PHP-and-MySQL/C4/User-Registration-Part-2/Kannada

From Script | Spoken-Tutorial
Jump to: navigation, search
Time Narration
00:00 User registration ಟ್ಯುಟೋರಿಯಲ್ ನ ಎರಡನೆಯ ಭಾಗಕ್ಕೆ ಸ್ವಾಗತ.
00:05 ಈ ಭಾಗದಲ್ಲಿ ನಾವು ಈ ಫಾರ್ಮ್ ಗಳ ಅಸ್ತಿತ್ವವನ್ನು ಪರೀಕ್ಷಿಸುವೆವು. ಈಗ ಈ ಫೀಲ್ಡ್ ಗಳಲ್ಲಿ ಟೈಪ್ ಮಾಡಿದ ವ್ಯಾಲ್ಯುಗಳನ್ನು ತೆಗೆದುಬಿಡೋಣ.
00:12 ಪಾಸ್ವರ್ಡ್ ಅನ್ನು ಈಗ ಎನ್ಕ್ರಿಪ್ಟ್ ಮಾಡಲು ಹೊರಟಿದ್ದೇವೆ.
00:16 ನಾವು ಈ ಎಚ್.ಟಿ.ಎಮ್.ಎಲ್ ಟ್ಯಾಗ್ ಗಳನ್ನು ಸಹ ಸರಿಸುವೆವು.
00:23 ನಾನು ನನ್ನ ಲಾಗಿನ್ ಭಾಗವನ್ನು ಎನ್ಕ್ರಿಪ್ಟ್ ಮಾಡುತ್ತಿದ್ದೇನೆ ಎಂದುಕೊಳ್ಳಿ. "login dot php" ಫೈಲ್ ಅನ್ನು ತೆರೆದು ಇಲ್ಲಿ ನನ್ನ ಪೇಜ್ ಗೆ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳುವೆನು.
00:37 ನಾವು ಪಾಸ್ವರ್ಡ್ ಅನ್ನು ನೇರವಾಗಿ ನಮ್ಮ ಡಾಟಾಬೇಸ್ ಗೆ ತೆಗೆದುಕೊಳ್ಳುತ್ತೇವೆ.
00:44 ಹಾಗಾಗಿ "$dbusername" ವ್ಯಾಲ್ಯು ಮತ್ತು "$dbpassword" ವ್ಯಾಲ್ಯುವನ್ನು ಬದಲಿಸಬೇಕು.
00:50 ನೀವು ಈ ಕೋಡ್ ಅನ್ನು ಬರೆಯಲು ಮೊದಲ ವಿಡಿಯೋವನ್ನು ನೋಡಿರದಿದ್ದರೆ, ಅದನ್ನು ಅವಶ್ಯವಾಗಿ ನೋಡಲೇಬೇಕು.
00:56 "register dot php" ಗೆ ಹಿಂದಿರುಗಿ. ಮೊದಲು ನಾವು "submit" ಅನ್ನು ಪರೀಕ್ಷಿಸಬೇಕು.
01:02 ಈಗ ಸದ್ಯಕ್ಕೆ ನಾನು "$submit" ವೇರಿಯೇಬಲ್ ಅನ್ನು ಹೊಂದಿಲ್ಲ.
01:06 ಇದು "dollar sign underscore POST" ಸಮವಾಗಿರುತ್ತದೆ. ಅದರಲ್ಲಿ, "submit" ಎಂದು ಟೈಪ್ ಮಾಡಿ.
01:14 ಏಕೆಂದರೆ, ಇಲ್ಲಿ ಬಳಕೆದಾರ 'submit' ಬಟನ್ ಅನ್ನು ಕ್ಲಿಕ್ ಮಾಡಿದರೆ, ಇದು "Register" ನ ವ್ಯಾಲ್ಯುವನ್ನು ಹಿಡಿದಿಟ್ಟುಕೊಳ್ಳುವುದು.
01:23 ಅಂದರೆ, ಬಳಕೆದಾರ ಈ ಬಟನ್ ಅನ್ನು ಕ್ಲಿಕ್ ಮಾಡಿದಾಗ, ನಾವು ನಮ್ಮ ಕೋಡ್ ಅನ್ನು ಮುಂದುವರಿಸಬಹುದು ಎಂದು ಇದು ಹೇಳುತ್ತದೆ.
