Scilab/C2/Conditional-Branching/Kannada
From Script | Spoken-Tutorial
Time | Narration |
00:01 | Scilab (ಸೈಲ್ಯಾಬ್) ನಲ್ಲಿ, Conditional Branching (ಕಂಡಿಶನಲ್ ಬ್ರಾಂಚಿಂಗ್) ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮ್ಮ ಕಂಪ್ಯೂಟರ್ ನಲ್ಲಿ ಸೈಲ್ಯಾಬ್ ಕನ್ಸೋಲ್ ವಿಂಡೋ ವನ್ನು ತೆರೆಯಿರಿ. |
00:09 | ನಾವು ಸೈಲ್ಯಾಬ್ ನಲ್ಲಿರುವ if-then-else ಮತ್ತು select-case ಎಂಬ ಎರಡು ವಿಧದ ಕಂಡಿಷನಲ್ ಕನ್ಸ್ಟ್ರಕ್ಟ್ ಗಳ ಕುರಿತು ಚರ್ಚಿಸುವೆವು. |
00:19 | if ಸ್ಟೇಟ್ಮೆಂಟ್: ಒಂದುವೇಳೆ ಕೊಟ್ಟಿರುವ ಶರತ್ತು ಸರಿಯಿದ್ದರೆ, ಸ್ಟೇಟ್ಮೆಂಟ್ ಗಳ ಒಂದು ಬ್ಲಾಕ್ ಅನ್ನು ಎಕ್ಸಿಕ್ಯೂಟ್ ಮಾಡಲು ಇದು ನಮಗೆ ಅನುಮತಿಸುತ್ತದೆ. |
00:24 | ನಾನು ಇದರ ಒಂದು ಉದಾಹರಣೆಯನ್ನು ಕೊಡುತ್ತೇನೆ: |
00:27 | n is equal 42 if n is equal to equal to 42 (n==42) then disp "the number is 42" end of if construct. |
00:37 | ಇಲ್ಲಿ, 'is equal to' (=), ಒಂದು ಅಸೈನ್ಮೆಂಟ್ ಆಪರೇಟರ್ ಆಗಿದೆ. ಇದು n ಎಂಬ ವೇರಿಯೇಬಲ್ ಗೆ, 42 ಅನ್ನು ಅಸೈನ್ ಮಾಡುತ್ತದೆ. |
00:43 | ಮತ್ತು 'is equal to is equal to' (==), ಒಂದು ಇಕ್ವಾಲಿಟಿ ಆಪರೇಟರ್ ಆಗಿದ್ದು, ಬಲ ಮತ್ತು ಎಡಭಾಗಗಳಲ್ಲಿರುವ ವ್ಯಾಲ್ಯೂಗಳು, ಒಂದೇ ಆಗಿವೆಯೇ ಎಂದು ಪರೀಕ್ಷಿಸುತ್ತದೆ. |
00:51 | ಈ ಸಂದರ್ಭದಲ್ಲಿ, 'n' ಹಾಗೂ 42 ಇರುತ್ತವೆ. ಇದು ಫಲಿತಾಂಶವನ್ನು Boolean ನಲ್ಲಿ ಕೊಡುತ್ತದೆ. |
00:57 | ಇಲ್ಲಿ, ಮೊದಲನೇ ಸಾಲಿನ ನಂತರ ಇರುವ ಕಾಮಾ (comma), ಐಚ್ಛಿಕವಾಗಿದೆ. |
01:01 | then ಕೀವರ್ಡ್ ಕೂಡ ಐಚ್ಛಿಕವಾಗಿದೆ. |
01:04 | ಇದಕ್ಕೆ ಬದಲಾಗಿ ಕಾಮಾ (comma) ಅಥವಾ 'ಕ್ಯಾರೇಜ್ ರಿಟರ್ನ' ಅನ್ನು ಕೂಡ ಬಳಸಬಹುದು. |
