PHP-and-MySQL/C4/Simple-Visitor-Counter/Kannada
From Script | Spoken-Tutorial
Time | Narration |
00:00 | page counter ನ ಕುರಿತಾದ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:02 | ಇದು ಪ್ರತಿ ರಿಫ್ರೆಶ್ ಗೆ ಎಷ್ಟು ಜನ ಪೇಜ್ ಅನ್ನು ಭೇಟಿಯಾಗಿದ್ದಾರೆ ಎಂದು ಎಣಿಸುತ್ತದೆ. |
00:07 | ಪ್ರತಿ ಬಾರಿ ಯಾರಾದರೂ ಪೇಜ್ ಅನ್ನು ಭೇಟಿಮಾಡಿದಾಗ, ಒಂದು ವ್ಯಾಲ್ಯು ಹೆಚ್ಚಾಗುತ್ತದೆ. ಅದನ್ನು ಟೆಕ್ಸ್ಟ್ ಫೈಲ್ ನಲ್ಲಿ ಸ್ಟೋರ್ ಮಾಡಲಾಗುತ್ತದೆ ಮತ್ತು ಇದನ್ನು ಬಳಕೆದಾರರಿಗೆ ತೋರಿಸಲಾಗುತ್ತದೆ. |
00:15 | ಅಥವಾ ಅದನ್ನು ನಿಮ್ಮೊಡನೆ ಇಟ್ಟುಕೊಳ್ಳಬಹುದು. ನೀವು ಇದನ್ನು ತೋರಿಸುತ್ತೀರೊ ಇಲ್ಲವೋ ಅದು ನಿಮ್ಮ ಆಯ್ಕೆಯಾಗಿದೆ. |
00:19 | ದಯವಿಟ್ಟು ಗಮನಿಸಿ, ಇದು ಇದನ್ನು ಮಾಡಲು ಇರುವ ತುಂಬ ಸರಳ ವಿಧಾನವಾಗಿದೆ. |
00:21 | ಇದು ಅನನ್ಯ ಸಂದರ್ಶಕರನ್ನು (ಯುನಿಕ್ ವಿಸಿಟರ್ಸ್) ಎಣಿಸುವುದಿಲ್ಲ. |
00:23 | ಅನನ್ಯ ಸಂದರ್ಶಕರ (ಯುನಿಕ್ ವಿಸಿಟರ್ಸ್) ಕುರಿತು ಟ್ಯುಟೋರಿಯಲ್ ಅನ್ನು ಆದಷ್ಟು ಬೇಗ ಮಾಡುವೆನು. |
00:27 | ನೀವು ಇದನ್ನು ನೋಡುವ ವೇಳೆಗೆ ಬಹುಶಃ ಅದು ಸಿದ್ಧವಾಗಬಹುದು. |
00:30 | ಹಾಗಾಗಿ ನೀವು ನೋಡಬಹುದು. ಇದು ತುಂಬ ನಿರ್ದಿಷ್ಟವಾಗಿರುವುದು. |
00:33 | ಅದು IP address ಗಳ ಮೂಲಕ ಕಾರ್ಯನಿರ್ವಹಿಸುತ್ತದೆ. |
00:35 | ಈಗ ಸದ್ಯಕ್ಕೆ ಇದು ಪ್ರಾಥಮಿಕ ಕೌಂಟರ್ ನ ಟ್ಯುಟೋರಿಯಲ್ ಆಗಿದೆ. ಇದು ಡಾಟಾಬೇಸ್ ಸ್ಟೋರೇಜ್ ಆಗಿರದೆ, ಫೈಲ್ ಸ್ಟೋರೇಜ್ ಅನ್ನು ಬಳಸುತ್ತದೆ. |
00:42 | ನಾವು ಮಾಡಬೇಕಾದ ಮೊದಲ ಕೆಲಸ, ವ್ಯಾಲ್ಯುವನ್ನು ಅದರೊಳಗೆ ಸ್ಟೋರ್ ಮಾಡಿಕೊಳ್ಳುವಂತಹ ಒಂದು ಫೈಲ್ ಅನ್ನು ರಚಿಸಬೇಕು. |
00:48 | ಇದನ್ನು ಮಾಡಲು ಎರಡು ವಿಧಾನಗಳಿವೆ. |
