PHP-and-MySQL/C4/User-Login-Part-3/Kannada
From Script | Spoken-Tutorial
Time | Narration |
00:00 | User login ಟ್ಯುಟೋರಿಯಲ್ ನ ಮೂರನೇ ಭಾಗಕ್ಕೆ ಸ್ವಾಗತ. |
00:07 | ಇಲ್ಲಿ ನಾವು ಒಂದು ಸೆಷನ್ ಅನ್ನು ರಚಿಸುವೆವು. ಅದರಲ್ಲಿ ಯೂಸರ್ ಒಂದು ಪೇಜ್ ಗೆ ಪ್ರವೇಶ ಪಡೆದುಕೊಳ್ಳಬಹುದು ಮತ್ತು ಅವರು ಯಶಸ್ವಿಯಾಗಿ ಲಾಗಿನ್ ಆಗಿರುವವರೆಗೂ ಆ ಪೇಜ್ ನಲ್ಲಿ ಇರಲು ಅವಕಾಶವಿರುವುದು. |
00:16 | ಯಾವುದೇ session ಅನ್ನು ಆರಂಭಿಸಲು, ನಮಗೆ "start session()" ಫಂಕ್ಷನ್ ಬೇಕು. |
00:25 | ಇದು "start session" ಅಥವಾ "session start"? ಇದನ್ನು ಬೇಗ ಪರೀಕ್ಷಿಸೋಣ. |
00:34 | ಸರಿ ಎರರ್ ಬಂದಿದೆ! ಹಾಗಾದರೆ ಇದು session_start() ಆಗಿರಬೇಕು. ಕ್ಷಮಿಸಿ ನನಗೆ ಸ್ವಲ್ಪ ಗೊಂದಲವಾಯಿತು. |
00:40 | "Session start".. ಸರಿಯೇ? ರಿಫ್ರೆಶ್ ಮಾಡೋಣ. resend ಮಾಡಿ. "You're in!" ಎಂದು ಬಂದಿದೆ. |
00:42 | ನಾವು session ಅನ್ನು ಆರಂಭಿಸಿದ್ದೇವೆ. ಈಗ ಒಂದು ಸೆಷನ್ ವೇರಿಯೇಬಲ್ ಅನ್ನು ಸೇರಿಸೋಣ. |
00:51 | "You're in!" ಎಂದಿದೆ. ಇದಾದ ನಂತರ "Click here to enter the secret...ಬೇಡ, the member page" ಎಂದು ಟೈಪ್ ಮಾಡುವೆನು. |
01:12 | ಇದು "member dot php" ಎಂಬ ಪೇಜ್ ಗೆ ಲಿಂಕ್ ಆಗಿರುವುದು. |
01:19 | ಈಗ ಪುನರಾವರ್ತಿಸೋಣ. ನಾವು ಸರಿಯಾದ ಡಾಟಾವನ್ನು ಕಳುಹಿಸಿದಾಗ, "Click here to enter the member page" ಎಂದು ಹೇಳುವೆವು. ನಾವು ಇದನ್ನು ಇನ್ನೂ ರಚಿಸಿಲ್ಲ. |
01:30 | ಇನ್ನೊಮ್ಮೆ ನೆನಪಿಸುವೆನು. ಇಲ್ಲಿ ನಾನು ಈಗ ತಾನೆ ರಚಿಸಿದ "session_start()" ತುಂಬ ಮುಖ್ಯವಾಗಿದೆ. |