01:31 ಈಗ ನಾವು ಪಡೆಯಬೇಕಾದ ಇನ್ನೊಂದು ವ್ಯಾಲ್ಯುವೆಂದರೆ ಬಳಕೆದಾರನ ಹೆಸರಾಗಿದೆ. ಅಂದರೆ ಬಳಕೆದಾರನ ಪೂರ್ಣ ಹೆಸರು. ಅದಕ್ಕಾಗಿ "$fullname = $ underscore POST" ಎಂದೂ ಮತ್ತು ಇಲ್ಲಿ "fullname" ಎಂದು ಟೈಪ್ ಮಾಡುವೆನು. ನೀವು ಇದರ ಸಾಕ್ಷಿಯನ್ನು ಇಲ್ಲಿ ನೋಡಬಹುದು.
01:51 ಇಲ್ಲಿ ಕೊಟ್ಟಿರುವ ನೇಮ್ ಅನ್ನು ಇಲ್ಲಿ ಅನುಕರಿಸುತ್ತಿದ್ದೇವೆ. ನಾವು ಒಮ್ಮೆ 'fullname', 'username', 'password', 'repeat pasword' ಇವೆಲ್ಲವನ್ನು ಪಡೆದಿದ್ದೇವೆ ಅಲ್ಲವೇ?
01:59 ಇಲ್ಲಿ "$fullname" ಅನ್ನು ಪಡೆದಿದ್ದೇವೆ. ಈಗ "$username" ಅನ್ನೂ ತೆಗೆದುಕೊಳ್ಳೋಣ.
02:09 ಈಗ ಇಲ್ಲಿ ಕೋಡ್ ಮಾಡಿರುವುದನ್ನು ಕಾಪಿ ಮಾಡಿ, ಕೆಳಗೆ ಪೇಸ್ಟ್ ಮಾಡುವೆನು.
02:12 ಇಲ್ಲಿ "pasword" ಮತ್ತು "repeat password" ಎಂದು ಬದಲಿಸೋಣ. ಇಲ್ಲಿ "$password" ಮತ್ತು "$repeat password" ಇದೆ. ಈ ವ್ಯಾಲ್ಯುಗಳನ್ನು ಬದಲಿಸುವೆನು. ಅವುಗಳನ್ನು ಟೈಪ್ ಮಾಡುವ ಅಗತ್ಯವಿಲ್ಲ.
02:26 ಆದರೆ ನೀವು ಪಿ.ಎಚ್.ಪಿ. ಗೆ ಹೊಸಬರಾಗಿದ್ದರೆ, ಇವುಗಳನ್ನು ಮತ್ತೆ ಮತ್ತೆ ಟೈಪ್ ಮಾಡಿ ಎಂದು ಸಲಹೆಕೊಡುವೆನು. ಆಗ ನಿಮಗೆ ಅಭ್ಯಾಸವಾಗುವುದು ಮತ್ತು ನೀವು ಅವುಗಳನ್ನು ಮರೆಯುವುದಿಲ್ಲ.
02:34 ನಾವು ಇಲ್ಲಿ ಎಲ್ಲಾ ವ್ಯಾಲ್ಯುಗಳನ್ನು ಪಡೆದಿದ್ದೇವೆ.
02:37 ಹಾಗಾಗಿ, "if "$submit" "ನಂತರ ಈ ಎಲ್ಲ ವ್ಯಾಲ್ಯುಗಳು ಸರಿಯಾಗಿ ಸಬ್ಮಿಟ್ ಆಗಿವೆಯೇ ಎಂದು ತೋರಿಸಲು ಇವುಗಳನ್ನು ಎಕೋ ಮಾಡುವೆನು.
02:49 ಡಿಬಗ್ ಮಾಡಲು ಇದನ್ನು ಮಾಡುವುದು ಒಳ್ಳೆಯದು. ನೀವು ಎಲ್ಲಾದರೂ ತಪ್ಪಾಗಿ ಟೈಪ್ ಮಾಡಿರಬಹುದು ಮತ್ತು ನೀವು ತಪ್ಪಾಗಿ ಟೈಪ್ ಮಾಡಿದ ಡಾಟಾವನ್ನು ಡಾಟಾಬೇಸ್ ನಲ್ಲಿ ಇಡುವುದು ಒಳ್ಳೆಯದಲ್ಲ.
02:54 ಅದಕ್ಕಾಗಿ ನಾನು ಇಲ್ಲಿ echo "$username" ಫಾರ್ವರ್ಡ್ ಸ್ಲ್ಯಾಶ್ "$password" ನಂತರ "$repeat password" ಮತ್ತು "$fullname" ಎಂದು ಟೈಪ್ ಮಾಡಿ ಆನಂತರ ಲೈನ್ ಟರ್ಮಿನೇಟರ್ ಅನ್ನು ಸೇರಿಸುವೆನು.
