PHP-and-MySQL/C4/User-Registration-Part-1/Kannada

From Script | Spoken-Tutorial
Jump to: navigation, search
Time Narration
00:00 User registration form ಅನ್ನು ರಚಿಸುವುದು ಮತ್ತು ಬಳಕೆದಾರರನ್ನು "MySQL" ಡಾಟಾಬೇಸ್ ನಲ್ಲಿ ದಾಖಲು ಮಾಡುವುದರ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:09 ಈ ಟ್ಯುಟೋರಿಯಲ್ ಅನ್ನು ಆರಂಭಿಸುವ ಮೊದಲು , User login ಟ್ಯುಟೋರಿಯಲ್ ಅನ್ನು ನೋಡಲು ಸಲಹೆ ಕೊಡುತ್ತೇನೆ. ನಾನು ಅದರ ಲಿಂಕ್ ಅನ್ನು ಪೋಸ್ಟ್ ಮಾಡಿದ್ದೇನೆ.
00:19 ನಾನು User login ಅನ್ನು User registration ಗೂ ಮೊದಲು ರಚಿಸಿರುವ ಮುಖ್ಯ ಕಾರಣವೆಂದರೆ, ಯೂಸರ್ ಲಾಗಿನ್ ಕ್ರಿಯೆಯನ್ನು ರೆಜಿಸ್ಟ್ರೇಷನ್ ಗೂ ಮೊದಲು ಮಾಡುವುದು ಸುಲಭವಾಗಿದೆ.
00:34 ಒಮ್ಮೆ ನೀವು ಲಾಗಿನ್ ಕ್ರಿಯೆಯನ್ನು ಸರಿಯಾಗಿ ಮುಗಿಸಿ ಡಾಟಾಬೇಸ್ ನಲ್ಲಿ ಫೀಲ್ಡ್ ಗಳನ್ನು ಪಡೆದುಕೊಂಡರೆ, ನೀವು ರೆಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಆರಂಭಿಸಬಹುದು.
00:43 ನೀವು ಏನನ್ನು ಡಾಟಾಬೇಸ್ ನಲ್ಲಿ ದಾಖಲು ಮಾಡಬೇಕು ಎಂದು ತಿಳಿದಿರುವದರಿಂದ, ನಾನು ತುಂಬ ಸುಲಭವಾದ ವಿಧಾನವನ್ನು ಕಂಡುಹಿಡಿದಿದ್ದೇನೆ.
00:49 ಆರಂಭದಲ್ಲಿ, ಮೊದಲ ಭಾಗದಲ್ಲಿ ನಾನು ಒಂದು ಫಾರ್ಮ್ ಅನ್ನು ರಚಿಸಿ, ಲಾಗಿನ್ ಮಾಹಿತಿಯ ಇರುವಿಕೆಯನ್ನು ಪರೀಕ್ಷಿಸುವೆನು.
00:56 ಈಗಾಗಲೇ ಇರುವ ಟ್ಯುಟೋರಿಯಲ್ ನಿಂದ, ನಾನು ನನ್ನ "login session" ಫೋಲ್ಡರ್ ಅನ್ನು ಬಳಸುವೆನು.
01:03 ಇಲ್ಲಿ ನನ್ನ "login session" ಫೋಲ್ಡರ್ ಇದೆ ಮತ್ತು ನನ್ನ ಎಲ್ಲಾ ಫೀಲ್ಡ್ ಗಳೂ ಇವೆ. ಇಲ್ಲಿ ಒಂದು ಹೊಸ ಫೈಲ್ ಅನ್ನು ರಚಿಸುವೆನು.
01:12 ಮೊದಲಿಗೆ ಕೆಲವು ಟ್ಯಾಗ್ ಗಳನ್ನು ಸೇರಿಸೋಣ.
01:15 ನಾನು ಇದನ್ನು ನನ್ನ "login session" ಫೋಲ್ಡರ್ ನಲ್ಲಿ ರಚಿಸುವೆನು. ನೀವು ಈಗಾಗಲೇ ನೋಡಿದ "index dot php" ಯು ಮುಖ್ಯ ಪೇಜ್ ಆಗಿರುತ್ತದೆ.