01:08 | end ಕೀವರ್ಡ್, if ಕನ್ಸ್ಟ್ರಕ್ಟ್ ಅನ್ನು ಕೊನೆಗೊಳಿಸುತ್ತದೆ. |
01:11 | ಈ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡುವುದರಿಂದ, ಇಲ್ಲಿ ತೋರಿಸಿದ ಔಟ್ಪುಟ್ ಅನ್ನು ನಾವು ನೋಡುತ್ತೇವೆ. |
01:20 | ಇಲ್ಲಿಯವರೆಗೆ, ಒಂದು ಶರತ್ತು True ಇದ್ದಾಗ, ಹಲವು ಸ್ಟೇಟ್ಮೆಂಟ್ ಗಳ ಒಂದು ಸೆಟ್ ಅನ್ನು ಹೇಗೆ ಎಕ್ಸಿಕ್ಯೂಟ್ ಮಾಡುವುದು ಎಂದು ನಾವು ನೋಡಿದ್ದೇವೆ. |
01:26 | ಈಗ, ಆ ಷರತ್ತು False ಆಗಿದ್ದರೆ, ಬೇರೆ ಸ್ಟೇಟ್ಮೆಂಟ್ ಗಳ ಸೆಟ್ ಅನ್ನು ಹೇಗೆ ಎಕ್ಸಿಕ್ಯೂಟ್ ಮಾಡುವುದು ಅಥವಾ ಬೇರೆ ಯಾವುದಾದರೂ ಶರತ್ತು ಅನ್ವಯಿಸುತ್ತದೆಯೇ ಎಂಬುದನ್ನು ನಾವು ನೋಡುವೆವು. |
01:36 | ನಾವು ಇದನ್ನು ಕ್ರಮವಾಗಿ else ಅಥವಾ elseif ಕೀವರ್ಡ್ ಗಳನ್ನು ಬಳಸಿ ಮಾಡಬಹುದು. |
01:40 | ಅದನ್ನು ನಾವು ಹೀಗೆ ಮಾಡುತ್ತೇವೆ. |
01:41 | ಈ ಉದಾಹರಣೆಯಲ್ಲಿ, ವೇರಿಯೇಬಲ್ 'n' ಗೆ 54 ಅನ್ನು ಅಸೈನ್ ಮಾಡಲಾಗಿದೆ. 'if' ಅನ್ನು ಬಳಸಿ, ಷರತ್ತು true ಆಗಿದೆಯೇ ಎಂದು ಮತ್ತು 'else' ಅನ್ನು ಬಳಸಿ false ಆಗಿದೆಯೇ ಎಂದು ಪರೀಕ್ಷಿಸಲಾಗಿದೆ: |
01:55 | ನಾನು ಇದನ್ನು ಕಟ್ ಮಾಡಿ, ಸೈಲ್ಯಾಬ್ ಕನ್ಸೋಲ್ ನಲ್ಲಿ ಪೇಸ್ಟ್ ಮಾಡಿ ನಂತರ Enter ಅನ್ನು ಒತ್ತುತ್ತೇನೆ. |
02:03 | ನೀವು ಔಟ್ಪುಟ್ ಅನ್ನು ನೋಡುತ್ತೀರಿ. |
02:05 | ಮೇಲೆ ತೋರಿಸಿದ ಉದಾಹರಣೆಗಳು, ಅನೇಕ ಸಾಲಿನಲ್ಲಿ ಇರುವುದನ್ನು ನೀವು ಗಮನಿಸಬಹುದು. |
02:09 | ಸೆಮಿಕೋಲನ್ ಮತ್ತು ಕಾಮಾ ಗಳನ್ನು ಸರಿಯಾಗಿ ಬಳಸಿ, ಒಂದೇ ಸಾಲಿನಲ್ಲಿ ಔಟ್ಪುಟ್ ಅನ್ನು ಪಡೆಯಬಹುದು. |
02:19 | ಎಕ್ಸಿಕ್ಯೂಟ್ ಮಾಡಲು, ನಾನು ಇದನ್ನು ಕಟ್ ಮಾಡಿ, ಸೈಲ್ಯಾಬ್ ಕನ್ಸೋಲ್ ನಲ್ಲಿ ಪೇಸ್ಟ್ ಮಾಡಿ, Enter ಅನ್ನು ಒತ್ತುತ್ತೇನೆ. |