03:16 ಫಾರ್ಮ್ ನಿಂದ ತೆಗೆದುಕೊಂಡ ಎಲ್ಲಾ ಡಾಟಾವನ್ನು ಇಲ್ಲಿ ಹೊಂದಿದ್ದೇವೆ.
03:21 ಇದನ್ನು "form data" ಎಂದು ಕಮೆಂಟ್ ಮಾಡುವೆನು.
03:24 ಈಗ ನೀವು ಇದನ್ನು ಮಾಡುವುದನ್ನು ಕಲಿತಿರಬೇಕು.
03:27 ಫಾರ್ಮ್ ಸಬ್ಮಿಟ್ ಆಗಿದ್ದರೆ, ನಾನು ಇದನ್ನು ಎಕೋ ಮಾಡುತ್ತೇನೆ. ಇದು ಅಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ.
03:32 ಇಲ್ಲಿ ನಾನು Register ಅನ್ನು ಕ್ಲಿಕ್ ಮಾಡಿದರೆ ಏನೂ ಆಗುವುದಿಲ್ಲ. ನಾನು ಕ್ಲಿಕ್ ಮಾಡುತ್ತಿದ್ದೇನೆ, ಏನೂ ಆಗುತ್ತಿಲ್ಲ.
03:40 ಹಾಗಾಗಿ ಇಲ್ಲಿ ನನ್ನ " full name " ಅನ್ನೂ, ಮತ್ತು ಇಲ್ಲಿ "username " ಅನ್ನೂ ಟೈಪ್ ಮಾಡುವೆನು. ಇಲ್ಲಿ ಪಾಸ್ವರ್ಡ್ ಅನ್ನು ಅಂದರೆ ಈಗ "abc" ಎಂದು ಟೈಪ್ ಮಾಡುವೆನು.
03:49 Register ಅನ್ನು ಕ್ಲಿಕ್ ಮಾಡಿ, ಏನೂ ಆಗಿಲ್ಲ.
03:52 ಇಲ್ಲಿ if "submit", "POST submit" ಆಗಿದೆ.
03:57 ನಮ್ಮ ಫಾರ್ಮ್ ನಲ್ಲಿ form action, ಆದ ಮೇಲೆ ನಾವು method ಅನ್ನು "POST" ಎಂದು ಮಾಡಬೇಕು.
04:05 ಅದನ್ನು ಸೇರಿಸಲು ನಾನು ಮರೆತಿದ್ದೇನೆ.
04:07 ನಾವು method ಅನ್ನು "POST" ಎಂದು ಹೇಳಬೇಕು. ಇಲ್ಲವಾದರೆ ಅದು ಡಿಫಾಲ್ಟ್ ಆಗಿ "GET" ಎಂದು ತೆಗೆದುಕೊಳ್ಳುವುದು. ಈಗ ಎಲ್ಲವೂ ಸರಿಯಾಗಿದೆ.
04:13 ನಾನು ಈಗ ರಿಫ್ರೆಶ್ ಮಾಡಿ, ನನ್ನ ಡಾಟಾವನ್ನು ಪುನಃ ಟೈಪ್ ಮಾಡುವೆನು.
04:21 ಅದು "Alex Garrett" ಮತ್ತು ಯೂಸರ್ ನೇಮ್ "alex" ಆಗಿದೆ. ಇವು "abc" ಮತ್ತು "abc" ಆಗಿರಲಿ. Register ಅನ್ನು ಕ್ಲಿಕ್ ಮಾಡಿ. ನನ್ನ ಡಾಟಾವು ಇಲ್ಲಿ ಕಾಣಿಸುತ್ತದೆ.
04:30 ಇದು ಸರಿಯಾಗಿದೆಯೇ ಎಂದು ನಾವು ಪರೀಕ್ಷಿಸಬಹುದು. ನನ್ನ 'fullname' "Alex Garrett" ಆಗಿತ್ತು. ನಾನು ಆಯ್ಕೆಮಾಡಿದ 'username' "alex" ಆಗಿತ್ತು. ಇಲ್ಲಿ ಮತ್ತು ಇಲ್ಲಿ "abc" ಆಗಿತ್ತು.