01:22 "log in", "log out" ಮತ್ತು ಬಳಕೆದಾರ ಲಾಗಿನ್ ಆದರೆ "member" ಪೇಜ್ ಗಳಿವೆ. ನಾನು ಇದನ್ನು "register dot php" ಎಂದು ಸೇವ್ ಮಾಡುವೆನು.
01:32 ಇಲ್ಲಿ ಒಂದು user registration form ಅನ್ನು ರಚಿಸುವೆನು. ಅದರಿಂದ ಬಳಕೆದಾರ ಲಾಗಿನ್ ಆಗಲು ನಿರ್ಧರಿಸುವ ಮೊದಲು, ದಾಖಲು ಮಾಡಿಕೊಳ್ಳಬಹುದು.
01:40 ನಾನು ನನ್ನ "register dot php" ಯನ್ನು ರಚಿಸಿದ್ದೇನೆ. ನನ್ನ "index" ಫೈಲ್ ಅನ್ನು ತೆರೆಯುವೆನು. ಅದರಲ್ಲಿ ಫಾರ್ಮ್ ನ ಕೆಳಗೆ ಒಂದು ಲಿಂಕ್ ಅನ್ನು ರಚಿಸುವೆನು.
01:48 ಇದು ರೆಜಿಸ್ಟರ್ ಪೇಜ್ ಗೆ ಒಂದು ಲಿಂಕ್ ಆಗಿರುವುದು. ಇಲ್ಲಿ ನಾನು "Register" ಎಂದು ಟೈಪ್ ಮಾಡುವೆನು.
02:02 ನಾವು ಇಲ್ಲಿ "Register" ಎನ್ನುವ ಲಿಂಕ್ ಅನ್ನು ಪಡೆದಿದ್ದೇವೆ. ಇದು ನಮ್ಮ ಪೇಜ್ ಗೆ ಹೋಗುತ್ತದೆ. ಇದರಲ್ಲಿ ಈಗ ಸದ್ಯಕ್ಕೆ ಏನು ಇಲ್ಲ.
02:09 ಹಿಂದಿನ ಟ್ಯುಟೋರಿಯಲ್ ನಲ್ಲಿ ನಾನು ತೋರಿಸಿದಂತೆ, ಇಲ್ಲಿ ನಾವು ಲಾಗಿನ್ ಆಗಬಹುದು. ನಾನು ಇಲ್ಲಿ ಒಂದು ಪೇಜ್ ಗೆ ಲಿಂಕ್ ಅನ್ನು ಕೊಟ್ಟಿದ್ದೇನೆ ಮತ್ತು ನೀವು ಲಾಗಿನ್ ಆಗುವ ಮೊದಲು ಆ ಪೇಜ್ ನಲ್ಲಿ ರೆಜಿಸ್ಟರ್ ಆಗಬೇಕು.
02:20 ಡಾಟಾಬೇಸ್ ನಲ್ಲಿ ಡಾಟಾವನ್ನು ಟೈಪ್ ಮಾಡುವ ಮೊದಲು, ಒಂದು ಹೊಸ ವಿಂಡೋವನ್ನು ತೆರೆದು "php my admin" ಗೆ ಹೋಗುವೆನು.
02:29 ಇದು ನಾವು ಬಳಸುವ "php login" ಎಂಬ ಡಾಟಾಬೇಸ್ ಆಗಿದೆ. ಇದು "users" table ಆಗಿದೆ.
02:38 ನೀವು ಇಲ್ಲಿ ಹೆಚ್ಚಿನ "name" ಎಂಬ ಫೀಲ್ಡ್ ಅನ್ನು ಸೇರಿಸಿರುವದನ್ನು ನೋಡಿರಬಹುದು. ನಾನು ಈಗ "date" ಎಂಬ ಇನ್ನೊಂದು ಫೀಲ್ಡ್ ಅನ್ನು ರಚಿಸುವೆನು.
02:47 ಈಗ ಟೇಬಲ್ ನ ಕೊನೆಯಲ್ಲಿ ನಾನು ಇದನ್ನು "date" ಎಂದು ರಚಿಸುವೆನು. ಇದು DATE ಫಾರ್ಮ್ಯಾಟ್ ನಲ್ಲಿರಲಿ. ಅದು ಎಲ್ಲಿದೆ? ಸರಿ ಅದು ಇಲ್ಲಿದೆ.