00:50 | ರೈಟ್ ಕ್ಲಿಕ್ ಮಾಡಿ, ಒಂದು ಹೊಸ ಡಾಕ್ಯುಮೆಂಟ್ ಅನ್ನು ರಚಿಸುವೆನು. |
00:53 | ಅಥವಾ ನಾನು fopen() ಫಂಕ್ಷನ್ ಅನ್ನು ಬಳಸಿ, ಒಂದು ಫೈಲ್ ಅನ್ನು ರಚಿಸಿ, ಅದು ತೆರೆಯುವುದನ್ನು ತೋರಿಸುವೆನು. |
00:59 | ಅದನ್ನು $file ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುವೆನು. ಆದರೆ ಇದು ಕಡ್ಡಾಯವಲ್ಲ. |
01:05 | ಈಗ ನಾನು "count.php" ಯಲ್ಲಿ, ಇದಕ್ಕೆ ಇನ್ನೊಂದು ಪ್ಯಾರಾಮೀಟರ್ ಆಯ್ಕೆಮಾಡುತ್ತೇನೆ. ಈ ಪ್ಯಾರಾಮೀಟರ್, ಇದನ್ನು ಬರೆಯಲು ( ರೈಟಿಂಗ್) ಅಥವಾ ಓದಲು (ರೀಡಿಂಗ್) ಅಥವಾ ಅಪೆಂಡ್ ಮಾಡಲು ಆಗಿದೆ. |
01:22 | ಉದಾಹರಣೆಗೆ, ನಾನು writing ಅನ್ನು ಆಯ್ಕೆಮಾಡುತ್ತೇನೆ. |
01:26 | ಈಗ fwrite() ಎಂದು ಟೈಪ್ ಮಾಡಿ ನಂತರ $file ಎಂದು ಬರೆದು, ನಾನು zero ವ್ಯಾಲ್ಯುವನ್ನು ರಚಿಸುವೆನು. |
01:36 | ಈಗ ನಾವು ಪೇಜ್ ಅನ್ನು ತೆರೆದು, refresh ಮಾಡೋಣ. |
01:41 | ನಾವು "counter.php" ಅನ್ನು ಹೊಂದಿದ್ದೇವೆ. ಅದರ ಮೇಲೆ ಕ್ಲಿಕ್ ಮಾಡಿ, ನೀವು ಹಿಂದಿರುಗಿದಾಗ, count.php ಇದೆಯೇ ಎಂದು ನೋಡಿ. |
01:49 | ".txt" ಎಂದಿರಬೇಕು. |
01:51 | ಇದನ್ನು ರಿಫ್ರೆಶ್ ಮಾಡೋಣ. |
01:54 | ಈಗ ನಾವು ".txt" ಫೈಲ್ ಅನ್ನು ಹೊಂದಿರಬೇಕು. |
02:00 | ಈ "count.php" ಅನ್ನು ತೆಗೆದುಹಾಕುವೆನು. |
02:05 | ನಾವು ಈಗ ಇದನ್ನು ಮಾಡಿದ್ದೇವೆ ಮತ್ತು ನಮಗೆ ಈ ಕೋಡ್ ಬೇಡ. |
02:08 | ನಾನು ಈ ಭಾಗವನ್ನು ಡಿಲೀಟ್ ಮಾಡುವೆನು. ಆದರೆ ನಾನು ಇದನ್ನು ಹಾಗೇ ಇಟ್ಟುಕೊಳ್ಳುವೆನು ಮತ್ತು ನಾನು ಈ ಫೈಲ್ ನಿಂದ ರೀಡ್ ಮಾಡಲು ಬಯಸುವೆನು. |
02:14 | ನೀವು ಇದನ್ನು ಟೈಪ್ ಮಾಡಬಹುದು. ಆದರೆ ನೀವು ರೀಡಿಂಗ್ ನ ಬದಲು ರೈಟಿಂಗ್ ಗಾಗಿ ಒಂದು ಫೈಲ್ ಅನ್ನು ರಚಿಸಬೇಕು. |
02:22 | ಇಲ್ಲಿ ನಮ್ಮ ಫೈಲ್ ಇದೆ. ಇಲ್ಲಿ ಸೊನ್ನೆ ಇದೆ. |