01:36 | ಈಗ ನಾವು ಸೆಷನ್ ಅನ್ನು ರಚಿಸಲು ಹೊರಟಿದ್ದೇವೆ. ಇದನ್ನು ಮಾಡಲು, ಇಲ್ಲಿ ಡಾಲರ್ ಚಿಹ್ನೆ, ಅಂಡರ್ಸ್ಕೋರ್ "SESSION" ಎಂದು ಟೈಪ್ ಮಾಡುವೆನು. ನಂತರ ಬ್ರ್ಯಾಕೆಟ್ ನಲ್ಲಿ, ಅಂದರೆ ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಸೆಷನ್ ನ ಹೆಸರನ್ನು ಟೈಪ್ ಮಾಡುವೆನು. |
01:53 | ಇದನ್ನು "username" ಎಂದು ಕರೆಯುವೆನು. ಇದು ನಮ್ಮ username ಅಂದರೆ '$dbusername' ಗೆ ಸಮವಾಗಿರಬೇಕು. ಏಕೆಂದರೆ ಇದು ಡಾಟಾಬೇಸ್ ನಿಂದ ಪಡೆದ ನೇರ ವ್ಯಾಲ್ಯು ಆಗಿದೆ. |
02:08 | ಈಗ ನಮ್ಮ ಸೆಷನ್ ಸೆಟ್ ಆಗಿದೆ. |
02:10 | ಬಳಕೆದಾರ ಬ್ರೌಸರ್ ನಲ್ಲಿರುವವರೆಗೆ, ನೀವು ಅವರನ್ನು ಎವೋಕ್ ಮಾಡಿದ ಬ್ರೌಸರ್ ಮಾತ್ರ ಅಲ್ಲ, ನಾವು ನಮ್ಮ ಸೆಷನ್ ಅನ್ನು ಯಾವುದೇ ಪೇಜ್ ನಲ್ಲು ಎಕೊ ಮಾಡಿದರೂ, ಅದು ಸೆಷನ್ ಆಗಿ ಸೆಟ್ ಆಗಿರುವುದು. |
02:20 | ಇದನ್ನು ತೋರಿಸಲು ನಾನು ಒಂದು ಹೊಸ ಪೇಜ್ ಅನ್ನು ರಚಿಸುವೆನು. |
02:25 | ಇದು "member dot php" ಪೇಜ್ ಆಗಿರಲಿ. |
02:28 | ನಾನು ಇದನ್ನು "member dot php" ಎಂದು ಸೇವ್ ಮಾಡುವೆನು. |
02:30 | ಇಲ್ಲಿ ನಾನು echo ಎಂದು ಟೈಪ್ ಮಾಡಿ ಇದರಲ್ಲಿ "username" ಸೆಷನ್ ಅನ್ನು ಎಕೋ ಮಾಡಲು ಬಯಸುವೆನು. |
02:42 | ಇದಕ್ಕೂ ಮೊದಲು ಇಲ್ಲಿ "Welcome"ಎಂದು ಸೇರಿಸುವೆನು ಮತ್ತು ಕೊನೆಯಲ್ಲಿ ಒಂದು ಉದ್ಧರಣ ಚಿಹ್ನೆಯನ್ನು ಸೇರಿಸುವೆನು. |
02:55 | ನಾವು ಲಾಗಿನ್ ಆಗಿರುವವರೆಗೂ ಇದು ಈ ಕಮಾಂಡ್ ಅನ್ನು ಇಲ್ಲಿ ರನ್ ಮಾಡಬೇಕು. ನಾವು ರಚಿಸಿದ ಯಾವುದೇ ಪೇಜ್ ಗೆ ನಮ್ಮ ಬ್ರೌಸರ್ ನಲ್ಲಿ ಸೆಷನ್ ಅನ್ನು "username" ಎಂದು ಸೆಟ್ ಮಾಡಲಾಗುವುದು. |
03:06 | ಇದು ಇಲ್ಲಿ ಬೇರೆ ಪೇಜ್ ಆಗಿದ್ದರೂ, ನೀವು ಈ ಕೋಡ್ ಅನ್ನು ಸೆಟ್ ಮಾಡಲು ಬಳಸಿದ್ದರೆ, ಅದು ಕಾರ್ಯ ನಿರ್ವಹಿಸುತ್ತದೆ. |