03:04 ನಿಮಗೆ ಈ "date" ಎಂದರೇನು ಎಂದು ಗೊಂದಲವಾಗುವ ಮೊದಲು ನಾನು ವಿವರಿಸುವೆನು. ಇದು ಯೂಸರ್ ದಾಖಲಾದ ಸಮಯವಾಗಿರುತ್ತದೆ. ಈಗ ಅಲ್ಲಿ ಹೋಗಿ ಅದನ್ನು ಸೇವ್ ಮಾಡೋಣ.
03:15 ಹಿಂದಿನ ಟ್ಯುಟೋರಿಯಲ್ "User login" ನಲ್ಲಿ, ನಾವು "id", "username" ಮತ್ತು "password" ಗಳನ್ನು ಮಾತ್ರ ಹೊಂದಿದ್ದೇವೆ. ಈಗ ನಾನು "name" ಅನ್ನು ಸೇರಿಸಿದ್ದೇನೆ. ಇದು ಯೂಸರ್ ನೇಮ್ ಆಗಿದೆ. ನಂತರ "date" ಅನ್ನು ಸೇರಿಸಿದ್ದೇನೆ, ಇದು ಅವರು ದಾಖಲಾದ ದಿನಾಂಕವಾಗಿರುತ್ತದೆ.
03:29 ಈಗ ಇಲ್ಲಿBrowse ಮಾಡಿ. ನಾವು ಇಲ್ಲಿ ಎರಡು ವ್ಯಾಲ್ಯುಗಳನ್ನು ಹೊಂದಿದ್ದೇವೆ.
03:35 ಇವುಗಳನ್ನು ಡಿಲೀಟ್ ಮಾಡುವೆನು. ಏಕೆಂದರೆ, ಬಳಕೆದಾರರನ್ನು ನಾನು ಇಲ್ಲಿ ದಾಖಲು ಮಾಡುವೆನು. ಹಾಗಾಗಿ ನಾನು ಖಾಲಿ ಡಾಟಾಬೇಸ್ ನೊಂದಿಗೆ ಆರಂಭಿಸುವೆನು.
03:40 ಯಾವುದೇ ಬಳಕೆದಾರರನ್ನು ಹೊಂದಿಲ್ಲ ಎಂದು ಭಾವಿಸಿ, ನಾನು ಇಲ್ಲಿ ನನ್ನ ರೆಜಿಸ್ಟರ್ ಪೇಜ್ ಗೆ ಲಿಂಕ್ ಅನ್ನು ಹೊಂದಿರುವೆನು. ಇಲ್ಲಿ ನನ್ನ ರೆಜಿಸ್ಟರ್ ಪೇಜ್ ಇದೆ.
03:49 ಈಗ ನಾನು ಈ ಪೇಜ್ ಅನ್ನು ಹೇಗೆ ರಚಿಸುವುದು ಎಂದು ತೋರಿಸುವ html code ಅನ್ನು ಸಂಕ್ಷಿಪ್ತವಾಗಿ ವಿವರಿಸುವೆನು. ಮೊದಲಿಗೆ ಒಂದು ಫಾರ್ಮ್ ಅನ್ನು ರಚಿಸೋಣ.
03:59 ಇದು ತನಗೆ ತಾನೆ ಸಬ್ಮಿಟ್ ಆಗುವ ಫಾರ್ಮ್ ಆಗಿದೆ. ಇದು "register dot php" ಪೇಜ್ ಗೆ ಪುನಃ ಸಬ್ಮಿಟ್ ಆಗುವುದು.
04:07 ನಾವು ಒಂದು ಟೇಬಲ್ ಅನ್ನು ರಚಿಸುವೆವು. ಇದರ ಒಳಗೆ ಇಲ್ಲಿ ಒಂದು ರೋ ಇರುವುದು.