04:40 ನಾನು ಈಗ ಈ ಪಾಸ್ವರ್ಡ್ ಗಳನ್ನು ಎನ್ಕ್ರಿಪ್ಟ್ ಮಾಡಲು ಬಯಸುವೆನು.
04:43 ನೀವು ಗೂಗಲ್ ಅಥವಾ ಇನ್ಯಾವುದೇ ಸರ್ಚ್ ಎಂಜಿನ್ ನಲ್ಲಿ "MD5 encryption" ಅಂದರೆ "M D 5" ನ ಕುರಿತು ನೋಡಬಹುದು. ಈಗ ಇದನ್ನು ತೆಗೆದುಬಿಡೋಣ. ಇದನ್ನು ಇಲ್ಲಿ ಕೆಳಗೆ ಬರೆಯುವೆನು. ಇದು ಡಾಟಾವನ್ನು ಎನ್ಕ್ರಿಪ್ಟ್ ಮಾಡುವ ಉಪಯುಕ್ತ ವಿಧಾನವಾಗಿದೆ.
04:54 ಈಗ ಎಲ್ಲವೂ ಸರಿಯಾಗಿದೆ. ಪಿ.ಎಚ್.ಪಿ. ಯಲ್ಲಿ Md5 ಫಂಕ್ಷನ್ ಸ್ಟ್ರಿಂಗ್ ಅಥವಾ ಸಂಖ್ಯೆಯ ವ್ಯಾಲ್ಯುವನ್ನು, ಸ್ಟ್ರಿಂಗ್ ವ್ಯಾಲ್ಯುವನ್ನು ಅಥವಾ ಡಾಟಾ ವ್ಯಾಲ್ಯುವನ್ನು ತೆಗೆದುಕೊಳ್ಳುತ್ತದೆ.
05:09 ಇದು MD5 ಎನ್ಕ್ರಿಪ್ಷನ್ ವಿಧಾನದಲ್ಲಿ ಎನ್ಕ್ರಿಪ್ಟ್ ಆಗಿದೆ.
05:13 ಈಗ "alex" ಅನ್ನು "Md5 " ಗೆ ಎನ್ಕ್ರಿಪ್ಟ್ ಮಾಡುವೆನು. ಈಗ ಇದನ್ನು ಎಕೋ ಮಾಡಿ, ರಿಫ್ರೆಶ್ ಮಾಡೋಣ.
05:19 ಡಾಟಾ ವನ್ನು "ರಿಸೆಂಡ್" ಮಾಡುವುದು ಬೇಡ. ಇದು ನೇರವಾಗಿ ಇಲ್ಲಿಂದ ಹಿಂದಿರುಗಬೇಕು ಮತ್ತು Register ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ.
05:26 ಈಗ ಇಲ್ಲಿ ಹೋಗಿ. if "$submit" ಇದು ಸರಿಯಾಗಿದೆ. ನಾವು ಈ ಕಂಡಿಷನ್ ಅನ್ನು ಹೊರತೆಗೆದು, ರಿಫ್ರೆಷ್ ಮಾಡೋಣ.
05:34 ನನ್ನ ಹೆಸರು "Md5 " ನಲ್ಲಿ ಎನ್ಕ್ರಿಪ್ಟ್ ಆಗಿದೆ.
05:39 ಇದು ಯಾವಾಗಲೂ ಒಂದೇ ಉದ್ದವನ್ನು ಹೊಂದಿರುತ್ತದೆ. ನೀವು ಒಂದು ಸ್ಟ್ರಿಂಗ್ ಅನ್ನು ಎನ್ಕ್ರಿಪ್ಟ್ ಮಾಡಿ ಅದನ್ನು ನಿಮ್ಮ ಎನ್ಕ್ರಿಪ್ಟ್ ಆದ ಎರಡು ವ್ಯಾಲ್ಯುಗಳೊಂದಿಗೆ ಹೋಲಿಕೆ ಮಾಡದಿದ್ದರೆ, ಅದನ್ನು ಕಂಡುಹಿಡಿಯುವುದು ಕಷ್ಟ ಎನ್ನಬಹುದು.
05:53 ಇದು ನಿಮಗೆ ಅರ್ಥವಾಗದೇ ಇದ್ದರೆ, ನನ್ನ MD5 encryption ನ ಕುರಿತು ಇರುವ ಟ್ಯುಟೋರಿಯಲ್ ಅನ್ನು ನೋಡಿ.
06:01 ಈಗ if "$submit" ಆಗಿದ್ದರೆ, ಇಲ್ಲಿ ನಮ್ಮ ಕೋಡ್ ಇದೆ.