03:11 | ನೀವು ಈ ಫಂಕ್ಷನ್ ಅನ್ನು ಕೂಡ ಇದರೊಳಗೆ ಹೊಂದಿರಲೇಬೇಕು. |
03:18 | ನೀವು ಸೆಷನ್ ಅನ್ನು ಕಾಲ್ ಮಾಡುವ ಅಥವಾ ಡಿಕ್ಲೇರ್ ಮಾಡುವ ಪ್ರತಿ ಪೇಜ್ ನಲ್ಲೂ ಈ "session start()" ಅನ್ನು ಹೊಂದಿರಲೇಬೇಕು. |
03:29 | ರಿಸ್ಟಾರ್ಟ್ ಮಾಡೋಣ. ನಮ್ಮ ಮುಖ್ಯ ಪೇಜ್ ಗೆ ಹಿಂದಿರುಗೋಣ. |
03:35 | ನಾನು "Alex" ಮತ್ತು "abc" ಎಂಬ ವಿವರದೊಂದಿಗೆ ಲಾಗಿನ್ ಆಗುವೆನು. Login ಅನ್ನು ಕ್ಲಿಕ್ ಮಾಡಿ. |
03:41 | "You're in! Click here to enter the member page" ಎಂದು ಬಂದಿದೆ. ಇಲ್ಲಿ ಯಾವುದೇ ಎರರ್ ಇಲ್ಲದಿರುವುದನ್ನು ನೀವು ನೋಡಬಹುದು. ನಾನು ಯಶಸ್ವಿಯಾಗಿ ನನ್ನ ಸೆಷನ್ ಅನ್ನು ರಚಿಸಿದ್ದೇನೆ. |
03:49 | ನಾವು ಇಲ್ಲಿ ಕ್ಲಿಕ್ ಮಾಡಿದರೆ, "Welcome!" ಎಂದು ಮಾತ್ರ ಪಡೆದಿದ್ದೇವೆ. ಏನಾಗಿದೆ ಎಂದು ನೋಡೋಣ. |
03:52 | ಈಗ ಹಿಂದಿರುಗೋಣ ಮತ್ತು ನಾನು ಏನು ತಪ್ಪು ಮಾಡಿದ್ದೇನೆ ಎಂದು ನೋಡೋಣ. ಇದು "$username" ಆಗಬೇಕು. |
04:00 | ನಾನು ಇಲ್ಲಿ ಯಾವುದೇ ಹೋಲಿಕೆಯನ್ನು ಮಾಡುತ್ತಿಲ್ಲ, ಆದರೆ ಎರಡು ಸಮ ಚಿಹ್ನೆಗಳನ್ನು ಬಳಸಿದ್ದೇನೆ. ಅದು ತಪ್ಪಾಗಿದೆ. |
04:07 | ಈಗ ಇದು ಕಾರ್ಯನಿರ್ವಹಿಸಬೇಕು. ಈಗ ನಮ್ಮ "index" ಪೇಜ್ ಗೆ ಹಿಂದಿರುಗೋಣ. ನಾವು ಈಗಾಗಲೇ ಮಾಡಿದಂತೆ ಇನ್ನೊಮ್ಮೆ ಲಾಗಿನ್ ಆಗೋಣ. |
04:17 | Login ಅನ್ನು ಕ್ಲಿಕ್ ಮಾಡಿ. "You're in! Click here to enter the member page" ಎಂದು ಬಂದಿದೆ. ಇಲ್ಲಿ ಕ್ಲಿಕ್ ಮಾಡಿ ಮತ್ತು "Welcome, alex!" ಎಂದು ಬಂದಿದೆ. |
04:26 | ಈಗ ನಾನು ಲಾಗಿನ್ ಪೇಜ್ ಗೆ ಹಿಂದಿರುಗುವೆನು. |