04:13 ನಂತರ ಎರಡು ಕಾಲಮ್ ಗಳು, ಅದಕ್ಕಾಗಿ ಎರಡು "td" ಬ್ಲಾಕ್ ಗಳನ್ನು ಸೇರಿಸುವೆನು. ಮೊದಲನೆಯದರಲ್ಲಿ "Your full name:" ಎಂದು ಟೈಪ್ ಮಾಡೋಣ.
04:21 ನೀವು ನಿಮಗೆ ಬೇಕಾದಂತೆ ಮಾಡಬಹುದು, ಬೇಗ ಮಾಡಲು ನಾನು ಈ ರೀತಿ ಮಾಡುವೆನು.
04:29 ಇಲ್ಲಿ, ನಮ್ಮ ಎರಡನೆಯ ಕಾಲಮ್ ನಲ್ಲಿ, ನಾನು input type ಅನ್ನು "text" ಎಂದು, name equals "fullname" ಎಂದೂ ಟೈಪ್ ಮಾಡುವೆನು.
04:38 ಈಗ ನನ್ನ ಮುಖ್ಯ ಪೇಜ್ ಗೆ ಹೋಗಿ ಇಲ್ಲಿ Register ಅನ್ನು ಕ್ಲಿಕ್ ಮಾಡುವೆನು.
04:47 ನೀವು ಒಂದು ಕಾಲಮ್ ಅನ್ನು ನೋಡಬಹುದು. ಅದು ವಿಭಜನೆಯಾಗಿದೆ. ಇದು ಇನ್ಪುಟ್-ಬಾಕ್ಸ್ ಅನ್ನು ಹೊಂದಿರುವ ಎರಡನೆಯ ಕಾಲಮ್ ಆಗಿದೆ.
04:56 ಇಲ್ಲಿ ಮೇಲೆ ಹೋಗಿ, ಪಿ.ಎಚ್.ಪಿ. ಕೋಡ್ ನ ಒಳಗೆ ಒಂದು ಹೆಡರ್ ಅನ್ನು ಎಕೋ ಮಾಡುವೆನು. ಇದನ್ನು ಯಾಕೆ ಮಾಡಿದೆನೆಂದು ನಂತರ ವಿವರಿಸುವೆನು.
05:07 ಈಗ ಸದ್ಯಕ್ಕೆ ನಾವು ಇಷ್ಟನ್ನು ಹೊಂದಿದ್ದೇವೆ. ಬೇಗ ಮಾಡಲು ನಾನು ಇದನ್ನು ಕಾಪಿ ಮಾಡಿ, ಕೆಳಕ್ಕೆ ಪೇಸ್ಟ್ ಮಾಡುವೆನು.
05:15 ನೀವು "t r" ನಿಂದ "end t r" ನ ವರೆಗೆ ಆಯ್ಕೆ ಮಾಡಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಿ.
05:22 ನಾನು ಅದನ್ನು ಇಲ್ಲಿ ಕೆಳಗೆ ಪೇಸ್ಟ್ ಮಾಡುವೆನು ಮತ್ತು ಇಲ್ಲಿ "Choose a username:" ಎಂದು ಟೈಪ್ ಮಾಡುವೆನು. ಇದನ್ನು "username" ಎಂದು ಬದಲಿಸುವೆನು.
05:32 ಮತ್ತೊಮ್ಮೆ ಅದನ್ನು ಪೇಸ್ಟ್ ಮಾಡಿ, ಇಲ್ಲಿ "Choose a password:" ಎಂದು ಟೈಪ್ ಮಾಡುವೆನು. ಒಂದುವೇಳೆ ನಮ್ಮ ಬಳಕೆದಾರರ ಹಿಂದಿನಿಂದ ಯಾರಾದರೂ ನೋಡುತ್ತಿದ್ದರೆ ಅಥವಾ ಈ ಕಂಪ್ಯೂಟರ್‌ಗೆ ನುಸುಳಲು ಯಾವುದೇ ಸ್ಕ್ರೀನ್ ಕ್ಯಾಪ್ಚರ್ ಸಾಫ್ಟ್ವೇರ್ ಅನ್ನು ಬಳಸಲಾಗಿದ್ದರೆ ಅದರಿಂದ ರಕ್ಷಿಸಲು ಮಾತ್ರ ಈ ಟೆಕ್ಸ್ಟ್ ಇದೆ.