06:08 ನನ್ನ 'fullname', 'username' ಮತ್ತು 'password' ಗಳು ಸರಿಯಾಗಿವೆ.
06:10 ಸಬ್ಮಿಟ್ ಮಾಡಿದ 'password' ಮತ್ತು 'repeat password' ಗಳಿಗೆ, "MD5 encryption" ಅನ್ನು ಸೇರಿಸುವೆನು.
06:21 ಅದನ್ನು ಮರೆಯಬೇಡಿ.
06:23 ಈಗ "$password" break ಮತ್ತು "$repeat password" ಗಳನ್ನು ಎಕೋ ಮಾಡುವೆನು.
06:32 ರಿಫ್ರೆಶ್ ಮಾಡಿ ನನ್ನ ಫಾರ್ಮ್ ಅನ್ನು ಸಬ್ಮಿಟ್ ಮಾಡುವಾಗ ನನ್ನ 'password' ಅನ್ನು "abc" ಎಂದು, 'repeat password' ಅನ್ನು ಕೂಡ "abc" ಎಂದು ಆಯ್ಕೆಮಾಡಿಕೊಳ್ಳುವೆನು.
06:45 "Register " ಅನ್ನು ಕ್ಲಿಕ್ ಮಾಡಿ. ಇಲ್ಲಿ ನೀವು ಎರಡು ಎನ್ಕ್ರಿಪ್ಟ್ ಆದ ಪಾಸ್ವರ್ಡ್ ಗಳು ಒಂದೇ ರೀತಿಯಾಗಿರುವುದನ್ನು ನೋಡಬಹುದು ಮತ್ತು ಅವೆರಡೂ ಡಾಟಾಬೇಸ್ ನಲ್ಲಿ ಇಡಲು ಸಿದ್ಧವಾಗಿವೆ.
06:52 ನಿಮ್ಮ ಡಾಟಾಬೇಸ್ ಅನ್ನು ಯಾರಾದರೂ ಹ್ಯಾಕ್ ಮಾಡಿ, "abc" ಎಂದು ಟೈಪ್ ಮಾಡಿದ ಪಾಸ್ವರ್ಡ್ ಗಳನ್ನು ನೋಡಿದರೆ, ಅವರು ಅದನ್ನು ಪಡೆಯುವುದು ಸುಲಭವಾಗಿದೆ.
07:01 ಅದನ್ನು ಇಲ್ಲಿ ಟೈಪ್ ಮಾಡೋಣ. ಆದರೆ ಈಗ ಅವರಿಗೆ ಅದು ಏನು ಎಂದು ಕಂಡುಹಿಡಿಯಲು ಸಾಧ್ಯವಿಲ್ಲ ಏಕೆಂದರೆ ಅವು ಎನ್ಕ್ರಿಪ್ಟ್ ಆಗಿವೆ.
07:06 ಸರಿ ಈಗ ನಮ್ಮ ಪಾಸ್ವರ್ಡ್ ಗಳು ಎನ್ಕ್ರಿಪ್ಟ್ ಆಗಿವೆ. ಈಗ ನಮ್ಮ ಡಾಟಾದ ಟ್ಯಾಗ್ ಗಳನ್ನು ಸ್ಟ್ರಿಪ್ ಮಾಡಬೇಕು. ಅದನ್ನು ಮಾಡಲು ನಾವು 'strip_tags' ಅನ್ನು ಹೊಂದಿದ್ದೇವೆ.
07:21 "strip_tags" ಇವು HTML tag ಗಳನ್ನು ಸ್ಟ್ರಿಪ್ ಮಾಡುತ್ತವೆ.
07:25 ನನ್ನ ಪಾಸ್ವರ್ಡ್ ಗೆ ಇದನ್ನು ಬಳಸುವಾಗ "md5" ಫಂಕ್ಷನ್ ಗೂ ಮೊದಲು ಈ "strip tag" ಅನ್ನು ಬರೆಯುವುದಿಲ್ಲ.
07:36 ಈಗಾಗಲೆ ಸ್ಟ್ರಿಪ್ ಆಗಿರುವ ಪಾಸ್ವರ್ಡ್ ಅನ್ನು ಎನ್ಕ್ರಿಪ್ಟ್ ಮಾಡಲು "md5" ಫಂಕ್ಷನ್ ಅನ್ನು ಬಳಸುವೆನು.