04:28 | ಈಗ ಬಹಳಷ್ಟು ಜನ ಡಾಟಾವು ಅಳಿಸಿಹೋಗಿದೆ ಎಂದುಕೊಳ್ಳಬಹುದು. |
04:32 | ಆದರೆ ನಾನು member page ಅಂದರೆ ನಮ್ಮ "member dot php" ಗೆ ಹೋಗಿ Enter ಅನ್ನು ಒತ್ತಿದರೆ, ಇದು ಇನ್ನೂ "alex" ಎಂದು ತೋರಿಸುತ್ತಿದೆ. |
04:40 | ಎರಡನೆಯದಾಗಿ, ನಾನು ಬ್ರೌಸರ್ ಅನ್ನು ಮುಚ್ಚಿ ಮತ್ತೆ ಅದನ್ನು ತೆರೆದರೆ, ನಾನು "local host php academy" ಹೋಗಿ ಮತ್ತೆ ನನ್ನ ಪೇಜ್ ಅಂದರೆ "login session" ಗೆ ಹಿಂದಿರುಗಿ, ನನ್ನ member page ಗೆ ಹಿಂದಿರುಗಿದರೆ, ನಾನು ಇನ್ನೂ ಲಾಗಿನ್ ಆಗಿದ್ದೇನೆ. |
05:03 | ಹಾಗಾಗಿ ನನ್ನ ಬಳಕೆದಾರ ಲಾಗಿನ್ ಆಗಿಯೇ ಇದ್ದಾರೆ. ನಾನು ಬ್ರೌಸರ್ ಅನ್ನು ಮುಚ್ಚಿ, ಪುನಃ ಹಿಂದಿರುಗಿದರೂ ನಾನು ಲಾಗಿನ್ ಆಗಿಯೇ ಇದ್ದೇನೆ. |
05:12 | ನೀವು ಈ ರೀತಿಯಾಗಿ ಲಾಗಿನ್ ಆಗುವಾಗ, ಇದು ತುಂಬ ಉಪಯುಕ್ತವಾದ ಫಂಕ್ಷನ್ ಆಗಿದೆ. |
05:19 | ಹಲವಾರು ವೆಬ್ಸೈಟ್ ಗಳು ಲಾಗಿನ್ ಆಗಿಯೇ ಇಡಲು ಇದನ್ನು ಬಳಸುತ್ತದೆ. |
05:23 | ಆದರೆ ನಾನು ಈಗ ಲಾಗೌಟ್ ಪೇಜ್ ಅನ್ನು ರಚಿಸಲು ಬಯಸುವೆನು. |
05:26 | ಲಾಗೌಟ್ ಆಗಲು, ನಾವು ಒಂದು ಬೇರೆ ಪೇಜ್ ಅನ್ನು ರಚಿಸಬೇಕು. ಅದನ್ನು "logout dot php" ಎಂದು ಸೇವ್ ಮಾಡುವೆನು. |
05:33 | ನಾವು ಇಲ್ಲಿ session ಅನ್ನು ಮುಗಿಸಬೇಕು. |
05:39 | ಮೊದಲಿಗೆ, ಸೆಷನ್ ಅನ್ನು ಮುಗಿಸುವ ಮೊದಲು, ನಾವು ಅದನ್ನು ಆರಂಭಿಸಬೇಕು. |
05:46 | ನಾನು ಇಲ್ಲಿ "session_start()" ಎಂದು ಟೈಪ್ ಮಾಡುವೆನು. ಇನ್ನೊಮ್ಮೆ ಖಚಿತಪಡಿಸಿಕೊಳ್ಳುವೆನು. |
05:55 | ನಂತರ "session_ destroy()" ಎಂದು ಟೈಪ್ ಮಾಡಬೇಕು. ಕ್ಷಮಿಸಿ, ಇದು "sestroy" ಅಲ್ಲ, "destroy" ಎಂದಾಗಬೇಕು. |
06:04 | ನಾವು ಈ ಪೇಜ್ ಅನ್ನು ರನ್ ಮಾಡಿದರೆ, session ಅನ್ನು ನಾಶಮಾಡುತ್ತೇವೆ. |