05:47 ನಂತರ ಇದರ ಕೆಳಗೆ ಮತ್ತೆ ನಾನು ಪೇಸ್ಟ್ ಮಾಡಿ, ಇಲ್ಲಿ "Repeat your password:" ಎಂದು ಟೈಪ್ ಮಾಡುವೆನು.
05:58 ಇಲ್ಲಿ ಮತ್ತೆ "password" ಎಂದಿರಲಿ.
06:07 ಇಲ್ಲಿ ನಾವು ಮತ್ತೆ "password" ಎಂದು ಹೇಳಲು ಸಾಧ್ಯವಿಲ್ಲವಾದ್ದರಿಂದ, "repeat password" ಎಂದು ಟೈಪ್ ಮಾಡುವೆನು.
06:10 ಒಮ್ಮೆ ಅವರು ಸಬ್ಮಿಟ್ ಮಾಡಿದ ನಂತರ, ಸುರಕ್ಷತಾ ಕ್ರಮವಾಗಿ, ಬಳಕೆದಾರ ತಪ್ಪು ಮಾಡಿದರೆ ಎಂಬ ಉದ್ದೇಶದಿಂದ ಪಾಸ್ವರ್ಡ್ ಗಳನ್ನು ಹೋಲಿಕೆ ಮಾಡಲು ಇದನ್ನು ಬಳಸಲಾಗುತ್ತದೆ.
06:20 ನಮಗೆ ಇನ್ಯಾವುದೇ ಫೀಲ್ಡ್ ಬೇಕಾಗಿಲ್ಲ. ಇದೇ ಕೊನೆಯದು.
06:24 ನಮಗೆ "date" ಬೇಕು. ಆದರೆ ಅದನ್ನು ಫಾರ್ಮ್ ಸಬ್ಮಿಟ್ ಮಾಡುವಾಗ ಮಾಡೋಣ.
06:31 ಸರಿ.. ಇದು ನಾವು ರಚಿಸಿದ form ಆಗಿದೆ. ಈಗ ಹಿಂದಿರುಗಿ ರಿಫ್ರೆಶ್ ಮಾಡೋಣ.
06:37 ಇವು ಚೆನ್ನಾಗಿ ಜೋಡಣೆ ಆಗಿರುವುದನ್ನು ನೀವು ನೋಡಬಹುದು. ಅದಕ್ಕಾಗಿಯೇ ನಾವು ಟೇಬಲ್ ಅನ್ನು ಬಳಸಿದ್ದೇವೆ.
06:42 ನಮಗೆ "submit" ಬಟನ್ ಕೂಡ ಬೇಕು.
06:45 ಟೇಬಲ್ ನ ಕೆಳಗೆ ಒಂದು 'paragraph break' ಅನ್ನು ಸೇರಿಸುವೆನು.
06:48 ನಂತರ input type, ಇದು ಇಲ್ಲಿ "submit" ಆಗಿರಲಿ; ಮತ್ತು name ಇದು "submit" ಆಗಿರಲಿ.
06:54 ನಾವು ಇವುಗಳ ಇರುವಿಕೆಯನ್ನು ಪರೀಕ್ಷಿಸಬೇಕು. ಹಾಗಾಗಿ value ವು "Register" ಆಗಿರಲಿ.
06:57 ರಿಫ್ರೆಶ್ ಮಾಡೋಣ. ನಾವು ಇದನ್ನು ಪಡೆದಿದ್ದೇವೆ. ನೀವು ಫಾಸ್ವರ್ಡ್ ಫೀಲ್ಡ್ ಎನ್ಕ್ರಿಪ್ಟ್ ಆಗಿರುವುದನ್ನು ನೋಡಬಹುದು.
07:05 ಇಲ್ಲಿ "full name" ಮತ್ತು "username' ಗಳು ಇವೆ. ಇಲ್ಲಿ ಬಳಕೆದಾರ ವ್ಯಾಲ್ಯುಗಳನ್ನು ಟೈಪ್ ಮಾಡಬಹುದು.
07:12 ಸರಿ, ನಾನು ಈಗ ಈ ಟ್ಯುಟೋರಿಯಲ್ ಅನ್ನು ನಿಲ್ಲಿಸುವೆನು.