07:41 ಈಗ ಇದು ಸರಿಯಾಗಿದೆ.
07:43 ಇದನ್ನು ಕಾಪಿ ಮಾಡಿ, ಕೆಳಗೆ ಪೇಸ್ಟ್ ಮಾಡಬಹುದು.
07:46 ಸರಿ ಇದನ್ನು ಮಾಡಿಯಾಗಿದೆ. ಈಗ ಹಿಂದಿರುಗಿ ಅದನ್ನು ನೋಡೋಣ.
07:54 ಇಲ್ಲಿ "html" ಎಂದು ಟೈಪ್ ಮಾಡುವೆನು. ನನ್ನ username ಅನ್ನು "body" ಎಂದು ಟೈಪ್ ಮಾಡಿ, password ಅನ್ನು "abc" ಎಂದು ಇಡುವೆನು.
08:02 ಈಗ ಇಲ್ಲಿ "username" ಎಂದು ಟೈಪ್ ಮಾಡಿ, ಒಂದು break..
08:12 '$fullname' ಎಂದು ಎಕೋ ಮಾಡೋಣ. ಇಲ್ಲಿ ಟೈಪ್ ಮಾಡಿರುವುದನ್ನು ಎಕೋ ಮಾಡುತ್ತಿದ್ದೇವೆ.
08:19 ಇದರ ಮುಂದೆ "test" ಎಂದೂ, ಇದರ ಮುಂದೆ ಕೂಡ "test" ಎಂದು ಟೈಪ್ ಮಾಡುವೆನು.
08:23 ಈಗ ಈ "strip tag" ಫಂಕ್ಷನ್, ಈ "html" ಮತ್ತು ಈ "body" ಇವುಗಳನ್ನು ತೆಗೆದು ಹಾಕಬೇಕು.
08:27 ನಾವು ಇಲ್ಲಿ ಕೇವಲ "test" ಮತ್ತು "test" ಎಂದು ಪಡೆಯಬೇಕು.
08:31 ಓಹ್! ನಾವು ಒಂದು ಎರರ್ ಅನ್ನು ಪಡೆದಿದ್ದೇವೆ.
08:34 ಹಿಂದಿರುಗಿ ಪರೀಕ್ಷಿಸೋಣ. ನಾನು ಇಲ್ಲಿ ಲೈನ್ ಟರ್ಮಿನೇಟರ್ ಅನ್ನು ಬಳಸಿಲ್ಲ. Refresh ಮಾಡಿ, ಡಾಟಾವನ್ನು Resend ಮಾಡೋಣ.
08:38 ಇಲ್ಲಿ "test" ಮತ್ತು "test" ಎಂದು ಪಡೆದಿರುವುದನ್ನು ನೋಡಬಹುದು. ನೀವು ಇಲ್ಲಿ ಟ್ಯಾಗ್ ಅಥವಾ ಎಚ್.ಟಿ.ಎಮ್.ಎಲ್ ಟ್ಯಾಗ್ ಅನ್ನು ಟೈಪ್ ಮಾಡಿದರೆ, ಅದು ಖಾಲಿಯಾಗಿರುತ್ತದೆ.
08:49 ಕೆಲವರು ತಮಾಷೆಗೆ, "image" ಅನ್ನು ಯೂಸರ್ ನೇಮ್ ಆಗಿ ಬಳಸಲು ಪ್ರಯತ್ನಿಸಬಹುದು. Register ಮಾಡಿದರೆ, ಅದು ಕಾರ್ಯನಿರ್ವಹಿಸುವುದಿಲ್ಲ.
08:59 ಇದು ಇಲ್ಲಿ ಎಕೋ ಆಗಿಲ್ಲ.
09:01 ಆದರೆ ನಾವು "alex"ಎಂದು ತೆಗೆದುಕೊಂಡು Register ಅನ್ನು ಕ್ಲಿಕ್ ಮಾಡಿದರೆ, ಇದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
09:05 ಈಗ ಇವಿಷ್ಟು ಸಾಕು. ಮುಂದಿನ ಟ್ಯುಟೋರಿಯಲ್ ನಲ್ಲಿ ಪ್ರತಿ ಫೀಲ್ಡ್ ದಾಖಲಾತಿಗೆ ಅವಶ್ಯವಿರುವಂತೆ ಟೈಪ್ ಆಗಿದೆಯೇ ಎಂದು ಪರೀಕ್ಷಿಸೋಣ.
09:15 ಮುಂದಿನ ಭಾಗದಲ್ಲಿ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14