು ಮಾಡಿದ ವ್ಯಾಲ್ಯೂಗಿಂತ ಬಹಳ ಹೆಚ್ಚು ಆಂಪ್ಲಿಫೈ (amplify) ಮಾಡದಿರುವುದು ಸೂಕ್ತ. ಏಕೆಂದರೆ, ಆಂಪ್ಲಿಫಿಕೇಶನ್ (amplification) ಸಹ ಹಿನ್ನೆಲೆ ಸಪ್ಪಳವನ್ನು ಹೆಚ್ಚಿಸುತ್ತದೆ.
11:54 ಪಿಸುಗುಟ್ಟುವುದು ಹಾಗೂ ಗುಂಯ್ಗುಡುವುದು ಸಹ ಹೆಚ್ಚು ಎದ್ದುಕಾಣುವುದು.
11:57 ಪ್ರೊಜೆಕ್ಟ್ ಫೈಲ್ ಅನ್ನು ನಿಯಮಿತವಾಗಿ ಸೇವ್ ಮಾಡಿ.
12:00: ಕೊನೆಯದಾಗಿ, ಫೈನಲ್ ಪ್ರೊಜೆಕ್ಟ್ ಅನ್ನು 'wav, mp3' ಗಳಂತಹ ಬೇಕಾದ ಆಡಿಯೋ ಫಾರ್ಮ್ಯಾಟ್ ಗೆ ಎಕ್ಸ್ಪೋರ್ಟ್ ಮಾಡಿ.
12:09 ಹಿಂದಿನ ಟ್ಯುಟೋರಿಯಲ್ ನಲ್ಲಿ ಈ ಭಾಗವನ್ನು ನಾವು ಈಗಾಗಲೇ ವಿವರಿಸಿದ್ದೇವೆ. ದಯವಿಟ್ಟು ವಿವರಗಳಿಗಾಗಿ ಅದನ್ನು ನೋಡಿ.
12:17 ಈ ಟ್ಯುಟೋರಿಯಲ್ ನಲ್ಲಿ ಇರುವುದು ಇಷ್ಟೇ. ನಾವು ಇದರ ಸಾರಾಂಶವನ್ನು ನೋಡೋಣ. ಇದರಲ್ಲಿ, ನಾವು ಓಡಾಸಿಟೀಯನ್ನು ಬಳಸಿ ಎಡಿಟ್ ಮಾಡುವುದನ್ನು -
12;26
  • ಆಡಿಯೋ ಫೈಲ್ ಅನ್ನು ತೆರೆಯುವುದು
  • ಸ್ಟೀರಿಯೋವನ್ನು ಮೋನೊಗೆ ಪರಿವರ್ತಿಸುವುದು
  • ಝೂಮ್-ಇನ್ ಮತ್ತು ಝೂಮ್-ಔಟ್ ಮಾಡುವುದು
  • ಲೇಬಲ್ ಗಳನ್ನು ಲಗತ್ತಿಸುವುದು
12:35 * 'Structure' ಹಾಗೂ ಎಡಿಟ್ ಮಾಡುವುದು
  • ಆಡಿಯೋವನ್ನು 'Cut, delete, move' ಮಾಡುವುದು
  • ಆಡಿಯೋವನ್ನು 'Amplify' ಮಾಡುವುದು
  • ಹಿನ್ನೆಲೆಯ ಶಬ್ದವನ್ನು 'ಫಿಲ್ಟರ್' ಮಾಡುವುದು ಇತ್ಯಾದಿಗಳನ್ನು ಕಲಿತಿದ್ದೇವೆ.
12:50 ಮೇಲೆ ಹೇಳಿದ ಸಲಹೆಗಳನ್ನು ಬಳಸಿಕೊಂಡು, ಮೊದಲನೆಯ ಟ್ಯುಟೋರಿಯಲ್ ನಲ್ಲಿ ನೀವು ರೆಕಾರ್ಡ್ ಮಾಡಿದ ಆಡಿಯೋವನ್ನು ಎಡಿಟ್ ಮಾಡಿ.
12:55 ಅವಶ್ಯವಿದ್ದಲ್ಲಿ fade-out ಹಾಗೂ fade-in ಗಳನ್ನು ಬಳಸಿರಿ.
13:01 ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಂಶವಾಗಿದೆ.
13:06 http://spoken-tutorial.org/What_is_a_Spoken_Tutorial
13:10 ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
13:15 'ಸ್ಪೋಕನ್ ಟ್ಯುಟೋರಿಯಲ್' ತಂಡವು: * 'ಸ್ಪೋಕನ್ ಟ್ಯುಟೋರಿಯಲ್' ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
13:20 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
13:25 ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಗೆ ಸಂಪರ್ಕಿಸಿ:

contact@spoken-tutorial.org

13:30 'ಸ್ಪೋಕನ್ ಟ್ಯುಟೋರಿಯಲ್' ಪ್ರಕಲ್ಪವು, 'ಟಾಕ್ ಟು ಎ ಟೀಚರ್' (Talk to a Teacher) ಪ್ರಕಲ್ಪದ ಒಂದು ಭಾಗವಾಗಿದೆ.
13:35 ಈ ಪ್ರಕಲ್ಪವು ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
13:42 ಈ ಮಿಷನ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಅನ್ನು ನೋಡಿ.

http://spoken-tutorial.org/NMEICT-Intro.

13:55 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
13:58 ಧನ್ಯವಾದಗಳು.
14:01 IIT Bombayಯಿಂದ, ಈ ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Sandhya.np14