06:08 | ಇಲ್ಲಿ ಒಂದು ಎರರ್ ಮೆಸೇಜ್ ಅನ್ನು "You've been logged out. Click here to return" ಎಂದು ಟೈಪ್ ಮಾಡುವೆನು. |
06:20 | ಇಲ್ಲಿ ನಮ್ಮ "index dot php" ಪೇಜ್ ಗೆ ಹಿಂದಿರುಗಲು ಒಂದು ಲಿಂಕ್ ಅನ್ನು ತಯಾರಿಸುವೆನು. |
06:32 | ಈಗ ಇದನ್ನು ಇನ್ನೊಮ್ಮೆ ಪರೀಕ್ಷಿಸುವೆನು. ಉದಾಹರಣೆಗೆ, |
06:35 | ಇಲ್ಲಿ ಒಂದು break ಅನ್ನು ಹಾಕೋಣ. ಇಲ್ಲಿ ನಾನು ಲಾಗೌಟ್ ಗೆ ಒಂದು ಲಿಂಕ್ ಅನ್ನು ರಚಿಸುವೆನು. |
06:41 | ಬಳಕೆದಾರರಿಗೆ "logout dot php" ಪೇಜ್ ಗೆ ಲಿಂಕ್ ಕೊಡುವುದು ತುಂಬ ಮುಖ್ಯವಾಗಿದೆ. ಇಲ್ಲವಾದಲ್ಲಿ ಅವರಿಗೆ ಲಾಗೌಟ್ ಆಗುವುದು ಹೇಗೆ ಎಂದು ತಿಳಿಯುವುದಿಲ್ಲ. |
06:50 | ನಾವು ಇದನ್ನು ರಿಫ್ರೆಶ್ ಮಾಡೋಣ. ಇದು ಪಿ.ಎಚ್.ಪಿ. ಪೇಜ್ ನಿಂದ ಲಾಗೌಟ್ ಆಗಲು Logout ಲಿಂಕ್ ಅನ್ನು ರಚಿಸುತ್ತದೆ. |
06:55 | ಇದರ ಮೇಲೆ ಕ್ಲಿಕ್ ಮಾಡಿ. ನೀವು "You've been logged out. Click here to return" ಎಂದು ಪಡೆಯುವಿರಿ. |
06:59 | ನಾವು ಲಾಗೌಟ್ ಆಗಿದ್ದೇವೆ ಎಂದು ಭಾವಿಸುವೆನು. ನಮ್ಮ member page dot php ಪೇಜ್ ಗೆ ಹಿಂದಿರುಗಲು ಪ್ರಯತ್ನಿಸುತ್ತಿದ್ದೇವೆ. |
07:04 | ಇಲ್ಲಿ ನಾವು ಯಾವುದೇ ವೇರಿಯೇಬಲ್ ಅನ್ನು ಹೊಂದಿಲ್ಲ. |
07:06 | ಈಗ ಬಳಕೆದಾರನಿಗೆ ಈ ಪೇಜ್ ಗೆ ಅಕ್ಸೆಸ್ ಅನ್ನು ಕೊಡುವುದು ಬೇಕಿಲ್ಲ, ಏಕೆಂದರೆ ಅವರು ಈಗ ಲಾಗಿನ್ ಆಗಿಲ್ಲ. |
07:13 | ಹಾಗಾಗಿ ನಾನು ಇಲ್ಲಿ session_start() ಆದ ಮೇಲೆ, ಇಲ್ಲಿ if ಸೆಷನ್ ಮತ್ತು ನಂತರ ಸೆಷನ್ ನೇಮ್ -ಇಲ್ಲಿ ಅದು 'username' ಎಂದಾಗಿದೆ –ಎಂದು ಈ ರೀತಿಯಾಗಿ ಟೈಪ್ ಮಾಡುವೆನು. |