07:16 ನೀವು ಈ ಹಂತಗಳನ್ನು ಅನುಸರಿಸುತ್ತಿದ್ದರೆ, ನೀವು ಫಾರ್ಮ್ ಅನ್ನು ಬರೆದಿರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಬೇರೆ ರೀತಿಯ ವಿನ್ಯಾಸಗಳನ್ನು ಪ್ರಯತ್ನಿಸಿ.
07:25 ನನಗೆ ಇದನ್ನು ಮಾಡಲು ಇನ್ನೂ ಹೆಚ್ಚಿನ ಸಮಯ ಬೇಕಾಗಿತ್ತು. ಹಾಗಾಗಿ ನೀವು ನಿಮಗೆ ಬೇಕಾದಂತೆ ಫಾರ್ಮ್ ಅನ್ನು ರಚಿಸಿ.
07:30 ನಿಮಗೆ ಏನು ಬೇಕೊ ಅದನ್ನು ಮಾಡಿ. ಈ ಲೇಬಲ್ ಗಳನ್ನು ಬದಲಿಸಿ.
07:33 ನೀವು ಇವಿಷ್ಟೂ ಬಾಕ್ಸ್ ಗಳು ಮತ್ತು register ಅನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ.
07:35 ಮುಂದಿನ ಭಾಗದಲ್ಲಿ, ಬಳಕೆದಾರನು ಈ ಫೀಲ್ಡ್ ಗಳಲ್ಲಿ ಪ್ರತಿಯೊಂದನ್ನೂ ತುಂಬಿರುವುದನ್ನು ಪರೀಕ್ಷಿಸುವುದರ ಬಗ್ಗೆ ನಾವು ನೋಡೋಣ.
07:44 ನಾವು ಪಾಸ್ವರ್ಡ್ ಗಳು ಹೊಂದಿಕೆಯಾಗುವುದೇ ಎಂದು ನೋಡುವೆವು. ಅಂದರೆ ಇಲ್ಲಿ ಎರಡು ಪಾಸ್ವರ್ಡ್ ಗಳಿದ್ದು, ಅವುಗಳಲ್ಲಿ ಅಕ್ಷರಗಳ ಒಟ್ಟುಸಂಖ್ಯೆ ಬೇರೆಯಾಗಿದ್ದರೆ, ಅವು ಹೊಂದಿಕೆಯಾಗುವುದಿಲ್ಲ. ಇಲ್ಲಿ ತಪ್ಪು ಮಾಡಿರುವುದರಿಂದ, ಬಳಕೆದಾರನು ರೆಜಿಸ್ಟರ್ ಆಗಲು ಸಾಧ್ಯವಾಗುವುದಿಲ್ಲ.
07:59 ನೀವೆಲ್ಲ ಯಾವಾಗಲೋ ರೆಜಿಸ್ಟರ್ ಮಾಡಿರುತ್ತೀರಿ. ಆಗ ಎರಡು ಬಾರಿ ಪಾಸ್ವರ್ಡ್ ಗಳನ್ನು ಟೈಪ್ ಮಾಡಿರುತ್ತೀರಿ ಎಂದುಕೊಳ್ಳುತ್ತೇನೆ.
08:07 ನಾವು ನಮ್ಮ ಪಾಸ್ವರ್ಡ್ ಗಳನ್ನು ಎನ್ಕ್ರಿಪ್ಟ್ ಮಾಡುವೆವು. ಈ ಫಾರ್ಮ್ ನಲ್ಲಿ ಅಪಾಯಕಾರಿ ಎಚ್.ಟಿ.ಎಮ್.ಎಲ್. ಟ್ಯಾಗ್ ಗಳಿದ್ದರೆ ಅವುಗಳನ್ನು ತೆಗೆದುಬಿಡುವೆವು. ಹಾಗಾಗಿ ನಮ್ಮ ರೆಜಿಸ್ಟ್ರೇಷನ್ ಫಾರ್ಮ್ ಸುರಕ್ಷತವಾಗಿರುತ್ತದೆ.
08:17 ಮುಂದಿನ ಭಾಗದಲ್ಲಿ ಭೇಟಿಯಾಗೋಣ. ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14