02:26 | ಈಗ ಅದನ್ನು ತೆರೆದು ನೋಡೋಣ. |
02:28 | ಸರಿ.. ನಾವು ಸೊನ್ನೆಯೊಂದಿಗೆ "count.txt" ಅನ್ನು ಪಡೆದಿದ್ದೇವೆ. ಅದು ಇದನ್ನು ರೀಡ್ ಮಾಡಿ ಅದರೊಳಗೆ ಇಡುತ್ತದೆ. |
02:34 | ಹಾಗಾಗಿ ನಾನು ಆ ಫೈಲ್ ನ ಕಂಟೆಂಟ್ ಅನ್ನು ಪಡೆಯಬೇಕು. |
02:37 | ಹಾಗಾಗಿ fopen() ನ ಬದಲು ನನಗೆ 'file_get_contents()' ಬೇಕು. |
02:42 | ಹಾಗಾಗಿ 'file_get_contents' ಎಂದು ಟೈಪ್ ಮಾಡುವೆನು. |
02:44 | ಅದು 'count.txt' ನ ಕಂಟೆಂಟ್ ಅನ್ನು ಪಡೆಯುತ್ತದೆ. |
02:48 | ನಂತರ echo ಮಾಡುವೆವು. ವೇರಿಯೇಬಲ್ ಅನ್ನು ಬಳಸಿ, echo $file ಎಂದು ಟೈಪ್ ಮಾಡುವೆನು. |
02:52 | ಇದು file_get_contents ಎಂದು ಹೇಳುತ್ತದೆ ಮತ್ತು ನಮ್ಮ count ವೇರಿಯೇಬಲ್ ಇರುವ ಟೆಕ್ಸ್ಟ್ ಫೈಲ್ ನ ಕಂಟೆಂಟ್ ಗಳನ್ನು ಪಡೆಯುತ್ತದೆ. |
03:02 | ಇದು $file ನ ಕಂಟೆಂಟ್ ಅನ್ನು echo ಮಾಡುತ್ತದೆ. |
03:05 | ಈಗ ನಮ್ಮ ಪೇಜ್ ಗೆ ಹಿಂದಿರುಗಿ ರಿಫ್ರೆಶ್ ಮಾಡೋಣ. |
03:07 | "counter" ಅನ್ನು ಕ್ಲಿಕ್ ಮಾಡಿ. ಈಗ ಇಲ್ಲಿ ಸೊನ್ನೆಯನ್ನು ಪಡೆಯುವೆವು. |
03:10 | ರಿಫ್ರೆಶ್ ಮಾಡಿದಾಗ ಇದು ಇಲ್ಲಿ ಸೊನ್ನೆಯನ್ನೇ ತೋರಿಸುತ್ತಿದೆ. |
03:14 | ನಾನು ಇದನ್ನು 'hello' ಎಂದು ಬದಲಿಸಿ, ನಮ್ಮ ಪೇಜ್ ಗೆ ಹಿಂದಿರುಗಿ, ರಿಫ್ರೆಶ್ ಮಾಡಿದರೆ, ಇದು 'hello' ಅನ್ನು ಹೊಂದಿರುತ್ತದೆ. |
03:20 | ಸಧ್ಯಕ್ಕೆ ಈ ಟೆಕ್ಸ್ಟ್ ಫೈಲ್ ನಲ್ಲಿ ಏನಿದೆಯೋ ಅದನ್ನೇ ಎಕೋ ಮಾಡುತ್ತದೆ. |
03:25 | ಇದು ಸೊನ್ನೆಯಾಗಿರುತ್ತದೆ, ಅದು ಪೂರ್ಣಾಂಕ ಸೊನ್ನೆ ಆಗಿದೆ. |
03:30 | ಈಗ ಇದನ್ನು echo ಮಾಡುವೆವು. ಅದರಲ್ಲಿ "You've had $file visitors" ಎಂದು ಎಕೋ ಮಾಡುವೆವು. |
03:37 | ಹಾಗಾಗಿ ಇದು ಇಂತಹುದನ್ನೆ ಕೊಡುತ್ತದೆ. |