07:19 | ನಂತರ ನನ್ನ ಡಾಟಾ ಮತ್ತು "Welcome" ಎಂದು ಹೇಳಲು ಎಕೋ ಮಾಡುವೆನು "else" die() ಎಂದು ಟೈಪ್ ಮಾಡುವೆನು. |
07:25 | ನನ್ನ ಪೇಜ್ ಇಲ್ಲಿಗೆ ಕೊನೆಗೊಳ್ಳಲು ಬಯಸುವೆನು. ಅದಕ್ಕಾಗಿ ಇಲ್ಲಿ "You must be logged in" ಎಂದು ಟೈಪ್ ಮಾಡುವೆನು. |
07:45 | ಅಂದರೆ ನಾವು ಇಲ್ಲಿ ಸೆಷನ್ ಅಸ್ತಿತ್ವದಲ್ಲಿದ್ದರೆ ಅಥವಾ ಇದು ಸರಿಯಾದ ಯೂಸರ್ನೇಮ್ ಮತ್ತು ಪಾಸ್ವರ್ಡ್ ಅನ್ನು ಬಳಸಿ ರಚನೆಯಾಗಿದ್ದರೆ, ನಾವು "Welcome" ಮೆಸೇಜ್ ಅನ್ನು ಎಕೋ ಮಾಡಬಹುದು; ಇಲ್ಲವಾದರೆ, "You must be logged in!" ಎಂದು ಹೇಳಿ, ಪೇಜ್ ಅನ್ನು ಕೊನೆಗೊಳಿಸಬಹುದು. |
07:55 | ಈ ಟ್ಯುಟೋರಿಯಲ್ ನ ಈ ಭಾಗದಲ್ಲಿ ಇವಿಷ್ಟನ್ನು ನೀವು ತಿಳಿದುಕೊಳ್ಳಬೇಕು. ಸಂಕ್ಷಿಪ್ತವಾಗಿ ವಿವರಿಸುವೆನು. |
08:04 | ನೆನಪಿಡಿ, ನಾನು ಲಾಗಿನ್ ಆಗಿಲ್ಲ, ಈಗ ಲಾಗಿನ್ ಆಗುವೆನು. |
08:06 | ಈಗ ಒಳಗಿದ್ದೇನೆ. ಇದು ನನ್ನ ಮೆಂಬರ್ ಪೇಜ್ ಆಗಿದೆ. ನಾನು ಲಾಗೌಟ್ ಕೂಡ ಆಗಬಹುದು. ಇಲ್ಲಿಗೆ ಹಿಂದಿರುಗುವೆನು. |
08:10 | ನಾವು "member dot php" ರಚಿಸಿದ್ದರೂ, ಇಲ್ಲಿ Enter ಅನ್ನು ಒತ್ತಿ. |
08:14 | ಇದು "You must be logged in!" ಎಂದು ತೋರಿಸುತ್ತದೆ. |
08:16 | ಹಾಗಾಗಿ, ನಾನು ಲಾಗಿನ್ ಆಗಿದ್ದೇನೆ. ಆದರೆ ಮುಂದೆ ಹೋಗಲು ಇಲ್ಲಿ ಕ್ಲಿಕ್ ಮಾಡಿಲ್ಲ. |
08:22 | ನಾನು "member dot php" ಗೆ ಹೋಗುತ್ತೇನೆ. ಮೆಸೇಜ್ ರಚನೆಯಾಗಿದೆ ಮತ್ತು ನಾನು ಆಕ್ಸೆಸ್ ಮಾಡಲು ಬಿಡಲ್ಪಟ್ಟಿದ್ದೇನೆ. |
08:29 | ಸರಿ, ಇಲ್ಲಿಗೆ ಇಷ್ಟು ಸಾಕು. ಇದು ಈ ಟ್ಯುಟೋರಿಯಲ್ ನ ಕೊನೆಯ ಭಾಗವಾಗಿದೆ. ನಿಮಗೆ ಇದರ ಕುರಿತು ಪ್ರಶ್ನೆಗಳಿದ್ದರೆ, ನಾನು ಸಹಾಯ ಮಾಡಲು ಸಂತೋಷ ಪಡುತ್ತೇನೆ. |
08:37 | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ. |