02:27 | ಅನೇಕ ಬ್ರ್ಯಾಂಚ್ ಗಳನ್ನು ಸ್ಪಷ್ಟವಾದ ಮತ್ತು ಸುಲಭವಾದ ರೀತಿಯಲ್ಲಿ ಜೋಡಿಸಲು, select ಸ್ಟೇಟ್ಮೆಂಟ್, ಅನುಮತಿಸುತ್ತದೆ. |
02:31 | ವೇರಿಯೇಬಲ್ ನ ವ್ಯಾಲ್ಯೂಗೆ ಅನುಸಾರವಾಗಿ, ಇದು case ಕೀವರ್ಡ್ ಗೆ ಸಂಬಂಧಿಸಿದ ಸ್ಟೇಟ್ಮೆಂಟ್ ಗಳನ್ನು ಎಕ್ಸಿಕ್ಯೂಟ್ ಮಾಡಲು ಅನುಮತಿಸುತ್ತದೆ. |
02:38 | ಇಲ್ಲಿ ನಮಗೆ ಬೇಕಾಗಿರುವಷ್ಟು ಬ್ರ್ಯಾಂಚ್ ಗಳಿರಬಹುದು. |
02:41 | ಇದನ್ನು ಒಂದು ಉದಾಹರಣೆಯೊಂದಿಗೆ ನೋಡೋಣ. |
02:44 | ನಾವು 'n' ಎಂಬ ವೇರಿಯೇಬಲ್ ಗೆ 100 ಅನ್ನು ಅಸೈನ್ ಮಾಡುವೆವು ಮತ್ತು case ಗಳಾದ 42, 54 ಹಾಗೂ else ನಿಂದ ಸೂಚಿತವಾದ ಒಂದು ಡಿಫಾಲ್ಟ್ ಕೇಸ್ ಅನ್ನು ಪರೀಕ್ಷಿಸುವೆವು. |
02:59 | ಇದನ್ನು ಕಟ್ ಮಾಡಿ, ಪೇಸ್ಟ್ ಮಾಡಿ ಮತ್ತು Enter ಅನ್ನು ಒತ್ತಿ. |
03:06 | ಇಲ್ಲಿ ನಾವು ಔಟ್ಪುಟ್ ಅನ್ನು ನೋಡುತ್ತೇವೆ. |
03:09 | ಇಲ್ಲಿಗೆ, Scilab ನಲ್ಲಿ Conditional Branching ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
03:14 | ಈ ಟ್ಯುಟೋರಿಯಲ್ ನಲ್ಲಿ ನಾವು, if - elseif - else ಸ್ಟೇಟ್ಮೆಂಟ್ ಮತ್ತು select ಸ್ಟೇಟ್ಮೆಂಟ್ ಗಳ ಬಗ್ಗೆ ಕಲಿತಿದ್ದೇವೆ. |
03:20 | ಸೈಲ್ಯಾಬ್ ನಲ್ಲಿ ಇನ್ನೂ ಅನೇಕ ಫಂಕ್ಷನ್ ಗಳಿವೆ. ಅವುಗಳನ್ನು ಮುಂದಿನ ಟ್ಯುಟೋರಿಯಲ್ ಗಳಲ್ಲಿ ವಿವರಿಸಲಾಗುವುದು. |
03:25 | ಸೈಲ್ಯಾಬ್ ಲಿಂಕ್ ಗಳನ್ನು ವೀಕ್ಷಿಸುತ್ತಿರಿ. |
03:27 | ‘ಸ್ಪೋಕನ್ ಟ್ಯುಟೋರಿಯಲ್’ ಗಳು, ‘ಟಾಕ್ ಟು ಎ ಟೀಚರ್’ ಪ್ರೊಜೆಕ್ಟ್ ನ ಒಂದು ಭಾಗವಾಗಿವೆ. ಇದು ICT ಮೂಲಕ, ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ನಿಂದ ಆಧಾರವನ್ನು ಪಡೆದಿದೆ. |
03:35 | ಇದರ ಕುರಿತು ಹೆಚ್ಚಿನ ವಿವರಗಳು ಈ ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ. |
03:38 | ಧನ್ಯವಾದಗಳು. |