03:40 | ಈಗ, $visitors ಎಂಬ ಹೊಸ ವೇರಿಯೇಬಲ್ ಅನ್ನು ರಚಿಸುವೆನು. |
03:46 | ಮತ್ತು, ಇದನ್ನು $file ವೇರಿಯೇಬಲ್ ಗೆ ಸಮವಾಗಿದೆ ಎಂದು ಹೇಳುವೆನು. |
03:50 | ಓದಲು ಸರಳವಾಗುವಂತೆ ಇದನ್ನು ಇಲ್ಲಿ ಇಡುತ್ತೇನೆ. ಇಲ್ಲಿ ಇದು ಹೆಚ್ಚು ಸೂಕ್ತವಾಗಿದೆ. |
03:55 | ನಾನು ಇಲ್ಲಿ ಇದನ್ನು '$visitors' ಎನ್ನುತ್ತೇನೆ. ಮತ್ತು ಇದು ಏನಾಗುವುದೆಂದು ನಾವು ಹೇಳಬಹುದು. |
04:00 | ನಾವು $visitors ಎಂದು ಹೇಳುವೆವು, ಅಲ್ಲ |
04:05 | Visitors_new = $visitors ಪ್ಲಸ್1 ಆಗಿರಲಿ. |
04:14 | ಹಾಗಾಗಿ ಇದು ನಮ್ಮ ಹೊಸ ವ್ಯಾಲ್ಯು ಆಗಿರಲಿ. |
04:17 | ನಂತರ ಇಲ್ಲಿ, $filenew ಎಂಬ ಒಂದು ಹೊಸ ಫೈಲ್ ಅನ್ನು ರಚಿಸುವೆನು. |
04:22 | ಅದನ್ನು "count.txt" ಎಂದು ತೆರೆಯುವೆನು. ಏಕೆಂದರೆ ಇದು ಅದೇ ಆಗಿದೆ. |
04:27 | ನಾನು ಈ ಫೈಲ್ ನಲ್ಲಿ "ರೈಟ್" ಮಾಡಲು ಹೇಳುವೆನು. |
04:30 | ಇದು 'a+' ಆಗಿದ್ದರೆ, ಅದು 'append' ಆಗಿರುವುದು. ಫೈಲ್ ಗೆ ಏನನ್ನಾದರು ಅಪೆಂಡ್ ಮಾಡುತ್ತಿದ್ದೇನೆಂದರೆ, ನಾನು ಅದಕ್ಕೆ ಸೇರಿಸುತ್ತಿದ್ದೇನೆ ಎಂದರ್ಥ. |
04:38 | ಆದರೆ ನಾನು ಹಳೆಯದನ್ನು ತೆಗೆದು ಬರೆಯಬೇಕು. ಹಾಗಾಗಿ ನಾನು ಇದನ್ನು 'w' ಎಂದೇ ಇಡುವೆನು. |
04:42 | ನಾನು ಮೊದಲ ಭಾಗದಲ್ಲಿ ಮಾಡಿದಂತೆ 'fwrite('$filenew')' ಎಂದು ಬರೆಯುವೆನು. |
04:47 | ಅದರೊಳಗೆ ನಾನು ಬರೆಯಬೇಕಾದ ವ್ಯಾಲ್ಯೂ '$visitorsnew' ಆಗಿದೆ. |
04:50 | ಇದು ಕಾರ್ಯನಿರ್ವಹಿಸುತ್ತದೆ. ಇದನ್ನು ರನ್ ಮಾಡುವ ಮೊದಲು ನಾವು ಅದನ್ನು ನೋಡೋಣ. |
04:55 | ನಾವು ನಮ್ಮ ಮುಖ್ಯ ಫೈಲ್ ಅನ್ನು ಪಡೆದಿದ್ದೇವೆ. ಅದು ನಮ್ಮ "count.txt" ಫೈಲ್ ನ ಕಂಟೆಂಟ್ ಆದ ಸೊನ್ನೆಯನ್ನು ಹೊಂದಿದೆ. |
05:04 | ನಾವು ನಮ್ಮ ವೇರಿಯೇಬಲ್ '$visitors' ಅನ್ನು '$file' ನ ಕಂಟೆಂಟ್ ಗೆ ಸೆಟ್ ಮಾಡಿರುವೆವು. |
05:07 | ನಾವು ಬಳಕೆದಾರರಿಗೆ ಎಷ್ಟು ಜನ ಸಂದರ್ಶಕರು (ವಿಸಿಟರ್) ಇದ್ದಾರೆ ಎಂದು ಎಕೋ ಮಾಡುತ್ತಿದ್ದೇವೆ. |
05:11 | ನಾವು ಒಂದು ಹೊಸವೇರಿಯೇಬಲ್ ಅನ್ನು ರಚಿಸುತ್ತಿದ್ದೇವೆ. ಅದು 'visitors + 1' ಗೆ ಅಂದರೆ ಈ ಸಮಯದಲ್ಲಿ ಈ ಪೇಜ್ ಅನ್ನು ನೋಡುತ್ತಿರುವ ವ್ಯಕ್ತಿಯನ್ನೂ ಸೇರಿಸಿ ಇದು ತೋರಿಸುತ್ತದೆ. |
05:20 | ಇದು ಮಹತ್ವವನ್ನು ಪಡೆಯುತ್ತದೆ. ಹಾಗಾಗಿ ಒಂದನ್ನು ಸೇರಿಸುತ್ತಿದ್ದೇವೆ. |
05:24 | ಈ ಟ್ಯುಟೋರಿಯಲ್ ನ ಆರಂಭದಲ್ಲಿ ನಾವು ನೋಡಿದಂತೆ ಒಂದು ಹೊಸ ಫೈಲ್ ಅನ್ನು ತೆರೆಯುತ್ತಿದ್ದೇವೆ. ಆದರೆ ಇಲ್ಲಿ ರೈಟ್ ಎಂದು ತೋರಿಸಲು 'w' ಅನ್ನು ಬಳಸುತ್ತಿದ್ದೇವೆ. |
05:32 | ಈ ಹೊಸ ಫೈಲ್ ಗೆ ಹೊಸವ್ಯಾಲ್ಯುವನ್ನು ಅಂದರೆ 1 ಹೆಚ್ಚುವರಿಯಾಗಿರುವ ವ್ಯಾಲ್ಯುವನ್ನು ಬರೆಯುತ್ತಿದ್ದೇವೆ. |
05:37 | ಈಗ ಇದನ್ನು ರಿಫ್ರೆಶ್ ಮಾಡೋಣ. ಓಹ್! |
05:41 | ಇದು ಕಾರ್ಯನಿರ್ವಹಿಸುತ್ತಿಲ್ಲ, ಈ ಕೋಡ್ ಅನ್ನು ಪರೀಕ್ಷಿಸೋಣ. |
05:44 | " visitors" ನ ಸ್ಪೆಲ್ಲಿಂಗ್ ಅನ್ನು ಪರೀಕ್ಷಿಸೋಣ - Visit-ors new. ಸರಿಯಾಗಿದೆ.. Visit-ors ಇಲ್ಲೂ ಸರಿಯಾಗಿದೆ. |
06:01 | ನಾನು ಇಲ್ಲಿ ತಪ್ಪು ಮಾಡಿದ್ದೇನೆ. ಇಲ್ಲಿ 'n' ಅನ್ನು ಹಾಕುವೆನು. |
06:06 | ಹಾಗಾಗಿ "count.txt" ಆಗಿದೆ. ಈಗ ಪ್ರತಿ ಬಾರಿ ನಾವು ರಿಫ್ರೆಶ್ ಮಾಡಿದಾಗಲೂ, ನಾವು 1 ಅನ್ನು ಸೇರಿಸುತ್ತಿರುತ್ತೇವೆ. |
06:12 | ಈಗ ಇದರ ವ್ಯಾಲ್ಯುವು ಹೆಚ್ಚಾಗುತ್ತಿರುವುದನ್ನು ನೀವು ನೋಡಬಹುದು. |
06:16 | ನೀವು ಇದನ್ನು ರಿಸೆಟ್ ಮಾಡಲು ಏನು ಮಾಡಬೇಕೆಂದರೆ, |
06:19 | ಆಹ್!. " 'count.txt' has been changed because we have edited it " ಎಂಬ ವಾರ್ನಿಂಗ್ ಬರುತ್ತಿದೆ. |
06:24 | ನಾನು 'reload from disk' ಎಂದು ಹೇಳುವೆನು. |
06:27 | ಇದು 19 ಎಂದು ಬದಲಾಗಿದೆ. ಆದರೆ ಇಲ್ಲಿ 18 ಎಂದು ತೋರಿಸುತ್ತಿರುವುದನ್ನು ನೀವು ನೋಡಬಹುದು. |
06:30 | ಏಕೆಂದರೆ, ನಾವು ಹೊಸ ವ್ಯಾಲ್ಯುವನ್ನು ಇಡುವ ಮೊದಲೇ ಇದನ್ನು ಎಕೋ ಮಾಡುತ್ತಿದ್ದೇವೆ. |
06:35 | ಸರಿಯಾದ ವ್ಯಾಲ್ಯುವನ್ನು ಪಡೆಯಲು, ನಾನು ಈ ಕೋಡ್ ಅನ್ನು ಇಲ್ಲಿ ಕೆಳಗೆ ಹಾಕುವೆನು. |
06:41 | ನಿಜವಾಗಿ ಇದು, ನಾನು ಇಲ್ಲಿ ರಿಫ್ರೆಶ್ ಮಾಡಿದಂತೆ ಇಲ್ಲಿ ನಾವು 25 ವಿಸಿಟರ್ ಗಳನ್ನು ಪಡೆದಿದ್ದೇವೆ. ಇಲ್ಲಿ ಹಿಂದಿರುಗಿದರೆ, ನಾವು 26 ಎಂಬ ವ್ಯಾಲ್ಯುವನ್ನು ಪಡೆದಿದ್ದೇವೆ. |
06:51 | ಸರಿ.. ಇಲ್ಲಿ ಸ್ವಲ್ಪ ಗೊಂದಲವಾಗಿರಬೇಕು. |
06:55 | ಇದು ಇದನ್ನು ಮಾಡಲು ಉತ್ತಮ ವಿಧಾನವಲ್ಲ. |
06:57 | ಇದು ಯಾವಾಗಲೂ '$visitors' ಅನ್ನು ಎಕೋ ಮಾಡುತ್ತದೆ. |
06:59 | ಸ್ವಲ್ಪ ಬದಲಾವಣೆಗೆ, ಇದನ್ನು '$visitorsnew' ಎಂದು ಮಾಡೋಣ. |
07:07 | ಹಾಗಾಗಿ ಇದು ಖಂಡಿತವಾಗಿ, ಓಹ್ ಇಲ್ಲ.. |
07:11 | 'visitors new' – ಇಲ್ಲಿ ಸ್ಪೆಲ್ಲಿಂಗ್ ತಪ್ಪಾಗಿದೆ. |
07:16 | ಸರಿ.. ಈಗ 35 ಎಂದು ಹೆಚ್ಚಿಸೋಣ ಮತ್ತು ಈಗ ಕಂಟೆಂಟ್ ಗೆ ಹೋದರೆ ಅಲ್ಲಿಯೂ ವ್ಯಾಲ್ಯು 35 ಆಗಿದೆ. |
07:24 | ಇಂತಹ ಸರಳವಾದ ಕೋಡ್ ಅನ್ನು ಬಳಸುವಾಗ, ಸ್ಥಾನವೇ ಎಲ್ಲವೂ ಆಗಿಲ್ಲ. ಆದರೆ ಇದು ಸಹಾಯ ಮಾಡುತ್ತದೆ. |
07:30 | ಸರಿ. ಇದು ಪ್ರಾಥಮಿಕ ಟ್ಯುಟೋರಿಯಲ್ ಆಗಿದೆ. |
07:32 | ನಿಮಗೆ ಸಹಾಯ ಬೇಕಿದ್ದರೆ ನನ್ನನ್ನು ಸಂಪರ್ಕಿಸಿ. |
07:35 | ಈಗ ಸದ್ಯಕ್ಕೆ ಇದನ್ನು ಪರೀಕ್ಷಿಸಿ. |
07:37 | ಐಪಿ ಅಡ್ರೆಸ್ ಅನ್ನು ಗಣನೆಗೆ ತೆಗೆದುಕೊಳ್ಳುವ 'advanced counter' ನ ಕುರಿತಾದ ಟ್ಯುಟೋರಿಯಲ್ ಗಳನ್ನು ನೋಡಿ. |
07:43 | ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ. |